(ಎ) ಸ್ಪಷ್ಟ ಖಾಲಿ ಹುದ್ದೆಗಳಲ್ಲಿ ಖಾಯಂ ಆಗಿ ನೇಮಕಗೊಂಡ ಅಧಿಕಾರಿಗಳು, ಅದೇ ಸೇವಾ ಕೇಡರಿನಲ್ಲಿ ಅಥವಾ ಹುದ್ದೆಯ ವರ್ಗದಲ್ಲಿ ಸ್ಥಾನಾಪನ್ನನಾಗಿ ಕಾರ್ಯನಿರ್ವಹಿಸುತ್ತಿರುವ ಅಥವಾ ಇತರ ಯಾವುದೇ ಆಧಾರದ ಮೇಲೆ ನೇಮಕಗೊಂಡ ಎಲ್ಲಾ ವ್ಯಕ್ತಿಗಳಿಗೂ ಜ್ಯೇಷ್ಠರಾಗಿರತಕ್ಕದ್ದು;
(ಬಿ) ಖಾಯಂ ಆದ ಅಧಿಕಾರಿಗಳ ನಡುವಿನ ಜ್ಯೇಷ್ಠತೆಯನ್ನು, ಖಾಯಂ ಆದ ದಿನಾಂಕಗಳಿಗೆ ಅನುಸಾರವಾಗಿ ನಿರ್ಧರಿಸತಕ್ಕದ್ದು, ಆದರೆ ಯಾರೇ ಇಬ್ಬರು ಅಧಿಕಾರಿಗಳ ಖಾಯಂ ದಿನಾಂಕ ಒಂದೇ ಆಗಿದ್ದಲ್ಲಿ, ಅವರ ಸಾಪೇಕ್ಷ ಜ್ಯೇಷ್ಠತೆಯನ್ನು ಅದೇ ಹುದ್ದೆಯಲ್ಲಿ ಸ್ಥಾನಾಪನ್ನರಾಗಿ ಅವರು ಕಾರ್ಯನಿರ್ವಹಿಸುತ್ತಿರುವಾಗ, ಅವರ ನಡುವಿನ ಜ್ಯೇಷ್ಠತೆಯ ಮೂಲಕ ನಿರ್ಧರಿಸತಕ್ಕದ್ದು ಮತ್ತು ಹಾಗಿರದಿದ್ದರೆ ಕೆಳ ಶ್ರೇಣಿಯಲ್ಲಿ, ಅವರ ನಡುವಿನ ಜ್ಯೇಷ್ಠತೆಯ ಮೂಲಕ ನಿರ್ಧರಿಸತಕ್ಕದ್ದು.
(ಸಿ) ತಾತ್ಕಾಲಿಕ ಆಧಾರದ ಮೇಲೆ ನೇಮಕಗೊಂಡ ವ್ಯಕ್ತಿಗಳ ನಡುವಿನ ಜ್ಯೇಷ್ಠತೆಯನ್ನು ಆ ಶ್ರೇಣಿಯಲ್ಲಿ ಅವರ ಸತತ ಸ್ಥಾನಾಪನ್ನದ ದಿನಾಂಕಗಳ ಮೂಲಕ ನಿರ್ಧರಿಸತಕ್ಕದ್ದು ಹಾಗೂ ಸ್ಥಾನಾಪನ್ನದ ಅವಧಿಯು ಒಂದೇ ಆಗಿದ್ದಲ್ಲಿ, ಅವರ ನಡುವಿನ ಜ್ಯೇಷ್ಠತೆಯು ಕೆಳಗಿನ ಶ್ರೇಣಿಯಲ್ಲಿ, ಸಲುವಳಿಯಲ್ಲಿರತಕ್ಕದ್ದು.
ವಿವರಣೆ.- ಪ್ರತಿನಿಯೋಜನೆ, ಖಾಲಿಹುದ್ದೆಯ ಕೊರತೆ ಅಥವಾ ಅದೇ ರೀತಿಯ ಇತರ ಕಾರಣಗಳಿಂದಾಗಿ ನಿರ್ದಿಷ್ಟ ಸೇವಾ ಕೇಡರ್ ಅಥವಾ ಹುದ್ದೆಯ ವರ್ಗದಿಂದ ಬಡ್ತಿಗಾಗಿ ಅಧಿಕಾರಿಯು ಅನ್ಯಥಾ ಅರ್ಹನಾಗಿರುವಾಗ, ಅವನು ಬಡ್ತಿಗೆ ಲಭ್ಯವಾಗದಿದ್ದಾಗ, ಆ ಪರಿಣಾಮವಾಗಿ ಅದೇ ಸೇವಾ ಕೇಡರಿನಲ್ಲಿ ಅಥವಾ ಹುದ್ದೆಯ ವರ್ಗದಲ್ಲಿ ಅವನ ಕಿರಿಯನಿಗೆ ಬಡ್ತಿ ನೀಡಿದ್ದಲ್ಲಿ, ಯಾವ ಹುದ್ದೆಗೆ ಬಡ್ತಿ ನೀಡಲಾಗಿದೆಯೋ ಆ ಸೇವಾ ಕೇಡರಿನಲ್ಲಿ ಅಥವಾ ಹುದ್ದೆಯ ವರ್ಗದಲ್ಲಿ ಹಿರಿಯ ಅಧಿಕಾರಿಯು ಆತನ ಜ್ಯೇಷ್ಠತೆಯನ್ನು ಉಳಿಸಿಕೊಂಡು ಬರುವನು. ಆದರೆ, ಈ ಉಪಬಂಧವು ಬಡ್ತಿಗೆ ಅರ್ಹರೆಂದು ಪರಿಗಣಿಸದಿರುವ ಅಧಿಕಾರಿಗಳಿಗೆ ಅನ್ವಯವಾಗುವುದಿಲ್ಲ. ಅಂಥ ಸಂದರ್ಭಗಳಲ್ಲಿ, ಬಡ್ತಿಗೆ ಲಭ್ಯವಾಗದಿರುವ ಅಧಿಕಾರಿಗೆ ಅವನು ಲಭ್ಯವಿದ್ದರೆ ಮೇಲಿನ ಹುದ್ದೆಗೆ ಬಡ್ತಿ ನೀಡಬಹುದಾಗಿತ್ತೇ ಎಂಬುದರ ಬಗ್ಗೆ ಖಚಿತ ನಿರ್ಣಯವನ್ನು ತೆಗೆದುಕೊಳ್ಳತಕ್ಕದ್ದು, ರದ್ದುಗೊಳಿಸಲು ಸಕಾರಾತ್ಮಕ ನಿರ್ಣಯವಿದ್ದ ಹೊರತು ಆತನ ಕಿರಿಯನ ಮೇಲೆ ಆತನನ್ನು ಜ್ಯೇಷ್ಠತೆಯ ಸ್ಥಾನದಲ್ಲಿಡತಕ್ಕದ್ದು.
1 [ಡಿ. ಬಿಟ್ಟುಬಿಡಲಾಗಿದೆ] 1 1. ದಿನಾಂಕ 12ನೇ ಆಗಸ್ಟ್ 1976ರ ಅಧಿಸೂಚನೆ ಸಂ ಜಿಎಡಿ 4 ಎಸ್ಎಸ್ಆರ್ 76ರ ಮೂಲಕ ಬಿಟ್ಟುಬಿಡಲಾಗಿದೆ. 3. ಅಧಿಕಾರಿಗಳು ಯಾವುದೇ ಸೇವೆ ಅಥವಾ ಹುದ್ದೆಯ ವರ್ಗಕ್ಕೆ ಬಡ್ತಿಯ ಮೂಲಕ ಹಾಗೂ ನೇರನೇಮಕಾತಿಯ ಮೂಲಕ ನೇಮಕವಾಗಿರುವಲ್ಲಿ ಅವರ ನೇಮಕಾತಿಯ ದಿನಾಂಕ ಒಂದೇ ಆಗಿದ್ದ ಸಂದರ್ಭದಲ್ಲಿ, ಬಡ್ತಿ ಪಡೆದ ಅಧಿಕಾರಿಗಳಿಗಿಂತ ನೇರವಾಗಿ ನೇಮಕಗೊಂಡ ಅಧಿಕಾರಿಗಳು ಆದ್ಯತೆಯನ್ನು ಪಡೆಯುತ್ತಾರೆ. 2 [4. ಹುದ್ದೆಯ ವರ್ಗ ಅಥವಾ ಕೇಡರಿಗೆ ಜ್ಯೇಷ್ಠತೆ ಹಾಗೂ ಅರ್ಹತೆಯ ಆಧಾರದ ಮೇಲೆ, ಒಂದೇ ಕಾಲದಲ್ಲಿ ಬಡ್ತಿಗಳನ್ನು ನೀಡಿದಾಗ, ಅವರ ನಡುವಣ ಜ್ಯೇಷ್ಠತೆಯನ್ನು,-
(i) ಯಾವುದೇ ಒಂದು ಕೇಡರ್ ಅಥವಾ ಹುದ್ದೆಯ ವರ್ಗದಿಂದ ಬಡ್ತಿಗಳನ್ನು ನೀಡಿದ್ದರೆ ಹುದ್ದೆಯ ಕೆಳಗಿನ ಶ್ರೇಣಿ ಅಥವಾ ವರ್ಗದ ನಡುವಣ ಅವರ ಜ್ಯೇಷ್ಠತೆಯ ಮೂಲಕ;
(ii) ಅದೇ ಶ್ರೇಣಿಯ ಹಲವು ಕೇಡರ್ಗಳಿಂದ ಅಥವಾ ಹಲವು ಹುದ್ದೆಗಳ ವರ್ಗದಿಂದ ಬಡ್ತಿಗಳನ್ನು ನೀಡಿರುವಲ್ಲಿ, ಆ ಶ್ರೇಣಿಗಳಲ್ಲಿನ ಸೇವಾ ಅವಧಿಯ ಮೂಲಕ;
(iii) ಶ್ರೇಣಿಗಳು ಒಂದೇ ಆಗಿರದ ಹಲವು ಕೇಡರುಗಳು ಅಥವಾ ಹಲವು ಹುದ್ದೆಗಳ ವರ್ಗಗಳಿಂದ ಬಡ್ತಿಯನ್ನು ನೀಡಿದ್ದರೆ, ಯಾವ ಆದೇಶದ ಮೂಲಕ ಬಡ್ತಿ ನೀಡುವ ಪ್ರಾಧಿಕಾರವು ಅಭ್ಯರ್ಥಿಗಳನ್ನು ಕ್ರಮದಲ್ಲಿಡಲಾಗಿದೆಯೋ ಆ ಆದೇಶದ ಮೂಲಕ, ಸಮಾಲೋಚನೆಯು ಅವಶ್ಯವಿರುವಲ್ಲಿ, ಲೋಕಸೇವಾ ಆಯೋಗದೊಂದಿಗೆ ಸಮಾಲೋಚಿಸಿ, ಆ ಹಲವು ಕೇಡರುಗಳ ಅಥವಾ ಹುದ್ದೆಗಳ ವರ್ಗಗಳಿಂದ ಯಾವ ಆದೇಶದಲ್ಲಿ ಬಡ್ತಿಗಳನ್ನು ಮಾಡಬೇಕಾಗಿದೆಯೋ ಆ ಆದೇಶವನ್ನು ಪರಿಗಣನೆಗೆ ತೆಗೆದುಕೊಂಡು - ನಿರ್ಧರಿಸತಕ್ಕದ್ದು .
- ಅಧಿಸೂಚನೆ ಸಂಖ್ಯೆ ಜಿಎಡಿ 140 ಎಸ್ಆರ್ಆರ್ 64, ದಿನಾಂಕ 15ನೇ ಫೆಬ್ರವರಿ 1968. 4ಎ. ಲೋಕಸೇವಾ ಆಯೋಗದೊಂದಿಗೆ ಸಮಾಲೋಚನೆ ಮಾಡುವುದು ಅವಶ್ಯವಿರುವಲ್ಲಿ ಅಂಥ ಸಮಾಲೋಚನೆಯನ್ನು ಮಾಡಿ, ಆಯ್ಕೆ ಮಾಡುವ ನೇಮಕಾತಿ ಪ್ರಾಧಿಕಾರವು, ಅಭ್ಯರ್ಥಿಗಳನ್ನು ಅರ್ಹತಾ ಕ್ರಮದಲ್ಲಿ ವ್ಯವಸ್ಥೆಗೊಳಿಸಿದೆಯೋ ಆ ಆದೇಶದ ಮೂಲಕ ಹಲವು ಕೇಡರುಗಳು ಅಥವಾ ಹುದ್ದೆಯ ವರ್ಗಗಳಿಂದ ಅಥವಾ ಅದೇ ಕೇಡರಿನಿಂದ ಅಥವಾ ಹುದ್ದೆಯ ವರ್ಗದಿಂದ ಅದೇ ಸಮಯದಲ್ಲಿ ಆಯ್ಕೆ ಮಾಡುವ ಮೂಲಕ ಹುದ್ದೆಯ ವರ್ಗಕ್ಕೆ ಅಥವಾ ಕೇಡರಿಗೆ ಬಡ್ತಿಯನ್ನು ನೀಡಿರುವಾಗ ಅವರ ನಡುವಣ ಜ್ಯೇಷ್ಠತೆಯನ್ನು ನಿರ್ಧರಿಸತಕ್ಕದ್ದು.
1 [ವಿವರಣೆ.- ಈ ನಿಯಮದ ಉದ್ದೇಶಗಳಿಗಾಗಿ, "ಹಲವು ಕೇಡರುಗಳು ಅಥವಾ ಹುದ್ದೆಯ ವರ್ಗಗಳು" ಎಂಬುದು ಯಾವ ವಿವಿಧ ಶ್ರೇಣಿಗಳಿಂದ ಯಾವುದೇ ವಿಶೇಷ ನೇಮಕಾತಿ ನಿಯಮಗಳಿಗೆ ಅನುಸಾರವಾಗಿ ನಿರ್ದಿಷ್ಟಪಡಿಸಲಾದ ಯಾವುದೇ ಆದ್ಯತಾ ಆದೇಶದಲ್ಲಿ ನೇಮಕಾತಿಯನ್ನು ಮಾಡಲಾಗಿದೆಯೋ ಆ ಹಲವು ಶ್ರೇಣಿಗಳ ಹುದ್ದೆಗಳ ಕೇಡರುಗಳನ್ನು ಅಥವಾ ವರ್ಗಗಳನ್ನು ಒಳಗೊಳ್ಳುತ್ತದೆ ಎಂದು ಭಾವಿಸತಕ್ಕದ್ದು .
- ಅಧಿಸೂಚನೆ ಸಂಖ್ಯೆ ಜಿಎಡಿ 97 ಎಸ್ಆರ್ಆರ್ 67, ದಿನಾಂಕ 26ನೇ ಸೆಪ್ಟೆಂಬರ್ 1967.
- (1) ಸೇವೆ ಅಥವಾ ಹುದ್ದೆಯ ವರ್ಗಕ್ಕೆ ನೇರ ನೇಮಕಗೊಂಡವರ ಜ್ಯೇಷ್ಠತೆಗೆ ಸಂಬಂಧಿಸಿದ ನಿರ್ಣಯವನ್ನು ನೇಮಕಾತಿ ಪ್ರಾಧಿಕಾರವು ಕೆಳಗೆ ಸೂಚಿಸಿದ ವಿಧಾನದಲ್ಲಿ ಅವರ ಮೊದಲ ನೇಮಕಾತಿಯ ಸಮಯದಲ್ಲಿ ಮಾಡತಕ್ಕದ್ದು:- (ಎ) ಸ್ಪರ್ಧಾತ್ಮಕ ಪರೀಕ್ಷೆಯ ಫಲಿತಾಂಶದ ಮೇಲೆ ನೇಮಕಾತಿಯನ್ನು ಮಾಡಿರುವಾಗ ಜ್ಯೇಷ್ಠತಾ ಕ್ರಮವು, ಅರ್ಹತಾ ಕ್ರಮದಲ್ಲಿರತಕ್ಕದ್ದು, ಅಥವಾ
(ಬಿ) ನೇಮಕಾತಿಯನ್ನು ಆಯ್ಕೆಯ ಮೂಲಕ ಮಾಡಿರುವಾಗ ಲೋಕಸೇವಾ ಆಯೋಗದೊಂದಿಗೆ ಅಥವಾ ಆಯ್ಕೆ ಮಾಡುವ ಇತರ ಪ್ರಾಧಿಕಾರದೊಂದಿಗೆ ಸಮಾಲೋಚಿಸಿ, ನೇಮಕಾತಿ ಪ್ರಾಧಿಕಾರವು ಯಾವ ಆದೇಶದ ಮೂಲಕ ಅಭ್ಯರ್ಥಿಗಳನ್ನು ಅರ್ಹತಾ ಕ್ರಮದಲ್ಲಿ ಇಡಲಾಗಿದೆಯೋ ಆ ಆದೇಶದ ಮೂಲಕ ಅವರ ಜ್ಯೇಷ್ಠತಾ ಕ್ರಮವನ್ನು ನಿರ್ಧರಿಸತಕ್ಕದ್ದು.
(ಸಿ) 1 [ಯಾವುದೇ ಹುದ್ದೆಯ ನೇಮಕಾತಿಗೆ ನಿಯಮಿಸಲಾದ ತರಬೇತಿಯ ವ್ಯಾಸಂಗ ಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದಾಗ ಅಂಥ ತರಬೇತಿಯ ನಂತರ ನೇಮಕಗೊಂಡವರ ಜ್ಯೇಷ್ಠತೆಯನ್ನು,-
(i) ಅಂಥ ತರಬೇತಿಯ ಕೊನೆಯಲ್ಲಿ ನಡೆದ ಪರೀಕ್ಷೆಯಲ್ಲಿ ಅಥವಾ
(ii) ಅಂಥ ತರಬೇತಿಯ ಆಯ್ಕೆಯಲ್ಲಿ ಪರೀಕ್ಷೆಯನ್ನು ನಡೆಸದಿರುವಾಗ ಅರ್ಹತಾ ಕ್ರಮದ ಆಧಾರದ ಮೇಲೆ - ನಿರ್ಧರಿಸತಕ್ಕದ್ದು .
- ದಿನಾಂಕ 15ನೇ ಮಾರ್ಚ್ 1961ರ ಅಧಿಸೂಚನೆ ಸಂಖ್ಯೆ ಜಿಎಡಿ 74 ಎಸ್ಆರ್ಆರ್ 60ರ ಮೂಲಕ ಸೇರಿಸಲಾಗಿದೆ. ಒಮ್ಮೆ ನಿರ್ಣಯವನ್ನು ತೆಗೆದುಕೊಂಡಾಗ ಅದೇ ಅಂತಿಮವಾಗಿರತಕ್ಕದ್ದು ಮತ್ತು ಪುನರೀಕ್ಷಣೆಗೆ ಅವಕಾಶವಿರತಕ್ಕದ್ದಲ್ಲ.
1 [(2) (1)ನೇ ಉಪನಿಯಮದಲ್ಲಿ ಏನೇ ಒಳಗೊಂಡಿದ್ದರೂ, 2 [ಕರ್ನಾಟಕ ಸಿವಿಲ್ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ 18ನೇ ನಿಯಮದ (1)ನೇ ಉಪನಿಯಮ ದಲ್ಲಿ ನಿರ್ದಿಷ್ಟಪಡಿಸಿದ ಅವಧಿಯ ನಂತರ ಹುದ್ದೆಯ ಪ್ರಭಾರವನ್ನು ಸ್ವೀಕರಿಸದಿರುವ ಅಭ್ಯರ್ಥಿಯ ಜ್ಯೇಷ್ಠತೆಯನ್ನು, ಅಂಥ ಹುದ್ದೆಯ ಪ್ರಭಾರವನ್ನು ಅವನು ವಹಿಸಿಕೊಂಡ ದಿನಾಂಕದಿಂದ ನಿರ್ಧರಿಸತಕ್ಕದ್ದು .
- ದಿನಾಂಕ 1ನೇ ಅಕ್ಟೋಬರ್ 1971ರ ಅಧಿಸೂಚನೆ ಸಂಖ್ಯೆ ಜಿಎಡಿ 14 ಎಸ್ಆರ್ಆರ್ 70ಎ ಅಧಿಸೂಚನೆಯಡಿ ಹೊಸಕ್ರಮ ಸಂಖ್ಯೆಯನ್ನು ಕೊಡಲಾಗಿದೆ.
- ದಿನಾಂಕ 20-11-2005ರ ಅಧಿಸೂಚನೆ ಸಂಖ್ಯೆ ಜಿಎಡಿ 24 ಎಸ್ಎಸ್ಆರ್ 2004 6. ಒಂದೇ ವೇತನ ಅಥವಾ ವೇತನ ಶ್ರೇಣಿ ಹೊಂದಿರುವ ಒಂದು ವರ್ಗ ಅಥವಾ ಸೇವೆಯ ಶ್ರೇಣಿಯಿಂದ ಇನ್ನೊಂದು ವರ್ಗಕ್ಕೆ ಅಥವಾ ಶ್ರೇಣಿಗೆ ಸಾರ್ವಜನಿಕ ಹಿತಾಸಕ್ತಿಯಿಂದ ವ್ಯಕ್ತಿಯನ್ನು ವರ್ಗಾವಣೆ ಮಾಡಿದ್ದನ್ನು ಜ್ಯೇಷ್ಠತೆಯ ಉದ್ದೇಶಗಳಿಗಾಗಿ ತರುವಾಯದ ಮೊದಲ ನೇಮಕಾತಿಯೆಂದು ಪರಿಗಣಿಸತಕ್ಕದ್ದಲ್ಲ; ಹಾಗೂ ಹಾಗೆ ವರ್ಗಾವಣೆಯಾದ ವ್ಯಕ್ತಿಯ ಜ್ಯೇಷ್ಠತೆಯನ್ನು, ಯಾವ ವರ್ಗದಿಂದ ಅಥವಾ ಶ್ರೇಣಿಯಿಂದ ಆತನನ್ನು ವರ್ಗಾವಣೆ ಮಾಡಲಾಗಿದೆಯೋ ಆ ವರ್ಗಕ್ಕೆ ಅಥವಾ ಶ್ರೇಣಿಗೆ ಆತನ ಮೊದಲ ನೇಮಕಾತಿಗೆ ಸಂಬಂಧಿಸಿದಂತೆ ನಿರ್ಧರಿಸತಕ್ಕದ್ದು: ಪರಂತು, ವರ್ಗಾವಣೆಯನ್ನು ಅಧಿಕಾರಿಯ ವಿನಂತಿಯ ಮೇರೆಗೆ ಮಾಡಿದ್ದಲ್ಲಿ, ಆತನು ವರ್ಗಾವಣೆಯಾದ ವರ್ಗ ಅಥವಾ ಶ್ರೇಣಿಯ ಜ್ಯೇಷ್ಠತಾ ಪಟ್ಟಿಯಲ್ಲಿ ಆತನನ್ನು, ವರ್ಗಾವಣೆಯ ದಿನಾಂಕದಂದು ಅಥವಾ ಮುಂಚೆ ಆ ಸೇವೆಯ ವರ್ಗ ಅಥವಾ ಶ್ರೇಣಿಯನ್ನು ಹೊಂದಿದ್ದ ಎಲ್ಲಾ ಅಧಿಕಾರಿಗಳ ಕೆಳಗೆ ಅವನನ್ನು ಇಡತಕ್ಕದ್ದು.
1 [ಮತ್ತೂ ಪರಂತು, ಸಾರ್ವಜನಿಕ ಹಿತಾಸಕ್ತಿಯಿಂದ ವರ್ಗಾವಣೆಯಾದ ವ್ಯಕ್ತಿಯ, ಹಾಗೂ ಯಾವ ವರ್ಗ ಅಥವಾ ಶ್ರೇಣಿಯಲ್ಲಿನ ಹುದ್ದೆಯನ್ನು ವಾಸ್ತವಿಕವಾಗಿ ಧಾರಣ ಮಾಡಿರುವ ವ್ಯಕ್ತಿಗಳ ಜ್ಯೇಷ್ಠತೆಯನ್ನು ಯಾವ ವರ್ಗ ಅಥವಾ ಶ್ರೇಣಿಯಿಂದ ಅವನನ್ನು ವರ್ಗಾವಣೆ ಮಾಡಲಾಗಿದೆಯೋ ಆ ವರ್ಗಕ್ಕೆ ಅಥವಾ ಶ್ರೇಣಿಗೆ ಅವನ ಮೊದಲ ನೇಮಕಾತಿಗೆ ಸಂಬಂಧಿಸಿದಂತೆ ಅಂಥ ವರ್ಗಾವಣೆಯ ದಿನಾಂಕದಂದು ನಿರ್ಧರಿಸತಕ್ಕದ್ದು] 1.
- ದಿನಾಂಕ 13ನೇ ಅಕ್ಟೋಬರ್ 1976ರ ರ ಅಧಿಸೂಚನೆ ಸಂಖ್ಯೆ ಜಿಎಡಿ 22 ಎಸ್ಎಸ್ಆರ್ ಮೂಲಕ ಸೇರಿಸಲಾಗಿದೆ. ವಿವರಣೆ.- ಮೇಲಿನ ಪರಂತುಕದ ಉದ್ದೇಶಕ್ಕಾಗಿ, ವಾಸ್ತವಿಕವಾಗಿ ಹುದ್ದೆಯನ್ನು ಧಾರಣ ಮಾಡಿರುವ ವ್ಯಕ್ತಿಗಳನ್ನು ಉನ್ನತ ವರ್ಗ ಅಥವಾ ಶ್ರೇಣಿಗೆ ತಾತ್ಕಾಲಿಕವಾಗಿ ಕಾರ್ಯನಿರ್ವಹಣೆ ಸಾಮಥ್ರ್ಯದಲ್ಲಿರಲಿ ಅಥವಾ ಮೂಲ ಸಾಮಥ್ರ್ಯದಲ್ಲಿರಲಿ ಅಂಥ ವರ್ಗಾವಣೆಯ ದಿನಾಂಕದ ಮುಂಚೆ ಬಡ್ತಿ ಪಡೆದ ವ್ಯಕ್ತಿಗಳೊಡನೆ ಸೇರಿಸತಕ್ಕದ್ದಲ್ಲ. 1 [6ಎ. ರಕ್ಷಣಾ ಸೇವೆಗಳ ಅಖಿಲ ಭಾರತ ಸೇವೆ ಅಥವಾ ಕೇಂದ್ರದ ಸಿವಿಲ್ ಸೇವೆ ಅಥವಾ ಇತರ ಯಾವುದೇ ರಾಜ್ಯದ ಸಿವಿಲ್ ಸೇವೆಯ ಅಧಿಕಾರಿಯನ್ನು ರಾಜ್ಯದ ಸಿವಿಲ್ ಸೇವೆಗಳಲ್ಲಿನ ಯಾವುದೇ ಸಮಾನವಾದ ವರ್ಗ ಅಥವಾ ಶ್ರೇಣಿಯ ಸೇವೆಗೆ ಮಾಡಿದ ವರ್ಗಾವಣೆ ಅಥವಾ ನೇಮಕವನ್ನು ಜ್ಯೇಷ್ಠತೆಯ ಉದ್ದೇಶಕ್ಕಾಗಿ ಆ ವರ್ಗ ಅಥವಾ ಶ್ರೇಣಿಯ ಸೇವೆಗೆ ಮಾಡಿದ ಮೊದಲನೇ ನೇಮಕವೆಂದು ಪರಿಗಣಿಸತಕ್ಕದ್ದಲ್ಲ ಮತ್ತು ಹಾಗೆ ವರ್ಗಾವಣೆಯಾದ ಅಥವಾ ನೇಮಕವಾದ ಅಧಿಕಾರಿಯ ಜ್ಯೇಷ್ಠತೆಯನ್ನು ಅಂಥ ವರ್ಗಾವಣೆ ಅಥವಾ ನೇಮಕಕ್ಕೆ ಮುಂಚೆ ಅವನು ಸೇರಿದಂಥ ಸೇವೆ ಅಥವಾ ಸೇವೆಗಳ ವರ್ಗ ಅಥವಾ ಶ್ರೇಣಿಗೆ ಅವನ ಮೊದಲ ನೇಮಕಕ್ಕೆ ಸಂಬಂಧಿಸಿದಂತೆ ನಿರ್ಧರಿಸತಕ್ಕದ್ದು:
ಪರಂತು, ಕಚೇರಿಯ ವಿನಂತಿಯ ಮೇರೆಗೆ ಅಂಥ ವರ್ಗಾವಣೆ ಅಥವಾ ನೇಮಕಾತಿಯನ್ನು ಮಾಡಿರುವಲ್ಲಿ, ಯಾವ ಸೇವೆಯ ವರ್ಗ ಅಥವಾ ಶ್ರೇಣಿಗೆ ಆತನನ್ನು ವರ್ಗಾವಣೆ ಮಾಡಲಾಯಿತೋ ಅಥವಾ ನೇಮಕ ಮಾಡಲಾಯಿತೋ ಆ ಸೇವೆಯ ವರ್ಗ ಅಥವಾ ಶ್ರೇಣಿಯ ಜ್ಯೇಷ್ಠತಾ ಪಟ್ಟಿಯಲ್ಲಿ ಅಂಥ ವರ್ಗಾವಣೆ ಅಥವಾ ನೇಮಕ ಮಾಡಿದ ದಿನಾಂಕಕ್ಕೆ ನಿಕಟಪೂರ್ವದ ಸೇವೆಯ ಆ ವರ್ಗದಲ್ಲಿರುವ ಅಥವಾ ಶ್ರೇಣಿಯಲ್ಲಿರುವ ವ್ಯಕ್ತಿಗಳ ಕೆಳಗೆ ಆತನನ್ನು ಇಡತಕ್ಕದ್ದು:] 1 1. ದಿನಾಂಕ 13ನೇ ನವೆಂಬರ್ 1969ರ ಅಧಿಸೂಚನೆ ಸಂಖ್ಯೆ ಜಿಎಡಿ 12 ಎಸ್ಎಸ್ಆರ್ 69 1 [ಮತ್ತೂ ಪರಂತು, ಸಾರ್ವಜನಿಕ ಹಿತಾಸಕ್ತಿಯ ಕಾರಣದಿಂದಾಗಿ ವರ್ಗಾವಣೆಯಾದ ವ್ಯಕ್ತಿಯ ಹಾಗೂ ಯಾವ ವರ್ಗ ಅಥವಾ ಶ್ರೇಣಿಗೆ ಅವನನ್ನು ವರ್ಗಾಯಿಸಲಾಗಿದೆಯೋ ಆ ವರ್ಗ ಅಥವಾ ಶ್ರೇಣಿಯಲ್ಲಿ ವಾಸ್ತವಿಕವಾಗಿ ಹುದ್ದೆಯನ್ನು ಧಾರಣ ಮಾಡಿರುವ ವ್ಯಕ್ತಿಗಳ ಜ್ಯೇಷ್ಠತೆಯನ್ನು ಆತನನ್ನು ಯಾವ ವರ್ಗದಿಂದ ಅಥವಾ ಶ್ರೇಣಿಯಿಂದ ವರ್ಗಾವಣೆ ಮಾಡಲಾಗಿತ್ತೋ ಆ ವರ್ಗಕ್ಕೆ ಅಥವಾ ಶ್ರೇಣಿಗೆ ಅವನ ಮೊದಲ ನೇಮಕಾತಿಗೆ ಸಂಬಂಧಿಸಿದಂತೆ ಅಂಥ ವರ್ಗಾವಣೆಯ ದಿನಾಂಕದಂದು ನಿರ್ಧರಿಸತಕ್ಕದ್ದು.
- ದಿನಾಂಕ 13ನೇ ಅಕ್ಟೊಬರ್ 1976ರ ಅಧಿಸೂಚನೆ ಸಂಖ್ಯೆ ಜಿಎಡಿ 22 ಎಸ್ಎಸ್ಆರ್ 73ರ ಮೂಲಕ ಸೇರಿಸಲಾಗಿದೆ, ವಿವರಣೆ.- ಮೇಲಿನ ಪರಂತುಕದ ಉದ್ದೇಶಕ್ಕಾಗಿ ವಾಸ್ತವಿಕವಾಗಿ ಹುದ್ದೆಯನ್ನು ಧಾರಣ ಮಾಡಿರುವ ವ್ಯಕ್ತಿಗಳನ್ನು ಮೇಲಿನ ವರ್ಗಕ್ಕೆ ಅಥವಾ ಶ್ರೇಣಿಗೆ ಸ್ಥಾನಾಪನ್ನ ಸಾಮಥ್ರ್ಯದಲ್ಲಿರಲಿ ಅಥವಾ ಮೂಲ ಸಾಮಥ್ರ್ಯದಲ್ಲಿರಲಿ, ಅಂಥ ವರ್ಗಾವಣೆಯ ದಿನಾಂಕಕ್ಕೆ ಮುನ್ನ ಬಡ್ತಿ ಹೊಂದಿದ ವ್ಯಕ್ತಿಗಳೊಡನೆ ಸೇರಿಸತಕ್ಕದ್ದಲ್ಲ . 1 [7. ಬಿಟ್ಟುಬಿಡಲಾಗಿದೆ] 1.
- ದಿನಾಂಕ 12ನೇ ಡಿಸೆಂಬರ್ 1973 ಅಧಿಸೂಚನೆ ಸಂಖ್ಯೆ ಜಿಎಡಿ 28 ಎಸ್ಎಸ್ಆರ್ 69ರ ಮೂಲಕ ಬಿಟ್ಟುಬಿಡಲಾಗಿದೆ. 1 [7-ಎ (1) ಈ ನಿಯಮಗಳ ಉಪಬಂಧಗಳಿಗೊಳಪಟ್ಟು, ಜ್ಯೇಷ್ಠತೆಯ ಜಿಲ್ಲಾವಾರು ಕೇಡರುಗಳಲ್ಲಿ ಸೇರಿಸಲಾದ ಹುದ್ದೆಗಳನ್ನು ರಾಜ್ಯವಾರು ಕೇಡರಿನಲ್ಲಿ ಸೇರಿಸಲಾಗುತ್ತಿರುವ ಪರಿಣಾಮವಾಗಿ, ರಾಜ್ಯವಾರು ಜ್ಯೇಷ್ಠತಾ ಪಟ್ಟಿಯಲ್ಲಿ ಸೇರಿಸಬೇಕಾದ ವ್ಯಕ್ತಿಗಳ ನಡುವಿನ ಜ್ಯೇಷ್ಠತೆಯನ್ನು ಅಂಥ ಕೇಡರಿಗೆ ಆತನ ನೇಮಕಾತಿಯ ದಿನಾಂಕದಿಂದ ಜಿಲ್ಲಾವಾರು ಕೇಡರಿನಲ್ಲಿ ಆ ನೌಕರನ ನಿರಂತರ ಒಟ್ಟು ಸೇವಾವಧಿಯ ಮೂಲಕ ನಿರ್ಧರಿಸತಕ್ಕದ್ದು:
ಪರಂತು, ಇಬ್ಬರು ಅಥವಾ ಹೆಚ್ಚಿನ ವ್ಯಕ್ತಿಗಳು ಒಂದೇ ದಿನಾಂಕದಂದು ಜಿಲ್ಲಾವಾರು ಕೇಡರುಗಳಿಗೆ ನೇಮಕಗೊಂಡಿದ್ದಲ್ಲಿ ಮತ್ತು ಅಂಥ ಕೇಡರಿನಲ್ಲಿನ ಅವರ ಒಟ್ಟು ನಿರಂತರ ಸೇವಾ ಅವಧಿಯು ಸಮಾನವಾಗಿದ್ದಲ್ಲಿ, ಆಗ ಅಂಥ ವ್ಯಕ್ತಿಗಳ ನಡುವಿನ ಜ್ಯೇಷ್ಠತೆಯನ್ನು ರಾಜ್ಯವಾರು ಪಟ್ಟಿಯನ್ನು ತಯಾರಿಸಲು ಸಕ್ಷಮವಾದ ಪ್ರಾಧಿಕಾರವು ನಿರ್ಧರಿಸತಕ್ಕದ್ದು.
(i) ಕೆಳ ಕೇಡರಿನಿಂದ ಅಂಥ ವ್ಯಕ್ತಿಗಳಿಗೆ ಬಡ್ತಿ ನೀಡಿರುವಲ್ಲಿ ಯಾವ ಕೇಡರಿನಿಂದ ಅವರಿಗೆ ಬಡ್ತಿ ನೀಡಲಾಯಿತೋ ಆ ಕೆಳ-ಕೇಡರಿನಲ್ಲಿನ ಹುದ್ದೆಯಲ್ಲಿ ಅವರ ಒಟ್ಟು ನಿರಂತರ ಸೇವಾ ಅವಧಿಯ ಆಧಾರದ ಮೇಲೆ - ನಿರ್ಧರಿಸತಕ್ಕದ್ದು.
(ii) ಅಂಥ ವ್ಯಕ್ತಿಗಳು ಜಿಲ್ಲಾವಾರು ಕೇಡರಿಗೆ ನೇರವಾಗಿ ನೇಮಕಗೊಂಡಿರುವಲ್ಲಿ, ಅವರ ನಡುವಣ ವಯಸ್ಸಿನ ಆಧಾರದ ಮೇಲೆ ವಯಸ್ಸಿನಲ್ಲಿ ಹಿರಿಯನಾದವನನ್ನು ಚಿಕ್ಕ ವಯಸ್ಸಿನವನಿಗಿಂತ ಜ್ಯೇಷ್ಠನೆಂದು ಪರಿಗಣಿಸಲಾಗುವುದು.
(2) (1)ನೇ ಉಪ-ನಿಯಮದ ಉಪಬಂಧಗಳು,-
(i) ವಿಭಾಗೀಯವಾರು ಕೇಡರುಗಳಲ್ಲಿ ಸೇರಿಸಿದ ಹುದ್ದೆಗಳನ್ನು ರಾಜ್ಯವಾರು ಕೇಡರಿನಲ್ಲಿ ಸೇರಿಸಿದ ತತ್ಪರಿಣಾಮವಾಗಿ, ರಾಜ್ಯವಾರು ಪಟ್ಟಿಯನ್ನು ತಯಾರಿಸಿರುವಲ್ಲಿ, ಸದರಿ ಉಪನಿಯಮದಲ್ಲಿ ''ಜಿಲ್ಲಾವಾರು ಕೇಡರುಗಳು'' ಎಂಬ ಪದಗಳಿಗೆ ಬದಲಾಗಿ "ವಿಭಾಗವಾರು ಕೇಡರುಗಳು" ಎಂಬ ಪದಗಳನ್ನು ಸೇರಿಸಲಾಗಿದ್ದರೆ ಹೇಗೋ ಹಾಗೆ;
(ii) ಜಿಲ್ಲಾವಾರು ಕೇಡರುಗಳಲ್ಲಿ ಸೇರಿಸಿದ ಹುದ್ದೆಗಳನ್ನು ವಿಭಾಗೀಯವಾರು ಕೇಡರಿನಲ್ಲಿ ಸೇರಿಸಿದ ತತ್ಪರಿಣಾಮವಾಗಿ ವಿಭಾಗೀಯವಾರು ಪಟ್ಟಿಯನ್ನು ಸಿದ್ಧಪಡಿಸಿರುವಲ್ಲಿ ಸದರಿ ಉಪನಿಯಮದಲ್ಲಿ "ರಾಜ್ಯವಾರು ಕೇಡರುಗಳು" ಎಂಬ ಪದಗಳ ಬದಲಾಗಿ "ವಿಭಾಗೀಯವಾರು ಕೇಡರುಗಳು" ಎಂಬ ಪದಗಳನ್ನು ಸೇರಿಸಲಾಗಿದ್ದರೆ ಹೇಗೋ ಹಾಗೆ - ಜ್ಯೇಷ್ಠತೆಯನ್ನು ನಿರ್ಧರಿಸಲು ಯಥೋಚಿತ ವ್ಯತ್ಯಾಸಗಳೊಂದಿಗೆ ಅನ್ವಯವಾಗತಕ್ಕದ್ದು] 1.
- ದಿನಾಂಕ 16ನೇ ಜೂನ್ 1969ರ ಅಧಿಸೂಚನೆ ಸಂಖ್ಯೆ ಜಿಎಡಿ 26 ಎಸ್ಆರ್ಆರ್ 69.
- ಮೇಲಿನ ಯಾವುವೇ ವಿಧಾನಗಳ ಮೂಲಕ ನಿರ್ಧರಿಸಲಾಗದಿರುವ ಪ್ರಕರಣಗಳನ್ನು ಲೋಕಸೇವಾ ಆಯೋಗದೊಡನೆ ಸಮಾಲೋಚಿಸಿ, ನೇಮಕಾತಿ ಪ್ರಾಧಿಕಾರವು ನಿರ್ಧರಿಸಬಹುದಾದಂಥ ರೀತಿಯಲ್ಲಿ ನಿರ್ಣಯಿಸತಕ್ಕದ್ದು.
- ಈ ನಿಯಮಗಳು, ರಾಜ್ಯ ಪುನರ್ರಚನಾ ಅಧಿನಿಯಮ, 1956ರ, 115ನೇ ಪ್ರಕರಣದ ಅನುಸಾರವಾಗಿ ಕರ್ನಾಟಕ ರಾಜ್ಯ ವ್ಯವಹಾರಗಳಿಗೆ ಸಂಬಂಧಿಸಿದಂತೆ ಸೇವೆ ಸಲ್ಲಿಸಲು ಹಂಚಿಕೆ ಮಾಡಲಾದ ಅಥವಾ ಹಂಚಿಕೆ ಮಾಡಲಾಗಿದೆಯೆಂದು ಭಾವಿಸಲಾದ ವ್ಯಕ್ತಿಗಳ ಪ್ರಾರಂಭಿಕ ಜ್ಯೇಷ್ಠತೆಯ ನಿರ್ಧರಣೆಗೆ ಈ ರಾಜ್ಯದಲ್ಲಿ ಅನ್ವಯವಾಗತಕ್ಕದ್ದಲ್ಲ. ಅಂಥ ವ್ಯಕ್ತಿಗಳ ಜ್ಯೇಷ್ಠತೆಯು, ಸದರಿ ಪ್ರಕರಣದ ಮತ್ತು ಅದಕ್ಕನುಸಾರವಾಗಿ ಹೊರಡಿಸಲಾದ ಆದೇಶಗಳ ಉಪಬಂಧಗಳಿಗನುಸಾರವಾಗಿ ನಿರ್ಧರಿಸಲಾದಂತೆ ಇರತಕ್ಕದ್ದು. 1 [10. ಈ ನಿಯಮಗಳ ಉಪಬಂಧಗಳಿಗನುಸಾರವಾಗಿ ಜ್ಯೇಷ್ಠತಾ ಕ್ರಮದಲ್ಲಿ ಸಿದ್ಧಪಡಿಸಲಾದ ಸದರಿ ಕೇಡರಿನ ಅಥವಾ ಹುದ್ದೆಗಳ ವರ್ಗದಲ್ಲಿರುವ ಎಲ್ಲಾ ಅಧಿಕಾರಿಗಳ ಹೆಸರುಗಳನ್ನು ಒಳಗೊಂಡ ಪ್ರತಿಯೊಂದು ಸೇವಾ ಕೇಡರಿನ ಅಥವಾ ಹುದ್ದೆಗಳ ವರ್ಗದ ಜ್ಯೇಷ್ಠತಾ ಪಟ್ಟಿಯನ್ನು ಪ್ರತಿ ವರ್ಷ ತಯಾರಿಸತಕ್ಕದ್ದು. ಜ್ಯೇಷ್ಠತಾ ಪಟ್ಟಿಯನ್ನು ಸಂಬಂಧಪಟ್ಟ ನೇಮಕಾತಿ ಪ್ರಾಧಿಕಾರವು ತಯಾರಿಸತಕ್ಕದ್ದು:
ಪರಂತು, ಸರ್ಕಾರವು ಯಾವುದೇ ಸೇವೆಯ ಯಾವುದೇ ಕೇಡರಿನ ಅಥವಾ ಹುದ್ದೆಗಳ ವರ್ಗದ ಜ್ಯೇಷ್ಠತಾ ಪಟ್ಟಿಯನ್ನು ಸಹಾ ತಯಾರಿಸಬಹುದು.
- ಅಧಿಸೂಚನೆ ಸಂ. ಡಿಪಿಎಆರ್ 14, ಎಸ್ಎಸ್ಆರ್ 2006, ದಿನಾಂಕ 18.08.2006ರ ಮೂಲಕ ಪ್ರತಿಯೋಜಿಸಲಾಗಿದೆ. The above translation of the Karnataka Government Servant's (Seniority ) Rules, 1957 shall be authoritative text in the Kannada Language under section 5A of the Karnataka Official Langauage Act, 1963 ಪಿ.ಆರ್. 80 Governor of Karnataka ಭಾರತ ಸರ್ಕಾರದ ರಾಷ್ಟ್ರಪತಿಯವರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಜಿ.ಕೆ. ಬೋರೇಗೌಡ ಸರ್ಕಾರದ ಕಾರ್ಯದರ್ಶಿ, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ