(1) ಅಧಿನಿಯಮದ 58ನೇ ಪ್ರಕರಣದ (4)ನೇ ಉಪ-ಪ್ರಕರಣದ ಪರಂತುಕದಲ್ಲಿ ಉಲ್ಲೇಖಿಸಲಾದ ಕಾರಣ ಕೇಳುವ ನೋಟೀಸಿಗೆ ವಿಶ್ವವಿದ್ಯಾಲಯದಿಂದ ಉತ್ತರವನ್ನು ಸ್ವೀಕರಿಸಿದ ಮೇಲೆ, ಅಧಿನಿಯಮ ಅಥವಾ ನಿಯಮಗಳು, ಪರಿನಿಯಮಗಳು ಮತ್ತು ಅದರಡಿಯಲ್ಲಿ ರಚಿಸಲಾದ ಅಧ್ಯಾದೇಶಗಳ ಎಲ್ಲ ಅಥವಾ ಯಾವುವೇ ಉಪಬಂಧಗಳ ಉಲ್ಲಂಘನೆಯಾಗಿದೆಯೆಂದು ಅಥವಾ ಅಧಿನಿಯಮದ ಅಡಿಯಲ್ಲಿ ಹೊರಡಿಸಲಾದ ನಿರ್ದೇಶನಗಳು ಉಲ್ಲಂಘನೆಯಾಗಿದೆಯೆಂದು ಅಥವಾ ಹಣಕಾಸಿನ ದುರ್ವಿನಿಯೋಗ ಅಥವಾ ದುರಾಡಳಿತ ಅಥವಾ ಅಶಿಸ್ತು ಕಂಡುಬಂದಿದೆಯೆಂದು ಮೇಲ್ನೋಟಕ್ಕೆ ಸರ್ಕಾರಕ್ಕೆ ಮನವರಿಕೆಯಾದಲ್ಲಿ ಅದು ಅವಶ್ಯವೆಂದು ಪರಿಗಣಿಸಬಹುದಾದಂತೆ, ಅಂಥ ವಿಚಾರಣೆ ನಡೆಸಲು ಆದೇಶವನ್ನು ಹೊರಡಿಸತಕ್ಕದ್ದು.
(2). ಸರ್ಕಾರವು, ಉಪ-ಪ್ರಕರಣ (1)ರ ಮೇರೆಗೆ ಯಾವುದೇ ವಿಚಾರಣೆಯನ್ನು ನಡೆಸುವ ಉದ್ದೇಶಕ್ಕಾಗಿ, ಯಾವುದೇ ಆಪಾದನೆಗಳ ವಿಚಾರಣೆ ನಡೆಸಿ ಅದರ ಬಗ್ಗೆ ವರದಿಯನ್ನು ಸಲ್ಲಿಸಲು ನಿವೃತ್ತ ಸರ್ವೋಚ್ಛ ನ್ಯಾಯಾಲಯದ ಅಥವಾ ಉಚ್ಛ ನ್ಯಾಯಾಲಯದ ನ್ಯಾಯಾಧೀಶರ ನೇತೃತ್ವದಲ್ಲಿ ಒಂದು ವಿಚಾರಣಾ ಆಯೋಗವನ್ನು ರಚಿಸತಕ್ಕದ್ದು.
(3) (2)ನೇ ಉಪ-ಪ್ರಕರಣದ ಮೇರೆಗೆ ನೇಮಕವಾದ ಅಧಿಕಾರಿಯಿಂದ ವಿಚಾರಣಾ ವರದಿಯನ್ನು ಸ್ವೀಕರಿಸಿದ ತರುವಾಯ, ಸರ್ಕಾರವು, ವಿಶ್ವವಿದ್ಯಾಲಯವು ಈ ಅಧಿನಿಯಮದ ಎಲ್ಲಾ ಅಥವಾ ಯಾವುದೇ ಉಪಬಂಧಗಳನ್ನು ಅಥವಾ ನಿಯಮಗಳು, ಪರಿನಿಯಮಗಳು ಅಥವಾ ಅದರಡಿಯಲ್ಲಿ ರಚಿಸಲಾದ ಆದ್ಯಾದೇಶಗಳನ್ನು ಉಲ್ಲಂಘಿಸಿದೆಯೆಂದು ಅಥವಾ ಈ ನಿಯಮದ ಅಡಿಯಲ್ಲಿ ಅದು ಹೊರಡಿಸಿದ ಯಾವುವೇ ನಿರ್ದೇಶನಗಳನ್ನು ಉಲ್ಲಂಘಿಸಿದೆಯೆಂದು ಅಥವಾ ಈ ಅಧಿನಿಯಮದ 8ನೇ ಪ್ರಕರಣದಲ್ಲಿ ಹೇಳಲಾದಂತೆ ಅದು ಅಧಿಕಾರಗಳು ಮತ್ತು ಪ್ರಕಾರ್ಯಗಳನ್ನು ನಿರ್ವಹಿಸುವುದನ್ನು ನಿಲ್ಲಿಸಿದೆಯೆಂದು ಅಥವಾ ವಿಶ್ವವಿದ್ಯಾಲಯದ ಶೈಕ್ಷಣಿಕ ಗುಣಮಟ್ಟಕ್ಕೆ ಬಾಧಕವಾಗುವಂತಹ ಹಣಕಾಸಿನ ದುರ್ವಿನಿಯೋಗ ಮತ್ತು ದುರಾಡಳಿತದ ಪರಿಸ್ಥಿತಿಯು ವಿಶ್ವವಿದ್ಯಾಲಯದಲ್ಲಿ ಉದ್ಭವವಾಗಿದೆ. ಎಂದು ಸರ್ಕಾರಕ್ಕೆ ಮನವರಿಕೆಯಾದರೆ, ಅದು ವಿಶ್ವವಿದ್ಯಾಲಯದ ಸಮಾಪನಕ್ಕಾಗಿ ಪ್ರಾಥಮಿಕ ಆದೇಶವನ್ನು ಹೊರಡಿಸತಕ್ಕದ್ದು ಮತ್ತು ಒಬ್ಬ ಆಡಳಿತಗಾರರನ್ನು ನೇಮಕ ಮಾಡತಕ್ಕದ್ದು.
(4) (3) ನೇ ಉಪ-ಪ್ರಕರಣದ ಮೇರೆಗೆ ನೇಮಕವಾದ ಆಡಳಿತಗಾರನು ಎಲ್ಲ ಅಧಿಕಾರಗಳನ್ನು ಹೊಂಧಿರತಕ್ಕದ್ದು ಮತ್ತು ಅಧಿನಿಯಮದ ಮೇರೆಗೆ ಆಡಳಿತ ಮಂಡಳಿ ಮತ್ತು ನಿರ್ವಹಣಾ ಮಂಡಳಿಯ ಎಲ್ಲ ಕರ್ತವ್ಯಗಳಿಗೆ ಒಳಪಟ್ಟಿರತಕ್ಕದ್ದು ಮತ್ತು ವಿಶ್ವವಿದ್ಯಾಲಯದ ನಿಯತ ಕೋರ್ಸುಗಳ ಕೊನೆಯ ಬ್ಯಾಚಿನ ವಿದ್ಯಾರ್ಥಿಗಳು ಅವರ ಕೋರ್ಸುಗಳನ್ನು ಪೂರ್ಣಗೊಳಿಸುವವರೆಗೂ ಮತ್ತು ಅವರು ಸಂದರ್ಭಾನುಸಾರ ಪದವಿ, ಡಿಪ್ಲೋಮಾ, ಅವಾರ್ಡು(ಪಾರಿತೋಷಕ)ಗಳನ್ನು ಹೊಂದುವವರೆಗೂ, ಆಡಳಿತಗಾರನು ವಿಶ್ವವಿದ್ಯಾಲಯದ ವ್ಯವಹರಣೆಗಳನ್ನು ನಿರ್ವಹಿಸತಕ್ಕದ್ದು.
(5) . ಅವ್ಯವಹಾರಗಳನ್ನು ಸರಿಪಡಿಸಿದ ನಂತರ ಅಥವಾ ನಿಯತ ಕೋರ್ಸುಗಳ ಕೊನೆಯ ಬ್ಯಾಚು ವಿದ್ಯಾರ್ಥಿಗಳಿಗೆ ಸಂದರ್ಭಾನುಸಾರ ಪದವಿ, ಡಿಪ್ಲೋಮಾ ಅಥವಾ ಅವಾರ್ಡು (ಪಾರಿತೋಷಕ)ಗಳನ್ನು ನೀಡಿದ ನಂತರ ಆಡಳಿತಗಾರನು ಸರ್ಕಾರಕ್ಕೆ ವರದಿಯನ್ನು ಮಾಡತಕ್ಕದ್ದು.
(6) (5ನೇ ಉಪ-ಪ್ರಕರಣದ ಮೇರೆಗೆ, ವರದಿಯನ್ನು ಸ್ವೀಕರಿಸಿದ ಮೇಲೆ, ಸರ್ಕಾರವು, ಅಧಿಕೃತ ರಾಜ್ಯಪತ್ರದಲ್ಲಿ ಅಧಿಸೂಚನೆಯನ್ನು... ಹೊರಡಿಸುವ ಮೂಲಕ, ವಿಶ್ವವಿದ್ಯಾಲಯವನ್ನು ರದ್ದುಪಡಿಸುವ ಬಗ್ಗೆ ಅಂತಿಮ ಆದೇಶವನ್ನು ಹೊರಡಿಸತಕ್ಕದ್ದು ಮತ್ತು ಅಂತಹ ಅಧಿಸೂಚನೆಯ ಪ್ರಕಟಣೆಯ ದಿನಾಂಕದಿಂದ ವಿಶ್ವವಿದ್ಯಾಲಯವು ರದ್ದಾಗತಕ್ಕದ್ದು ಮತ್ತು ವಿಶ್ವವಿದ್ಯಾಲಯದ ಎಲ್ಲ ಆಸ್ತಿಗಳು ಮತ್ತು ಹೊಣೆಗಾರಿಕೆಗಳು ಅಂತಹ ದಿನಾಂಕದಿಂದ ಪ್ರಯೋಜಕ ಸಂಸ್ಥೆಯಲ್ಲಿ ನಿಹಿತವಾಗತಕ್ಕದ್ದು.
(7) ಹಾಗೆ ರದ್ದಾದ ತರುವಾಯ, ಅಧಿನಿಯಮದ ಉಪಬಂಧಗಳಿಗೆ ಅನುಸಾರವಾಗಿ ಕ್ರಮತೆಗೆದುಕೊಳ್ಳಲು ಮತ್ತು ವಿದ್ಯಾರ್ಥಿಗಳ ತಮ್ಮ ಕೋರ್ಸುಗಳು ಪೂರ್ಣಗೊಳಿಸಿಕೊಳ್ಳುವವರೆಗೂ ಮತ್ತು ಅವರು ಪದವಿಗಳು ಅಥವಾ ಡಿಪ್ಲೋಮಾಗಳನ್ನು ಪಡೆಯುವವರೆಗೂ ಸಾರ್ವಜನಿಕ ಹಿತಾಸಕ್ತಿಯಿಂದ ಮತ್ತು ವಿದ್ಯಾರ್ಥಿಗಳ ಹಿತಾಸಕ್ತಿಯಲ್ಲಿ ವಿಶ್ವವಿದ್ಯಾಲಯವನ್ನು ನಡೆಸುವುದು ಮತ್ತು ಅವರಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರಕ್ಕೆ ಸಕ್ಷಮವಾಗಿರತಕ್ಕದ್ದು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು
ಅವರ ಹೆಸರಿನಲ್ಲಿ
(ಮಹೇಶ್ ಆರ್)
ಸರ್ಕಾರದ ಅಧೀನ ಕಾರ್ಯದರ್ಶಿ
ಉನ್ನತ ಶಿಕ್ಷಣ ಇಲಾಖೆ (ವಿಶ್ವವಿದ್ಯಾಲಯಗಳು-2)