(೧) ಈ ನಿಯಮಗಳನ್ನು ನ್ಯೂ ಬಾಲ್ಡ್ವಿನ್ ವಿಶ್ವವಿದ್ಯಾಲಯದ ನಿಯಮಗಳು, 2019 ಎಂದು ಕರೆಯತಕ್ಕದ್ದು.
(೨) ಅವು, ಸರ್ಕಾರಿ ರಾಜ್ಯ ಪತ್ರದಲ್ಲಿ ಅವುಗಳ ಪ್ರಕಟಣೆಯ ದಿನಾಂಕದಿಂದ ಜಾರಿಗೆ ಬರತಕ್ಕದ್ದು.
ಪರಿಭಾಷೆಗಳು- ಈ ನಿಯಮಗಳಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು -
(ಎ) 'ಅಧಿನಿಯಮ' ಎಂದರೆ, ನ್ಯೂ ಬಾಲ್ಡ್ವಿನ್ ವಿಶ್ವವಿದ್ಯಾಲಯ ಅಧಿನಿಯಮ, 2013 (2013ರ ಕರ್ನಾಟಕ ಅಧಿನಿಯಮ ಸಂ. 48) (ಬಿ). 'ಪ್ರಕರಣ' ಎಂದರೆ, ಅಧಿನಿಯಮದ ಪ್ರಕರಣ;
(2) ‘ಪರಿಷತ್ತು' ಎಂದರೆ, ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ತು;
(2). ಈ ನಿಯಮಗಳಲ್ಲಿ, ಬಳಸಿದ ಆದರೆ ಪರಿಭಾಷಿಸಿಲ್ಲದ ಪದಗಳು ಹಾಗೂ ಪದಾವಳಿಗಳು, ಆ ಅಧಿನಿಯಮದಲ್ಲಿ ಅವುಗಳಿಗೆ ನೀಡಿರುವಂತಹ ಅರ್ಥವನ್ನೇ ಹೊಂದಿರತಕ್ಕದ್ದು.
a. ವಿಶ್ವವಿದ್ಯಾಲಯದ ಅಧಿಕಾರಿಗಳು ಮತ್ತು ನೌಕರರ ವೇತನ ಮತ್ತು ಭತ್ಯೆಗಳು ಹಾಗೂ ಸೇವಾ ಷರತ್ತುಗಳು - (೧) ಬೋಧಕ ವಿಭಾಗಕ್ಕೆ ಸಂದಾಯ ಮಾಡಬೇಕಾದ ವೇತನ ಮತ್ತು ಭತ್ಯೆಗಳು ಯು.ಜಿ.ಸಿ. ವೇತನ ಶ್ರೇಣಿಗೆ ಸರಿಸಮಾನವಾಗಿರತಕ್ಕದ್ದು;
(೨) ಇತರ ನೌಕರರ ವೇತನ ಮತ್ತು ಭತ್ಯೆಗಳು, ತತ್ಸಮಾನ ಶ್ರೇಣಿಯಲ್ಲಿರುವ ಇತರ ರಾಜ್ಯ ಸರ್ಕಾರಿ ನೌಕರರಿಗೆ ಸರಿಸಮಾನವಾಗಿರತಕ್ಕದ್ದು.
(೩) ಬೋಧಕ ಸಿಬ್ಬಂದಿಯ ನೇಮಕಾತಿ ವಿಧಾನವು, ಕಾಲಕಾಲಕ್ಕೆ ಹೊರಡಿಸಿದ ಯುಜಿಸಿ ವಿನಿಯಮಗಳಿಗನುಸಾರವಾಗಿರತಕ್ಕದ್ದು. ಬೋಧಕೇತರ ಸಿಬ್ಬಂದಿಗೆ ಸಂಬಂಧಿಸಿದಂತೆ, ಸಂದರ್ಭಾನುಸಾರವಾಗಿ. ಅರ್ಹತೆ. ಹಾಗೂ ರಾಜ್ಯ ಸರ್ಕಾರದ ನೇಮಕಾತಿ ಕಾರ್ಯನೀತಿಗೆ 3 ಅನುಸಾರವಾಗಿರತಕ್ಕದ್ದು.