(1) ಈ ನಿಯಮಗಳನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ನಿಯಮಗಳು, 2017 ಎಂದು ಕರೆಯತಕ್ಕದ್ದು.
(2 ಇವು ರಾಜ್ಯಪತ್ರದಲ್ಲಿ ಅವುಗಳ ಪ್ರಕಟಣೆಯ ದಿನಾಂಕದಿಂದ ಜಾರಿಗೆ ಬರತಕ್ಕದ್ದು. 2. 27ಎ ಹೊಸ ನಿಯಮದ ಸೇರ್ಪಡೆ:- ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ನಿಯಮಗಳು, 2000ದಲ್ಲಿ, 27ನೇ ನಿಯಮದ ತರುವಾಯ, ಈ ಕೆಳಕಂಡದ್ದನ್ನು ಸೇರಿಸತಕ್ಕದ್ದು, ಎಂದರೆ:- 27ಎ): ನಿರ್ಮಾಣ ಕಾಮಗಾರಿಗಳಲ್ಲಿ ಅನುಸೂಚಿತ ಜಾತಿಗಳು ಅಥವಾ ಅನುಸೂಚಿತ ಬುಡಕಟ್ಟುಗಳಿಗೆ ಸೇರಿದ ಟೆಂಡರ್ದಾರರಿಗೆ ಆದ್ಯತೆ. ಈ ನಿಯಮಗಳ ಉದ್ದೇಶಕ್ಕಾಗಿ, ವಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವ, 2ನೇ ಪ್ರಕರಣದ (ಡಿ) ಖಂಡದ ಮೇರೆಗೆ ನಿರ್ದಿಷ್ಟಪಡಿಸಿದ ಎಲ್ಲ ಸಂಗ್ರಹಣಾ ಸಂಸ್ಥೆಗಳು ಅಧಿಸೂಚಿತ ಇಲಾಖೆಗಳಾಗಿರತಕ್ಕದ್ದು ಮತ್ತು ಅವು ಈ ಕೆಳಕಂಡ ಕಾರ್ಯವಿಧಾನಗಳನ್ನು ಅನುಸರಿಸತಕ್ಕದ್ದು, ಎಂದರೆ:-
(ಎ) 50.00 ಲಕ್ಷ ರೂಪಾಯಿಗಳನ್ನು ಮೀರದಿರುವ ಮೌಲ್ಯದ, ಪ್ರತಿಯೊಂದು ಹಣಕಾಸು ವರ್ಷದ ಕ್ರಿಯಾ ಯೋಜನೆಯಲ್ಲಿ ಅಥವಾ ಅನುಬಂಧ-ಇ ಯಲ್ಲಿ ಅನುಮೋದನೆಯಾದ ಎಲ್ಲ ಕಾಮಗಾರಿಗಳನ್ನು, ಅನುಸೂಚಿತ ಜಾತಿಗಳ ವರ್ಗಕ್ಕೆ ಸೇರಿದ ನೋಂದಾಯಿತ ಗುತ್ತಿಗೆದಾರರುಗಳ ಪೈಕಿ ಟೆಂಡರ್ ಕರೆಯಲಾದ ಈ ಕಾಮಗಾರಿಗಳ ಶೇ. 17.15ರಷ್ಟು ಮತ್ತು ಅನುಸೂಚಿತ ಪಂಗಡಗಳ ವರ್ಗಕ್ಕೆ ಸೇರಿದ ಗುತ್ತಿಗೆದಾರರುಗಳ ಪೈಕಿ ಟೆಂಡರ್ ಕರೆಯಲಾದ ಶೇ. 695ರಷ್ಟು ಕಾಮಗಾರಿಗಳ ಆಯ್ಕೆಗಾಗಿ ಯಾದೃಚ್ನಿಕವಾದ ರೀತಿಯ ಕ್ರಮವನ್ನು ಅನುಸರಿಸತಕ್ಕದ್ದು.
(ಬಿ) ತರುವಾಯ ಅನುಮೋದನೆಯಾದ ಕಾಮಗಾರಿಗಳನ್ನು ಸಹ ನಿಯತಕಾಲಿಕವಾಗಿ ಯಾದ್ಯಚ್ಛಿಕವಾದ ರೀತಿಯ ಕ್ರಮವನ್ನು ಅನುಸರಿಸಿ ಆಯ್ಕೆ ಮಾಡತಕ್ಕದ್ದು.
(A) ಯಾದೃಚ್ಛಿಕ ಕ್ರಮದ ಅನುಸರಣೆಗಾಗಿ, ಇಂಜಿವಿಯರಿಂಗ್ ವಿಭಾಗವನ್ನು ಅಥವಾ ಟಿಂಡರ್ ಆಹ್ವಾನಿಸುವ ಪ್ರಾಧಿಕಾರದ ಅಧಿಕಾರ ವ್ಯಾಪ್ತಿಯನ್ನು, ಒಂದು ಘಟಕವಾಗಿ ಪರಿಗಣಿಸತಕ್ಕದ್ದು.
(ಡಿ) ಕಾಮಗಾರಿಗಳ ಯಾದ್ಯೃಚ್ನಿಕರಣ ಕ್ರಮವನ್ನು, ಕಾಮಗಾರಿಗಳ ಸಂಖ್ಯೆ ನಾಲ್ಕಕ್ಕಿಂತ ಹೆಚ್ಚಾಗಿದ್ದಾಗ ಆ ರೀತಿ ಮಾಡತಕ್ಕದ್ದು.
(ಇ) ಒಂದು ನಿರ್ದಿಷ್ಟ ಕಾಮಗಾರಿಯನ್ನು ಯಾದೃಚ್ಛಿಕ ಕ್ರಮದ ಪ್ರಕ್ರಿಯೆಯಲ್ಲಿ ಸೇರಿಸಿದ್ದಲ್ಲಿ ಅಥವಾ ಸಾಕಷ್ಟು ಪ್ರಮಾಣದ ಸಂಖ್ಯೆಯ ಕಾಮಗಾರಿಗಳ ಕೊರತೆಯಿಂದಾಗಿ ಯಾದೃಚ್ಛಿಕರಣ ಕ್ರಮಕ್ಕೆ ಸೇರಿಸದಿದ್ದಲ್ಲಿ, ಅವುಗಳನ್ನು ಮೊದಲ ಯಾದೃಜ್ಜೀಕರಣ ಪ್ರಕ್ರಿಯೆಯ ಅವಧಿಯಲ್ಲಿ ಆಯ್ಕೆ ಮಾಡಿರುವುದಿಲ್ಲ ಎಂಬ ಕಾರಣಗಳಿಗಾಗಿ ಮತ್ತೆ ಅವುಗಳನ್ನು ಯಾದೃಚ್ನಿಕರಣ ಪ್ರಕ್ರಿಯೆಗೆ ಒಳಪಡಿಸತಕ್ಕದ್ದಲ್ಲ.
(ಎಫ್) ಈ ನಿಯಮದ ಮೇರೆಗೆ ಎರಡು ಬಾರಿ ಬಿಡ್ನಲ್ಲಿ ಪಾಲ್ಗೊಂಡು ಅನುಸೂಚಿತ ಜಾತಿಗಳು ಅಥವಾ ಅನುಸೂಚಿತ ಪಂಗಡಗಳಿಗೆ ಸೇರಿದ ಯಾರೇ ಟಿಂಂಡರುದಾರರು ಅರ್ಹರಾಗದಿದ್ದರೆ, ಆಗ ಇಂಥ ಕಾಮಗಾರಿಗಳನ್ನು, ಪಾಲ್ಗೊಳ್ಳಬಹುದಾದ ಸಾಮಾನ್ಯ ಅಥವಾ ಅನುಸೂಚಿತ ಜಾತಿಗಳು ಅಥವಾ ಅನುಸೂಚಿತ ಪಂಗಡಗಳ ಎಲ್ಲಾ ಅರ್ಹ ಬಿಡ್ದಾರರು ಟಿಂಡರ್ನಲ್ಲಿ ಭಾಗವಹಿಸುವುದಕ್ಕೆ ಮುಕ್ತವಾಗಿ ಇರಿಸತಕ್ಕದ್ದು.
(ಜಿ) ಅನುಸೂಚಿತ ಹಾತಿಗಳು ಅಥವಾ ಅನುಸೂಚಿತ ಪಂಗಡಗಳಿಗೆ ಸೇರಿದ ಟಿಂಡರ್ದಾರರುಗಳ ಅರ್ಹತೆಯನ್ನು ಪರಿಶೀಲಿಸುವುದಕ್ಕೆ ಕಾರ್ಯಪಾಲಕ ಇಂಜಿನಿಯರ್ ಅಥವಾ OBO’ ಆಹ್ವಾನಿಸುವ ಪ್ರಾಧಿಕಾರವು ಜವಾಬ್ದಾರಿಯಾಗಿರತಕ್ಕದ್ದು. ಅನುಸೂಚಿತ ಹಾತಿಗಳು ಅಥವಾ ಅನುಸೂಚಿತ ಪಂಗಡಗಳಿಗೆ ಸೇರಿದ ಟೆಂಡರ್ದಾರರುಗಳ ಪರಿಶೀಲನೆಯನ್ನು 6ನೇ ಪ್ರಕರಣದಲ್ಲಿ . ಉಪಬಂಧಿಸಿದ ವಿವರಣೆಗಳಿಗೊಳಪಟ್ಟು OBOE ಆಹ್ವಾನಿಸುವ ಪ್ರಾಧಿಕಾರವು ಮಾಡತಕ್ಕದ್ದು.
(ಎಚ್) ಗುತ್ತಿಗೆದಾರನು ಒಂದು ಫರ್ಮ್ ಆಗಿದ್ದ ಸಂದರ್ಭದಲ್ಲಿ, ಆಗ ಫರ್ಮಿನ ಎಲ್ಲ ಪಾಲುದಾರರುಗಳನ್ನು ಅಥವಾ ಸದಸ್ಯರುಗಳನ್ನು, ಅನುಸೂಚಿತ ಜಾತಿಗಳು ಅಥವಾ ಸಂದರ್ಭಾನುಸಾರ ಅನುಸೂಚಿತ ಪಂಗಡಗಳಿಗೆ ಸೇರಿಸತಕ್ಕದ್ದು.
(ಐ) ಅನುಸೂಚಿತ ಜಾತಿಗಳು ಅಥವಾ ಅನುಸೂಚಿತ ಪಂಗಡಗಳಿಗೆ ಸೇರಿದ ಗುತ್ತಿಗೆದಾರನು, 10 ವರ್ಷಗಳಿಗಿಂತ ಹೆಚ್ಚಾಗಿ. ಕರ್ನಾಟಕ ರಾಜ್ಯದಲ್ಲಿ ಖಾಯಂ ನಿವಾಸಿಯಾಗಿರತಕ್ಕದ್ದು.