ಈ ನಿಯಮಗಳಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು -
(ಎ) 'ಅಧಿನಿಯಮ' ಎಂದರೆ, ವೆಲ್ಲೂರು ತಾಂತ್ರಿಕ ಸಂಸ್ಥೆ, ಬೆಂಗಳೂರು ಅಧಿನಿಯಮ, 2012 (2013ರ ಕರ್ನಾಟಕ ಅಧಿನಿಯಮ ಸಂ. 14);
(ಬಿ). 'ಪ್ರಕರಣ' ಎಂದರೆ, ಅಧಿನಿಯಮದ ಪ್ರಕರಣ;
(ಸಿ) 'ಪರಿಷತ್ತು' ಎಂದರೆ, ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ತು;
(2) ಈ ನಿಯಮಗಳಲ್ಲಿ, ಬಳಸಿದ ಆದರೆ ಪರಿಭಾಷಿಸಿಲ್ಲದ ಪದಗಳು ಹಾಗೂ ಪದಾವಳಿಗಳು, ಆ ಅಧಿನಿಯಮದಲ್ಲಿ ಅವುಗಳಿಗೆ ನೀಡಿರುವಂತಹ ಅರ್ಥವನ್ನೇ ಹೊಂದಿರತಕ್ಕದ್ದು.
a. ವಿಶ್ವವಿದ್ಯಾಲಯದ ಅಧಿಕಾರಿಗಳು ಮತ್ತು ನೌಕರರ ವೇತನ ಮತ್ತು ಭತ್ಯೆಗಳು ಹಾಗೂ ಸೇವಾ ಷರತ್ತುಗಳು - (೧) ಬೋಧಕ ವಿಭಾಗಕ್ಕೆ ಸಂದಾಯ ಮಾಡಬೇಕಾದ ವೇತನ ಮತ್ತು ಭತ್ಯೆಗಳು ಯು.ಜಿ.ಸಿ. ವೇತನ ಶ್ರೇಣಿಗೆ ಸರಿಸಮಾನವಾಗಿರತಕ್ಕದ್ದು;
(೨) ಇತರ ನೌಕರರ ವೇತನ ಮತ್ತು ಭತ್ಯೆಗಳು, ತತ್ಸಮಾನ ಶ್ರೇಣಿಯಲ್ಲಿರುವ ಇತರ ರಾಜ್ಯ ಸರ್ಕಾರಿ ನೌಕರರಿಗೆ ಸರಿಸಮಾನವಾಗಿರತಕ್ಕದ್ದು.
(೩) ಬೋಧಕ ಸಿಬ್ಬಂದಿಯ ನೇಮಕಾತಿ ವಿಧಾನವು, ಕಾಲಕಾಲಕ್ಕೆ ಹೊರಡಿಸಿದ ಯುಜಿಸಿ ವಿನಿಯಮಗಳಿಗನುಸಾರವಾಗಿರತಕ್ಕದ್ದು. ಬೋಧಕೇತರ ಸಿಬ್ಬಂದಿಗೆ ಸಂಬಂಧಿಸಿದಂತೆ, ಸಂದರ್ಭಾನುಸಾರವಾಗಿ ಅರ್ಹತೆ ಹಾಗೂ ರಾಜ್ಯ ಸರ್ಕಾರದ ನೇಮಕಾತಿ ಕಾರ್ಯನೀತಿಗೆ ಅನುಸಾರವಾಗಿರತಕ್ಕದ್ದು.
¥. ವಿಶ್ವವಿದ್ಯಾಲಯದಲ್ಲಿ ಹೊಸ ಕೋರ್ಸುಗಳ ಪರಿಚಯ- (೧) ವಿಶ್ವವಿದ್ಯಾಲಯವು, ಸಂದರ್ಭಾನುಸಾರವಾಗಿ, ಯು.ಜಿ.ಸಿ. ಎ.ಐ.ಸಿ.ಟಿ.ಇ ಮತ್ತು ಇತರ ರಾಷ್ಟ್ರೀಯ ಮಾನ್ಯತಾ ಸಂಸ್ಥೆಗಳ ಕೋರ್ಸುಗಳ ವಿವರಣೆಗನುಸಾರವಾಗಿ ಹೊಸ ಕೋರ್ಸುಗಳನ್ನು ಪ್ರಾರಂಭಿಸುವುದಕ್ಕಾಗಿ ಪ್ರತಿ ಶೈಕ್ಷಣಿಕ ವರ್ಷ ಪ್ರಾರಂಭವಾಗುವುದಕ್ಕೆ ಸಾಕಷ್ಟು ಮುಂಚಿತವಾಗಿ ಪ್ರಾಯೋಜಕ ಸಂಸ್ಥೆ ಮತ್ತು ಆಡಳಿತ ಮಂಡಳಿಯ ಅನುಮೋದನೆಯೊಂದಿಗೆ. ಪರಿಷತ್ತಿಗೆ. ಪ್ರಸ್ತಾವನೆಯನ್ನು ಕಳುಹಿಸತಕ್ಕದ್ದು;
ಪರಂತು, ಪ್ರಾಯೋಜಕ ಸಂಸ್ಥೆ ಮತ್ತು ಆಡಳಿತ ಮಂಡಳಿಗಳ ಹೊಸ ಕೋರ್ಸುಗಳನ್ನು ಪರಿಚಯಿಸುವ ಪ್ರಸ್ತಾವನೆಯನ್ನು ಅನುಮೋದಿಸುವುದಕ್ಕೆ ಮುಂಚೆ ಸಂಬಂಧಪಟ್ಟ ನಿಯಮಂತ್ರಣ ಪ್ರಾಧಿಕಾರಗಳ ಗುಣಮಟ್ಟ ಮತ್ತು ನಿಗದಿತ. ಮಾದರಿಗನುಸಾರವಾಗಿ ಅವಶ್ಯಕವಾದ ಹೆಚ್ಚುವರಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಮತ್ತು ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳತಕ್ಕದ್ದು.
(೨) . (೧)ನೇ ಉಪ-ನಿಯಮದ ಮೇರೆಗೆ ಅರ್ಜಿಯನ್ನು ಸ್ವೀಕರಿಸಿದ ತರುವಾಯ, ಪರಿಷತ್ತು, ತಜ್ಞ ಸಮಿತಿಗೆ ಪರಿಶೀಲನೆ ಮಾಡುವಂತೆ ನಿರ್ದೇಶಿಸತಕ್ಕದ್ದು:
ಪರಂತು, ಪರಿಷತ್ತು ರಚಿಸಿದ ತಜ್ಞ ಸಮಿತಿಯಲ್ಲಿ ಕನಿಷ್ಠ ಪಕ್ಷ ರಾಜ್ಯ ಸಾರ್ವಜನಿಕ ವಿಶ್ವವಿದ್ಯಾಲಯದ ಒಬ್ಬರು ಮಾಜಿ ಉಪ-ಕುಲಪತಿಯು ಇರತಕ್ಕದ್ದು.
(೩) ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕರು, ಅರ್ಜಿಯನ್ನು ಮತ್ತು ಅದರ ನಕಲು ಪ್ರತಿಗಳನ್ನು ಹಾಗೂ ತಜ್ಞ ಸಮಿತಿಯ ವರದಿಯನ್ನು, ಅದರ ಮೇಲೆ ತೀರ್ಮಾನವನ್ನು ಕೈಗೊಳ್ಳುವುದಕ್ಕಾಗಿ ರಾಜ್ಯ ಸರ್ಕಾರಕ್ಕೆ ಸಲ್ಲಿಸತಕ್ಕದ್ದು.
(೪) . ರಾಜ್ಯ ಸರ್ಕಾರವು, ತಜ್ಞ ಸಮಿತಿಯ ಶಿಫಾರಸ್ಸುಗಳ ಹಿನ್ನೆಲೆಯಲ್ಲಿ ಅಂಥ ಅರ್ಜಿಗಳನ್ನು ಪರಿಗಣಿಸತಕ್ಕದ್ದು ಮತ್ತು ಅಂಥ ಪರಿಶೀಲನೆಯ ತರುವಾಯ, ರಾಜ್ಯ ಸರ್ಕಾರಕ್ಕೆ ಅಗತ್ಯವೆಂದು ಕಂಡುಬಂದರೆ, ದಾಖಲಾತಿಯಲ್ಲಿನ ವ್ಯತ್ಯಾಸವೂ ಸೇರಿದಂತೆ ಸಂದರ್ಭಾನುಸಾರ, ಹೊಸ ಕೋರ್ಸುಗಳನ್ನು ಪ್ರಾರಂಭಿಸಲು ಅಥವಾ ಪ್ರಸ್ತಾವನೆಯನ್ನು ತಿರಸ್ಕರಿಸಲು ವಿಶ್ವವಿದ್ಯಾಲಯಕ್ಕೆ ಅನುಮತಿ ನೀಡತಕ್ಕದ್ದು.
(೫) (೧)ನೇ ಉಪ-ನಿಯಮದ ಮೇರೆಗೆ ಸಲ್ಲಿಸಿದ ಯಾವುದೇ ಅರ್ಜಿಯನ್ನು (೪)ನೇ ಉಪ-ನಿಯಮದ ಮೇರೆಗೆ ಅನುಮತಿ ನೀಡುವುದಕ್ಕೆ ಅಥವಾ ತಿರಸ್ಕರಿಸುವುದಕ್ಕೆ ಮೊದಲು ಯಾವುದೇ ಸಮಯದಲ್ಲಿ ವಿಶ್ವವಿದ್ಯಾಲಯವು. ಹಿಂದಕ್ಕೆ ಪಡೆಯಬಹುದು.