ಮೂಲ ಅಧಿನಿಯಮದ 4ನೇ ಪ್ರಕರಣದ (1)ನೇ ಉಪಪ್ರಕರಣದಲ್ಲಿ-
(ಎ) “ಒಂದು ವರ್ಷದ ಕಡ್ಡಾಯ ಸೇವೆಗೆ” ಎಂಬ ಪದಗಳಿಗೆ ಮೊದಲು "ರಾಜ್ಯ ಸರ್ಕಾರವು ನಿರ್ದಿಷ್ಟಪಡಿಸಲಾದಂತೆ ಅಸ್ತಿತ್ವದಲ್ಲಿರುವ ಖಾಲಿಹುದ್ದೆಗಳಲ್ಲಿ” ಎಂಬ ಪದಗಳನ್ನು ಸೇರಿಸತಕ್ಕದ್ದು.
(ಬಿ) “ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಶೇಷತಜ್ಜರ ಒಟ್ಟು ಕನಿಷ್ಠ ಸಂಬಳಕ್ಕಿಂತ ನೂರು ರೂಪಾಯಿಗಳಷ್ಟು ಕಡಿಮೆಗೆ ಸಮನಾಗಿರುವ ನಿಯಮಿಸಬಹುದಾದ” ಎಂಬ ಪದಗಳಿಗೆ ಬದಲಾಗಿ “ರಾಜ್ಯ ಸರ್ಕಾರವು ನಿರ್ದಿಷ್ಟಪಡಿಸಿದಂತೆ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.
(A) (1)ನೇ ಉಪಪ್ರಕರಣದ ತರುವಾಯ ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು, ಎಂದರೆ:-
“ಪರಂತು, ಸ್ನಾತಕೋತ್ತರ ಪದವಿಯ ತರುವಾಯ, ಅಭ್ಯರ್ಥಿಗಳು ಕೇಂದ್ರ ಅಥವಾ ರಾಜ್ಯ ಸರ್ಕಾರದ ನಿಯತ ಸೇವೆಗಾಗಿ ಆಯ್ಕೆಯಾದರೆ, ಅಂಥ ಅಭ್ಯರ್ಥಿಗಳನ್ನು ವಿನಾಯಿತಿಸತಕ್ಕದ್ದು.”