(1) ಜಿಲ್ಲಾ ಯೋಜನಾ ಸಮಿತಿಯ ಚೇರ್ಮನನ್ನು ಜಿಲ್ಲಾ ಯೋಜನಾ ಸಮಿತಿಯ ಸಭೆಯಲ್ಲಿ, ಸಂಬಂಧಪಟ್ಟ ಜಿಲ್ಲೆಯ ಉಸ್ತುವಾರಿ ಸಚಿವರು ಅಥವಾ ಜಿಲ್ಲಾ ಪಂಚಾಯತಿಯ ಅಧ್ಯಕ್ಷರಲ್ಲಿ ಒಬ್ಬರನ್ನು ಮಾತ್ರ ಆಯ್ಕೆ ಮಾಡತಕ್ಕದ್ದು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯು ಜಿಲ್ಲಾ ಯೋಜನಾ ಸಮಿತಿಯು ರಚನೆಯಾದ ಒಂದು ತಿಂಗಳಲ್ಲಿ ಚೇರ್ಮನನ ಆಯ್ಕೆಗಾಗಿ ಮೊದಲ ಸಭೆಯ ದಿನಾಂಕವನ್ನು ನಿಗಧಿಪಡಿಸತಕ್ಕದ್ದು. ಚೇರ್ಮನನ ಆಯ್ಕೆ ಮಾತ್ರ ಈ ಸಭೆಯ ಕಾರ್ಯಸೂಚಿಯಾಗಿರತಕ್ಕದ್ದು.
(2) ಹಾಜರಿದ್ದ ಅತ್ಯಂತ ಹಿರಿಯ ಸದಸ್ಯ ಒಬ್ಬರನ್ನು ಸಭೆಯ ಅಧ್ಯಕ್ಷತೆ ವಹಿಸಲು ಆಯ್ಕೆ ಮಾಡತಕ್ಕದ್ದು.
(3) ಮೊದಲ ಸಭೆಯ ದಿನಾಂಕದಂದು ಅಥವಾ ಅದಕ್ಕೂ ಮೊದಲೇ ಸಂಬಂಧಪಟ್ಟ ಜಿಲ್ಲೆಯ ಉಸ್ತುವಾರಿ ಸಚಿವರು ಅಥವಾ ಜಿಲ್ಲಾ ಪಂಚಾಯತಿ ಅಧ್ಯಕ್ಷರು ಸ್ವತಹಃ ಅಥವಾ ತನ್ನ ಹೆಸರು ಸೂಚಿಸುವವರ ಮೂಲಕ ಕೆಳಕಂಡ ನಮೂನೆಯಲ್ಲಿ ಭರ್ತಿ ಮಾಡಿದ ಮತ್ತು ಸಹಿ ಮಾಡಿದ ಪತ್ರವನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ನೀಡತಕ್ಕದ್ದು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯು ಪತ್ರವನ್ನು ಸ್ವೀಕರಿಸಿದ ಮೇಲೆ ಅದರ ಕ್ರಮ ಸಂಖ್ಯೆ ಪತ್ರವನ್ನು ತಮಗೆ ನೀಡಿದ ದಿನಾಂಕ ಮತ್ತು ವೇಳೆಯನ್ನು ನಮೂದಿಸಬೇಕು ಮತ್ತು ಪತ್ರದಲ್ಲಿ ಹೆಸರನ್ನು ಮತ್ತು ಸಂಖ್ಯೆಯನ್ನು ಪರಿಶೀಲನೆ ಮಾಡತಕ್ಕದ್ದು. ಗೊತ್ತುಪಡಿಸಲಾದ ದಿನಾಂಕ ಮತ್ತು ಕಾಲದ ತರುವಾಯ ಸ್ವೀಕರಿಸಿದ ಪತ್ರಗಳನ್ನು ತಿರಸ್ಕರಿಸತಕ್ಕದ್ದು. ಒಂದು ವೇಳೆ ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಇದ್ದಲ್ಲಿ ಮಾತ್ರ ಚುನಾವಣೆ ನಡೆಸತಕ್ಕದ್ದು.
(4) ಮೊದಲ ಸಭೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯು ಪತ್ರವನ್ನು ನೀಡಿದವರ ಹೆಸರು ಮತ್ತು ಸೂಚಕರ ಹೆಸರನ್ನು ಮತ್ತು ಸ್ವೀಕರಿಸಿದ ದಿನಾಂಕ ಮತ್ತು ವೇಳೆಯನ್ನು ಸದಸ್ಯರ ಗಮನಕ್ಕೆ ತರಲು ಓದಿ ಹೇಳತಕ್ಕದ್ದು. ಮತ್ತು ಸದಸ್ಯರಿಗೆ ತಮ್ಮ ಮತವನ್ನು ಕೈ ಎತ್ತುವ ಮೂಲಕ ಸೂಚಿಸಲು ಕೋರತಕ್ಕದ್ದು. ಸದಸ್ಯರಿಗೆ ಬಂದ ಪರವಾದ, ವಿರುದ್ಧವಾದ ಮತ್ತು ತಟಸ್ಥರಾದ ಸದಸ್ಯರ ಮತಗಳನ್ನು ದಾಖಲಿಸತಕ್ಕದ್ದು.
(5) ಅತಿ ಹೆಚ್ಚಿನ ಮತಗಳನ್ನು ಪಡೆದವರ ಹೆಸರನ್ನು ಜಿಲ್ಲಾ ಯೋಜನಾ ಸಮಿತಿಯ ಚೇರ್ಮನನ್ನಾಗಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯು ಘೋಷಿಸತಕ್ಕದ್ದು. ಅದರಂತೆ ನಡವಳಿಗಳನ್ನು ದಾಖಲಿಸಿ ಸಭೆಯ ಅಧ್ಯಕ್ಷತೆ ವಹಿಸಿದವರಿಂದ ಸಹಿ ಪಡೆಯತಕ್ಕದ್ದು.
(6) ಒಂದು ವೇಳೆ ಸಮಾನ ಮತಗಳು ಬಂದ ಸಂದರ್ಭದಲ್ಲಿ ಲಾಟರಿ ಮೂಲಕ ಆಯ್ಕೆಯನ್ನು ತೀರ್ಮಾನಿಸತಕ್ಕದ್ದು ಮತ್ತು ಯಾರ ಹೆಸರಿಗೆ ಲಾಟರಿ ಬರುವುದೋ ಆ ಅಭ್ಯರ್ಥಿಯ ಹೆಸರನ್ನು ಆಯ್ಕೆಯಾಗಿರುತ್ತಾರೆಂದು ಘೋಷಿಸತಕ್ಕದ್ದು. ಅದರಂತೆ ನಡವಳಿಗಳನ್ನು ದಾಖಲಿಸಿ ಸಭೆಯ ಅಧ್ಯಕ್ಷತೆ ವಹಿಸಿದವರಿಂದ ಸಹಿ ಪಡೆಯತಕ್ಕದ್ದು.
“ನಮೂನೆ (ನಿಯಮ 3(3) ನೋಡಿ) 1. ಸದಸ್ಯರ ಪೂರ್ಣ ಹೆಸರು: 2. ತಂದೆ/ಪತಿಯ ಹೆಸರು: 3. ವಯಸ್ಸು: 4. ಲಿಂಗ: 5. ವಿಳಾಸ: 6. ಸದಸ್ಯರ ಹೆಸರನ್ನು ಸೂಚಿಸುವವರ ಪೂರ್ತಿ ಹೆಸರು ಮತ್ತು ವಿಳಾಸ: ಸದಸ್ಯರ ಸಹಿ...
ಸೂಚಿಸುವವರ ಸಹಿ?” ಸದಸ್ಯರ ಸಹಿ... ಸೂಚಿಸುವವರ ಸಹಿ”
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಟಿ.ವಿ. ಅರುಣ್ಕುಮಾರ್
ಉಪನಿರ್ದೇಶಕರು ಹಾಗೂ ಪದನಿಮಿತ್ತ
ಸರ್ಕಾರದ ಅಧೀನ ಕಾರ್ಯದರ್ಶಿ,
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ.