Annexure
ಪ್ರಭಾರದಲ್ಲಿರುವ ಸಚಿವರಿಗೆ ಸಲ್ಲಿಸಿದ ನಂತರ ಸಚಿವ ಸಂಪುಟದ ಮುಂದೆ ಮಂಡಿಸತಕ್ಕದ್ದು.
(ಬಿ) ಈ ನಿಯಮಗಳ ಮೊದಲನೇ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದವುಗಳನ್ನು ಹೊರತು ಪಡಿಸಿ ಇತರ ಪ್ರಕರಣಗಳನ್ನು,-
(i) ಮುಖ್ಯ ಮಂತ್ರಿಯವರ, ಅಥವಾ
(ii) ಮುಖ್ಯ ಮಂತ್ರಿಯವರ ಸಮ್ಮತಿಯೊಂದಿಗೆ ಇಲಾಖೆಯ ಪ್ರಭಾರ ದಲ್ಲಿರುವ ಸಚಿವರ
-ನಿರ್ದೇಶನದ ಮೇರೆಗೆ ಸಚಿವ ಸಂಪುಟದ ಮುಂದೆ ಮಂಡಿಸತಕ್ಕದ್ದು:
ಪರಂತು, ಯಾವ ಪ್ರಕರಣದ ಬಗ್ಗೆ 17ನೇ ನಿಯಮದ ಮೇರೆಗೆ ಹಣಕಾಸು ಇಲಾಖೆಯೊಂದಿಗೆ ಸಮಾಲೋಚಿಸಬೇಕಾಗಿದೆಯೋ ಆ ಯಾವುದೇ ಪ್ರಕರಣವನ್ನು, ಮುಖ್ಯ ಮಂತ್ರಿಯವರ ನಿರ್ದೇಶನದ ಮೇರೆಗೆ ಅಸಾಧಾರಣ ಸನ್ನಿವೇಶಗಳನ್ನುಳಿದು, ಅದನ್ನು ಪರಿಗಣಿಸುವ ಅವಕಾಶ ಹಣಕಾಸು ಸಚಿವರಿಗೆ ಇದ್ದ ಹೊರತು, ಸಚಿವ ಸಂಪುಟವು ಚರ್ಚಿಸತಕ್ಕದ್ದಲ್ಲ.
(2) ರಾಜ್ಯಪಾಲರು ಸಂವಿಧಾನದ 167 (ಸಿ) ಅನುಚ್ಛೇದದ ಮೇರೆಗೆ ಮಂತ್ರಿ ಮಂಡಲದ ಪರಿಗಣನೆಗಾಗಿ ಸಲ್ಲಿಸಲು ಅಗತ್ಯಪಡಿಸಬಹುದಾದ ಯಾವುದೇ ಪ್ರಕರಣವನ್ನು ಮುಖ್ಯ ಮಂತ್ರಿಯವರ ನಿರ್ದೇಶನದ ಮೇರೆಗೆ ಮಂತ್ರಿ ಮಂಡಲದ ಮುಂದೆ ಮಂಡಿಸತಕ್ಕದ್ದು. ಈ ನಿಯಮಗಳ ಉಪಬಂಧಗಳನ್ನು ಯಥೋಚಿತ ವ್ಯತ್ಯಾಸಗಳೊಂದಿಗೆ ಮಂತ್ರಿ ಮಂಡಲದ ಕಾರ್ಯವಿಧಾನದ ಸಂಬಂಧದಲ್ಲಿ ಅನ್ವಯಿಸತಕ್ಕದ್ದು.
- 20ನೇ ನಿಯಮದ ಉಪಬಂಧಗಳಿಗೆ ಒಳಪಟ್ಟು, ಈ ನಿಯಮಗಳ ಮೊದಲನೇ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವ ಎಲ್ಲ ಪ್ರಕರಣಗಳನ್ನು ಸಚಿವ ಸಂಪುಟದ ಮುಂದೆ ಮಂಡಿಸತಕ್ಕದ್ದು:
1
[ಪರಂತು, 50 ಕೋಟಿ ಮತ್ತು ಅದಕ್ಕೂ ಹೆಚ್ಚು ಹಣವನ್ನು ಒಳಗೊಂಡ ಬಾಹ್ಯ ನೆರವಿನ ಯೋಜನೆಗೆ ಸಂಬಂಧಿಸಿದ ಪ್ರಸ್ತಾವವನ್ನು ಸಚಿವ ಸಂಪುಟವು ಈಗಾಗಲೇ ಅನುಮೋದಿಸಿರುವಲ್ಲಿ, ಅಂತಹ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ಯಾವುದೇ ಪ್ರಸ್ತಾವವನ್ನು ಸಚಿವ ಸಂಪುಟದ ಮುಂದೆ ಮಂಡಿಸತಕ್ಕದ್ದಲ್ಲ. ಆದರೆ, ಸಚಿವ ಸಂಪುಟದ ಪೂರ್ವಾನುಮೋದನೆಯೊಂದಿಗೆ ಯಾವುದೇ ಸಾಮಾನ್ಯ ಅಥವಾ ವಿಶೇಷ ಆದೇಶದ ಮೂಲಕ ರಚಿಸಲಾದಂಥ, ಅಂಥ ಆದೇಶದಲ್ಲಿ ನಿರ್ದಿಷ್ಟಪಡಿಸಬಹುದಾದಂಥ ವ್ಯಕ್ತಿಗಳನ್ನು ಒಳಗೊಂಡಿರುವ ಮತ್ತು ಅಂಥ ಅಧಿಕಾರಗಳನ್ನು ಮತ್ತು ಪ್ರಕಾರ್ಯಗಳನ್ನು ಹೊಂದಿರುವಂಥ ಅಧಿಕಾರಯುತ ಸಮಿತಿಯ ಮುಂದೆ ಮಂಡಿಸತಕ್ಕದ್ದು].
-
ಮುಖ್ಯ ಕಾರ್ಯದರ್ಶಿಯವರು ಅಥವಾ ಅವರ ಅನುಪಸ್ಥಿತಿಯಲ್ಲಿ ಮುಖ್ಯ ಮಂತ್ರಿಯವರು ಈ ಬಗ್ಗೆ ನೇಮಕ ಮಾಡಬಹುದಾದಂತಹ ಇತರ ಅಧಿಕಾರಿಯು ಸಚಿವ ಸಂಪುಟದ ಕಾರ್ಯದರ್ಶಿಯಾಗಿರತಕ್ಕದ್ದು.
-
(1) ಸಚಿವ ಸಂಪುಟದ ಮುಂದೆ ಮಂಡಿಸುವುದಕ್ಕಾಗಿ ಪ್ರಕರಣವನ್ನು ಸಲ್ಲಿಸುವಾಗ, ಆ ಪ್ರಕರಣವು ಯಾವ ಇಲಾಖೆಗೆ ಸಂಬಂಧಿಸಿದೆಯೋ ಆ ಇಲಾಖೆಯು, ನಿರ್ಣಯ ತೆಗೆದುಕೊಳ್ಳಬೇಕಾದಂತಹ ಪ್ರಕರಣದಲ್ಲಿನ ಅಂಶಗಳನ್ನು ಸಾಕಷ್ಟು ಕರಾರುವಾಕ್ಕಾಗಿ ನಿರೂಪಿಸಿರುವ ಒಂದು ಜ್ಞಾಪನವನ್ನು ಸಿದ್ಧಪಡಿಸಿ ಮುಖ್ಯ ಕಾರ್ಯದರ್ಶಿಯವರ ಹಾಗೂ ಇಲಾಖೆಯ ಪ್ರಭಾರದಲ್ಲಿರುವ ಸಚಿವರ ಮುಖಾಂತರ ಸಚಿವ ಸಂಪುಟದ ಕಾರ್ಯದರ್ಶಿಯವರಿಗೆ ಕಳುಹಿಸತಕ್ಕದ್ದು.
ವಿಶೇಷವಾಗಿ, ಆ ಜ್ಞಾಪನದಲ್ಲಿ,-
(i) ಪ್ರಕರಣವು ಒಂದಕ್ಕಿಂತ ಹೆಚ್ಚು ಇಲಾಖೆಗಳಿಗೆ ಸಂಬಂಧಿಸಿದ್ದಲ್ಲಿ, ಸಚಿವರುಗಳ ಜಂಟಿ ಶಿಫಾರಸ್ಸುಗಳನ್ನು ಅಥವಾ ಸಂಬಂಧಪಟ್ಟ ಪ್ರತಿಯೊಬ್ಬ ಸಚಿವರ ಶಿಫಾರಸ್ಸುಗಳೊಂದಿಗೆ, ಅವರ ನಡುವಿನ ಭಿನ್ನಾಭಿಪ್ರಾಯದ ಅಂಶಗಳನ್ನು;
- ಅಧಿಸೂಚನೆ ಸಂ: ಡಿಸಿಎ 20 ಎಆರ್ಬಿ 96, ದಿನಾಂಕ; 23.8.2000 ಕೆಜಿಡಿ 29.8.2000ದ ಮೂಲಕ ಸೇರಿಸಲಾಗಿದೆ.
(ii) ಯಾವುದೇ ಸಂಬಂಧಪಟ್ಟ ಇಲಾಖೆಯೊಂದಿಗೆ ಸಮಾಲೋಚಿಸಲು ಸಾಧ್ಯವಾಗಿರದಿದ್ದರೆ ಅದಕ್ಕೆ ಕಾರಣಗಳನ್ನು;
1 (iii) ಈ ನಿಯಮಗಳ ಮೇರೆಗೆ [ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ] ಯು ನೀಡಿರುವ ಸಲಹೆ ಯಾವುವಾದರೂ ಇದ್ದರೆ, ಆ ಸಲಹೆಯನ್ನು ಸಂಕ್ಷಿಪ್ತವಾಗಿ ತಿಳಿಸತಕ್ಕದ್ದು.
(2) ಪ್ರಕರಣದ ವಿಷಯವು ಒಂದಕ್ಕಿಂತ ಹೆಚ್ಚು ಇಲಾಖೆಗಳಿಗೆ ಸಂಬಂಧಿಸಿರುವಾಗ, ಆ ಪ್ರಕರಣವು ತುಂಬಾ ತುರ್ತಿನದಾಗಿದ್ದ ಹೊರತು, ಸಂಬಂಧಪಟ್ಟ ಇಲಾಖೆಗಳು ಅದನ್ನು ಪರಿಗಣಿಸುವವರೆಗೆ ಸಚಿವ ಸಂಪುಟದ ಮುಂದೆ ಮಂಡಿಸುವುದಕ್ಕಾಗಿ ಆ ಪ್ರಕರಣವನ್ನು ಸಲ್ಲಿಸತಕ್ಕದ್ದಲ್ಲ.
- (1) 21ನೇ ನಿಯಮದಲ್ಲಿ ತಿಳಿಸಿರುವ ಯಾವುದೇ ಪ್ರಕರಣವನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗಾಗಿ ಮಂಡಿಸುವುದಕ್ಕೆ ಬದಲು ಅಭಿಪ್ರಾಯಕ್ಕಾಗಿ ಸಂಪುಟ ದರ್ಜೆ ಸಚಿವರಿಗೆ ಪರಿಚಲನೆಗೊಳಿಸಬೇಕೆಂದು ಮುಖ್ಯ ಮಂತ್ರಿಯವರು ನಿರ್ದೇಶಿಸಬಹುದು ಮತ್ತು ಎಲ್ಲ ಸಚಿವರುಗಳು ಏಕಾಭಿಪ್ರಾಯ ಹೊಂದಿದ್ದರೆ ಮತ್ತು ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸುವ ಅಗತ್ಯವಿಲ್ಲ ಎಂದು ಮುಖ್ಯ ಮಂತ್ರಿಯವರು ಭಾವಿಸಿದರೆ, ಅಂತಹ ಚರ್ಚೆ ಇಲ್ಲದೆಯೇ ಆ ಪ್ರಕರಣವನ್ನು ಇತ್ಯರ್ಥಪಡಿಸಬಹುದು. ಸಚಿವರುಗಳಲ್ಲಿ ಏಕಾಭಿಪ್ರಾಯ ಇಲ್ಲದಿದ್ದಾಗ ಹಾಗೂ ಸಚಿವ ಸಂಪುಟದ ಸಭೆಯಲ್ಲಿ ಚರ್ಚೆ ಮಾಡಬೇಕಾದ ಅಗತ್ಯವಿದೆಯೆಂದು ಮುಖ್ಯ ಮಂತ್ರಿಯವರು ಭಾವಿಸಿದಾಗ, ಆ ಪ್ರಕರಣ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸತಕ್ಕದ್ದು.
(2) ಸಚಿವಸಂಪುಟದ ಸದಸ್ಯರುಗಳಾಗಿರುವ ಸಚಿವರುಗಳಿಗೆ ಯಾವುದೇ ಪ್ರಕರಣವನ್ನು ಪರಿಚಲನೆಗೊಳಿಸಬೇಕೆಂದು ನಿರ್ಧರಿಸಿದರೆ, ಸಚಿವರುಗಳೊಳಗೆ ಪರಿಚಲನೆಗೊಳಿಸಿದಂತಹ ಪ್ರಕರಣಗಳಿಗೆ ಸಂಬಂಧಿಸಿದ ಎಲ್ಲ ಕಾಗದ ಪತ್ರಗಳನ್ನು ಅದೇ ಸಮಯದಲ್ಲಿ ರಾಜ್ಯಪಾಲರಿಗೂ ಸಹ ಕಳುಹಿಸಿಕೊಡತಕ್ಕದ್ದು.
- (1) 24ನೇ ನಿಯಮದ ಮೇರೆಗೆ ಅಭಿಪ್ರಾಯಕ್ಕಾಗಿ ಪರಿಚಲನೆಗೊಳಿಸಿದಂತಹ ಪ್ರಕರಣಗಳಲ್ಲಿ, ಜ್ಞಾಪನಪತ್ರದಲ್ಲಿ ನಿರ್ದಿಷ್ಟಪಡಿಸಲಾಗುವ, ಪರಿಚಲನೆಯ ದಿನಾಂಕದಿಂದ 7 ದಿವಸಗಳಿಗೆ ಕಡಿಮೆ ಇಲ್ಲದಂತಹ ದಿನಾಂಕದೊಳಗೆ ಯಾರೇ ಸಚಿವರು ತಮ್ಮ ಅಭಿಪ್ರಾಯವನ್ನು ಸಚಿವ ಸಂಪುಟದ ಕಾರ್ಯದರ್ಶಿಯವರಿಗೆ ತಿಳಿಸದಿದ್ದಲ್ಲಿ, ಅದರಲ್ಲಿ ಅಡಕವಾಗಿರುವ ಶಿಫಾರಸ್ಸುಗಳನ್ನು ಅವರು ಒಪ್ಪಿಕೊಂಡಿರುವುದಾಗಿ ಗ್ರಹಿಸತಕ್ಕದ್ದು.
(2) ಪರಿಚಲನೆಗಾಗಿ ಕಳುಹಿಸಿದ ಜ್ಞಾಪನಪತ್ರದಲ್ಲಿ ಒಳಗೊಂಡಿರುವ ಶಿಫಾರಸ್ಸುಗಳನ್ನು ಸಚಿವರುಗಳು ಅಂಗೀಕರಿಸಿದರೆ ಅಥವಾ ಅವರು ತಮ್ಮ ಅಭಿಪ್ರಾಯಗಳನ್ನು ಯಾವ ದಿನಾಂಕದೊಳಗೆ ತಿಳಿಸಬೇಕಾಗಿತ್ತೊ ಆ ದಿನಾಂಕವು ಮುಕ್ತಾಯವಾಗಿದ್ದರೆ, ಸಚಿವ ಸಂಪುಟದ ಕಾರ್ಯದರ್ಶಿಯವರು ಅದನ್ನು ಸಂಬಂಧಪಟ್ಟ ಕಾರ್ಯದರ್ಶಿಯವರಿಗೆ ಕಳುಹಿಸತಕ್ಕದ್ದು. ಆ ತರುವಾಯ ಕಾರ್ಯದರ್ಶಿಯವರು ಅಗತ್ಯ ಆದೇಶಗಳನ್ನು ಹೊರಡಿಸಲು ಕ್ರಮ ಕೈಗೊಳ್ಳುತ್ತಾರೆ.
(3) ಜ್ಞಾಪನ ಪತ್ರದ ಮೇಲೆ ತೆಗೆದುಕೊಂಡ ನಿರ್ಣಯದ ಪ್ರತಿಯನ್ನು ಸಚಿವ ಸಂಪುಟ ಕಾರ್ಯದರ್ಶಿಯವರು ರಾಜ್ಯಪಾಲರಿಗೆ ಕಳುಹಿಸಿಕೊಡತಕ್ಕದ್ದು.
-
ಪ್ರಕರಣವನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲು ನಿರ್ಧರಿಸಿದಾಗ, ಇಲಾಖೆಯು ಸಿದ್ಧಪಡಿಸಿದ ಜ್ಞಾಪನಪತ್ರವನ್ನು ಮತ್ತು ಪ್ರಕರಣವನ್ನು ವಿಲೆ ಮಾಡಲು ಸಾಧ್ಯವಾಗುವಂತೆ ಮಾಡುವುದಕ್ಕೆ ಅಗತ್ಯವಾದಂತಹ ಇತರ ಕಾಗದ ಪತ್ರಗಳನ್ನು ಸಂಪುಟ ದರ್ಜೆ ಸಚಿವರಿಗೆ ಪರಿಚಲನೆಗೊಳಿಸತಕ್ಕದ್ದು. ಜ್ಞಾಪನಪತ್ರದ ಪ್ರತಿಗಳನ್ನು ಮತ್ತು ಇತರ ಕಾಗದಪತ್ರಗಳನ್ನು ಅದೇ ಸಮಯದಲ್ಲಿ ರಾಜ್ಯಪಾಲರಿಗೆ ಕಳುಹಿಸಿಕೊಡತಕ್ಕದ್ದು. ಈ ಉದ್ದೇಶಕ್ಕಾಗಿ ಸಂಬಂಧಪಟ್ಟ ಇಲಾಖೆಯು ಜ್ಞಾಪನ ಪತ್ರದ ಪ್ರತಿಯನ್ನು ಹಾಗೂ ಅದಕ್ಕೆ ಸಂಬಂಧಪಟ್ಟ ಇತರ ಕಾಗದಪತ್ರಗಳನ್ನು ಅಗತ್ಯವಾದಷ್ಟು ಸಂಖ್ಯೆಯ ಪ್ರತಿಗಳನ್ನು ಸಭೆಗೆ ಗೊತ್ತುಪಡಿಸಿದ ದಿನಾಂಕಕ್ಕೆ ಕೊನೆಪಕ್ಷ 3 ದಿವಸಗಳ ಮುಂಚೆ ಸಚಿವ ಸಂಪುಟ ಕಾರ್ಯದರ್ಶಿಯವರಿಗೆ ಕಳುಹಿಸತಕ್ಕದ್ದು.
-
(1) ಸಚಿವ ಸಂಪುಟವು, ಮುಖ್ಯ ಮಂತ್ರಿಯವರು ನಿರ್ದೇಶಿಸಬಹುದಾದಂತಹ ಸ್ಥಳ ಮತ್ತು ಕಾಲದಲ್ಲಿ ಸಭೆ ಸೇರತಕ್ಕದ್ದು.
-
ಅಧಿಸೂಚನೆ ಸಂ: ಡಿಸಿಎ 1 ಎಆರ್ಬಿ 96, ದಿನಾಂಕ: 22.1.96 (ಕೆಜಿಡಿ ಜಿಎಸ್ಆರ್ 10 ದಿನಾಂಕ: 24.1.96) ರ ಮೂಲಕ ಪ್ರತಿಯೋಜಿಸಲಾಗಿದೆ.
(2) ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸಬೇಕಾದ ಪ್ರಕರಣಗಳನ್ನು ನೀಡಿರುವ ಕಾರ್ಯಸೂಚಿ ಪತ್ರವನ್ನು ಮುಖ್ಯ ಮಂತ್ರಿಯವರು ಅನುಮೋದಿಸಿದ ನಂತರ 26ನೇ ನಿಯಮದ ಮೇರೆಗೆ ಈಗಾಗಲೇ ಪರಿಚಲನೆಗೊಳಿಸಿರದಂತಹ ಜ್ಞಾಪನಪತ್ರದ ಪ್ರತಿಗಳೊಂದಿಗೆ ಕಾರ್ಯಸೂಚಿಯ ಪ್ರತಿಗಳನ್ನು ಸಚಿವ ಸಂಪುಟ ಕಾರ್ಯದರ್ಶಿಯವರು, ಮುಖ್ಯಮಂತ್ರಿಯವರಿಗೆ ಹಾಗೂ ಇತರ ಸಂಪುಟ ದರ್ಜೆಯ ಸಚಿವರಿಗೆ, ಅಂತಹ ಸಭೆಯ ದಿನಾಂಕಕ್ಕೆ ಎರಡು ಸ್ಪಷ್ಟ ದಿನಗಳಿಗೂ ಮುಂಚೆ ಅವರಿಗೆ ತಲುಪುವಂತೆ ಕಳುಹಿಸಿಕೊಡತಕ್ಕದ್ದು. ತುರ್ತು ಸಂದರ್ಭದಲ್ಲಿ ಮುಖ್ಯ ಮಂತ್ರಿಯವರು ಸದರಿ ಎರಡು ದಿನಗಳ ಅವಧಿಯನ್ನು ಮೊಟಕುಗೊಳಿಸಬಹುದು. ಕಾರ್ಯಸೂಚಿ ಮತ್ತು ಜ್ಞಾಪನ ಪತ್ರದ ಪ್ರತಿಗಳನ್ನು ಅದೇ ಸಮಯದಲ್ಲಿ ರಾಜ್ಯಪಾಲರಿಗೆ ಕಳುಹಿಸಿಕೊಡತಕ್ಕದ್ದು ಹಾಗೂ ಕಾರ್ಯಸೂಚಿಯ ಸಂಬಂಧಪಟ್ಟ ಉದ್ಧೃತ ಭಾಗವನ್ನು ಸಂಬಂಧಪಟ್ಟ ಆಡಳಿತ ಇಲಾಖೆಯ ಕಾರ್ಯದರ್ಶಿಯವರಿಗೆ ಕಳುಹಿಸಿಕೊಡತಕ್ಕದ್ದು.
(3) ಸಂಪುಟ ದರ್ಜೆಯ ಸಚಿವರಿಗೆ ಅಧೀನನಾಗಿರದ ರಾಜ್ಯ ಸಚಿವರೊಬ್ಬರಿಗೆ ಸಂಬಂಧಿಸಿದ ಪ್ರಕರಣವನ್ನು ಸಚಿವ ಸಂಪುಟ ಸಭೆಯ ಕಾರ್ಯಸೂಚಿಯಲ್ಲಿ ಸೇರಿಸಿದಾಗ, ಜ್ಞಾಪನ ಪತ್ರದ ಪ್ರತಿಯನ್ನು ಮತ್ತು ಕಾರ್ಯಸೂಚಿಯ ಸಂಬಂಧಪಟ್ಟ ಉದ್ಧೃತ ಭಾಗವನ್ನು, ಸಚಿವ ಸಂಪುಟ ಕಾರ್ಯದರ್ಶಿಯವರು ಸಂಪುಟ ದರ್ಜೆಯ ಸಚಿವರುಗಳಿಗೆ ಕಾರ್ಯಸೂಚಿಯನ್ನು ಮತ್ತು ಜ್ಞಾಪನ ಪತ್ರದ ಪ್ರತಿಗಳನ್ನು ಕಳುಹಿಸಿಕೊಡವ ಸಮಯದಲ್ಲೇ ಅಂತಹ ರಾಜ್ಯ ಸಚಿವರಿಗೆ ಕಳುಹಿಸಕೊಡತಕ್ಕದ್ದು.
(4) ಮುಖ್ಯ ಮಂತ್ರಿಯವರ ಅನುಮತಿ ಇಲ್ಲದೆ, ಪ್ರಕರಣಕ್ಕೆ ಸಂಬಂಧಪಟ್ಟ ಕಾಗದಪತ್ರಗಳನ್ನು ಈ ನಿಯಮದ ಅಥವಾ 26ನೇ ನಿಯಮದ ಮೂಲಕ ಅಗತ್ಯಪಡಿಸಿರುವಂತೆ ಪರಿಚಲನೆಗೊಳಿಸಿದ ಹೊರತು ಯಾವುದೇ ಪ್ರಕರಣವನ್ನು ಸಚಿವ ಸಂಪುಟ ಸಭೆಯ ಕಾರ್ಯಸೂಚಿಯಲ್ಲಿ ಸೇರಿಸತಕ್ಕದ್ದಲ್ಲ.
(5) ಯಾರೇ ಸಂಪುಟ ದರ್ಜೆಯ ಸಚಿವರು ಪ್ರವಾಸದಲ್ಲಿದ್ದಾಗ, ಕಾರ್ಯಸೂಚಿ ಪತ್ರವನ್ನು ಸಂಬಂಧಪಟ್ಟ ಇಲಾಖೆಯ ಕಾರ್ಯದರ್ಶಿಯವರಿಗೆ ಕಳುಹಿಸಿಕೊಡತಕ್ಕದ್ದು. ಅವರು ಯಾವುದೇ ಪ್ರಕರಣ ಕುರಿತ ಚರ್ಚೆಯನ್ನು ಸಚಿವರು ಹಿಂದಿರುಗುವವರೆಗೆ ಕಾಯ್ದಿರಿಸಬೇಕೆಂದು ಪರಿಗಣಿಸಿದಲ್ಲಿ, ಅವರು ಸಂಬಂಧಪಟ್ಟ ಸಚಿವರು ಹಿಂದಿರುಗುವವರೆಗೆ ಪ್ರಕರಣ ಕುರಿತ ಚರ್ಚೆಯನ್ನು ಮುಂದೂಡುವುದಕ್ಕಾಗಿ ಮುಖ್ಯ ಮಂತ್ರಿಯವರ ಆದೇಶ ಪಡೆಯುವಂತೆ ಸಚಿವ ಸಂಪುಟದ ಕಾರ್ಯದರ್ಶಿಯವರನ್ನು ಕೋರಬಹುದು.
- (1) ಮುಖ್ಯ ಮಂತ್ರಿಯವರು ಅಥವಾ ಅವರ ಅನುಪಸ್ಥಿತಿಯಲ್ಲಿ ಅವರು ನಾಮ ನಿರ್ದೇಶನ ಮಾಡಿದ ಸಂಪುಟ ದರ್ಜೆ ಸಚಿವರು ಸಚಿವ ಸಂಪುಟದ ಸಭೆಯ ಅಧ್ಯಕ್ಷತೆ ವಹಿಸತಕ್ಕದ್ದು.
(2) ಸಚಿವ ಸಂಪುಟದ ಕಾರ್ಯದರ್ಶಿಯವರು ಸಚಿವ ಸಂಪುಟದ ಎಲ್ಲ ಸಭೆಗಳಲ್ಲಿ ಭಾಗವಹಿಸತಕ್ಕದ್ದು ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳ ದಾಖಲೆಯನ್ನು ಸಿದ್ಧಪಡಿಸತಕ್ಕದ್ದು. ಅವರು ಅಂತಹ ದಾಖಲೆಯ ಪ್ರತಿಯನ್ನು ರಾಜ್ಯಪಾಲರಿಗೆ, ಮುಖ್ಯ ಮಂತ್ರಿಯವರಿಗೆ ಹಾಗೂ ಪ್ರತಿಯೊಬ್ಬ ಸಂಪುಟ ದರ್ಜೆಯ ಸಚಿವರಿಗೆ, ರಾಜ್ಯ ಸಚಿವರಿಗೆ ಕಳುಹಿಸಿಕೊಡತಕ್ಕದ್ದು.
(3) ಪ್ರಕರಣಕ್ಕೆ ಸಂಬಂಧಪಟ್ಟ ಇಲಾಖೆಯ ಕಾರ್ಯದರ್ಶಿಯವರು ಪ್ರಕರಣವನ್ನು ಸಚಿವ ಸಂಪುಟದಲ್ಲಿ ಚರ್ಚಿಸುತ್ತಿರುವಾಗ ಸಮಾಲೋಚನೆಗಾಗಿ ಲಭ್ಯವಿರತಕ್ಕದ್ದು ಮತ್ತು ಮುಖ್ಯ ಮಂತ್ರಿಯವರು ಅಥವಾ ಅಧ್ಯಕ್ಷತೆ ವಹಿಸುವ ಸಚಿವರು ಸಭೆಯಲ್ಲಿ ಭಾಗವಹಿಸುವಂತೆ ಅವರಿಗೆ ನಿರ್ದೇಶನ ನೀಡಿದರೆ, ಅವರು ಸಭೆಯಲ್ಲಿಯೂ ಸಹ ಭಾಗವಹಿಸತಕ್ಕದ್ದು. 29. (1) ಸಚಿವ ಸಂಪುಟವು ಒಂದು ಪ್ರಕರಣದ ಬಗ್ಗೆ ತೀರ್ಮಾನ ತೆಗೆದುಕೊಂಡಾಗ ಆ ತೀರ್ಮಾನವನ್ನು ಜಾರಿಗೆ ತರಲು ಇಲಾಖೆಯ ಕಾರ್ಯದರ್ಶಿಯವರು ಕ್ರಮ ತೆಗೆದುಕೊಳ್ಳತಕ್ಕದ್ದು.
(2) ಪ್ರತಿಯೊಂದು ಪ್ರಕರಣಕ್ಕೆ ಸಂಬಂಧಿಸಿದ ಸಚಿವ ಸಂಪುಟದ ತೀರ್ಮಾನವನ್ನು ಪ್ರತ್ಯೇಕವಾಗಿ ದಾಖಲಿಸತಕ್ಕದ್ದು ಹಾಗೂ ಪ್ರಕರಣದ ದಾಖಲೆಗೆ ಸೇರಿಸತಕ್ಕದ್ದು. ನಿರ್ಧಾರದ ಉದ್ಧೃತ ಭಾಗವನ್ನು ಅವಶ್ಯ ಕ್ರಮಕ್ಕಾಗಿ ಸಂಬಂಧಪಟ್ಟ ಇಲಾಖೆಯ ಕಾರ್ಯದರ್ಶಿಯವರಿಗೆ ಕಳುಹಿಸಿಕೊಡತಕ್ಕದ್ದು.
ಭಾಗ - III ಕಾರ್ಯಕಲಾಪಗಳನ್ನು ಇಲಾಖೆಯ ಮಟ್ಟದಲ್ಲಿ ವಿಲೆ ಮಾಡುವುದು
ಎ. ಸಾಮಾನ್ಯ
- (1) ಇಲಾಖೆಯ ಕಾರ್ಯದರ್ಶಿಯವರು (2)ನೇ ಉಪ ನಿಯಮದಲ್ಲಿ ಉಪಬಂಧಿಸಿರುವಂತೆ ಹೊರತು, ಪ್ರಕರಣವನ್ನು ಪ್ರಭಾರದಲ್ಲಿರುವ ಸಚಿವರಿಗೆ ಅಥವಾ ಸಂದರ್ಭಾನುಸಾರ ರಾಜ್ಯ ಸಚಿವರಿಗೆ ಅಥವಾ ಉಪ ಸಚಿವರು, ಯಾರಾದರೂ ಇದ್ದರೆ, ಅವರಿಗೆ ಆದೇಶಕ್ಕಾಗಿ ಸಲ್ಲಿಸತಕ್ಕದ್ದು.
(2) ಪ್ರಭಾರದಲ್ಲಿರುವ ಸಚಿವರ ಸಾಮಾನ್ಯ ಅಥವಾ ವಿಶೇಷ ನಿರ್ದೇಶನಗಳಿಗೆ ಒಳಪಟು,್ಟ ವಾಡಿಕೆಯ ಪ್ರಕರಣಗಳನ್ನು ಮತ್ತು ಅಷ್ಟೇನೂ ಪ್ರಮುಖವಲ್ಲದ ಪ್ರಕರಣಗಳನ್ನು, ಅಂದರೆ ನಿಯಮಗಳಿಗೆ ಒಳಪಟ್ಟ ಪ್ರಕರಣಗಳು, ಇಲಾಖೆಯ ಮುಖ್ಯಸ್ಥರ ತೀರ್ಮಾನವನ್ನು ರದ್ದುಪಡಿಸುವುದನ್ನೊಳಗೊಂಡಿರದ, ತೀರ್ಮಾನಿಸಿರುವ ಕಾರ್ಯನೀತಿ ಅಥವಾ ಪೂರ್ವ ನಿದರ್ಶನ ಮತ್ತು ಯಾವುದೇ ಸೂಕ್ಷ್ಮ ಅಂಶಗಳನ್ನು ಎತ್ತದ ಪ್ರಕರಣಗಳನ್ನು ಇಲಾಖೆಯ ಕಾರ್ಯದರ್ಶಿಯವರು ತಮ್ಮ ಸ್ವಂತ ಹೊಣೆಗಾರಿಕೆಯ ಮೇಲೆ ವಿಲೆ ಮಾಡತಕ್ಕದ್ದು. ಪ್ರಭಾರದಲ್ಲಿರುವ ಸಚಿವರ ಅಥವಾ ರಾಜ್ಯ ಸಚಿವರ ಅಥವಾ ಉಪಸಚಿವರ ಗೈರುಹಾಜರಿಯಲ್ಲಿ ತುರ್ತುಕ್ರಮ ಅಗತ್ಯವಿಲ್ಲದಂತಹ ಪ್ರಕರಣಗಳನ್ನು ಇಲಾಖೆಯ ಕಾರ್ಯದರ್ಶಿಯವರು ತಮ್ಮ ಸ್ವಂತ ಹೊಣೆಗಾರಿಕೆಯ ಮೇಲೆ ಸಹ ವಿಲೆ ಮಾಡಬಹುದು.
(3) ಅಷ್ಟೇನೂ ಪ್ರಮುಖವಲ್ಲದ ಪ್ರಕರಣಗಳನ್ನು ಇಲಾಖೆಯ ಉಪ ಕಾರ್ಯದರ್ಶಿಯವರು ಅಥವಾ ಅಧೀನ ಕಾರ್ಯದರ್ಶಿಯವರು ವಿಲೇ ಮಾಡಬಹುದೆಂದು ಪ್ರಭಾರದಲ್ಲಿರುವ ಸಚಿವರು ನಿರ್ದೇಶನ ನೀಡಬಹುದು.
(4) (3) ನೇ ಉಪ ನಿಯಮದ ಮೇರೆಗೆ ನೀಡಿದ ಪ್ರತಿಯೊಂದು ನಿರ್ದೇಶನದ ಪ್ರತಿಯನ್ನು ರಾಜ್ಯಪಾಲರಿಗೆ ಸಲ್ಲಿಸತಕ್ಕದ್ದು.
(5) ನೀತಿ ನಿರ್ಣಯಗಳಿಗೆ ಮತ್ತು ಪ್ರಮುಖ ವಿಷಯಗಳಿಗೆ ಸಂಬಂಧಪಟ್ಟಂತೆ ಹಿಂದಿನ ವಾರದಲ್ಲಿ ಹೊರಡಿಸಿದ ಆದೇಶಗಳ ಸಾರಾಂಶದ ಸಂಕಲನವನ್ನು ಪ್ರತಿಯೊಂದು ವಾರದ 2ನೇ ದಿನಕ್ಕೆ ಮೊದಲು ಸಿದ್ಧಪಡಿಸಿ ಮುಖ್ಯಮಂತ್ರಿಯವರಿಗೆ ಹಾಗೂ ರಾಜ್ಯಪಾಲರಿಗೆ ರವಾನಿಸುವುದಕ್ಕಾಗಿ ಕೂಡಲೇ ಮುಖ್ಯ ಕಾರ್ಯದರ್ಶಿಯವರಿಗೆ ಸಲ್ಲಿಸತಕ್ಕದ್ದು.
‘‘ಟಿಪ್ಪಣಿ 1: ಸ್ವತಃ ಸಚಿವರೇ ಹಿತಾಸಕ್ತಿ ಹೊಂದಿರುವಂತಹ ವಿಷಯಕ್ಕೆ ಪ್ರಕರಣವು ಸಂಬಂಧಿಸಿರುವಲ್ಲಿ, ಅದನ್ನು ಮುಖ್ಯ ಮಂತ್ರಿಯವರಿಗೆ ಕಳುಹಿಸತಕ್ಕದ್ದು. ಮುಖ್ಯಮಂತ್ರಿಯವರು ಅದನ್ನು ತಾವೇ ವಿಲೆ ಮಾಡಬಹುದು ಅಥವಾ ವಿಲೆಗಾಗಿ ಯಾರೇ ಇತರ ಸಚಿವರಿಗೆ ಕಳುಹಿಸಿಕೊಡಬಹುದು.
-
ಯಾವುದೇ ಕಂಪನಿಯ, ಸಂಘದ, ಸ್ಥಳೀಯ ಸಂಸ್ಥೆಯ ಅಥವಾ ಇತರ ಸಂಸ್ಥೆಯ ಯಾವುದೇ ಪ್ರಸ್ತಾವಕ್ಕೆ ಸರ್ಕಾರದ ಮಂಜೂರಾತಿ ಅಥವಾ ಅನುಮೋದನೆ ಅಗತ್ಯವಿರುವಲ್ಲಿ, ಸಂಬಂಧಪಟ್ಟ ಇಲಾಖೆಯು, ಅಂಥ ಇಲಾಖೆಗೆ ಸಂಬಂಧಪಟ್ಟ ಪ್ರಕರಣವನ್ನು ಪರಿಶೀಲಿಸುವ ರೀತಿಯಲ್ಲಿಯೇ ಆ ಪ್ರಸ್ತಾವವನ್ನೂ ಪರಿಶೀಲಿಸತಕ್ಕದ್ದು''.
-
(1) 5ನೇ ನಿಯಮದ (2)ನೇ ಉಪ ನಿಯಮದ ಹಾಗೂ 6ನೇ ನಿಯಮದ ಉಪಬಂಧಗಳಿಗೊಳಪಟ್ಟು ಸಂಪುಟ ದರ್ಜೆ ಸಚಿವರಿಗೆ ಅಧೀನರಾಗಿರುವ ರಾಜ್ಯ ಸಚಿವರು ಅಥವಾ ಉಪ ಸಚಿವರು ಪ್ರಭಾರದಲ್ಲಿರುವ ಸಚಿವರು ನಿರ್ದಿಷ್ಟಪಡಿಸಿದ ಕೆಲಸದ ಬಾಬುಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಆದೇಶಗಳನ್ನು ಹೊರಡಿಸಬಹುದು.
ಪರಂತು, ಪ್ರಕರಣವು, ಸಂಪುಟ ದರ್ಜೆ ಸಚಿವರಿಗೆ ಅಧೀನರಾಗಿರುವ ರಾಜ್ಯ ಸಚಿವರು ಅಥವಾ ಉಪ ಸಚಿವರು ಸ್ವತಃ ಹಿತಾಸಕ್ತಿ ಹೊಂದಿರುವಂತಹ ವಿಷಯಕ್ಕೆ ಸಂಬಂಧಿಸಿರುವಲ್ಲಿ ಆ ಪ್ರಕರಣವನ್ನು ಪ್ರಭಾರದಲ್ಲಿರುವ ಸಚಿವರಿಗೆ ನೇರವಾಗಿ ಸಲ್ಲಿಸತಕ್ಕದ್ದು.
(2) ಸಂಪುಟ ದರ್ಜೆ ಸಚಿವರಿಗೆ ಅಧೀನರಾಗಿರುವ ರಾಜ್ಯ ಸಚಿವರು ಅಥವಾ ಉಪ ಸಚಿವರು (1)ನೇ ಉಪ ನಿಯಮದ ಮೇರೆಗೆ ತಾವು ಆದೇಶಗಳನ್ನು ಹೊರಡಿಸಬಹುದಾದಂತಹ ಕೆಲಸದ ಬಾಬುಗಳಿಗೆ ಸಂಬಂಧಿಸಿದಂತಹ ಕಾಗದ ಪತ್ರಗಳನ್ನು ತೋರಿಸುವಂತೆ ಕೇಳಬಹುದು.
- (1) ಪ್ರಕರಣದ ವಿಷಯವು ಒಂದಕ್ಕಿಂತ ಹೆಚ್ಚು ಇಲಾಖೆಗಳಿಗೆ ಸಂಬಂಧಿಸಿರುವಾಗ, ಆ ಪ್ರಕರಣವು ತುಂಬಾ ತುರ್ತಿನ ಸ್ವರೂಪದ್ದಾಗಿದ್ದ ಹೊರತು ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಪರಿಶೀಲಿಸುವವರೆಗೆ ಅದರ ಮೇಲೆ ಯಾವುದೇ ಆದೇಶಗಳನ್ನು ಹೊರಡಿಸತಕ್ಕದ್ದಲ್ಲ, ಅಥವಾ ಅದನ್ನು ಸಚಿವ ಸಂಪುಟದ ಮುಂದೆ ಮಂಡಿಸತಕ್ಕದ್ದಲ್ಲ.
(2) ಪ್ರಭಾರದಲ್ಲಿರುವ ಸಚಿವರಿಗೆ ಅಥವಾ ಸಂದರ್ಭಾನುಸಾರ ಉಪ ಸಚಿವರಿಗೆ ಆದೇಶಕ್ಕಾಗಿ ಪ್ರಕರಣವನ್ನು ಸಲ್ಲಿಸುವುದಕ್ಕೆ ಮೊದಲು ಇಲಾಖೆಯ ಕಾರ್ಯದರ್ಶಿಯವರು ಸಂಬಂಧಪಟ್ಟ ಎಲ್ಲ ಇಲಾಖೆಗಳೊಂದಿಗೆ ಸಮಾಲೋಚಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳತಕ್ಕದ್ದು.
- (1) ಈ ನಿಯಮಗಳ ಉಪಬಂಧಗಳಿಗೆ ಒಳಪಟ್ಟು ಪ್ರಭಾರದಲ್ಲಿರುವ ಸಚಿವರು ತಮ್ಮ ನಿಯಂತ್ರಣದಲ್ಲಿರುವ ಇಲಾಖೆಗಳಲ್ಲಿ ಉದ್ಭವಿಸುವ ಎಲ್ಲ ಪ್ರಕರಣವನ್ನು ವಿಲೆ ಮಾಡಬಹುದು.
(2) ಪ್ರಕರಣವು ಒಂದಕ್ಕಿಂತ ಹೆಚ್ಚು ಇಲಾಖೆಗಳಿಗೆ ಸಂಬಂಧಿಸಿದ್ದರೆ ಹಾಗೂ ಆ ಇಲಾಖೆಗಳ ನಡುವೆ ಭಿನ್ನಾಭಿಪ್ರಾಯ ಇದ್ದರೆ, ಪ್ರಭಾರದಲ್ಲಿರುವ ಸಚಿವರು ಆ ಇಲಾಖೆಗಳ ಪ್ರಭಾರದಲ್ಲಿದ್ದರೆ ಆ ವಿವಾದವನ್ನು ತೀರ್ಮಾನಿಸಬಹುದು.
(3) ಪ್ರಕರಣವು ಒಬ್ಬರಿಗಿಂತ ಹೆಚ್ಚು ಸಚಿವರುಗಳಿಗೆ ಸಂಬಂಧಿಸಿದ್ದರೆ ಮತ್ತು ಇಲಾಖೆಗಳ ನಡುವೆ ಭಿನ್ನಾಭಿಪ್ರಾಯವಿದ್ದರೆ, ಪ್ರಭಾರದಲ್ಲಿರುವ ಸಚಿವರು ಸಂಬಂಧಪಟ್ಟ ಇತರ ಇಲಾಖೆಗಳ ಸಚಿವರೊಂದಿಗೆ ಪೂರ್ವಭಾವಿ ಚರ್ಚೆಗಳನ್ನು ನಡೆಸುವ ಮೂಲಕ ಒಪ್ಪಂದಕ್ಕೆ ಬರಲು ಪ್ರಯತ್ನ ಮಾಡತಕ್ಕದ್ದು.
(4) ಅಂಥ ಯಾವುದೇ ಒಪ್ಪಂದಕ್ಕೆ ಬರಲಾಗದಿದ್ದಲ್ಲಿ ಹಾಗೂ ಪ್ರಭಾರದಲ್ಲಿರುವ ಸಚಿವರು ಆ ಪ್ರಕರಣವನ್ನು ಮುಂದುವರಿಸಲು ಬಯಸಿದಲ್ಲಿ, ಆ ಪ್ರಕರಣವನ್ನು ತೀರ್ಮಾನಕ್ಕಾಗಿ ಮುಖ್ಯ ಮಂತ್ರಿಯವರಿಗೆ ಸಲ್ಲಿಸತಕ್ಕದ್ದು ಮತ್ತು ಮುಖ್ಯ ಮಂತ್ರಿಯವರು ಆ ಪ್ರಕರಣದ ಬಗ್ಗೆ ಸ್ವತಃ ತೀರ್ಮಾನ ತೆಗೆದುಕೊಳ್ಳಬಹುದು ಅಥವಾ ಪ್ರಕರಣವನ್ನು ಸಚಿವ ಸಂಪುಟಕ್ಕೆ ಉಲ್ಲೇಖಿಸಬಹುದು.
- (1) ಭಾರತ ಸರ್ಕಾರದಿಂದ, (ಪ್ರಧಾನ ಮಂತ್ರಿಯವರಿಂದ ಮತ್ತು ಕೇಂದ್ರದ ಇತರ ಮಂತ್ರಿಗಳಿಂದ ಬಂದ ಕಾಗದ ಪತ್ರಗಳು ಸೇರಿದಂತೆ), ಒಂದು ರಾಜ್ಯ ಸರ್ಕಾರದಿಂದ ಅಥವಾ ಉಚ್ಚ ನ್ಯಾಯಾಲಯದಿಂದ ಸ್ವೀಕರಿಸಿದ ವಾಡಿಕೆಯ ಅಥವಾ ಪ್ರಮುಖವಲ್ಲದ ಸ್ವರೂಪದ ಕಾಗದ ಪತ್ರಗಳಲ್ಲದ ಇತರ ಎಲ್ಲ ಕಾಗದಪತ್ರಗಳ ಪ್ರತಿಗಳನ್ನು ಅವುಗಳನ್ನು ಸ್ವೀಕರಿಸಿದ ನಂತರ ಆದಷ್ಟು ಬೇಗನೇ ಪ್ರಭಾರದಲ್ಲಿರುವ ಸಚಿವರ ಕಾರ್ಯದರ್ಶಿಯವರಿಗೆ, ಮುಖ್ಯಮಂತ್ರಿಯವರಿಗೆ ಮತ್ತು ರಾಜ್ಯಪಾಲರಿಗೆ ಮಾಹಿತಿಗಾಗಿ ಸಲ್ಲಿಸತಕ್ಕದ್ದು.
(2) ಸಂಬಂಧಪಟ್ಟ ಇಲಾಖೆಯ ಕಾರ್ಯದರ್ಶಿಯವರು, ಕೆಳಗೆ ಸೂಚಿಸಿರುವ ಸ್ವರೂಪದ ಒಂದು ಘಟನೆಯನ್ನು ವರದಿ ಮಾಡುವ ಕಾಗದ ಪತ್ರಗಳ ಪ್ರತಿಗಳನ್ನು ಸ್ವೀಕರಿಸಿದ ನಂತರ ವಿಳಂಬ ಮಾಡದೇ ಕೂಡಲೇ ಮುಖ್ಯ ಮಂತ್ರಿಯವರಿಗೆ ಮತ್ತು ಸಂಬಂಧಪಟ್ಟ ಸಚಿವರಿಗೆ ಅಥವಾ ಸಚಿವರುಗಳಿಗೆ ಮಾಹಿತಿಗಾಗಿ ಕಳುಹಿಸಿಕೊಡತಕ್ಕದ್ದು.
(i) ಗಂಭೀರ ಸ್ವರೂಪದ ಸಾರ್ವಜನಿಕ ಶಾಂತಿಯ ಭಂಗವನ್ನು ಒಳಗೊಂಡ ದೊಂಬಿಗಳು;
(ii) ರಾಜಕೀಯ ಸ್ವರೂಪವನ್ನೊಳಗೊಂಡ ಹಿಂಸಾಚಾರಗಳು;
(iii) ಪ್ರಾಣಕ್ಕೆ ಅಥವಾ ಆಸ್ತಿಗೆ ಗಂಭೀರ ಹಾನಿಯುಂಟು ಮಾಡುವಂತಹ ಪ್ರವಾಹ ಅಥವಾ ಭೂಕಂಪದಂತಹ ವಿಕೋಪಗಳು; ಮತ್ತು
(iv) ರಾಜಕೀಯ ಅಥವಾ ಆಡಳಿತಾತ್ಮಕ ಮಹತ್ವ ಹೊಂದಿರುವಂತಹ ಇತರ ಎಲ್ಲ ಘಟನೆಗಳು ಹಾಗೂ ಎಲ್ಲ ಅಸಾಮಾನ್ಯ ಘಟನೆಗಳು.
(3) ಮೇಲೆ ಸೂಚಿಸಿದ ಘಟನೆಯ ಮೊದಲ ವರದಿಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲದ ಇತರ ಯಾವುದೇ ಸಚಿವಾಲಯ ಇಲಾಖೆಯು ಸ್ವೀಕರಿಸಿದರೆ, ಆ ಇಲಾಖೆಯ ಕಾರ್ಯದರ್ಶಿಯವರು ಅದರ ಒಂದು ಪ್ರತಿಯನ್ನು ಮುಖ್ಯ ಕಾರ್ಯದರ್ಶಿಯವರಿಗೆ ಸಹ ಕೂಡಲೇ ಕಳುಹಿಸಿಕೊಡತಕ್ಕದ್ದು.
ಟಿಪ್ಪಣಿ: ಆ ಮಾಹಿತಿಯ ಮೇಲಿನ ಸಚಿವಾಲಯದ ಕ್ರಮವನ್ನು ತಡೆಹಿಡಿಯತಕ್ಕದ್ದಲ್ಲ.
-
ಭಾರತ ಸರ್ಕಾರದೊಂದಿಗೆ ಅಥವಾ ಇತರ ಯಾವುದೇ ರಾಜ್ಯ ಸರ್ಕಾರದೊಂದಿಗೆ ರಾಜ್ಯ ಸರ್ಕಾರವನ್ನು ವಿವಾದಕ್ಕೆ ಎಳೆಯುವ ಸಂಭವವಿರುವ ಯಾವುದೇ ವಿಷಯವನ್ನು ಅಂತಹ ವಿವಾದದ ಸಾಧ್ಯತೆಯನ್ನು ಪರ್ಯಾಲೋಚಿಸಿದ ಕೂಡಲೇ ರಾಜ್ಯಪಾಲರ, ಮುಖ್ಯ ಮಂತ್ರಿಯವರ ಮತ್ತು ಪ್ರಭಾರದಲ್ಲಿರುವ ಸಚಿವರ ಗಮನಕ್ಕೆ ತರತಕ್ಕದ್ದು.
-
ಈ ನಿಯಮಗಳ ಎರಡನೇ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವ ಸ್ವರೂಪದ ಎಲ್ಲ ಪ್ರಕರಣಗಳ ಮೇಲೆ ಆದೇಶ ಹೊರಡಿಸುವುದಕ್ಕೆ ಮೊದಲು ಅವುಗಳನ್ನು ಸಂಬಂಧಪಟ್ಟ ಇಲಾಖೆಯ ಕಾರ್ಯದರ್ಶಿಯವರು ಮುಖ್ಯ ಮಂತ್ರಿಯವರಿಗೆ ಸಲ್ಲಿಸತಕ್ಕದ್ದು.
-
ಈ ನಿಯಮಗಳ ಮೂರನೆಯ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಸ್ವರೂಪದ ಎಲ್ಲ ಪ್ರಕರಣಗಳ ಮೇಲೆ ಆದೇಶ ಹೊರಡಿಸುವುದಕ್ಕೆ ಮೊದಲು ಅವುಗಳನ್ನು ರಾಜ್ಯಪಾಲರಿಗೆ ಸಲ್ಲಿಸತಕ್ಕದ್ದು.
ಬಿ. ರಾಜ್ಯಪಾಲರು
-
ಮುಖ್ಯ ಮಂತ್ರಿಯವರು, ರಾಜ್ಯದ ವ್ಯವಹಾರಗಳ ಆಡಳಿತಕ್ಕೆ ಮತ್ತು ರಾಜ್ಯಪಾಲರು ಕೇಳಬಹುದಾದ ಶಾಸನಗಳಿಗೆ ಸಂಬಂಧಿಸಿದ ಪ್ರಸ್ತಾವಗಳಿಗೆ ಸಂಬಂಧಪಟ್ಟಂತಹ ಮಾಹಿತಿಯನ್ನು ರಾಜ್ಯಪಾಲರಿಗೆ ಒದಗಿಸುವ ವ್ಯವಸ್ಥೆ ಮಾಡತಕ್ಕದ್ದು.
-
ರಾಜ್ಯಪಾಲರು ಯಾವುದೇ ಪ್ರಕರಣದಲ್ಲಿ ಯಾವುದೇ ಮುಂದಿನ ಕ್ರಮ ತೆಗೆದುಕೊಳ್ಳಬೇಕೆಂದು ಅಥವಾ ಪ್ರಭಾರದಲ್ಲಿರುವ ಸಚಿವರು ಹೊರಡಿಸಿದ ಆದೇಶಗಳಿಗೆ ಅನುಸಾರವಾಗಿಯಲ್ಲದೆ ಬೇರೆ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಪರಿಗಣಿಸಿದಲ್ಲಿ, ರಾಜ್ಯಪಾಲರು ಪ್ರಕರಣವನ್ನು ಮುಖ್ಯಮಂತ್ರಿಯವರಿಗೆ ಕಳುಹಿಸತಕ್ಕದ್ದು ಮತ್ತು ಅವರು ಪರಿಗಣನೆಗಾಗಿ ಮಂತ್ರಿ ಮಂಡಲದ ಮುಂದೆ ಪ್ರಕರಣವನ್ನು ಮಂಡಿಸಬೇಕೆಂದು ಅಗತ್ಯಪಡಿಸಿದರೆ ಆ ಪ್ರಕರಣವನ್ನು ಹಾಗೆ ಮಂಡಿಸತಕ್ಕದ್ದು:
ಪರಂತು, ಅಂತಹ ಯಾವುದೇ ಪ್ರಕರಣದಲ್ಲಿ ರಾಜ್ಯಪಾಲರು ಮಾಡುವ ಟಿಪ್ಪಣಿಗಳನ್ನು, ನಡವಳಿಗಳನ್ನು ಅಥವಾ ಟೀಕೆಗಳನ್ನು ರಾಜ್ಯಪಾಲರು ಸಚಿವಾಲಯದ ದಾಖಲೆಗೆ ತೆಗೆದುಕೊಳ್ಳಬೇಕೆಂದು ನಿರ್ದೇಶಿಸಿದ ಹೊರತು, ಅವುಗಳನ್ನು ದಾಖಲೆಗೆ ತೆಗೆದುಕೊಳ್ಳತಕ್ಕದ್ದಲ್ಲ.
- ಈ ನಿಯಮಗಳ ಅಥವಾ ಯಾವುದೇ ಕಾನೂನಿನ ಉಪಬಂಧದ ಮೇರೆಗೆ ರಾಜ್ಯಪಾಲರ ಅನುಮೋದನೆ ಅಗತ್ಯವಿರುವ ಪ್ರಕರಣಗಳನ್ನು ಮತ್ತು ಸಂವಿಧಾನದ ಮೇರೆಗೆ ರಾಜ್ಯಪಾಲರು ಒಪ್ಪಿಗೆ ನೀಡಬೇಕಾದ ಅಥವಾ ರಾಷ್ಟ್ರಪತಿಯವರ ಪರಿಗಣನೆಗಾಗಿ ಮೀಸಲಿರಿಸಿದ ವಿಧೇಯಕಗಳನ್ನು ಪ್ರಭಾರದಲ್ಲಿರುವ ಸಚಿವರು ಪರಶೀಲಿಸಿದ ನಂತರ ರಾಜ್ಯಪಾಲರಿಗೆ ಸಲ್ಲಿಸುವುದಕ್ಕಾಗಿ ಇಲಾಖೆಯ ಕಾರ್ಯದರ್ಶಿಯವರು ರಾಜ್ಯಪಾಲರ ಕಾರ್ಯದರ್ಶಿಯವರಿಗೆ ಕಳುಹಿಸಿಕೊಡತಕ್ಕದ್ದು.
ಸಿ. ಹಣಕಾಸು ಇಲಾಖೆ
- ಹಣಕಾಸು ಇಲಾಖೆಯು ಈ ಮುಂದಿನ ಪ್ರಕಾರ್ಯಗಳನ್ನು ನಿರ್ವಹಿಸತಕ್ಕದ್ದು, ಎಂದರೆ:-
(ಎ) ಅದು ಹಲವಾರು ವರ್ಗಗಳ ಸಾಲಗಳ ಮತ್ತು ಮುಂಗಡಗಳ ಬೇಡಿಕೆ, ವಸೂಲಿ ಮತ್ತು ಶಿಲ್ಕನ್ನು ನಿಯತಕಾಲಿಕವಾಗಿ ಪರಿಶೀಲಿಸತಕ್ಕದ್ದು ಹಾಗೂ ಸಾಲಗಳಿಗೆ ಮತ್ತು ಮುಂಗಡಗಳಿಗೆ ಸಂಬಂಧಿಸಿದ ಎಲ್ಲ ವ್ಯವಹಾರಗಳ ಬಗ್ಗೆ ಸಲಹೆ ನೀಡತಕ್ಕದ್ದು;
(ಬಿ) ಅದು ರಾಜ್ಯ ಸರ್ಕಾರಕ್ಕೆ ಸೇರಿದ, ರಾಜ್ಯ ಸರ್ಕಾರದಲ್ಲಿ ನಿಹಿತವಾಗಿರುವ ಅಥವಾ ರಾಜ್ಯ ಸರ್ಕಾರದ ಆಡಳಿತಕ್ಕೆ ಒಳಪಟ್ಟಿರುವ ಎಲ್ಲ ನಿಧಿಗಳ ಸುರಕ್ಷತೆಗೆ ಮತ್ತು ತೊಡಗಿಸುವುದಕ್ಕೆ ಜವಾಬ್ದಾರಿಯಾಗಿರತಕ್ಕದ್ದು.
(ಸಿ) ಅದು ತೆರಿಗೆಯ ಹೆಚ್ಚಳ, ಮುಂದುವರಿಕೆ ಅಥವಾ ಇಳಿಸುವುದಕ್ಕೆ ಸಂಬಂಧಿಸಿದ ಎಲ್ಲ ಪ್ರಸ್ತಾವಗಳನ್ನು ಪರಿಶೀಲಿಸತಕ್ಕದ್ದು ಮತ್ತು ಆ ಬಗ್ಗೆ ವರದಿ ಮಾಡತಕ್ಕದ್ದು.
(ಡಿ) ಅದು ಸರ್ಕಾರವು ಪಡೆಯುವ ಸಾಲಗಳಿಗೆ ಸಂಬಂಧಿಸಿದ ಎಲ್ಲ ಪ್ರಸ್ತಾವಗಳನ್ನು ಪರಿಶೀಲಿಸತಕ್ಕದ್ದು ಮತ್ತು ಅವುಗಳ ಬಗ್ಗೆ ವರದಿ ಮಾಡತಕ್ಕದ್ದು; ವಿಧ್ಯುಕ್ತವಾಗಿ ಅಧಿಕೃತಗೊಳಿಸಿದ ಅಂತಹ ಸಾಲಗಳನ್ನು ಎತ್ತುವ ಉದ್ದೇಶಕ್ಕೆ ಅಗತ್ಯವಾದಂತಹ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳತಕ್ಕದ್ದು ಹಾಗೂ ಸಾಲಗಳನ್ನು ತೀರಿಸುವುದಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳ ಪ್ರಭಾರವನ್ನು ಹೊಂದಿರತಕ್ಕದ್ದು. (ಇ) ಅದು ಹಣಕಾಸು ಕಾರ್ಯ ವಿಧಾನಕ್ಕೆ ಮತ್ತು ಸುಸ್ಥಿರ ಹಣಕಾಸು ತತ್ವಗಳ ಅನ್ವಯಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳಿಗೆ ಜವಾಬ್ದಾರಿಯಾಗಿರತಕ್ಕದ್ದು.
(ಎಫ್) ಅದು ಇತರ ಇಲಾಖೆಗಳ ಮಾರ್ಗದರ್ಶನಕ್ಕಾಗಿ ಸೂಕ್ತ ಹಣಕಾಸು ನಿಯಮಗಳನ್ನು ರೂಪಿಸುವಂತೆ ನೋಡಿಕೊಳ್ಳುವುದಕ್ಕೆ ಮತ್ತು ಅಗತ್ಯವಾದಲ್ಲಿ ವಾಣಿಜ್ಯ ಲೆಕ್ಕ ಪತ್ರಗಳೂ ಸೇರಿದಂತೆ ಸೂಕ್ತ ಲೆಕ್ಕಪತ್ರಗಳನ್ನು ಇತರ ಇಲಾಖೆಗಳು ಮತ್ತು ಅವುಗಳ ಅಧೀನವಾಗಿರುವ ಕಾರ್ಯ ಸಂಸ್ಥೆಗಳು ನಿರ್ವಹಿಸುವಂತೆ ನೋಡಿಕೊಳ್ಳಲು ಜವಾಬ್ದಾರಿಯಾಗಿರತಕ್ಕದ್ದು.
(ಜಿ) ಅದು ಆಯವ್ಯಯ ಕಾರ್ಯ ವಿಧಾನಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳಿಗೆ ಮತ್ತು ವಾರ್ಷಿಕ ಹಣಕಾಸು ತಃಖ್ತೆಯ ನಮೂನೆ ಮತ್ತು ಒಳಾಂಶಕ್ಕೆ ಜವಾಬ್ದಾರಿಯಾಗಿರತಕ್ಕದ್ದು ಹಾಗೂ ಅದು ವರ್ಷದ ಅವಧಿಯಲ್ಲಿ ಮಾರ್ಗೋಪಾಯಗಳನ್ನು ರೂಪಿಸುವುದಕ್ಕೆ ಮತ್ತು ಸರ್ಕಾರದ ನಗದು ಶಿಲ್ಕುಗಳ ಸ್ಥಿತಿಯ ಬಗ್ಗೆ ನಿಗಾ ಇಡುವುದಕ್ಕೆ ಜವಾಬ್ದಾರಿಯಾಗಿರತಕ್ಕದ್ದು.
(ಹೆಚ್) ಆಯವ್ಯಯ ಮತ್ತು ಪೂರಕ ಅಂದಾಜುಗಳ ಸಂಬಂಧದಲ್ಲಿ,-
(i) ಅದು, ವಿಧಾನ ಮಂಡಲದ ಸದನಗಳಲ್ಲಿ ಮಂಡಿಸುವುದಕ್ಕಾಗಿ ಸ್ವೀಕೃತಿಗಳ ಮತ್ತು ವೆಚ್ಚದ ವಾರ್ಷಿಕ ವಿವರಪಟ್ಟಿಯನ್ನು ಹಾಗೂ ವರ್ಷದ ಅವಧಿಯಲ್ಲಿ ಮಂಡಿಸುವುದು ಅಗತ್ಯವಾಗಬಹುದಾದಂತಹ ವೆಚ್ಚದ ಯಾವುದೇ ಪೂರಕ ಅಂದಾಜುಗಳನ್ನು ಸಿದ್ಧಪಡಿಸತಕ್ಕದ್ದು; ಅದು ಧನವಿನಿಯೋಗ ವಿಧೇಯಕಗಳನ್ನು ಹಾಗೂ ರಾಜ್ಯದ ಸಂಚಿತ ಹಾಗೂ ಸಾದಿಲ್ವಾರು ನಿಧಿಗಳಿಗೆ ಸಂಬಂಧಿಸಿದ ವಿಧೇಯಕಗಳನ್ನು ಸಹ ಸಿದ್ಧಪಡಿಸತಕ್ಕದ್ದು.
(ii) ಹಾಗೆ ಸಿದ್ಧಪಡಿಸುವ ಉದ್ದೇಶಕ್ಕಾಗಿ ತನ್ನ ಅಂದಾಜುಗಳು ಯಾವ ವಿಷಯ ಸಾಮಗ್ರಿಯ ಮೇಲೆ ಆಧಾರವಾಗಿರಬೇಕೋ ಆ ವಿಷಯ ಸಾಮಗ್ರಿಯನ್ನು ಸಂಬಂಧಪಟ್ಟ ಇಲಾಖೆಗಳಿಂದ ಪಡೆದುಕೊಳ್ಳತಕ್ಕದ್ದು ಮತ್ತು ಹಾಗೆ ಪೂರೈಸಿದ ವಿಷಯ ಸಾಮಗ್ರಿಯ ಆಧಾರದ ಮೇಲೆ ತಯಾರಿಸಿದ ಅಂದಾಜುಗಳ ನಿಖರತೆಗೆ ಅದು ಜವಾಬ್ದಾರಿಯಾಗಿರತಕ್ಕದ್ದು.
(iii) ಯಾವ ಹೊಸ ವೆಚ್ಚಕ್ಕಾಗಿ ಅದು ಅಂದಾಜುಗಳಲ್ಲಿ ಹಣ ಒದಗಿಸಲು ಉದ್ದೇಶಿಸಿರುವುದೋ ಆ ಹೊಸ ವೆಚ್ಚದ ಎಲ್ಲ ಯೋಜನೆಗಳ ಕುರಿತು ಪರಿಶೀಲಿಸತಕ್ಕದ್ದು ಮತ್ತು ಸಲಹೆ ನೀಡತಕ್ಕದ್ದು. ಹಾಗೂ ಹಾಗೆ ಪರಿಶೀಲನೆ ಮಾಡದಂತಹ ಯಾವುವೇ ಯೋಜನೆಗಳಿಗೆ ಅಂದಾಜುಗಳಲ್ಲಿ ಹಣ ಒದಗಿಸಲು ನಿರಾಕರಿಸತಕ್ಕದ್ದು.
(ಐ) ಯಾವ ವೆಚ್ಚಕ್ಕಾಗಿ ಸಾಕಷ್ಟು ಮಂಜೂರಾತಿ ಇಲ್ಲಮೋ ಆ ವೆಚ್ಚವನ್ನು ಮಾಡಲಾಗುತ್ತಿದೆ ಎಂಬುದಾಗಿ ಲೆಕ್ಕ ಪರಿಶೋಧನಾಧಿಕಾರಿಯಿಂದ ವರದಿಯನ್ನು ಸ್ವೀಕರಿಸಿದ ಮೇಲೆ ಮಂಜೂರಾತಿಯನ್ನು ಪಡೆದುಕೊಳ್ಳಲು ಅಥವಾ ಅಂತಹ ವೆಚ್ಚ ಮಾಡುವುದನ್ನು ಕೂಡಲೇ ನಿಲ್ಲಿಸಲು ಅದು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳತಕ್ಕದ್ದು.
(ಜೆ) ಅದು, ರಾಜ್ಯದ ಲೆಕ್ಕ ಪತ್ರಗಳಿಗೆ ಸಂಬಂಧಿಸಿದ ಲೆಕ್ಕ ಪರಿಶೋಧನಾ ವರದಿಯನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಮುಂದೆ ಮಂಡಿಸತಕ್ಕದ್ದು.
(ಕೆ) ಅದು , ನಿರ್ದಿಷ್ಟ ಇಲಾಖೆಗಳಲ್ಲಿ, ಸ್ವೀಕೃತಿಗಳ ಲೆಕ್ಕಪರಿಶೋಧನೆಯ ಮೂಲಕ ವೆಚ್ಚದ ಲೆಕ್ಕದ ಪರಿಶೋಧನೆಯನ್ನು ಎಷ್ಟರಮಟ್ಟಿಗೆ ಬಲಪಡಿಸಬೇಕು ಎಂಬುದನ್ನು ನಿರ್ಧರಿಸತಕ್ಕದ್ದು.
(ಎಲ್) ಅದು, ಅನುಸರಿಸಿದ ಸಂಗ್ರಹಣೆ ವಿಧಾನಗಳ ಬಗ್ಗೆ ರಾಜಸ್ವ ಸಂಗ್ರಹಣೆಗಳಿಗೆ ಜವಾಬ್ದಾರಿಯಾದ
ಇಲಾಖೆಗಳಿಗೆ ಸಲಹೆ ನೀಡತಕ್ಕದ್ದು.
- ರಾಜ್ಯದ ಹಣಕಾಸಿನ ಮೇಲೆ ಪರಿಣಾಮ ಉಂಟು ಮಾಡುವಂತಹ ಎಲ್ಲಾ ಪ್ರಸ್ತಾವಗಳ ಬಗ್ಗೆ ಮತ್ತು ವಿಶೇಷವಾಗಿ ,-
(ಎ) ಯಾವುದೇ ಹುದ್ದೆಯನ್ನು ಸಾರ್ವಜನಿಕ ಸೇವೆಗೆ ಸೇರಿಸುವ ಅಥವಾ ಸಾರ್ವಜನಿಕ ಸೇವೆಯಿಂದ ರದ್ದುಪಡಿಸುವ ಅಥವಾ ಯಾವುದೇ ಹುದ್ದೆಯ ಅವಧಿಯನ್ನು ಅಥವಾ ಉಪಲಬ್ದಿಗಳನ್ನು ವ್ಯತ್ಯಾಸ ಮಾಡುವ ಪ್ರಸ್ತಾವಗಳ ಬಗ್ಗೆ;
(ಬಿ) ಯಾವುದೇ ಹುದ್ದೆಗೆ ಅಥವಾ ಹುದ್ದೆಗಳ ವರ್ಗಕ್ಕೆ ಅಥವಾ ರಾಜ್ಯ ಸರ್ಕಾರದ ಯಾರೇ ನೌಕರನಿಗೆ ಭತ್ಯೆಯನ್ನು ಅಥವಾ ವಿಶೇಷ ಅಥವಾ ವೈಯಕ್ತಿಕ ವೇತನವನ್ನು ಮಂಜೂರು ಮಾಡುವ ಪ್ರಸ್ತಾವಗಳ ಬಗ್ಗೆ;
(ಸಿ) ರಾಜಸ್ವವನ್ನು ಬಿಟ್ಟುಕೊಡುವುದನ್ನು ಒಳಗೊಂಡಿರುವ ಅಥವಾ ಧನವಿನಿಯೋಗ ಅಧಿನಿಯಮದಲ್ಲಿ
ಹಣಕಾಸು ಏರ್ಪಾಟು ಮಾಡಿರದಂತಹ ವೆಚ್ಚವನ್ನು ಒಳಗೊಂಡಿರುವ ಪ್ರಸ್ತಾವಗಳ ಬಗ್ಗೆ -
ಯಾವುವೇ ಆದೇಶಗಳನ್ನು ಹೊರಡಿಸುವುದಕ್ಕೆ ಮುಂಚೆ ಹಣಕಾಸು ಇಲಾಖೆಯೊಂದಿಗೆ ಸಮಾಲೋಚಿಸತಕ್ಕದ್ದು.
ಪರಂತು, ಸ್ವತ: ಹಣಕಾಸು ಇಲಾಖೆಯಲ್ಲಿ ಅಥವಾ ಅದರ ಆಡಳಿತ ನಿಯಂತ್ರಣದಲ್ಲಿ ಬರುವ ಇಲಾಖೆಯಲ್ಲಿ ಹುದ್ದೆಗಳನ್ನು ಸೃಜಿಸಲು ಅಥವಾ ಅವುಗಳ ನೌಕರರಿಗೆ ಭತ್ಯೆ ಮಂಜೂರು ಮಾಡಲು, ಸಂಬಳ ಹೆಚ್ಚಿಸಲು ಅಥವಾ ಹಣಕಾಸು ರಿಯಾಯಿತಿಗಳನ್ನು ನೀಡಲು ಕೋರಿರುವಲ್ಲಿ, ಅಂತಹ ವಿಷಯಗಳ ಸಂಬಂಧದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಹಣಕಾಸು ಇಲಾಖೆಯ ಎಲ್ಲ ಅಧಿಕಾರಗಳನ್ನು ಚಲಾಯಿಸುತ್ತದೆ.
- (1) ಅನುದಾನಗಳು ವಿಧಾನ ಸಭೆಯಿಂದ ಪುರಸ್ಕೃತಗೊಂಡ ನಂತರ,-
(ಎ) ಅನುದಾನದೊಳಗೆ, ಪ್ರಧಾನ, ಸಣ್ಣ ಮತ್ತು ಅಧೀನ ಶೀರ್ಷಿಕೆಯಿಂದ ಮತ್ತೊಂದಕ್ಕೆ ಯಾವುದೇ ಪುನರ್ ಹಂಚಿಕೆಯನ್ನು ಮಂಜೂರು ಮಾಡುವ ಅಧಿಕಾರವನ್ನು ಹಣಕಾಸು ಇಲಾಖೆಯು ಹೊಂದಿರತಕ್ಕದ್ದು.
(ಬಿ) ಹಣಕಾಸು ಇಲಾಖೆಯು ಮಾಡಿರುವ ಯಾವುದೇ ಅಧಿಕಾರದ ಪ್ರತ್ಯಾಯೋಜನೆಗೆ ಅನುಸಾರವಾಗಿ ಅನುದಾನದೊಳಗೇ ಸಣ್ಣ ಶೀರ್ಷಿಕೆಯ ಅಧೀನ ಶೀರ್ಷಿಕೆಗಳ ನಡುವೆ ಯಾವುದೇ ಇಲಾಖೆಯು ಯಾವುದೇ ಮರು ಹಂಚಿಕೆಗೆ ಮಂಜೂರಾತಿ ನೀಡಿದ್ದಲ್ಲಿ, ಮರು ಹಂಚಿಕೆ ಮಾಡಿರುವ ಪ್ರತಿಯೊಂದು ಆದೇಶದ ಪ್ರತಿಯನ್ನು ಅದನ್ನು ಹೊರಡಿಸಿದ ಕೂಡಲೇ ಹಣಕಾಸು ಇಲಾಖೆಗೆ ಕಳುಹಿಸಿಕೊಡತಕ್ಕದ್ದು.
(2) ಹಣಕಾಸು ಇಲಾಖೆಯು,-
(ಎ) ಯಾವುದೇ ಅನುದಾನದ ಸಂಬಂಧದಲ್ಲಿ ಹಾಗೂ ಈ ಬಗ್ಗೆ ಅದು ನಿರ್ದಿಷ್ಟಪಡಿಸಬಹುದಾದಂಥ ಯಾವುವೇ ಷರತ್ತುಗಳಿಗೆ ಒಳಪಟ್ಟು, (1)ನೇ ಉಪ ನಿಯಮದ (ಎ) ಖಂಡದಿಂದ ಪ್ರದತ್ತವಾದ ಮರು ಹಂಚಿಕೆಯ ಅಧಿಕಾರವನ್ನು ಯುನೈಟೆಡ್ ಕಿಂಗ್ ಡಂ ನಲ್ಲಿರುವ ಭಾರತದ ರಾಯಭಾರಿಗೆ ಪ್ರತ್ಯಾಯೋಜಿಸಲು; ಮತ್ತು
(ಬಿ) ಸಚಿವರು ಯಾರೇ ಅಧಿಕಾರಿಗೆ ಅಥವಾ ಅಧಿಕಾರಿಗಳ ವರ್ಗಕ್ಕೆ ಸದರಿ ಉಪ ನಿಯಮದ (ಬಿ) ಖಂಡದ ಮೂಲಕ ಪ್ರದತ್ತವಾದ ಮರು ಹಂಚಿಕೆಯ ಅಧಿಕಾರದ ಪ್ರತ್ಯಾಯೋಜನೆಯನ್ನು ಮಂಜೂರು ಮಾಡಲು-ಅಧಿಕಾರವನ್ನು ಹೊಂದಿರತಕ್ಕದ್ದು.
(3) ಹಣಕಾಸು ಇಲಾಖೆಯ ಅನುಮೋದನೆ ಅಗತ್ಯವಿರದ ಯಾವುದೇ ಮರು ಹಂಚಿಕೆಯನ್ನು ಮಂಜೂರು ಮಾಡುವ ಆದೇಶಗಳ ಪ್ರತಿಗಳನ್ನು ಅಂತಹ ಆದೇಶಗಳನ್ನು ಹೊರಡಿಸಿದ ಕೂಡಲೇ ಆ ಇಲಾಖೆಗೆ ಕಳುಹಿಸಿಕೊಡತಕ್ಕದ್ದು.
-
ಹಣಕಾಸು ಇಲಾಖೆಯ ಅಭಿಪ್ರಾಯಗಳನ್ನು ಪ್ರಕರಣವು ಯಾವ ಇಲಾಖೆಗೆ ಸಂಬಂಧಿಸಿದೆಯೋ ಆ ಇಲಾಖೆಯ ಖಾಯಂ ದಾಖಲೆಗೆ ತೆಗೆದುಕೊಳ್ಳತಕ್ಕದ್ದು ಮತ್ತು ಅದು ಪ್ರಕರಣದ ಭಾಗವಾಗಿರತಕ್ಕದ್ದು.
-
ಹಣಕಾಸು ಇಲಾಖೆಯು, ಯಾವ ಪ್ರಕರಣಗಳಲ್ಲಿ ತನ್ನ ಸಮ್ಮತಿಯನ್ನು ನೀಡಲಾಗಿದೆ ಎಂದು ಭಾವಿಸಬಹುದೋ ಅಂತಹ ಪ್ರಕರಣಗಳನ್ನು ಸಾಮಾನ್ಯ ಅಥವಾ ವಿಶೇಷ ಆದೇಶದ ಮೂಲಕ ನಿರ್ದಿಷ್ಟಪಡಿಸಬಹುದು.
1
[45 (ಎ) 5 ಕೋಟಿ ರೂಪಾಯಿಗಳವರೆಗೆ ಸರ್ಕಾರವು ಖಾತರಿ ನೀಡಿರುವ ಪ್ರತಿಯೊಂದು ಪ್ರಸ್ತಾವವನ್ನು ಹಣಕಾಸು ಸಚಿವರು ಅನುಮೋದಿಸಬಹುದು''].
- (1) ಯಾವ ಪ್ರಕರಣಗಳಲ್ಲಿ 17ನೇ ನಿಯಮ ಅಥವಾ 41ನೇ ಮತ್ತು 42ನೇ ನಿಯಮಗಳಲ್ಲಿ ತಿಳಿಸಿರುವಂಥ ವಿಷಯಗಳು ಸೇರಿವೆಯೋ ಆ ಪ್ರಕರಣಗಳಲ್ಲಿ ಯಾವುವೇ ಕಾಗದ ಪತ್ರಗಳನ್ನು ಕಳುಹಿಸಿಕೊಡುವಂತೆ ಹಣಕಾಸು ಸಚಿವರು ಕೇಳಬಹುದು ಮತ್ತು ಯಾವ ಇಲಾಖೆಗೆ ಮನವಿಯನ್ನು ಸಲ್ಲಿಸಲಾಗಿದೆಯೋ ಆ ಇಲಾಖೆಯು ಕಾಗದ ಪತ್ರಗಳನ್ನು ಪೂರೈಸತಕ್ಕದ್ದು.
(2) (1) ನೇ ಉಪ ಖಂಡದ ಮೇರೆಗೆ ಕೋರಿರುವ ಕಾಗದಪತ್ರಗಳನ್ನು ಸ್ವೀಕರಿಸಿದ ನಂತರ ಹಣಕಾಸು ಸಚಿವರು ಕಾಗದ ಪತ್ರಗಳನ್ನು, ಅವುಗಳ ಮೇಲೆ ತಾವು ಮಾಡಿರುವ ಟಿಪ್ಪಣಿ ಸಹಿತ ಸಚಿವ ಸಂಪುಟಕ್ಕೆ ಸಲ್ಲಿಸುವಂತೆ ಕೋರಬಹುದು.
- ಅಧಿಸೂಚನೆ ಸಂ: ಡಿಸಿಎ 20 ಎಆರ್ಬಿ 96, ದಿನಾಂಕ: 23.8.2000 ಕೆಜಿಡಿಇಎಕ್ಸ್ 29.8.2000 ರ ಮೂಲಕ ಸೇರಿಸಲಾಗಿದೆ.
(3) ಹಣಕಾಸು ಇಲಾಖೆಯು ಸಾಮಾನ್ಯವಾಗಿ ಎಲ್ಲ ಇಲಾಖೆಗಳಲ್ಲಿ ಹಣಕಾಸು ಕಾರ್ಯ ವಿಧಾನಕ್ಕೆ ಅನ್ವಯವಾಗುವ ಮತ್ತು ಹಣಕಾಸು ಇಲಾಖೆಯ ವ್ಯವಹಾರಗಳನ್ನು ಹಾಗೂ ಹಣಕಾಸು ಇಲಾಖೆಯೊಂದಿಗೆ ಇತರ ಇಲಾಖೆಗಳ ವ್ಯವಹಾರಗಳನ್ನು ನಿಯಂತ್ರಿಸುವ ನಿಯಮಗಳನ್ನು ರಚಿಸಬಹುದು.
1 [ಡಿ. ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ] 1
-
ಈ ನಿಯಮಗಳಲ್ಲಿ ಇನ್ನು ಮುಂದೆ ಉಪಬಂಧಿಸಿದಂತೆ ಹೊರತು, [ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯು] ಶಾಸನಕ್ಕೆ ಸಂಬಂಧಿಸಿದಂತೆ ಅದೇ ಸ್ವತಃ ಶಾಸನ ರಚಿಸುವ ಅಥವಾ ಅದನ್ನು ಪ್ರಾರಂಭಿಸುವ ಇಲಾಖೆ ಅಲ್ಲ ಮತ್ತು ಅದರ ಸರಿಯಾದ ಪ್ರಕಾರ್ಯವು, ಯಾವ ಶಾಸನದ ಮೇಲೆ ನೀತಿಯನ್ನು ಅನುಮೋದಿಸಲಾಗಿದೆಯೋ ಆ ಶಾಸನದ ಯೋಜನೆಗಳಿಗೆ ತಾಂತ್ರಿಕ ಸ್ವರೂಪವನ್ನು ನೀಡುವುದಾಗಿದೆ. ಶಾಸನವನ್ನು ರೂಪಿಸುವ ಪ್ರತಿಯೊಂದು ಪ್ರಸ್ತಾವವನ್ನು ಇಲಾಖೆಯಲ್ಲಿ ಪರಿಗಣಿಸತಕ್ಕದ್ದು ಮತ್ತು ಅಗತ್ಯವೆನಿಸಿದರೆ ಶಾಸನದ ವಸ್ತು ವಿಷಯವು ಯಾವ ಇಲಾಖೆಗೆ ಸಂಬಂಧಿಸಿದೆಯೋ ಆ ಇಲಾಖೆಗೆ ವರ್ಗಾಯಿಸತಕ್ಕದ್ದು ಮತ್ತು ಶಾಸನದ ಅಗತ್ಯತೆಯನ್ನು ಮತ್ತು ವಿಧೇಯಕದಲ್ಲಿ ಸೇರಿಸಬೇಕಾದ ಎಲ್ಲಾ ಮುಖ್ಯ ವಿಷಯಗಳನ್ನು ಅಂತಹ ಇಲಾಖೆಯಲ್ಲಿ ಚರ್ಚಿಸಿ ತೀರ್ಮಾನಿಸತಕ್ಕದ್ದು.
-
ಶಾಸನ ರಚನೆಯ ತರುವ ಪ್ರಸ್ತಾವಗಳನ್ನು ಒಂದು ಪ್ರಕರಣವನ್ನಾಗಿ ಪರಿಗಣಿಸತಕ್ಕದ್ದು ಹಾಗೂ ಆಡಳಿತ 1 ಇಲಾಖೆಯ ಪ್ರಭಾರದಲ್ಲಿರುವ ಸಚಿವರ ಹಾಗೂ [ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ] ಯ ಮೂಲಕ ಮುಖ್ಯ ಮಂತ್ರಿಯವರಿಗೆ ಆದೇಶಕ್ಕಾಗಿ ಸಲ್ಲಿಸತಕ್ಕದ್ದು:
ಪರಂತು, ಸಂಬಂಧ ಪಟ್ಟ ಇಲಾಖೆಯು,-
(i) ಕಾನೂನು ದೃಷ್ಟಿಕೋನದಿಂದ ಪ್ರಸ್ತಾವಿತ ಶಾಸನ ರಚನೆಯ ಅಗತ್ಯತೆ;
(ii) ಪ್ರಸ್ತಾವಿಸಿರುವ ಕ್ರಮವನ್ನು ಅಧಿನಿಯಮಿತಿಗೊಳಿಸಲು ರಾಜ್ಯ ವಿಧಾನ ಮಂಡಲದ ಸಕ್ಷಮತೆ;
(iii) ಸಂವಿಧಾನದ ಅಡಿಯಲ್ಲಿ ರಾಷ್ಟ್ರಪತಿಯವರ ಪೂರ್ವಾನುಮೋದನೆಯನ್ನು ಅಗತ್ಯವಿದೆಯೇ;
(iv) ಸಂವಿಧಾನದ ಉಪಬಂಧಗಳೊಂದಿಗೆ ಮತ್ತು ನಿರ್ದಿಷ್ಟವಾಗಿ ಮೂಲಭೂತ ಹಕ್ಕುಗಳಿಗೆ
ಸಂಬಂಧಿಸಿದ ಉಪಬಂಧಗಳೊಂದಿಗೆ ಪ್ರಸ್ತಾವಿತ ಕ್ರಮದ ಸುಸಂಗತತೆ;
1 - ಇವುಗಳ ಬಗ್ಗೆ [ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ] ಯೊಂದಿಗೆ ಸಮಾಲೋಚಿಸುವವರೆಗೆ ಪ್ರಕರಣವನ್ನು ಮುಖ್ಯಮಂತ್ರಿಯವರಿಗೆ ಹಾಗೆ ಸಲ್ಲಿಸತಕ್ಕದ್ದಲ್ಲ.
1 ಈ ಅಂಶಗಳ ಬಗ್ಗೆ [ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ] ಯು ನೀಡಿರುವ ಸಲಹೆಯನ್ನು 23ನೇ ನಿಯಮದ ಮೇರೆಗೆ ಸಿದ್ಧಪಡಿಸಿದ ಜ್ಞಾಪನಪತ್ರದಲ್ಲಿ ವಿವರಿಸತಕ್ಕದ್ದು.
- ಶಾಸನ ರಚನೆ ಮಾಡಲು ತೀರ್ಮಾನಿಸಿದಲ್ಲಿ ಯಾವ ಆಧಾರದ ಮೇಲೆ ಶಾಸನವನ್ನು ರಚಿಸಲು ನಿರ್ಧರಿಸಲಾಗಿದೆಯೋ ಆ ಆಧಾರಗಳನ್ನು ಸಾಕಷ್ಟು ಖಚಿತವಾಗಿ ಸೂಚಿಸಿ ಪ್ರಸ್ತಾವದ ಮೇಲೆ ಒಂದು ಜ್ಞಾಪನಪತ್ರವನ್ನು ಹಾಗೂ ಉದ್ದೇಶಗಳ ಮತ್ತು ಕಾರಣಗಳ ಹೇಳಿಕೆಯನ್ನು ಇಲಾಖೆಯು ಸಿದ್ಧಪಡಿಸತಕ್ಕದ್ದು. ಶಾಸನವು ರಾಜ್ಯದ ಸಂಚಿತ ನಿಧಿಯಿಂದ ಖರ್ಚು ಮಾಡುವುದನ್ನೊಳಗೊಂಡಿದ್ದರೆ, ಹಣಕಾಸು ಇಲಾಖೆಯೊಂದಿಗೆ ಸಮಾಲೋಚಿಸಿ, ಹಣಕಾಸು 1 [ಸಂಸದೀಯ ವ್ಯವಹಾರಗಳು ಮತ್ತು ಶಾಸನ ಜ್ಞಾಪನಪತ್ರವನ್ನು ಸಹ ಸಿದ್ಧಪಡಿಸತಕ್ಕದ್ದು. ಆ ನಂತರ ಕಾಗದ ಪತ್ರಗಳನ್ನು ರಚನೆ ಇಲಾಖೆ]ಗೆ ತದನುಸಾರವಾಗಿ ವಿಧೇಯಕದ ಕರಡನ್ನು ಸಿದ್ಧಪಡಿಸುವಂತೆ ಕೋರಿ ಕಳುಹಿಸತಕ್ಕದ್ದು.
ಟಿಪ್ಪಣಿ: ಜ್ಞಾಪನ ಪತ್ರದ ಉದ್ದೇಶವನ್ನು ಈಡೇರಿಸುವಂಥ ಸಚಿವ ಸಂಪುಟ ಟಿಪ್ಪಣಿ ಅಥವಾ ಇತರ ರೀತಿಯ ಕಾಗದ ಪತ್ರಗಳು ಈಗಾಗಲೇ ಇರುವಂತಹ ಪ್ರಕರಣಗಳಲ್ಲಿ ಪ್ರತ್ಯೇಕ ಜ್ಞಾಪನಪತ್ರವನ್ನು ಸಿದ್ಧಪಡಿಸುವ ಅಗತ್ಯತೆ ಇರುವುದಿಲ್ಲ.
1 50. [ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ] ಯು ಆ ನಂತರ ವಿಧೇಯಕದ ಕರಡನ್ನು ಸಿದ್ಧಪಡಿಸತಕ್ಕದ್ದು ಮತ್ತು ಉದ್ದೇಶಗಳು ಮತ್ತು ಕಾರಣಗಳ ಹೇಳಿಕೆಯನ್ನು ಪರಿಶೀಲಿಸತಕ್ಕದ್ದು ಮತ್ತು ಸಂಬಂಧಪಟ್ಟ ಇಲಾಖೆಗೆ ಪ್ರಕರಣವನ್ನು ಹಿಂದಿರುಗಿಸತಕ್ಕದ್ದು.
-
ಅಧಿಸೂಚನೆ ಸಂ: ಡಿಸಿಎ 1 ಎಆರ್ಬಿ 96, ದಿನಾಂಕ: 22.1.96 ಕೆಜಿಡಿಎಕ್ಸ್ 24.1.96 ರ ಮೂಲಕ ಪ್ರತಿಯೋಜಿಸಲಾಗಿದೆ.
-
ಪ್ರಭಾರದಲ್ಲಿರುವ ಸಚಿವರು ಕರಡು ವಿಧೇಯಕದ ಮೇಲೆ ಅಗತ್ಯವೆಂದು ಭಾವಿಸಬಹುದಾದಂಥ ಅಧಿಕಾರಿಗಳ ಮತ್ತು ಸಂಸ್ಥೆಗಳ ಅಭಿಪ್ರಾಯವನ್ನು ಪಡೆಯುವಂತೆ ನಿರ್ದೇಶಿಸಿದರೆ, ಆಡಳಿತ ಇಲಾಖೆಯು ಹಾಗೆ ಅಭಿಪ್ರಾಯವನ್ನು ಪಡೆಯಬಹುದು ಮತ್ತು ತಾತ್ಕಾಲಿಕ ಕರಡು ವಿಧೇಯಕದ ಪ್ರತಿಯೊಂದಿಗೆ ಸ್ವೀಕರಿಸಿದ ಅಭಿಪ್ರಾಯಗಳನ್ನು ಪ್ರಭಾರದಲ್ಲಿರುವ ಸಚಿವರಿಗೆ ಸಲ್ಲಿಸತಕ್ಕದ್ದು.
-
ತಾತ್ಕಾಲಿಕ ಕರಡು ವಿಧೇಯಕವನ್ನು ಪ್ರಭಾರದಲ್ಲಿರುವ ಸಚಿವರು ಅನುಮೋದಿಸಿದರೆ, ಅದನ್ನು ಪರಿಶೀಲನಾ ಸಮಿತಿಯ ಮುಂದೆ ಮಂಡಿಸುವುದಕ್ಕೆ ಪರಿಶೀಲನಾ ಸಮಿತಿಯ ಕಾರ್ಯದರ್ಶಿಯವರಿಗೆ ಕಳುಹಿಸಿಕೊಡತಕ್ಕದ್ದು. ಪರಿಶೀಲನಾ ಸಮಿತಿಯು ಅನುಮೋದಿಸಿದ ತಾತ್ಕಾಲಿಕ ಕರಡು ವಿಧೇಯಕವನ್ನು ಮೂಲತ: ಅದನ್ನು ಸಿದ್ಧಪಡಿಸಿದ ಇಲಾಖೆಗೆ ಕಳುಹಿಸಿಕೊಡತಕ್ಕದ್ದು.
-
(1) ಆ ನಂತರ ಪರಿಶೀಲನಾ ಸಮಿತಿಯು ಅನುಮೋದಿಸಿದಂತೆ ತಾತ್ಕಾಲಿಕ ಕರಡು ವಿಧೇಯಕವನ್ನು ಹಣಕಾಸು ಜ್ಞಾಪನ ಪತ್ರ ಯಾವುದಾದರೂ ಇದ್ದರೆ, ಅದರೊಂದಿಗೆ ಇತರ ಮಂತ್ರಿಗಳಿಗೆ ಪರಿಚಲನೆ ಮಾಡತಕ್ಕದ್ದು ಹಾಗೂ ರಾಜ್ಯಪಾಲರಿಗೆ ಒಂದು ಪ್ರತಿಯನ್ನು ಒದಗಿಸತಕ್ಕದ್ದು. ಮತ್ತು ಮುಖ್ಯ ಮಂತ್ರಿಯವರು ಅನ್ಯಥಾ ನಿರ್ದೇಶನ ನೀಡಿದ ಹೊರತು, ತಾತ್ಕಾಲಿಕ ಕರಡು ವಿಧೇಯಕವನ್ನು ಸಚಿವ ಸಂಪುಟ ಸಭೆಯ ಮುಂದೆ ಮಂಡಿಸತಕ್ಕದ್ದು. ಕರಡು ವಿಧೇಯಕವನ್ನು ಅನುಮೋದಿಸಿದ ನಂತರ ಅದರಲ್ಲಿ ಯಾವುದೇ ಮಹತ್ವದ ಅಥವಾ ಪ್ರಮುಖ ತಿದ್ದುಪಡಿಗಳನ್ನು ಮಾಡುವಂತಹ ಪ್ರಸ್ತಾವಗಳ ಬಗ್ಗೆ ಅದೇ ರೀತಿಯಲ್ಲಿ ವ್ಯವಹರಿಸತಕ್ಕದ್ದು.
(2) (ಎ) ವಿಧಾನ ಮಂಡಲದಲ್ಲಿ ಮಂಡಿಸಲು ಉದ್ದೇಶಿಸಿರುವಂತಹ ವಿಧೇಯಕವು.-
(i) ಭಾರತ ಸಂವಿಧಾನದ ಏಳನೇ ಅನುಸೂಚಿಯ ಸಮವರ್ತಿ ಪಟ್ಟಿಯಲ್ಲಿನ ನಮೂದುಗಳಲ್ಲಿ
ಯಾವುದಕ್ಕಾದರೂ ಸಂಬಂಧಿಸಿದ ವಿಧೇಯಕವಾಗಿದ್ದರೆ; ಅಥವಾ
(ii) ಸಂವಿಧಾನದ 31 ನೇ ಅನುಚ್ಛೇಧದ (2)ನೇ ಖಂಡದ 31(ಎ) ಅನುಚ್ಛೇದದ (1)ನೇ ಖಂಡದ ಅಥವಾ 31(ಸಿ) ಅನುಚ್ಛೇದದ ಉಪಬಂಧಗಳು ಅನ್ವಯವಾಗುವಂಥ ಮತ್ತು ಅನುಕ್ರಮವಾಗಿ 31ನೇ ಅನುಚ್ಛೇದದ (3) ನೇ ಖಂಡದ, 31(ಸಿ) ಅನುಚ್ಚೇಧದ (1)ನೇ ಖಂಡದ ಪರಂತುಕದ ಮೇರೆಗೆ ರಾಷ್ಟ್ರಪತಿಯವರ ಸಮ್ಮತಿಗಾಗಿ ಅವರಿಗೆ ಸಲ್ಲಿಸಬೇಕಾದಂಥ ವಿಧೇಯಕವಾಗಿದ್ದರೆ; ಅಥವಾ
(iii) ಭೂ ಸುಧಾರಣೆ ಮೇಲಿನ ವಿಧೇಯಕವಾಗಿದ್ದರೆ;
ಮೂಲತಃ ಸಂಬಂಧಪಟ್ಟ ಆಡಳಿತ ಇಲಾಖೆಯು ಸಾಧ್ಯವಿರುವಲ್ಲೆಲ್ಲಾ, (1)ನೇ ಉಪನಿಯಮದಲ್ಲಿ ಸೂಚಿಸಿರುವ ಹಂತದ ನಂತರ ಪ್ರಸ್ತಾವಿತ ಶಾಸನವನ್ನು ಕುರಿತು ಭಾರತ ಸರ್ಕಾರದ ಗೃಹ ವ್ಯವಹಾರಗಳ ಮಂತ್ರಾಲಯದೊಂದಿಗೆ ಸಮಾಲೋಚಿಸತಕ್ಕದ್ದು.
(ಬಿ) ಕೇಂದ್ರ ಸರ್ಕಾರದ ಇಲಾಖೆಗಳಿಂದ ಪರಿಶೀಲನೆಗಾಗಿ ವಿಧೇಯಕವನ್ನು ಸ್ವೀಕರಿಸಿದ ದಿನಾಂಕದಿಂದ
ಕನಿಷ್ಠ ಪಕ್ಷ 15 ದಿವಸಗಳ ಅವಕಾಶವನ್ನು ಭಾರತ ಸರ್ಕಾರಕ್ಕೆ ನೀಡತಕ್ಕದ್ದು. ಭಾರತ ಸರ್ಕಾರಕ್ಕೆ
ವಿಧೇಯಕವನ್ನು ಕಳುಹಿಸಿಕೊಟ್ಟಿದ್ದಲ್ಲಿ, ವಿಧೇಯಕವನ್ನು ರಾಜ್ಯ ವಿಧಾನ ಮಂಡಲದಲ್ಲಿ
ಮಂಡಿಸುವುದಕ್ಕೆ ಮುಂಚೆ ಭಾರತ ಸರ್ಕಾರದ ಟೀಕೆ ಟಿಪ್ಪಣಿಗಳಿಗಾಗಿ ತಪ್ಪದೇ ಕಾಯತಕ್ಕದ್ದು.
(ಸಿ) ತುರ್ತಾಗಿ ಕ್ರಮ ತೆಗೆದುಕೊಳ್ಳಬೇಕಾದ ಅಗತ್ಯವಿದ್ದು ಪೂರ್ವ ಸಮಾಲೋಚನೆ ನಡೆಸಲು
ಸಾಧ್ಯವಿರದಂತಹ ಸಂದರ್ಭದಲ್ಲಿ ಮೇಲೆ ಹೇಳಿದ ಕಾರ್ಯವಿಧಾನವನ್ನು ಅನುಸರಿಸಬೇಕಾದ
ಅಗತ್ಯವಿಲ್ಲ. ಅಂತಹ ಪ್ರಕರಣಗಳಲ್ಲಿ ಸಾದ್ಯವಾದಷ್ಟು ಬೇಗನೆ ಆ ಸಂಗತಿಯನ್ನು ಭಾರತ ಸರ್ಕಾರಕ್ಕೆ
ತಿಳಿಸತಕ್ಕದ್ದು.
(3) ಸಮವರ್ತಿ ವಿಧಾಯೀ ಕ್ಷೇತ್ರದೊಳಗೆ ಬರುವ ಕಾನೂನುಗಳ ಅಥವಾ ಭಾರತ ಸಂವಿಧಾನದ 31ನೇ ಅನುಚ್ಛೇದದ (2) ನೇ ಖಂಡದ 31-ಎ ಅನುಚ್ಛೇದದ (1) ನೇ ಖಂಡದ ಮತ್ತು 31ಸಿ ಅನುಚ್ಛೇದದ ಉಪ ಬಂಧಗಳು ಅನ್ವಯವಾಗುವ ಕಾನೂನುಗಳ ಅಥವಾ ಭೂ ಸುಧಾರಣೆ ಮೇಲಿನ ಕಾನೂನುಗಳ ನಿರ್ವಹಣೆಯಲ್ಲಿ ಎದುರಾಗುವ ಯಾವುವೇ ತೊಂದರೆಗಳ ಬಗ್ಗೆ ಸಹ ಆಡಳಿತ ಇಲಾಖೆಯು ಭಾರತ ಸರ್ಕಾರಕ್ಕೆ ತಿಳಿಸತಕ್ಕದ್ದು.
(4) ವಿಧಾನ ಮಂಡಲದ ಉಭಯ ಸದನಗಳಲ್ಲಿ, ಯಾವುದರಲ್ಲಾದರೂ ಸದಸ್ಯರು ಸ್ವತಂತ್ರವಾಗಿ ಮಂಡಿಸಿದ (2)ನೇ ಉಪ ನಿಯಮದಲ್ಲಿ ತಿಳಿಸಿರುವ ಸ್ವರೂಪದ, ಮುಂದುವರಿಯುವ ಸಂಭವವಿರುವಂತಹ ವಿಧೇಯಕದ ಸಂಬಂಧದಲ್ಲಿ ಅದರ ಪ್ರತಿಗಳನ್ನು ವಿಧಾನ ಮಂಡಲದಲ್ಲಿ ವಿಧೇಯಕವನ್ನು ಮಂಡಿಸಿದ ನಂತರ ಅನುಕೂಲಕರವಾದ ಹಂತದಲ್ಲಿ ಭಾರತ ಸರ್ಕಾರದ ಗೃಹ ವ್ಯವಹಾರಗಳ ಮಂತ್ರಾಲಯಕ್ಕೆ ಕಳುಹಿಸಿಕೊಡತಕ್ಕದ್ದು. ಸಮಯಾವಕಾಶವಿದ್ದರೆ ಆಡಳಿತ ಇಲಾಖೆಯು ಅಂತಹ ವಿಧೇಯಕಗಳಿಗೆ ತಂದ ಎಲ್ಲ ತಿದ್ದುಪಡಿಗಳನ್ನು ಸಹ ಭಾರತ ಸರ್ಕಾರಕ್ಕೆ ತಿಳಿಸತಕ್ಕದ್ದು.
(5) ಭಾರತ ಸಂವಿಧಾನದ 304ನೇ ಅನುಚ್ಛೇಧದ (ಬಿ) ಖಂಡದ ಪರಂತುಕದ ಮೇರೆಗೆ ರಾಷ್ಟ್ರಪತಿಯವರ ಪೂರ್ವ ಮಂಜೂರಾತಿ ಅಗತ್ಯವಿರುವ ವಿಧೇಯಕದ ಸಂದರ್ಭದಲ್ಲಿ ಮೂಲತ: ಸಂಬಂಧಪಟ್ಟ ಆಡಳಿತ ಇಲಾಖೆಯು ಅದನ್ನು ಭಾರತ ಸರ್ಕಾರದ ಗೃಹ ವ್ಯವಹಾರಗಳ ಮಂತ್ರಾಲಯಕ್ಕೆ ಕಳುಹಿಸಿಕೊಡತಕ್ಕದ್ದು ಮತ್ತು ಅಂತಹ ಪ್ರಸ್ತಾವಗಳನ್ನು ವಿಧಾನ ಮಂಡಲದ ಅಧಿವೇಶನ ಸೇರಲು ಗೊತ್ತುಪಡಿಸಿದ ದಿನಾಂಕಕ್ಕೆ ಕನಿಷ್ಠ ಮೂರು ವಾರ ಮೊದಲು ಕಳುಹಿಸಿಕೊಡತಕ್ಕದ್ದು.
(6) (2)ನೇ ಉಪ ನಿಯಮದ ಮೇರೆಗೆ ಭಾರತ ಸರ್ಕಾರದೊಂದಿಗೆ ಸಮಾಲೋಚಿಸಿದಾಗ ಅಥವಾ (4)ನೇ ಅಥವಾ (5)ನೇ ಉಪ ನಿಯಮದ ಮೇರೆಗೆ ಭಾರತ ಸರ್ಕಾರಕ್ಕೆ ವಿಧೇಯಕವನ್ನು ಕಳುಹಿಸಿಕೊಟ್ಟಾಗ ಮೂಲತ: ಸಂಬಂಧಪಟ್ಟ ಆಡಳಿತ ಇಲಾಖೆಯು ಕೇಂದ್ರ ಸರ್ಕಾರಕ್ಕೆ ವಿಧೇಯಕವನ್ನು ರವಾನಿಸುವ ಪತ್ರದ 6 ಪ್ರತಿಗಳನ್ನು ಹಾಗೂ ವಿಧೇಯಕದ 6 ಪ್ರತಿಗಳಿಗೆ ಕಡಿಮೆ ಇಲ್ಲದಷ್ಟು ಪ್ರತಿಗಳನ್ನು ಉದ್ದೇಶಗಳು ಮತ್ತು ಕಾರಣಗಳ ಹೇಳಿಕೆಯೊಂದಿಗೆ ಭಾರತ ಸರ್ಕಾರಕ್ಕೆ ಕಳುಹಿಸಿಕೊಡತಕ್ಕದ್ದು. ಒಂದು ವೇಳೆ ಪ್ರಸ್ತಾವಿತ ಶಾಸನವು ತಿದ್ದುಪಡಿ ಮಾಡುವ ವಿಧೇಯಕವಾಗಿದ್ದಲ್ಲಿ, ಮೂಲ ಅಧಿನಿಯಮದ ತಹಲ್ವರೆಗೆ ಪರಿಷ್ಕರಿಸಿದ ಆರು ಪ್ರತಿಗಳನ್ನು, ಪ್ರಸ್ತಾವಿತ ಶಾಸನದ ಖಂಡಗಳ ಮೇಲಿನ ಟಿಪ್ಪಣಿಗಳನ್ನು, ಸಂಬಂಧಪಟ್ಟ ಪ್ರತಿಯೊಂದು ಖಂಡವನ್ನು ಅದು ಇರುವಂತೆ ಹಾಗೂ ಉದ್ದೇಶಿತ ತಿದ್ದುಪಡಿಯ ನಂತರ ಅದು ಇರುವ ರೀತಿಯನ್ನು ತೋರಿಸಿರುವ ತೌಲನಿಕ ತ:ಖ್ತೆಯನ್ನು ಹಾಗೂ ಈ ಮುಂದಿನ ನಮೂನೆಯಲ್ಲಿ ಒಂದು ಪ್ರಮಾಣ ಪತ್ರವನ್ನು ಭಾರತ ಸರ್ಕಾರಕ್ಕೆ ಕಳುಹಿಸಿಕೊಡತಕ್ಕದ್ದು.
ರಾಷ್ಟ್ರಪತಿಯವರ ಪೂರ್ವಾನುಮೋದನೆಗಾಗಿ ಕಳುಹಿಸಿದ ವಿಧೇಯಕದ / ಅಧ್ಯಾದೇಶದ ಮತ್ತು ಅವರ ಪೂರ್ವ ಮಂಜೂರಾತಿಗೆ ಕಳುಹಿಸಿದ ವಿಧೇಯಕದ ಸಂದರ್ಭದಲ್ಲಿ ಪ್ರಮಾಣಪತ್ರ.
*ವಿಷಯ:-
ಮೇಲೆ ತಿಳಿಸಿದ ಶಾಸನದ ಪ್ರಸ್ತಾವದ ಸಂಬಂಧದಲ್ಲಿ ಈ ಮುಂದಿನ ದಸ್ತಾವೇಜುಗಳನ್ನು ಇದಕ್ಕೆ ಲಗತ್ತಿಸಲಾಗಿದೆಯೆಂದು ಪ್ರಮಾಣೀಕರಿಸಲಾಗಿದೆ.
-
ಪ್ರಸ್ತಾವಿತ ಕರಡು ಶಾಸನವನ್ನು ರವಾನಿಸಿದ ರಾಜ್ಯ ಸರ್ಕಾರದ ಪತ್ರದ ಆರು ಪ್ರತಿಗಳು.
-
ಪ್ರಸ್ತಾವಿತ ಶಾಸನದ ಆರು ಪ್ರತಿಗಳು, ಪ್ರಸ್ತಾವಿತ ಶಾಸನದ ಉದ್ದೇಶಗಳು ಮತ್ತು ಕಾರಣಗಳ ಹೇಳಿಕೆಯ ಅಷ್ಟೇ ಪ್ರತಿಗಳೊಂದಿಗೆ.
-
ಪ್ರಸ್ತಾವಿತ ಶಾಸನವು ತಿದ್ದುಪಡಿ ಮಾಡುವ ಶಾಸನವಾಗಿದೆ. ಆದ್ದರಿಂದ ಮೂಲ ಅಧಿನಿಯಮದ ತಹಲ್ವರೆಗೆ ಪರಿಷ್ಕರಿಸಿದ 6 ಪ್ರತಿಗಳನ್ನು ಪ್ರಸ್ತಾವಿತ ಶಾಸನದ ಖಂಡಗಳ ಮೇಲಿನ ಟಿಪ್ಪಣಿಯನ್ನು ಹಾಗೂ ಪ್ರತಿಯೊಂದು ಸಂಬಂಧಪಟ್ಟ ಖಂಡವನ್ನು ಅದು ಈಗಿರುವಂತೆ ಹಾಗೂ ಪ್ರಸ್ತಾವಿತ ತಿದ್ದುಪಡಿಯ ನಂತರ ಅದು ಇರುವಂತೆ ತೋರಿಸಿರುವ ಒಂದು ತೌಲನಿಕ ವಿವರಣಾ ಪಟ್ಟಿಯನ್ನು ಸಹ ಲಗತ್ತಿಸಲಾಗಿದೆ.
(ಸಹಿ)
ಟಿಪ್ಪಣಿ: * ದಯವಿಟ್ಟು ಪ್ರಸ್ತಾವಿತ ಶಾಸನದ ದೀರ್ಘ ಶೀರ್ಷಿಕೆ ನೀಡಿ.
- ಪ್ರಸ್ತಾವವನ್ನು ಯಾರ ಸಹಿಯಲ್ಲಿ ಕಳುಹಿಸಲಾಗಿದೆಯೋ ಆ ಅಧಿಕಾರಿಯು
ಪ್ರಮಾಣ ಪತ್ರಕ್ಕೆ ಸಹಿ ಮಾಡಬೇಕು.
(7) ಸಂವಿಧಾನದ 213 (1) ನೇ ಅನುಚ್ಛೇದದ ಪರಂತುಕದ ಮೇರೆಗೆ ರಾಷ್ಟ್ರಪತಿಯವರ ಪೂರ್ವ ಸೂಚನೆಗಳು ಅಗತ್ಯವಿರುವ ಅಧ್ಯಾದೇಶಗಳ ಸಂಬಂಧದಲ್ಲಿ, (2), (5) ಮತ್ತು (6)ನೇ ಉಪ ನಿಯಮಗಳ ಉಪಬಂಧಗಳನ್ನು ಯಥೋಚಿತ ವ್ಯತ್ಯಾಸಗಳೊಂದಿಗೆ ಅನ್ವಯಿಸತಕ್ಕದ್ದು. ಅಲ್ಲದೆ, ಪ್ರಸ್ತಾವಿತ ಅಧ್ಯಾದೇಶವನ್ನು ಉದ್ಘೋಷಿಸಬೇಕಾದ ಅಗತ್ಯವನ್ನು ಅದರಿಂದ ಸಾಧಿಸಬಯಸಿರುವ ಉದ್ದೇಶವನ್ನು ಮತ್ತು ಯಾವ ನಿರ್ದಿಷ್ಟ ಆಧಾರದ ಮೇಲೆ ರಾಷ್ಟ್ರಪತಿಯವರ
ಸೂಚನೆಗಳನ್ನು ಪಡೆಯುವುದು ಅವಶ್ಯವೆಂದು ಪರಿಗಣಿಸಲಾಗಿದೆಯೋ ಆ ನಿರ್ದಿಷ್ಟ ಆಧಾರವನ್ನು ಭಾರತ ಸರ್ಕಾರಕ್ಕೆ ತಿಳಿಸತಕ್ಕದ್ದು. ಅಂತಹ ಸೂಚನೆಗಳನ್ನು ನೀಡುವುದನ್ನು ಅಗತ್ಯವಾಗಿಸುವಂತಹ ಸಂವಿಧಾನದ ಸಂಬಂಧಪಟ್ಟ ಅನುಚ್ಛೇಧಗಳನ್ನು ಸಹ ಸೂಚಿಸತಕ್ಕದ್ದು.
- ವಿಧೇಯಕವನ್ನು ತಿದ್ದುಪಡಿಗಳೊಂದಿಗೆ ಅಥವಾ ತಿದ್ದುಪಡಿಗಳಿಲ್ಲದೆ ಮುಂದುವರಿಸಲು ನಿರ್ಧರಿಸಿದಲ್ಲಿ, ಮೂಲ
1
ಇಲಾಖೆಯು, [ಸಂಸದೀಯ ವ್ಯವಹಾರಗಳ ಮತ್ತು ಶಾಸನ ರಚನೆ ಇಲಾಖೆ] ಯನ್ನು ವಿಧೇಯಕದ ಅಂತಿಮ ಕರಡನ್ನು
ಸಿದ್ಧಪಡಿಸುವಂತೆ ಕೋರುವ ಅಗತ್ಯ ಸೂಚನೆಗಳೊಂದಿಗೆ ಆ ಪ್ರಕರಣವನ್ನು ಆ ಇಲಾಖೆಗೆ ಕಳುಹಿಸಿಕೊಡತಕ್ಕದ್ದು.
1
-
ತರುವಾಯ [ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ]ಯು ಅಗತ್ಯವೆನಿಸಿದರೆ ಆ ಕರಡನ್ನು ಪರಿಶೀಲನಾ ಸಮಿತಿಯ ಮುಂದೆ ಮತ್ತೆ ಮಂಡಿಸಿದ ನಂತರ ಅಂತಿಮಗೊಳಿಸಿ ವಿಧೇಯಕಕ್ಕೆ ಮಂಜೂರಾತಿ ಏನಾದರೂ ಅಗತ್ಯವಿದ್ದರೆ ಅದನ್ನು ಸೂಚಿಸಿ ಅವಶ್ಯವಿರುವಲ್ಲೆಲ್ಲ ವಿಧೇಯಕದ ಮುಖ್ಯವಾದ ಖಂಡಗಳನ್ನು ಒಳಗೊಳ್ಳುವ ಖಂಡಗಳ ಮೇಲೆ ಟಿಪ್ಪಣಿಗಳೊಂದಿಗೆ ಮೂಲ ಇಲಾಖೆಗೆ ಕರಡು ವಿಧೇಯಕವನ್ನು ಕಳುಹಿಸತಕ್ಕದ್ದು. ರಾಜ್ಯದ ಸಂಚಿತ ನಿಧಿಯಿಂದ ಖರ್ಚು ಮಾಡುವುದನ್ನು ಒಳಗೊಂಡ ವಿಧೇಯಕದಲ್ಲಿ ಯಾವುವೇ ಉಪಬಂಧಗಳನ್ನು ಅಂತಿಮ ಕರಡಿನಲ್ಲಿ ಮಾರ್ಪಾಡು ಮಾಡಿದ್ದರೆ ಇಲಾಖೆಯು ಅಗತ್ಯವಾದರೆ ಹಣಕಾಸು ಜ್ಞಾಪನಪತ್ರವನ್ನು ಪರಿಷ್ಕರಿಸುವುದಕ್ಕಾಗಿ ಅಂತಿಮಗೊಳಿಸಿದ ಕರಡು ವಿಧೇಯಕವನ್ನು ಹಣಕಾಸು ಇಲಾಖೆಗೆ ಕಳುಹಿಸತಕ್ಕದ್ದು.
-
ತರುವಾಯ ಮೂಲ ಇಲಾಖೆಯು ವಿಧಾನ ಪರಿಷತ್ತು ಅಥವಾ ವಿಧಾನ ಸಭೆಯ ನಿಯಮಗಳ ಅನುಸಾರವಾಗಿ ಅದರಲ್ಲಿ ಅಂತಿಮ ಕರಡು ವಿಧೇಯಕವನ್ನು ಮಂಡಿಸುವುದಕ್ಕೆ ಸಂಬಂಧಿಸಿದ ಸೂಚನೆಗಳು ಸೇರಿದಂತೆ ಅದರ ಮೇಲೆ ಸರ್ಕಾರದ ಸೂಚನೆಗಳೊಂದಿಗೆ ಹಾಗೂ ವಿಧಾನ ಪರಿಷತ್ತು ಮತ್ತು ವಿಧಾನಸಭೆಗೆ ತಿಳಿಸಬೇಕಾದಂತಹ ಪ್ರಭಾರದಲ್ಲಿರುವ ಸಚಿವರು ಸಹಿ ಮಾಡಿರುವಂತಹ ಉದ್ದೇಶಗಳ ಮತ್ತು ಕಾರಣಗಳ ಹೇಳಿಕೆಯ ಪ್ರತಿಗಳು ಸೇರಿದಂತೆ ವಿಧೇಯಕಕ್ಕೆ 1 ಸಂಬಂಧಿಸಿದಂತಹ ಕಾಗದ ಪತ್ರಗಳ ಪ್ರತಿಗಳೊಂದಿಗೆ [ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ]ಗೆ 1 ವರ್ಗಾಯಿಸತಕ್ಕದ್ದು. ಹಾಗೇ ವರ್ಗಾಯಿಸಿದ ನಂತರ ಆ ವಿಧೇಯಕವು [ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ ] ಗೆ ಸೇರಿದ್ದೆಂದು ಭಾವಿಸತಕ್ಕದ್ದು.
-
47ನೇ ನಿಯಮದಲ್ಲಿ ಏನೇ ಒಳಗೊಂಡಿದ್ದರೂ, ನಿರಸನಗೊಳಿಸುವ ಮತ್ತು ತಿದ್ದುಪಡಿ ಮಾಡುವ ವಿಧೇಯಕಗಳಂಥ ವಿದ್ಯುಕ್ತ ಸ್ವರೂಪದ ಈಗಿರುವ ಅಧಿನಿಯಮಿತಿಗಳು ಮತ್ತು ಶಾಸನವನ್ನು ಕ್ರೋಢೀಕರಿಸುವ ಮತ್ತು 1 ಒಗ್ಗೂಡಿಸುವ ಏಕೈಕ ಉದ್ದೇಶದಿಂದ ರೂಪಿಸಲಾದ ಕ್ರಮಗಳನ್ನು [ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ] ಯು ಪ್ರಾರಂಭಿಸಬಹುದು.
1
ಪರಂತು, [ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ]ಯು ತಯಾರಿಸಿದ ಕರಡು ವಿಧೇಯಕದ ಪ್ರತಿಯನ್ನು ಯಾವ ಇಲಾಖೆಯ ವಸ್ತು ವಿಷಯಕ್ಕೆ ಅದು ಸಂಬಂಧಪಟ್ಟಿದೆಯೋ ಆ ಇಲಾಖೆಗೆ, ಆಡಳಿತಾತ್ಮಕ ಕ್ರಮವೆಂದು ಪರಿಶೀಲನೆಗಾಗಿ ಕಳುಹಿಸತಕ್ಕದ್ದು ಮತ್ತು ಯಾವ ಇಲಾಖೆಗೆ ಅದನ್ನು ಕಳುಹಿಸಲಾಗಿದೆಯೋ ಆ ಇಲಾಖೆಯು ತಾನು ಯುಕ್ತವೆಂದು ಭಾವಿಸುವಂತಹ ವಿಚಾರಣೆಗಳನ್ನು ಕೂಡಲೇ ಮಾಡತಕ್ಕದ್ದು ಮತ್ತು ಆ ವಿಷಯದ ಬಗ್ಗೆ ತಾನು 1 ಸ್ವೀಕರಿಸಿದ ಪ್ರತಿಯೊಂದು ಕಾಗದ ಪತ್ರದ ಪ್ರತಿಯೊಂದಿಗೆ [ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ]ಗೆ ಅದರ ಅಭಿಪ್ರಾಯಕ್ಕಾಗಿ ಕಳುಹಿಸತಕ್ಕದ್ದು.
-
(1) ರಾಜ್ಯ ವಿಧಾನ ಮಂಡಲದ ಸದಸ್ಯನು ಸ್ವತಂತ್ರವಾಗಿ ವಿಧೇಯಕವನ್ನು ಮಂಡಿಸಲು ಅನುಮತಿಗಾಗಿ ತನ್ನ ಆಶಯದ ನೋಟೀಸನ್ನು ನೀಡಿದಾಗಲ್ಲೆಲ್ಲ, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ]ಯು, ವಿಧಾನ ಮಂಡಲದ ಕಾರ್ಯದರ್ಶಿಯಿಂದ, ಆ ಸಂಗತಿ ಕುರಿತ ಸೂಚನೆಯನ್ನು ಸ್ವೀಕರಿಸಿದ ಕೂಡಲೇ, ವಿಧೇಯಕದ ಮತ್ತು ಉದ್ದೇಶ ಮತ್ತು ಕಾರಣಗಳ ಹೇಳಿಕೆಯ ಒಂದು ಪ್ರತಿಯನ್ನು ಮುಖ್ಯ ಮಂತ್ರಿಗಳಿಗೆ ಮತ್ತು ಪ್ರಕರಣವು ಯಾವ ಇಲಾಖೆಗೆ ಸಂಬಂಧಿಸಿದೆಯೋ ಆ ಇಲಾಖೆಗೆ ಮಾಹಿತಿಗಾಗಿ ಕಳುಹಿಸತಕ್ಕದ್ದು.
-
ಅಧಿಸೂಚನೆ ಸಂ: ಡಿಸಿಎ 1 ಎಆರ್ಬಿ 96, ದಿನಾಂಕ: 22.1.96 ಕೆಜಿಡಿಇಎಕ್ಸ್ 24.1.96 ರ ಮೂಲಕ ಪ್ರತಿಯೋಜಿಸಲಾಗಿದೆ.
(2) ಮೊದಲನೆಯದಾಗಿ, [ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ] ಯು ವಿಧೇಯಕವನ್ನು ಒಂದು ಪ್ರಕರಣವನ್ನಾಗಿ ಪರಿಗಣಿಸತಕ್ಕದ್ದು. ನಂತರ ಅಗತ್ಯವಾದ ತಾಂತ್ರಿಕ ಅಂಶಗಳಾದ, ರಾಷ್ಟ್ರಪತಿಗಳ ಪೂರ್ವ ಮಂಜೂರಾತಿ ಮತ್ತು ಸೂಚಿತ ವಿಧೇಯಕವನ್ನು ಅಧಿನಿಯಮಿತಿಗೊಳಿಸಲು ರಾಜ್ಯ ವಿಧಾನ ಮಂಡಲದ ಸಕ್ಷಮತೆಯನ್ನು ಪರಿಗಣಿಸತಕ್ಕದ್ದು, ಮತ್ತು ತನ್ನ ಅಭಿಪ್ರಾಯದೊಂದಿಗೆ ಪ್ರಕರಣವು ಯಾವ ಇಲಾಖೆಗೆ ಸಂಬಂಧಪಟ್ಟಿದೆಯೋ ಆ ಇಲಾಖೆಗೆ ಕಳುಹಿಸತಕ್ಕದ್ದು.
(3) ಅಂತಹ ವಿಧೇಯಕದ ಯಾವುದಾದರೂ ಒಂದು ಉಪಬಂಧವು ರಾಜ್ಯದ ಸಂಚಿತ ನಿಧಿಯಿಂದ ವೆಚ್ಚ ಭರಿಸುವುದನ್ನು ಒಳಗೊಂಡಿದ್ದರೆ, ಇಲಾಖೆಯು, ವಿಧೇಯಕವನ್ನು ಪರಿಚಲನೆಗೊಳಿಸುವ ಮುನ್ನ ಆರ್ಥಿಕ ಇಲಾಖೆಯೊಂದಿಗೆ ಸಮಾಲೋಚಿಸಿ ವಿಧೇಯಕದ ಸಂಬಂಧದಲ್ಲಿ ಒಂದು ಅರ್ಥಿಕ ಜ್ಞಾಪನ ಪತ್ರವನ್ನು ಸಿದ್ಧಪಡಿಸತಕ್ಕದ್ದು.
-
ಆಯ್ಕೆ ಸಮಿತಿಯು ಶಿಫಾರಸ್ಸು ಮಾಡಿರುವ ವಿಷಯದ ತಿದ್ದುಪಡಿಗಳಿಗೆ ಹಾಗೂ ರಾಜ್ಯ ವಿಧಾನ ಮಂಡಲದ ಸದಸ್ಯರು ನೀಡಿರುವ ಎಲ್ಲ ತಿದ್ದುಪಡಿ ನೋಟೀಸಿಗೆ, ಆ ವಿಧಾನ ಮಂಡಲದಲ್ಲಿ ವಿಧೇಯಕವನ್ನು ಪರಿಗಣಿಸುವ ಸಮಯದಲ್ಲಿ ಮಂಡಿಸುವುದಕ್ಕಾಗಿ ಸಾಧ್ಯವಾದಷ್ಟು ಮಟ್ಟಿಗೆ 58ನೇ ನಿಯಮದ ಉಪಬಂಧಗಳು ಅನ್ವಯಿಸತಕ್ಕದ್ದು.
-
2 [“(1) ವಿಧಾನ ಮಂಡಲದ ಉಭಯ ಸದನಗಳಲ್ಲಿ ವಿಧೇಯಕವನ್ನು ಅಂಗೀಕರಿಸಿದಾಗ, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯಲ್ಲಿ ಪರಿಶೀಲಿಸತಕ್ಕದ್ದು ಮತ್ತು ರಾಜ್ಯಪಾಲರು ವಿಧೇಯಕಕ್ಕೆ ಏಕೆ ತಮ್ಮ ಒಪ್ಪಿಗೆಯನ್ನು ಘೋಷಿಸಬಹುದು ಅಥವಾ ರಾಜ್ಯಪಾಲರು ಏಕೆ ವಿಧೇಯಕವನ್ನು ಭಾರತದ ರಾಷ್ಟ್ರಪತಿಯವರ ಪರಿಶೀಲನೆಗಾಗಿ ಕಾಯ್ದಿರಿಸಬಹುದು ಎಂಬುದಕ್ಕೆ ಯಾವುದಾದರೂ ಕಾರಣವಿದ್ದಲ್ಲಿ, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯ ಕಾರ್ಯದರ್ಶಿಯವರ ವರದಿಯೊಂದಿಗೆ ರಾಜ್ಯಪಾಲರಿಗೆ ಕಳುಹಿಸತಕ್ಕದ್ದು.”]
(2) ವಿಧೇಯಕವನ್ನು ರಾಷ್ಟ್ರಪತಿಯವರ ಪರಿಶೀಲನೆಗಾಗಿ ಕಾಯ್ದಿರಿಸಬೇಕೆಂದು ರಾಜ್ಯಪಾಲರು ನಿರ್ದೇಶಿಸಿದಾಗ
1
ಅಥವಾ ಸಂದೇಶದೊಡನೆ ವಿಧಾನ ಮಂಡಲಕ್ಕೆ ಅದನ್ನು ಹಿಂದಿರುಗಿಸಿದಾಗ, [ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆಯು] ಆ ಸಂಬಂಧ, ಆಡಳಿತಾತ್ಮಕ ಇಲಾಖೆಯೊಂದಿಗೆ ಸಮಾಲೋಚಿಸಿ ಸೂಕ್ತ ಕ್ರಮವನ್ನು ಕೈಗೊಳ್ಳತಕ್ಕದ್ದು.
(3) ಭಾರತ ಸಂವಿಧಾನದ 254ನೇ ಅನುಚ್ಛೇದದ (2)ನೇ ಖಂಡದ ಉಪಬಂಧಗಳು ಅನ್ವಯವಾಗುವ ವಿಧೇಯಕದ ಸಂದರ್ಭದಲ್ಲಿ, ರಾಷ್ಟ್ರಪತಿಯವರ ಸಮ್ಮತಿ ಪಡೆಯಲು ಭಾರತ ಸರ್ಕಾರಕ್ಕೆ ಬರೆದ ಪತ್ರದಲ್ಲಿ, ಸಮವರ್ತಿ ಪಟ್ಟಿಯಲ್ಲಿ ನಮೂದಿಸಿರುವ ವಿಷಯದ ಮೇಲೆ ಈಗಿರುವ ಕೇಂದ್ರ ಕಾನೂನುಗಳಲ್ಲಿ ಇರುವ ವಿರುದ್ಧದ ವ್ಯಾಪ್ತಿ ಮತ್ತು ಇತರ ಬೇರೆ ಯಾವುದಾದರೂ ಕಾರಣಕ್ಕೆ ರಾಷ್ಟ್ರಪತಿಗಳ ಸಮ್ಮತಿಗಾಗಿ ಕಾಯ್ದಿರಿಸಿದ ವಿಧೇಯಕದ ಸಂದರ್ಭದಲ್ಲಿ, ಯಾವ ಕಾರಣಕ್ಕಾಗಿ ಆ ವಿಧೇಯಕವನ್ನು ರಾಷ್ಟ್ರಪತಿಗಳ ಸಮ್ಮತಿಗಾಗಿ ಕಾಯ್ದಿರಿಸಲಾಗಿದೆ ಎಂಬುದರ ಬಗ್ಗೆ ಸಂವಿಧಾನಕ್ಕೆ ಸಂಬಂಧಿಸಿದ ಉಪಬಂಧವನ್ನು ನಿರ್ದಿಷ್ಟವಾಗಿ ಉದ್ಧರಿಸುವ ಮೂಲಕ, ಸದರಿ ವಿಧೇಯಕವನ್ನು ರಾಜ್ಯ ವಿಧಾನ ಮಂಡಲದಲ್ಲಿ ಮಂಡಿಸುವ ಮೊದಲು ಕೇಂದ್ರ ಸರ್ಕಾರದ ಅನುಮೋದನೆಗಾಗಿ ಕಳುಹಿಸಲಾಗಿದೆಯೇ ಮತ್ತು ಕಳುಹಿಸಿದ್ದರೆ ಗೃಹ ಮಂತ್ರಾಲಯವು ಸದರಿ ವಿಧೇಯಕದ ಬಗ್ಗೆ ನೀಡಿರುವ ಸಲಹೆಗಳಲ್ಲಿ ಅಥವಾ ಅಭಿಪ್ರಾಯಗಳಲ್ಲಿ ಯಾವ ಸಲಹೆಗಳನ್ನು ಅಥವಾ ಅಭಿಪ್ರಾಯಗಳನ್ನು, ಬದಲಾವಣೆಗಳೊಂದಿಗೆ ಅಥವಾ ಬದಲಾವಣೆಗಳಿಲ್ಲದೆ ಅಳವಡಿಸಿಕೊಳ್ಳಲಾಗಿದೆಯೇ ಮತ್ತು ಯಾವ ಸಲಹೆಗಳನ್ನು ಅಥವಾ ಅಭಿಪ್ರಾಯಗಳನ್ನು ಅಳವಡಿಸಿಕೊಂಡಿಲ್ಲ, ಅದಕ್ಕೆ ಕಾರಣಗಳೇನು ಇವುಗಳ ಬಗ್ಗೆ ಸ್ಪಷ್ಟವಾಗಿ ನಮೂದಿಸತಕ್ಕದ್ದು. ಇತರ ಶಾಸನಾತ್ಮಕ ಪ್ರಸ್ತಾವನೆಗಳ ಬಗ್ಗೆಯೂ ಉದಾ: ರಾಷ್ಟ್ರಪತಿಯವರಿಂದ ಈ ಹಿಂದೆ ಸೂಚನೆಗಳನ್ನು ಪಡೆದಿರುವ ಅಧ್ಯಾದೇಶವನ್ನು ಬದಲಿಸಲು ಒಂದು ವಿಧೇಯಕವನ್ನು ಕಳುಹಿಸಿದಾಗ ಇದೇ ರೀತಿಯ ಕ್ರಮವನ್ನು ತೆಗೆದುಕೊಳ್ಳತಕ್ಕದ್ದು. ಭಾರತ ಸರ್ಕಾರಕ್ಕೆ ಬರೆದ ಪತ್ರದ ಆರು ಪ್ರತಿಗಳು, ಪಾರ್ಚ್ಮೆಂಟ್ ಕಾಗದದ ಮೇಲೆ ಮುದ್ರಿಸಲಾದ ಹಾಗೂ ಪ್ರತಿಯೊಂದು ಪುಟದಲ್ಲೂ ‘‘ವಿಧೇಯಕವನ್ನು ರಾಷ್ಟ್ರಪತಿಯವರ ಸಮ್ಮತಿಗಾಗಿ ಕಾಯ್ದಿರಿಸಲಾಗಿದೆ'' ಎಂಬ ರಾಜ್ಯಪಾಲರು ಹಿಂಬರಹ ಮಾಡಿರುವ, ಹಾಗೂ ರಾಜ್ಯಪಾಲರ ಸಹಿಯ ಕೆಳಗೆ ರಾಷ್ಟ್ರಪತಿಯವರು ಸೂಕ್ತ ಹಿಂಬರಹ ಮಾಡಲು ಸಾಕಷ್ಟು ಸ್ಥಳಾವಕಾಶವನ್ನು ಬಿಟ್ಟಿರುವ ಮೂರು ಅಧಿಕೃತ ಪ್ರತಿಗಳನ್ನು, ವಿಧಾನ ಮಂಡಲದಿಂದ ಅಂಗೀಕೃತವಾದ ರೂಪದಲ್ಲಿ ವಿಧೇಯಕದ ಇತರ ಆರು ಪ್ರತಿಗಳನ್ನು, ವಿಧೇಯಕದ ಉದ್ದೇಶ ಮತ್ತು ಕಾರಣಗಳ ಹೇಳಿಕೆಯೊಂದಿಗೆ ಮಂಡಿಸಲಾದ
- ಅಧಿಸೂಚನೆ ಸಂ: ಡಿಸಿಎ 1 ಎಆರ್ಬಿ 96, ದಿನಾಂಕ: 22.1.96 ಕೆಜಿಡಿಎಕ್ಸ್ 24.1.96ರ ಮೂಲಕ ಪ್ರತಿಯೋಜಿಸಲಾಗಿದೆ. 2. ಅಧಿಸೂಚನೆ ಸಂ: ಡಿಸಿಎ 11 ಎಆರ್ಬಿ 2010, ದಿನಾಂಕ: 23.6.2011 ರ ಮೂಲಕ ಪ್ರತಿಯೋಜಿಸಲಾಗಿದೆ.
ವಿಧೇಯಕದ ಆರು ಪ್ರತಿಗಳನ್ನು, ವಿಧಾನ ಮಂಡಲದ ಆಯ್ಕೆ ಸಮಿತಿಯ ವರದಿ, ಇದ್ದಲ್ಲಿ, ಆ ಸಮಿತಿಯು ಅನುಮೋದಿಸಿದ ವಿಧೇಯಕದ ಮೂರು ಪ್ರತಿಗಳೊಂದಿಗೆ, ಮತ್ತು ಶಾಸನವು ತಿದ್ದುಪಡಿ ವಿಧೇಯಕವಾಗಿದ್ದಲ್ಲಿ, ಅಂದಂದಿನವರೆಗೆ ಸಿದ್ಧಪಡಿಸಿದ ಮೂಲ ಅಧಿನಿಯಮದ ಆರು ಪ್ರತಿಗಳು ಪ್ರಸ್ತಾವಿಸಲಾಗಿರುವ ಶಾಸನದ ಖಂಡಗಳ ಮೇಲಿನ ಟಿಪ್ಪಣಿಗಳು, ಪ್ರಸ್ತುತ ಇರುವಂತೆ ಪ್ರತಿಯೊಂದು ಸಂಬಂಧಪಟ್ಟ ಖಂಡವನ್ನು ಮತ್ತು ಪ್ರಸ್ತಾವಿಸಲಾಗಿರುವ ತಿದ್ದುಪಡಿಯಾದ ನಂತರ ಅದು ಹೇಗೆ ಇರುತ್ತದೆ ಎಂಬುದನ್ನು ತೋರಿಸುವ ತುಲನಾತ್ಮಕ ವಿವರ ಪಟ್ಟಿಯನ್ನು ಮತ್ತು ಕೆಳಗೆ ನೀಡಲಾಗಿರುವ ನಮೂನೆಯಲ್ಲಿ ಒಂದು ಪ್ರಮಾಣಪತ್ರವನ್ನು, ಭಾರತ ಸರ್ಕಾರಕ್ಕೆ ರಾಷ್ಟ್ರಪತಿಯವರ ಸಮ್ಮತಿ ಪಡೆಯಲು, ಭಾರತ ಸರ್ಕಾರಕ್ಕೆ ಬರೆದಿರುವ ಪತ್ರದೊಂದಿಗೆ ಕಳುಹಿಸತಕ್ಕದ್ದು.
ರಾಷ್ಟ್ರಪತಿಯವರ ಸಮ್ಮತಿಯನ್ನು ಪಡೆಯಲು ಕಳುಹಿಸಿರುವ ವಿಧೇಯಕದ ಸಂಬಂಧದಲ್ಲಿ ಪ್ರಮಾಣಪತ್ರ.
*ವಿಷಯ:-
ಮೇಲೆ ತಿಳಿಸಿದ ಶಾಸನದ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ಈ ಮುಂದಿನ ದಸ್ತಾವೇಜುಗಳನ್ನು ಲಗತ್ತಿಸಲಾಗಿದೆಯೆಂದು ಪ್ರಮಾಣೀಕರಿಸಲಾಗಿದೆ.
-
ಪ್ರಸ್ತಾವಿತ ಕರಡು ಶಾಸನವನ್ನು ರವಾನಿಸುವ ರಾಜ್ಯ ಸರ್ಕಾರದ ಪತ್ರದ ಆರು ಪ್ರತಿಗಳು
-
ಪ್ರತಿಯೊಂದು ಪ್ರತಿಯಲ್ಲೂ ರಾಜ್ಯಪಾಲರು ಶಾಸನವನ್ನು ರಾಷ್ಟ್ರಪತಿಯವರ ಪರಿಶೀಲನೆಗಾಗಿ ಕಾಯ್ದಿರಿಸಲಾಗಿದೆ ಎಂಬ ಹಿಂಬರಹದೊಂದಿಗೆ ರಾಜ್ಯಪಾಲರ ಸಹಿಯ ಕೆಳಗೆ ರಾಷ್ಟ್ರಪತಿಯವರು ಸೂಕ್ತ ಹಿಂಬರಹ ಮಾಡಲು ಸಾಕಷ್ಟು ಸ್ಥಳವನ್ನು ಬಿಟ್ಟು ಪಾರ್ಚ್ಮೆಂಟ್ ಕಾಗದದ ಮೇಲೆ ಮುದ್ರಿಸಿರುವ ಶಾಸನದ ಮೂರು ಪ್ರಮಾಣೀಕೃತ ಪ್ರತಿಗಳು.
-
ರಾಜ್ಯ ವಿಧಾನ ಮಂಡಲವು ಅಂಗೀಕರಿಸಿದಂತೆ ವಿಧೇಯಕದ ಇತರ ಆರು ಪ್ರತಿಗಳು.
-
ವಿಧೇಯಕದ ಉದ್ದೇಶಗಳು ಮತ್ತು ಕಾರಣಗಳ ಹೇಳಿಕೆಯೊಂದಿಗೆ ಮಂಡಿಸಲಾದ ವಿಧೇಯಕದ ಆರು ಪ್ರತಿಗಳು.
-
ವಿಧಾನ ಮಂಡಲದ ಆಯ್ಕೆ ಸಮಿತಿಯ ಅಥವಾ ಜಂಟಿ ಆಯ್ಕೆ ಸಮಿತಿಯ ವರದಿಯೊಂದಿಗೆ, ಆ ಸಮಿತಿಯು ಪರಿಷ್ಕರಿಸಿದ ವಿಧೇಯಕದ ಮೂರು ಪ್ರತಿಗಳು.
-
ಪ್ರಸ್ತಾವಿತ ಶಾಸನವು ತಿದ್ದುಪಡಿ ಮಾಡುವ ಶಾಸನವಾಗಿರುವಲ್ಲಿ ತಹಲ್ವರೆಗಿನ ಮೂಲ ಅಧಿನಿಯಮದ ಆರು ಪ್ರತಿಗಳನ್ನು, ಪ್ರಸ್ತಾವಿತ ಶಾಸನದ ಖಂಡಗಳ ಮೇಲಿನ ಟಿಪ್ಪಣಿಗಳನ್ನು ಹಾಗೂ ಪ್ರಸ್ತುತ ಈಗಿರುವಂತೆ ಪ್ರತಿಯೊಂದು ಸಂಬಂಧಪಟ್ಟ ಖಂಡವನ್ನು ಈಗಿರುವಂತೆ ಹಾಗೂ ಪ್ರಸ್ತಾವಿತ ತಿದ್ದುಪಡಿಯ ನಂತರ ಅದು ಇರುವಂತೆ ತೋರಿಸಿರುವ ಒಂದು ತುಲನಾತ್ಮಕ ವಿವರಪಟ್ಟಿಯನ್ನು ಸಹ ಲಗತ್ತಿಸಲಾಗಿದೆ.
ಸಹಿ
ಟಿಪ್ಪಣಿ: * ದಯವಿಟ್ಟು ಪ್ರಸ್ತಾವಿತ ಶಾಸನದ ದೀರ್ಘ ಶೀರ್ಷಿಕೆ ನೀಡಿ.
- ಪ್ರಸ್ತಾವವನ್ನು ಯಾರ ಸಹಿಯಲ್ಲಿ ಕಳುಹಿಸಲಾಗಿದೆಯೋ ಆ ಅಧಿಕಾರಿಯು ಪ್ರಮಾಣಪತ್ರಕ್ಕೆ ಸಹಿ ಮಾಡಬೇಕು.
(4) ರಾಜ್ಯಪಾಲರ ಅಥವಾ ಸಂದರ್ಭಾನುಸಾರ ರಾಷ್ಟ್ರಪತಿಗಳ ಸಮ್ಮತಿ ಪಡೆದ ನಂತರ ವಿಧೇಯಕವನ್ನು ವಿಧಾನ 1 ಮಂಡಲದ ಒಂದು ಅಧಿನಿಯಮವಾಗಿ ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಿಸಲು [ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ]ಯು ಕ್ರಮ ಕೈಗೊಳ್ಳತಕ್ಕದ್ದು.
2 61. [(1)] ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ] ಯಲ್ಲದ ಬೇರೆ ಇಲಾಖೆಯಲ್ಲಿ,-
(i) ಒಂದು ಶಾಸನಬದ್ಧ ನಿಯಮವನ್ನು, ಅಧಿಸೂಚನೆಯನ್ನು ಅಥವಾ ಆದೇಶವನ್ನು ಹೊರಡಿಸಲು, ಅಥವಾ
(ii) ಅಧೀನ ಪ್ರಾಧಿಕಾರವು ಯಾವುದೇ ನಿಯಮವನ್ನು, ಉಪವಿಧಿಯನ್ನು, ಅಧಿಸೂಚನೆಯನ್ನು ಅಥವಾ ಆದೇಶವನ್ನು ಹೊರಡಿಸಲು ಶಾಸನಬದ್ಧ ಅಧಿಕಾರದಡಿಯಲ್ಲಿ ಮಂಜೂರಾತಿ ನೀಡಲು, ಅಥವಾ
(iii) ಯಾವುದೇ ಕರಡನ್ನು, ಶಾಸನಬದ್ಧ ನಿಯಮವನ್ನು, ಅಧಿಸೂಚನೆಯನ್ನು ಅಥವಾ ಆದೇಶವನ್ನು ಕೇಂದ್ರ ಸರ್ಕಾರ ಹೊರಡಿಸುವುದಕ್ಕಾಗಿ, ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು
-
ಅಧಿಸೂಚನೆ ಸಂ: ಡಿಸಿಎ 1 ಎಆರ್ಬಿ 96, ದಿನಾಂಕ: 22.1.96 ಕೆಜಿಡಿಇಎಕ್ಸ್ 24.1.96 ರ ಮೂಲಕ ಪ್ರತಿಯೋಜಿಸಲಾಗಿದೆ.
-
ಅಧಿಸೂಚನೆ ಸಂ; ಡಿಸಿಎ 1 ಎಆರ್ಬಿ 96, ದಿನಾಂಕ: 22.1.96 ಕೆಜಿಡಿಇಎಕ್ಸ್ 24.1.96 ರ ಮೂಲಕ ಮರುಸಂಖ್ಯೆ ನೀಡಲಾಗಿದೆ.
- ಉದ್ದೇಶಿಸಿದಾಗಲೆಲ್ಲಾ ಅಂಥ ಕರಡು ವಾಡಿಕೆಯ ಸ್ವರೂಪದ್ದಾಗಿರದಿದ್ದರೆ, ಅಥವಾ ಅಂತಹವೇ 1 ಕರಡುಗಳನ್ನು ಈಗಾಗಲೇ [ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ] ಯಲ್ಲಿ ಅಂಗೀಕರಿಸಿರದಿದ್ದರೆ ಅವುಗಳನ್ನು ಆ ಇಲಾಖೆಗೆ ಅಭಿಪ್ರಾಯಕ್ಕಾಗಿ ಹಾಗೂ ಅಗತ್ಯವಿರುವಲ್ಲಿ ಪುನರ್ ಪರಿಶೀಲನೆಗಾಗಿ ಕಳುಹಿಸತಕ್ಕದ್ದು.
2 [(2)] (1)ನೇ ಉಪ ನಿಯಮದ ಮೇರೆಗೆ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆಗೆ ಕಳುಹಿಸಿರುವ ಪ್ರಕರಣಗಳ ಸಂಬಂಧದಲ್ಲಿ, ಆಡಳಿತ ಇಲಾಖೆಯು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆಯು ನೀಡಿದ ಕಾನೂನು ಸಲಹೆಯಂತೆ ಕ್ರಮ ಕೈಗೊಳ್ಳತಕ್ಕದ್ದು. ಆದರೆ, ಗಮನಕ್ಕೆ ತಂದ ಹೊಸ ಅಂಶಗಳ ಹಿನ್ನೆಲೆಯಲ್ಲಿ, ಆಡಳಿತ ಇಲಾಖೆಯು ಪ್ರಕರಣವನ್ನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆಗೆ ಅದರ ಅಭಿಪ್ರಾಯವನ್ನು ಪುನರ್ ಪರಿಶೀಲಿಸಲು ಕಳುಹಿಸಿಕೊಡತಕ್ಕದ್ದು.
3 [ಡಿಡಿ. ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ]
- (1) ಎಲ್ಲಾ ಆಡಳಿತ ಇಲಾಖೆಗಳು,-
(ಎ) ಶಾಸನಗಳ, ಅಧಿನಿಯಮಗಳ, ವಿನಿಯಮನಗಳ ಮತ್ತು ಶಾಸನಾತ್ಮಕ ನಿಯಮಗಳ/ ಆದೇಶಗಳ ಮತ್ತು ಅಧಿಸೂಚನೆಗಳ ರಚನೆ;
(ಬಿ) ಯಾವುದೇ ಪ್ರಕರಣದಿಂದ ಉದ್ಭವಿಸುವ ಯಾವುದೇ ಸಾಮಾನ್ಯ ಕಾನೂನು ತತ್ವಗಳ; ಮತ್ತು
(ಸಿ) ಯಾವುದೇ ಆಡಳಿತ ಇಲಾಖೆಯ ಕೋರಿಕೆಯಂತೆ ಯಾವುದೇ ಪ್ರಾಸಿಕ್ಯೂಷನನ್ನು ಹೂಡುವ ಅಥವಾ ಹಿಂತೆಗೆದುಕೊಳ್ಳುವ
3 -ಬಗ್ಗೆ [ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ] ಯೊಂದಿಗೆ ಸಮಾಲೋಚಿಸತಕ್ಕದ್ದು
(2) ಅಂತಹ ಪ್ರತಿಯೊಂದು ಉಲ್ಲೇಖದ ಜೊತೆಯಲ್ಲಿ ಪ್ರಕರಣದ ಸಂಗತಿಗಳ ಬಗ್ಗೆ ಮತ್ತು ಯಾವ ಅಂಶ 3 ಅಥವಾ ಅಂಶಗಳ ಬಗ್ಗೆ [ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ] ಯ ಸಲಹೆಯನ್ನು ಅಪೇಕ್ಷಿಸಲಾಗಿದೆಯೋ ಆ ಅಂಶ ಅಥವಾ ಅಂಶಗಳ ಬಗ್ಗೆ ನಿಖರವಾದ ವಿವರಣಾ ಪಟ್ಟಿಯನ್ನು ಕಳುಹಿಸತಕ್ಕದ್ದು.
-
1 [62ನೇ ನಿಯಮದ] ಮೇರೆಗೆ 3 [ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ] ಕಳುಹಿಸಿದ 3 ಪ್ರಕರಣಗಳ ಸಂಬಂಧದಲ್ಲಿ ಆಡಳಿತ ಇಲಾಖೆಯು [ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ] ಯು ನೀಡಿದ ಕಾನೂನು ಸಲಹೆಯಂತೆ ಕ್ರಮ ಕೈಗೊಳ್ಳತಕ್ಕದ್ದು. ಆದರೆ ಗಮನಕ್ಕೆ ತಂದ ಹೊಸ ಅಂಶಗಳ ಹಿನ್ನೆಲೆಯಲ್ಲಿ ಆಡಳಿತ 3 ಇಲಾಖೆಯು ಪ್ರಕರಣವನ್ನು, [ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ] ಗೆ ಅದರ ಅಭಿಪ್ರಾಯವನ್ನು ಪುನರ್ ಪರಿಶೀಲಿಸಲು ಕಳುಹಿಸತಕ್ಕದ್ದು.
-
ಸರ್ಕಾರಿ ನೌಕರರು, ತಮ್ಮ ಅಧಿಕೃತ ಸಾಮಥ್ರ್ಯದಲ್ಲಿ ಮಾಡಿದ ಕೆಲಸಗಳಿಗಾಗಿ ಅವರ ವಿರುದ್ಧ ಹೂಡಿದ ದಾವೆಗಳನ್ನು ಅಥವಾ ವ್ಯವಹಾರಗಳನ್ನು ಸರ್ಕಾರಿ ವೆಚ್ಚದಲ್ಲಿ ಪ್ರತಿರಕ್ಷೆ ಮಾಡಿಕೊಳ್ಳಲು ಮಂಜೂರಾತಿ ನೀಡುವ 4 ಆದೇಶಗಳನ್ನು [ಆಡಳಿತ ಇಲಾಖೆಗಳ ಕಾನೂನು ಕೋಶಗಳು] ಹೊರಡಿಸತಕ್ಕದ್ದು. ಅಧಿಕಾರಿಯು ಯಾವ ಇಲಾಖೆಗೆ ಸೇರಿದ್ದಾನೋ ಆ ಇಲಾಖೆಯು ಅವುಗಳನ್ನು ಹೊರಡಿಸುವುದಕ್ಕೆ ಮುಂಚೆ ಪ್ರಕರಣವನ್ನು ಯಾವಾಗಲೂ ಗಮನಿಸತಕ್ಕದ್ದು.
-
ಕಾನೂನು ಪ್ರಶ್ನೆಗಳಿಗೆ ಸಂಬಂಧಪಟ್ಟಂತೆ ಅಡ್ವೋಕೇಟ್ ಜನರಲ್ ಅಥವಾ ಸಹಾಯಕ ಅಡ್ವೋಕೇಟ್
3
[ಕಾನೂನು, ಜನರಲ್ ರವರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವ ಎಲ್ಲಾ ಪ್ರಕರಣಗಳನ್ನು ಪರಿಶೀಲಿಸಿ ಹಿಂದಿರುಗಿಸಲು
ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಗೆ] ಕಳುಹಿಸತಕ್ಕದ್ದು ಮತ್ತು ಯಾವುದೇ ಸಂದರ್ಭದಲ್ಲಿ ಕಡತವನ್ನು ಸುಲಭವಾಗಿ
ಕಳುಹಿಸಲು ಸಾಧ್ಯವಾಗದಿದ್ದರೆ ಅದರಲ್ಲಿ ದಾಖಲಿಸಿರುವ ಅಭಿಪ್ರಾಯದ ಪ್ರತಿಯನ್ನು ಕಳುಹಿಸಿಕೊಡತಕ್ಕದ್ದು.
-
ಅಧಿಸೂಚನೆ ಸಂ: ಡಿಸಿಎ 1 ಎಆರ್ಬಿ 96, ದಿನಾಂಕ: 22.1.96, ಕೆಜಿಡಿಇಎಕ್ಸ್ 24.1.96 ರ ಮೂಲಕ ಪ್ರತಿಯೋಜಿಸಲಾಗಿದೆ.
-
ಅಧಿಸೂಚನೆ ಸಂ: ಡಿಸಿಎ 1 ಎಆರ್ಬಿ 96 ದಿನಾಂಕ: 22.1.96, ಕೆಜಿಡಿಎಕ್ಸ್ 24.1.96 ರ ಮೂಲಕ ಮರುಸಂಖ್ಯೆ ನೀಡಲಾಗಿದೆ.
-
ಅಧಿಸೂಷಚನೆ ಸಂ: ಡಿಸಿಎ 3 ಎಆರ್ಬಿ 2006, ದಿನಾಂಕ: 5.9.2006 ಕೆಜಿಡಿ 14.9.2006 ರ ಮೂಲಕ ಪ್ರತಿಯೋಜಿಸಲಾಗಿದೆ.
-
ಅಧಿಸೂಚನೆ ಸಂ: ಡಿಸಿಎ 20 ಎಆರ್ಬಿ 96, ದಿನಾಂಕ: 23.8.2000 ಕೆಜಿಡಿಎಕ್ಸ್ 29.8.2000 ರ ಮೂಲಕ ಪ್ರತಿಯೋಜಿಸಲಾಗಿದೆ.
1 [65ಎ. ಕೊನೆ ಪಕ್ಷ ತಿಂಗಳಿಗೆ ಒಂದು ಸಲ ಇತ್ಯರ್ಥದಲ್ಲಿರುವ ಸರ್ಕಾರಿ ವ್ಯಾಜ್ಯಗಳನ್ನು ಪರಿಶೀಲಿಸುವುದು ಕಾನೂನು ಇಲಾಖೆಯ ಕರ್ತವ್ಯವಾಗಿರತಕ್ಕದ್ದು. ಈ ಉದ್ದೇಶಕ್ಕಾಗಿ, ಸರ್ಕಾರದ ಕಾನೂನು ಇಲಾಖೆಯ ಕಾರ್ಯದರ್ಶಿಗಳ, ಕಾನೂನು ಕೋಶಗಳ ಮುಖ್ಯಸ್ಥರು ಹಾಗೂ ಅಡ್ವೋಕೇಟ್ ಜನರಲ್ ಕಚೇರಿಯ ಕಾನೂನು ಅಧಿಕಾರಿಗಳೊಡನೆ ತಿಂಗಳ ಸಭೆಗಳನ್ನು ನಡೆಸತಕ್ಕದ್ದು. ಅಂತಹ ಪುನರವಲೋಕನಗಳ ಫಲಿತಾಂಶದ ವರದಿಯನ್ನು ಸರ್ಕಾರದ ಕಾನೂನು ಇಲಾಖೆಯ ಕಾರ್ಯದರ್ಶಿಯವರು ಮುಖ್ಯ ಕಾರ್ಯದರ್ಶಿಯವರಿಗೆ ಆ ಇಲಾಖೆ ಈ ಬಗ್ಗೆ ನಿರ್ದಿಷ್ಟಪಡಿಸಿರುವ ನಮೂನೆಯಲ್ಲಿ ಕಳುಹಿಸತಕ್ಕದ್ದು].
ಇ. ಭೂ ಆರ್ಜನೆ
- ಯಾವುದೇ ಸರ್ಕಾರಿ ಇಲಾಖೆಗೆ ಸಂಬಂಧಿಸಿದ ಭೂ ಆರ್ಜನಾ ಅಧಿನಿಯಮದ (ಇಲ್ಲಿ ಇನ್ನು ಮುಂದೆ ಸದರಿ
ಅಧಿನಿಯಮವೆಂದು ಉಲ್ಲೇಖಿಸಲಾಗಿದೆ) ಮೇರೆಗೆ ಭೂಆರ್ಜನೆಗೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನೂ ಕಂದಾಯ
ಇಲಾಖೆಯಲ್ಲಿಯೇ ವ್ಯವಹರಿಸತಕ್ಕದ್ದು. ಆದರೆ ಆರ್ಜನೆಗೆ ಸಂಬಂಧಿಸಿದ ಎಲ್ಲ ಆಡಳಿತಾತ್ಮಕ ತೀರ್ಮಾನಗಳನ್ನು,
ಪ್ರಭಾರದಲ್ಲಿರುವ ಸಚಿವರ ಆದೇಶಗಳ ಮೇರೆಗೆ ಸಚಿವಾಲಯದ ಸಂಬಂಧಪಟ್ಟ ಆಡಳಿತ ಇಲಾಖೆಯೇ ತೆಗೆದುಕೊಳ್ಳತಕ್ಕದ್ದು.
- ಆರ್ಜಿಸಬೇಕಾದ ಭೂಮಿಯ ಆಯ್ಕೆ ಸಂಪೂರ್ಣವಾಗಿ ಆಡಳಿತಾತ್ಮಕ ನಿರ್ಧಾರವಾಗಿದೆ ಮತ್ತು
ಸಚಿವಾಲಯದ ಕಂದಾಯ ಇಲಾಖೆಯಲ್ಲಿ ಸ್ವೀಕರಿಸಲಾದ ದಾಖಲೆಗಳು, ಭೂಮಿಯ ಆಯ್ಕೆಗೆ ಸಂಬಂಧಪಟ್ಟಂತೆ ಸರ್ಕಾರದ
ಮಟ್ಟದಲ್ಲಿ ನಿರ್ಧಾರವನ್ನು ತೆಗೆದುಕೊಳ್ಳುವುದನ್ನು ಒಳಗೊಂಡಿದ್ದರೆ, ಭೂಮಿಯ ಆಯ್ಕೆಯ ಸಂಬಂಧದಲ್ಲಿ ಪ್ರಭಾರದಲ್ಲಿರುವ
ಸಚಿವರ ಆದೇಶವನ್ನು ಪಡೆಯುವುದಕ್ಕಾಗಿ ಸಚಿವಾಲಯದ ಸಂಬಂಧಪಟ್ಟ ಆಡಳಿತ ಇಲಾಖೆಗೆ ಕಾಗದ ಪತ್ರಗಳನ್ನು
ವರ್ಗಾಯಿಸತಕ್ಕದ್ದು ಮತ್ತು ಮುಂದಿನ ಕ್ರಮಕ್ಕಾಗಿ ಕಾಗದ ಪತ್ರಗಳನ್ನು ಕಂದಾಯ ಇಲಾಖೆಗೆ ಹಿಂದಿರುಗಿಸತಕ್ಕದ್ದು.
ಭೂಮಿಯ ಆಯ್ಕೆಗೆ ಸಂಬಂಧಪಟ್ಟಂತೆ ಪತ್ರ ವ್ಯವಹಾರವು, ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರು ಮತ್ತು ಸಂಬಂಧಪಟ್ಟ
ಸಚಿವಾಲಯದ ಇಲಾಖೆಯ ನಡುವೆ ನಡೆಯುತ್ತದೆ. ಭೂಮಿ ಆಯ್ಕೆಯ ಬಗ್ಗೆ ಅಂತಿಮ ತೀರ್ಮಾನವನ್ನು ಕೈಗೊಂಡ ನಂತರ
ಮಾತ್ರವೇ ಆರ್ಜನೆಯ ಪ್ರಕ್ರಿಯೆಯನ್ನು ಪ್ರಾರಂಭ ಮಾಡುವುದಕ್ಕಾಗಿ ಸಾಮಾನ್ಯವಾಗಿ ಜಿಲ್ಲಾಧಿಕಾರಿಗಳಿಗೆ ಪತ್ರ
ಬರೆಯಲಾಗುತ್ತದೆ. ಆಡಳಿತಾತ್ಮಕ ಇಲಾಖೆಯೊಂದಿಗೆ ಸಮಾಲೋಚಿಸಿ ಆಯ್ಕೆ ಮಾಡಿದ ಭೂಮಿಯ ಆರ್ಜನೆಗೆ ಕಂದಾಯ
ಇಲಾಖೆಯು ಪ್ರಸ್ತಾವಗಳನ್ನು ಸ್ವೀಕರಿಸಿದಾಗ, ಕಂದಾಯ ಇಲಾಖೆಯು, ಸಚಿವಾಲಯದ ಆಡಳಿತ ಇಲಾಖೆಯೊಂದಿಗೆ ಮತ್ತೆ
ಯಾವುದೇ ಸಮಾಲೋಚನೆ ನಡೆಸದೆ ಸದರಿ ಅಧಿನಿಯಮದ 4ನೇ ಪ್ರಕರಣದ ಅಡಿಯಲ್ಲಿ ಅಧಿಸೂಚನೆಯನ್ನು
ಹೊರಡಿಸುತ್ತದೆ.
- ಆದರೆ, ಆರ್ಜಿಸಬೇಕಾದ ಭೂಮಿಯ ಅಂತಿಮ ಆಯ್ಕೆಯು ಇನ್ನೂ ವಿವಾದದಲ್ಲಿದ್ದರೆ, ಮತ್ತು ಸರ್ಕಾರದ
ಮಟ್ಟದಲ್ಲಿ ಅಂತಿಮ ತೀರ್ಮಾನವನ್ನು ಕೈಗೊಂಡಿರದಿದ್ದರೆ ಅಥವಾ ಆರಂಭಿಕ ಅಧಿಸೂಚನೆಯನ್ನು ಹೊರಡಿಸುವುದಕ್ಕೆ ಮುಂಚೆ
ಸಲ್ಲಿಸಲಾದ ಆಕ್ಷೇಪಣೆಗಳ ಹಿನ್ನೆಲೆಯಲ್ಲಿ ಆರ್ಜನೆಯ ಪ್ರಸ್ತಾವಗಳನ್ನು ಮಾರ್ಪಾಟುಗೊಳಿಸಲು ಉದ್ದೇಶಿಸಿದ್ದರೆ, ಅಂಥ
ಪ್ರಕರಣಗಳನ್ನು ಕಂದಾಯ ಇಲಾಖೆಯು ಭೂಮಿಯ ಅಂತಿಮ ಆಯ್ಕೆಯ ಬಗ್ಗೆ ಪ್ರಭಾರದಲ್ಲಿರುವ ಸಚಿವರ ಆದೇಶಗಳನ್ನು
ಪಡೆಯುವುದಕ್ಕಾಗಿ ಸಚಿವಾಲಯದ ಸಂಬಂಧಪಟ್ಟ ಆಡಳಿತ ಇಲಾಖೆಗೆ ವರ್ಗಾಯಿಸತಕ್ಕದ್ದು. ಸಚಿವಾಲಯದ ಸಂಬಂಧಪಟ್ಟ
ಆಡಳಿತ ಇಲಾಖೆಯು ತಿಳಿಸಿದ ಅಂಥ ತೀರ್ಮಾನದ ಆಧಾರದ ಮೇಲೆ, ಕಂದಾಯ ಇಲಾಖೆಯು ಅಂಥ ತೀರ್ಮಾನಕ್ಕೆ
ಅನುಸಾರವಾಗಿ ಆರಂಭಿಕ ಅಧಿಸೂಚನೆಯನ್ನು ಹೊರಡಿಸಲು ಮುಂದಿನ ಕ್ರಮ ಕೈಗೊಳ್ಳತಕ್ಕದ್ದು.
- ಸಾಮಾನ್ಯ ಪ್ರಕ್ರಿಯೆಯ ಮೇರೆಗೆ ಆರ್ಜನೆಯನ್ನು ಮಾಡಲು ನಿರ್ಧರಿಸಿದರೆ, ಸದರಿ ಅಧಿನಿಯಮದ 5-ಎ
ಪ್ರಕರಣದ ಅಡಿಯಲ್ಲಿನ ವರದಿಯನ್ನು, ಸದರಿ ಅಧಿನಿಯಮದ 6ನೇ ಪ್ರಕರಣದ ಅಡಿಯಲ್ಲಿ ಘೋಷಣೆಗಳನ್ನು ಹೊರಡಿಸುವುದಕ್ಕೆ ಮುಂಚೆ ಸರ್ಕಾರವು ಅದನ್ನು ಪರಿಶೀಲಿಸಬೇಕಾಗುತ್ತದೆ. ಈ ಹಂತದಲ್ಲಿ, ಸಚಿವಾಲಯದ ಆಡಳಿತ ಇಲಾಖೆಯನ್ನು, ಪ್ರಸ್ತಾವಿತ ಆರ್ಜನೆಗೆ ಸಂಬಂಧಿಸಿದಂತೆ ಯಾವುವೇ ಆಕ್ಷೇಪಣೆಗಳನ್ನು ಸಲ್ಲಿಸದೆ ಇದ್ದರೂ, ಈ ಮುಂದಿನ ವರ್ಗಗಳ ಪ್ರಕರಣಗಳಲ್ಲಿ, ಎಂದರೆ,-
- ಅಧಿಸೂಚನೆ ಸಂ: ಡಿಸಿಎ 20 ಎಆರ್ಬಿ 96, ದಿನಾಂಕ; 23.8.2000 ಕೆಜಿಡಿಎಕ್ಸ್ 29.8.2000 ರ ಮೂಲಕ ಸೇರಿಸ¯ಗಿದೆ.
(i) ಯಾವ ಯೋಜನೆಗಳಿಗಾಗಿ ಭೂಮಿಯನ್ನು ಆರ್ಜಿಸಲಾಗುತ್ತಿದೆಯೋ ಅಂಥ ಯೋಜನೆಗಳಿಗೆ ಸಕ್ಷಮ ಪ್ರಾಧಿಕಾರದಿಂದ ಮಂಜೂರಾತಿ ದೊರಕದಿದ್ದರೆ; ಅಥವಾ
(ii) ಆರ್ಜನೆಯ ವೆಚ್ಚವನ್ನು ಭರಿಸಲು ಅಗತ್ಯವಾದ ನಿಧಿಗಳನ್ನು ಠೇವಣಿ ಇಡದಿದ್ದರೆ ಅಥವಾ ಬಜೆಟ್ನಲ್ಲಿ ಸೇರಿಸಲಾದ ಹಂಚಿಕೆಯಿಂದ ಸಂದಾಯ ಮಾಡಲು ಲಭ್ಯವಾಗುವಂತೆ ಮಾಡಿಲ್ಲದಿದ್ದರೆ; ಅಥವಾ
(iii) ಆರ್ಜನೆಗೆ ತಗಲುವ ವೆಚ್ಚವು, ಮೂಲತಃ ಅಂದಾಜು ಮಾಡಲಾದ ವೆಚ್ಚಕ್ಕಿಂತ ಸಾಕಷ್ಟು ಗಣನೀಯವಾಗಿ ಹೆಚ್ಚಾಗುವ ಸಂಭವವಿದೆಯೆಂದು ತರುವಾಯದ ವರದಿಗಳಿಂದ ಕಂಡುಬಂದರೆ, ಹೆಚ್ಚಿನ ವೆಚ್ಚಕ್ಕಾಗಿ ಏರ್ಪಾಡನ್ನು ಮಾಡಿರಬಹುದಾಗಿದ್ದರೂ
- ಭೂಮಿಯನ್ನು ಆರ್ಜಿಸಲು ಮಂಜೂರಾತಿ ನೀಡುವುದಕ್ಕೆ ಮುಂಚೆ ಸಮಾಲೋಚಿಸಲಾಗುತ್ತದೆ.
-
ಆರಂಭಿಕ ಅಧಿಸೂಚನೆ ಪ್ರತಿಕ್ರಿಯೆಗೆ ಆಕ್ಷೇಪಣೆಗಳನ್ನು ಸ್ವೀಕರಿಸಿರುವಲ್ಲಿ ಮತ್ತು ಕಂದಾಯ ಇಲಾಖೆಯು ಅಂಥ ಆಕ್ಷೇಪಣೆಗಳನ್ನು ಪರಿಶೀಲಿಸಿದ ತರುವಾಯ, ಅಂಥ ಆಕ್ಷೇಪಣೆಗಳನ್ನು ಮಾಡಿದ್ದರೂ ಸಹಾ ಆರ್ಜನೆಯ ಪ್ರಕ್ರಿಯೆಯನ್ನು ಮುಂದುವರೆಸಬೇಕೆಂದು ಭಾವಿಸಿದರೆ, ಕಂದಾಯ ಇಲಾಖೆಯು, ಅಸಾದಾರಣ ಪ್ರಾಮುಖ್ಯತೆ ಮತ್ತು ಕ್ಲಿಷ್ಟ ಪ್ರಕರಣಗಳಲ್ಲಿ ಹೊರತು, ಆರ್ಜಿಸುವ ಇಲಾಖೆಯೊಂದಿಗೆ ಸಮಾಲೋಚಿಸದೆಯೇ ಮುಂದಿನ ಕ್ರಮವನ್ನು ಕೈಗೊಳ್ಳಬಹುದು.
-
ಸದರಿ ಅಧಿನಿಯಮ 5-ಎ ಪ್ರಕರಣದ ಮೇರೆಗೆ ವರದಿಯು, ಸಲ್ಲಿಸಲಾದ ಆಕ್ಷೇಪಣೆಗಳ ಹಿನ್ನೆಲೆಯಲ್ಲಿ, ಆರ್ಜನೆಯನ್ನು ಕೈಬಿಡುವಂತೆ ಅಥವಾ ಪ್ರಸ್ತಾವಗಳನ್ನು ಮಾರ್ಪಾಟುಗೊಳಿಸುವಂತೆ ಶಿಫಾರಸು ಮಾಡಿದರೆ, ಸಂಬಂಧಪಟ್ಟ ಕಾಗದ ಪತ್ರಗಳನ್ನು ವರದಿಯಲ್ಲಿ ಒಳಗೊಂಡಿರುವ ಪ್ರಸ್ತಾವಗಳ ಬಗ್ಗೆ ಇಲಾಖೆಯ ಪ್ರಭಾರದಲ್ಲಿರುವ ಸಚಿವರ ಅಂತಿಮ ಆದೇಶಗಳನ್ನು ಪಡೆಯುವುದಕ್ಕಾಗಿ ಸಚಿವಾಲಯದ ಸಂಬಂಧಪಟ್ಟ ಆಡಳಿತ ಇಲಾಖೆಗೆ ವರ್ಗಾಯಿಸತಕ್ಕದ್ದು.
-
ಕಂದಾಯ ಇಲಾಖೆಯು, ಸದರಿ ಅಧಿನಿಯಮದ 5-ಎ ಪ್ರಕರಣದ ಮೇರೆಗೆ ವರದಿಯನ್ನು ಪರಿಶೀಲಿಸುವ ಹಂತದಲ್ಲಿ ಅಥವಾ ಸದರಿ ಅಧಿನಿಯಮದ 15-ಎ ಪ್ರಕರಣದ ಮೇರೆಗೆ ಸಲ್ಲಿಸಲಾದ ಅರ್ಜಿಯ ಮೇಲೆ ಪ್ರಾರಂಭಿಸಿದ ವ್ಯವಹರಣೆಗಳ ಹಂತದಲ್ಲಿ ಆರ್ಜನೆಯನ್ನು ಪ್ರಾಯೋಜಿಸಿರುವ ಇಲಾಖೆಯಿಂದ ಅನುಮೋದನೆಯಾದ ಪ್ರಸ್ತಾವಗಳಲ್ಲಿ ಯಾವುದೇ ಮಾರ್ಪಾಟನ್ನು ಮಾಡಲು ಉದ್ದೇಶಿಸಿದರೆ, ಪ್ರಭಾರದಲ್ಲಿರುವ ಸಚಿವರ ಅಂತಿಮ ಆದೇಶಗಳನ್ನು ಪಡೆಯುವುದಕ್ಕಾಗಿ, ಸಚಿವಾಲಯದ ಸಂಬಂಧಪಟ್ಟ ಆಡಳಿತ ಇಲಾಖೆಗೆ ಕಾಗದ ಪತ್ರಗಳನ್ನು ವರ್ಗಾಯಿಸತಕ್ಕದ್ದು ಮತ್ತು ಅಂಥ ತೀರ್ಮಾನಕ್ಕನುಸಾರವಾಗಿ ಮುಂದಿನ ಕ್ರಮ ಕೈಗೊಳ್ಳಲು ಕಾಗದ ಪತ್ರಗಳನ್ನು ಕಂದಾಯ ಇಲಾಖೆಗೆ ಹಿಂತಿರುಗಿಸತಕ್ಕದ್ದು.
ಎಫ್. ಸರಕು ಖರೀದಿ
72-ಎ 1 [XX]
ಜಿ. sಸಾರ್ವಜನಿಕ ಉದ್ಯಮಗಳ ಇಲಾಖೆ]
3 [72ಬಿ. ಎಲ್ಲ ಆಡಳಿತ ಇಲಾಖೆಗಳು, ಸಚಿವ ಸಂಪುಟದ ಅನುಮೋದನೆಯನ್ನು ಕೋರುವುದಕ್ಕೆ ಮುಂಚೆ, ಮೊದಲನೆಯ ಅನುಸೂಚಿಯ 16ನೇ ಬಾಬಿನಲ್ಲಿ ನಿರ್ದಿಷ್ಟಪಡಿಸಿದ ಯಾವುದೇ ಪ್ರಸ್ತಾವದ ಬಗ್ಗೆ ಸಾರ್ವಜನಿಕ ಉದ್ಯಮಗಳ ಇಲಾಖೆ ] ಯೊಂದಿಗೆ ಸಮಾಲೋಚಿಸತಕ್ಕದ್ದು.
-
ಅಧಿಸೂಚನೆ ಸಂ: ಡಿಸಿಎ6ಎಆರ್ಬಿ2006, ದಿನಾಂಕ; 29.8.2006 ಕೆಜಿಡಿಎಕ್ಸ್ 31.8.2006ರ ಮೂಲಕ ಬಿಟ್ಟುಬಿಡಲಾಗಿದೆ.
-
ಅಧಿಸೂಚನೆ ಸಂ: ಡಿಸಿಎ3ಎಆರ್ಬಿ2006, ದಿನಾಂಕ: 05.9.2006 ರ ಮೂಲಕ ಪ್ರತಿಯೋಜಿಸಲಾಗಿದೆ.
-
ಅಧಿಸೂಚನೆ ಸಂ: ಡಿಸಿಎ 16 ಎಆರ್ಬಿ 1983, ದಿನಾಂಕ: 29.11.83ರ ಮೂಲಕ ಪ್ರತಿಯೋಜಿಸಲಾಗಿದೆ.
ಭಾಗ - IV ಸಂಕೀರ್ಣ
- (1) ಕಾರ್ಯದರ್ಶಿಯವರು, ತಮ್ಮ ಇಲಾಖೆಯಲ್ಲಿರುವ ಪ್ರಕರಣವನ್ನು ವಿಲೇ ಮಾಡಲು ಕಾಗದ ಪತ್ರಗಳು ಅಗತ್ಯವಿದ್ದರೆ, ಹಣಕಾಸು ಇಲಾಖೆ ಅಥವಾ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಥವಾ ಸಚಿವ ಸಂಪುಟ ವ್ಯವಹಾರಗಳ ಇಲಾಖೆಯನ್ನು ಹೊರತುಪಡಿಸಿ ಯಾವುದೇ ಇಲಾಖೆಯಲ್ಲಿನ ಅಂಥ ಕಾಗದ ಪತ್ರಗಳನ್ನು ನೋಡಲು ಕಳುಹಿಸುವಂತೆ ಕೇಳಬಹುದು.
(2) ಅಂಥ ಕೋರಿಕೆಯ ಬಗ್ಗೆ, ಪ್ರಭಾರದಲ್ಲಿರುವ ಸಚಿವರ ಸಾಮಾನ್ಯ ಅಥವಾ ವಿಶೇಷ ಆದೇಶಗಳ ಮೇರೆಗೆ ವ್ಯವಹರಿಸತಕ್ಕದ್ದು.
(3) ಮುಖ್ಯ ಕಾರ್ಯದರ್ಶಿಯವರು, ಯಾವುದೇ ಇಲಾಖೆಯಲ್ಲಿನ ಯಾವುದೇ ಪ್ರಕರಣಕ್ಕೆ ಸಂಬಂಧಿಸಿದ ಅಥವಾ ಸರ್ಕಾರದ ಯಾರೇ ವಿಶೇಷ ಕಾರ್ಯದರ್ಶಿಯ ಬಳಿ ಇರುವ ಯಾವುವೇ ಕಾಗದ ಪತ್ರಗಳನ್ನು ನೋಡಲು ಕಳುಹಿಸುವಂತೆ ಕೇಳಬಹುದು ಮತ್ತು ಅವರ ಅಂಥ ಕೋರಿಕೆಯನ್ನು ಸಂಬಂಧಪಟ್ಟ ಇಲಾಖೆಯ ಕಾರ್ಯದರ್ಶಿ ಅಥವಾ ಸಂದರ್ಭಾನುಸಾರ ವಿಶೇಷ ಕಾರ್ಯದರ್ಶಿ ಪಾಲಿಸತಕ್ಕದ್ದು.
(4) 15ನೇ ನಿಯಮದ ಉಪಬಂಧಗಳಿಗೆ ಒಳಪಟ್ಟು, ಸಚಿವರು ಯಾವುದೇ ಇಲಾಖೆಯ ಯಾವುದೇ ಕಾಗದ ಪತ್ರಗಳಿಗೆ ಸಂಬಂಧಪಟ್ಟಂತೆ ಯಾವುದೇ ಹೆಚ್ಚಿನ ಕ್ರಮ ಕೈಗೊಳ್ಳಬೇಕೆಂದು ಅಭಿಪ್ರಾಯಪಟ್ಟರೆ ಅವುಗಳನ್ನು ತರಿಸಿಕೊಳ್ಳಬಹುದು ಮತ್ತು ಸಂಬಂಧಪಟ್ಟ ಇಲಾಖೆಯ ಪ್ರಭಾರದಲ್ಲಿರುವ ಸಚಿವರಿಗೆ ತಮ್ಮ ಅಭಿಪ್ರಾಯವನ್ನು ತಿಳಿಸತಕ್ಕದ್ದು. ಭಿನ್ನಾಭಿಪ್ರಾಯವಿದ್ದ ಸಂದರ್ಭದಲ್ಲಿ, ವಿಷಯವನ್ನು ಸಚಿವ ಸಂಪುಟದ ಮುಂದೆ ಇಡಬೇಕೆಂಬ ಕೋರಿಕೆಯೊಂದಿಗೆ ಪ್ರಕರಣವನ್ನು ಮುಖ್ಯಮಂತ್ರಿಯವರಿಗೆ ಸಲ್ಲಿಸತಕ್ಕದ್ದು. ಕಾಗದ ಪತ್ರಗಳನ್ನು ಸಚಿವ ಸಂಪುಟದ ಮುಂದೆ ಹಾಗೆ ಮಂಡಿಸುವುದಕ್ಕೆ ಮುಂಚೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾವುದೇ ಹೆಚ್ಚಿನ ಟಿಪ್ಪಣಿಗಳನ್ನು ದಾಖಲು ಮಾಡತಕ್ಕದ್ದಲ್ಲ :
ಪರಂತು, ಕಾಗದ ಪತ್ರಗಳು ರಹಸ್ಯ ಸ್ವರೂಪದ್ದಾಗಿದ್ದರೆ, ಅಂಥ ಕಾಗದ ಪತ್ರಗಳು ಸಂಬಂಧಪಡುವ ಇಲಾಖೆಯ ಪ್ರಭಾರದಲ್ಲಿರುವ ಸಚಿವರ ಆದೇಶಗಳ ಮೇರೆಗೆ ಮಾತ್ರವೇ ಆ ಸಚಿವರಿಗೆ ಕಳುಹಿಸತಕ್ಕದ್ದು:
ಮತ್ತೂ ಪರಂತು, ವಿಲೆಯಾಗಬೇಕಿರುವ ಯಾವುದೇ ಕಾಗದ ಪತ್ರವನ್ನು, ಅದು ಯಾವ ಇಲಾಖೆಗೆ ಸಂಬಂಧಪಡುತ್ತದೋ ಆ ಇಲಾಖೆಯ ಪ್ರಭಾರದಲ್ಲಿರುವ ಸಚಿವರು ಅದನ್ನು ಪರಿಶೀಲಿಸುವವರೆಗೆ ಯಾರೇ ಇತರ ಸಚಿವರಿಗೆ ಕಳುಹಿಸತಕ್ಕದ್ದಲ್ಲ.
ಟಿಪ್ಪಣಿ.- (i) ಸಚಿವರ ಆಪ್ತ ಕಾರ್ಯದರ್ಶಿಗಳು ತಮ್ಮ ಇಲಾಖೆಯದಲ್ಲದ ಇತರ ಸಚಿವಾಲಯ ಇಲಾಖೆಗಳ ಕಡತಗಳನ್ನು ಕಳುಹಿಸುವಂತೆ ಕೋರತಕ್ಕದ್ದಲ್ಲ ಮತ್ತು ತಮ್ಮ ಸಚಿವರ ನಿಯಂತ್ರಣದಡಿ ಬರುವ ಇಲಾಖೆಗಳ ಸಂಬಂಧದಲ್ಲಿ, ರಹಸ್ಯ ಸ್ವರೂಪದ ಕಡತಗಳನ್ನು ಕಳುಹಿಸುವಂತೆ ಅವರು ಕೋರತಕ್ಕದ್ದಲ್ಲ.
(ii) ಸಚಿವರು ಬೇರೊಂದು ಸಚಿವಾಲಯ ಇಲಾಖೆಗೆ ಸೇರಿದ ಕಡತವನ್ನು ಅಗತ್ಯಪಡಿಸಿದಾಗ, ಅವರು ಸಂಬಂಧಪಟ್ಟ ಸಚಿವರಿಗೆ ಅಥವಾ ಕಾರ್ಯದರ್ಶಿಯವರಿಗೆ ಕೋರಿಕೆಯನ್ನು ಕಳುಹಿಸತಕ್ಕದ್ದು. ಕೋರಿಕೆಯನ್ನು ಕಾರ್ಯದರ್ಶಿಯವರಿಗೆ ಕಳುಹಿಸಿದ್ದರೆ, ಅವರು ಆ ಖಾತೆಯ ಪ್ರಭಾರದಲ್ಲಿರುವ ಸಚಿವರಿಗೆ ಕೋರಿಕೆಯೊಂದಿಗೆ ಕಡತಗಳನ್ನು ಆದೇಶಕ್ಕಾಗಿ ಸಲ್ಲಿಸತಕ್ಕದ್ದು.
(iii) ತನ್ನ ನಿಯಂತ್ರಣದಲ್ಲಿರುವ ಇಲಾಖೆಗೆ ಸೇರಿದ್ದಲ್ಲದ ಕಡತದ ಮೇಲೆ ಸಚಿವರು ಟಿಪ್ಪಣಿಗಳನ್ನು ಅಥವಾ ನಡವಳಿಗಳನ್ನು ಮಾಡಬೇಕಿದ್ದರೆ, ಅದನ್ನು ಪ್ರತ್ಯೇಕ ಹಾಳೆಯ ಮೇಲೆ ಮಾಡಿ ಅದನ್ನು ಪತ್ರ ವ್ಯವಹಾರಗಳ ಕಡತಕ್ಕೆ ಲಗತ್ತಿಸಬಹುದು ಮತ್ತು ಅಗತ್ಯವೆನಿಸಿದಲ್ಲಿ ಟಿಪ್ಪಣಿಯ ಕಡತದಲ್ಲಿ ಅದನ್ನು ಉಲ್ಲೇಖಿಸಬಹುದು.
- ಸರ್ಕಾರದ ಉನ್ನತ ಅಧಿಕಾರಿಗಳಿಗೆ, ಉದಾಹರಣೆಗೆ ವಿಭಾಗೀಯ ಆಯುಕ್ತರು, ಇಲಾಖಾ ಮುಖ್ಯಸ್ಥರು, ಜಿಲ್ಲಾಧಿಕಾರಿಗಳು, ಮುಂತಾದವರಿಗೆ ಅವರ ಪದದ ಕರ್ತವ್ಯಗಳ ನಿರ್ವಹಣೆಯ ಬಗ್ಗೆ ಸರ್ಕಾರದ ಅತೃಪ್ತಿಯ ಪ್ರಮಾಣವನ್ನು ತಿಳಿಸುವ ಅಥವಾ ಸೂಚಿಸುವ ಅಥವಾ ಆ ಕರ್ತವ್ಯವನ್ನು ಇನ್ನೂ ಹೆಚ್ಚು ತೃಪ್ತಿಕರವಾಗಿ ಅವರು ಹೇಗೆ ನಿರ್ವಹಿಸಬಹುದೆಂಬುದನ್ನು ಸೂಚಿಸುವ ಪತ್ರಗಳನ್ನು ಬರೆಯುವುದು ಅಗತ್ಯವೆಂದು ಕಂಡುಬಂದಾಗ, ಅಂಥ ಪತ್ರಗಳನ್ನು
ರಹಸ್ಯ ಪತ್ರಗಳು ಅಥವಾ ಜ್ಞಾಪನ ಪತ್ರಗಳ ರೂಪದಲ್ಲಿ ಬರೆಯತಕ್ಕದ್ದು ಮತ್ತು ಆ ಪತ್ರಗಳಿಗೆ ಮುಖ್ಯ ಕಾರ್ಯದರ್ಶಿಯವರು ಸಹಿ ಹಾಕತಕ್ಕದ್ದು ಮತ್ತು ಅಂಥ ಪತ್ರಗಳ ಕರಡನ್ನು ಅನುಮೋದನೆಗಾಗಿ ಪ್ರಭಾರದಲ್ಲಿರುವ ಸಚಿವರಿಗೆ ಮತ್ತು ಮುಖ್ಯ ಮಂತ್ರಿಯವರಿಗೆ ಸಲ್ಲಿಸತಕ್ಕದ್ದು.
- (1) ವಿಧಾನ ಸಭೆಯ ಅಥವಾ ವಿಧಾನ ಪರಿಷತ್ತಿನ ಸದಸ್ಯರು ಪ್ರಶ್ನೆಯನ್ನು ಕೇಳಿದಾಗ, ವಿಧಾನ ಮಂಡಲದ ಕಾರ್ಯದರ್ಶಿಯವರು ಅದರ ಎರಡು ಪ್ರತಿಗಳನ್ನು, ಅದನ್ನು ಅಂಗೀಕರಿಸಿದ ಬಗ್ಗೆ ಸಭಾಧ್ಯಕ್ಷರ ಅಥವಾ ಸಭಾಪತಿಗಳ ಆದೇಶಗಳಿಗಾಗಿ ಕಾಯದೆ, ಸಂಬಂಧಪಟ್ಟ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿಯವರಿಗೆ ಕಳುಹಿಸುತ್ತಾರೆ. ಆ ಇಲಾಖೆಯ ಕಾರ್ಯದರ್ಶಿಯವರು, ಉತ್ತರಗಳನ್ನು ಮತ್ತು ಪೂರಕ ಪ್ರಶ್ನೆಗಳಿಗೆ ಟಿಪ್ಪಣಿಗಳನ್ನು ಸಿದ್ಧಪಡಿಸತಕ್ಕದ್ದು ಮತ್ತು ಇಲಾಖೆಯ ಪ್ರಭಾರದಲ್ಲಿರುವ ಸಚಿವರು ಸದನದಲ್ಲಿ ಆ ಪ್ರಶ್ನೆಗೆ ಉತ್ತರಿಸತಕ್ಕದ್ದು.
(2) ಆದರೆ, ಆ ಪ್ರಶ್ನೆ ಆ ಇಲಾಖೆಗೆ ಸಂಬಂಧಪಡುವುದಿಲ್ಲ ಎಂದು ಭಾವಿಸಿದರೆ, ಇಲಾಖೆಯ ಕಾರ್ಯದರ್ಶಿಯವರು ಆ ಪ್ರಶ್ನೆ ಯಾವ ಇಲಾಖೆಗೆ ಸಂಬಂಧಪಡುತ್ತದೆಂದು ತಾವು ಭಾವಿಸುತ್ತಾರೋ ಆ ಇಲಾಖೆಯ ಕಾರ್ಯದರ್ಶಿಯೊಂದಿಗೆ ಚರ್ಚಿಸಿದ ನಂತರ ಪ್ರಶ್ನೆಯ ಬಗ್ಗೆ ತೀರ್ಮಾನಕ್ಕೆ ಬರತಕ್ಕದ್ದು. ಒಂದು ವೇಳೆ ಈ ಚರ್ಚೆಯಿಂದ ಯಾವುದೇ ತೀರ್ಮಾನಕ್ಕೆ ಬರಲಾಗದಿದ್ದರೆ, ಕಾರ್ಯದರ್ಶಿಯವರು ಆ ಪ್ರಶ್ನೆಯನ್ನು ಮುಖ್ಯ ಕಾರ್ಯದರ್ಶಿಯವರಿಗೆ ಸಲ್ಲಿಸತಕ್ಕದ್ದು. ಆ ಬಗ್ಗೆ ಅವರ ತೀರ್ಮಾನವೇ ಅಂತಿಮವಾದುದಾಗಿರತಕ್ಕದ್ದು. ಪ್ರಶ್ನೆಯನ್ನು ಹಾಗೆ ವರ್ಗಾಯಿಸಿದಾಗ, ಪ್ರಶ್ನೆಗೆ ಸಂಬಂಧಪಟ್ಟ ಪ್ರಕರಣದ ಎಲ್ಲಾ ಕಾಗದ ಪತ್ರಗಳನ್ನು ಯಾವ ಇಲಾಖೆಯು ನಿರ್ವಹಿಸಬೇಕೆಂದು ನಿರ್ಧರಿಸಲಾಗುತ್ತದೋ ಆ ಇಲಾಖೆಗೆ ನೇರವಾಗಿ ಕಳುಹಿಸತಕ್ಕದ್ದು ಮತ್ತು ಅಂಥ ವರ್ಗಾವಣೆಯ ಬಗ್ಗೆ ವಿಧಾನ ಮಂಡಲದ ಕಾರ್ಯದರ್ಶಿಯವರಿಗೆ ವಾಡಿಕೆಯ ಟಿಪ್ಪಣಿಯ ಮೂಲಕ ತಿಳಿಸತಕ್ಕದ್ದು.
(3) ಪ್ರಶ್ನೆಯು ಸಂಯುಕ್ತ ಸ್ವರೂಪದ್ದಾಗಿದ್ದರೆ, ಎಂದರೆ, ಒಬ್ಬರು ಸಚಿವರಿಗಿಂತ ಹೆಚ್ಚಿನ ಸಚಿವರ ಖಾತೆಗಳಿಗೆ ಸಂಬಂಧಪಟ್ಟಿದ್ದಲ್ಲಿ, ವಿಧಾನ ಮಂಡಲದ ಕಾರ್ಯದರ್ಶಿಯವರು, ಅದನ್ನು ಪ್ರಶ್ನೆಯ ಸ್ವರೂಪವನ್ನು ಆಧರಿಸಿ, ಪ್ರಶ್ನೆಯು ಮುಖ್ಯವಾಗಿ ಯಾವ ಸಚಿವಾಲಯ ಇಲಾಖೆಗೆ ಸಂಬಂಧಪಡುತ್ತದೋ ಆ ಇಲಾಖೆಗೆ ಅದನ್ನು ರವಾನಿಸತಕ್ಕದ್ದು. ಪ್ರಶ್ನೆಯನ್ನು ಹಾಗೆ ಸ್ವೀಕರಿಸಿದ ಸಚಿವಾಲಯ ಇಲಾಖೆಯು, ಸಂಬಂಧಪಟ್ಟ ಸಚಿವಾಲಯದ ಇತರ ಇಲಾಖೆಗಳಿಂದ ವಿವರಗಳನ್ನು ಸಂಗ್ರಹಿಸಿದ ನಂತರ ಆ ಪ್ರಶ್ನೆಯ ಬಗ್ಗೆ ವ್ಯವಹರಿಸತಕ್ಕದ್ದು ಮತ್ತು ಕರಡು ಉತ್ತರಗಳನ್ನು ಸಿದ್ಧಪಡಿಸತಕ್ಕದ್ದು. ಅಂಥ ಪ್ರಶ್ನೆಗಳ ಬಗ್ಗೆ ಯಾವ ಇಲಾಖೆ ವ್ಯವಹರಿಸಬೇಕೆಂಬ ಬಗ್ಗೆ ನಿರ್ಧಾರ ಕೈಗೊಳ್ಳುವುದು ಕಷ್ಟವಾದಾಗ, ಮುಖ್ಯ ಕಾರ್ಯದರ್ಶಿಯವರ ತೀರ್ಮಾನವನ್ನು ಕೋರತಕ್ಕದ್ದು ಮತ್ತು ಆ ಬಗ್ಗೆ ಅವರ ತೀರ್ಮಾನವೇ ಅಂತಿಮವಾದುದಾಗಿರತಕ್ಕದ್ದು. ಸಂಬಂಧಪಟ್ಟ ಸಚಿವಾಲಯದ ಇತರ ಇಲಾಖೆಗಳಿಂದ ಮಾಹಿತಿಯನ್ನು ಸಂಗ್ರಹಿಸಿದ ನಂತರ ಅಂಥ ಪ್ರಶ್ನೆಗಳ ಬಗ್ಗೆ ವ್ಯವಹರಿಸುವುದು ಮತ್ತು ಕರಡು ಉತ್ತರಗಳನ್ನು ಮತ್ತು ಪೂರಕ ಪ್ರಶ್ನೆಗಳಿಗೆ ಟಿಪ್ಪಣಿಗಳನ್ನು ಸಿದ್ಧಪಡಿಸುವುದು ಆ ಇಲಾಖೆಯ ಹೊಣೆಗಾರಿಕೆಯಾಗಿರತಕ್ಕದ್ದು. ಯಾವ ಇಲಾಖೆಗೆ ಸಂಯುಕ್ತ ಪ್ರಶ್ನೆಗಳನ್ನು ಕಳುಹಿಸಲಾಗಿದೆಯೋ ಆ ಇಲಾಖೆಯ ಪ್ರಭಾರದಲ್ಲಿರುವ ಸಚಿವರು ವಿಧ್ಯುಕ್ತವಾಗಿ ಆ ಪ್ರಶ್ನೆಗಳಿಗೆ ಜವಾಬ್ದಾರರಾಗಿರುತ್ತಾರೆ ಮತ್ತು ಇಲಾಖೆಯು ವಿಧಾನ ಮಂಡಲ ಸಚಿವಾಲಯಕ್ಕೆ ಉತ್ತರಗಳನ್ನು ಕಳುಹಿಸತಕ್ಕದ್ದು.
(4) ಸಭಾಧ್ಯಕ್ಷರು / ಸಭಾಪತಿಗಳು, ಪ್ರಶ್ನೆಯನ್ನು ಅದರ ಮೂಲ ಸ್ವರೂಪದಲ್ಲಿ ಅಥವಾ ಮಾರ್ಪಾಟಾದ ಸ್ವರೂಪದಲ್ಲಿ ಅಂಗೀಕರಿಸಿ ಆದೇಶಗಳನ್ನು ಹೊರಡಿಸಿದ ಕೂಡಲೇ, ವಿಧಾನ ಮಂಡಲ ಸಚಿವಾಲಯವು ಸಂಬಂಧಪಟ್ಟ ಇಲಾಖೆಯ ಉಪಕಾರ್ಯದರ್ಶಿಯವರಿಗೆ ಅದರ ಪ್ರತಿಗಳನ್ನು ದ್ವಿಪ್ರತಿಯಲ್ಲಿ ಕಳುಹಿಸುತ್ತದೆ.
(5) ಇಲಾಖೆಯು ಸಿದ್ಧಪಡಿಸಿದ ಕರಡು ಉತ್ತರವನ್ನು ಮತ್ತು ಪೂರಕ ಪ್ರಶ್ನೆಗಳಿಗೆ ಸಂಬಂಧಿಸಿದ ಟಿಪ್ಪಣಿಯನ್ನು, ಅಗತ್ಯ ಬಿದ್ದಲ್ಲಿ ಸಚಿವಾಲಯದ ಇತರ ಇಲಾಖೆಗಳೊಂದಿಗೆ ಸಮಾಲೋಚಿಸಿ ತಿದ್ದುಪಡಿ ಮಾಡಿದ ಪ್ರಶ್ನೆಗೆ ಅನುಸಾರವಾಗಿ ಅಗತ್ಯವಿರುವಲ್ಲೆಲ್ಲಾ ತಿದ್ದುಪಡಿ ಮಾಡತಕ್ಕದ್ದು. ಪ್ರಶ್ನೆಗಳಿಗೆ ಉತ್ತರಗಳು ಮತ್ತು ಪೂರಕ ಪ್ರಶ್ನೆಗಳಿಗೆ ಉತ್ತರಿಸುವುದಕ್ಕಾಗಿ ಸಿದ್ಧಪಡಿಸಿರುವ ಟಿಪ್ಪಣಿಗಳು ಪ್ರತ್ಯೇಕ ಹಾಳೆಯಲ್ಲಿರತಕ್ಕದ್ದು.
(6) ಸಂಯುಕ್ತ ಪ್ರಶ್ನೆಗಳ ಪೂರ್ಣ ಪ್ರತಿಗಳನ್ನು, ಅವುಗಳ ಉತ್ತರಗಳು ಮತ್ತು ಪೂರಕ ಪ್ರಶ್ನೆಗಳಿಗೆ ಉತ್ತರಿಸುವುದಕ್ಕಾಗಿ ಸಿದ್ಧಪಡಿಸಿರುವ ಟಿಪ್ಪಣಿಗಳೊಂದಿಗೆ ಸಂಬಂಧಪಟ್ಟ ಎಲ್ಲ ಇಲಾಖೆಗಳಿಗೆ ಮತ್ತು ಸಚಿವರಿಗೆ ಮಾಹಿತಿಗಾಗಿ
ಕಳುಹಿಸತಕ್ಕದ್ದು. ಯಾವುದೇ ಇತರ ಇಲಾಖೆಗಳಿಗೆ ಸಂಬಂಧಪಟ್ಟ ಅಂಥ ಪ್ರಶ್ನೆಗಳ ಮೇಲಿನ ಯಾವುವೇ ಪೂರಕ ಪ್ರಶ್ನೆಗಳಿಗೆ ಅಗತ್ಯವೆನಿಸಿದರೆ ಸಂಬಂಧಪಟ್ಟ ಸಚಿವರು ಉತ್ತರ ನೀಡತಕ್ಕದ್ದು.
- (1) ಇಲಾಖೆಯ ಕಾರ್ಯದರ್ಶಿಯವರು ಸರ್ಕಾರದ ಕಾರ್ಯದರ್ಶಿಯಾಗಿರುತ್ತಾರೆ. ಅವರಿಗೆ ಸಂಬಂಧಪಟ್ಟ ಇಲಾಖೆಯಲ್ಲಿ ಸರ್ಕಾರದ ಕಾರ್ಯನೀತಿಗಳ ಬಗ್ಗೆ ಗಮನಹರಿಸುವುದು ಅವರ ಕರ್ತವ್ಯವಾಗಿರುತ್ತದೆ. ಯಾವುದೇ ಒಂದು ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲ ಸುಸಂಗತ ಅಂಶಗಳನ್ನು ನಿಖರವಾಗಿ ಸಚಿವರ ಮುಂದಿಡುವುದು ಮತ್ತು ಆ ಪ್ರಕರಣದಲ್ಲಿ ಅಂತಿಮ ಆದೇಶಗಳನ್ನು ಸಚಿವರು ಹೊರಡಿಸುವುದಕ್ಕೆ ಮುಂಚೆ ಯಾವುದೇ ಸಮಯದಲ್ಲಿ ಲಿಖಿತ ಟಿಪ್ಪಣಿಯ ಮೂಲಕ ಅಥವಾ ಮೌಖಿಕವಾಗಿ ಅಗತ್ಯ ಸಲಹೆಯನ್ನು ನೀಡುವುದು ಅವರ ಕರ್ತವ್ಯವಾಗಿರುತ್ತದೆ. ಅಲ್ಲದೆ, ಯಾವುದೇ ಪ್ರಸ್ತಾವಿತ ಕ್ರಮವು ಯಾವುದೇ ನಿಯಮ ಅಥವಾ ಕಾನೂನಿನ ಉಪಬಂಧಗಳಿಗೆ ವಿರುದ್ಧವಾಗಿದ್ದರೆ ಅಥವಾ ಸರ್ಕಾರವು ಇಲ್ಲಿಯವರೆಗೆ ಅಳವಡಿಸಿಕೊಂಡಿರುವ ನೀತಿಗಿಂತ ಭಿನ್ನವಾದುದಾಗಿದ್ದರೆ, ಆ ಸಂಗತಿಯ ಬಗ್ಗೆ ಸಚಿವರ ಗಮನ ಸೆಳೆಯುವುದು ಸಹಾ ಕಾರ್ಯದರ್ಶಿಯವರ ಕರ್ತವ್ಯವಾಗಿರತಕ್ಕದ್ದು.
(2) ಕಾರ್ಯದರ್ಶಿಯವರು, ಪ್ರಭಾರದಲ್ಲಿರುವ ಸಚಿವರ ಅನುಮೋದನೆ ಪಡೆದು, ತಮ್ಮ ಅಧೀನದಲ್ಲಿ ಕೆಲಸ ಮಾಡುತ್ತಿರುವ ಅಪರ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿಗಳು, ಉಪಕಾರ್ಯದರ್ಶಿಗಳು ಮತ್ತು ಅಧೀನ ಕಾರ್ಯದರ್ಶಿಗಳಿಗೆ ತಾವು ಅಗತ್ಯವೆಂದು ಭಾವಿಸುವಂಥ ಅಧಿಕಾರಗಳನ್ನು ಈ ನಿಯಮಗಳ ಉಪಬಂಧಗಳ ಪಾಲನೆಗೆ ಒಳಪಟ್ಟು ಪ್ರತ್ಯಾಯೋಜಿಸಬಹುದು.
-
ಈ ನಿಯಮಗಳನ್ನು ಅರ್ಥೈಸುವಲ್ಲಿ ಯಾವುದೇ ಸಂದೇಹ ಉದ್ಭವಿಸಿದರೆ, ಅದನ್ನು ಮುಖ್ಯಮಂತ್ರಿಯವರಿಗೆ ಕಳುಹಿಸತಕ್ಕದ್ದು, ಮತ್ತು ಅದರ ಮೇಲೆ ಅವರ ತೀರ್ಮಾನ ಅಂತಿಮವಾದುದಾಗಿರತಕ್ಕದ್ದು.
-
ಮುಖ್ಯ ಕಾರ್ಯದರ್ಶಿಯವರು ಮತ್ತು ಸಂಬಂಧಪಟ್ಟ ಇಲಾಖೆಯ ಕಾರ್ಯದರ್ಶಿಯವರು, ಕಾರ್ಯಕಲಾಪಗಳ ಸರಿಯಾದ ನಿರ್ವಹಣೆಗೆ ಮತ್ತು ಈ ನಿಯಮಗಳನ್ನು ಎಚ್ಚರಿಕೆಯಿಂದ ಪಾಲಿಸುವುದಕ್ಕೆ ಪ್ರತ್ಯೇಕ ಪ್ರತ್ಯೇಕವಾಗಿ ಜವಾಬ್ದಾರರಾಗಿರುತ್ತಾರೆ ಮತ್ತು ಅವುಗಳಲ್ಲಿ ಮುಖ್ಯಾಂಶಗಳನ್ನು ಕೈಬಿಡಲಾಗಿದೆ ಎಂದು ಇಬ್ಬರಲ್ಲಿ ಯಾರೊಬ್ಬರೂ ಭಾವಿಸಿದರೂ, ಅವರು ಅದನ್ನು ಖುದ್ದಾಗಿ, ಸಂದರ್ಭಾನುಸಾರ, ಪ್ರಭಾರದಲ್ಲಿರುವ ಸಚಿವರ ಮೂಲಕ ಮುಖ್ಯ ಮಂತ್ರಿಯವರ ಗಮನಕ್ಕೆ ತರತಕ್ಕದ್ದು.
-
1956ರ ಕರ್ನಾಟಕ ಸರ್ಕಾರದ ಸಚಿವಾಲಯದ ಸೂಚನೆಗಳ 23ನೇ ಮತ್ತು 24ನೇ ಸೂಚನೆಗಳಿಗೆ ಅನುಸಾರವಾಗಿ ಹಣಕಾಸು ಇಲಾಖೆಯು ಹೊರಡಿಸಿದ ಆದೇಶಗಳು ಮತ್ತು ರಚಿಸಿದ ನಿಯಮಗಳು ಜಾರಿಯಲ್ಲಿರುವುದು ಮುಂದುವರೆಯತಕ್ಕದ್ದು ಮತ್ತು ಈ ನಿಯಮಗಳ 45 ಮತ್ತು 46ನೇ ನಿಯಮಗಳ ಮೇರೆಗೆ ಅವುಗಳನ್ನು ರಚಿಸಲಾಗಿದೆ ಎಂದು ಭಾವಿಸತಕ್ಕದ್ದು.
ಮೊದಲನೇ ಅನುಸೂಚಿ
(12, 20 ಮತ್ತು 21ನೇ ನಿಯಮಗಳನ್ನು ನೋಡಿ)
(ಸಚಿವ ಸಂಪುಟದ ಮುಂದೆ ಮಂಡಿಸಬೇಕಾಗಿರುವ ಪ್ರಕರಣಗಳು)
-
ಅಧ್ಯಾದೇಶಗಳೂ ಒಳಗೊಂಡಂತೆ ಶಾಸನಗಳ ಪ್ರಸ್ತಾವಗಳು, ಆದರೆ ಪೂರ್ಣವಾಗಿ ಔಪಚಾರಿಕ ಸ್ವರೂಪದ ಅಥವಾ ಅತಿ ಕಡಿಮೆ ಪ್ರಾಮುಖ್ಯತೆ ಹೊಂದಿರುವ ವಿಷಯಗಳೆಂದು ಮುಖ್ಯ ಮಂತ್ರಿಯವರು ಅಭಿಪ್ರಾಯ ಪಡುವ ಪ್ರಸ್ತಾವಗಳನ್ನು ಹೊರತುಪಡಿಸಿ.
-
ಯಾವ ಪ್ರಕರಣದಲ್ಲಿ ವಿಧಾನ ಮಂಡಲದಲ್ಲಿ ಮಂಡಿಸಬೇಕಾದ ಗೊತ್ತುವಳಿಗಳ ಬಗ್ಗೆ ಸರ್ಕಾರದ ಧೋರಣೆಯನ್ನು ನಿರ್ಧರಿಸಬೇಕಾಗಿದೆಯೋ ಆ ಯಾವುದೇ ಪ್ರಕರಣ:
1 [ಪರಂತು, ಪ್ರಕರಣವು ತುರ್ತು ಸ್ವರೂಪದ್ದಾಗಿದ್ದು ಸಚಿವ ಸಂಪುಟದ ಅನುಮೋದನೆಯನ್ನು ಪಡೆಯುವುದು ಕಾರ್ಯಸಾಧ್ಯವಿಲ್ಲದಿದ್ದಾಗ, ಇಲಾಖೆಯ ಪ್ರಭಾರದಲ್ಲಿರುವ ಸಚಿವರ ಮತ್ತು ಮುಖ್ಯ ಮಂತ್ರಿಯವರ ಅನುಮೋದನೆ ಪಡೆದು ಸರ್ಕಾರದ ಅಂಥ ಧೋರಣೆಯನ್ನು ನಿರ್ಧರಿಸಬಹುದು].
-
ವಿಧಾನ ಮಂಡಲವನ್ನು ಕರೆಯುವ ಮತ್ತು ಮುಂದೂಡುವ, ವಿಧಾನ ಸಭೆಯನ್ನು ವಿಸರ್ಜಿಸುವ, ವಿಧಾನ 2 ಪರಿಷತ್ತಿಗೆ ನಾಮನಿರ್ದೇಶನಗಳನ್ನು ಮಾಡುವ [] ಮತ್ತು ಸಂಬಂಧಪಟ್ಟ ಇತರ ವಿಷಯಗಳಿಗೆ ಸಂಬಂಧಿಸಿದ ಪ್ರಕರಣಗಳು.
-
ರಾಜ್ಯ ವಿಧಾನ ಮಂಡಲದ ಸದನದ ಸದಸ್ಯನು 191ನೇ ಅನುಚ್ಚೇದದ ಅಡಿಯಲ್ಲಿ ಯಾವುದೇ ಅನರ್ಹತೆಗೆ ಒಳಗಾಗಿದ್ದಾನೆಯೇ ಎಂಬುದರ ಬಗ್ಗೆ ಉದ್ಭವಿಸುವ ಪ್ರಶ್ನೆಗಳ ಮೇಲಿನ ತೀರ್ಮಾನ ಮತ್ತು ಅಂಥ ಪ್ರಶ್ನೆಗಳನ್ನು ಚುನಾವಣಾ ಆಯೋಗಕ್ಕೆ ಅದರ ಅಭಿಪ್ರಾಯಕ್ಕಾಗಿ ಕಳುಹಿಸಿಕೊಡುವ ಯಾವುವೇ ಪ್ರಸ್ತಾವಗಳು; 193ನೇ ಅನುಚ್ಛೇದದ ಅಡಿಯಲ್ಲಿ ಬಾಕಿಯಿರುವ ದಂಡವನ್ನು ವಸೂಲು ಮಾಡುವುದಕ್ಕೆ ಅಥವಾ ವಸೂಲಿಯನ್ನು ಮನ್ನಾ ಮಾಡುವುದಕ್ಕೆ ಸಂಬಂಧಿಸಿದ ಯಾವುದೇ ಪ್ರಸ್ತಾವ ;
-
ಆಂಗ್ಲೋ ಇಂಡಿಯನ್ ಸಮುದಾಯದ ಪ್ರಾತಿನಿಧ್ಯಕ್ಕೆ ಅವಕಾಶ ಕಲ್ಪಿಸುವ ಪ್ರಸ್ತಾವಗಳು.(ಅನುಚ್ಛೇದ- 333);
-
252ನೇ ಅನುಚ್ಛೇದದ ಅಡಿಯಲ್ಲಿ ಗೊತ್ತುವಳಿಗಳನ್ನು ಮಂಡಿಸುವುದಕ್ಕೆ ಸಂಬಂಧಿಸಿದ ಪ್ರಸ್ತಾವಗಳು.
-
258-ಎ ಅನುಚ್ಛೇದದ ಅಡಿಯಲ್ಲಿ ರಾಜ್ಯ ಸರ್ಕಾರದ ಪ್ರಕಾರ್ಯಗಳನ್ನು ಭಾರತ ಸರ್ಕಾರಕ್ಕೆ ಅಥವಾ ಅದರ ಅಧಿಕಾರಿಗಳಿಗೆ ವಹಿಸಿಕೊಡುವುದಕ್ಕೆ ಸಂಬಂಧಿಸಿದ ಪ್ರಸ್ತಾವಗಳು.
3 ["8. ಸಿಬ್ಬಂದಿ ಮುಂತಾದವರಿಗೆ ಸಂಬಂಧಪಟ್ಟ ವಾಡಿಕೆಯ ಸೂಚನೆಗಳನ್ನು ಮತ್ತು ಪ್ರಸ್ತಾವಗಳನ್ನು ಹೊರತುಪಡಿಸಿ, ಚುನಾವಣಾ ಆಯೋಗದಿಂದ ಬಂದ, ಮುಖ್ಯ ಕಾಗದ ಪತ್ರಗಳು ಮತ್ತು ಅವುಗಳ ಮೇಲೆ ಕೈಗೊಳ್ಳಲು ಉದ್ದೇಶಿಸಿರುವ ಕ್ರಮ].
3 ["9. ಹೊಸ ತೆರಿಗೆಯನ್ನು ವಿಧಿಸುವುದಕ್ಕೆ ಅಥವಾ ಕರನಿರ್ಧರಣೆಯ ವಿಧಾನದಲ್ಲಿ ಅಥವಾ ಹಾಲಿ ಇರುವ ತೆರಿಗೆ ದರದಲ್ಲಿ, ಭೂಕಂದಾಯ ಅಥವಾ ನೀರಿನ ದರಗಳಲ್ಲಿ ಯಾವುದೇ ಬದಲಾವಣೆ ಮಾಡುವುದಕ್ಕೆ, ರಾಜ್ಯದ ಸಾಮಾನ್ಯ ಆದಾಯದ ಭದ್ರತೆಯ ಮೇಲೆ ಸಾಲಗಳನ್ನು ಎತ್ತುವುದಕ್ಕೆ ಅಥವಾ ಹತ್ತು ಕೋಟಿ ರೂ.ಗಳನ್ನು ಮೀರುವ ನಿರ್ದಿಷ್ಟ ಪ್ರಸ್ತಾವದಲ್ಲಿ ಸರ್ಕಾರವು ಖಾತರಿ ನೀಡುವುದಕ್ಕೆ ಸಂಬಂಧಿಸಿದ ಪ್ರಸ್ತಾವಗಳು."]
-
ವಿಧಾನ ಮಂಡಲದ ಮುಂದೆ ಮಂಡಿಸಬೇಕಾದ ಸಂಬಂಧಪಟ್ಟ ಕಾಗದ ಪತ್ರಗಳು ಮತ್ತು ಪೂರಕ ಬೇಡಿಕೆಗಳ ಪ್ರಸ್ತಾವಗಳೂ ಸೇರಿದಂತೆ ವಾರ್ಷಿಕ ಹಣಕಾಸು ವಿವರಣಪಟ್ಟಿ.
-
ರಾಜ್ಯದ ಹಣಕಾಸು ಪರಿಸ್ಥಿತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಅಥವಾ ಹಣಕಾಸು ಇಲಾಖೆಯ ಪ್ರಭಾರದಲ್ಲಿರುವ ಸಚಿವರು ಸಹಮತಿ ನೀಡದಿರುವ, ಅನುದಾನದೊಳಗಿನ ಮರು ಹಂಚಿಕೆಗೆ ಸಂಬಂಧಿಸಿದ ಯಾವುವೇ ಪ್ರಸ್ತಾವಗಳು.
-
ಅಧಿಸೂಚನೆ ಸಂ; ಡಿಸಿಎ 15 ಎಆರ್ಬಿ 83, ದಿನಾಂಕ; 29.11.1983 ರ ಮೂಲಕ ಸೇರಿಸಲಾಗಿದೆ.
-
ಅಧಿಸೂಚನೆ ಸಂ: ಡಿಸಿಎ 8 ಎಆರ್ಬಿ 84, ದಿನಾಂಕ; 26.7.1985 ರ ಮೂಲಕ ಬಿಟ್ಟುಬಿಡಲಾಗಿದೆ.
-
ಅಧಿಸೂಚನೆ ಸಂ: ಡಿಸಿಎ 20 ಎಆರ್ಬಿ 96, ದಿನಾಂಕ; 23.8.2000, ಕೆಜಿಡಿ 29.8.2000ದ ಮೂಲಕ ಪ್ರತಿಯೋಜಿಸಲಾಗಿದೆ.
[12. ಕರ್ನಾಟಕ ಭೂ ಕಂದಾಯ ಅಧಿನಿಯಮ 1964, ಮತ್ತು ಅದರ ಮೇರೆಗೆ ರಚಿಸಲಾದ ನಿಯಮಗಳು ಅಥವಾ ಯಾವುದೇ ಇತರ ಅಧಿನಿಯಮ ಅಥವಾ ನಿಯಮಗಳು ಅಥವಾ ಸರ್ಕಾರದಿಂದ ಅನುಮೋದಿತವಾದ ಯಾವುದೇ ಸಾಮಾನ್ಯ ಯೋಜನೆಯ ಉಪಬಂಧಗಳಿಗೆ ಅನುಸಾರವಾಗಿ ಇಲ್ಲದಿದ್ದರೆ ಅಥವಾ ಅದರ ಹಣದ ಮೌಲ್ಯವು ಐವತ್ತು ಲಕ್ಷ ರೂಪಾಯಿಗಳನ್ನು ಮೀರುತ್ತಿದ್ದರೆ, ಸರ್ಕಾರದ ಸ್ವತ್ತಿನ ಮಾರಾಟ, ಮಂಜೂರಾತಿ ಅಥವಾ ಗುತ್ತಿಗೆಯ ಮೂಲಕ ತಾತ್ಕಾಲಿಕವಾಗಿ ಅಥವಾ ಖಾಯಂ ಆಗಿ ಹಾಗೆ ಪರಭಾರೆ ಮಾಡುವ ಅಥವಾ ಆದಾಯವನ್ನು ಬಿಟ್ಟುಬಿಡುವ ಅಥವಾ ಕಡಿಮೆ ಮಾಡುವುದನ್ನು ಒಳಗೊಂಡ ಪ್ರಸ್ತಾವಗಳು"]
-
ರಾಜ್ಯದ ಹಣಕಾಸುಗಳ ವಾರ್ಷಿಕ ಲೆಕ್ಕಪರಿಶೋಧನಾ ಪುನರವಲೋಕನ ಮತ್ತು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಮತ್ತು ಅಂದಾಜು ಸಮಿತಿಯ ವರದಿಗಳು.
-
ಸರ್ಕಾರವು ಸ್ವಪ್ರೇರಣೆಯಿಂದ ಅಥವಾ ವಿಧಾನಮಂಡಲದಲ್ಲಿ ಅಂಗೀಕರಿಸಿದ ಗೊತ್ತುವಳಿಯ ಅನುಸಾರವಾಗಿ ನೇಮಕ ಮಾಡಿದ ವಿಚಾರಣಾ ಸಮಿತಿಗಳ ವರದಿಗಳು.
1 [15. ಐದು ಕೋಟಿ ರೂ.ಗಳನ್ನು ಮೀರಿದ ಕಾಮಗಾರಿ ಅಂದಾಜುಗಳ ಆಡಳಿತಾತ್ಮಕ ಅನುಮೋದನೆ:
ಪರಂತು, ಅಂಥ ಅಂದಾಜುಗಳನ್ನು ತದನಂತರ ಪರಿಷ್ಕರಿಸಿದ್ದು, ಪರಿಷ್ಕೃತ ಅಂದಾಜುಗಳು ಮೂ ಅಂದಾಜುಗಳಿಗಿಂತ ಶೇಕಡಾ 25ರಷ್ಟು ಅಥವಾ ಮೂರು ಕೋಟಿ ರೂ.ಗಳಷ್ಟು, ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟನ್ನೂ ಮೀರಿದರೆ, ಅದನ್ನು ಮತ್ತೆ ಸಚಿವ ಸಂಪುಟದ ಮುಂದೆ ಮಂಡಿಸತಕ್ಕದ್ದು:
ಪರಂತು, ಮುಖ್ಯ ಮಂತ್ರಿಗಳು, ಪ್ರಕರಣವು ತುರ್ತು ಸ್ವರೂಪದ್ದಾಗಿದ್ದರೆ, ಯಾವ ಪ್ರಕರಣದಲ್ಲಿ ಈ ನಿಯಮದ ಮೂಲಕ ಸಚಿವ ಸಂಪುಟದ ಮುಂದೆ ಮಂಡಿಸಲು ಅನ್ಯಥಾ ಅಗತ್ಯಪಡಿಸಲಾಗಿದೆಯೋ ಆ ಪ್ರಕರಣದ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಲು ಪ್ರಭಾರದಲ್ಲಿರುವ ಸಚಿವರಿಗೆ ಅನುಮತಿ ನೀಡಬಹುದು".]
2 [16. ಈ ಮುಂದಿನವುಗಳಿಗೆ ಸಂಬಂಧಿಸಿದ ಪ್ರಸ್ತಾವಗಳು -
(i) ರಾಜ್ಯ ಸರ್ಕಾರವು ಅಥವಾ ಸಾರ್ವಜನಿಕ ವಲಯ ಉದ್ಯಮವು ಪೂರ್ಣ ಒಡೆತನ ಹೊಂದಿರುವ ಅಥವಾ ಭಾಗಶಃ ಹಣಕಾಸು ನೆರವು ನೀಡಿರುವ ಹೊಸ ನಿಗಮಗಳ ಅಥವಾ ಕಂಪನಿಗಳ ಸೃಜನೆ ;
1 [(ii) ರಾಜ್ಯ ಸರ್ಕಾರವು ಅಥವಾ ಸಾರ್ವಜನಿಕ ವಲಯ ಉದ್ಯಮವು,
(ಎ) ಹಣಕಾಸು ಇಲಾಖೆಯು ಒಪ್ಪಿಗೆ ನೀಡದಿರುವ; ಅಥವಾ
(ಬಿ) ಈಕ್ವಿಟಿ ಭಾಗವಹಿಸುವಿಕೆಯ ಹಣದ ಮೌಲ್ಯ ಒಂದು ಕೋಟಿ ರೂ.ಗಳನ್ನು ಮೀರುವಂಥ ಅಥವಾ ಅದು
ಹೊಸ ಕಂಪನಿ ಅಥವಾ ನಿಗಮದ ಷೇರು ಬಂಡವಾಳದ ಶೇ. 25ರಷ್ಟನ್ನು ಮೀರುವಂಥ
- ಹೊಸ ಅಥವಾ ಈಗಿರುವ ನಿಗಮಕ್ಕೆ ಅಥವಾ ಕಂಪನಿಗೆ ಷೇರು ಬಂಡವಾಳವನ್ನು ಒದಗಿಸುವ ಮೂಲಕ ಭಾಗವಹಿಸುವುದು.
(iii) ಕರ್ನಾಟಕ ರಾಜ್ಯ ಕೈಗಾರಿಕಾ ಬಂಡವಾಳ ಹೂಡಿಕೆ ಮತ್ತು ಅಭಿವೃದ್ಧಿ ನಿಗಮದಿಂದ ಒಂದು ಕೋಟಿ ರೂ.ಗಳಿಗೆ ಮೀರಿದ ಷೇರು ಬಂಡವಾಳವನ್ನು ಮತ್ತು ಕರ್ನಾಟಕ ರಾಜ್ಯ ಹಣಕಾಸು ನಿಗಮದಿಂದ ಎಪ್ಪತ್ತೈದು ಲಕ್ಷ ರೂ.ಗಳಿಗೆ ಮೀರಿದ ಷೇರು ಬಂಡವಾಳವನ್ನು ಈಗಿರುವ ನಿಗಮಕ್ಕೆ ಅಥವಾ ಕಂಪನಿಗೆ ಒದಗಿಸುವುದು;]
(iv) ಸಾರ್ವಜನಿಕ ವಲಯ ಉದ್ಯಮಗಳ ಸಮಾಪನ, ವಿಲೀನಗೊಳಿಸುವಿಕೆ ಅಥವಾ ಅವುಗಳ ರಚನೆಯಲ್ಲಿ ಮರುಸಂಘಟನೆಯ ಅಂಥ ಇತರ ಮುಖ್ಯ ಪರಿಯೋಜನೆಗಳು ;
(v) ರಾಜ್ಯದ ಒಡೆತನದಲ್ಲಿರುವ ಸಾರ್ವಜನಿಕ ನಿಗಮಗಳು, ಕಂಪನಿಗಳು, ಉದ್ಯಮಗಳು ಮತ್ತು ಯೋಜನೆಗಳ ಬಂಡವಾಳ ಹೂಡಿಕೆಯ ಅಂದಾಜುಗಳಲ್ಲಿ ಹೆಚ್ಚಳವು ಶೇಕಡಾ 50ಕ್ಕಿಂತ ಹೆಚ್ಚಾಗಿದ್ದಲ್ಲಿ ಮತ್ತು ಅಂಥ ಹೆಚ್ಚಳಕ್ಕಾಗಿ ಭಾಗಶಃ ಅಥವಾ ಪೂರ್ಣವಾಗಿ ಸರ್ಕಾರವು ಹಣ ಒದಗಿಸುವಲ್ಲಿ;
- ಅಧಿಸೂಚನೆ ಸಂ; ಡಿಸಿಎ 20 ಎಆರ್ಬಿ96, ದಿನಾಂಕ: 23.8.2000 ಕೆಜಿಡಿ 29.8.2000 ರ ಮೂಲಕ ಪ್ರತಿಯೋಜಿಸಲಾಗಿದೆ. 2. ಅಧಿಸೂಚನೆ ಸಂ: ಡಿಸಿಎ 23 ಎಆರ್ಬಿ 83, ದಿನಾಂಕ: 26.06.84ರ ಮೂಲಕ ಪ್ರತಿಯೋಜಿಸಲಾಗಿದೆ.
(vi) ರಾಜ್ಯದ ಒಡೆತನದಲ್ಲಿರುವ ಯಾವುದೇ ಸಾರ್ವಜನಿಕ ನಿಗಮ, ಕಂಪನಿ, ಉದ್ಯಮ ಅಥವಾ ಯೋಜನೆಯಿಂದ ಈಗಿರುವ ಯೋಜನೆಗಳನ್ನು ವಿಸ್ತರಿಸುವುದು ಅಥವಾ ಹೊಸ ಯೋಜನೆಗಳನ್ನು ಸ್ಥಾಪಿಸುವುದು ಅಥವಾ ಹೊಸ ಬಗೆಯ ಉತ್ಪಾದನಾ ಮಾರ್ಗಗಳನ್ನು ಕಂಡುಕೊಳ್ಳುವುದು, ಅಂಥ ಹೊಸ ಯೋಜನೆಗಳನ್ನು ವಿಸ್ತರಿಸುವುದು ಅಥವಾ ಉತ್ಪಾದನೆಯ ಹೊಸ ಮಾರ್ಗಗಳನ್ನು ಕಂಡುಕೊಳ್ಳುವುದು ಮೂರು ಕೋಟಿ ರೂ.ಗಳಿಗೆ ಕಡಿಮೆಯಿಲ್ಲದ ಯಾವುದೇ ಬಂಡವಾಳ ವೆಚ್ಚವನ್ನು ಒಳಗೊಂಡಿದ್ದಲ್ಲಿ, ಅಥವಾ ಈಗಿರುವ ಯೋಜನೆಗಳ ಅಂಥ ವಿಸ್ತರಣೆಯ ಅಥವಾ ಹೊಸ ಯೋಜನೆಗಳ ಸ್ಥಾಪನೆ ಅಥವಾ ಹೊಸ ಉತ್ಪಾದನೆಗಳ ಮಾರ್ಗಗಳನ್ನು ಕಂಡುಕೊಳ್ಳುವುದರ ಮೇಲಿನ ಬಂಡವಾಳ ವೆಚ್ಚಕ್ಕೆ ರಾಜ್ಯ ಸರ್ಕಾರವು ಭಾಗಶಃ ಅಥವಾ ಪೂರ್ಣವಾಗಿ ಹಣಕಾಸು ನೀಡಿದ್ದಲ್ಲಿ ಅಥವಾ ರಾಜ್ಯ ಸರ್ಕಾರವು ಭಾಗಶಃ ಅಥವಾ ಪೂರ್ಣವಾಗಿ ಹಣಕಾಸು ಖಾತರಿ ನೀಡುವ ಮೂಲಕ ನೆರವು ನೀಡಿದ್ದಲ್ಲಿ ಅಥವಾ ಬಂಡವಾಳ ವೆಚ್ಚವು ಅಂಥ ನಿಗಮ, ಕಂಪನಿ ಅಥವಾ ಉದ್ಯಮ ಅಥವಾ ಯೋಜನೆಯ ಒಟ್ಟು ಬ್ಲಾಕ್ನ ಶೇಕಡಾ 25ರಷ್ಟನ್ನು ಮೀರಿದ, ಅಂಥ ಪ್ರಸ್ತಾವ")] ಮತ್ತು
(vii) ಮರುಹಣಕಾಸು ಒದಗಿಸುವ ಉದ್ದೇಶಗಳಿಗಾಗಿ ಭಾರತದ ಕೈಗಾರಿಕಾ ಅಭಿವೃದ್ಧಿ ಬ್ಯಾಂಕು ವಿಧಿಸಿರುವ ಪರಿಮಿತಿಗಳನ್ನು ಮೀರಿ ಕರ್ನಾಟಕ ರಾಜ್ಯ ಕೈಗಾರಿಕಾ ಬಂಡವಾಳ ಹೂಡಿಕೆ ಮತ್ತು ಅಭಿವೃಧ್ಧಿ ನಿಗಮವು ಮತ್ತು ಕರ್ನಾಟಕ ರಾಜ್ಯ ಹಣಕಾಸು ನಿಗಮವು ಸಾಲಗಳನ್ನು ಮಂಜೂರು ಮಾಡುವುದು.
-
ರಾಜ್ಯದ ವ್ಯವಹಾರಗಳ ಸಂಬಂಧದಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳ ನೇಮಕಾತಿಯನ್ನು ಮತ್ತು ಸೇವಾ ಷರತ್ತುಗಳನ್ನು ನಿಯಂತ್ರಿಸುವ ನಿಯಮಗಳನ್ನು ರಚಿಸುವ ಅಥವಾ ತಿದ್ದುಪಡಿ ಮಾಡುವ ಪ್ರಸ್ತಾವಗಳು ಕಡಿಮೆ ಪ್ರಾಮುಖ್ಯತೆ ಉಳ್ಳವಾಗಿದ್ದ ಹೊರತು, ಅಂಥ ಪ್ರಸ್ತಾವಗಳು.
-
ಅಸಮರ್ಥತಾ ನಿವೃತ್ತಿ ವೇತನದ ಮೇಲೆ ಅಥವಾ ಜನ್ಮ ದಿನಾಂಕದ ಪರಿಷ್ಕರಣೆಯ ಪರಿಣಾಮವಾಗಿ ನಿವೃತ್ತಿ ಹೊಂದಿರುವ ಆ ವ್ಯಕ್ತಿಯನ್ನು ಮರು ನೇಮಕ ಮಾಡುವ ಅಥವಾ ಶಿಕ್ಷಣ ಇಲಾಖೆಯಲ್ಲಿ ಉಪಾಧ್ಯಾಯರನ್ನು ಶೈಕ್ಷಣಿಕ ವರ್ಷದ ಕೊನೆಯವರೆಗೆ ಮರುನೇಮಕ ಮಾಡುವ ಪ್ರಸ್ತಾವಗಳನ್ನು ಹೊರತುಪಡಿಸಿ ಪ್ರಭಾರದಲ್ಲಿರುವ ಸಚಿವರು ಅನುಮೋದಿಸಿದ, ನಿವೃತ್ತಿ ಹೊಂದಿದ ವ್ಯಕ್ತಿಯ ಮರು ನೇಮಕ ಮಾಡುವ ಅಥವಾ ಕಡ್ಡಾಯ ನಿವೃತ್ತಿಯ ದಿನಾಂಕದ ನಂತರ ಸರ್ಕಾರಿ ನೌಕರನನ್ನು ಸೇವೆಯಲ್ಲಿ ಉಳಿಸಿಕೊಳ್ಳುವ ಪ್ರಸ್ತಾವಗಳು.
-
(ಎ) ಸರ್ಕಾರವು ಪ್ರಮುಖ ಹಣಕಾಸು ಹಿತಾಸಕ್ತಿಯನ್ನು ಹೊಂದಿರುವ, ಸರ್ಕಾರದ ಮಾಲೀಕತ್ವಕ್ಕೆ ಒಳಪಟ್ಟಿರುವ ಅಥವಾ ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟಿರುವ ಶಾಸನಬದ್ಧ / ಶಾಸನ ಬದ್ಧವಲ್ಲದ ಸಂಸ್ಥೆಗಳಲ್ಲಿ, ಕಂಪನಿಗಳಲ್ಲಿ, ನಿಗಮಗಳಲ್ಲಿ ಮುಂತಾದವುಗಳಲ್ಲಿ ತಮ್ಮ ನಿವೃತ್ತಿಯ ನಂತರ ಮರುನೇಮಕಗೊಳ್ಳಲು ಉದ್ದೇಶಿಸುವ ಗೆಜೆಟೆಡ್ ಸರ್ಕಾರಿ ನೌಕರರಿಗೆ ಅನುಮತಿ ನೀಡುವ; ಅಥವಾ
(ಬಿ) ಮೇಲೆ (ಎ) ನಲ್ಲಿ ಉಲ್ಲೇಖಿಸಲಾದ ಸಂಸ್ಥೆಗಳಲ್ಲಿ ನಿವೃತ್ತ ಗೆಜಿಟೆಡ್ ಸರ್ಕಾರಿ ನೌಕರರ ಮರುನೇಮಕದ ಪ್ರಸ್ತಾವಗಳು.
1 20. [ರಾಜ್ಯದ ವ್ಯವಹಾರಗಳಿಗೆ ಸಂಬಂಧಪಟ್ಟಂತೆ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳ ನೇಮಕಾತಿಯನ್ನು ಮತ್ತು ಸೇವಾ ಷರತ್ತುಗಳನ್ನು ನಿಯಂತ್ರಿಸುವ ನಿಯಮಗಳನ್ನು ರಚಿಸುವುದಕ್ಕಾಗಿ ಅಥವಾ ತಿದ್ದುಪಡಿ ಮಾಡುವ ಪ್ರಸ್ತಾವಗಳನ್ನು ಹೊರತುಪಡಿಸಿ] ನೇಮಕಗಳ ಬಗ್ಗೆ ಅಥವಾ ಯಾವ ಪ್ರಕರಣಗಳಲ್ಲಿ ಇತರ ಪ್ರಮುಖ ಕ್ರಮಗಳ ಬಗ್ಗೆ ಲೋಕಸೇವಾ ಆಯೋಗದೊಂದಿಗೆ ಸಮಾಲೋಚಿಸಲಾಗಿದೆಯೋ ಆ ಪ್ರಕರಣಗಳಲ್ಲಿ, ಲೋಕಸೇವಾ ಆಯೋಗವು ನೀಡಿರುವ ಶಿಫಾರಸ್ಸಿಗೆ ಅಸಂಗತವಾಗಿರುವ ಪ್ರಸ್ತಾವಗಳು,
2 [ಲೋಕಾಯುಕ್ತರು ಅಥವಾ 21. ಸರ್ಕಾರಿ ನೌಕರನ ವಿರುದ್ಧ ಶಿಸ್ತು ಕ್ರಮಕ್ಕೆ ಸಂಬಂಧಪಟ್ಟಂತೆ ಉಪಲೋಕಾಯುಕ್ತ] ರು ಮಾಡಿರುವ ಶಿಫಾರಸ್ಸಿಗೆ ಅಸಂಗತವಾದ ಪ್ರಸ್ತಾವಗಳು.
2
-
[ಲೋಕಾಯುಕ್ತ ಅಥವಾ ಉಪಲೋಕಾಯುಕ್ತ] ರ ವಾರ್ಷಿಕ ವರದಿ
-
ಅಧಿಸೂಚನೆ ಸಂ; ಡಿಸಿಎ 20 ಎಆರ್ಬಿ 96, ದಿನಾಂಕ; 23.8.2000 ಕೆಜಿಡಿಎಕ್ಸ್ 29.8.2000 ಮೂಲಕ ಸೇರಿಸಲಾಗಿದೆ.
-
ಅಧಿಸೂಚನೆ ಸಂ: ಡಿಸಿಎ 1 ಎಆರ್ಬಿ 86 ದಿನಾಂಕ: 23.6.1986 ರ ಮೂಲಕ ಪ್ರತಿಯೋಜಿಸಲಾಗಿದೆ.
-
[ಅನಧಿಕೃತ ಗೈರುಹಾಜರಿಯ ಆರೋಪವು ರುಜುವಾತಾದುದಕ್ಕಾಗಿ ಕರ್ನಾಟಕ ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು, 1957ರ ಪ್ರಕಾರ, ವಜಾ ಮಾಡುವ ಅಥವಾ ತೆಗೆದುಹಾಕುವ 2 [ಸಮೂಹ ಎ ಅಥವಾ ಕಡ್ಡಾಯವಾಗಿ ನಿವೃತ್ತಿಗೊಳಿಸುವ ದಂಡನೆಗಳನ್ನು ವಿಧಿಸುವ ಪ್ರಸ್ತಾವಗಳನ್ನು ಹೊರತುಪಡಿಸಿ.] 2 ಅಥವಾ ಸಮೂಹ ಬಿ ಹುದ್ದೆಗಳನ್ನು ಧಾರಣ ಮಾಡಿರುವ] ಯಾರೇ ಅಧಿಕಾರಿಗಳನ್ನು 311ನೇ ಅನುಚ್ಛೇದದ ಮೇರೆಗೆ ವಜಾ ಮಾಡುವುದಕ್ಕೆ, ತೆಗೆದುಹಾಕುವುದಕ್ಕೆ ಅಥವಾ ಕಡ್ಡಾಯವಾಗಿ ನಿವೃತ್ತಿಗೊಳಿಸುವುದಕ್ಕೆ ಸಂಬಂಧಿಸಿದ ಪ್ರಸ್ತಾವಗಳು.
-
ಲೋಕ ಸೇವಾ ಆಯೋಗದ ಕಾರ್ಯನಿರ್ವಹಣೆಯ ಬಗ್ಗೆ (ಅನುಚ್ಛೇದ 323(2)) ವರದಿ ಮತ್ತು ಅದಕ್ಕೆ ಸಂಬಂಧಪಟ್ಟಂತೆ ಕೈಗೊಳ್ಳಲು ಪ್ರಸ್ತಾವಿಸಿರುವ ಯಾವುದೇ ಕ್ರಮ.
-
ಲೋಕಸೇವಾ ಆಯೋಗದ ಅಧ್ಯಕ್ಷರ ಮತ್ತು ಸದಸ್ಯರ ನೇಮಕಕ್ಕೆ ಸಂಬಂಧಿಸಿದ ಪ್ರಸ್ತಾವಗಳು.
-
ಅಡ್ವೊಕೇಟ್ ಜನರಲ್ರವರ ನೇಮಕಕ್ಕೆ ಅಥವಾ ತೆಗೆದು ಹಾಕುವುದಕ್ಕೆ ಅಥವಾ ಅವರಿಗೆ ಸಂದಾಯ ಮಾಡಬೇಕಾದ ಸಂಭಾವನೆಯನ್ನು ನಿರ್ಧರಿಸುವುದಕ್ಕೆ ಅಥವಾ ವ್ಯತ್ಯಾಸ ಮಾಡುವುದಕ್ಕೆ ಸಂಬಂಧಿಸಿದ ಪ್ರಸ್ತಾವಗಳು.
-
ಮುಖ್ಯ ಕಾರ್ಯದರ್ಶಿಯವರ ನೇಮಕ.
-
ಕಾರ್ಯನೀತಿಯಲ್ಲಿ ಅಥವಾ ಪದ್ಧತಿಯಲ್ಲಿ ಯಾವುದೇ ಪ್ರಮುಖ ಬದಲಾವಣೆಯನ್ನು ತರುವ ಪ್ರಸ್ತಾವಗಳು.
-
ಮುಖ್ಯ ಕಾರ್ಯದರ್ಶಿಯವರ ಅಥವಾ ಯಾವುದೇ ಇಲಾಖೆಯ ಕಾರ್ಯದರ್ಶಿಯವರ ಗಮನಕ್ಕೆ ಬರುವ, ಈ ನಿಯಮಗಳನ್ನು ಕೈ ಬಿಟ್ಟಿರುವುದು.
4 3 30. [ಕಾನೂನು,ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ] [XXXX]ಯು ನೀಡಿದ ಸಲಹೆಗೆ ವಿರುದ್ಧವಾಗಿ ಸರ್ಕಾರವು ಯಾವುದೇ ಕಾನೂನು ವ್ಯವಹರಣೆಯನ್ನು ಹೂಡುವುದಕ್ಕೆ ಅಥವಾ ಹಿಂತೆಗೆದುಕೊಳ್ಳುವುದಕ್ಕೆ ಸಂಬಂಧಿಸಿದ ಯಾವುವೇ ಪ್ರಸ್ತಾವಗಳು.
-
ಯಾರೇ ಹಿಂದಿನ ರಾಜರ ಹಕ್ಕುಗಳು ಮತ್ತು ವಿಶೇಷ ಸವಲವತ್ತುಗಳ ಮೇಲೆ ಪರಿಣಾಮ ಬೀರುವ ಅಥವಾ ಬಾಧಕ ಉಂಟು ಮಾಡುವ ಸಂಭವವಿರುವ ಪ್ರಕರಣಗಳು.
-
ರಾಜ್ಯಾಡಳಿತ ವರದಿಗಳನ್ನು ಪ್ರಕಟಿಸುವ ಮುಂಚೆ ಅವುಗಳನ್ನು ಪುನರ್ ಪರಿಶೀಲಿಸುವುದು.
-
ಸಚಿವ ಸಂಪುಟವು ಈಗಾಗಲೇ ಕೈಗೊಂಡಿರುವ ತೀರ್ಮಾನಗಳನ್ನು ಮಾರ್ಪಾಟು ಮಾಡುವುದನ್ನು, ವ್ಯತ್ಯಾಸ ಮಾಡುವುದನ್ನು ಅಥವಾ ವಿಪರ್ಯಯಗೊಳಿಸುವುದನ್ನು ಅಗತ್ಯಪಡಿಸುವಂಥ ಪ್ರಕರಣಗಳು.
-
ಕೇಂದ್ರ ಸರ್ಕಾರವು ನಿರೂಪಿಸಿರುವ ನೀತಿಯನ್ನು ಜಾರಿಗೆ ತರುವುದರ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಪ್ರಸ್ತಾವಗಳು.
-
ಕರ್ನಾಟಕ ಭೂ ಸುಧಾರಣಾ ಅಧಿನಿಯಮ, 1961ರ 109ನೇ ಪ್ರಕರಣದ (1ಎ) ಉಪ ಪ್ರಕರಣ ಮೇರೆಗೆ, 5 [ಸದರಿ ಉಪ ಪ್ರಕರಣದ ಪರಂತುಕದ ಮೇರೆಗೆ ಜಿಲ್ಲಾಧಿಕಾರಿಯು ರಾಜ್ಯ ಸರ್ಕಾರದ ಅಧಿಕಾರಗಳನ್ನು ಚಲಾಯಿಸಬಹುದಾದ ಪ್ರಕರಣಗಳನ್ನು ಹೊರತುಪಡಿಸಿ ವಿನಾಯಿತಿ ಮಂಜೂರು ಮಾಡುವ ಎಲ್ಲಾ ಪ್ರಸ್ತಾವಗಳು].
6 ["36. ನಗರಾಭಿವೃದ್ಧಿ ಪ್ರಾಧಿಕಾರಗಳು, ಕರ್ನಾಟಕ ಗೃಹ ಮಂಡಲಿ ಮತ್ತು ಅಂಥ ಇತರ ಶಾಸನಬದ್ಧ ಸಂಸ್ಥೆಗಳು ಒಳಗೊಂಡಂತೆ ಸ್ಥಳೀಯ ಸಂಸ್ಥೆಗಳ ಎಲ್ಲ ಸ್ವಯಂ ಹಣಕಾಸು ನೆರವಿನ ಯೋಜನೆಗಳು.
-
21ನೇ ನಿಯಮದಲ್ಲಿ ಉಲ್ಲೇಖಿಸಲಾದ ಅಧಿಕಾರ ಪಡೆದ ಸಮಿತಿಯ ತೀರ್ಮಾನಗಳ ಪ್ರತಿಯೊಂದು ತಃಖ್ತೆಯನ್ನು ಕಡೇ ಪಕ್ಷ 6 ತಿಂಗಳಿಗೆ ಒಮ್ಮೆ ಸಚಿವ ಸಂಪುಟದ ಮುಂದೆ ಮಂಡಿಸತಕ್ಕದ್ದು.]
-
ಅಧಿಸೂಚನೆ ಸಂ: ಡಿಸಿಎ 7 ಎಆರ್ಬಿ 2002, ದಿನಾಂಕ; 7.9.2002 ಮೂಲಕ ಸೇರಿಸಲಾಗಿದೆ.
-
ಅಧಿಸೂಚನೆ ಸಂ: ಡಿಸಿಎ 20 ಎಆರ್ಬಿ96, ದಿನಾಂಕ; 23.8.2000 ಕೆಜಿಡಿಎಕ್ಸ್ 29.8.2000 ದ ಮೂಲಕ ಪ್ರತಿಯೋಜಿಸಲಾಗಿದೆ.
-
ಅಧಿಸೂಚನೆ ಸಂ: ಡಿಸಿಎ 3 ಎಆರ್ಬಿ 2006, ದಿನಾಂಕ: 5.9.2006 ಕೆಜಿಡಿ 14.9.2006 ರ ಮೂಲಕ ಪ್ರತಿಯೋಜಿಸಲಾಗಿದೆ.
-
ಅಧಿಸೂಚನೆ ಸಂ: ಡಿಸಿಎ 1 ಎಆರ್ಬಿ 96, ದಿನಾಂಕ: 22.1.96 ಜಿಎಸ್ಆರ್ ಸಂ: 10, ಕೆಜಿಡಿ 24.1.96 ರ ಮೂಲಕ ಬಿಡಲಾಗಿದೆ. 5. ಅಧಿಸೂಚನೆ ಸಂ: ಡಿಸಿಎ 7 ಎಆರ್ಬಿ2003, ದಿನಾಂಕ: 31.8.2004 ರ ಮೂಲಕ ಪ್ರತಿಯೋಜಿಸಲಾಗಿದೆ. 6. ಅಧಿಸೂಚನೆ ಸಂ: ಡಿಸಿಎ20ಎಆರ್ಬಿ96, ದಿನಾಂಕ: 23.8.2000 ಕೆಜಿಡಿಎಕ್ಸ 29.8.2000 ದ ಮೂಲಕ ಸೇರಿಸಲಾಗಿದೆ.
ಎರಡನೇ ಅನುಸೂಚಿ (36ನೇ ನಿಯಮವನ್ನು ನೋಡಿ) ಮುಖ್ಯ ಮಂತ್ರಿಯವರಿಗೆ ಸಲ್ಲಿಸಬೇಕಾದ ಪ್ರಕರಣಗಳು
(1) ದಯಾ ಅರ್ಜಿಗಳು ಮತ್ತು 161ನೇ ಅನುಚ್ಛೇದದ ಅನುಸಾರವಾಗಿ ಕ್ಷಮಾದಾನದ, ದಂಡನೆಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯುವ, ಮುಂದೂಡುವ ಅಥವಾ ಮಾಫಿ ಮಾಡುವ ಅಥವಾ ಶಿಕ್ಷೆಯನ್ನು ಅಮಾನತಿನಲ್ಲಿಡುವ, ಮಾಫಿ ಮಾಡುವ ಅಥವಾ ಕಡಿಮೆ ಮಾಡುವ ಪ್ರಸ್ತಾವನೆಗಳು.
(2) ನೀತಿಯ ಪ್ರಶ್ನೆಗಳನ್ನು ಎತ್ತುವ ಪ್ರಕರಣಗಳು ಮತ್ತು 21ನೇ ನಿಯಮದ ವ್ಯಾಪ್ತಿಗೆ ಬಾರದ ಆಡಳಿತಾತ್ಮಕ ಪ್ರಾಮುಖ್ಯತೆಯುಳ್ಳ ಎಲ್ಲ ಪ್ರಕರಣಗಳು.
(3) ರಾಜ್ಯದ ಶಾಂತಿಗೆ ಮತ್ತು ನೆಮ್ಮದಿಗೆ ಭಂಗ ತರುವ ಅಥವಾ ಭಂಗ ತರುವ ಸಂಭವವುಳ್ಳ ಪ್ರಕರಣಗಳು ಮತ್ತು ಕೋಮುವಿವಾದಗಳಿಗೆ ಮತ್ತು ವ್ಯವಸ್ಥೆಯನ್ನು ಬುಡಮೇಲು ಮಾಡುವ ಚಟುವಟಿಕೆಗಳಿಗೆ ಸಂಬಂಧಿಸಿದ ವರದಿಗಳೂ ಸೇರಿದಂತೆ ರಾಜಕೀಯ ಪರಿಸ್ಥಿತಿಗಳಿಗೆ ಮತ್ತು ಕಾನೂನು ಹಾಗೂ ಸುವ್ಯವಸ್ಥೆಗೆ ಸಂಬಂಧಿಸಿದ ನಿಯತಕಾಲಿಕ ಮತ್ತು ವಿಶೇಷ ವರದಿಗಳು.
(4) ಯಾವುದೇ ಅಲ್ಪಸಂಖ್ಯಾತ ಸಮುದಾಯದ, ಪರಿಶಿಷ್ಟ ಜಾತಿಗಳ, ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗಗಳ ಹಿತಾಸಕ್ತಿಗಳಿಗೆ ಬಾಧಕ ಉಂಟು ಮಾಡುವಂಥ ಅಥವಾ ಉಂಟು ಮಾಡುವ ಸಂಭವವಿರುವಂಥ ಪ್ರಕರಣಗಳು.
(5) ಭಾರತ ಸರ್ಕಾರದೊಂದಿಗೆ, ಯಾವುದೇ ಇತರ ರಾಜ್ಯಸರ್ಕಾರದೊಂದಿಗೆ, ಸರ್ಮೋಚ್ಚ ನ್ಯಾಯಾಲಯದೊಂದಿಗೆ ಅಥವಾ ಉಚ್ಛ ನ್ಯಾಯಾಲಯದೊಂದಿಗೆ ಸರ್ಕಾರದ ಸಂಬಂಧಗಳಿಗೆ ಬಾಧೆಉಂಟು ಮಾಡುವ ಪ್ರಕರಣಗಳು.
(6) ಅಧಿವಿಚಾರಣೆ ಮಾಡದೆಯೇ ವ್ಯಕ್ತಿಗಳ ಸ್ಥಾನಬದ್ಧತೆ ಕುರಿತಂತೆ 22 (4)(ಎ) ಅನುಚ್ಛೇದದ ಮೇರೆಗೆ ಸಲಹಾ ಮಂಡಲಿಯ ರಚನೆ.
(7) ಅಖಿಲ ಭಾರತ ಸೇವೆಯ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮಕ್ಕೆ ಸಂಬಂಧಿಸಿದ ಪ್ರಸ್ತಾವಗಳು.
1 (8) [ಕರ್ನಾಟಕ ಆಡಳಿತ ಸೇವೆ (ಗುಂಪು-ಎ) ಹಿರಿಯ ಶ್ರೇಣಿ ಮತ್ತು ಮೇಲ್ಪಟ್ಟ ವೇತನ ಶ್ರೇಣಿಯುಳ್ಳ ಅಧಿಕಾರಿಯ ದರ್ಜೆಗೆ ಸಮನಾದ ದರ್ಜೆಯ] ರಾಜ್ಯ ಸಿವಿಲ್ ಸೇವೆಯ ಅಧಿಕಾರಿಯ ವಿರುದ್ಧ ಶಿಸ್ತು ವಿಷಯಗಳಿಗೆ ಸಂಬಂಧಿಸಿದ ಪ್ರಕರಣಗಳು.
1
(9) [ಕರ್ನಾಟಕ ಆಡಳಿತ ಸೇವೆ (ಗುಂಪು-ಎ) ಹಿರಿಯ ಶ್ರೇಣಿ ಮತ್ತು ಮೇಲ್ಪಟ್ಟ ವೇತನ ಶ್ರೇಣಿಯುಳ್ಳ ಅಧಿಕಾರಿಯ ದರ್ಜೆಗೆ ಸಮನಾದ ದರ್ಜೆಯ ಅಧಿಕಾರಿ]ಯ ವಿರುದ್ಧದ ಯಾವುದೇ ದೂರು ಅಥವಾ ಶಿಸ್ತು ವಿಷಯವನ್ನು 3 [ಲೋಕಾಯುಕ್ತರಿಗೆ ಅಥವಾ ಉಪಲೋಕಾಯುಕ್ತ] ರಿಗೆ ಉಲ್ಲೇಖಿಸುವುದಕ್ಕೆ ಸಂಬಂಧಿಸಿದ ಪ್ರಸ್ತಾವಗಳು.
2 [(10) ಕರ್ನಾಟಕ ಆಡಳಿತ ಸೇವೆ (ಗುಂಪು-ಎ) ಹಿರಿಯ ಶ್ರೇಣಿ ಮತ್ತು ಮೇಲ್ಪಟ್ಟ ಶ್ರೇಣಿಯುಳ್ಳ ಅಧಿಕಾರಿಯ ದರ್ಜೆಗೆ ಸಮನಾದ ದರ್ಜೆಯ ಗೆಜೆಟೆಡ್ ಸರ್ಕಾರಿ ನೌಕರನ ವಿರುದ್ಧ 3 [ಲೋಕಾಯುಕ್ತರು ಮತ್ತು ಉಪಲೋಕಾಯುಕ್ತರು] ಮಾಡಿರುವ ಶಿಫಾರಸ್ಸಿನ ಮೇಲೆ ಕೈಗೊಳ್ಳಬೇಕಾದ ಕ್ರಮಕ್ಕೆ ಸಂಬಂಧಪಟ್ಟ ಪ್ರಸ್ತಾವಗಳು.]
(11) ಈ ಮುಂದಿನ ಅಧಿಕಾರಿಗಳ ನೇಮಕದ ಮತ್ತು ಸ್ಥಳನಿಯುಕ್ತಿಯ ಪ್ರಸ್ತಾವಗಳು:-
(ಎ) ಸರ್ಕಾರದ ಕಾರ್ಯದರ್ಶಿಗಳು, ವಿಶೇಷ ಕಾರ್ಯದರ್ಶಿಗಳು, ಅಪರ ಕಾರ್ಯದರ್ಶಿಗಳು, ಜಂಟಿ
ಕಾರ್ಯದರ್ಶಿಗಳು ಮತ್ತು ಉಪಕಾರ್ಯದರ್ಶಿಗಳು;
-
ಅಧಿಸೂಚನೆ ಸಂ: ಡಿಸಿಎ 4 ಎಆರ್ಬಿ 86, ದಿನಾಂಕ: 28.01.87 ಕೆಜಿಡಿ 16.4.87 ರ ಮೂಲಕ ಪ್ರತಿಯೋಜಿಸಲಾಗಿದೆ.
-
ಅಧಿಸೂಚನೆ ಸಂ; ಡಿಸಿಎ 4 ಎಆರ್ಬಿ 86, ದಿನಾಂಕ; 28.01.87 ಕೆಜಿಡಿ 16.4.87 ರ ಮೂಲಕ ಸೇರಿಸಲಾಗಿದೆ.
-
ಅಧಿಸೂಚನೆ ಸಂ; ಡಿಸಿಎ 1 ಎಆರ್ಬಿ 86, ದಿನಾಂಕ; 23.6.86 ರ ಮೂಲಕ ಪ್ರತಿಯೋಜಿಸಲಾಗಿದೆ.
ಬದಲಾವಣೆಗಳನ್ನೊಳಗೊಂಡಿರುವ ಪ್ರಸ್ತಾವಗಳು.
- ಅಧಿಸೂಚನೆ ಸಂ: ಡಿಸಿಎ 20 ಎಆರ್ಬಿ 96, ದಿನಾಂಕ: 23.8.2000 ಕೆಜಿಡಿಎಕ್ಸ29.8.2000ದ ಮೂಲಕ ಸೇರಿಸಲಾಗಿದೆ. 2. ಅಧಿಸೂಚನೆ ಸಂ: ಡಿಸಿಎ 4 ಎಆರ್ಬಿ 86, ದಿನಾಂಕ: 28.01.87 ಕೆಜಿಡಿ 16.4.87 ರ ಮೂಲಕ ಪ್ರತಿಯೋಜಿಸಲಾಗಿದೆ. 3. ಅಧಿಸೂಚನೆ ಸಂ. ಡಿಸಿಎ 1 ಎಆರ್ಬಿ 2013 ದಿನಾಂಕ: 24.07.2013ರ ಮೂಲಕ ಪ್ರತಿಯೋಜಿಸಲಾಗಿದೆ.
(ಬಿ) ಇಲಾಖಾ ಮುಖ್ಯಸ್ಥರುಗಳು;
(ಸಿ) ಇಲಾಖಾ ಮುಖ್ಯಸ್ಥರ ಅಥವಾ ಜಂಟಿ ಕಾರ್ಯದರ್ಶಿಗಳ ಸ್ಥಾನಮಾನಕ್ಕಿಂತ ಕಡಿಮೆಯಲ್ಲದ ಸ್ಥಾನಮಾನದ ವಿಶೇಷ ಅಧಿಕಾರಿಗಳು;
(ಡಿ) ಅಪರ ಜಿಲ್ಲಾ ನ್ಯಾಯಾಧೀಶರು ಒಳಗೊಂಡಂತೆ ಜಿಲ್ಲಾ ನ್ಯಾಯಾಧೀಶರುಗಳು;
3 [(ಇ) ಡೈರೆಕ್ಟರ್ ಜನರಲ್ ಮತ್ತು ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್, ಡೈರೆಕ್ಟರ್ ಜನರಲ್ ಆಫ್ ಪೊಲೀಸ್, ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್, ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ 3 ಮತ್ತು ಡೆಪ್ಯೂಟಿ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್; ]
(ಎಫ್) ಜಿಲ್ಲಾಧಿಕಾರಿಗಳು;
(ಜಿ) ಸೂಪರಿಂಟೆಂಡೆಂಟ್ಸ್ ಆಫ್ ಪೊಲೀಸ್;
(ಹೆಚ್) ಅಧೀಕ್ಷಕ ಇಂಜನಿಯರುಗಳು ಮತ್ತು ಕಾರ್ಯನಿರ್ವಾಹಕ ಇಂಜನಿಯರುಗಳು;
(ಐ) ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು.
(12) ಪೊಲೀಸ್ ದಳದ ಸಂಖ್ಯಾ ಬಲದಲ್ಲಿ ಮತ್ತು ಹಂಚಿಕೆಯಲ್ಲಿ ಯಾವುದೇ ಮುಖ್ಯ
1 ["(12ಎ) ರಾಜ್ಯದ ವ್ಯವಹಾರಗಳ ಸಂಬಂಧದಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳ ನೇಮಕಾತಿ ಮತ್ತು ಸೇವಾ ಷರತ್ತುಗಳನ್ನು ನಿಯಂತ್ರಿಸುವ ನಿಯಮಗಳನ್ನು ರಚಿಸುವುದಕ್ಕೆ ಅಥವಾ ತಿದ್ದುಪಡಿ ಮಾಡುವುದಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ಲೋಕಸೇವಾ ಆಯೋಗವು ಮಾಡಿರುವ ಶಿಫಾರಸ್ಸುಗಳಿಗೆ ಅಸಂಗತವಾಗಿರುವ ಪ್ರಸ್ತಾವಗಳು.]
-
ಅಖಿಲ ಭಾರತ ಸೇವೆಯ ಅಧಿಕಾರಿಗಳ ನೇಮಕಾತಿ ಅಥವಾ ಸೇವಾ ಷರತ್ತುಗಳಲ್ಲಿ ಮುಖ್ಯ ಬದಲಾವಣೆಗಳನ್ನು ಒಳಗೊಂಡಿರುವ ಪ್ರಸ್ತಾವಗಳು.
-
ಮುಖ್ಯ ಮಂತ್ರಿಯವರಿಗೆ ವೈಯಕ್ತಿಕವಾಗಿ ಬರೆಯಲಾದ ಮನವಿ ಪತ್ರಗಳು, ಅವುಗಳನ್ನು ಆ ಉದ್ದೇಶಕ್ಕಾಗಿ ಮಾಡಿದ ನಿಯಮಗಳ ಅಡಿಯಲ್ಲಿ ತಡೆಹಿಡಿದಿದ್ದ ಹೊರತು.
2 [ಕರ್ನಾಟಕ ಆಡಳಿತ ಸೇವೆ 15. ಗೆಜೆಟೆಡ್ ಹುದ್ದೆಗಳಿಗೆ ಅನ್ವಯವಾಗುವ ಕನಿಷ್ಠ ಕಾಲಿಕ ವೇತನ ಶ್ರೇಣಿಯು (ಗುಂಪು-ಎ) ಹಿರಿಯ ಶ್ರೇಣಿಯ ಕನಿಷ್ಠಕ್ಕಿಂತ ಕಡಿಮೆಯಿಲ್ಲದ] ಎಲ್ಲ ಗೆಜೆಟೆಡ್ ಹುದ್ದೆಗಳಿಗೆ ಮತ್ತು ಈ ಮುಂದಿನ ಹುದ್ದೆಗಳ ಸೃಜನೆ ಮತ್ತು ಅವುಗಳಿಗೆ ಮೊದಲ ನೇಮಕಗಳು:
(ಎ) ಅಡ್ವೊಕೇಟ್ ಜನರಲ್,
(ಬಿ) ಅಪೀಲು ನ್ಯಾಯಾಧಿಕರಣದ ಅಧ್ಯಕ್ಷರು ಮತ್ತು ಸದಸ್ಯರು; ಮತ್ತು
(ಸಿ) ಲೋಕಸೇವಾ ಆಯೋಗದ ಕಾರ್ಯದರ್ಶಿ.
-
ಸರ್ಕಾರದ ಒಡೆತನಕ್ಕೆ ಒಳಪಟ್ಟಿರುವ ಅಥವಾ ಅದರ ನಿಯಂತ್ರಣದಲ್ಲಿರುವ ಅಥವಾ ಸರ್ಕಾರವು ಪ್ರಮುಖ ಹಣಕಾಸು ಹಿತಾಸಕ್ತಿಯನ್ನು ಹೊಂದಿರುವ ಶಾಸನಬದ್ಧ / ಶಾಸನಬದ್ಧವಲ್ಲದ ಸಂಸ್ಥೆ, ಕಂಪನಿ, ನಿಗಮ, ಮುಂತಾದವುಗಳಲ್ಲಿ ಯಾವುದೇ ಹುದ್ದೆಯ ಸೃಜನೆ ಮತ್ತು ಅದಕ್ಕೆ ಮೊದಲ ನೇಮಕಕ್ಕೆ ಸರ್ಕಾರದ ಅನುಮೋದನೆಯ ಅಗತ್ಯವಿದ್ದರೆ ಅಂಥ ಯಾವುದೇ ಹುದ್ದೆಯ ಸೃಜನೆ ಮತ್ತು ಅದಕ್ಕೆ ಮೊದಲ ನೇಮಕ.
-
ಲೋಕಸೇವಾ ಆಯೋಗದ ವ್ಯಾಪ್ತಿಯ ಅಡಿಯಲ್ಲಿ ಬರದ ಎಲ್ಲ ಗೆಜೆಟೆಡ್ ಹುದ್ದೆಗಳಿಗೆ ಮೊದಲ ನೇಮಕ. 18. ಸರ್ಕಾರದ ನಿಯಮಗಳ ಅಥವಾ ಆದೇಶಗಳ ಮೇರೆಗೆ ನಿವೃತ್ತಿ ಹೊಂದಬೇಕಾಗಿರುವ ದಿನಾಂಕದ ನಂತರ ಒಬ್ಬ ಗೆಜೆಟೆಡ್ ಅಧಿಕಾರಿಗೆ ರಜೆ ಮಂಜೂರು ಮಾಡುವುದಕ್ಕೆ ಅಥವಾ ಸೇವೆಯನ್ನು ವಿಸ್ತರಿಸುವುದಕ್ಕೆ ಸಂಬಂಧಿಸಿದ ಎಲ್ಲ ಪ್ರಸ್ತಾವಗಳು.
-
ಯಾವುದೇ ಸಮಿತಿಯ ಅಧಿಕಾರೇತರ ವ್ಯಕ್ತಿಯ ಅಥವಾ ಯಾವುದೇ ಇತರ ಸಾಮಥ್ರ್ಯದಲ್ಲಿ ಯಾರೇ ವ್ಯಕ್ತಿಯ ನೇಮಕಕ್ಕೆ ಸಂಬಂಧಿಸಿದ ಎಲ್ಲ ಪ್ರಸ್ತಾವಗಳು.
-
ಪರಿವೀಕ್ಷಣೆ (ಪ್ರೊಬೇಷನ್) ಅಥವಾ ಸ್ಥಾನಪನ್ನದ (ಅಫಿಸಿಯೋಷನ್) ಸಾಮಾನ್ಯ ಅವಧಿಯನ್ನು ಮನ್ನಾ ಮಾಡಲು ಅಥವಾ ಕಡಿಮೆ ಮಾಡಲು ಪ್ರಸ್ತಾವಿಸುವ ಎಲ್ಲ ಪ್ರಕರಣಗಳು.
1 [20ಎ. ಐದು ಕೋಟಿ ರೂ.ಗಳು ಅಥವಾ ಮೇಲ್ಪಟ್ಟು, ಆದರೆ ಯಾವುದೇ ಒಂದು ಪ್ರಕರಣದಲ್ಲಿ ಹತ್ತು ಕೋಟಿ ರೂ.ಗಳಿಗೆ ಮೀರದ ಹಣಕ್ಕೆ ಸರ್ಕಾರದ ಖಾತರಿ ನೀಡುವುದಕ್ಕೆ ಸಂಬಂಧಿಸಿದ ಪ್ರಸ್ತಾವಗಳು.]
-
ಸರ್ಕಾರಿ ವಿಮಾನಗಳ ಖರೀದಿ ಮತ್ತು ಅದರ ನಿರ್ವಹಣೆಯನ್ನು ಒಳಗೊಂಡಂತ ನಾಗರಿಕ ವಿಮಾನ ಯಾನ.
-
ಈ ನಿಯಮಗಳಿಗೆ ಮತ್ತು ಕರ್ನಾಟಕ ರಾಜ್ಯ (ಕಾರ್ಯಕಲಾಪಗಳ ಹಂಚಿಕೆ) ನಿಯಮಗಳು, 1977ಕ್ಕೆ ತಿದ್ದುಪಡಿಗಳು; ಮತ್ತು
-
ಇದರಲ್ಲಿ ನಿರ್ದಿಷ್ಟಪಡಿಸಿಲ್ಲದ, ಆದರೆ ಮುಖ್ಯಮಂತ್ರಿಯವರು ಸಲ್ಲಿಸುವಂತೆ ಅಗತ್ಯಪಡಿಸುವ ಅಥವಾ ಆ ಸಂದರ್ಭದ ಸನ್ನಿವೇಶಗಳು ವಿಶೇಷ ಪ್ರಾಮುಖ್ಯತೆಯನ್ನು ನೀಡಬಹುದಾದಂಥ ಅಥವಾ ಮುಖ್ಯಮಂತ್ರಿಯವರು ವಿಶೇಷವಾಗಿ ಆಸಕ್ತಿ ಹೊಂದಿರಬಹುದಾದಂಥ ಯಾವುದೇ ಪ್ರಕರಣ ಅಥವಾ ಪ್ರಕರಣಗಳ ವರ್ಗ.
-
ಅಧಿಸೂಚನೆ ಸಂ: ಡಿಸಿಎ 20 ಎಆರ್ಬಿ 96, ದಿನಾಂಕ; 23.8.2000 ಕೆಜಿಡಿಎಕ್ಸ್ 29.8.2000 ದ ಮೂಲಕ ಸೇರಿಸಲಾಗಿದೆ.
ಮೂರನೇ ಅನುಸೂಚಿ (37ನೇ ನಿಯಮ ನೋಡಿ) ರಾಜ್ಯಪಾಲರಿಗೆ ಸಲ್ಲಿಸಬೇಕಾದ ಪ್ರಕರಣಗಳು
-
161ನೇ ಅನುಚ್ಛೇದದ ಅನುಸಾರವಾಗಿ ಕ್ಷಮಾದಾನದ, ದಂಡನೆಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯುವ, ಮುಂದೂಡುವ ಅಥವಾ ಮಾಫಿ ಮಾಡುವ ಅಥವಾ ಶಿಕ್ಷೆಯನ್ನು ಅಮಾನತಿನಲ್ಲಿಡುವ, ಮಾಫಿ ಮಾಡುವ ಅಥವಾ ಕಡಿಮೆ ಮಾಡುವ ಪ್ರಸ್ತಾವಗಳು.
-
ರಾಜ್ಯದ ಶಾಂತಿ ಮತ್ತು ನೆಮ್ಮದಿಗೆ ಭಂಗತರುವ ಅಥವಾ ಭಂಗ ತರುವ ಸಂಭವವುಳ್ಳ ಪ್ರಕರಣಗಳು.
-
ಪರಿಶಿಷ್ಟ ಜಾತಿಗಳ, ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗಗಳ ಹಿತಾಸಕ್ತಿಗಳಿಗೆ ಬಾಧಕ ಉಂಟು ಮಾಡುವಂಥ ಅಥವಾ ಉಂಟು ಮಾಡುವ ಸಂಭವವಿರುವಂಥ ಪ್ರಕರಣಗಳು.
-
ಭಾರತ ಸರ್ಕಾರದೊಂದಿಗೆ, ಯಾವುದೇ ಇತರ ರಾಜ್ಯಸರ್ಕಾರದೊಂದಿಗೆ, ಸರ್ಮೋಚ್ಚ ನ್ಯಾಯಾಲಯದೊಂದಿಗೆ ಅಥವಾ ಉಚ್ಚ ನ್ಯಾಯಾಲಯದೊಂದಿಗೆ ರಾಜ್ಯ ಸರ್ಕಾರದ ಸಂಬಂಧಗಳಿಗೆ ಬಾಧೆಯುಂಟು ಮಾಡುವ ಪ್ರಕರಣಗಳು.
-
ರಾಜ್ಯಪಾಲರ ಆಪ್ತ ಸಿಬ್ಬಂದಿ ಮತ್ತು ರಾಜಭವನದ ವಿಷಯಗಳಿಗೆ ಸಂಬಂಧಪಟ್ಟ ವಿಷಯಗಳು.
-
ಲೋಕಸೇವಾ ಆಯೋಗದ ಅಧ್ಯಕ್ಷರ, ಸದಸ್ಯರ ಮತ್ತು ಕಾರ್ಯದರ್ಶಿಯವರ ನೇಮಕ ಮತ್ತು ರಾಜೀನಾಮೆಯ ಅಂಗೀಕಾರಕ್ಕೆ ಸಂಬಂಧಿಸಿದ ಪ್ರಸ್ತಾವಗಳು.
1 7. [ಲೋಕಾಯುಕ್ತರ ಅಥವಾ ಉಪಲೋಕಾಯುಕ್ತರ ನೇಮಕಕ್ಕೆ ಅಥವಾ ತೆಗೆದು ಹಾಕುವುದಕ್ಕೆ ಸಂಬಂಧಿಸಿದ ಪ್ರಸ್ತಾವಗಳು].
-
ಅಡ್ವೊಕೇಟ್ ಜನರಲ್ರ ನೇಮಕಕ್ಕೆ ಮತ್ತು ರಾಜೀನಾಮೆಯ ಅಂಗೀಕಾರಕ್ಕೆ ಹಾಗೂ ಅವರಿಗೆ ಸಂದಾಯ ಮಾಡಬೇಕಾದ ಸಂಭಾವನೆಯನ್ನು ನಿರ್ಧರಿಸುವುದಕ್ಕೆ ಅಥವಾ ವ್ಯತ್ಯಾಸ ಮಾಡುವುದಕ್ಕೆ ಸಂಬಂಧಿಸಿದ ಪ್ರಸ್ತಾವಗಳು.
-
ಈ ಮುಂದಿನ ಅಧಿಕಾರಿಗಳನ್ನು ಕೆಳ ದರ್ಜೆಗೆ ಇಳಿಸುವುದಕ್ಕೆ, ಕಡ್ಡಾಯ ನಿವೃತ್ತಿಗೊಳಿಸುವುದಕ್ಕೆ, ಸೇವೆಯಿಂದ ತೆಗೆದು ಹಾಕುವುದಕ್ಕೆ ಅಥವಾ ವಜಾ ಮಾಡುವುದಕ್ಕೆ ಸಂಬಂಧಪಟ್ಟ ಪ್ರಸ್ತಾವಗಳು,-
(ಎ) ಕಾರ್ಯದರ್ಶಿಗಳು, ಅಪರ ಕಾರ್ಯದರ್ಶಿಗಳು, ವಿಶೇಷ ಕಾರ್ಯದರ್ಶಿಗಳು, ಜಂಟಿ ಕಾರ್ಯದರ್ಶಿಗಳು
ಮತ್ತು ಅದೇ ಸ್ಥಾನಮಾನದ ವಿಶೇಷ ಅಧಿಕಾರಿಗಳು;
(ಬಿ) ಇಲಾಖೆಗಳ ಮುಖ್ಯಸ್ಥರು ಮತ್ತು ಅದೇ ಸ್ಥಾನಮಾನ ಹೊಂದಿರುವ ವಿಶೇಷ ಅಧಿಕಾರಿಗಳು;
(ಸಿ) ಅಪರ ಜಿಲ್ಲಾ ನ್ಯಾಯಾಧೀಶರೂ ಸೇರಿದಂತೆ ಜಿಲ್ಲಾ ನ್ಯಾಯಾಧೀಶರುಗಳು;
(ಡಿ) ಡೆಪ್ಯುಟಿ ಇನ್ಸ್ಪೆಕ್ಟರ್ಸ್ ಜನರಲ್ ಆಫ್ ಪೊಲೀಸ್;
(ಇ) ಜಿಲ್ಲಾಧಿಕಾರಿಗಳು.
-
ವಿಧಾನ ಮಂಡಲದ ಸಭೆಗಳನ್ನು ಕರೆಯುವುದು ಮತ್ತು ಮುಂದೂಡುವುದು, ವಿಧಾನ ಮಂಡಲದ ವಿಸರ್ಜನೆ, ವಿಧಾನ ಸಭೆಯ ವಿಸರ್ಜನೆ, ರಾಜ್ಯ ವಿಧಾನ ಸಭೆಗೆ ಮತ್ತು ಪರಿಷತ್ತಿಗೆ ನಾಮನಿರ್ದೇಶನ, ವಿಧಾನ ಮಂಡಲದ ಚುನಾವಣೆಗೆ ದಿನಾಂಕಗಳನ್ನು ಗೊತ್ತುಪಡಿಸುವುದಕ್ಕೆ ಮತ್ತು ಇವುಗಳಿಗೆ ಸಂಬಂಧಪಟ್ಟ ವಿಷಯಗಳಿಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳು.
-
ಸಂವಿಧಾನದ ಮೇರೆಗೆ ಅಥವಾ ಕಾನೂನಿನ ಯಾವುದೇ ಉಪಬಂಧದ ಮೇರೆಗೆ ರಾಜ್ಯಪಾಲರು ಅಧಿಕಾರಗಳನ್ನು ಚಲಾಯಿಸಬಹುದಾದಂಥ ಪ್ರಕರಣಗಳು.
-
ಮುಖ್ಯ ಮಂತ್ರಿಯವರು ಅಗತ್ಯವೆಂದು ಭಾವಿಸುವಂಥ ಆಡಳಿತಾತ್ಮಕ ಪ್ರಾಮುಖ್ಯತೆಯ ಇತರ ಪ್ರಕರಣಗಳು.
-
ಮುಖ್ಯ ಮಂತ್ರಿಯವರ ಮತ್ತು ರಾಜ್ಯದ ಇತರ ಮಂತ್ರಿಗಳ ನೇಮಕ ಮತ್ತು ಅವರ ರಾಜೀನಾಮೆಯ ಅಂಗೀಕಾರದ ಪ್ರಸ್ತಾವಗಳು.
-
ರಾಜ್ಯ ವಿಧಾನ ಮಂಡಲದ ಸದನವನ್ನು ಅಥವಾ ಸದನಗಳನ್ನುದ್ದೇಶಿಸಿ ಮಾಡುವ ರಾಜ್ಯಪಾಲರ ಭಾಷಣ ಮತ್ತು ಅವರ ಸಂದೇಶ.
-
ಅಧಿಸೂಚನೆ ಸಂ; ಡಿಸಿಎ 1 ಎಆರ್ಬಿ 86, ದಿನಾಂಕ; 23.06.86 ರ ಮೂಲಕ ಪ್ರತಿಯೋಜಿಸಲಾಗಿದೆ.
-
ರಾಜ್ಯ ವಿಧಾನ ಮಂಡಲದ ಸದನಗಳ ಸದಸ್ಯರ ಅನರ್ಹತೆಗೆ ಸಂಬಂಧಪಟ್ಟ ಪ್ರಕರಣಗಳು.
-
ರಾಜ್ಯ ವಿಧಾನ ಮಂಡಲದ ಉಭಯ ಸದನಗಳಿಂದ ಅಂಗೀಕಾರವಾದ ವಿಧೇಯಕಗಳು.
-
ಪೂರಕ, ಹೆಚ್ಚುವರಿ ಅಥವಾ ಅಧಿಕ ಅನುದಾನ ಮತ್ತು ಧನವಿನಿಯೋಗ ವಿಧೇಯಕಗಳಿಗೆ ಸಂಬಂಧಿಸಿದ ವಾರ್ಷಿಕ ಹಣಕಾಸು ತಃಖ್ತೆಗಳನ್ನು ರಾಜ್ಯ ವಿಧಾನ ಮಂಡಲದ ಸದನ ಅಥವಾ ಸದನಗಳ ಮುಂದೆ ಮಂಡಿಸುವುದಕ್ಕಾಗಿ ರಾಜ್ಯಪಾಲರ ಶಿಫಾರಸುಗಳಿಗೆ ಸಂಬಂಧಪಟ್ಟ ಪ್ರಕರಣಗಳು.
-
ಅಧ್ಯಾದೇಶಗಳ ಉದ್ಘೋಷಣೆಗೆ ಮತ್ತು ನಿರಸನಗಳಿಗೆ ಸಂಬಂಧಿಸಿದ ಪ್ರಸ್ತಾವಗಳು.
ಉಮಾಶಂಕರ ದೀಕ್ಷಿತ್
ಕರ್ನಾಟಕದ ರಾಜ್ಯಪಾಲರು.
Annexure
ಮತ್ತು ಅವರ ಹೆಸರಿನಲ್ಲಿ,
(ಎನ್.ಪಿ. ಜೋಷಿ)
ಸರ್ಕಾರದ ಉಪಕಾರ್ಯದರ್ಶಿ,
ಸಚಿವ ಸಂಪುಟ ವ್ಯವಹಾರಗಳ ಇಲಾಖೆ,
ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ
(ಸೇವಾ ನಿಯಮಗಳು).
ஒழ்மெ அல்லர்கு
ತಿದ್ದುಪಡಿಗಳು: ಪುಟ ಸಂಖ್ಯೆ
- ಸಂ: ಡಿಸಿಎ 15 ಎಆರ್ಬಿ 1983 ದಿನಾಂಕ: 29.11.1983 2. ಸಂ: ಡಿಸಿಎ 23 ಎಆರ್ಬಿ 1983 ದಿನಾಂಕ; 26.06.1984 3. ಸಂ; ಡಿಸಿಎ 07 ಎಆರ್ಬಿ 1984 ದಿನಾಂಕ: 07.11.1984 4. ಸಂ: ಡಿಸಿಎ 08 ಎಆರ್ಬಿ 1984 ದಿನಾಂಕ: 26.07.1985 5. ಸಂ: ಡಿಸಿಎ 01 ಎಆರ್ಬಿ 1986 ದಿನಾಂಕ; 23.06.1986 6. ಸಂ: ಡಿಸಿಎ 04 ಎಆರ್ಬಿ 1986 ದಿನಾಂಕ: 28.01.1987 7. ಸಂ: ಡಿಸಿಎ 01 ಎಆರ್ಬಿ 1987 ದಿನಾಂಕ: 07.12.1987 8. ಸಂ: ಡಿಸಿಎ 06 ಎಆರ್ಬಿ 1992 ದಿನಾಂಕ: 26.06.1992 9. ಸಂ: ಡಿಸಿಎ 06 ಎಆರ್ಬಿ 1993 ದಿನಾಂಕ: 14.05.1993 10. ಸಂ: ಡಿಸಿಎ 12 ಎಆರ್ಬಿ 1993 ದಿನಾಂಕ: 10.09.1993 11. ಸಂ: ಡಿಸಿಎ 03 ಎಆರ್ಬಿ 1994 ದಿನಾಂಕ: 24.05.1994 12. ಸಂ: ಡಿಸಿಎ 01 ಎಆರ್ಬಿ 1996 ದಿನಾಂಕ: 22.01.1996 13. ಸಂ: ಡಿಸಿಎ 18 ಎಆರ್ಬಿ 1996 ದಿನಾಂಕ: 07.11.1996 14. ಸಂ: ಡಿಸಿಎ 20 ಎಆರ್ಬಿ 1996 ದಿನಾಂಕ: 23.8.2000 15. ಸಂ: ಡಿಸಿಎ 10 ಎಆರ್ಬಿ 2001 ದಿನಾಂಕ: 28.02.2002 16. ಸಂ: ಡಿಸಿಎ 07 ಎಆರ್ಬಿ 2002 ದಿನಾಂಕ: 07.09.2002 17. ಸಂ: ಡಿಸಿಎ 15 ಎಆರ್ಬಿ 2002 ದಿನಾಂಕ: 03.04.2003 18. ಸಂ; ಡಿಸಿಎ 07 ಎಆರ್ಬಿ 2003 ದಿನಾಂಕ; 31.08.2004 19. ಸಂ: ಡಿಸಿಎ 06 ಎಆರ್ಬಿ 2006 ದಿನಾಂಕ: 29.8.2006 20. ಸಂ: ಡಿಸಿಎ 03 ಎಆರ್ಬಿ 2006 ದಿನಾಂಕ: 05.09.2006 21. ಸಂ: ಡಿಸಿಎ 11 ಎಆರ್ಬಿ 2010 ದಿನಾಂಕ: 23.06.2011 22. ಸಂ: ಡಿಸಿಎ 01 ಎಆರ್ಬಿ 2013 ದಿನಾಂಕ: 24.07.2013
ಕರ್ನಾಟಕ ಸರ್ಕಾರ
ಸಂಖ್ಯೆ ಡಿಸಿಎ 15 ಎಆರ್ಬಿ 83
ಕರ್ನಾಟಕ ಸರ್ಕಾರದ ಸಚಿವಾಲಯ,
ವಿಧಾನಸೌಧ, ಬೆಂಗಳೂರು,
ದಿನಾಂಕ: 29ನೇ ನವೆಂಬರ್ 1983.
ಅಧಿಸೂಚನೆ
ಭಾರತ ಸಂವಿಧಾನದ 166ನೇ ಅನುಚ್ಛೇದದ (2) ಮತ್ತು (3)ನೇ ಖಂಡಗಳಿಂದ ನನಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕದ ರಾಜ್ಯಪಾಲನಾದ ನಾನು, ಅಶೋಕನಾಥ್ ಬ್ಯಾನರ್ಜಿ, ಕರ್ನಾಟಕ ಸರ್ಕಾರಿ (ಕಾರ್ಯಕಲಾಪಗಳ ನಿರ್ವಹಣಾ) ನಿಯಮಗಳು, 1977ನ್ನು ಮತ್ತಷ್ಟು ತಿದ್ದುಪಡಿ ಮಾಡುವ ಈ ಮುಂದಿನ ನಿಯಮಗಳನ್ನು ಈ ಮೂಲಕ ರಚಿಸುತ್ತೇನೆ, ಎಂದರೆ:-
- ಹೆಸರು ಮತ್ತು ಪ್ರಾರಂಭ.- (1) ಈ ನಿಯಮಗಳನ್ನು ಕರ್ನಾಟಕ ಸರ್ಕಾರಿ (ಕಾರ್ಯಕಲಾಪಗಳ ನಿರ್ವಹಣೆ) (2ನೇ ತಿದ್ದುಪಡಿ) ನಿಯಮಗಳು, 1983 ಎಂದು ಕರೆಯತಕ್ಕದ್ದು.
(2) ಇವು, ಈ ಕೂಡಲೇ ಜಾರಿಗೆ ಬರತಕ್ಕದ್ದು.
- ಮೊದಲನೇ ಅನುಸೂಚಿಗೆ ತಿದ್ದುಪಡಿ.- ಕರ್ನಾಟಕ ಸರ್ಕಾರಿ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು, 1977ರ ಮೊದಲನೇ ಅನುಸೂಚಿಯಲ್ಲಿ, 2ನೇ ಬಾಬಿನಲ್ಲಿ ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು, ಎಂದರೆ:-
“ಪರಂತು, ಪ್ರಕರಣವು ತುರ್ತು ಸ್ವರೂಪದ್ದಾಗಿದ್ದು ಸಚಿವ ಸಂಪುಟದ ಅನುಮೋದನೆಯನ್ನು ಪಡೆಯುವುದು ಕಾರ್ಯಸಾಧ್ಯವಿಲ್ಲದಿದ್ದಾಗ, ಇಲಾಖೆಯ ಪ್ರಭಾರದಲ್ಲಿರುವ ಸಚಿವರ ಮತ್ತು ಮುಖ್ಯ ಮಂತ್ರಿಯವರ ಅನುಮೋದನೆ ಪಡೆದು ಸರ್ಕಾರದ ಅಂಥ ಧೋರಣೆಯನ್ನು ನಿರ್ಧರಿಸಬಹುದು”.
ಕರ್ನಾಟಕದ ರಾಜ್ಯಪಾಲರು
Annexure
ಮತ್ತು ಅವರ ಹೆಸರಿನಲ್ಲಿ,
(ಜಿ.ಕೆ. ಸಂಗೋರಾಮ್)
ಸರ್ಕಾರದ ಅಧೀನ ಕಾರ್ಯುದರ್ಶಿ,
ಸಚಿವ ಸಂಪುಟ ವ್ಯವಹಾರಗಳ ಇಲಾಖೆ,
ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆ
(ಸೇವಾ ನಿಯಮಗಳು).
ಕರ್ನಾಟಕ ಸರ್ಕಾರ
ಸಂಖ್ಯೆ ಡಿಸಿಎ 23 ಎಆರ್ಬಿ 83
ಕರ್ನಾಟಕ ಸರ್ಕಾರದ ಸಚಿವಾಲಯ,
ವಿಧಾನಸೌಧ, ಬೆಂಗಳೂರು,
ದಿನಾಂಕ 26 ಜೂನ್ 1984
ಅಧಿಸೂಚನೆ
ಭಾರತದ ಸಂವಿಧಾನದ 166ನೇ ಅನುಚ್ಛೇದದ (2) ಮತ್ತು (3)ನೇ ಖಂಡಗಳಿಂದ ನನಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕದ ರಾಜ್ಯಪಾಲನಾದ ನಾನು, ಅಶೋಕನಾಥ್ ಬ್ಯಾನರ್ಜಿ, ಕರ್ನಾಟಕ ಸರ್ಕಾರಿ (ಕಾರ್ಯಕಲಾಪಗಳ ನಿರ್ವಹಣಾ) ನಿಯಮಗಳು, 1977ನ್ನು ಮತ್ತಷ್ಟು ತಿದ್ದುಪಡಿ ಮಾಡುವ ಈ ಮುಂದಿನ ನಿಯಮಗಳನ್ನು ಈ ಮೂಲಕ ರಚಿಸುತ್ತೇನೆ, ಎಂದರೆ:-
- ಹೆಸರು ಮತ್ತು ಪ್ರಾರಂಭ .- (1) ಈ ನಿಯಮಗಳನ್ನು ಕರ್ನಾಟಕ ಸರ್ಕಾರಿ (ಕಾರ್ಯಕಲಾಪಗಳ ನಿರ್ವಹಣೆ) (ತಿದ್ದುಪಡಿ) ನಿಯಮಗಳು, 1984 ಎಂದು ಕರೆಯತಕ್ಕದ್ದು.
(2) ಇವು, ಸರ್ಕಾರಿ ರಾಜ್ಯಪತ್ರದಲ್ಲಿ ಅವುಗಳನ್ನು ಪ್ರಕಟಿಸಿದ ದಿನಾಂಕದಂದು ಜಾರಿಗೆ ಬರತಕ್ಕದ್ದು.
- ಮೊದಲನೇ ಅನುಸೂಚಿಗೆ ತಿದ್ದುಪಡಿ.- ಕರ್ನಾಟಕ ಸರ್ಕಾರಿ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು, 1977ರ ಮೊದಲನೇ ಅನುಸೂಚಿಯಲ್ಲಿ, 16ನೇ ಬಾಬಿಗೆ ಬದಲಾಗಿ ಈ ಮುಂದಿನ ಬಾಬನ್ನು ಸೇರಿಸತಕ್ಕದ್ದು, ಎಂದರೆ:-
“16. ಈ ಮುಂದಿನವುಗಳಿಗೆ ಸಂಬಂಧಿಸಿದ ಪ್ರಸ್ತಾವಗಳು -
(i) ರಾಜ್ಯ ಸರ್ಕಾರವು ಅಥವಾ ಸಾರ್ವಜನಿಕ ವಲಯ ಉದ್ಯಮವು ಪೂರ್ಣ ಒಡೆತನ ಹೊಂದಿರುವ ಅಥವಾ ಭಾಗಶ: ಹಣಕಾಸು ನೆರವು ನೀಡಿರುವ ಹೊಸ ನಿಗಮಗಳ ಅಥವಾ ಕಂಪನಿಗಳ ಸೃಜನೆ;
(ii) ಹೊಸ ಅಥವಾ ಈಗಿರುವ ನಿಗಮಕ್ಕೆ ಅಥವಾ ಕಂಪನಿಗೆ ಷೇರು ಬಂಡವಾಳ ಒದಗಿಸುವಲ್ಲಿ, ಕರ್ನಾಟಕ ರಾಜ್ಯ ಕೈಗಾರಿಕಾ ಬಂಡವಾಳ ಹೂಡಿಕೆ ಮತ್ತು ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ರಾಜ್ಯ ಹಣಕಾಸು ನಿಗಮವನ್ನು ಹೊರತುಪಡಿಸಿ ರಾಜ್ಯ ಸರ್ಕಾರವು ಅಥವಾ ಸಾರ್ವಜನಿಕ ವಲಯದ ಉದ್ಯಮವು ಭಾಗವಹಿಸುವುದು;
(iii) ಹೊಸ ಅಥವಾ ಈಗಿರುವ ನಿಗಮಕ್ಕೆ ಅಥವಾ ಕಂಪನಿಗೆ ಕರ್ನಾಟಕ ರಾಜ್ಯ ಕೈಗಾರಿಕಾ ಬಂಡವಾಳ ಹೂಡಿಕೆ ಮತ್ತು ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ರಾಜ್ಯ ಹಣಕಾಸು ನಿಗಮ ಇವು ಐವತ್ತು ಲಕ್ಷ ರೂ.ಗಳಿಗೆ ಮೀರಿದ ಷೇರು ಬಂಡವಾಳವನ್ನು ಒದಗಿಸುವುದು;
(iv) ಸಾರ್ವಜನಿಕ ವಲಯದ ಉದ್ಯಮಗಳ ಸಮಾಪನ, ವಿಲೀನ ಅಥವಾ ಅದರ ರಚನೆಯಲ್ಲಿ ಪುನರ್ ಸಂಘಟನೆಯಂಥ ಇತರ ಮುಖ್ಯ ಯೋಜನೆಗಳು;
(v) ರಾಜ್ಯದ ಒಡೆತನದಲ್ಲಿರುವ ಸಾರ್ವಜನಿಕ ನಿಗಮಗಳು, ಕಂಪನಿಗಳು, ಉದ್ಯಮಗಳು ಮತ್ತು ಯೋಜನೆಗಳ ಬಂಡವಾಳ ವೆಚ್ಚ ಅಂದಾಜುಗಳಲ್ಲಿನ ಏರಿಕೆ, ಅಂಥ ಹೆಚ್ಚಳ ಶೇಕಡಾ ಇಪ್ಪತ್ತು ಅಥವಾ ಇಪ್ಪತ್ತೈದು ಲಕ್ಷ ರೂಪಾಯಿಗಳು-ಇವುಗಳಲ್ಲಿ ಯಾವುದು ಕಡಿಮೆಯೋ ಅದಕ್ಕಿಂತ ಹೆಚ್ಚಾಗಿರುವಲ್ಲಿ.
(vi) ರಾಜ್ಯ ಒಡೆತನ ಹೊಂದಿರುವ ಸಾರ್ವಜನಿಕ ನಿಗಮ, ಕಂಪನಿ, ಉದ್ಯಮ ಅಥವಾ ಯೋಜನೆಯಿಂದ ಈಗಿರುವ ಯೋಜನೆಗಳ ವಿಸ್ತರಣೆ ಅಥವಾ ಹೊಸ ಯೋಜನೆಗಳನ್ನು ಪ್ರಾರಂಭಿಸುವುದು ಅಥವಾ ಉತ್ಪಾದನೆಯ ಹೊಸ ಬಗೆಯ ಮಾರ್ಗಗಳನ್ನು ಕಂಡು ಹಿಡಿಯುತ್ತಿರುವುದು, ಅಂಥ ವಿಸ್ತರಣೆ ಅಥವಾ
ಸ್ಥಾಪನೆಯು ಈ ಮುಂದಿನವನ್ನು ಒಳಗೊಂಡಿರಬೇಕು -
(ಎ) ಐವತ್ತು ಲಕ್ಷ ರೂಪಾಯಿಗಳಿಗೆ ಕಡಿಮೆ ಇಲ್ಲದ ಬಂಡವಾಳ ವೆಚ್ಚ, ಅಥವಾ
(ಬಿ) ಕರ್ನಾಟಕ ರಾಜ್ಯ ಕೈಗಾರಿಕೆ ಬಂಡವಾಳ ಹೂಡಿಕೆ ಮತ್ತು ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ರಾಜ್ಯ
ಹಣಕಾಸು ನಿಗಮ, ಇವುಗಳನ್ನು ಹೊರತುಪಡಿಸಿ, ಅಂಥ ನಿಗಮ, ಉದ್ಯಮ ಅಥವಾ ಯೋಜನೆಯ
“ಒಟ್ಟು ಬ್ಲಾಕ್” (Gross block) ನ ಶೇಕಡಾ ಇಪ್ಪತ್ತೈದಕ್ಕೆ ಕಡಿಮೆ ಇಲ್ಲದಷ್ಟು ಬಂಡವಾಳ ವೆಚ್ಚ ಮತ್ತು
ಇಪ್ಪತ್ತೈದು ಲಕ್ಷರೂಪಾಯಿಗಳಿಗಿಂತ ಕಡಿಮೆ ಇಲ್ಲದ ಹೂಡಿಕೆಯ ಒಟ್ಟು ಪ್ರಮಾಣ; ಮತ್ತು
(vii) ಮರುಹಣಕಾಸು ನೆರವು ಒದಗಿಸುವ ಉದ್ದೇಶಗಳಿಗಾಗಿ ಭಾರತದ ಕೈಗಾರಿಕಾ ಅಭಿವೃದ್ಧಿ ಬ್ಯಾಂಕು
ವಿಧಿಸಿರುವ ಮಿತಿಗಳನ್ನು ಮೀರಿ ಕರ್ನಾಟಕ ರಾಜ್ಯ ಕೈಗಾರಿಕಾ ಬಂಡವಾಳ ಹೂಡಿಕೆ ಮತ್ತು ಅಭಿವೃದ್ಧಿ
ನಿಗಮವು ಮತ್ತು ಕರ್ನಾಟಕ ರಾಜ್ಯ ಹಣಕಾಸು ನಿಗಮವು ಸಾಲಗಳನ್ನು ಮಂಜೂರು ಮಾಡುವುದು.
ಕರ್ನಾಟಕದ ರಾಜ್ಯಪಾಲರು
Annexure
ಮತ್ತು ಅವರ ಹೆಸರಿನಲ್ಲಿ
(ಜಿ.ಕೆ. ಸಂಗೋರಾಮ್)
ಸರ್ಕಾರದ ಅಧೀನ ಕಾರ್ಯುದರ್ಶಿ,
ಸಚಿವ ಸಂಪುಟ ವ್ಯವಹಾರಗಳ ಇಲಾಖೆ ಮತ್ತು ಸಿಬ್ಬಂದಿ
ಮತ್ತು ಆಡಳಿತ ಸುಧಾರಣೆಗಳ ಇಲಾಖೆ
(ಸೇವಾ ನಿಯಮಗಳು)
ಕರ್ನಾಟಕ ಸರ್ಕಾರ
ಸಂಖ್ಯೆ ಡಿಲಿಎ 7 ಎಆರ್ಇಜ 84.
ಕರ್ನಾಟಕ ಸರ್ಕಾರದ ಸಚಿವಾಲಯ,
ಸಂಖ್ಯೆ ಡಿಸಿಎ 7 ಎಆರ್ಬಿ 84 ಕರ್ನಾಟಕ ಸರ್ಕಾರದ ಸಚಿವಾಲಯ,
ವಿಧಾನಸೌಧ, ಬೆಂಗಳೂರು,
ದಿನಾಂಕ 7ನೇ ನವೆಂಬರ್ 1984.
ಅಧಿಸೂಚನೆ
ಭಾರತದ ಸಂವಿಧಾನದ 166ನೇ ಅನುಚ್ಛೇದದ (2) ಮತ್ತು(3)ನೇ ಖಂಡಗಳಿಂದ ನನಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕದ ರಾಜ್ಯಪಾಲನಾದ ನಾನು, ಅಶೋಕನಾಥ್ ಬ್ಯಾನರ್ಜಿ, ಕರ್ನಾಟಕ ಸರ್ಕಾರಿ (ಕಾರ್ಯಕಲಾಪಗಳ ನಿರ್ವಹಣಾ) ನಿಯಮಗಳು, 1977ನ್ನು ಮತ್ತಷ್ಟು ತಿದ್ದುಪಡಿ ಮಾಡುವ ಈ ಮುಂದಿನ ನಿಯಮಗಳನ್ನು ಈ ಮೂಲಕ ರಚಿಸುತ್ತೇನೆ, ಎಂದರೆ:-
- ಹೆಸರು ಮತ್ತು ಪ್ರಾರಂಭ.- (1) ಈ ನಿಯಮಗಳನ್ನು ಕರ್ನಾಟಕ ಸರ್ಕಾರಿ (ಕಾರ್ಯಕಲಾಪಗಳ ನಿರ್ವಹಣಾ) (ಎರಡನೇ ತಿದ್ದುಪಡಿ) ನಿಯಮಗಳು, 1984 ಎಂದು ಕರೆಯತಕ್ಕದ್ದು.
(2) ಇವು, ಈ ಕೂಡಲೇ ಜಾರಿಗೆ ಬರತಕ್ಕದ್ದು.
- 72-ಬಿ ಹೊಸ ನಿಯಮದ ಸೇರ್ಪಡೆ:- ಕರ್ನಾಟಕ ಸರ್ಕಾರಿ (ಕಾರ್ಯಕಲಾಪಗಳ ನಿರ್ವಹಣಾ) ನಿಯಮಗಳು, 1977ರಲ್ಲಿ 72ಎ ನಿಯಮದ ನಂತರ ಈ ಮುಂದಿನದನ್ನು ಸೇರಿಸತಕ್ಕದ್ದು , ಎಂದರೆ:-
"ಜಿ. ಕರ್ನಾಟಕ ರಾಜ್ಯ ಸಾರ್ವಜನಿಕ ಉದ್ಯಮಗಳ ಸಂಸ್ಥೆ "
72ಬಿ. ಎಲ್ಲ ಆಡಳಿತ ಇಲಾಖೆಗಳು, ಸಚಿವ ಸಂಪುಟದ ಅನುಮೋದನೆಯನ್ನು ಕೋರುವುದಕ್ಕೆ ಮುಂಚೆ, ಮೊದಲನೇ ಅನುಸೂಚಿಯ 16ನೇ ಬಾಬಿನಲ್ಲಿ ನಿರ್ದಿಷ್ಟಪಡಿಸಿದ ಯಾವುದೇ ಪ್ರಸ್ತಾವದ ಬಗ್ಗೆ ಕರ್ನಾಟಕ ರಾಜ್ಯ ಸಾರ್ವಜನಿಕ ಉದ್ಯಮಗಳ ಸಂಸ್ಥೆಯೊಂದಿಗೆ ಸಮಾಲೋಚಿಸತಕ್ಕದ್ದು.
ಕರ್ನಾಟಕದ ರಾಜ್ಯಪಾಲರು
Annexure
ಮತ್ತು ಅವರ ಹೆಸರಿನಲ್ಲಿ
(ಜಿ.ಕೆ. ಸಂಗೋರಾಮ್)
ಸರ್ಕಾರದ ಅಧೀನ ಕಾರ್ಯುದರ್ಶಿ,
ಸಚಿವ ಸಂಪುಟ ವ್ಯವಹಾರಗಳ ಇಲಾಖೆ ಮತ್ತು ಸಿಬ್ಬಂದಿ ಮತ್ತು
ಆಡಳಿತ ಸುಧಾರಣೆಗಳ ಇಲಾಖೆ (ಸೇವಾ ನಿಯಮಗಳು).
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ
ಅಧಿಸೂಚನೆ ಸಂಖ್ಯೆ ಡಿಸಿಎ 8 ಎಆರ್ಬಿ 84
ಬೆಂಗಳೂರು ದಿನಾಂಕ 26ನೇ ಜುಲೈ 1985.
ಭಾರತದ ಸಂವಿಧಾನದ 166ನೇ ಅನುಚ್ಛೇದದ (2) ಮತ್ತು (3)ನೇ ಖಂಡಗಳಿಂದ ನನಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕದ ರಾಜ್ಯಪಾಲನಾದ ನಾನು, ಅಶೋಕನಾಥ್ ಬ್ಯಾನರ್ಜಿ, ಕರ್ನಾಟಕ ಸರ್ಕಾರಿ (ಕಾರ್ಯಕಲಾಪಗಳ ನಿರ್ವಹಣಾ) ನಿಯಮಗಳು, 1977ನ್ನು ಮತ್ತಷ್ಟು ತಿದ್ದುಪಡಿ ಮಾಡುವ ಈ ಮುಂದಿನ ನಿಯಮಗಳನ್ನು ಈ ಮೂಲಕ ಮಾಡುತ್ತೇನೆ, ಎಂದರೆ:-
- ಹೆಸರು ಮತ್ತು ಪ್ರಾರಂಭ.- (1) ಈ ನಿಯಮಗಳನ್ನು ಕರ್ನಾಟಕ ಸರ್ಕಾರಿ (ಕಾರ್ಯಕಲಾಪಗಳ ನಿರ್ವಹಣಾ) (2ನೇ ತಿದ್ದುಪಡಿ) ನಿಯಮಗಳು, 1985 ಎಂದು ಕರೆಯತಕ್ಕದ್ದು.
(2) ಇವು, ಈ ಕೂಡಲೇ ಜಾರಿಗೆ ಬರತಕ್ಕದ್ದು.
- ಮೊದಲನೇ ಅನುಸೂಚಿಗೆ ತಿದ್ದುಪಡಿ.- ಕರ್ನಾಟಕ ಸರ್ಕಾರಿ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು, 1977ರ ಮೊದಲನೇ ಅನುಸೂಚಿಯಲ್ಲಿ-
3ನೇ ಬಾಬಿನಲ್ಲಿ, “ವಿಧಾನ ಮಂಡಲಕ್ಕೆ ನಡೆಸುವ ಚುನಾವಣೆಗಳಿಗೆ ದಿನಾಂಕವನ್ನು ಗೊತ್ತುಪಡಿಸುವ” ಎಂಬ
ಪದಗಳನ್ನು ಬಿಟ್ಟುಬಿಡತಕ್ಕದ್ದು.
ಕರ್ನಾಟಕದ ರಾಜ್ಯಪಾಲರು
Annexure
ಮತ್ತು ಅವರ ಹೆಸರಿನಲ್ಲಿ
(ಜಿ.ಕೆ. ಸಂಗೋರಾಮ್)
ಸರ್ಕಾರದ ಅಧೀನ ಕಾರ್ಯುದರ್ಶಿ,
ಸಚಿವ ಸಂಪುಟ ವ್ಯವಹಾರಗಳ ಇಲಾಖೆ ಮತ್ತು ಸಿಬ್ಬಂದಿ
ಮತ್ತು ಆಡಳಿತ ಸುಧಾರಣೆಗಳ ಇಲಾಖೆ
(ಸೇವಾ ನಿಯಮಗಳು).
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ
ಅಧಿಸೂಚನೆ ಸಂಖ್ಯೆ ಡಿಸಿಎ 1 ಎಆರ್ಬಿ 86
ಬೆಂಗಳೂರು ದಿನಾಂಕ 23ನೇ ಜೂನ್ 1986.
ಭಾರತದ ಸಂವಿಧಾನದ 166ನೇ ಅನುಚ್ಛೇದದ (2) ಮತ್ತು (3)ನೇ ಖಂಡಗಳಿಂದ ನನಗೆ ಪ್ರದತ್ತವಾದ
ಅಧಿಕಾರಗಳನ್ನು ಚಲಾಯಿಸಿ ಕರ್ನಾಟಕದ ರಾಜ್ಯಪಾಲನಾದ ನಾನು, ಅಶೋಕನಾಥ್ ಬ್ಯಾನರ್ಜಿ, ಕರ್ನಾಟಕ ಸರ್ಕಾರಿ
(ಕಾರ್ಯಕಲಾಪಗಳ ನಿರ್ವಹಣಾ) ನಿಯಮಗಳು, 1977ನ್ನು ಮತ್ತಷ್ಟು ತಿದ್ದುಪಡಿ ಮಾಡುವ ಈ ಮುಂದಿನ ನಿಯಮಗಳನ್ನು
ಈ ಮೂಲಕ ಮಾಡುತ್ತೇನೆ, ಎಂದರೆ:-
- ಹೆಸರು ಮತ್ತು ಪ್ರಾರಂಭ.- (1) ಈ ನಿಯಮಗಳನ್ನು ಕರ್ನಾಟಕ ಸರ್ಕಾರಿ (ಕಾರ್ಯಕಲಾಪಗಳ ನಿರ್ವಹಣಾ) (ತಿದ್ದುಪಡಿ)
ನಿಯಮಗಳು, 1986 ಎಂದು ಕರೆಯತಕ್ಕದ್ದು.
(2) ಇವು, ಈ ಕೂಡಲೇ ಜಾರಿಗೆ ಬರತಕ್ಕದ್ದು.
- ಮೊದಲನೇ ಅನುಸೂಚಿಗೆ ತಿದ್ದುಪಡಿ.- ಕರ್ನಾಟಕ ಸರ್ಕಾರಿ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು, 1977ರ
(ಇಲ್ಲಿ ಇನ್ನು ಮುಂದೆ ಸದರಿ ನಿಯಮಗಳು ಎಂದು ಉಲ್ಲೇಖಿಸಲಾಗಿದೆ) ರ ಮೊದಲನೇ ಅನುಸೂಚಿಯಲ್ಲಿ -
(i) 21ನೇ ಬಾಬಿನಲ್ಲಿ “ರಾಜ್ಯ ಜಾಗೃತ ಆಯುಕ್ತರು” ಎಂಬ ಪದಗಳಿಗೆ ಬದಲಾಗಿ “ಲೋಕಾಯುಕ್ತರು ಅಥವಾ ಉಪಲೋಕಾಯುಕ್ತರು” ಎಂಬ ಪದಗಳನ್ನು ಸೇರಿಸತಕ್ಕದ್ದು.
(ii) 22ನೇ ಬಾಬಿನಲ್ಲಿ “ರಾಜ್ಯ ಜಾಗೃತ ಆಯುಕ್ತರು” ಎಂಬ ಪದಗಳಿಗೆ ಬದಲಾಗಿ “ಲೋಕಾಯುಕ್ತರು ಅಥವಾ
ಉಪಲೋಕಾಯುಕ್ತರು” ಎಂಬ ಪದಗಳನ್ನು ಸೇರಿಸತಕ್ಕದ್ದು.
- 2ನೇ ಅನುಸೂಚಿಗೆ ತಿದ್ದುಪಡಿ.- ಸದರಿ ನಿಯಮಗಳ ಎರಡನೇ ಅನುಸೂಚಿಯಲ್ಲಿ, 9 ಮತ್ತು 10ನೇ ಬಾಬುಗಳಲ್ಲಿ, “ರಾಜ್ಯ
ಜಾಗೃತ ಆಯುಕ್ತರು” ಎಂಬ ಪದಗಳಿಗೆ ಬದಲಾಗಿ “ಲೋಕಾಯುಕ್ತರಿಗೆ ಅಥವಾ ಉಪಲೋಕಾಯುಕ್ತರಿಗೆ” ಎಂಬ
ಪದಗಳನ್ನು ಸೇರಿಸತಕ್ಕದ್ದು.
- 3ನೇ ಅನುಸೂಚಿಗೆ ತಿದ್ದುಪಡಿ.- ಸದರಿ ನಿಯಮಗಳ ಮೂರನೇ ಅನುಸೂಚಿಯಲ್ಲಿ, 7ನೇ ಬಾಬಿಗೆ ಬದಲಾಗಿ ಈ
ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
“7. ಲೋಕಾಯುಕ್ತರ ಅಥವಾ ಉಪಲೋಕಾಯುಕ್ತರ ನೇಮಕಕ್ಕೆ ಅಥವಾ ತೆಗೆದು ಹಾಕುವುದಕ್ಕೆ ಸಂಬಂಧಿಸಿದ
ಪ್ರಸ್ತಾವಗಳು”
ಕರ್ನಾಟಕದ ರಾಜ್ಯಪಾಲರು
Annexure
ಮತ್ತು ಅವರ ಹೆಸರಿನಲ್ಲಿ
(ಜಿ.ಕೆ. ಸಂಗೋರಾಮ್)
ಸರ್ಕಾರದ ಅಧೀನ ಕಾರ್ಯುದರ್ಶಿ,
ಸಚಿವ ಸಂಪುಟ ವ್ಯವಹಾರಗಳ ಇಲಾಖೆ ಮತ್ತು ಸಿಬ್ಬಂದಿ
ಮತ್ತು ಆಡಳಿತ ಸುಧಾರಣೆಗಳ ಇಲಾಖೆ,
(ಸೇವಾ ನಿಯಮಗಳು)
ಕರ್ನಾಟಕ ಸರ್ಕಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಖೆ
ಅಧಿಸೂಚನೆ
ಸಂಖ್ಯೆ ಡಿಸಿಎ 4 ಎಆರ್ಬಿ 86
ಬೆಂಗಳೂರು ದಿನಾಂಕ 28ನೇ ಜನವರಿ 1987.
ಭಾರತದ ಸಂವಿಧಾನದ 166ನೇ ಅನುಚ್ಛೇದದ (2) ಮತ್ತು (3)ನೇ ಖಂಡಗಳಿಂದ ನನಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕದ ರಾಜ್ಯಪಾಲನಾದ ನಾನು, ಅಶೋಕನಾಥ್ ಬ್ಯಾನರ್ಜಿ, ಕರ್ನಾಟಕ ಸರ್ಕಾರಿ (ಕಾರ್ಯಕಲಾಪಗಳ ನಿರ್ವಹಣಾ) ನಿಯಮಗಳು, 1977ನ್ನು ಮತ್ತಷ್ಟು ತಿದ್ದುಪಡಿ ಮಾಡುವ ಈ ಮುಂದಿನ ನಿಯಮಗಳನ್ನು ಈ ಮೂಲಕ ಮಾಡುತ್ತೇನೆ, ಎಂದರೆ:-
- ಹೆಸರು ಮತ್ತು ಪ್ರಾರಂಭ.- (1) ಈ ನಿಯಮಗಳನ್ನು ಕರ್ನಾಟಕ ಸರ್ಕಾರಿ (ಕಾರ್ಯಕಲಾಪಗಳ ನಿರ್ವಹಣೆ) (ತಿದ್ದುಪಡಿ) ನಿಯಮಗಳು, 1987 ಎಂದು ಕರೆಯತಕ್ಕದ್ದು.
(2) ಇವು, ಈ ಕೂಡಲೇ ಜಾರಿಗೆ ಬರತಕ್ಕದ್ದು.
- ಎರಡನೇ ಅನುಸೂಚಿಗೆ ತಿದ್ದುಪಡಿ.- ಕರ್ನಾಟಕ ಸರ್ಕಾರಿ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು, 1977ರ ಎರಡನೇ ಅನುಸೂಚಿಯಲ್ಲಿ,-
(i) ಬಾಬು 8ರಲ್ಲಿ ಇರುವ “ಒಬ್ಬ 1ನೇ ದರ್ಜೆ ಅಧಿಕಾರಿ" ಎಂಬ ಪದಗಳಿಗೆ “ಕರ್ನಾಟಕ ಆಡಳಿತ ಸೇವೆ
(ಸಮೂಹ ಎ) ಹಿರಿಯ ಶ್ರೇಣಿ ಮತ್ತು ಮೇಲ್ಪಟ್ಟ ವೇತನ ಶ್ರೇಣಿಯುಳ್ಳ ಅಧಿಕಾರಿಯ ದರ್ಜೆಗೆ ಸಮನಾದ
ದರ್ಜೆಯ ಅಧಿಕಾರಿ” ಎಂಬ ಪದಗಳನ್ನು ಸೇರಿಸತಕ್ಕದ್ದು.
(ii) 9ನೇ ಬಾಬಿನಲ್ಲಿ ಇರುವ “ಒಬ್ಬ ಗೆಝೆಟೆಡ್ ಸರ್ಕಾರಿ ನೌಕರ” ಎಂಬ ಪದಗಳಿಗೆ ಬದಲಾಗಿ “ಕರ್ನಾಟಕ ಆಡಳಿತ ಸೇವೆ (ಸಮೂಹ-ಎ) ಹಿರಿಯ ಶ್ರೇಣಿ ಮತ್ತು ಮೇಲ್ಪಟ್ಟ ವೇತನ ಶ್ರೇಣಿಯುಳ್ಳ ಅಧಿಕಾರಿಯ ದರ್ಜೆಗೆ ಸಮನಾದ ದರ್ಜೆಯ ಅಧಿಕಾರಿ” ಎಂಬ ಪದಗಳನ್ನು ಸೇರಿಸತಕ್ಕದ್ದು.
(iii) 10ನೇ ಬಾಬಿಗೆ ಬದಲಾಗಿ ಈ ಕೆಳಗಿರುವುದನ್ನು ಸೇರಿಸತಕ್ಕದ್ದು,-
“10. ಕರ್ನಾಟಕ ಆಡಳಿತ ಸೇವೆ (ಸಮೂಹ-ಎ) ಹಿರಿಯ ಶ್ರೇಣಿ ಮತ್ತು ಮೇಲ್ಪಟ್ಟ ವೇತನ ಶ್ರೇಣಿಯುಳ್ಳ ಅಧಿಕಾರಿಯ ದರ್ಜೆಗೆ ಸಮನಾದ ದರ್ಜೆಯ ಗೆಜೆಟೆಡ್ ಸರ್ಕಾರಿ ನೌಕರನ ವಿರುದ್ಧ ಲೋಕಾಯುಕ್ತರು ಮಾಡಿರುವ ಶಿಫಾರಸ್ಸಿನ ಮೇಲೆ ಕೈಗೊಳ್ಳಬೇಕಾದ ಕ್ರಮಕ್ಕೆ ಸಂಬಂಧಪಟ್ಟ ಪ್ರಸ್ತಾವಗಳು”.
(iv) 15ನೆಯ ಬಾಬಿನಲ್ಲಿರುವ “1,500/- ರೂ. ಗಳಿಗೆ ಕಡಿಮೆಯಿಲ್ಲದ ಹುದ್ದೆ” ಎಂಬ, ಅಕ್ಷರ ಮತ್ತು ಅಂಕಿಗಳಿಗೆ ಬದಲಾಗಿ “ಕರ್ನಾಟಕ ಆಡಳಿತ ಸೇವಾ (ಸಮೂಹ-ಎ) ಹಿರಿಯ ವೇತನ ಶ್ರೇಣಿಯ ಕನಿಷ್ಠಕ್ಕಿಂತ ಕಡಿಮೆಯಿರದಿದ್ದಲ್ಲಿ” ಎಂಬ ಪದಗಳನ್ನು ಸೇರಿಸತಕ್ಕದ್ದು.
ಕರ್ನಾಟಕದ ರಾಜ್ಯಪಾಲರು
Annexure
ಮತ್ತು ಅವರ ಹೆಸರಿನಲ್ಲಿ
(ಜಿ.ಕೆ. ಸಂಗೋರಾಮ್)
ಸರ್ಕಾರದ ಅಧೀನ ಕಾರ್ಯುದರ್ಶಿ,
ಸಚಿವ ಸಂಪುಟ ವ್ಯವಹಾರಗಳ ಇಲಾಖೆ ಮತ್ತು ಸಿಬ್ಬಂದಿ
ಮತ್ತು ಆಡಳಿತ ಸುಧಾರಣೆ ಇಲಾಖೆ
(ಸೇವಾ ನಿಯಮಗಳು).
ಕರ್ನಾಟಕ ಸರ್ಕಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ
ಅಧಿಸೂಚನೆ
ಸಂಖ್ಯೆ ಡಿಸಿಎ 1 ಸೆಹನಿ 87, ಬೆಂಗಳೂರು ದಿನಾಂಕ 7ನೇ ಡಿಸೆಂಬರ್ 1987.
ಭಾರತ ಸಂವಿಧಾನದ 166ನೇ ಅನುಚ್ಛೇದದ (2) ಮತ್ತು (3)ನೇ ಖಂಡಗಳಿಂದ ನನಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ರಾಜ್ಯಪಾಲನಾದ ನಾನು, ಅಶೋಕನಾಥ್ ಬ್ಯಾನರ್ಜಿ, ಈ ಮೂಲಕ ಕರ್ನಾಟಕ ಸರ್ಕಾರದ ( ಕಾರ್ಯಕಲಾಪಗಳ ನಿರ್ವಹಣಾ) ನಿಯಮಗಳು, 1977 ಇದಕ್ಕೆ ಈ ಮುಂದಿನಂತೆ ಮತ್ತಷ್ಟು ತಿದ್ದುಪಡಿ ಮಾಡುತ್ತೇನೆ, ಎಂದರೆ:-
- ಶೀರ್ಷಿಕೆ ಮತ್ತು ಪ್ರಾರಂಭ .- (1) ಈ ನಿಯಮಗಳನ್ನು ಕರ್ನಾಟಕ ಸರ್ಕಾರ (ಕಾರ್ಯಕಲಾಪಗಳ ನಿರ್ವಹಣಾ) (ಎರಡನೇ ತಿದ್ದುಪಡಿ) ನಿಯಮಗಳು, 1987 ಎಂದು ಕರೆಯತಕ್ಕದ್ದು.
(2) ಇವು, ಈ ಕೂಡಲೇ ಜಾರಿಗೆ ಬರತಕ್ಕದ್ದು.
- 19ನೆಯ ನಿಯಮದ ತಿದ್ದುಪಡಿ:- ಕರ್ನಾಟಕ ಸರ್ಕಾರ (ಕಾರ್ಯಕಲಾಪಗಳ ನಿರ್ವಹಣಾ) ನಿಯಮಗಳು, 1977ರ 19 (2)ನೆಯ ನಿಯಮದಲ್ಲಿ “ಕರ್ನಾಟಕ ಸಿವಿಲ್ ಸೇವಾ ನಿಯಮಗಳಿಗೆ” ಎಂಬ ಪದಗಳ ನಂತರ “ಒಂದು ಅಲ್ಪವಿರಾಮ ಹಾಗೂ ಸಾದಿಲ್ವಾರು ವೆಚ್ಚದ ಕೈಪಿಡಿ, ಕರ್ನಾಟಕ ಆರ್ಥಿಕ ಸಂಹಿತೆಗೆ ಮತ್ತು ಕರ್ನಾಟಕ ಖಜಾನೆ ಸಂಹಿತೆಗೆ” ಎಂಬ ಪದಗಳನ್ನು ಸೇರಿಸತಕ್ಕದ್ದು.
ಕರ್ನಾಟಕದ ರಾಜ್ಯಪಾಲರು
Annexure
ಮತ್ತು ಅವರ ಹೆಸರಿನಲ್ಲಿ
(ಜಿ.ಎನ್ ನಾಯಕ್)
ಸರ್ಕಾರದ ಅಧೀನ ಕಾರ್ಯುದರ್ಶಿ,
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ
(ಸೇವಾ ನಿಯಮಗಳು)
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ
ಅಧಿಸೂಚನೆ ಸಂಖ್ಯೆ ಡಿಸಿಎ 6 ಎಆರ್ಬಿ 91,
ಬೆಂಗಳೂರು ದಿನಾಂಕ 26ನೆಯ ಜೂನ್ 1992.
ಭಾರತ ಸಂವಿಧಾನದ 166ನೇ ಅನುಚ್ಛೇದದ (2) ಮತ್ತು (3)ನೇ ಖಂಡಗಳಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ರಾಜ್ಯಪಾಲರು, ಕರ್ನಾಟಕ ಸರ್ಕಾರದ (ಕಾರ್ಯ ಕಲಾಪಗಳ ನಿರ್ವಹಣಾ) ನಿಯಮಗಳು, 1977ಕ್ಕೆ ಮತ್ತಷ್ಟು ತಿದ್ದುಪಡಿ ಮಾಡಲು ಈ ಮುಂದಿನ ನಿಯಮಗಳನ್ನು ರಚಿಸುತ್ತಾರೆ, ಎಂದರೆ:-
- ಶೀರ್ಷಿಕೆ ಮತ್ತು ಪ್ರಾರಂಭ .- (1) ಈ ನಿಯಮಗಳನ್ನು ಕರ್ನಾಟಕ ಸರ್ಕಾರ (ಕಾರ್ಯಕಲಾಪಗಳ ನಿರ್ವಹಣಾ) (ತಿದ್ದುಪಡಿ) ನಿಯಮಗಳು, 1992 ಎಂದು ಕರೆಯತಕ್ಕದ್ದು.
(2) ಇವು, ಸರ್ಕಾರಿ ರಾಜ್ಯಪತ್ರದಲ್ಲಿ ಅವುಗಳ ಪ್ರಕಟಣೆಯಾದ ದಿನಾಂಕದಂದು ಜಾರಿಗೆ ಬರತಕ್ಕದ್ದು.
- ಮೊದಲನೆಯ ಅನುಸೂಚಿಯ ತಿದ್ದುಪಡಿ:- ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣಾ) ನಿಯಮಗಳು, 1977 ಮೊದಲನೆಯ ಅನುಸೂಚಿ ಯಲ್ಲಿ ಬಾಬು 15ರಲ್ಲಿ ಬರುವ “50 ಲಕ್ಷ ರೂ.ಗಳನ್ನು” ಎಂಬ ಪದಗಳು ಮತ್ತು ಅಂಕಿಗಳಿಗೆ ಬದಲಾಗಿ “100 ಲಕ್ಷ ರೂ.ಗಳನ್ನು” ಎಂಬ ಅಂಕಿಗಳು ಮತ್ತು ಪದಗಳನ್ನು ಮತ್ತು “ಶೇಕಡಾ 15ರಷ್ಟು ಅಥವಾ ಹದಿನೈದು ಲಕ್ಷ ರೂಪಾಯಿಗಳಷ್ಟು, ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟುನ್ನು” ಎಂಬ ಪದಗಳಿಗೆ ಬದಲಾಗಿ “ಮೂವತ್ತು ಲಕ್ಷ ರೂಪಾಯಿಗಳನ್ನು” ಎಂಬ ಪದಗಳನ್ನು ಅನುಕ್ರಮವಾಗಿ ಸೇರಿಸತಕ್ಕದ್ದು.
ಕರ್ನಾಟಕದ ರಾಜ್ಯಪಾಲರು
Annexure
ಮತ್ತು ಅವರ ಹೆಸರಿನಲ್ಲಿ
(ಮೋತಿರಾಂ ಪವಾರ)
ಸರ್ಕಾರದ ಅಧೀನ ಕಾರ್ಯುದರ್ಶಿ-2,
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ
(ಸೇವಾ ನಿಯಮಗಳು)
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ
ಸಂಖ್ಯೆ ಡಿಸಿಎ 6 ಎಆರ್ಬಿ 93,
ಬೆಂಗಳೂರು ದಿನಾಂಕ 14ನೆಯ ಮೇ 1993.
ಭಾರತ ಸಂವಿಧಾನದ 166ನೇ ಅನುಚ್ಛೇದದ (2) ಮತ್ತು (3)ನೇ ಖಂಡಗಳ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ರಾಜ್ಯಪಾಲರು, ಈ ಮೂಲಕ ಕರ್ನಾಟಕ ಸರ್ಕಾರದ (ಕಾರ್ಯ ಕಲಾಪಗಳ ನಿರ್ವಹಣೆ) ನಿಯಮಗಳು, 1977 ಇದಕ್ಕೆ ಮತ್ತಷ್ಟು ತಿದ್ದುಪಡಿ ಮಾಡುವುದಕ್ಕಾಗಿ ಈ ಕೆಳಕಂಡ ನಿಯಮಗಳನ್ನು ರಚಿಸುತ್ತಾರೆ, ಎಂದರೆ:-
- ಶೀರ್ಷಿಕೆ ಮತ್ತು ಪ್ರಾರಂಭ.- (1) ಈ ನಿಯಮಗಳನ್ನು ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣಾ) (ತಿದ್ದುಪಡಿ) ನಿಯಮಗಳು, 1993 ಎಂದು ಕರೆಯತಕ್ಕದ್ದು.
(2) ಇವು, ಸರ್ಕಾರಿ ರಾಜ್ಯಪತ್ರದಲ್ಲಿ ಅವುಗಳ ಪ್ರಕಟಣೆಯಾದ ದಿನಾಂಕದಂದು ಜಾರಿಗೆ ಬರತಕ್ಕದ್ದು.
- ಒಂದನೆಯ ಅನುಸೂಚಿಯ ತಿದ್ದುಪಡಿ:- ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು, 1977ರ ಒಂದನೆಯ ಅನುಸೂಚಿಯಲ್ಲಿ 15ನೆಯ ಬಾಬಿನ “ಒಂದು ಲಕ್ಷ ರೂ.ಗಳನ್ನು” ಎಂಬ ಪದಗಳಿಗೆ ಬದಲಾಗಿ “ಐದು ಲಕ್ಷಗಳು” ಎಂಬ ಪದಗಳನ್ನು ಸೇರಿಸತಕ್ಕದ್ದು.
ಕರ್ನಾಟಕದ ರಾಜ್ಯಪಾಲರು
Annexure
ಮತ್ತು ಅವರ ಹೆಸರಿನಲ್ಲಿ
(ಕಣ್ಣನ್ ಕುಟ್ಟಿ ಕುಳಾವಿಲ್)
ಸರ್ಕಾರದ ಅಧೀನ ಕಾರ್ಯುದರ್ಶಿ- 2
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ
(ಸೇವಾ ನಿಯಮಗಳು)
ಕರ್ನಾಟಕ ಸರ್ಕಾರ
ಸಂಖ್ಯೆ ಡಿಲಿಎ 12 ಎಆರ್ಐಜ 9B
ಕರ್ನಾಟಕ ಸರ್ಕಾರದ ಸಚಿವಾಲಯ,
ಸಂಖ್ಯೆ ಡಿಸಿಎ 12 ಎಆರ್ಬಿ 93 ಕರ್ನಾಟಕ ಸರ್ಕಾರದ ಸಚಿವಾಲಯ,
ವಿಧಾನಸೌಧ, ಬೆಂಗಳೂರು,
ದಿನಾಂಕ 10.9.1993.
ಅಧಿಸೂಚನೆ
ಭಾರತದ ಸಂವಿಧಾನದ 166ನೇ ಅನುಚ್ಛೇದದ (2) ಮತ್ತು (3)ನೇ ಖಂಡಗಳಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕದ ರಾಜ್ಯಪಾಲರು ಈ ಮೂಲಕ ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು, 1977 ಇದಕ್ಕೆ ಮತ್ತಷ್ಟು ತಿದ್ದುಪಡಿ ಮಾಡುವುದಕ್ಕಾಗಿ ಈ ಕೆಳಕಂಡ ನಿಯಮಗಳನ್ನು ರಚಿಸುತ್ತಾರೆ, ಎಂದರೆ:-
- ಶೀರ್ಷಿಕೆ ಮತ್ತು ಪ್ರಾರಂಭ.- (1) ಈ ನಿಯಮಗಳನ್ನು ಕರ್ನಾಟಕ ಸರ್ಕಾರ (ಕಾರ್ಯಕಲಾಪಗಳ ನಿರ್ವಹಣೆ) (ತಿದ್ದುಪಡಿ) ನಿಯಮಗಳು, 1993 ಎಂದು ಕರೆಯತಕ್ಕದ್ದು.
(2) ಇವು, ಸರ್ಕಾರಿ ರಾಜ್ಯಪತ್ರದಲ್ಲಿ ಅವುಗಳ ಪ್ರಕಟಣೆಯ ದಿನಾಂಕದಿಂದ ಜಾರಿಗೆ ಬರತಕ್ಕದ್ದು.
- ಒಂದನೆಯ ಅನುಸೂಚಿಯ ತಿದ್ದುಪಡಿ.- ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣಾ) ನಿಯಮಗಳು, 1977ರ ಒಂದನೆಯ ಅನುಸೂಚಿಯಲ್ಲಿನ ಬಾಬು-12ಕ್ಕೆ ಈ ಕೆಳಕಂಡ ಪರಂತುಕವನ್ನು ಸೇರಿಸತಕ್ಕದ್ದು , ಎಂದರೆ:-
“ಪರಂತು, ಸರ್ಕಾರಿ ಸಂಸ್ಥೆಗಳಿಗೆ ಮತ್ತು ಸರ್ಕಾರಿ ಉದ್ಯಮಗಳಿಗೆ ಭೂಮಿ ಮಂಜೂರಾತಿಗೆ ಸಂಬಂಧಿಸಿದ ಪ್ರಸ್ತಾವಗಳಿಗೆ ಕಂದಾಯ ಇಲಾಖೆಯ ಪ್ರಭಾರದಲ್ಲಿರುವ ಸಚಿವರಿಂದ ಅನುಮೋದನೆ ಪಡೆಯಬಹುದು”.
Annexure
ಮತ್ತು ಅವರ ಹೆಸರಿನಲ್ಲಿ
(ಕಣ್ಣನ್ ಕುಟ್ಟಿ ಕುಳಾವಿಲ್)
ಸರ್ಕಾರದ ಅಧೀನ ಕಾರ್ಯದರ್ಶಿ-2,
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ
(ಸೇವಾ ನಿಯಮಗಳು)
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ
ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರುಗಳ ನಡುವೆ ಕೆಲಸದ ಹಂಚಿಕೆ
ಪ್ರಸ್ತಾವನೆ:
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರ ಅಧಿಕಾರಗಳು ಮತ್ತು ಪ್ರಕಾರ್ಯಗಳು ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣಾ) ನಿಯಮಗಳು, 1977ರ 7(ಎ) ಮತ್ತು 8ನೆಯ ನಿಯಮಗಳಲ್ಲಿ ಒಳಗೊಂಡಿವೆ. ಇದನ್ನು ಪುನರ್ ಪರಿಶೀಲಿಸಲಾಗಿದೆ ಮತ್ತು ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣಾ) ನಿಯಮಗಳು, 1977ರ ತಿದ್ದುಪಡಿಗಳನ್ನು ಮಾಡಬೇಕಿದ್ದು, ಈ ಮುಂದಿನ ಆದೇಶಗಳನ್ನು ಸರ್ಕಾರವು ಹೊರಡಿಸುತ್ತದೆ:
ಆದೇಶ ಸಂಖ್ಯೆ ಡಿಸಿಎ 3 ಎಆರ್ಬಿ 94,
ಬೆಂಗಳೂರು, ದಿನಾಂಕ 24ನೆಯ ಮೇ, 1994
ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಿಗೆ ಸಂಬಂಧಿಸಿ ಈ ಮುಂದಿನಂತೆ ಕೆಲಸದ ಪುನರ್ ಹಂಚಿಕೆಯ ಬಗ್ಗೆ ಈ ಕೂಡಲೇ ಜಾರಿಗೆ ಬರುವಂತೆ, ಸರ್ಕಾರವು ಈ ಮೂಲಕ ನಿರ್ದೇಶನಗಳನ್ನು ನೀಡುತ್ತದೆ.
ಅಪರ ಮುಖ್ಯ ಕಾರ್ಯದರ್ಶಿ
ರಾಜ್ಯದ ಮೂಲಸೌಲಭ್ಯಗಳ ಅಭಿವೃದ್ಧಿಗಾಗಿ ಬೃಹತ್ ನೀರಾವರಿ ಯೋಜನೆಗಳನ್ನು ಮತ್ತು ಬೃಹತ್ ವಿದ್ಯುತ್ ಯೋಜನೆಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವುದು ಅತಿ ಮಹತ್ವವಾದುದು. ಈ ಯೋಜನೆಗಳ ಅನುಷ್ಠಾನದ ಪುನರವಲೋಕನಾ ಕಾರ್ಯವು ಉನ್ನತ ಮಟ್ಟದಲ್ಲಿ ನಡೆಯಬೇಕಾಗಿದ್ದು ಅಭಿವೃದ್ಧಿಯ ಅಗತ್ಯತೆಗಳನ್ನು ಪೂರೈಸುವಂತೆ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದೆಯೇ ಹಾಗೂ ತ್ವರಿತವಾಗಿ ನಡೆಯುತ್ತಿವೆಯೇ ಎಂಬುದನ್ನು ಗಮನಿಸುವುದು ಅಂಥ ಪುನರೀಕ್ಷಣೆಯ ಉದ್ದೇಶಗಳಾಗಿವೆ. ಆದುದರಿಂದಾಗಿ, ಅಪರ ಮುಖ್ಯ ಕಾರ್ಯದರ್ಶಿಯವರು, ಬೃಹತ್ ನೀರಾವರಿ ಯೋಜನೆಗಳ, ಬೃಹತ್ ವಿದ್ಯುತ್ ಯೋಜನೆಗಳ ಹಾಗೂ ಬಾಹ್ಯ ನೆರವು ಪಡೆದ ಯೋಜನೆಗಳ ಅನುಷ್ಠಾನವನ್ನು ಪುನರವಲೋಕಿಸುತ್ತಾರೆ ಮತ್ತು ಈ ಯೋಜನೆಗಳ ಸ್ಥಿತಿಗತಿಗಳನ್ನು ಆಯಾ ಖಾತೆಯ ಸಚಿವರುಗಳಿಗೆ ವರದಿ ಮಾಡುತ್ತಾರೆ. ಆಯಾ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು / ಕಾರ್ಯದರ್ಶಿಗಳು ಪ್ರಸ್ತಾವಗಳನ್ನು ಮತ್ತು ಅಭಿಪ್ರಾಯಗಳನ್ನು ಕಡತದಲ್ಲಿ ಮಂಡಿಸಿ, ನೇರವಾಗಿ ಆಯಾ ಖಾತೆಯ ಸಚಿವರಿಗೆ ಕಳುಹಿಸುವ ಮೂಲಕ ಇಲಾಖೆಗಳ ಕಾರ್ಯನಿರ್ವಹಣೆಯನ್ನು ಮುಂದುವರಿಸುತ್ತಾರೆ.
ಸಾಂಸ್ಥಿಕ ಹಣಕಾಸು ಮತ್ತು ಸಾಂಖ್ಯಿಕ ಇಲಾಖೆಗಳಲ್ಲಿನ ಮೌಲ್ಯನಿರ್ಧರಣಾ ಘಟಕವು ಅಪರ ಮುಖ್ಯ ಕಾರ್ಯದರ್ಶಿಯವರ ಪೂರ್ಣ ನಿಯಂತ್ರಣದಲ್ಲಿ ಕಾರ್ಯ ನಿರ್ವಹಿಸತಕ್ಕದ್ದು. ಅಪರ ಮುಖ್ಯ ಕಾರ್ಯದರ್ಶಿಯವರು ಮೌಲ್ಯನಿರ್ಧರಣಾ ಘಟಕದ ಅಧ್ಯಕ್ಷರು ಕೂಡ ಆಗಿರುತ್ತಾರೆ. ಈ ವಿಷಯದಲ್ಲಿ ಸೂಕ್ತ ಆದೇಶಗಳನ್ನು ಸಾಂಸ್ಥಿಕ ಹಣಕಾಸು ಮತ್ತು ಸಾಂಖ್ಯಿಕ ಇಲಾಖೆಗಳು ಹೊರಡಿಸಬಹುದು.
ಅಪರ ಮುಖ್ಯ ಕಾರ್ಯದರ್ಶಿಯವರು ಮುಖ್ಯ ಕುಂದುಕೊರತೆಗಳ ನಿವಾರಣಾ ಪ್ರಾಧಿಕಾರಿಯಂತೆ ಕೂಡ ಕರ್ತವ್ಯ ನಿರ್ವಹಿಸುವರು ಮತ್ತು ರಿಟ್ ಅರ್ಜಿಯ ಹೊರತು ನ್ಯಾಯಿಕ ವ್ಯವಹರಣೆಯ ಮೂಲಕ ತೀರ್ಮಾನಿಸಬಹುದಾದಂಥವುಗಳನ್ನು ಹೊರತುಪಡಿಸಿ ಅವರಿಗೆ ಸಲ್ಲಿಸಲಾದ ಅಥವಾ ಕಳುಹಿಸಲಾದ ಯಾವುದೇ ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸುವರು. ಈ ಉದ್ದೇಶಕ್ಕಾಗಿ ಸರ್ಕಾರಿ ನೌಕರರ ಸೇವಾ ವಿಷಯಗಳನ್ನು ಕೂಡ ಹೊರತುಪಡಿಸಲಾಗಿದೆ.
ಅಭಿವೃದ್ಧಿ ಆಯುಕ್ತರು:-
ಗ್ರಾಮೀಣ ಅಭಿವೃದ್ಧಿ, ಕೃಷಿ, ರೇಷ್ಮೆ, ಪಶುಸಂಗೋಪನೆ, ತೋಟಗಾರಿಕೆ ಮೊದಲಾದಂಥ ಇಲಾಖೆಗಳ ವಿವಿಧ ಯೋಜನೆಗಳ ಮತ್ತು ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನವನ್ನು ಸಾಧಿಸುವುದಕ್ಕಾಗಿ ತಂಡ ಮನೋಭಾವದಿಂದ ಕರ್ತವ್ಯ ನಿರ್ವಹಿಸುವುದು ಅಗತ್ಯವಾಗಿರುತ್ತದೆ. ಸರಿಯಾದ ರೀತಿಯಲ್ಲಿ ಸಮನ್ವಯತೆ ಸಾಧಿಸಿದಾಗ ಮಾತ್ರವೇ ಗ್ರಾಮೀಣ ಅಭಿವೃದ್ಧಿಯ ಗುರಿಗಳನ್ನು ಸಾಧಿಸಬಹುದಾಗಿದೆ. ಅಭಿವೃದ್ಧಿ ಆಯುಕ್ತರ ಹುದ್ದೆಯನ್ನು ಅಭಿವೃದ್ಧಿ ಇಲಾಖೆಗಳ ನಡುವೆ ಪರಿಣಾಮಕಾರಿ ಸಮನ್ವಯತೆ ಸಾಧಿಸುವುದಕ್ಕಾಗಿಯೇ ರೂಪಿಸಲಾಗಿದ್ದು, ಗ್ರಾಮೀಣ ಅಭಿವೃದ್ಧಿಯ ಗುರಿಗಳನ್ನು ಸಾಧಿಸಲು ಈ ಕಾರ್ಯಚಟುವಟಿಕೆಗಳನ್ನು ಸಂಯೋಜಿಸಬಹುದಾಗಿದೆ. ಆದುದರಿಂದ ಅಭಿವೃದ್ಧಿ ಆಯುಕ್ತರು ಈ ಇಲಾಖೆಗಳ ಕಾರ್ಯನಿರ್ವಹಣೆಯಲ್ಲಿ ತಂಡದ ನಾಯಕರಾಗಿ ಕೆಲಸ ನಿರ್ವಹಿಸುತ್ತಾರೆ.
ಅಭಿವೃದ್ಧಿ ಆಯುಕ್ತರು ಮುಖ್ಯ ಕಾರ್ಯದರ್ಶಿಯವರ ಪೂರ್ಣ ನಿಯಂತ್ರಣಕ್ಕೊಳಪಟ್ಟಿರುತ್ತಾರೆ ಮತ್ತು ಈ ಕೆಳಕಂಡ ಇಲಾಖೆಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಮನ್ವಯ ಸಾಧಿಸತಕ್ಕದ್ದು:
-
ಗ್ರಾಮೀಣ ಅಭಿವೃದ್ಧಿ
-
ಕೃಷಿ
-
ಪಶುಸಂಗೋಪನೆ
-
ಮೀನುಗಾರಿಕೆ
-
ತೋಟಗಾರಿಕೆ
-
ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ
-
ಸಾಮಾಜಿಕ ಅರಣ್ಯ ನಿರ್ಮಾಣ
-
ಅಂತರ್ಜಲ ಅಭಿವೃದ್ಧಿ ಮತ್ತು ಬಳಕೆ
-
ಸಣ್ಣ ನೀರಾವರಿ
ಸರ್ಕಾರದ ಈ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು / ಕಾರ್ಯದರ್ಶಿಗಳು ಕಾರ್ಯಕಲಾಪಗಳ ನಿರ್ವಹಣಾ ನಿಯಮಗಳು ಮತ್ತು ಕೈಪಿಡಿಯ ಸೂಚನೆಗಳಿಗೆ ಒಳಪಟ್ಟು ಸಂಬಂಧಪಟ್ಟ ಖಾತೆಯ ಸಚಿವರಿಗೆ ಕಡತಗಳನ್ನು ಸಲ್ಲಿಸತಕ್ಕದ್ದು.
ಅಭಿವೃದ್ಧಿ ಆಯುಕ್ತರು, ಈ ಇಲಾಖೆಗಳ ಕೆಲಸ ಕಾರ್ಯಗಳು ಸುಗಮವಾಗಿ ನಡೆದುಕೊಂಡು ಹೋಗುವಂತೆ ನೋಡಿಕೊಳ್ಳಬೇಕು. ಅವರು, ಆರ್ಥಿಕ ಇಲಾಖೆಯ ಸಮಾಲೋಚನೆ ಅಗತ್ಯವಿರುವ ಪ್ರಕರಣಗಳ ಮೇಲೆ ಗಮನ ಹರಿಸಬೇಕು. ಈ ಇಲಾಖೆಗಳ ಸಭೆಗಳಲ್ಲಿ ಚರ್ಚೆಗೆ ತೆಗೆದುಕೊಳ್ಳಲಾದ ವಿಷಯಗಳ ಬಗ್ಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರ / ಕಾರ್ಯದರ್ಶಿಯವರ ಅಭಿಪ್ರಾಯಕ್ಕೆ ಅಭಿವೃದ್ಧಿ ಆಯುಕ್ತರ ಅಭಿಪ್ರಾಯವು ಭಿನ್ನವಾಗಿದ್ದಲ್ಲಿ ಅಂಥ ಕಡತಗಳನ್ನು ಅಭಿವೃದ್ಧಿ ಆಯುಕ್ತರ ಮುಖಾಂತರ ಸಂಬಂಧಪಟ್ಟ ಖಾತೆಯ ಸಚಿವರಿಗೆ ಸಲ್ಲಿಸತಕ್ಕದ್ದು.
ಈ ಸಮನ್ವಯತೆ ಹಾಗೂ ನಾಯಕತ್ವದ ಪ್ರಕಾರ್ಯಗಳ ನಿರ್ವಹಣೆಗಾಗಿ ವ್ಯಾಪಕ ಪ್ರವಾಸಗಳನ್ನು ಕೈಗೊಳ್ಳಬೇಕಾಗುತ್ತದೆ. ಅಂಥ ಅಗತ್ಯತೆಯನ್ನು ಗಮನದಲ್ಲಿರಿಸಿ ಅಭಿವೃದ್ಧಿ ಆಯುಕ್ತರು ಕ್ಷೇತ್ರ ಇಲಾಖೆಗಳ ನಡುವೆ ಸಮನ್ವಯತೆ ಸಾಧಿಸಿರುವುದನ್ನು ವೀಕ್ಷಿಸಲು ಮತ್ತು ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿರುವುದನ್ನು ವೀಕ್ಷಿಸಲು ಸಮರ್ಥಿಸುವಂಥ ವಿವಿಧ ಹಂತದ ಪ್ರವಾಸಗಳನ್ನು ಕೈಗೊಳ್ಳಬೇಕಾಗುತ್ತದೆ.
Annexure
ಮತ್ತು ಅವರ ಹೆಸರಿನಲ್ಲಿ
(ಕಣ್ಣನ್ ಕುಟ್ಟಿ ಕುಳಾವಿಲ್)
ಸರ್ಕಾರದ ಅಧೀನ ಕಾರ್ಯುದರ್ಶಿ- 2
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ
(ಸೇವಾ ನಿಯಮಗಳು)
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ
ಅಧಿಸೂಚನೆ
ಸಂಖ್ಯೆ ಡಿಸಿಎ 1 ಎಆರ್ಬಿ 96, ಬೆಂಗಳೂರು, ದಿನಾಂಕ 22ನೇ ಜನವರಿ 1996.
ಭಾರತದ ಸಂವಿಧಾನದ 166ನೆಯ ಅನುಚ್ಛೇದದ (2) ಮತ್ತು (3)ನೇ ಖಂಡಗಳಿಂದ ಪ್ರದತ್ತವಾದ
ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕದ ರಾಜ್ಯಪಾಲರು ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣೆ)
ನಿಯಮಗಳು, 1977ಕ್ಕೆ ಮತ್ತಷ್ಟು ತಿದ್ದುಪಡಿ ಮಾಡುವುದಕ್ಕಾಗಿ, ಈ ಕೆಳಕಂಡ ನಿಯಮಗಳನ್ನು ರಚಿಸುತ್ತಾರೆ , ಎಂದರೆ:-
- ಶೀರ್ಷಿಕೆ ಮತ್ತು ಪ್ರಾರಂಭ .- (1) ಈ ನಿಯಮಗಳನ್ನು ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣೆ)
(ತಿದ್ದುಪಡಿ) ನಿಯಮಗಳು, 1996 ಎಂದು ಕರೆಯತಕ್ಕದ್ದು.
(2) ಇವು, ಸರ್ಕಾರಿ ರಾಜ್ಯಪತ್ರದಲ್ಲಿ ಅವುಗಳ ಪ್ರಕಟಣೆಯ ದಿನಾಂಕದಿಂದ ಜಾರಿಗೆ ಬರತಕ್ಕದ್ದು.
- 2ನೇ ನಿಯಮದ ತಿದ್ದುಪಡಿ .- ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣಾ) ನಿಯಮಗಳು, 1977ರ 2ನೆಯ ನಿಯಮದಲ್ಲಿ, (ಜೆ) ಖಂಡದಲ್ಲಿ:-
(i) “ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ” ಎಂಬ ಪದಗಳು ಬರುವ ಕಡೆಗಳಲ್ಲೆಲ್ಲಾ ಅವುಗಳಿಗೆ
ಬದಲಾಗಿ “ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ” ಎಂಬ ಪದಗಳನ್ನು
ಪ್ರತಿಯೋಜಿಸತಕ್ಕದ್ದು, ಮತ್ತು
(ii) “ಕರಡು ಪ್ರಾರೂಪಕ, ಜಂಟಿ ಕರಡು ಪ್ರಾರೂಪಕ” ಎಂಬ ಪದಗಳಿಗೆ ಬದಲಾಗಿ “ಅಪರ ಪ್ರಾರೂಪಕಾರ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.
- ಭಾಗ- III ರ ತಿದ್ದುಪಡಿ.- ಸದರಿ ನಿಯಮದ ಭಾಗ-III ರಲ್ಲಿನ “ಇಲಾಖೆ ಕಾರ್ಯಕಲಾಪಗಳ ವಿಲೇ” ಎಂಬ ಶೀರ್ಷಿಕೆಯ ಅಡಿಯಲ್ಲಿ,-
(ಎ) “ಡಿ- ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ” ಎಂಬ ಉಪಶೀರ್ಷಿಕೆಯ ಬದಲಾಗಿ, “ಡಿ-
ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ” ಎಂಬ ಉಪಶೀರ್ಷಿಕೆಯನ್ನು ಸೇರಿಸತಕ್ಕದ್ದು.
(ಬಿ) 47, 48, 49, 50, 54, 55, 56, 57, 58 ಮತ್ತು 60ನೆಯ ನಿಯಮಗಳಲ್ಲಿರುವ “ಕಾನೂನು ಮತ್ತು
ಸಂಸದೀಯ ವ್ಯವಹಾರಗಳ ಇಲಾಖೆ” ಎಂಬ ಪದಗಳಿಗೆ ಬದಲಾಗಿ ಅವು ಬರುವ ಕಡೆಗಳೆಲ್ಲೆಲ್ಲಾ “ಸಂಸದೀಯ
ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ” ಎಂಬ ಪದಗಳನ್ನು ಸೇರಿಸತಕ್ಕದ್ದು.
(ಸಿ) ನಿಯಮ-61ನ್ನು ಅದರ ಉಪನಿಯಮ (1) ನೇ ಎಂದು ಮರು ಸಂಖ್ಯೆ ನೀಡತಕ್ಕದ್ದು, ಮತ್ತು
(i) ಹಾಗೆ ಮರು ಸಂಖ್ಯೆ ನೀಡಲಾದ (1) ನೆಯ ನಿಯಮದಲ್ಲಿ “ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ” ಎಂಬ ಪದಗಳು ಬರುವ ಕಡೆಗಳೆಲ್ಲೆಲ್ಲಾ “ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ” ಎಂಬ ಪದಗಳನ್ನು ಸೇರಿಸತಕ್ಕದ್ದು.
(ii) ಹಾಗೆ ಮರುಸಂಖ್ಯೆ ನೀಡಲಾದ (1) ನೆಯ ಉಪನಿಯಮದ ನಂತರ, ಈ ಕೆಳಕಂಡ ಉಪನಿಯಮವನ್ನು ಸೇರಿಸತಕ್ಕದ್ದು, ಎಂದರೆ:-
(2) (1) ನೇ ಉಪ ನಿಯಮದ ಮೇರೆಗೆ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆಗೆ ಕಳುಹಿಸಿರುವ ಪ್ರಕರಣಗಳ ಸಂಬಂಧದಲ್ಲಿ, ಆಡಳಿತ ಇಲಾಖೆಯು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆಯು ನೀಡಿದ ಕಾನೂನು ಸಲಹೆಯಂತೆ ಕ್ರಮ ಕೈಗೊಳ್ಳತಕ್ಕದ್ದು. ಆದರೆ, ಗಮನಕ್ಕೆ ತಂದ ಹೊಸ ಅಂಶಗಳ ಹಿನ್ನೆಲೆಯಲ್ಲಿ, ಆಡಳಿತ ಇಲಾಖೆಯು ಪ್ರಕರಣವನ್ನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆಗೆ ಅದರ ಅಭಿಪ್ರಾಯವನ್ನು ಪುನ: ಪರಿಶೀಲಿಸಲು ಕಳುಹಿಸಿಕೊಡತಕ್ಕದ್ದು.
(ಡಿ) 61ನೆಯ ನಿಯಮದ ನಂತರ, ಈ ಕೆಳಕಂಡ ಉಪಶೀರ್ಷಿಕೆಯನ್ನು ಸೇರಿಸತಕ್ಕದ್ದು, ಎಂದರೆ:-
“ಡಿಡಿ. ಕಾನೂನು ಇಲಾಖೆ”.
(ಇ) 62ನೆಯ ನಿಯಮದಲ್ಲಿ, “ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ” ಎಂಬ ಪದಗಳು ಬರುವ ಎರಡೂ ಕಡೆಗಳಲ್ಲೆಲ್ಲಾ ಅವುಗಳಿಗೆ ಬದಲಾಗಿ “ಕಾನೂನು ಇಲಾಖೆ” ಎಂಬ ಪದಗಳನ್ನು ಸೇರಿಸತಕ್ಕದ್ದು.
(ಎಫ್) 63ನೆಯ ನಿಯಮದಲ್ಲಿ,-
(i) “61 ಮತ್ತು 62ನೆಯ ನಿಯಮಗಳು” ಎಂಬ ಅಂಕಿಗಳು ಮತ್ತು ಪದಗಳಿಗೆ ಬದಲಾಗಿ “62ನೆಯ ನಿಯಮ” ಎಂಬ ಅಂಕಿಗಳು ಮತ್ತು ಪದಗಳನ್ನು ಸೇರಿಸತಕ್ಕದ್ದು;
(ii) “ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ” ಎಂಬ ಪದಗಳಿಗೆ ಬದಲಾಗಿ, ಅವು ಬರುವ
ಕಡೆಗೆಲ್ಲಾ “ಕಾನೂನು ಇಲಾಖೆ” ಎಂಬ ಪದಗಳನ್ನು ಸೇರಿಸತಕ್ಕದ್ದು.
(ಜಿ) 64 ಮತ್ತು 65ನೆಯ ನಿಯಮಗಳಲ್ಲಿ, “ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ” ಎಂಬ
ಪದಗಳಿಗೆ ಬದಲಾಗಿ “ಕಾನೂನು ಇಲಾಖೆ” ಎಂಬ ಪದಗಳನ್ನು ಸೇರಿಸತಕ್ಕದ್ದು.
- ಒಂದನೇ ಅನುಸೂಚಿಯ ತಿದ್ದುಪಡಿ.- ಸದರಿ ನಿಯಮಗಳ ಒಂದನೆಯ ಅನುಸೂಚಿಯಲ್ಲಿ, 30ನೆಯ ಬಾಬಿನಲ್ಲಿರುವ “ಮತ್ತು ಸಂಸದೀಯ ವ್ಯವಹಾರಗಳು” ಎಂಬ ಪದಗಳನ್ನು ಬಿಟ್ಟುಬಿಡತಕ್ಕದ್ದು.
ಕರ್ನಾಟಕ ರಾಜ್ಯಪಾಲರು
Annexure
ಮತ್ತು ಅವರ ಹೆಸರಿನಲ್ಲಿ
(ಕೆ.ಎಲ್ ಜಯರಾಮ್)
ಸರ್ಕಾರದ ಅಧೀನ ಕಾರ್ಯುದರ್ಶಿ-2
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, (ಸೇವಾ ನಿಯಮಗಳು)
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ
ಅಧಿಸೂಚನೆ ಸಂಖ್ಯೆ ಡಿಸಿಎ 18 ಎಆರ್ಬಿ 96, ಬೆಂಗಳೂರು, ದಿನಾಂಕ 7ನೇ ನವೆಂಬರ್ 1996
ಭಾರತದ ಸಂವಿಧಾನದ 166ನೆಯ ಅನುಚ್ಛೇದದ (2) ಮತ್ತು (3)ನೇ ಖಂಡಗಳಿಂದ ಪ್ರದತ್ತವಾದ
ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕದ ರಾಜ್ಯಪಾಲರು ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣೆ)
ನಿಯಮಗಳು, 1977ಕ್ಕೆ ಮತ್ತಷ್ಟು ತಿದ್ದುಪಡಿ ಮಾಡುವುದಕ್ಕಾಗಿ, ಈ ಕೆಳಕಂಡ ನಿಯಮಗಳನ್ನು ರಚಿಸಿದ್ದಾರೆ, ಎಂದರೆ:-
- ಶೀರ್ಷಿಕೆ ಮತ್ತು ಪ್ರಾರಂಭ.- (1) ಈ ನಿಯಮಗಳನ್ನು ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣೆ) (ತಿದ್ದುಪಡಿ) ನಿಯಮಗಳು, 1996 ಎಂದು ಕರೆಯತಕ್ಕದ್ದು.
(2) ಇವು, ಸರ್ಕಾರಿ ರಾಜ್ಯಪತ್ರದಲ್ಲಿ ಅವುಗಳ ಪ್ರಕಟಣೆಯ ದಿನಾಂಕದಿಂದ ಜಾರಿಗೆ ಬರತಕ್ಕದ್ದು.
- ಒಂದನೆಯ ಅನುಸೂಚಿಯ ತಿದ್ದುಪಡಿ.- ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣಾ) ನಿಯಮಗಳು, 1977ರ ಒಂದನೆಯ ಅನುಸೂಚಿಯಲ್ಲಿರುವ 34ನೇ ಸಂಖ್ಯೆಯ ಬಾಬಿನ ನಂತರದಲ್ಲಿ ಈ ಕೆಳಕಂಡುದುದನ್ನು ಸೇರಿಸತಕ್ಕದ್ದು, ಎಂದರೆ:
“35. ಕರ್ನಾಟಕ ಭೂ ಸುಧಾರಣಾ ಅಧಿನಿಯಮ, 1961ರ 109 (1ಎ) ಪ್ರಕರಣದ ಮೇರೆಗಿನ ವಿನಾಯಿತಿಯ ಎಲ್ಲ ಪ್ರಸ್ತಾವಗಳು”.
ಕರ್ನಾಟಕ ರಾಜ್ಯಪಾಲರು
Annexure
ಮತ್ತು ಅವರ ಹೆಸರಿನಲ್ಲಿ
(ಕೆ.ಎಲ್ ಜಯರಾಮ್)
ಸರ್ಕಾರದ ಅಧೀನ ಕಾರ್ಯುದರ್ಶಿ-2
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ
(ಸೇವಾ ನಿಯಮಗಳು)
ಕರ್ನಾಟಕ ಸರ್ಕಾರ
DO. ಡಿಪಿಐ 2೦ Desoeeg ೨೮6
ವಿಧಾನಸೌಧ, ಬೆಂಗಳೂರು, ದಿನಾಂಕ 23ನೇ ಆಗಸ್ಟ್ 2000.
ಸಂ. ಡಿಸಿಎ 20 ಎಆರ್ಬಿ 96 ಕರ್ನಾಟಕ ಸರ್ಕಾರದ ಸಚಿವಾಲಯ,
ಅಧಿಸೂಚನೆ
ಭಾರತದ ಸಂವಿಧಾನದ 166ನೆಯ ಅನುಚ್ಛೇದದ (2) ಮತ್ತು (3)ನೇ ಖಂಡಗಳಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕದ ರಾಜ್ಯಪಾಲರು ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು, 1977ಕ್ಕೆ ಮತ್ತಷ್ಟು ತಿದ್ದುಪಡಿ ಮಾಡುವುದಕ್ಕಾಗಿ, ಈ ಕೆಳಕಂಡ ನಿಯಮಗಳನ್ನು ರಚಿಸಿದ್ದಾರೆ, ಎಂದರೆ:-
- ಶೀರ್ಷಿಕೆ ಮತ್ತು ಪ್ರಾರಂಭ.- (1) ಈ ನಿಯಮಗಳನ್ನು ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣೆ) (ತಿದ್ದುಪಡಿ) ನಿಯಮಗಳು, 2000 ಎಂದು ಕರೆಯತಕ್ಕದ್ದು.
*(2) ಇವು, ಸರ್ಕಾರಿ ರಾಜ್ಯಪತ್ರದಲ್ಲಿ ಅವುಗಳ ಪ್ರಕಟಣೆಯ ದಿನಾಂಕದಿಂದ ಜಾರಿಗೆ ಬರತಕ್ಕದ್ದು.
- 2ನೇ ನಿಯಮದ ತಿದ್ದುಪಡಿ.- ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು, 1977ರ 2ನೇ ನಿಯಮದಲ್ಲಿ,- (ಇನ್ನು ಮುಂದೆ ಸದರಿ ನಿಯಮಗಳೆಂದು ಉಲ್ಲೇಖಿಸಲಾಗಿದೆ)
(1) (ಇ) ಖಂಡಕ್ಕೆ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು.-
‘‘(ಇ) ಕಾರ್ಯದರ್ಶಿ ಎಂದರೆ, ಸರ್ಕಾರದ ಪ್ರಧಾನ ಕಾರ್ಯದರ್ಶಿ, ಅಥವಾ ಕಾರ್ಯದರ್ಶಿ ಹಾಗೂ 7ನೇ
ನಿಯಮದಲ್ಲಿರುವುದನ್ನು ಹೊರತುಪಡಿಸಿ, ವಿಶೇಷ ಕಾರ್ಯದರ್ಶಿ, ಅಪರ ಕಾರ್ಯದರ್ಶಿ, ಜಂಟಿ
ಕಾರ್ಯದರ್ಶಿ, ಉಪ ಕಾರ್ಯದರ್ಶಿ, ಅಧೀನ ಕಾರ್ಯದರ್ಶಿ ಅಥವಾ ಪದನಿಮಿತ್ತ ಆಧಾರದ ಮೇಲೆ ಈ
ಹುದ್ದೆಗಳನ್ನು ಹೊಂದಿರುವ ಯಾರೇ ಇತರ ಅಧಿಕಾರಿ''.
(2) (ಜಿ) ಖಂಡದಲ್ಲಿ “ರಾಜ್ಯದ ಸಚಿವರು” ಎಂಬ ಪದಗಳ ತರುವಾಯ, “ಅಥವಾ ಉಪಸಚಿವರು” ಎಂಬ ಪದಗಳನ್ನು ಸೇರಿಸತಕ್ಕದ್ದು.
- 6ನೇ ನಿಯಮದ ತಿದ್ದುಪಡಿ.- ಸದರಿ ನಿಯಮಗಳ 6ನೇ ನಿಯಮದಲ್ಲಿ, (2)ನೇ ಉಪ ನಿಯಮದ ತರುವಾಯ ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು ಎಂದರೆ:-
ಪರಂತು, ಹಿಂದೆ ಪ್ರಭಾರದಲ್ಲಿದ್ದ ಸಚಿವರು ಹೊರಡಿಸಿದ ಸ್ಥಾಯೀ ಆದೇಶಗಳು, ಪ್ರಭಾರದಲ್ಲಿರುವ ಈಗಿನ ಸಚಿವರು ಅವುಗಳನ್ನು ಮಾರ್ಪಾಟು ಮಾಡುವವರೆಗೆ ಅಥವಾ ಸ್ಥೀರೀಕರಿಸುವವರೆಗೆ ಜಾರಿಯಲ್ಲಿರುವುದು ಮುಂದುವರಿಯತಕ್ಕದ್ದು.
- 7ನೇ ನಿಯಮದ ತಿದ್ದುಪಡಿ.- ಸದರಿ ನಿಯಮಗಳ 7ನೇ ನಿಯಮದಲ್ಲಿ ವಿವರಣೆಯ ತರುವಾಯ ಈ ಮುಂದಿನ ಪರಂತುಕವನ್ನು ಕೊನೆಯಲ್ಲಿ ಸೇರಿಸತಕ್ಕದ್ದು, ಎಂದರೆ:-
ಮತ್ತೂ ಪರಂತು, ‘‘ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಹಂಚಿಕೆ ಮಾಡಿರುವ ಕಾರ್ಯಕಲಾಪಗಳನ್ನು, ಸರ್ಕಾರದ ಯಾವುದೇ ಸಾಮಾನ್ಯ ಅಥವಾ ವಿಶೇಷ ಆದೇಶಗಳಿಗೆ ಒಳಪಟ್ಟು, ಮುಖ್ಯ ಕಾರ್ಯದರ್ಶಿಯವರು, ಅಪರ ಮುಖ್ಯ ಕಾರ್ಯದರ್ಶಿಯವರು, ಇಲಾಖೆಯ ಕಾರ್ಯದರ್ಶಿಯವರು ವಿಲೆ ಮಾಡತಕ್ಕದ್ದು''.
- 7ಎ ನಿಯಮದ ಪ್ರತಿಯೋಜನೆ.- ಸದರಿ ನಿಯಮಗಳ 7ಎ ನಿಯಮಕ್ಕೆ ಬದಲಾಗಿ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
7(ಎ) ಸರ್ಕಾರವು ನಿರ್ಧರಿಸಬಹುದಾದಷ್ಟು ಸಂಖ್ಯೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿರತಕ್ಕದ್ದು.
- 13ನೇ ನಿಯಮದ ತಿದ್ದುಪಡಿ.- ಸದರಿ ನಿಯಮಗಳ 13ನೇ ನಿಯಮದಲ್ಲಿ,-
(i) (1) ನೇ ನಿಯಮದಲ್ಲಿ “ಸಚಿವ ಸಂಪುಟದ ತಾತ್ಪೂರ್ತಿಕ ಸಮಿತಿಗಳನ್ನು” ಎಂಬ ಪದಗಳಿಗೆ “ಸಚಿವ
ಸಂಪುಟದ ಉಪ ಸಮಿತಿಗಳನ್ನು” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು;
(ii) (2) ನೇ ಉಪ ನಿಯಮದಲ್ಲಿ,
(ಎ) “ತಾತ್ಪೂರ್ತಿಕ ಸಮಿತಿಯು” ಪದಗಳಿಗೆ, ಅವು ಬರುವ ಎರಡು ಸ್ಥಳಗಳಲ್ಲಿ ಅವುಗಳಿಗೆ ಬದಲಾಗಿ
“ಸಚಿವ ಸಂಪುಟ ಉಪ ಸಮಿತಿಯು” ಎಂಬ ಪದಗಳನ್ನು ಸೇರಿಸತಕ್ಕದ್ದು.
(ಬಿ) ಪರಂತುಕದ ಕೊನೆಯಲ್ಲಿ “ಸಚಿವ ಸಂಪುಟವು” ಎಂಬ ಪದಗಳಿಗೆ ಬದಲಾಗಿ “ಸಚಿವ ಸಂಪುಟ ಉಪ
ಸಮಿತಿಯ ಅಧ್ಯಕ್ಷರು” ಎಂಬ ಪದಗಳನ್ನು ಸೇರಿಸತಕ್ಕದ್ದು.
(iii) (3) ನೇ ಉಪ ನಿಯಮದಲ್ಲಿ “ತಾತ್ಪೂರ್ತಿಕ ಸಮಿತಿಯು” ಎಂಬ ಪದಗಳಿಗೆ ಬದಲಾಗಿ “ಸಚಿವ ಸಂಪುಟ
ಉಪ ಸಮಿತಿಯು” ಎಂಬ ಪದಗಳನ್ನು ಸೇರಿಸತಕ್ಕದ್ದು;
(iv) (4) ನೇ ನಿಯಮದಲ್ಲಿ “ತಾತ್ಪೂರ್ತಿಕ ಸಮಿತಿಯು ಎಂಬ” ಪದಗಳಿಗೆ ಬದಲಾಗಿ “ಸಚಿವ ಸಂಪುಟ ಉಪ
ಸಮಿತಿಯು” ಎಂಬ ಪದಗಳನ್ನು ಸೇರಿಸತಕ್ಕದ್ದು;
(v) (4)ನೇ ಉಪ ನಿಯಮದ ತರುವಾಯ, ಮುಂದಿನ ಉಪ ನಿಯಮವನ್ನು ಸೇರಿಸತಕ್ಕದ್ದು, ಎಂದರೆ:-
(5) ‘‘ಹಾಗೆ ರಚಿಸಿದ ಪ್ರತಿಯೊಂದು ಸಚಿವ ಸಂಪುಟ ಉಪ ಸಮಿತಿಗೆ, ವಸ್ತು ವಿಷಯವು ಮುಖ್ಯವಾಗಿ
ಯಾವ ಆಡಳಿತ ಇಲಾಖೆಗೆ ಸಂಬಂಧಿಸಿದೆಯೋ ಆ ಇಲಾಖೆಯು ಸೇವೆಯನ್ನು ಒದಗಿಸತಕ್ಕದ್ದು.''
- 17ನೇ ನಿಯಮದ ತಿದ್ದುಪಡಿ.- ಸದರಿ ನಿಯಮಗಳ 17ನೇ ನಿಯಮದಲ್ಲಿ,-
(1) (1)ನೇ ಉಪ ನಿಯಮದಲ್ಲಿ “ಹಣಕಾಸು ಇಲಾಖೆಯೊಂದಿಗೆ ಸಮಾಲೋಚಿಸದೆಯೇ” ಎಂಬ ಪದಗಳಿಗೆ
ಬದಲಾಗಿ “ಯಾವುದೇ ಇಲಾಖೆಯು, ಕರ್ನಾಟಕ ಸರ್ಕಾರದ (ಹಣಕಾಸು ಸಲಹೆಗಾರರೊಂದಿಗೆ
ಸಮಾಲೋಚನೆ) ನಿಯಮಗಳು, 1982ರ ಅನುಸಾರವಾಗಿ ಹಣಕಾಸು ಇಲಾಖೆಯೊಂದಿಗೆ ಅಥವಾ
ಸಂದರ್ಭಾನುಸಾರ, ಸಂಬಂಧಪಟ್ಟ ಆಂತರಿಕ ಹಣಕಾಸು ಸಲಹೆಗಾರ ಹಾಗೂ ಸರ್ಕಾರದ ಪದನಿಮಿತ್ತ ಉಪ
ಕಾರ್ಯದರ್ಶಿಯೊಂದಿಗೆ ಮೊದಲೇ ಸಮಾಲೋಚಿಸದೆ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.
(2) (2) ನೇ ಉಪ ನಿಯಮದ ತರುವಾಯ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
ಪರಂತು, ಹಣಕಾಸು ಇಲಾಖೆಯು ತನ್ನ ಸಹಮತಿಯನ್ನು ನೀಡದಿದ್ದು, ಆದರೆ ಹಣಕಾಸು ಇಲಾಖೆಯ
ಅಭಿಪ್ರಾಯವನ್ನು ಸಚಿವ ಸಂಪುಟವು ತಳ್ಳಿ ಹಾಕಿರುವಲ್ಲಿ ಮತ್ತು ಯಾವುದೇ ಮಾರ್ಪಾಡಿನೊಂದಿಗೆ ಅಥವಾ
ಮಾರ್ಪಾಡಿಲ್ಲದೇ ಪ್ರಸ್ತಾವಕ್ಕೆ ಸಹಮತಿಸಿರುವಲ್ಲಿ, ಅಂತಹ ಸಹಮತಿಗೆ ಅನುಸಾರವಾಗಿ ಹೊರಡಿಸಿದ
ಯಾವುದೇ ಆದೇಶದಲ್ಲಿ ಈ ಮುಂದಿನದನ್ನು ಸೂಚಿಸಿರತಕ್ಕದ್ದು,-
‘‘ಈ ಆದೇಶವು ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು 1977ರ
17ನೇ ನಿಯಮದ (2)ನೇ ಉಪ ನಿಯಮದ ಪರಂತುಕದ ವ್ಯಾಪ್ತಿಯೊಳಗೆ ಬರುತ್ತದೆ ಮತ್ತು ಅದರಂತೆ
ಹೊರಡಿಸಲಾಗಿದೆ''.
(3) 4ನೇ ಉಪ ನಿಯಮದಲ್ಲಿ “ಹಣಕಾಸು ಇಲಾಖೆಯ ಸಹಮತಿಗೆ” ಎಂಬ ಪದಗಳಿಗೆ ಬದಲಾಗಿ, “ಹಣಕಾಸು
ಇಲಾಖೆಯ ಅಥವಾ ಸಂದರ್ಭಾನುಸಾರ, ಆಂತರಿಕ ಹಣಕಾಸು ಸಲಹೆಗಾರರ ಹಾಗೂ ಸರ್ಕಾರದ
ಪದನಿಮಿತ್ತ ಉಪ ಕಾರ್ಯದರ್ಶಿಯವರ ಸಹಮತಿಯನ್ನು” ಎಂಬ ಪದಗಳನ್ನು ಸೇರಿಸತಕ್ಕದ್ದು.
- 19ನೇ ನಿಯಮದ ತಿದ್ದುಪಡಿ.- ಸದರಿ ನಿಯಮಗಳ 19ನೇ ನಿಯಮದಲ್ಲಿ,-
(1) (1)ನೇ ಉಪ ನಿಯಮದಲ್ಲಿ,-
(ಎ) “ಕಾರ್ಯದರ್ಶಿಯ ಸಹಿಯ” ಎಂಬ ಪದಗಳಿಗೆ ಬದಲಾಗಿ “ಪ್ರಧಾನ ಕಾರ್ಯದರ್ಶಿಯ, ಒಬ್ಬ
ಕಾರ್ಯದರ್ಶಿಯ” ಎಂಬ ಪದಗಳನ್ನು ಸೇರಿಸತಕ್ಕದ್ದು.
(ಬಿ) “ಅಧೀನ ಕಾರ್ಯದರ್ಶಿಯ” ಎಂಬ ಪದಗಳ ತರುವಾಯ “ಅಥವಾ ಪದನಿಮಿತ್ತ ಆಧಾರದ ಮೇಲೆ ಈ
ಹುದ್ದೆಗಳನ್ನು ಹೊಂದಿರುವ ಯಾರೇ ಇತರ ಅಧಿಕಾರಿಯ” ಎಂಬ ಪದಗಳನ್ನು ಸೇರಿಸತಕ್ಕದ್ದು.
- 21ನೇ ನಿಯಮದ ತಿದ್ದುಪಡಿ.- ಸದರಿ ನಿಯಮಗಳ 21ನೇ ನಿಯಮದಲ್ಲಿ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು, ಎಂದರೆ:-
ಪರಂತು, 50 ಕೋಟಿ ಮತ್ತು ಅದಕ್ಕೂ ಹೆಚ್ಚು ಹಣವನ್ನು ಒಳಗೊಂಡ ಬಾಹ್ಯ ನೆರವಿನ ಯೋಜನೆಗೆ ಸಂಬಂಧಿಸಿದ ಪ್ರಸ್ತಾವವನ್ನು ಸಚಿವ ಸಂಪುಟವು ಈಗಾಗಲೇ ಅನುಮೋದಿಸಿರುವಲ್ಲಿ, ಅಂತಹ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ಯಾವುದೇ ಪ್ರಸ್ತಾವವನ್ನು ಸಚಿವ ಸಂಪುಟದ ಮುಂದೆ ಮಂಡಿಸತಕ್ಕದ್ದಲ್ಲ. ಆದರೆ, ಸಚಿವ ಸಂಪುಟ ಪೂರ್ವಾನುಮೋದನೆಯೊಂದಿಗೆ ಯಾವುದೇ ಸಾಮಾನ್ಯ ಅಥವಾ ವಿಶೇಷ ಆದೇಶದ ಮೂಲಕ ರಚಿಸಲಾದಂಥ, ಅಂಥ ಆದೇಶದಲ್ಲಿ ನಿರ್ದಿಷ್ಟಪಡಿಸಬಹುದಾದಂತಹ ವ್ಯಕ್ತಿಗಳನ್ನು ಒಳಗೊಂಡಿರುವ ಮತ್ತು ಅಂಥ ಅಧಿಕಾರಗಳನ್ನು ಮತ್ತು ಪ್ರಕಾರ್ಯಗಳನ್ನು ಹೊಂದಿರುವಂಥ ಅಧಿಕಾರಯುತ ಸಮಿತಿಯ ಮುಂದೆ ಮಂಡಿಸತಕ್ಕದ್ದು.
- 45ಎ ಹೊಸ ಪ್ರಕರಣದ ಸೇರ್ಪಡೆ.- ಸದರಿ ನಿಯಮಗಳ 45ನೇ ನಿಯಮದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
45 (ಎ) 5 ಕೋಟಿ ರೂಪಾಯಿಗಳವರೆಗೆ ಸರ್ಕಾರವು ಖಾತರಿ ನೀಡಿರುವ ಪ್ರತಿಯೊಂದು ಪ್ರಸ್ತಾವವನ್ನು ಹಣಕಾಸು
ಸಚಿವರು ಅನುಮೋದಿಸಬಹುದು''.
- 64ನೇ ನಿಯಮದ ತಿದ್ದುಪಡಿ.- ಸದರಿ ನಿಯಮಗಳ 64ನೇ ನಿಯಮದಲ್ಲಿ, “ಕಾನೂನು ಇಲಾಖೆಯು” ಎಂಬ ಪದಗಳಿಗೆ
ಬದಲಾಗಿ “ಆಡಳಿತ ಇಲಾಖೆಯ ಕಾನೂನು ಕೋಶಗಳು” ಎಂಬ ಪದಗಳನ್ನು ಸೇರಿಸತಕ್ಕದ್ದು.
- 65ಎ ಹೊಸ ನಿಯಮದ ಸೇರ್ಪಡೆ.- ಸದರಿ ನಿಯಮಗಳ 65ನೇ ನಿಯಮದ ತರುವಾಯ, ಈ ಮುಂದಿನ ನಿಯಮವನ್ನು ಸೇರಿಸತಕ್ಕದ್ದು, ಎಂದರೆ,-
65ಎ. ಕೊನೆ ಪಕ್ಷ ತಿಂಗಳಿಗೆ ಒಂದು ಸಲ ಇತ್ಯರ್ಥದಲ್ಲಿರುವ ಸರ್ಕಾರಿ ವ್ಯಾಜ್ಯಗಳನ್ನು ಪರಿಶೀಲಿಸುವುದು
ಕಾನೂನು ಇಲಾಖೆಯ ಕರ್ತವ್ಯವಾಗಿರತಕ್ಕದ್ದು. ಈ ಉದ್ದೇಶಕ್ಕಾಗಿ, ಸರ್ಕಾರದ ಕಾನೂನು ಇಲಾಖೆಯ
ಕಾರ್ಯದರ್ಶಿಗಳು, ಕಾನೂನು ಕೋಶಗಳ ಮುಖ್ಯಸ್ಥರು ಹಾಗೂ ಅಡ್ವೋಕೇಟ್ ಜನರಲ್ ಕಚೇರಿಯ ಕಾನೂನು
ಅಧಿಕಾರಿಗಳೊಡನೆ ತಿಂಗಳ ಸಭೆಗಳನ್ನು ನಡೆಸತಕ್ಕದ್ದು. ಅಂತಹ ಪುನರವಲೋಕನಗಳ ಫಲಿತಾಂಶದ
ವರದಿಯನ್ನು ಸರ್ಕಾರದ ಕಾನೂನು ಇಲಾಖೆಯ ಕಾರ್ಯದರ್ಶಿಯವರು ಮುಖ್ಯ ಕಾರ್ಯದರ್ಶಿಯವರಿಗೆ ಆ
ಇಲಾಖೆ ಈ ಬಗ್ಗೆ ನಿರ್ದಿಷ್ಟಪಡಿಸಿರುವ ನಮೂನೆಯಲ್ಲಿ ಕಳುಹಿಸತಕ್ಕದ್ದು.
- ಮೊದಲನೇ ಅನುಸೂಚಿಯ ತಿದ್ದುಪಡಿ.- ಸದರಿ ನಿಯಮಗಳಿಗೆ ಮೊದಲನೇ ಅನುಸೂಚಿಯಲ್ಲಿ,-
(1) 8ನೇ ಬಾಬಿಗೆ ಬದಲಾಗಿ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
“ಸಿಬ್ಬಂದಿ ಮಂತಾದವರಿಗೆ ಸಂಬಂಧಪಟ್ಟ ವಾಡಿಕೆಯ ಸೂಚನೆಗಳನ್ನು ಮತ್ತು ಪ್ರಸ್ತಾವಗಳನ್ನು
ಹೊರತುಪಡಿಸಿ, ಚುನಾವಣಾ ಆಯೋಗದಿಂದ ಬಂದ, ಮುಖ್ಯ ಕಾಗದ ಪತ್ರಗಳು ಮತ್ತು ಅವುಗಳ ಮೇಲೆ
ಕೈಗೊಳ್ಳಲು ಉದ್ದೇಶಿಸಿರುವ ಕ್ರಮ-“
(2) 9ನೇ ಬಾಬಿಗೆ ಬದಲಾಗಿ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ,-
“9. ಹೊಸ ತೆರಿಗೆಯನ್ನು ವಿಧಿಸುವುದಕ್ಕೆ ಅಥವಾ ಕರನಿರ್ಧರಣೆಯ ವಿಧಾನದಲ್ಲಿ ಅಥವಾ ಹಾಲಿ ಇರುವ ತೆರಿಗೆ ದರದಲ್ಲಿ, ಭೂಕಂದಾಯ ಅಥವಾ ನೀರಿನ ದರಗಳಲ್ಲಿ ಯಾವುದೇ ಬದಲಾವಣೆ ಮಾಡುವುದಕ್ಕೆ, ರಾಜ್ಯದ ಸಾಮಾನ್ಯ ಆದಾಯದ ಭದ್ರತೆಯ ಮೇಲೆ ಸಾಲಗಳನ್ನು ಎತ್ತುವುದಕ್ಕೆ ಅಥವಾ ಹತ್ತು ಕೋಟಿ ರೂ.ಗಳನ್ನು ಮೀರುವ ನಿರ್ದಿಷ್ಟ ಪ್ರಸ್ತಾವದಲ್ಲಿ ಸರ್ಕಾರದಿಂದ ಖಾತರಿ ನೀಡುವುದಕ್ಕೆ ಸಂಬಂಧಿಸಿದ ಪ್ರಸ್ತಾವಗಳು.”
(3) 12ನೇ ಬಾಬಿಗೆ ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ,-
- ಕರ್ನಾಟಕ ಭೂ ಕಂದಾಯ ಅಧಿನಿಯಮ 1964, ಮತ್ತು ಅದರ ಮೇರೆಗೆ ರಚಿಸಿದ ನಿಯಮಗಳು ಅಥವಾ ಯಾವುದೇ ಇತರ ಅಧಿನಿಯಮ ಅಥವಾ ನಿಯಮಗಳು ಅಥವಾ ಸರ್ಕಾರದಿಂದ ಅನುಮೋದಿತವಾದ ಯಾವುದೇ ಸಾಮಾನ್ಯ ಯೋಜನೆಯ ಉಪಬಂಧಗಳಿಗೆ ಅನುಸಾರವಾಗಿ ಇಲ್ಲದಿದ್ದರೆ ಅಥವಾ ಅದರ ಹಣದ ಮೌಲ್ಯವು ಐವತ್ತು ಲಕ್ಷ ರೂಪಾಯಿಗಳನ್ನು ಮೀರುವಂತಿದ್ದರೆ, ಸರ್ಕಾರದ, ಸ್ವತ್ತಿನ ಮಾರಾಟ, ಮಂಜೂರಾತಿ ಅಥವಾ ಗುತ್ತಿಗೆಯ ಮೂಲಕ ತಾತ್ಕಾಲಿಕವಾಗಿ ಅಥವಾ ಖಾಯಂ ಆಗಿ ಹಾಗೆ ಪರಭಾರೆ ಮಾಡುವ ಅಥವಾ ಆದಾಯವನ್ನು ಬಿಟ್ಟುಬಿಡುವ ಅಥವಾ ಕಡಿಮೆ ಮಾಡುವುದನ್ನು ಒಳಗೊಂಡ ಪ್ರಸ್ತಾವಗಳು,
(4) 15ನೇ ಬಾಬಿಗೆ ಬದಲಾಗಿ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ :-
“15. ಐದು ಕೋಟಿ ರೂ.ಗಳನ್ನು ಮೀರಿದ ಕಾಮಗಾರಿ ಅಂದಾಜುಗಳ ಆಡಳಿತಾತ್ಮಕ ಅನುಮೋದನೆ: ಪರಂತು, ಅಂಥ ಅಂದಾಜುಗಳನ್ನು ತದನಂತರ ಪರಿಷ್ಕರಿಸಿದ್ದು, ಪರಿಷ್ಖೃತ ಅಂದಾಜುಗಳು ಮೂಲ ಅಂದಾಜುಗಳಿಗಿಂತ ಶೇಕಡಾ 25ರಷ್ಟು ಅಥವಾ ಮೂರು ಕೋಟಿ ರೂ.ಗಳಷ್ಟು, ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟನ್ನೂ ಮೀರಿದರೆ, ಅದನ್ನು ಮತ್ತೆ ಸಚಿವ ಸಂಪುಟದ ಮುಂದೆ ಮಂಡಿಸತಕ್ಕದ್ದು:
ಪರಂತು, ಮುಖ್ಯ ಮಂತ್ರಿಗಳು, ಪ್ರಕರಣವು ತುರ್ತು ಸ್ವರೂಪದ್ದಾಗಿದ್ದರೆ, ಯಾವ ಪ್ರಕರಣದಲ್ಲಿ ಈ ನಿಯಮದ ಮೂಲಕ ಸಚಿವ ಸಂಪುಟದ ಮುಂದೆ ಮಂಡಿಸಲು ಅನ್ಯಥಾ ಅಗತ್ಯಪಡಿಸಲಾಗಿದೆಯೋ ಆ ಪ್ರಕರಣದ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಲು ಪ್ರಭಾರದಲ್ಲಿರುವ ಸಚಿವರಿಗೆ ಅನುಮತಿ ನೀಡಬಹುದು”.
(5) 16ನೇ ಬಾಬಿನಲ್ಲಿ,-
(i). (ii) ಮತ್ತು (iii) ನೇ ಉಪ ಬಾಬುಗಳಿಗೆ ಬದಲಾಗಿ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ,-
1
((ii) ರಾಜ್ಯ ಸರ್ಕಾರವು ಅಥವಾ ಸಾರ್ವಜನಿಕ ವಲಯ ಉದ್ಯಮವು,
(ಎ) ಹಣಕಾಸು ಇಲಾಖೆಯು ಒಪ್ಪಿಗೆ ನೀಡದಿರುವ; ಅಥವಾ
(ಬಿ) ಈಕ್ವಿಟಿ ಭಾಗವಹಿಸುವಿಕೆಯ ಹಣದ ಮೌಲ್ಯ ಒಂದು ಕೋಟಿ ರೂ.ಗಳನ್ನು ಮೀರುವಂಥ ಅಥವಾ ಅದು ಹೊಸ ಕಂಪನಿ ಅಥವಾ ನಿಗಮದ ಷೇರು ಬಂಡವಾಳದ ಶೇ. 25ರಷ್ಟನ್ನು ಮೀರುವಂಥ,
-ಹೊಸ ಅಥವಾ ಈಗಿರುವ ನಿಗಮಕ್ಕೆ ಅಥವಾ ಕಂಪನಿಗೆ ಷೇರು ಬಂಡವಾಳವನ್ನು ಒದಗಿಸುವ ಮೂಲಕ ಭಾಗವಹಿಸುವುದು.
(iii) ಕರ್ನಾಟಕ ರಾಜ್ಯ ಕೈಗಾರಿಕಾ ಬಂಡವಾಳ ಹೂಡಿಕೆ ಮತ್ತು ಅಭಿವೃದ್ಧಿ ನಿಗಮದಿಂದ ಒಂದು ಕೋಟಿ ರೂ.ಗಳಿಗೆ ಮೀರಿದ ಷೇರು ಬಂಡವಾಳವನ್ನು ಮತ್ತು ಕರ್ನಾಟಕ ರಾಜ್ಯ ಹಣಕಾಸು ನಿಗಮದಿಂದ ಎಪ್ಪತ್ತೈದು ಲಕ್ಷ ರೂ.ಗಳಿಗೆ ಮೀರಿದ ಷೇರು ಬಂಡವಾಳವನ್ನು ಈಗಿರುವ ನಿಗಮಕ್ಕೆ ಅಥವಾ ಕಂಪನಿಗೆ ಒದಗಿಸುವುದು;]
- ಅಧಿಸೂಚನೆ ಸಂ ಡಿಸಿಎ 20 ಎಆರ್ಬಿ 96, ದಿನಾಂಕ 23-8-2000 ಇಎಕ್ಸ್ಕೆಜಿಡಿ 29-8-2000 ರ ಮೂಲಕ ಪ್ರತಿಯೋಜಿಸಲಾಗಿದೆ.
(ii). (v) ಮತ್ತು (vi) ನೇ ಉಪಬಾಬುಗಳಿಗೆ ಬದಲಾಗಿ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
“(v) ರಾಜ್ಯದ ಒಡೆತನದಲ್ಲಿರುವ ಸಾರ್ವಜನಿಕ ನಿಗಮಗಳು, ಕಂಪನಿಗಳು, ಉದ್ಯಮಗಳು ಮತ್ತು
ಯೋಜನೆಗಳ ಬಂಡವಾಳ ಹೂಡಿಕೆಯ ಅಂದಾಜುಗಳಲ್ಲಿ ಹೆಚ್ಚಳವು ಶೇಕಡಾ 50ಕ್ಕಿಂತ ಹೆಚ್ಚಾಗಿದ್ದಲ್ಲಿ ಮತ್ತು
ಅಂಥ ಹೆಚ್ಚಳಕ್ಕಾಗಿ ಭಾಗಶಃ ಅಥವಾ ಪೂರ್ಣವಾಗಿ ಸರ್ಕಾರವು ಹಣ ಒದಗಿಸುವಲ್ಲಿ;
(vi) ರಾಜ್ಯದ ಒಡೆತನದಲ್ಲಿರುವ ಯಾವುದೇ ಸಾರ್ವಜನಿಕ ನಿಗಮ, ಕಂಪನಿ, ಉದ್ಯಮ ಅಥವಾ ಯೋಜನೆಯಿಂದ ಈಗಿರುವ ಯೋಜನೆಗಳನ್ನು ವಿಸ್ತರಿಸುವುದು ಅಥವಾ ಹೊಸ ಯೋಜನೆಗಳನ್ನು ಸ್ಥಾಪಿಸುವುದು ಅಥವಾ ಹೊಸ ಬಗೆಯ ಉತ್ಪಾದನಾ ಮಾರ್ಗಗಳನ್ನು ಕಂಡುಕೊಳ್ಳುವುದು ಅಂಥ ಹೊಸ ಯೋಜನೆಗಳನ್ನು ವಿಸ್ತರಿಸುವುದು ಅಥವಾ ಉತ್ಪಾದನೆಯ ಹೊಸ ಮಾರ್ಗಗಳನ್ನು ಕಂಡುಕೊಳ್ಳುವುದು ಮೂರು ಕೋಟಿ ರೂ.ಗಳಿಗೆ ಕಡಿಮೆಯಿಲ್ಲದ ಯಾವುದೇ ಬಂಡವಾಳ ವೆಚ್ಚವನ್ನು ಒಳಗೊಂಡಿದ್ದಲ್ಲಿ, ಅಥವಾ ಈಗಿರುವ ಯೋಜನೆಗಳ ಅಂಥ ವಿಸ್ತರಣೆಯ ಅಥವಾ ಹೊಸ ಯೋಜನೆಗಳ ಸ್ಥಾಪನೆ ಅಥವಾ ಹೊಸ ಉತ್ಪಾದನೆಗಳ ಮಾರ್ಗಗಳನ್ನು ಕಂಡುಕೊಳ್ಳುವುದರ ಮೇಲಿನ ಬಂಡವಾಳ ವೆಚ್ಚಕ್ಕೆ ರಾಜ್ಯ ಸರ್ಕಾರವು ಭಾಗಶಃ ಅಥವಾ ಪೂರ್ಣವಾಗಿ ಹಣಕಾಸು ನೀಡಿದ್ದಲ್ಲಿ ಅಥವಾ ರಾಜ್ಯ ಸರ್ಕಾರವು ಭಾಗಶಃ ಅಥವಾ ಪೂರ್ಣವಾಗಿ ಹಣಕಾಸು ಖಾತರಿ ನೀಡುವ ಮೂಲಕ ನೆರವು ನೀಡಿದ್ದಲ್ಲಿ ಅಥವಾ ಬಂಡವಾಳ ವೆಚ್ಚವು ಅಂಥ ನಿಗಮ, ಕಂಪನಿ ಅಥವಾ ಉದ್ಯಮ ಅಥವಾ ಯೋಜನೆಯ ಒಟ್ಟು ಬ್ಲಾಕ್ನ ಶೇಕಡಾ 25 ರಷ್ಟನ್ನು ಮೀರಿದ, ಅಂಥ ಪ್ರಸ್ತುತ”. ಮತ್ತು
(6) 20ನೇ ಬಾಬಿನಲ್ಲಿ ಈ ಮುಂದಿನದನ್ನು ಕೊನೆಯಲ್ಲಿ ಸೇರಿಸತಕ್ಕದ್ದು, ಎಂದರೆ:-
“ರಾಜ್ಯದ ವ್ಯವಹಾರಗಳಿಗೆ ಸಂಬಂಧಪಟ್ಟಂತೆ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳ ನೇಮಕಾತಿಯನ್ನು ಮತ್ತು
ಸೇವಾ ಷರತ್ತುಗಳನ್ನು ನಿಯಂತ್ರಿಸುವ ನಿಯಮಗಳನ್ನು ಮಾಡುವ ಅಥವಾ ತಿದ್ದುಪಡಿ ಮಾಡುವ
ಪ್ರಸ್ತಾವಗಳ ಹೊರತು”.
(7) 23ನೇ ಬಾಬಿನಲ್ಲಿ “ಗೆಜೆಟೆಡ್ ದರ್ಜೆಗೆ ಸೇರಿರುವ” ಎಂಬ ಪದಗಳಿಗೆ ಬದಲಾಗಿ “ಸಮೂಹ ಎ ಅಥವಾ
ಸಮೂಹ ಬಿ ಗುಂಪಿನ ಹುದ್ದೆಗಳನ್ನು ಧಾರಣ ಮಾಡಿರುವ” ಎಂಬ ಪದಗಳನ್ನು ಸೇರಿಸತಕ್ಕದ್ದು;
(8) 35ನೇ ಬಾಬಿನ ತರುವಾಯ, ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
“36. ನಗರಾಭಿವೃದ್ಧಿ ಪ್ರಾಧಿಕಾರಗಳು, ಕರ್ನಾಟಕ ಗೃಹ ಮಂಡಲಿ ಮತ್ತು ಅಂಥ ಇತರ ಶಾಸನಬದ್ಧ
ಸಂಸ್ಥೆಗಳು ಒಳಗೊಂಡಂತೆ ಸ್ಥಳೀಯ ಸಂಸ್ಥೆಗಳ ಎಲ್ಲ ಸ್ವಯಂ ಹಣಕಾಸು ನೆರವಿನ ಯೋಜನೆಗಳು.
- 21ನೇ ನಿಯಮದಲ್ಲಿ ಉಲ್ಲೇಖಿಸಲಾದ ಅಧಿಕಾರಯುತ ಸಮಿತಿಯ ತೀರ್ಮಾನಗಳ ಪ್ರತಿಯೊಂದು
ತಃಖ್ತೆಯನ್ನು ಕಡೇ ಪಕ್ಷ 6 ತಿಂಗಳಿಗೆ ಒಮ್ಮೆ ಸಚಿವ ಸಂಪುಟದ ಮುಂದೆ ಮಂಡಿಸತಕ್ಕದ್ದು.”
- ಎರಡನೇ ಅನುಸೂಚಿಯ ತಿದ್ದುಪಡಿ.- ಸದರಿ ನಿಯಮಗಳಿಗೆ ಎರಡನೇ ಅನುಸೂಚಿಯಲ್ಲಿ,-
(i) 12ನೇ ಬಾಬಿನ ನಂತರ ಈ ಮುಂದಿನ ಬಾಬನ್ನು ಸೇರಿಸತಕ್ಕದ್ದು, ಎಂದರೆ,-
“12ಎ ರಾಜ್ಯದ ವ್ಯವಹಾರಗಳ ಸಂಬಂಧದಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳ ನೇಮಕಾತಿ ಮತ್ತು ಸೇವಾ ಷರತ್ತುಗಳನ್ನು ನಿಯಂತ್ರಿಸುವ ನಿಯಮಗಳನ್ನು ಮಾಡುವುದಕ್ಕೆ ಅಥವಾ ತಿದ್ದುಪಡಿ ಮಾಡುವುದಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ಲೋಕಸೇವಾ ಆಯೋಗವು ಮಾಡಿರುವ ಶಿಫಾರಸ್ಸುಗಳಿಗೆ ಅಸಂಗತವಾಗಿರುವ ಪ್ರಸ್ತಾವಗಳು”.
(ii) 20ನೇ ಬಾಬಿನ ತರುವಾಯ, ಈ ಮುಂದಿನದನ್ನು ಸೇರಿಸತಕ್ದಕ್ದು, ಎಂದರೆ:-
“20ಎ. ಐದು ಕೋಟಿ ರೂ.ಗಳು ಅಥವಾ ಮೇಲ್ಪಟ್ಟು, ಆದರೆ ಯಾವುದೇ ಒಂದು ಪ್ರಕರಣದಲ್ಲಿ ಹತ್ತು ಕೋಟಿ ರೂ.ಗಳಿಗೆ ಮೀರದ ಹಣಕ್ಕೆ ಸರ್ಕಾರದ ಖಾತರಿ ನೀಡುವುದಕ್ಕೆ ಸಂಬಂಧಿಸಿದ ಪ್ರಸ್ತಾವಗಳು.”
ಕರ್ನಾಟಕ ರಾಜ್ಯಪಾಲರು
Annexure
ಮತ್ತು ಅವರ ಹೆಸರಿನಲ್ಲಿ
(ಕೆ.ಎಲ್ ಜಯರಾಮ್)
ಸರ್ಕಾರದ ಅಧೀನ ಕಾರ್ಯುದರ್ಶಿ-2
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆ, (ಸೇವಾ ನಿಯಮಗಳು)
ಕರ್ನಾಟಕ ಸರ್ಕಾರ
DO. ಡಿಪಿಎ 1೦ ಎಆರ್ 2೦೦1
ಕರ್ನಾಟಕ ಸರ್ಕಾರದ ಸಚಿವಾಲಯ,
ಸಂ. ಡಿಸಿಎ 10 ಎಆರ್ಬಿ 2001 ಕರ್ನಾಟಕ ಸರ್ಕಾರದ ಸಚಿವಾಲಯ, ವಿಧಾನಸೌಧ,
ಬೆಂಗಳೂರು, ದಿನಾಂಕ 28-2-2002.
ಅಧಿಸೂಚನೆ
ಭಾರತ ಸಂವಿಧಾನದ 166ನೇ ಅನುಚ್ಛೇದದ (2) ಮತ್ತು (3)ನೇ ಖಂಡಗಳಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ರಾಜ್ಯಪಾಲರು ಈ ಮೂಲಕ ಕರ್ನಾಟಕ ಸರ್ಕಾರಿ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು, 1977ನ್ನು ಮತ್ತಷ್ಟು ತಿದ್ದುಪಡಿ ಮಾಡಲು ಈ ಮುಂದಿನ ನಿಯಮಗಳನ್ನು ರಚಿಸಿದ್ದಾರೆ, ಎಂದರೆ:-
- ಹೆಸರು ಮತ್ತು ಪ್ರಾರಂಭ.- (1) ಈ ನಿಯಮಗಳನ್ನು ಕರ್ನಾಟಕ ಸರ್ಕಾರಿ (ಕಾರ್ಯಕಲಾಪಗಳ ನಿರ್ವಹಣೆ) (ತಿದ್ದುಪಡಿ) ನಿಯಮಗಳು, 2001 ಎಂದು ಕರೆಯತಕ್ಕದ್ದು.
(2) ಇವುಗಳು ಅಕ್ಟೋಬರ್ 15ನೇ ದಿನ, 2001ರಿಂದ ಪರಿಣಾಮಕಾರಿಯಾಗಿ ಜಾರಿಗೆ ಬಂದಿವೆಯೆಂದು ಭಾವಿಸತಕ್ಕದ್ದು.
- ನಿಯಮ 19ರ ತಿದ್ದುಪಡಿ.- ಕರ್ನಾಟಕ ಸರ್ಕಾರಿ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು, 1977ರ 19ನೇ ನಿಯಮದ (1)ನೇ ಉಪನಿಯಮದಲ್ಲಿ, “ಅಧೀನ ಕಾರ್ಯದರ್ಶಿಯ” ಎಂಬ ಪದಗಳ ತರುವಾಯ “ಡೆಸ್ಕ್ ಆಫೀಸರನ” ಎಂಬ ಪದಗಳನ್ನು ಸೇರಿಸತಕ್ಕದ್ದು.
ಕರ್ನಾಟಕ ರಾಜ್ಯಪಾಲರು
Annexure
ಮತ್ತು ಅವರ ಹೆಸರಿನಲ್ಲಿ
(ಕೆ.ಎಲ್ ಜಯರಾಮ್)
ಸರ್ಕಾರದ ಅಧೀನ ಕಾರ್ಯುದರ್ಶಿ-2
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ,
(ಸೇವಾ ನಿಯಮಗಳು)
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ
ಅಧಿಸೂಚನೆ
ಸಂಖ್ಯೆ ಡಿಸಿಎ 7 ಎಆರ್ಬಿ 2002, ಬೆಂಗಳೂರು ದಿನಾಂಕ 7ನೇ ಸೆಪ್ಟೆಂಬರ್ 2002.
ಭಾರತ ಸಂವಿಧಾನದ 166ನೇ ಅನುಚ್ಛೇದದ (2) ಮತ್ತು (3)ನೇ ಖಂಡಗಳ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ರಾಜ್ಯಪಾಲರು, ಈ ಮೂಲಕ ಕರ್ನಾಟಕ ಸರ್ಕಾರದ (ಕಾರ್ಯ ಕಲಾಪಗಳ ನಿರ್ವಹಣೆ) ನಿಯಮಗಳು, 1977 ಇದಕ್ಕೆ ಮತ್ತಷ್ಟು ತಿದ್ದುಪಡಿ ಮಾಡುವುದಕ್ಕಾಗಿ ಈ ಕೆಳಕಂಡ ನಿಯಮಗಳನ್ನು ರಚಿಸುತ್ತಾರೆ, ಎಂದರೆ:-
- ಶೀರ್ಷಿಕೆ ಮತ್ತು ಪ್ರಾರಂಭ.- (1) ಈ ನಿಯಮಗಳನ್ನು ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣಾ) (ತಿದ್ದುಪಡಿ) ನಿಯಮಗಳು, 2002 ಎಂದು ಕರೆಯತಕ್ಕದ್ದು.
(2) ಇವು, ಸರ್ಕಾರಿ ರಾಜ್ಯಪತ್ರದಲ್ಲಿ ಅವುಗಳ ಪ್ರಕಟಣೆಯಾದ ದಿನಾಂಕದಂದು ಜಾರಿಗೆ ಬರತಕ್ಕದ್ದು.
- ಒಂದನೆಯ ಅನುಸೂಚಿಯ ತಿದ್ದುಪಡಿ:- ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು, 1977ರ “ಒಂದನೆಯ ಅನುಸೂಚಿ”ಯಲ್ಲಿ 23ನೇ ಬಾಬಿನ ಪ್ರಾರಂಭದಲ್ಲಿ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
“ಅನಧಿಕೃತ ಗೈರುಹಾಜರಿಯ ಆರೋಪವು ರುಜುವಾತಾದುದಕ್ಕಾಗಿ ಕರ್ನಾಟಕ ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು, 1957ರ ಪ್ರಕಾರ, ವಜಾ ಮಾಡುವ ಅಥವಾ ತೆಗೆದುಹಾಕುವ ಅಥವಾ ಕಡ್ಡಾಯವಾಗಿ ನಿವೃತ್ತಿಗೊಳಿಸುವ ದಂಡನೆಗಳನ್ನು ವಿಧಿಸುವ ಪ್ರಸ್ತಾವಗಳನ್ನು ಹೊರತುಪಡಿಸಿ.”
ಕರ್ನಾಟಕದ ರಾಜ್ಯಪಾಲರು
Annexure
ಮತ್ತು ಅವರ ಹೆಸರಿನಲ್ಲಿ
(ಕೆ. ಎಲ್. ಜಯರಾಮ್)
ಸರ್ಕಾರದ ಅಧೀನ ಕಾರ್ಯುದರ್ಶಿ- 2
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ
(ಸೇವಾ ನಿಯಮಗಳು)
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ
ಅಧಿಸೂಚನೆ
ಸಂಖ್ಯೆ ಡಿಸಿಎ 7 ಎಆರ್ಬಿ 2003, ಬೆಂಗಳೂರು ದಿನಾಂಕ 31ನೆಯ ಆಗಸ್ಟ್ 2004
ಭಾರತ ಸಂವಿಧಾನದ 166ನೇ ಅನುಚ್ಛೇದದ (2) ಮತ್ತು (3)ನೇ ಖಂಡಗಳ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ರಾಜ್ಯಪಾಲರು, ಈ ಮೂಲಕ ಕರ್ನಾಟಕ ಸರ್ಕಾರದ (ಕಾರ್ಯ ಕಲಾಪಗಳ ನಿರ್ವಹಣೆ) ನಿಯಮಗಳು, 1977 ಇದಕ್ಕೆ ಮತ್ತಷ್ಟು ತಿದ್ದುಪಡಿ ಮಾಡುವುದಕ್ಕಾಗಿ ಈ ಕೆಳಕಂಡ ನಿಯಮಗಳನ್ನು ರಚಿಸುತ್ತಾರೆ, ಎಂದರೆ:-
- ಶೀರ್ಷಿಕೆ ಮತ್ತು ಪ್ರಾರಂಭ.- (1) ಈ ನಿಯಮಗಳನ್ನು ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣಾ) (ತಿದ್ದುಪಡಿ) ನಿಯಮಗಳು, 2004 ಎಂದು ಕರೆಯತಕ್ಕದ್ದು.
(2) ಇವು, ಸರ್ಕಾರಿ ರಾಜ್ಯಪತ್ರದಲ್ಲಿ ಅವುಗಳ ಪ್ರಕಟಣೆಯಾದ ದಿನಾಂಕದಂದು ಜಾರಿಗೆ ಬರತಕ್ಕದ್ದು.
- ಒಂದನೆಯ ಅನುಸೂಚಿಯ ತಿದ್ದುಪಡಿ:- ಒಂದನೆಯ ಅನುಸೂಚಿಯಲ್ಲಿ ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು, 1977ರ 35ನೆಯ ಸಂಖ್ಯೆಯ ಬಾಬಿಗೆ ಬದಲಾಗಿ ಈ ಮುಂದಿನ ಬಾಬನ್ನು ಸೇರಿಸತಕ್ಕದ್ದು, ಎಂದರೆ:-
“35. ಸದರಿ ಉಪ ಪ್ರಕರಣದ ಪರಂತುಕದ ಮೇರೆಗೆ ಜಿಲ್ಲಾಧಿಕಾರಿಯು ರಾಜ್ಯ ಸರ್ಕಾರದ ಅಧಿಕಾರಗಳನ್ನು ಚಲಾಯಿಸಬಹುದಾದ ಪ್ರಕರಣಗಳನ್ನು ಹೊರತುಪಡಿಸಿ ಕರ್ನಾಟಕ ಭೂ ಸುಧಾರಣಾ ಅಧಿನಿಯಮ, 1961ರ 109ನೇ ಪ್ರಕರಣದ (1ಎ) ಪ್ರಕರಣದ ಮೇರೆಗೆ ವಿನಾಯಿತಿ ಮಂಜೂರು ಮಾಡುವ ಎಲ್ಲಾ ಪ್ರಸ್ತಾವಗಳು”.
ಕರ್ನಾಟಕದ ರಾಜ್ಯಪಾಲರು
Annexure
ಮತ್ತು ಅವರ ಹೆಸರಿನಲ್ಲಿ
(ಕೆ. ರಘುರಾಮ್ ಭಂಡಾರಿ)
ಸರ್ಕಾರದ ಅಧೀನ ಕಾರ್ಯುದರ್ಶಿ- 2
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ
(ಸೇವಾನಿಯಮಗಳು)
KARNATAKA GOVERNMENT
No: DCA 6 ARB 2006
Karnataka Government Secretariat
Vidhana Soudha, Bangalore
Dated: 29th August 2006
Notification
In exercise of the powers conferred by clause (2) and (3) of Article 166 of the Constitution of India, the Governor of Karnataka, hereby make the following rules further to amend the Karnataka Government (Transaction of Business) Rules, 1977, namely:-
- Title and Commencement:- (1) These rules may be called the Karnataka Government (Transaction of Business) (Amendment) Rules, 2006.
(2) They shall be deemed to have come into force with effect from the 16th day of January, 2004.
- Amendment of Rule 72A:- In the Karnataka Government (Transaction of Business) Rules, 1977, in "Part III Department Disposal of Business" under the heading “E. Stores Purchase", rule 72A shall be omitted. O
Annexure
K.V.RAMA
Under Secretary to Government
Department of Personnel and Administrative Reforms
(Service Rules-2)
No. DCA 3 ARB 2006
GOVERNMENT OF KARNATAKA
Karnataka Government Secretariat, Vidhana Soudha, Bangalore. Dated. 5th September 2006
NOTIFICATION
In exercise of the powers conferred by clauses (2) and (3) of article 166 of the Constitution of India, the Governor of Karnataka hereby makes the following rules further to amend the Karnataka Government (Transaction of Business) Rules, 1977, namely :-
- Title and commencement: - (1) These rules may he called the Karnataka Government (Transaction of Business) (Amendment) Rules, 2006.
(2) They shall come into force on the date of their publication in the Official Gazette.
- Amendment of Part III,- In the Karnataka Government ( Transaction of Business) Rules, 1977 there matter referred to as the said rules in the Part III, under the heading“Department disposal of Business",-
(a) for the sub-heading "DD. Department of Law", the words, "DD. Department of Law, Justice and Human Rights" shall be deemed to have been substituted with effect from 14th October, 2005.
(b) in rules 62, 63, 64 and 65 for the words, "Department of Law"wherever they occur, the words "Department of Law, Justice and Human Rights" shall be deemed to have been substituted with effect from 14th October, 2005.
(c) for the sub-heading “Karnataka State Bureau of Public Enterprises" the words “Department of Public Enterprises" shall be deemed to have been substituted with effect from 28th March 2005.
(d) in rule 72B, for the words “Karnataka State Bureau of Public Enterprises" the words “Department of Public Enterprises" shall be deemed to have been substituted with effect from 28th March, 2005.
- Amendment of First Schedule,- In the first schedule to the said rules, for the words “Department of Law", the words, "Department of Law, Justice and Human Rights" shall be deemed to have been substituted with effect from 14th October, 2005
GOVERNOR OF KARNATAKA
Annexure
(K.V.RAMA) Under Secretary to Government Department of Personnel and Administrative Reforms (Service Rules)
GOVERNMENT OF KARNATAKA
No. DCA 11 ARB 2010
Karnataka Government Secretariat. Vidhana Soudha. Bangalore, dated: 23.6.2011.
NOTIFICATION
In exercise of the powers conferred by clauses (2) and (3) of Article 166 of the Constitution of India, the Governor of Karnataka hereby makes the following rules further to amend the Karnataka Government (Transaction of Business) Rules, 1977, namely :-
- Title and Commencement:- (1) These rules may be called the Karnataka Government (Transaction of Business) (Amendment) Rules, 2011
(2) They shall come into force from the date of their publication in the Official Gazette.
2, Amendment of rule 60:- In rule of the Karnataka Government (Transaction of Business) Rules. 1977, for sub-rule (1), the following shall be substituted, namely:- ia
"(1) When a Bill has been passed by both the Houses of Legislature, it shall be examined in the Department of Parliamentary Affairs and Legislation and shall be forwarded to the Governor with a report of the Secretary. Department of Parliamentary Affairs and Legislation as to the reasons, if any, why the Governor may declare his assent to the bill or why the Governor shall reserve the Bill for the consideration of the President of India."
GOVERNOR OF KARNATAKA
Annexure
(P. MARKANDEYA) Under Secretary to Government. Department of Personnel and Administrative Reforms (Service Rules-2).
ಕರ್ನಾಟಕ ಸರ್ಕಾರ
ಸಂ: 6ಎ ೦1 ಎಆರ್ಇಜ 2೦13
ಕರ್ನಾಟಕ ಸರ್ಕಾರ ಸಚಿವಾಲಯ,
ಸಂ: ಡಿಸಿಎ 01 ಎಆರ್ಬಿ 2013 ಕರ್ನಾಟಕ ಸರ್ಕಾರ ಸಚಿವಾಲಯ,
ವಿಧಾನಸೌಧ, ಬೆಂಗಳೂರು
ದಿನಾಂಕ: 24.07.2013
ಅಧಿಸೂಚನೆ
ಭಾರತ ಸಂವಿಧಾನದ 166 ನೇ ಅನುಚ್ಛೇದದ (2) ಮತ್ತು (3)ನೇ ಖಂಡಗಳಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ರಾಜ್ಯಪಾಲರು ಈ ಮೂಲಕ ಕರ್ನಾಟಕ ಸರ್ಕಾರ ( ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು, 1977 ನ್ನು ಮತ್ತಷ್ಟು ತಿದ್ದುಪಡಿ ಮಾಡಲು ಈ ಮುಂದಿನ ನಿಯಮಗಳನ್ನು ರಚಿಸಿದ್ದಾರೆ, ಎಂದರೆ :-
- ಹೆಸರು ಮತ್ತು ಪ್ರಾರಂಭ :- (1) ಈ ನಿಯಮಗಳನ್ನು ಕರ್ನಾಟಕ ಸರ್ಕಾರ (ಕಾರ್ಯಕಲಾಪಗಳ ನಿರ್ವಹಣೆ) (ತಿದ್ದುಪಡಿ) ನಿಯಮಗಳು, 2013 ಎಂದು ಕರೆಯತಕ್ಕದ್ದು.
(2) ಇವು, ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಣೆಯಾದ ದಿನಾಂಕದಂದು ಜಾರಿಗೆ ಬರತಕ್ಕದ್ದು.
- ಎರಡನೇ ಅನುಸೂಚಿಯ ತಿದ್ದುಪಡಿ :- ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು, 1977ರ ಎರಡನೇ ಅನುಸೂಚಿಯ 11 (ಇ) ಮತ್ತು ಅದರ ನಮೂದುಗಳ ಬದಲಾಗಿ ಈ ಕೆಳಕಂಡದ್ದನ್ನು ಪ್ರತಿಸ್ಥಾಪಿಸತಕ್ಕದ್ದು.
“11(ಇ). ಡೈರೆಕ್ಟರ್ ಜನರಲ್ ಮತ್ತು ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್, ಡೈರೆಕ್ಟರ್
ಜನರಲ್ ಆಫ್ ಪೊಲೀಸ್, ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್, ಇನ್ಸ್ಪೆಕ್ಟರ್ ಜನರಲ್
ಆಫ್ ಪೊಲೀಸ್ ಮತ್ತು ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್”
Annexure
ಮತ್ತು ಅವರ ಹೆಸರಿನಲ್ಲಿ
(ಡಾ.ಮಂಗಳ ಜಿ.ಎಸ್)
ಸರ್ಕಾರದ ಅಧೀನ ಕಾರ್ಯದರ್ಶಿ,
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ
(ಸೇವಾ ನಿಯಮಗಳು-1)
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು
ಅವರ ಹೆಸರಿನಲ್ಲಿ,
(ಸಹಿ)
ಸಹಿ ಮಾಡಲು ಅಧಿಕಾರ ಪಡೆದಿರುವ ಅಧಿಕಾರಿಯ
ಹೆಸರು ಮತ್ತು ಪದನಾಮ.
3 (2) ಕರ್ನಾಟಕ ಸಿವಿಲ್ ಸೇವಾ ನಿಯಮಗಳಿಗೆ, [ಸಾದಿಲ್ವಾರು ವೆಚ್ಚ ಕೈಪಿಡಿಗೆ, ಕರ್ನಾಟಕ ಆರ್ಥಿಕ ಸಂಹಿತೆಗೆ ಮತ್ತು ಕರ್ನಾಟಕ ಖಜಾನೆ ಸಂಹಿತೆ] ಗೆ ಮಾಡಬೇಕಾದ ವಾಡಿಕೆಯ ಸ್ವರೂಪದ ಮತ್ತು ಯಾವುದೇ ನೀತಿಯ ಪ್ರಶ್ನೆಯನ್ನು ಅಥವಾ ಭಾರಿ ಪ್ರಮಾಣದ ಹಣಕಾಸು ಬದ್ಧತೆಗಳನ್ನು ಒಳಗೊಂಡಿರದ ತಿದ್ದುಪಡಿಗಳನ್ನು ಹಣಕಾಸು ಇಲಾಖೆಯ ಪ್ರಭಾರ ಹೊಂದಿರುವ ಸಚಿವರ ಮತ್ತು ಮುಖ್ಯಮಂತ್ರಿಯವರ ಪೂರ್ವ ಅನುಮೋದನೆ ಪಡೆದುಕೊಂಡು ಹಣಕಾಸು ಇಲಾಖೆಯ ಕಾರ್ಯದರ್ಶಿಯವರು ಮಾಡಬಹುದು.
- ಅಧಿಸೂಚನೆ ಸಂ; ಡಿಸಿಎ 20 ಎಆರ್ಬಿ 96, ದಿನಾಂಕ: 23.8.2000 ಕೆಜಿಡಿ 29.8.2000 ದ ಮೂಲಕ ಪ್ರತಿಯೋಜಿಸಲಾಗಿದೆ.
- ಅಧಿಸೂಚನೆ ಸಂ; ಡಿಸಿಎ 10 ಎಆರ್ಬಿ 2001, ದಿನಾಂಕ: 28.2.2002, 15.10.2001ರಿಂದ ಪರಿಣಾಮಕಾರಿಯಾಗುವಂತೆ ಸೇರಿಸಲಾಗಿದೆ.
- ಅಧಿಸೂಚನೆ ಸಂ: ಡಿಸಿಎ 1 ಎಆರ್ಬಿ 87, ದಿನಾಂಕ; 7.12.87 ರ ಮೂಲಕ ಸೇರಿಸಲಾಗಿದೆ.
- ಅಧಿ ಸೂಚನೆ ಸಂ: ಡಿಸಿಎ 20 ಎಆರ್ಬಿ 96, ದಿನಾಂಕ: 23.8.2000 ಕೆಜಿಡಿ 29.8.2000 ಮೂಲಕ ಸೇರಿಸಲಾಗಿದೆ. ಭಾಗ -II ಸಚಿವ ಸಂಪುಟದ ಕಾರ್ಯ ವಿಧಾನ
- (1) (ಎ) ಈ ನಿಯಮಗಳ ಮೊದಲನೇ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವ ಪ್ರಕರಣಗಳನ್ನು ಇಲಾಖೆಯ ಕರ್ನಾಟಕದ ರಾಜ್ಯಪಾಲರ ಆದೇಶಾನುಸಾರ
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಕರ್ನಾಟಕದ ರಾಜ್ಯಪಾಲರ ಆದೇಶಾನುಸಾರ
ಕರ್ನಾಟಕದ ರಾಜ್ಯಪಾಲರ ಆದೇಶಾನುಸಾರ
ಕರ್ನಾಟಕದ ರಾಜ್ಯಪಾಲರ ಆದೇಶಾನುಸಾರ
ಕರ್ನಾಟಕದ ರಾಜ್ಯಪಾಲರ ಆದೇಶಾನುಸಾರ
ಕರ್ನಾಟಕದ ರಾಜ್ಯಪಾಲರ ಆದೇಶಾನುಸಾರ
ಕರ್ನಾಟಕದ ರಾಜ್ಯಪಾಲರ ಆದೇಶಾನುಸಾರ
ಕರ್ನಾಟಕದ ರಾಜ್ಯಪಾಲರ ಆದೇಶಾನುಸಾರ
ಕರ್ನಾಟಕದ ರಾಜ್ಯಪಾಲರ ಆದೇಶಾನುಸಾರ
ಕರ್ನಾಟಕದ ರಾಜ್ಯಪಾಲರ ಆದೇಶಾನುಸಾರ
ಕರ್ನಾಟಕದ ರಾಜ್ಯಪಾಲರ ಆದೇಶಾನುಸಾರ
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಕರ್ನಾಟಕದ ರಾಜ್ಯಪಾಲರ ಆದೇಶಾನುಸಾರ
ಕರ್ನಾಟಕದ ರಾಜ್ಯಪಾಲರ ಆದೇಶಾನುಸಾರ
By Order and in the name of the Governor of Karnataka
By order and in the name of the Governor of Karnataka
By Order and in the name of the Governor of Karnataka.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ