ಕರ್ನಾಟಕ ಸಿವಿಲ್ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 16ರ ನಂತರ ಈ FYGOBOS ಸೇರಿಸತಕ್ಕದ್ದು ಎಂದರೆ :-
“16-ಎ. ಸೇವೆಯೊಳಗೆ ವರ್ಗಾವಣೆ ಮೂಲಕ ನೇಮಕ ಮಾಡುವುದು.-
ಈ ನಿಯಮಗಳಲ್ಲಿ ಅಥವಾ ಯಾವುದೇ ಸೇವೆಯ ಅಥವಾ ಹುದ್ದೆಯ ಸಂಬಂಧದಲ್ಲಿ ರಚಿಸಲಾದ ವಿಶೇಷ ನೇಮಕಾತಿ ನಿಯಮಗಳಲ್ಲಿ ಏನೇ ಒಳಗೊಂಡಿದ್ದರೂ ಒಬ್ಬ ಇಲಾಖಾ ಮುಖ್ಯಸ್ಮರು ಸೇವೆಗೆ ಸಂಬಂಧಿಸಿದಂತೆ ಕಾರಣಗಳನ್ನು ಲಿಖಿತದಲ್ಲಿ ದಾಖಲಿಸಿ ಮತ್ತು ಈ ಬಗ್ಗೆ ಸರ್ಕಾರವು ಹೊರಡಿಸುವ ಸಾಮಾನ್ಯ ಸೂಚನೆಗಳಿಗೆ ಒಳಪಟ್ಟು, ಪತಿ-ಪತ್ನಿ ಇಬ್ಬರೂ ಸರ್ಕಾರಿ ಸೇವೆಯಲ್ಲಿರುವ ಪ್ರಕರಣಗಳಲ್ಲಿ ಮಾತ್ರ ಗುಂಪು-ಸಿ ಅಥವಾ ಗುಂಪು- ಡಿ ಸೇವೆಗೆ ಸೇರಿದ ಒಬ್ಬ ಸದಸ್ಯರನ್ನು, ಮತ್ತು ಈ ನಿಯಮಗಳಡಿ ಪತಿ ಅಥವಾ R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297 ಪತ್ನಿ ಇವರಲ್ಲಿ ಯಾರಾದರೊಬ್ಬರಿಂದ ಕೋರಿಕೆ ಬಂದಲ್ಲಿ, ಹುದ್ದೆಯ ಒಂದು ಜೇಷ್ಠತಾ ಘಟಕದಿಂದ ಮತ್ತೊಂದು ಜೀಷ್ಠತಾ ಘಟಕದಲ್ಲಿನ ಅದೇ ಕೇಡರ್ನ ಸಮಾನ ಹುದ್ದೆಗೆ ಈ ಕೆಳಕಂಡ ಷರತ್ತುಗಳಿಗೊಳಪಟ್ಟು ವರ್ಗಾವಣೆ ಮೂಲಕ ನೇಮಕ ಮಾಡಬಹುದು. ಅವುಗಳೆಂದರೆ:-
ಒಬ್ಬ ಸರ್ಕಾರಿ ನೌಕರನು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸ್ಥಳದಲ್ಲಿ ಕನಿಷ್ಠ 7 ವರ್ಷ ಸೇವೆಯನ್ನು ಪೂರ್ಣಗೊಳಿಸಿರಬೇಕು.
-
ವರ್ಗಾಯಿಸಬೇಕಾದ ಘಟಕ ಅಥವಾ ಸ್ಥಳದಲ್ಲಿ ಮಂಜೂರಾದ ಹುದ್ದೆಯು ಖಾಲಿಯಿರತಕ್ಕದ್ದು.
-
ಅಂತಹ ವರ್ಗಾವಣೆಯನ್ನು ಒಂದು ಕೇಡರ್ನಿಂದ ಮತ್ತೊಂದು ಕೇಡರಿಗೆ ಮಾಡತಕ್ಕದ್ದಲ್ಲ.
ಟಿಪ್ಪಣಿ: ನೇಮಕಾತಿಯನ್ನು ಸರ್ಕಾರಿ ನೌಕರರ ಕೋರಿಕೆಯ ಮೇರೆಗೆ ಮಾಡುವುದರಿಂದ ಅವರ ಜೀಷ್ಮ್ಠತೆಯನ್ನು ವರ್ಗಾವಣೆಗೊಂಡ ಘಟಕದಲ್ಲಿನ ಕೇಡರ್ನ ಕೊನೆಯ ವ್ಯಕ್ತಿಯ ಕೆಳ?ಿರಿಸತಕ್ಕದ್ದು.
BOOS), ವರ್ಗಾವಣೆಯ ಮೂಲಕ ಅಂತಹ ನೇಮಕಾತಿಯನ್ನು ಸರ್ಕಾರಿ ನೌಕರನ ಸೇವೆಯಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಮಾಡತಕ್ಕದ್ದಲ್ಲ.
ವಿವರಣೆ: ಈ ನಿಯಮದ ಉದ್ದೇಶಕ್ಕಾ? “ಜೇಷ್ಠತಾ ಘಟಕ ಎಂದರೆ: ಒಂದು ಹುದ್ದೆಗೆ ಸಂಬಂಧಿಸಿದಂತೆ ನೇಮಕಾತಿ ಪ್ರಾಧಿಕಾರದ ಕಾರ್ಯವ್ಯಾಪ್ತಿ”.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
(ವೀರಭದ್ರ)
ಸರ್ಕಾರದ ಅಧೀನ ಕಾರ್ಯದರ್ಶಿ,
ಸಿಬ್ಬಂದಿ.ಮತ್ತು ಆಡಳಿತ ಸುಧಾರಣೆ ಇಲಾಖೆ,
(ಸೇವಾ ನಿಯಮಗಳು-1).
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ. ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು