(1) ಈ ನಿಯಮಗಳಲ್ಲಿ ಸಂದರ್ಭಕ್ಕೆ wed ಅರ್ಥದ ಅಗತ್ಯವಿರದಿದ್ದರೆ.-
(ಎ) “ಅಧಿನಿಯಮ” BOBS 19930 ಕರ್ನಾಟಕ ಗ್ರಾಮ ಸ್ವರಾಜ್ ಪಂಚಾಯತ್ ರಾಜ್ ಅಧಿನಿಯಮ (19930 ಕರ್ನಾಟಕ ಅಧಿನಿಯಮ ಸಂಖ್ಯೆ14);
(ಬಿ) “ತತ್ಸಮಾನ ಹುದ್ದೆಯ ಅಧಿಕಾರಿ” ಎಂದರೆ ಸರ್ಕಾರದ ಅಧಿಸೂಚನೆಯ ಮೂಲಕ ಈ ಪರವಾಗಿ ಅಧಿಕಾರ ಪಡೆದ ಪ್ರಾದೇಶಿಕ ಆಯುಕ್ತರಿಗೆ ತತ್ಸಮಾನ ಅಧಿಕಾರಿ.
(ಸಿ) “ನಮೂನೆ” ಎಂದರೆ ಈ ನಿಯಮಗಳಿಗೆ ಅನುಬಂಧಿಸಿದ ನಮೂನೆ;
(ಡಿ) “ಪ್ರಕರಣ” ಎಂದರೆ ಅಧಿವಿಯಮದ ಪ್ರಕರಣ
(2) ಈ ನಿಯಮಗಳಲ್ಲಿ ಬಳಸಲಾದ ಆದರೆ ವ್ಯಾಖ್ಯಾನಿಸಲಾದ ಇತರ ಪದಗಳು ಮತ್ತು ಅಭಿವ್ಯಕ್ತಿಗಳು ಕಾಯ್ದೆಯಲ್ಲಿ ಅವರಿಗೆ ನಿಗದಿಪಡಿಸಿದ ಅರ್ಥವನ್ನು ಹೊಂದಿರುತ್ತವೆ.
- ಅವಿಶ್ವಾಸ ಸೂಚನೆ:- (1) ಜಿಲ್ಲಾ ಪಂಚಾಯಿತಿಯ ಚುನಾಯಿತ ಒಟ್ಟು ಸದಸ್ಯರ ಪೈಕಿ ಅರ್ಧದಷ್ಟು ಸದಸ್ಯರು ಸಹಿ ಮಾಡಿರುವ ನೋಟೇಸ್ನ್ನು ಪ್ರಕರಣ 179ರ ಉಪಪ್ರಕರಣ (3)ರ ಪರಂತುಕದಡಿಯಲ್ಲಿ ಮಂಡಿಸುವ ಉದ್ದೇಶದ ನೋಟೀಸನ್ನು ಬರಹದಲ್ಲಿ ನಮೂನೆ 1 ರಲ್ಲಿ ಉದ್ದೇಶಿತ ಸೂಚನೆಯ ಒಂದು ಪ್ರತಿಯೊಂದಿಗೆ ಆ ನೋಟೀಸಿಗೆ ಸಹಿ ಹಾಕಿರುವ ಯಾರಾದರೂ ಇಬ್ಬರು ಸದಸ್ಯರು ಸಂಬಂಧಪಟ್ಟ ಪ್ರಾದೇಶಿಕ ಆಯುಕರಿಗೆ ಅಥವಾ ತತ್ಸಮಾನ ಹುದ್ದೆಯ ಅಧಿಕಾರಿಗೆ ಖುದ್ದಾಗಿ ಸಲ್ಲಿಸತಕ್ಕದ್ದು.
(2 ಆ ತರುವಾಯ ಪ್ರಾದೇಶಿಕ ಆಯುಕ್ತರು ಅಥವಾ ತತ್ಸಮಾನ ಹುದ್ದೆಯ ಅಧಿಕಾರಿಯು 1)ನೇ ಉಪ-ನಿಯಮದಡಿಯಲ್ಲಿ ನೋಟೀಸನ್ನು ಸ್ವೀಕರಿಸಿದ ದಿನಾಂಕದಿಂಂದ ಹದಿನೈದು ದಿನಗಳಿಗೆ. ಮೀರದಂತೆ. ಅವನು ನಿರ್ಧರಿಸಿದ ದಿನಾಂಕದಂದು ಜಿಲ್ಲಾ ಪಂಚಾಯಿತಿಯ ಕಛೇರಿಯಲ್ಲಿ ಅವಿಶ್ವಾಸ ಸೂಚನೆಯ ಪರ್ಯಾಲೋಚನೆಗಾಗಿ ಸಭೆಯನ್ನು ಕರೆಯತಕ್ಕದ್ದು. ಅವನು ಅಂತಹ ಸಭೆಯ ಬಗ್ಗೆ ಉಪ-ನಿಯಮ (3) ರಲ್ಲಿ ವಿರ್ಧಿಷ್ಟಪಡಿಸಿದ ರೀತಿಯಲ್ಲಿ ಹತ್ತು ಪೂರ್ಣ ದಿನಗಳಿಗೆ ಕಡಿಮೆ ಇಲ್ಲದ ದಿನಾಂಕದ ನೋಟೀಸನ್ನು ನಮೂನೆ 2 ರಲ್ಲಿ ಜಿಲ್ಲಾ ಪಂಚಾಯಿತಿಯ ಚುನಾಯಿತ ಸದಸ್ಯರಿಗೆ ಕೊಡತಕ್ಕದ್ದು;
ಪರಂತು, ಅಂತಹ ಸಭೆ ನಡೆಸುವುದನ್ನು ನ್ಯಾಯಾಲಯದ ಆದೇಶದ ಮೂಲಕ ತಡೆಹಿಡಿದಲ್ಲಿ ಅದನ್ನು ಮುಂದೆ ಹಾಕತಕ್ಕದ್ದು ಮತ್ತು ಸದರಿ ಅಧಿಕಾರಿ ಅಥವಾ ತತ್ಸಮಾನ ಹುದ್ದೆಯ ಅಧಿಕಾರಿಯು ತಡೆಯಾಜ್ನೆಯನ್ನು ತೆರವು ಮಾಡಿದ ಬಗ್ಗೆ ಅವನು ಮಾಹಿತಿಯನ್ನು ಸ್ವೀಕರಿಸಿದ ದಿನಾಂಕದಿಂದ ಹದಿನೈದು ದಿನಗಳನ್ನು ಮೀರದ ದಿನಾಂಕದಂದು ಮುಂದಕ್ಕೆ ಹಾಕಲಾದ ಅಂತಕ ಸಭೆಯ ಬಗ್ಗೆ ಹತ್ತು ಪೂರ್ಣ ದಿನಗಳಿಗೆ ಕಡಿಮೆ ಇಲ್ಲದ ದಿನಾಂಕದ ನೋಟೇಸನ್ನು ಜಿಲ್ಲಾ ಪಂಚಾಯಿತಿಯ ಚುನಾಯಿತ ಸದಸ್ಯರಿಗೆ ಉಪ ನಿಯಮ 13ರಲ್ಲಿ ನಿರ್ದಿಷ್ಟಪಡಿಸಿದ ರೀತಿಯಲ್ಲಿ ಕೊಟ್ಟ ತರುವಾಯ ಮುಂದೆ ಹಾಕಿದೆ ಆ ಸಭೆಯನ್ನು ನಡೆಸತಕ್ಕದ್ದು.
ಮತ್ತು BOOS, ಮೇಲೆ ತಿಳಿಸಿದ ರೀತಿಯಲ್ಲಿ ನಿಗಧಿಗೊಳಿಸಿದ ದಿನಾಂಕದಂದು ಅವಿರೀಕ್ಷಿತ ಕಾರಣಗಳಿಂದಾಗಿ ಸಾರ್ವಜನಿಕ 02% ಘೋಷಿಸಿದ್ದರೆ, ನಿಗಧಿಗೊಳಿಸಿದ ದಿನಾಂಕದ ಮಾರನೆಯ ಕರ್ತವ್ಯ ದಿನಾಂಕದಂದು ಸಭೆಯನ್ನು ಏರ್ಪಡಿಸುವುದು.
(3) ಪ್ರಾದೇಶಿಕ ಆಯುಕ್ತರು ಅಥವಾ ತತ್ಸಮಾನ ಹುದ್ದೆಯ ಅಧಿಕಾರಿಯು ನಮೂನೆ-2 ರಲ್ಲಿ ನೋಟೀಸನ್ನು ಅಧ್ಯಕ್ಷ ಮತ್ತು ಉಪಾಧ್ಯಕ್ಷನು ಸೇರಿದಂತೆ ಪ್ರತಿಯೊಬ್ಬ ಜಿಲ್ಲಾ ಪಂಚಾಯಿತಿಯ ಚುನಾಯಿತ ಸದಸ್ಯವಿಗೆ ಈ ಕೆಳಕಂಡ ವಿಧಾನವನ್ನು ಅನುಸರಿಸಿ ನೀಡತಕ್ಕದ್ದು, ಅಂದರೆ,-
(ಎ) ಸದರಿ ನೋಟೀಸನ್ನು ಅಂತಹ ಸದಸ್ಯವಿಗೆ ನೇರವಾಗಿ ಕೊಡುವುದರ ಮೂಲಕ; ಅಥವಾ
(ಬಿ) ಅಂತಹ ಸದಸ್ಯನು ಮುಖತಃಸಿಗದಿದ್ದರೆ ಅಂತಕ ನೋಟೀಸನ್ನು ಜಿಲ್ಲಾ ಪಂಚಾಯಿತಿಯ ವ್ಯಾಪ್ತಿಯಲ್ಲಿ ಅವನು ವಾಸಿಸುತ್ತಿದ್ದಾನೆಂದು ತಿಳಿದು ಬಂದ ಕೊನೆಯ ವಾಸಸ್ಥಳ ಅಥವಾ ವ್ಯವಹಾರದ ಸ್ಥಳದಲ್ಲಿ ಇರುವ ಅವನ ಕುಟುಂಬದ ಯಾರಾದರೊಬ್ಬ ವಯಸ್ಕ ಸದಸ್ಯರಿಗೆ ಅಥವಾ ನೌಕರನಿಗೆ ಕೊಡುವುದರ ಮೂಲಕ ಅಥವಾ ಕೊಡ ಮಾಡುವುದರ ಮೂಲಕ; ಅಥವಾ (A) ನೋಂದಾಯಿತ ಅಂಚೆಯ ಮೂಲಕ; ಅಥವಾ ಇ-ಮೇಲ್ ಅಥವಾ
(ಡಿ) ಮೇಲೆ ಹೇಳಿದ ಯಾವುದೇ ವಿಧಾನವು ಲಭ್ಯವಾಗದಿದ್ದಲ್ಲಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯೊಳಗೆ ಆ ಸದಸ್ಯನು ಹಿಂದೆ ವಾಸವಾಗಿದ್ದನೆಂಂದು ಅಥವಾ ವ್ಯವಹಾರವನ್ನು ನಡೆಸುತ್ತಿದ್ದನೆಂದು ತಿಳಿದು ಬಂದ ಮನೆ ಅಥವಾ ವ್ಯವಹಾರದ ಸ್ಥಳ ಯಾವುದಾದರೂ ಇದ್ದರೆ ಆ ಮನೆಯ ಎದ್ದು ಕಾಣುವ ಭಾಗದಲ್ಲಿ ಅಂತಕ ನೋಟೀಸನ್ನು ಅಂಟಿಸುವ ಮೂಲಕ-ಕೊಡತಕ್ಕದ್ದು.
(4) ಪ್ರಾದೇಶಿಕ ಆಯುಕ್ತರು ಅಂತ ಸಭೆಯ ಅಧ್ಯಕ್ಷತೆ ವಹಿಸತಕ್ಕದ್ದು, ಅಂತಹ ಸಭೆಗೆ ಕೋರಂ, ಜಿಲ್ಲಾ ಪಂಚಾಯಿತಿಯ ಚುನಾಯಿತ ಸದಸ್ಯರ ಒಟ್ಟು ಸಂಖ್ಯೆಯ ಅರ್ಥದಷ್ಟು ಇರತಕ್ಕದ್ದು.
ವಿವರಣೆ.- ಈ ಉಪ ನಿಯಮದ ಮೇರೆಗೆ ಒಟ್ಟು ಸದಸ್ಯರ ಸಂಖ್ಯೆಯ ಅರ್ಧದಷ್ಟು ನಿರ್ಧರಿಸುವಾಗ ಬರುವ ಯಾವುದೇ ಭಿನ್ನಾಂಶವನ್ನು ಒಂದು DOD ಅರ್ಥೈಸತಕ್ಕದ್ದು.
(5) ಅಧಿನಿಯಮದಲ್ಲಿ ಅಥವಾ ಈ ನಿಯಮಗಳಲ್ಲಿ ಅನ್ಯಥಾ ಉಪಬಂಧಿಸಿರುವುದನ್ನು ಹೊರತುಪಡಿಸಿ ಉಪ-ನಿಯಮ (2ರಡಿಯಲ್ಲಿ ಅವಿಶ್ವಾಸ ಸೂಚನೆಯನ್ನು ಪರ್ಯಾಲೋಚಿಸುವ ಉದ್ದೇಶಕ್ಕಾಗಿ ಕರೆಯಲಾದ ಸಭೆಯನ್ನು ಯಾವುದೇ ಕಾರಣಕ್ಕಾಗಿ ಮುಂದಕ್ಕೆ ಹಾಕತಕ್ಕದ್ದಲ್ಲ.
(6) (ಎ) ಸಭೆಗಾಗಿ ಗೊತ್ತುಪಡಿಸಲಾದ ಕಾಲ ಮುಗಿದ ತರುವಾಯ ಅರ್ಥ ಘಂಟೆಯೊಳಗೆ ಕೋರಂ ಇಲ್ಲದಿದ್ದರೆ ಆ ಸಭೆಯ ಮುಂದೂಡುವುದು.
(ಬಿ) ನಿಯಮ 6(ಎ) ರಡಿ ಮುಂದೂಡಲ್ಬಟ್ಟಿ ಸಭೆಯನ್ನು ಮುಂದಿನ ಏಳು ದಿನಕ್ಕೆ ಮೀರದ ಒಂದು ದಿನಾಂಕಕ್ಕೆ (ರಜಾ ದಿನ ಹೊರತುಪಡಿಸಿ) ನಿಗಧಿಗೊಳಿಸತಕ್ಕದ್ದು, ಇದು ಸಭಾ ನಡವಳಿಯ ಭಾಗವಾಗತಕ್ಕದ್ದು.
(A) ಮುಂದೂಡಿದ ಸಭೆಗೆ ಪ್ರತ್ಯೇಕ ನೋಟೀಸನ್ನು ಸಿದ್ಧಪಡಿಸಿ ಕಳುಹಿಸುವ ಅಗತ್ಯವಿರುವುದಿಲ್ಲ. ಸಭಾ ನಡವಳಿಯನ್ನು ಜಿಲ್ಲಾ ಪಂಚಾಯಿತಿಯ ಪ್ರಕಟಣಾ ಫಲಕದಲ್ಲಿ ಪ್ರಕಟಿಸತಕ್ಕದ್ದು, ಸಭಾ ನಡವಳಿಯು ಸಭಾ ಸೂಚನೆಯೆಂದು ಭಾವಿಸತಕ್ಕದ್ದು.
(ಡಿ) ಒಂದು ವೇಳೆ ಮುಂದೂಡಲ್ಬಟ್ಟ ಸಭೆಯು ಕೋರಂ ಅಭಾವದಿಂದ ನಡೆಯದಿದ್ದರೆ ಅಧ್ಯಕ್ಷ ಅಥವಾ ಉಪಾಧ್ಯಕ್ಷನ ವಿರ್ಣಯವು ಜಿಲ್ಲಾ ಪಂಚಾಯಿತಿಯಿಂದ ನಕಾರಾತಶವಾಗಿದೆಯೆಂದು ಭಾವಿಸತಕ್ಕದ್ದು,
(7) (ಏನೇ ಉಪ-ನಿಯಮದಡಿಯಲ್ಲಿ ಕರೆಯಲಾಗಿರುವ ಸಭೆಯ ಪ್ರಾರಂಭವಾದ ಕೂಡಲೇ ಪ್ರಾದೇಶಿಕ ಆಯುಕ್ತರು ಅಥವಾ ತತ್ಸಮಾನ ಹುದ್ದೆಯ ಅಧಿಕಾರಿಯು ಯಾವ ಸೂಚನೆಯ ಪರ್ಯಾಲೋಚನೆಗಾಗಿ ಸಭೆಯನ್ನು ಕರೆಯಲಾಗಿದೆಯೋ ಅ ಸೂಚನೆಯನ್ನು ಜಿಲ್ಲಾ ಪಂಚಾಯಿತಿಯ ಚುನಾಯಿತ ಸದಸ್ಯರಿಗೆ ಓದಿ ಹೇಳತಕ್ಕದ್ದು ಮತ್ತು ಯಾವುದೇ ಚರ್ಚೆ ಇಲ್ಲದೆ ಅದನ್ನು ಮತಕ್ಕೆ ಹಾಕತಕ್ಕದ್ದು.
(8) ಪ್ರಾದೇಶಿಕ ಆಯುಕ್ತರು ಅಥವಾ ತತ್ಸಮಾನ ಹುದ್ದೆಯ ಅಧಿಕಾರಿಯು ಈ ಸೂಚನೆಯ ಗುಣಾವಗುಣಗಳ ಬಗ್ಗೆ ಮಾತನಾಡತಕ್ಕದ್ದಲ್ಲ ಮತ್ತು ಅವನು ಮತ ಕೊಡಲು ಹಕ್ಕುಳ್ಳವನಾಗತಕ್ಕದ್ದಲ್ಲ.
(9) ಮಂಡಿಸಲಾದ ಸೂಚನೆಯು ಜಿಲ್ಲಾ ಪಂಚಾಯಿತಿಯ ಸದಸ್ಯರ ಒಖ್ಬು ಸಂಖ್ಯೆಯಲ್ಲಿ ಮೂರನೇ ಎರಡು ಭಾಗಕ್ಕಿಂತಲೂ ಕಡಿಮೆ ಇಲ್ಲದ ಸದಸ್ಯರ ಬೆಂಬಲದೊಡನೆ ಅಂಗೀಕೃತವಾದರೆ ಸಂದರ್ಭಾನುಸಾರ ಅಧ್ಯಕ್ಷ ಅಥವಾ ಉಪಾಧ್ಯಕ್ಷನು ತಕ್ಷಣ ಹುದ್ದೆಯನ್ನು ತೆರವು ಮಾಡಿರುವುದಾಗಿ ಭಾವಿಸತಕ್ಕದ್ದು ಮತ್ತು ಪ್ರಾದೇಶಿಕ ಆಯುಕ್ತರು ಅಥವಾ ತತ್ಸಮಾನ ಹುದ್ದೆಯ ಅಧಿಕಾರಿಯು ಸಭೆಯ ನಿರ್ಣಯವನ್ನು ಸಭಾ ನಡವಳಿಯ ಪುಸ್ತಕದಲ್ಲಿ ದಾಖಲಿಸತಕ್ಕದ್ದು.
ವಿವರಣೆ: ಈ ಉಪವಿಯಮದ ಮೇರೆಗೆ ಒಟ್ಟು ಸದಸ್ಯರ ಸಂಖ್ಯೆಯ ಮೂರನೇ ಎರಡು ಭಾಗವನ್ನು ವಿರ್ಧರಿಸುವಾಗ ಬರುವ ಯಾವುದೇ ಭಿನ್ನಾಂಶವನ್ನು ಒಂದು ಎಂದು ಅರ್ಥೈಸತಕ್ಕದ್ದು.
(10) (9) ನೇ ಉಪ-ನಿಯಮದ ಮೇರೆಗೆ ಅಧ್ಯಕ್ಷ ಅಥವಾ ಉಪಾಧ್ಯಕ್ಷನ ಸ್ಥಾನವು ನಿಂತು ಹೋದಮೇಲೆ ಸಂದರ್ಭಾನುಸಾರ ಅಧ್ಯಕ್ಷ, ಉಪಾಧ್ಯಕ್ಷನು ಅವನ ಅಭಿರಕ್ತೆಯಲ್ಲಿರುವ ಜಿಲ್ಲಾ ಪಂಚಾಯಿತಿಯ ಎಲ್ಲಾ ದಸ್ತಾವೇಜುಗಳು, ಹಣ ಅಥವಾ ಇತರ ಸ್ವತ್ತುಗಳನ್ನು ಕೂಡಲೇ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಒಪ್ಪಿಸತಕ್ಕದ್ದು.
(11) ಪ್ರಾದೇಶಿಕ ಆಯುಕ್ತರು, ಮುಂದುವರೆದು ಸಂದರ್ಭಾನುಸಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯನ್ನು ನಿಯಮಾನುಸಾರ ನಡೆಸಲು ಅಗತ್ಯ ಕ್ರಮ ಕೈಗೊಳ್ಳತಕ್ಕದ್ದು.
ನಮೂನೆ-1 (ನಿಯಮ 3ರ ಉಪ ನಿಯಮ (1)ನ್ನು ನೋಡಿ) ಗೆ ಪ್ರಾದೇಶಿಕ ಆಯುಕ್ತರು ಅಥವಾ ಮಾನ್ಯರೆ, ವಿಷಯ. ಜಿಲ್ಲಾ ಪಂಚಾಯಿತಿಯ ಅಧ್ಯಕ್ಷ ಅಥವಾ ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಸೂಚನೆ.
KKKKKKK ಈ ಕೆಳಗೆ ಸಹಿ ಮಾಡಿರುವ ೬ ೋಫ್ಫ್ಪಎ೮ಟಟ೬೮ಅಿ ಜಿಲ್ಲಾ ಪಂಚಾಯಿತಿಯ ಚುನಾಯಿತ ಸದಸ್ಯರುಗಳಾದ ನಾವುಗಳು ಅಧ್ಯಕ್ಷ ಅಥವಾ ಉಪಾಧ್ಯಕ್ಷನ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993, ಪ್ರಕರಣ 179) ರಡಿ ಅವಿಶ್ವಾಸಗೊತ್ತುವಳಿ ಮಂಡಿಸಲು ನೋಟೀಸ್ ನೀಡುತ್ತಿದ್ದೇವೆ.
ತಮ್ಮ ವಿಶ್ವಾಸಿ,
| ಕ್ರಮ ಇ ಸಂಖ್ಯೆ | ಸದಸ್ಯರ ಹೆಸರು | ಕ್ಷೇತ್ರದ ಹೆಸರು | ಸಹಿ |
ಪ್ರಾದೇಶಿಕ ಆಯುಕ್ತರು ಗೆ, ಶ್ರೀ/ಶ್ರೀಮತಿ.................
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
(ಪಿ.ಶಿವಶಂಕರ್) ನಿರ್ದೇಶಕರು(ಪಂ.ರಾಜ್) ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ