ಎ) ‘ಅಧಿವಿಯಮ”ಎಂದರೆ ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ 2018 (2018 ಕರ್ನಾಟಕ ಅಧಿನಿಯಮ ಸಂಖ್ಯೆ 12); ಬಿ) *ಪ್ರಕರಣ”ಎಂ೦ದರೆ ಈ ಅಧಿನಿಯಮದ ಪ್ರಕರಣ;
(ಸಿ) *ಪ್ರಪತ್ರ”ಎಂದರೆ ಈ ನಿಯಮಗಳಿಗೆ ಲಗತ್ತಿಸಲಾದ ಪ್ರಪತ್ರ. ಮತ್ತು
(ಡಿ) "ಸರ್ಕಾರ " ಎಂದರೆ ಕರ್ನಾಟಕ ರಾಜ್ಯ ಸರ್ಕಾರ;
3.ಸರ್ಕಾರೇತರ ಸದಸ್ಯರುಗಳಿಗೆ ಪ್ರಯಾಣ ಭತ್ಯೆ: ನಾಮನಿರ್ದೇಶಿತರಾದ ಸರ್ಕಾರೇತರ ಸದಸ್ಯರು ಪ್ರಯಾಣಭತ್ಯೆ ಮತ್ತು ಉಪಸ್ಥಿತಿ ಭತ್ಯೆಗಳನ್ನು ಕರ್ನಾಟಕ ಸಿವಿಲ್ಲೇ ವಾನಿಯಮಾವಳಿಗಳ ಅನುಬಂಧ “od” ರನ್ವಯ ಸರ್ಕಾರವು ಕಾಲಕಾಲಕ್ಕೆ ನಿಗದಿಪಡಿಸುವ ದರಗಳನ್ಹಯ ಪಡೆಯಲು ಅರ್ಹರಾಗಿರತಕ್ಕದ್ದು.
4.ಕರಾರುಗಳನ್ನು ಮಾಡಿಕೊಳ್ಳುವುದು: ಪ್ರಾಧಿಕಾರದ ಪರವಾಗಿ ಅಥವಾ ಪ್ರಾಧಿಕಾರದ ಹೆಸರಿನಲ್ಲಿ . ಕಾಮಗಾರಿಗಳನ್ನು ನಿರ್ವಹಿಸುವುದು. ಅಥವಾ ಸಾಮಗ್ರಿಗಳನ್ನು, ಸರಕುಗಳನ್ನು ಸರಬರಾಜು ಮಾಡುವ ಅಥವಾ ಸೇವೆಯನ್ನು ಸಲ್ಲಿಸುವ ಸಲುವಾಗಿ ಸರ್ಕಾರವು ಕಾಲಕಾಲಕ್ಕೆ ರಚಿಸಿದ ಯಾವುದೇ ನಿಯಮಗಳು ಮತ್ತು ನಮೂನೆಗಳು ಇದ್ದರೆ, ಸಾಧ್ಯವಾದಷ್ಟು ಮಟಲ್ಟೆಗೆ ಅಧಿನಿಯಮ ಮತ್ತು ಈ ನಿಯಮಗಳ ಉಪಬಂಧಗಳಿಗೆ ಅಸಂಗತವಾಗದಿರುವಷ್ಟರ ಮಟ್ಟೆಗೆ ಅವುಗಳನ್ನು ಅನುಸರಿಸತಕ್ಕದ್ದು. ಮತ್ತು ಪ್ರಾಧಿಕಾರದ ಮುಂದಿನ ಸಭೆಯಲ್ಲಿ ಆಯುಕ್ತರು ಅದನ್ನು ಸಭೆಯ ಮುಂದೆ ಮಂಡಿಸತಕ್ಕದ್ದ. ಪ್ರಾಧಿಕಾರದ ಆಯುಕ್ತರ ಅಂಥ ನಡವಳಿಗಳಲ್ಲಿ ಯಾವುದೇ ಮಾರ್ಪಾಡು ಮಾಡಲು ಅಥವಾ ರದ್ದುಪಡಿಸಲು ಪ್ರಾಧಿಕಾರವು ತೀರ್ಮಾನಿಸಿದರೆ, ಆಯುಕ್ತರ ನಡವಳಿಗಳನ್ನು ಪ್ರಾಧಿಕಾರವು ಮಾರ್ಪಾಡು ಮಾಡಲು ಅಥವಾ ರದ್ದುಗೊಳಿಸಲು ತೀರ್ಮಾನಿಸಿದ ದಿನಾಂಕದಿಂದ ನಡವಳಿಗಳು ಹಾಗೆ. ಮಾರ್ಪಾಡಾದ ರೂಪದಲ್ಲಿ ಮಾತ್ರ ಪರಿಣಾಮಕಾರಿಯಾಗಿರತಕ್ಕದ್ದು ಅಥವಾ ಸಂದರ್ಭಾನುಸಾರ ಪರಿಣಾಮಕಾರಿಯಾಗಿರತಕ್ಕದ್ದಲ್ಲ.
5, ಪ್ರಾಧಿಕಾರವು ನಿಧಿಗಳನ್ನು ಪಡೆದುಕೊಳ್ಳುವುದಕ್ಕಾಗಿ ಷರತ್ತುಗಳು: ರಾಜ್ಯ ಸರ್ಕಾರವು 8ನೇ ಪ್ರಕರಣ (2)ನೇ ಉಪಪ್ರಕರಣ (ಬಿ) ಖಂಡದ ಮೇರೆಗೆ ಪ್ರಾಧಿಕಾರವು. ವಿಧಿಗಳನ್ನು ಪಡೆಯುವುದಕ್ಕಾಗಿ. ಮಂಜೂರಾತಿ. ನೀಡುವ ಸಮಯದಲ್ಲಿ ಪ್ರಾಧಿಕಾರ ಮತ್ತು ಸರ್ಕಾರದ ನಡುವೆ ಪರಸ್ಪರ ಒಪ್ಬಿಕೊಳ್ಳಬಹುದಾದಂತಹ ಷರತ್ತುಗಳನ್ನು ವಿಧಿಸಬಹುದು. 6. ಪ್ರಾಧಿಕಾರದ ನೌಕರರು:(1) ಪ್ರಾಧಿಕಾರದ ಆಯುಕ್ತರು ಮತ್ತು ಇತರ ನೌಕರರ ಅರ್ಹತೆಗಳು, ನೇಮಕ ವಿಧಾನ ಮತ್ತು ಸೇವಾಷರತ್ತುಗಳು ಕರ್ನಾಟಕ ಸರ್ಕಾರಿ ನೌಕರರಿಗೆ ಸಮಾನವಾಗಿರತಕ್ಕದ್ದು. (2) ಪ್ರಾಧಿಕಾರವು ಸೃಜಿಸುವ ಪ್ರತಿಯೊಂದು ಹುದ್ದೆಯು, ಸರ್ಕಾರದ ಅಧೀನದಲ್ಲಿರುವ ಹುದ್ದೆಗೆ. ಸಮಾನವಾಗಿರತಕ್ಕದ್ದು. ಪ್ರಾಧಿಕಾರವು ಪ್ರತಿಯೊಂದು ಹುದ್ದೆಯನ್ನು ಸರ್ಕಾರದ ಅನುಮೋದನೆ ಪಡೆದು ಸೃಜಿಸತಕ್ಕದ್ದು.
(3) ಪ್ರಾಧಿಕಾರದಲ್ಲಿರುವ ಪ್ರತಿಯೊಂದು ಹುದ್ದೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಕರ್ನಾಟಕ ಸರ್ಕಾರ ಅಥವಾ ಕೇಂದ್ರ ಸರ್ಕಾರ ಅಥವಾ ಭಾರತದ ಇತರ ಯಾವುದೇ ರಾಜ್ಯ ಸರ್ಕಾರದ ನೌಕರರನ್ನು ಅಥವಾ ಭಾರತದ ವ್ಯಾಪ್ತಿಯಲ್ಲಿ ಬರುವಂತಹ ಯಾವುದೇ ಸ್ವಾಯತ್ತ ಸಂಸ್ಥೆಯ ನೌಕರರನ್ನು ಪ್ರತಿ ನಿಯೋಜಿಸುವ ಮೂಲಕ ಭರ್ತಿ ಮಾಡತಕ್ಕದ್ದು.
(4) ಪ್ರಾಧಿಕಾರದ . ನೌಕರರಿಗೆ ಅನ್ವಯವಾಗುವ ವೇತನ ಶ್ರೇಣಿಗಳು, ಕರ್ನಾಟಕ ಸರ್ಕಾರದಲ್ಲಿರುವ ಸಮಾನ ಹುದ್ದೆಗಳಿಗೆ ಅನ್ವಯವಾಗುವ ವೇತನ ಶ್ರೇಣಿಗಳಾಗಿರತಕ್ಕದ್ದು.
(5) ಪ್ರಾಧಿಕಾರದ ನೌಕರರು, ಈ ವಿಯಮಗಳಿಗೆ ಅಸಂಗತವಾಗಿರದಷ್ಟರ ಮಟ್ಟಿಗೆ, ಕರ್ನಾಟಕ ಸಿವಿಲ್ ಸೇವಾನಿಯಮಗಳಿಗೆ ಒಳಪಡತಕ್ಕದ್ದು; ಮತ್ತು
(6) ಪ್ರಾಧಿಕಾರದ ನೌಕರರು, ಕರ್ನಾಟಕ ಸಿವಿಲ್ ಸೇವಾ (ನಡತೆ) ನಿಯಮಗಳು 2021 ರ ಮತ್ತು ಪ್ರಾಧಿಕಾರವು ಕಾಲಕಾಲಕ್ಕೆ ಅಧಿಸೂಚಿಸಬಹುದಾದಂತಹ ರಾಜ್ಯ ಸರ್ಕಾರಿ ನೌಕರರಿಗೆ ಅನ್ವಯವಾಗತಕ್ಕ ಇತರ ಸೇವಾ ನಿಯಮಗಳಿಗೆ ಒಳಪಡತಕ್ಕದ್ದು. 7. ಪ್ರಾಧಿಕಾರದ ಟಿಪ್ಪಣಿಯ ವಿಷಯಗಳನ್ನು ತಿಳಿಯಪಡಿಸುವುದು: (1) 16 ನೇಪ್ರಕರಣದ (1) (2) ಮತ್ತು (3) ನೇ ಉಪ-ಪ್ರಕರಣಗಳ ಮೇರೆಗೆ ಸುತ್ತೋಲೆ ಮೂಲಕ ಕಳುಹಿಸಬೇಕಾಗಿರುವ ಪ್ರಾಧಿಕಾರದ ಟಿಪ್ಪಣಿಯಲ್ಲಿ ವಿಷಯದ ವಾಸ್ತವಾಂಶಗಳನ್ನು ತೀರ್ಮಾನದ ಅಂ೦ಶಗಳನ್ನು ಯಾವುದೇ ಪಕ್ಷಕಾರರೊಡನೆ ಸಮಾಲೋಚಿಸಿದ್ದರೆ, ಪಕ್ಷಕಾರರ ಅಭಿಪ್ರಾಯಗಳನ್ನು ಮತ್ತು ಆಯುಕ್ತರು ಅಂತಿಮ ಶಿಫಾರಸ್ಸುಗಳನ್ನು ತಿಳಿಯಪಡಿಸತಕ್ಕದ್ದು. (2) ಪ್ರಾಧಿಕಾರದ ಇಂತಹ ಪ್ರತಿಯೊಂದು ಟಿಪ್ಪಣಿಗೂ ಆಯುಕ್ತರು ಸಹಿಮಾಡತಕ್ಕದ್ದು. 8. ಪ್ರಾಧಿಕಾರದ ಸ್ಥಿರಾಸ್ತಿಗಳನ್ನು ಮಾರುವ ಬಗ್ಗೆ ಷರತ್ತುಗಳು: (1) ಪಾಧಿಕಾರದ ಯಾವುದೇ ಸ್ಮಿರಾಸ್ತಿಗಳನ್ನು ಹಾಗೂ ಒಂದು ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಚರಾಸ್ಥಿಗಳನ್ನು ಸರ್ಕಾರದ ಪೂರ್ವಾನುಮತಿ ಇಲ್ಲದೆ ಪರಭಾರೆ ಮಾಡತಕ್ಕದ್ದಲ್ಲ. (2)ನಿರುಪಯುಕ್ತ ವಸ್ತುಗಳನ್ನು ಕರ್ನಾಟಕ ಸರ್ಕಾರದ ಆರ್ಥಿಕ ಸಂಹಿತೆ ನಿಯಮಗಳ ಅನುಸಾರ ಪ್ರಾಧಿಕಾರದ ಪೂರ್ವಾನುಮತಿಯೊಂ೦ದಿಗೆ ಮಾರತಕ್ಕದ್ದು. 9. ಆಯವ್ಯಯದ ನಮೂನೆ: ಪ್ರತಿ ವರ್ಷದ ಡಿಸೆಂಬರ್ ತಿಂಗಳಲ್ಲಿ ಮುಂದಿನ ಆರ್ಥಿಕ ವರ್ಷದ ಬಜೆಟ್ಟನ್ನು ಪ್ರಾಧಿಕಾರವು ಸರ್ಕಾರದ ಆರ್ಥಿಕ ಇಲಾಖೆಯು ಗೊತ್ತುಪಡಿಸಲಾದ ನಮೂನೆಯಲ್ಲಿ ಅನ್ವಯವಾಗುವಷ್ಟು ಮಟ್ಟಿಗೆ ಅಂಥಹದೇ ಅನುಬಂಧಗಳೊಡನೆ ತಯಾರಿಸತಕ್ಕದ್ದು. ೩೦.ಲೆಕ್ಕಪುಸ್ತಕಗಳು ಮತ್ತು ಇತರ ರಿಜಿಸ್ಟರಗಳ ನಮೂನೆ:
(1) ಕರ್ನಾಟಕ ಆರ್ಥಿಕ ಸಂಹಿತೆ 1958 ರ ಉಪಬಂಧಗಳು ಮತ್ತು ಅದರ ಮೇರೆಗೆ ರಚಿಸಲಾದ ನಮೂನೆಗಳು ಯಥೋಚಿತ ಬದಲಾವಣೆಗಳೊಂದಿಗೆ ಪ್ರಾಧಿಕಾರವು ನಿರ್ವಹಿಸುವ ಲೆಕ್ಕಪತ್ರಗಳಿಗೆ ಅನ್ವಯವಾಗತಕ್ಕದ್ದು.
(2) ಪ್ರಾಧಿಕಾರದ ಉದ್ದೇಶಕ್ಕೆ ಸೂಕ್ತವಾಗುವ ನಿಯಮಗಳನ್ನು ಮತ್ತು ನಮೂನೆಗಳನ್ನು ಕರ್ನಾಟಕ ಸರ್ಕಾರವು ರಚಿಸಿರದಿದ್ದಲ್ಲಿ. ಅನುಸರಿಸತಕ್ಕ ನಿಯಮಗಳನ್ನು ಮತ್ತು ನಮೂನೆಗಳನ್ನು ಸರ್ಕಾರದ ಪೂರ್ವಾನುಮತಿಯೊಂದಿಗೆ ಆಯುಕ್ತರು ನಿರ್ದಿಷ್ಟಪಡಿಸಬಹುದು ಮತ್ತು 4ನೇ ನಿಯಮದಲ್ಲಿ ನಿರ್ಧಿಷ್ಟಪಡಿಸಿರುವಂತೆ ಪ್ರಾಧಿಕಾರದ ಘಟನೋತ್ತರ ಅನುಮೋದನೆ ನಿರ್ಬಂಧವು ಯಥೋಚಿತ ಬದಲಾವಣೆಯೊಂದಿಗೆ ಅನ್ವಯವಾಗತಕ್ಕದ್ದು. 11. ವರದಿಗಳು: ಪ್ರಾಧಿಕಾರವು ಪ್ರತಿವರ್ಷ we}, ಅಂತ್ಯದ ಒಳಗಾಗಿ ಲೆಕ್ಕಪರಿಶೋಧನಾ ವರದಿಯನ್ನು ಸಲ್ಲಿಸತಕ್ಕದ್ದು, ಆದಾಗ್ಯೂ ಪ್ರಪತ್ರ 1 ರಲ್ಲಿ ಸರ್ಕಾರ ನಿಯಮಿಸಲಾದ ವಿಷಯಗಳನ್ನು ಒಳಗೊಳ್ಳುವ ಮತ್ತು ಯೋಜಿಸಿದ ಕೈಗೊಂಡ ಮತ್ತು ಪೂರ್ಣಗೊಳಿಸಿದ ಪ್ರಧಾನ ಕಾರ್ಯಚಟುವಟಿಕೆಗಳು, ಹಣಕಾಸು ಪರಿಸ್ಥಿತಿ, ಸಿಬ್ಬಂದಿ. ಮತ್ತು ಅಧಿಕಾರಗಳು ಮತ್ತು ಇತರ ಅದೇ ಬಗೆಯ ವಿಷಯಗಳನ್ನೊಳಗೊಂಡ ವಾರ್ಷಿಕ ಆಡಳಿತ ವರದಿಯನ್ನು ಸಿದ್ಧಪಡಿಸಿ ಮಂಡಳಿಯ ಅನುಮೋದನೆ ಪಡೆಯತಕ್ಕದ್ದು ಮತ್ತು ಮುಂದಿನ ಪ್ರತಿಯೊಂದು ಹಣಕಾಸು ವರ್ಷಕ್ಕಾಗಿ ಜೂನ್ ಅಂ೦ತ್ಯದಲ್ಲಿಅದನ್ನು ಸರ್ಕಾರಕ್ಕೆ ಸಲ್ಲಿಸತಕ್ಕದ್ದು. ಸರ್ಕಾರವು ಅಂತಹ ವರದಿಯನ್ನು ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಿಸುವಂತೆ ಮಾಡಬಹುದು. ಪ್ರಪತ್ರ -1 (ನಿಯಮ 313ನ್ನುನೋಡಿ) ವರ್ಷಕ್ಕಾಗಿ ನಾಡಪ್ರಭು. ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರದ ವಾರ್ಷಿಕ ಆಡಳಿತ ವರದಿ.
(ಎ) ಆಡಳಿತ:
(1) ಪ್ರಾಧಿಕಾರದ ರಚನೆ ಅನರ್ಹಗೊಳಿಸುವಿಕೆ, ತೆಗೆದುಹಾಕುವುದು, ಇತ್ಯಾದಿ.
(2) ಪ್ರಾಧಿಕಾರದ ಸದಸ್ಯರ ಹೆಸರುಗಳು ಮತ್ತು ಪದನಿಮಿತ್ತ ಅಥವಾ ನಾಮನಿರ್ದೇಶಿತ ಅಥವಾ ನೇಮಕಗೊಂಡಂತೆ ಅವರ ಸಾಮರ್ಥ್ಯ (3)ವರದಿಯ ವರ್ಷದಲ್ಲಿ ನಡೆಸಲಾದ ಪ್ರಾಧಿಕಾರದ ಸಭೆಗಳು ಮತ್ತು ಅಗತ್ಯವಿರುವಷ್ಟು ಸಂಖ್ಯೆಯ ಸಭೆಗಳನ್ನುನಡೆಸದಿರುವುದಕ್ಕೆ ಕಾರಣಗಳು.
(4) (ಎ) ವರದಿಯ ವರ್ಷದಲ್ಲಿ ನಡೆದ ಕಾರ್ಯಗೊಳಿಸುವ ಸಮಿತಿಯ ಸಭೆಗಳು ಮತ್ತು ಅಗತ್ಯವಿರುವಷ್ಟು ಸಂಖ್ಯೆಯ ಸಭೆಗಳನ್ನು ನಡೆಸದಿರುವುದಕ್ಕೆ ಕಾರಣಗಳು.
(ಬಿ) ನಿರಂತರವಾಗಿ ಅಥವಾ ಹೆಚ್ಚು ಸಭೆಗಳಿಗೆ ಗೈರು ಹಾಜರಾದ ಪ್ರಾಧಿಕಾರದ ಮತ್ತು ಕಾರ್ಯಗತಗೊಳಿಸುವ ಸಮಿತಿಯ ಸದಸ್ಯರ ಪಟ್ಟಿ,
(5) ಪ್ರಾಧಿಕಾರದ ಸಮಿತಿಗಳ ಮತ್ತು ಉಪಸಮಿತಿಗಳ ರಚನೆ.
(6) ಪ್ರತಿಯೊಂದು ಸಮಿತಿ / ಉಪಸಮಿತಿಗೆ ಪ್ರತ್ಯೇಕವಾಗಿ ನಡೆಸಲಾದ ಸಭೆಗಳ ಸಂಖ್ಯೆ.
(7) ಪ್ರಾಧಿಕಾರದ ಅಧಿಕಾರಿ ಮತ್ತು ನೌಕರರುಗಳು.
(8) ಪ್ರಾಧಿಕಾರದ ಆವರಣದ ವ್ಯಾಪ್ತಿ, ಮತ್ತುಅಧಿಕಾರಿಗಳು ಮತ್ತು ನೌಕರರುಗಳು.
(9) ಪೀಠೋಪಕರಣಗಳು ಮತ್ತು ಕಛೇರಿ ಸಾಮಗಿಗಳು.
(10) ಮೇಲೆ ಬಾಬ್ತು 8 ರಲ್ಲಿ ತೋರಿಸಿರುವ ಹೊರತಾಗಿ ಸ್ಥಿರಾಸ್ಥಿ.
(11) ಮೋಟಾರು ವಾಹನಗಳು ಉಪಕರಣಗಳು ಮತ್ತು ಸ್ಥಿರವಸ್ತುಗಳು.
(12) ಪುಸ್ತಕಗಳು ಮತ್ತು ಪ್ರಪತ್ರಗಳು / ನಮೂನೆಗಳು ಮತ್ತು ದಾಖಲೆ ಪತ್ರಗಳ ನಿರ್ವಹಣೆ.
(13) ನಗದು, ಬೆಲೆಬಾಳುವ ದಸ್ತಾವೇಜು ಮತ್ತು ಪ್ರಮುಖ ದಾಖಲೆ ಪತ್ರಗಳ ಭದ್ರತೆ ಮತ್ತುಸುರಕ್ಷತೆ ಮತ್ತುಅಭಿರಕ್ಕೆ.
(ಬಿ) ಆಯವ್ಯಯಮತ್ತುಯೋಜನೆಗಳು:
(14) ವಾರ್ಷಿಕ ಸ್ವೀಕೃತಿ ಮತ್ತು ವೆಚ್ಚಗಳು.
ಕಾಮಗಾರಿಯ ಹೆಸರು ವೆಚ್ಚ ವಾಸ್ತವಿಕ ಪ್ರಗತಿ ಪ್ರಸಕ್ತ ಸಾಲಿನವರೆಗೆ ವೆಚ್ಚ ಎಂದರೆ ಕಟ್ಟಡಗಳು / ಹಿಂದಿನ ವರ್ಷದವರೆಗೆ ಯೋಜನೆಗಳು/ಸೇವೆಗಳು (1) (2) (3)
(15) ಕಾಮಗಾರಿಯ ನಿಧಾನಗತಿಯ ಪ್ರಗತಿಗೆ 14ರಲ್ಲಿ ಉಲ್ಲೇಖಿಸಲಾಗಿರುವಂ೦ತೆ ಕಾರಣಗಳು.
(16) ಯೋಜನೆಗಳು ಮತ್ತುಸ್ಕೀಮುಗಳ ಪರಿಷ್ಕರಣೆ ಮತ್ತು ಅವು ಯಾವುದಾದರೂ ಇದ್ದರೆ ಅವುಗಳನ್ನು ಕಾರಣ ಸಹಿತ ಕಳುಹಿಸಿ ಕೊಡುವುದು.
(17) ತಪ್ಪಿತಸ್ಥ, ಕರ್ತವ್ಯ ಲೋಪವೆಸಗಿರುವ ಏಜವ್ಸಿಗಳು, ಇಲಾಖೆಗಳು, ಇತ್ಯಾದಿ ಅಂತಹ ಏಜೆನ್ಸಿಗಳ ಮತ್ತುಇಲಾಖೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದು.
(18) ಪ್ರಾಧಿಕಾರದ ಅನುದಾನದ ಪ್ರಸ್ತುತ ಹಂತ. 7) (ಎ)ಖಜಾನೆಯ ನಿಧಿಯನ್ನು ಇಡಲಾಗಿರುವ ಬ್ಯಾಲಕಿನ ಹೆಸರುಗಳು. (ಬಿ)ಬ್ಯಾಂಕಿನ ಖಾತೆ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯ ವಿವರಗಳ ಸ್ವರೂಪ
(ಸಿ) ಶಿಲ್ಕು II) ಠೇವಣಿ ಮತ್ತು ಠೇವಣಿಯ ಸ್ವರೂಪ.
III) ಸಂಗಹಿಸಿದ ಸಾಲಗಳು ಮತ್ತು ಅದರ ವೆಚ್ಚಗಳು.
Iv) ಅನುದಾನ, ಉಪದಾನ, ಕೂಡುಗೆಗಳು,ದೇಣಿಗೆಗಳು, ಉಡುಗೊರೆಗಳ ವಿವರಗಳು.
(19) ಲೆಕ್ಕಪತ್ರ ನಿರ್ವಹಣೆ ಮತ್ತು ಲೆಕ್ಕಪರಿಶೋಧನೆ ಮತ್ತು ಅವುಗಳ ಹಂತ.
(20) ಹಣಕಾಸು ವರ್ಷದಲ್ಲಿ ಹಣ ದುರುಪಯೋಗ ಹಾಗೂ ಆರ್ಥಿಕ ನಷ್ಟ, ಆಸ್ತಿನಷ್ಟ, ಆಸ್ತಿ ಅತಿಕ್ರಮಣ ಪ್ರಕರಣಗಳಲ್ಲಿ ತೆಗೆದುಕೊಳ್ಳಲಾದ ಕ್ರಮ ಅಥವಾ ಶಿಫಾರಸ್ಸು ಮಾಡಲಾದ ಪ್ರಕರಣಗಳು.
(21) ಆಯುಕ್ತರು ತಮ್ಮ ಕಛೇರಿಯ ಅಧಿಕಾರಿ ಮತ್ತು ಅಧಿಕೃತ ಏಜವ್ಸಿಗಳೊಂದಿಗೆ ಯೋಜನೆಗಳ ಪರಿವೀಕ್ಷಣೆ ನಡೆಸಿ, ಅಧಿಕೃತ ಏಜೆನ್ಸಿಗಳಿಂದ ಕಾರ್ಯಗತಗೊಳಿಸಲಾದ ಅಂತಹ ಯೋಜನೆಗಳ ತಪಾಸಣೆ ಮಾಡುವುದು ಹಾಗೂ ಯೋಜನೆಗಳ ಟಿಪ್ಪಣಿಗಳನ್ನು ರಚಿಸಿ ಕಾರ್ಯಗತಗೊಳಿಸುವುದು.
(22) ಯಾವುದೇ ಪ್ರಮುಖ ವಿಷಯಗಳು ಷರಾದೊಂದಿಗೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,
[ಕಲಾವತಿ.ಎಸ್.ಎನ್ ]
ಸರ್ಕಾರದ ಉಪ ಕಾರ್ಯದರ್ಶಿ
ಕಂದಾಯ ಇಲಾಖೆ
[ಸಮನ್ವಯ, ಸೇವೆಗಳು-2 ಮತ್ತು ಮಂಣ& ಪ್ರಾ]