ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಕಾಲೇಜು ಶಿಕ್ಷಣ ಇಲಾಖೆಯ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) ಅಧಿನಿಯಮ, 2012ನ್ನು (2013ರ ಕರ್ನಾಟಕ ಅಧಿನಿಯಮ 06) ಈ ಮೂಲಕ ವಿರಸನಗೊಳಿಸಲಾಗಿದೆ :
ಪರಂತು, ಅಂಥ ನವಿರಸನವು.-
(ಎ) ಹಾಗೆ ವಿರಸನಗೊಂಡ ಯಾವುದೇ ಅಧಿನಿಯಮದ ಅಥವಾ ಅದರ ಮೇರೆಗೆ ಕ್ರಮಬದ್ಧವಾಗಿ ಮಾಡಲಾದ ಅಥವಾ ಮಾಡಲೆಡೆಗೊಟ್ಟ ಯಾವುದೇ ಕಾರ್ಯದ ಪೂರ್ವಜಾರಿಯನ್ನು ಬಾಧಿಸತಕ್ಕದ್ದಲ್ಲ; ಅಥವಾ
(ಬಿ) ಹಾಗೆ ನಿರಸಿತವಾದ ಯಾವುದೇ ಅಧಿನಿಯಮದ ಮೇರೆಗೆ ಆರ್ಜಿಸಲಾದ, ಪ್ರಾಪ್ತವಾದ ಅಥವಾ ವಹಿಸಲಾದ ಯಾವುದೇ ಹಕ್ಕು, ವಿಶೇಷಾಧಿಕಾರ, ಬಾಧ್ಯತೆ ಅಥವಾ ಹೊಣೆಗಾರಿಕೆಯನ್ನು ಬಾಧಿಸತಕ್ಕದ್ದಲ್ಲ; ಅಥವಾ (A) ಹಾಗೆ ನಿರಸನವಾದ ಯಾವುವೇ ಅಧಿನಿಯಮಗಳ DB, ಮಾಡಲಾದ ಯಾವುದೇ ಅಪರಾಧಕ್ಕೆ ಸಂಬಂಧಿಸಿದಂತೆ, ಗುರಿಯಾದ ಯಾವುದೇ Bo, ಮುಟ್ಟುಗೋಲು ಅಥವಾ ಶಿಕ್ಷೆಯನ್ನು ಬಾಧಿಸತಕ್ಕದ್ದಲ್ಲ; ಅಥವಾ
(ಡಿ) ಮೇಲೆ ಹೇಳಿದಂಥ ಯಾವುದೇ ಹಕ್ಕು, ವಿಶೇಷಾಧಿಕಾರ, ಬಾಧ್ಯತೆ, ಹೊಣೆಗಾರಿಕೆ, ದಂಡ, ಮುಟ್ಟುಗೋಲು ಅಥವಾ ಶಿಕ್ಷೆಗೆ ಸಂಬಂಧಿಸಿದ ಯಾವುದೇ ತನಿಖೆ, ಕಾನೂನು ವ್ಯವಹರಣೆ ಅಥವಾ ಪರಿಹಾರೋಪಾಯವನ್ನು ಬಾಧಿಸತಕ್ಕದ್ದಲ್ಲ; ಮತ್ತು ವಿರಸನಗೊಳಿಸುವ ಅಧ್ಯಾದೇಶವನ್ನು ಅಂ೦ಗೀಕರಿಸಿಲ್ಲದಿದ್ದರೆ ಹೇಗೋ ಹಾಗೆ ಅಂಥ ಯಾವುದೇ ತನಿಖೆಯನ್ನು, ಕಾನೂನು ವ್ಯವಹರಣೆಯನ್ನು ಅಥವಾ ಪರಿಹಾರೋಪಾಯವನ್ನು ನಡೆಸಬಹುದು, ಮುಂದುವರೆಸಬಹುದು ಅಥವಾ ಜಾರಿಗೆ ತರಬಹುದು ಮತ್ತು ಅಂಥ ಯಾವುದೇ ದಂಡ, ಮುಟ್ಟುಗೋಲು ಅಥವಾ ಶಿಕ್ಷೆಯನ್ನು ವಿಧಿಸಬಹುದು.
ವಜೂಭಾಯಿವಾಲಾ ಕರ್ನಾಟಕದ ರಾಜ್ಯಪಾಲರು
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
(ಕೆ. ದ್ವಾರಕನಾಥ್ ಬಾಬು) ಸರ್ಕಾರದ ಕಾರ್ಯದರ್ಶಿ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ.