ಸದರಿ ನಿಯಮಗಳ, ಅನುಸೂಚಿ VI ರಲ್ಲಿ “ಆರ್ಥಿಕ ಇಲಾಖೆ” ಶೀರ್ಷಿಕೆಯಡಿ “ಎಫ್ಎಫ್.II ಮಾನವ ಸಂಪನ್ಮೂಲ ನಿರ್ವಹಣಾ ಪದ್ಧತಿ(HRMS)” ಉಪ ಶೀರ್ಷಿಕೆ, ಮತ್ತು ಅದರ ನಮೂದುಗಳ ನಂತರ ಈ ಕೆಳಕಂಡದ್ದನ್ನು ಸೇರ್ಪಡೆ ಮಾಡತಕ್ಕದ್ದು, ಎಂದರೆ,-
“ಎಫ್ಎಫ್.III. ಸಾರ್ವಜನಿಕ ಉದ್ದಿಮೆಗಳು 1. ರಾಜ್ಯ ಸಾರ್ವಜನಿಕ ವಲಯ/ಉದ್ಯಮಗಳಿಂದ ರಾಜ್ಯ ಸರ್ಕಾರದ ಈಕ್ವಿಟಿಯನ್ನು ಹಿಂತೆಗೆದುಕೊಳ್ಳುವುದಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳು; 2. ರಾಜ್ಯ ಸಾರ್ವಜನಿಕ ವಲಯ ಉದ್ಯಮಗಳಿಂದ ಬಂಡವಾಳ ಹಿಂತೆಗೆದುಕೊಳ್ಳುವ ಬಗ್ಗೆ ಶಿಫಾರಸ್ಸುಗಳನ್ನು ಮಾಡುವುದಕ್ಕಾಗಿ ಮತ್ತು ಪುನರ್ ರಚನೆಯೂ ಸೇರಿದಂತೆ ಬಂಡವಾಳ ಹಿಂತೆಗೆತದ ವಿಧಿವಿಧಾನಗಳಿಗೆ ಸಂಬಂಧಿಸಿದ ಅಂಥ ಶಿಫಾರಸ್ಸಿನ ಪರಿಶೀಲನೆ ಮಾಡುವುದಕ್ಕಾಗಿ ಸಮಿತಿ/ಆಯೋಗವನ್ನು ಸ್ಥಾಪಿಸುವುದಕ್ಕೆ ಸಂಬಂಧಿಸಿದ ತೀರ್ಮಾನಗಳು; 3. ಸಲಹೆಗಾರರ ನೇಮಕ, ಷೇರುಗಳ ಬೆಲೆ ನಿಗದಿ ಮತ್ತು ಬಂಡವಾಳ ಹಿಂತೆಗೆತಕ್ಕೆ ಸಂಬಂಧಿಸಿದ ನಿಬಂಧನೆಗಳು ಮತ್ತು ಷರತ್ತುಗಳೂ ಸೇರಿದಂತೆ ಬಂಡವಾಳ ಹಿಂತೆಗೆತದ ತೀರ್ಮಾನಗಳ ಅನುಷ್ಠಾನ; 4. ರಾಜ್ಯ ಸಾರ್ವಜನಿಕ ವಲಯ ಉದ್ಯಮಗಳ ರಚನಾತ್ಮಕ ಪುನರ್ಸಂಘಟನೆಯ ಅಂಥ ಇತರ ಪ್ರಮುಖ ಯೋಜನೆಗಳನ್ನು ಸಮಾಪನಗೊಳಿಸುವುದು, ಒಗ್ಗೂಡಿಸುವುದು; 5. ಕರ್ನಾಟಕ ರಾಜ್ಯ ಸಾರ್ವಜನಿಕ ಉದ್ಯಮಗಳ ಬ್ಯೂರೋವು ನಿರ್ವಹಿಸಿದ್ದ ಎಲ್ಲ ವಿಷಯಗಳು.” ಸಹಿ/- (ಥಾವರ್ಚಂದ್ ಗೆಹ್ಲೋಟ್) ಕರ್ನಾಟಕ ರಾಜ್ಯಪಾಲರು