8KRN – Bg. GPO – 25
ಕರ್ನಾಟಕ ರಾಜ್ಯಪತ್ರ
ಅಧಿಕೃತವಾಗಿ ಪ್ರಕಟಿಸಲಾದುದು. ವಿಶೇಷ ಪತ್ರಿಕೆ
ಸಂ.1082
(ಆಶ್ಚಯುಜ 15, ಶಕ ವರ್ಷ 1916) ಸಂಖ್ಯೆ : ಆರ್ಡಿ 191 ಆರ್ಇಚ್ಚ್94
ಅಧಿಸೂಚನೆ
ಕೂಡಲಸಂಗಮ ಅಭಿವೃದ್ಧಿ ಮಂಡಳಿ ಅಧಿನಿಯಮ, 1994 (1994ರ ಕರ್ನಾಟಕ ಅಧಿನಿಯಮ ಸಂಖ್ಯೆ 37)ರ ಪ್ರಕರಣ 37(1)ರ ಮೂಲಕ ಪ್ರದತ್ತವಾದ ಅಧಿಕರವನ್ನು ಚಲಾಯಿಸಿ ಕೂಡಲಸಂಗಮ ಅಭಿವೃದ್ಧಿ ಮಂಡಳಿ ನಿಯಮಾವಳಿಗಳು 1998ರ ಕರಡನ್ನು ದಿನಾಂಕ 26-10-1998ರ ಕರ್ನಾಟಕ ರಾಜ್ಯಪತ್ರದ ಭಾಗ 24 (11) ನಂಬಿಕೆಯಲ್ಲಿ ದಿನಾಂಕ 24-10-1997ರ ಅದಿಸೂಚನೆ ಸಂಖ್ಯೆ: ಆರ್ಡಿ 191 ಆರ್ ಇದರ 94ರಲ್ಲಿ ಬಾಧಿತರಾಗುವ ವ್ಯಕ್ತಿಗಳಿಂದ ಕರಡು ನಿಯಮಗಳನ್ನು ಪ್ರಕಟಗೊಳಿಸಿದ ಮೂವತ್ತು ದಿನಗಳ ನಂತರ ಯಾವುದೇ ಅಕ್ಷೇಪಣಿ ಅಥವಾ ನೆಲಹೆಗಳನ್ನು ಪರಿಗಣನಗೆ ತೆಗೆದುಕೊಳ್ಳಲಾಗುವುದೆಂದು ಪ್ರಕಟಿಸಿರುವುದರಿಂದ.
ಮತ್ತು ಸದರಿ ರಾಜ್ಯ ಪತ್ರವನ್ನು ಸಾರ್ವಜಿನಿಕರಿಗೆ ದಿನಾಂಕ 26-3-1998 ರಂದು ಲಭ್ಯವಾಗುವಂತೆ ಮಾಡಿರುವುದರಿಂದ,
ಈಗ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಅಧಿನಿಯಮದ 1994 (1994ರ ಕರ್ನಾಟಕ ಅಧಿನಿಯಮ 37)ರ ಪ್ರಕರಣ 37 (1)ರ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಈ ಕೆಳಕಂಡ ನಿಯಮಗಳನ್ನು ರಚಿಸುತ್ತದೆ ಎಂದರೆ.
ನಿಯಮಗಳು
- ಚಿಕ್ಕ ಹೆಸರು ಮತ್ತು ಪ್ರಾರಂಭ : 1) ಈ ನಿಯಮಗಳನ್ನು ಕೂಡಲಸಂಗಮ ಅಭಿವೃದ್ಧಿ ಮಂಡಳಿ ನಿಯಮಗಳು 1998 ಎಂದು ಕರೆಯುತಕ್ಕದ್ದು.
2)ಇವು ಈ ಕೂಡಲೇ ಜಾರಿಗೆ ಬರತಕ್ಕದ್ದು.
- ಪರಿಭಾಷೆಗಳು : ಈ ನಿಯಮಗಳಲ್ಲಿ ಸಂಧರ್ಭವು ಅನ್ಯಥಾ ಅಗತ್ಯ ಪಡಿಸಿದ ಹೊರತು.
ಎ) “ಅಧಿನಿಯಮ” ಎಂದರೇ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಅಧಿನಿಯಮ 1994
ಬ) “ಪ್ರಕರಣ” ಎಂದರೇ ಈ ಅಧಿನಿಯಮದ ಪ್ರಕರಣ.
-
ಸರಕಾರೇತರ ಸದಸ್ಯರುಗಳಿಗೆ ಪ್ರಯಾಣ ಭತ್ಯೆ : ಸರಕಾರೇತರ ಸದಸ್ಯರ ಪ್ರಯಾಣ ಭತ್ಯೆ ಮತ್ತು ಉಪಸ್ಥಿತಿ ಭತ್ಯೆಗಳನ್ನು ಕರ್ನಾಟಕ ಸರಕಾರಿ ಸೇವಾ ನಿಯಮಾವಳಿ ನಿಯಮಗಳ ಅನುಬಂಧ “ಎ” ದರನ್ವಯ ಸರಕಾರ ಕಾಲಕಾಲಕ್ಕೆ ನಿಗದಿಪಡಿಸುವ ದರಗಳನ್ವಯ ಪಡೆಯಲು ಅರ್ಹರಾಗಿರತಕ್ಕದ್ದು.
-
ಕರಾರುಗಳನ್ನು ಮಾಡಿಕೊಳ್ಳುವುದು :- ಮಂಡಳಿಯ ಪರವಾಗಿ ಅಥವಾ ಮಂಡಳಿಯ ಹೆಸರಿನಲ್ಲಿ ಕಾಮಗಾರಿಗಳನ್ನು ನಿರ್ವಹಿಸುವುದು ಅಥವಾ ಸಾಮಗ್ರಿಗಳನ್ನು ಸರಕುಗಳನ್ನು ಸರಬರಾಜು ಮಾಡುವ ಅಥವಾ ಸೇವೆಯನ್ನು ನಿಲ್ಲಿಸುವ ಸಲುವಾಗಿ, ಸರ್ಕಾರವು ಕಾಲಕಾಲಕ್ಕೆ ರಚಿಸಿದ ಯಾವುದೇ ನಿಯಮಗಳು ಮತ್ತು ನಮೂನೆಗಳು ಇದ್ದರೆ, ಸಾಧ್ಯವಾದಷ್ಟು ಮಟ್ಟಿಗೆ ಮತ್ತು ಈ ಅಧಿನಿಯಮ ಮತ್ತು ನಿಯಮಗಳ ಉಪಬಂಧಗಳಿಗೆ ಅಸಂಗತವಾಗದಿರುಷ್ಟರ ಮಟ್ಟಿಗೆ ಅವುಗಳನ್ನು ಅನುಸರಿಸತಕ್ಕದ್ದು. ಕರ್ನಾಟಕ ಸರ್ಕಾರವು ಅಂಥ ನಿಯಮಗಳನ್ನು ನಮೊನೆಗಳನ್ನು ರಚಿಸಿರದಿದ್ದಲ್ಲಿ ಅಥವಾ ಅವು ಮಂಡಳಿಯ ಉದ್ದೇಶಗಳಿಗೆ ಹೊಂದಿಕೆಯಾಗದಿದ್ದಲ್ಲಿ ಆಗ ಆಯುಕ್ತರು ಅಂಥ ವಿಷಯಗಳನ್ನು ತೀರ್ಮಾನಿಸತಕ್ಕದ್ದು ಮತ್ತು ಮಂಡಳಿಯ ಮುಂದಿನ ಸಭೆಯಲ್ಲಿ ಆಯುಕ್ತರು ಅದನ್ನು ಅಭೆಯ ಮುಂದಿಡತಕ್ಕದ್ದು ಮಂಡಳಿಯು ಆಯುಕ್ತರ ಅಂಥ ನಡವಳಿಗಳಲ್ಲಿ ಯಾವುದೇ ಮಾರ್ಪಾಡು ಮಾಡಲು ಅಥವಾ ರದ್ದುಗೊಳಿಸಲು ತೀರ್ಮಾನಿಸಿದೆ ದಿನಾಂಕದಿಂದ ನಡವಳಿಗಳು ಹಾಗೆ ಮಾರ್ಪಾಡಾದ ರೂಪದಲ್ಲಿ ಮಾತ್ರ ಪರಿಣಾಮಕಾರಿಯಾಗಿರತಕ್ಕದ್ದು ಅಥವಾ ಸಂದರ್ಭಾನುಸಾರ ಪರಿಣಾಮಕಾರಿಯಾರತಕ್ಕದ್ದಲ್ಲ.
-
ಮಂಡಳಿಯ ನಿಧಿಗಳನ್ನು ಪಡೆದುಕೊಳ್ಳುವುದಕ್ಕಾಗಿ ಷರತ್ತುಗಳು :
ರಾಜ್ಯ ಸರ್ಕಾರವು 8ನೇ ಪ್ರಕರಣ (2) ನೇ ಉಪ-ಪ್ರಕರಣ (ಬಿ) ಖಂಡದ ಮೇರೆಗೆ ಮಂಡಳಿಯು ನಿಧಿಗಳನ್ನು ಪಡೆಯುವುದಕ್ಕಾಗಿ ಮಂಜೂರಾತಿ ನೀಡುವ ಸಮಯದಲ್ಲಿ ಮಂಡಳಿ ಮತ್ತು ಸರ್ಕಾರದ ನಡುವೆ ಪರಸ್ಪರ ಒಪ್ಪಿಕೊಳ್ಳಬಹುದಾದಂಥಹ ಷರತ್ತುಗಳನ್ನು ನಿಧಿಸಬಹುದು.
- ಮಂಡಳಿಯ ನೌಕರರು : (1) ಮಂಡಳಿಯ ಕಾರ್ಯದರ್ಶಿ ಮತ್ತು ಇತರ ನೌಕರರ ಅರ್ಹತೆಗಳು ನೇಮಕ ವಿಧಾನ ಮತ್ತು ಸೇವಾ ಷರತ್ತುಗಳು ಇವುಗಳು ಕರ್ನಾಟಕ ಸರ್ಕಾರಿ ನೌಕರರಿಗೆ ಸಮಾನವಾಗಿರತಕ್ಕದ್ದು.
(2) ಮಂಡಳಿಯು ಸೈಜಿಸುವ ಪ್ರತಿಯೊಂದು ಹುದ್ದೆಯು, ಸರ್ಕಾರದ ಆಧೀನದಲ್ಲಿರುವ ಹುದ್ದೆಗೆ ಸಮಾನವಾಗಿರತಕ್ಕದ್ದು. ಮಂಡಳಿಯು ಪ್ರತಿಯೊಂದು ಹುದ್ದೆಯನ್ನು ಸರ್ಕಾರದ ಅನುಮೋದನೆ ಪಡೆದು ಸೈಜಿಸಬೇಕು.
(3) ಮಂಡಳಿಯಲ್ಲಿರುವ ಪ್ರತಿಯೊಂದು ಹುದ್ದೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಕರ್ನಾಟಕ ಸರ್ಕಾರ ಅಥವಾ ಕೇಂದ್ರ ಸರ್ಕಾರ ಅಥವಾ ಭಾರತದ ಇತರ ಯಾವುದೇ ರಾಜ್ಯ ಸರ್ಕಾರದವರ ನೌಕರರನ್ನು ಅಥವಾ ಭಾರತದ ವ್ಯಾಪ್ತಿಯಲ್ಲಿ ಬರುವಂತಹ ಯಾವುದೇ ಸ್ವಾಯತ್ತ ಸಂಸ್ಥೆಯ ನೌಕರರನ್ನು ಪ್ರತಿಯೋಜಿಸುವ ಮೂಲಕ ಭರ್ತಿ ಮಾಡತಕ್ಕದ್ದು.
(4) ಮಂಡಳಿಯ ನೌಕರರಿಗೆ ಅನ್ವಯವಾಗುವ ವೇತನ ಶ್ರೇಣಿಗಳು, ಕರ್ನಾಟಕ ಸರ್ಕಾರದಲ್ಲಿರುವ ಸಮಾನ ಹುದ್ದೆಗಳಿಗೆ ಅನ್ವಯವಾಗುವ ವೇತನ ಪ್ರೇಣಗಳಾಗಿರತಕ್ಕದ್ದು.
(5) ಮಂಡಳಿಯ ನೌಕರರು, ಈ ನಿಯಮಗಳಿಗೆ ಅಸಂಗತವಾಗಿರದಷ್ಟರ ಮಟ್ಟಿಗೆ, ಕರ್ನಾಟಕ ಸಿವಿಲ್ ಸೇವಾ ನಿಯಮಗಳಗೆ ಒಳಪಡತಕ್ಕದ್ದು.
(6) ಮಂಡಳಿಯ ನೌಕರರು, ಕರ್ನಾಟಕ ಸಿವಿಲ್ ಸೇವಾ (ನಡತೆ) ನಿಯಮಗಳು 1999ರ ಮತ್ತು ಮಂಡಳಿಯು ಕಾಲಕಾಲಕ್ಕೆ ಅಧಿಸೂಚಿಸಬಹುದಾದಂತೆ ರಾಜ್ಯ ಸರ್ಕಾರಿ ನೌಕರರಿಗೆ ಅನ್ವಯವಾಗತಕ್ಕ ಇತರ ಸೇವಾ ನಿಯಮಗಳಿಗೆ ಒಳಪಡತಕ್ಕದ್ದು.
- ಮಂಡಳಿಯ ಟಿಪ್ಪಣಿಯ ವಿಷಯಗಳನ್ನು ತಿಳಿಯಪಡಿಸುವುದು:
(1) 16ನೇ ಪ್ರಕರಣದ 4ನೇ ಉಪಪ್ರಕರಣದ ಮೇರೆಗೆ ಸುತ್ತೋಲೆ ಮೂಲಕ ಕಳುಹಿಸಬೇಕಾಗಿರುವ ಮಂಡಳಿಯ ಟಿಪ್ಪಣಿಯಲ್ಲಿ ವಿಷಯದ ವಾಸ್ತವಾಂಶಗಳನ್ನು ತೀರ್ಮಾನಕ್ಕೆ ಅಂಶಗಳನ್ನು, ಯಾವುದೇ ಪಕ್ಷಕಾರರೊಡನೆ ಸಮಾಲೋಚಿಸಿದ್ದರೆ ಪಕ್ಷಕಾರರ ಅಭಿಪ್ರಾಯಗಳನ್ನು ಮತ್ತು ಆಯುಕ್ತರ ಅಂತಿಮ ಶಿಫಾರಸ್ಸುಗಳನ್ನು ತಿಳಿಯಪಡಿಸುತಕ್ಕದ್ದು. (2) ಮಂಡಳಿಯ ಇಂತಹ ಪ್ರತಿಯೊಂದು ಟಿಪ್ಪಣಿಗೂ ಆಯುಕ್ತರು ಸಹಿ ಮಾಡತಕ್ಕದ್ದು.
- ಮಂಡಳಿಯ ಸ್ಥಿರಾಸ್ತಿಗಳನ್ನು ಮಾರುವ ಬಗ್ಗೆ ಷರತ್ತುಗಳು :
(1) ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಯಾವುದೇ ಸ್ಥರಾಸ್ತಿಗಳನ್ನು ಹಾಗೂ ಒಂದು ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಚರಾಸ್ಥಿಗಳನ್ನು ಸರ್ಕಾರದ ಪೂರ್ವಾನುಮತಿ ಇಲ್ಲದೆ ಪರಭಾರೆ ಮಾಡತಕ್ಕದ್ದು.
(2) ನಿರುಪಯುಕ್ತ ವಸ್ತುಗಳನ್ನು ಕರ್ನಾಟಕ ಸರ್ಕಾರದ ಆರ್ಧಿಕ ಸಂಹಿತೆ ನಿಯಮಗಳ ಅನುಸಾರ ಮಂಡಳಿಯ ಪೂರ್ವಾನುಮತಿಯೊಂದಿಗೆ ಮಾಡತಕ್ಕದ್ದು.
-
ಬಜೆಟ್ಟನ ಸಮೂನೆ : ಪ್ರತಿ ವರ್ಷದ ಡಿಸೆಂಬರ್ ತಿಂಗಳಲ್ಲಿ ಮುಂದಿನ ಆರ್ಧಿಕ ವರ್ಷದ ಬಜೆಟ್ಟನ್ನು ಮಂಡಳಿಯು ಸರ್ಕಾರದ ಆರ್ಧಿಕ ಇಲಾಖೆಯು ಗೊತ್ತು ಪಡಿಸಲಾದ ನಮೂನೆಯಲ್ಲಿ ಅನ್ವಯವಾಗುವಷ್ಟು ಮಟ್ಟಿಗೆ ಅಂಧವೇ ಅನುಬಂಧಗಳೊಡನೆ ತಯಾರಿಸತಕ್ಕದ್ದು.
-
ಲೆಕ್ಕ ಪರಿಸ್ತಕಗಳು ಮತ್ತು ಇತರ ರಿಜಿಸ್ಟರಗಳ ನಮೂನೆ:
(1) ಕರ್ನಾಟಕ ಆರ್ಧಿಕ ಸಂಹಿತೆ, 1958ರ ಉಪಬಂಧಗಳು ಮತ್ತು ಅದರ ಮೇರೆಗೆ ರಚಿಸಲಾದ ನಮೂನೆಗಳು ಯಧೋಚಿತ ಬದಲಾವಣೆಗಳೊಂದಿಗೆ ಮಂಡಳಿಯು ನಿರ್ವಹಿಸುವ ಲೆಕ್ಕಪತ್ರಗಳಿಗೆ ಅನ್ವಯವಾಗತಕ್ಕದ್ದು.
(2) ಮಂಡಳಿಯ ಉದ್ದೇಶಕ್ಕೆ ಸೂಕ್ತವಾಗುವ ಪರಿನಿಯಮಗಳನ್ನು ಮತ್ತು ಅಥವಾ ನಮೂನೆಗಳನ್ನು ಕರ್ನಾಟಕ ಸರ್ಕಾರವು ರಚಿಸಿರದಿದ್ದಲ್ಲಿ ಅನುಸರಿಸತಕ್ಕ ನಿಯಮಗಳನ್ನ ಮತ್ತು ನಮೂನೆಗಳನ್ನು ಆಯುಕ್ತರು ನಿರ್ದಿಷ್ಟ ಪಡಿಸಬಹುದು ಮತ್ತು 4ನೇ ನಿಯಮದಲ್ಲಿ ನಿರ್ಧಿಷ್ಟ ಪಡಿಸಿರುವಂತೆ ಮಂಡಳಿಯ ಘಟನೋತ್ತರ ಅನುಮೋದನೆಯ ನಿರ್ಬಂಧವು ಯಧೋಚಿತ ಬದಲಾವಣೆಯೊಂದಿಗೆ ಅನ್ವಯವಾಗತಕ್ಕದ್ದು.
- ವರದಿಗಳು : ಮಂಡಳಿಯು ಪ್ರತಿ ವರ್ಷ ಜುಲೈ ಅಂತ್ಯದ ಒಳಗಾಗಿ ಲೆಕ್ಕ ಪರಿಶೋಧನಾ ವರೆದಿಯನ್ನು ಸಲ್ಲಿಸತಕ್ಕದ್ದು, ಆದಾಗ್ಯೂ ಪ್ರಪತ್ರ 1ರಲ್ಲಿ ಸರ್ಕಾರ ನಿಯಮಿಸಲಾದ ವಿಷಯಗಳನ್ನು ಒಳಗೊಳ್ಳುವ ಮತ್ತು ಯೋಜಿಸಿದ ಕೈಗೊಂಡ ಮತ್ತು ಪೂರ್ಣಗೊಳಿಸಿದ ಪ್ರಧಾನ ಕಾರ್ಯ ಚಟುವಟಿಕೆಗಳು ಹಣಕಾಸು ಪರಿಸ್ಥಿತಿ ಸಿಬ್ಬಂದಿ ಮತ್ತು ಅಧಿಕಾರಗಳು ಮತ್ತು ಇವರ ಅದೇ ಬಗೆಯ ವಿಷಯಗಳನ್ನೊಳಗೊಂಡ ವಾರ್ಷಿಕ ಆಡಳಿತ ವರದಿಯನ್ನು ಸಿದ್ಧಪಡಿಸಿ ಮಂಡಳಿಯ ಅನುಮೋದನೆ ಪಡೆಯತಕ್ಕದ್ದು ಮತ್ತು ಮುಂದಿನ ಪ್ರತಿಯೊಂದು ಹಣಕಾಸು ವರ್ಷಕ್ಕಾಗಿ ಸಲ್ಲಿಸತಕ್ಕದ್ದು ಸರ್ಕಾರವು ಅಂತಹ ವರದಿಯನ್ನು ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಿಸುವಂತೆ ಮಾಡಬಹುದು.
ಪ್ರಪತ್ರ – 2 (ನಿಯಮ 12ನ್ನು ನೋಡಿ)
ವರ್ಷಕ್ಕಾಗಿ ಕೂಡಲಸಂಗಮ ಅಭಿವೃದ್ಧಿ ಮಂಡಳಿ ವಾರ್ಷಿಕ ಆಡಳಿತ ವರದಿ. _
(ಎ) ಆಡಳಿತ:
(1) ಮಂಡಳಿಯ ರಚನೆ, ಅನರ್ದಗೊಳಿಸುವಿಕೆ, ತೆಗೆದು ಹಾಕುವಿಕ, ಇತ್ಯಾದಿ.
(2) ಮಂಡಳಿಯ ಸದಸ್ಯರ ಹೆಸರುಗಳು ಮತ್ತು ಪದನಿಮಿತ್ತ ಅಥವಾ ನಾಮನಿರ್ದೇಶಿತ ಅಥವಾ ನೇಮಕಗೊಂಡಂತೆ ಅವರ
ಸಾಮರ್ಥಕ.
(3) ವರದಿಯ ವರ್ಷದಲ್ಲಿ ನಡೆಸಲಾದ ಮಂಡಳಿಯ ಸಭೆಗಳು ಮತ್ತು ಅಗತ್ಯವಿರುವಷ್ಟು ಸಂಖ್ಯೆಯ ಅಭೆಗಳನ್ನು ನಡೆಸದಿರುವುದಕ್ಕೆ ಕಾರಣಗಳು.
(4) (ಎ) ವರದಿಯ ವರ್ಷದಲ್ಲಿ ನಡೆದ ಕಾರ್ಯಗೊಳಿಸುವ ಸಮಿತಿಯ ಸಭೆಗಳು ಮತ್ತು ಅಗತ್ಯವಿರುವಷ್ಟು ಸಂಖ್ಯೆಯ ಸಭೆಗಳನ್ನು ನಡೆಸದಿರುವುದಕ್ಕೆ ಕಾರಣಗಳು.
(ಆ) ನರಂತರವಾಗಿ ಅಥವಾ ಹೆಚ್ಚು ಸಭೆಗಳಿಗೆ ಗೈರು ಹಾಜರಾದ ಮಂಡಳಿಯ ಮತ್ತು ಕಾರ್ಯಗತಗೊಳಿಸುವ ಸಮಿತಿಯ ಸದಸ್ಯರ ಪಟ್ಟಿ.
(5) ಮಂಡಳಿಯ ಸಮಿತಿಗಳ ಮತ್ತು ಉಪಸಮಿತಿಗಳ ರಚನೆ.
(6) ಪ್ರತಿಯೊಂದು ಸಮಿತಿಗೆ ಉಪಸಮಿತಿಗೆ ಪ್ರತ್ಯೇಕವಾಗಿ ನಡೆಸಲಾದ ಸಭೆಗಳ ಸಂಖ್ಯೆ.
(7) ವ್ಯವಸ್ಥಾಪಕ ಸಿಬ್ಬಂದಿ (ಸಿಬ್ಬಂದಿಯ ಪಟ್ಟಿಯನ್ನು ಲಗತ್ತಿಸಲಾಗಿದೆ).
(8) ಮಂಡಳಿ ಮತ್ತು ಸಿಬ್ಬಂದಿಗೆ ಸ್ಥಳಾವಕಾಶ.
(9) ವೀದೋಪಕರಣಗಳು ಮತ್ತು ಕಛೇರಿ ಸಾಮಗ್ರಿಗಳು.
(10) ಮೇಲೆ ಬಾಬ್ತು 7ರಲ್ಲಿ ತೋರಿಸಿರುವ ಹೊರತಾಗಿ ಸ್ಥಿರಾಸ್ಥಿ.
(11) ಮೋಟಾರು ವಾಹನಗಳು ಉಪಕರಣಗಳು ಮತ್ತು ಸ್ಥಾವರಗಳು.
(12) ಪುಸ್ತಕಗಳು ಮತ್ತು ಪ್ರಪತ್ರಗಳು ಮತ್ತು ಸ್ಥಾವರಗಳು.
(13) ಹಣ ಮತ್ತು ಬೆಲೆಬಾಳುವ ದಸ್ತಾವೇಜು ಮತ್ತು ದಾಖಲೆ ಪತ್ರಗಳ ಭದ್ರತೆ ಮತ್ತು ಸುರಕ್ಷತೆ ಮತ್ತು ಅಭಿರಕ್ಷ.
(ಬಿ) ಬಜೆಟ ಮತ್ತು ಯೋಜನೆಗಳು)
(14) ವರ್ಷದ ವಾಸ್ತವಿಕ ದ್ವೀಕೃತಿಗಳು ಮತ್ತು ವೆಚ್ಚಗಳು. ಕಾಮಗಾರಿಯ ಹೆಸರು ವೆಚ್ಚ ವಾಸ್ತವಿಕ ಪ್ರಗತಿ ಪ್ರಸಕ್ತ ವರ್ಷದಲ್ಲಿ ಎಂದರೆ ಕಟ್ಟಡಗಳು ಯೋಜನೆ ಹಿಂದಿನ ವರ್ಷದವರೆಗೆ ಗಳು:ಸೇವೆಗಳು (1) (2) (3)
(15) ಮೇಲಿನ ಬಾಬ್ತು 14ಕ್ಕೆ ಸಂಬಂಧಿಸಿದಂತೆ ಪ್ರಗತಿಯು ಕುಂದಿತವಾದುದಕ್ಕೆ ಕಾರಣಗಳು.
(16) ಯೋಜನೆಗಳು ಮತ್ತು ಸ್ಕೀಮುಗಳ ಪರಿಷ್ಕರಣೆ ಮತ್ತು ಅವು ಯಾವುದಾದರೂ ಇದ್ದರೆ ಅವುಗಳನ್ನು ಕಾರಣ ಸಹಿತ ಕಳುಹಿಸಿ ಕೊಡುವುದು.
(17) ತಪ್ಪಿತಸ್ಥ ಏಜನ್ಸಿಗಳು ಇಲಾಖೆಗಳು ಇತ್ಯಾದಿ ಮತ್ತು ಅವುಗಳ ಮೇಲೆ ತೆಗೆದುಕೊಂಡಿರುವ ಕ್ರಮ.
(16) ಮಂಡಳಿ ನಿಧಿಯ ಪ್ರಸಕ್ತ ಸ್ಥಿತಿ.
I (ಎ) ಖಜಾನೆಯ ನಿಧಿಯನ್ನು ಇಡಲಾಗಿರುವ ಬ್ಯಾಂಕಿನ ಹೆಸರುಗಳು.
(ಬಿ) ಖಾತೆ ಸಂಖ್ಯೆ ಮತ್ತು ಅದರ ಸ್ವರೂಪ.
(ಸಿ) ಶಿಲ್ಕು
II ಮಾಡಲಾಗಿರುವ ಹೂಡಿಕೆಗಳ ವಿವರಗಳು. III ಪಡೆಯಲಾಗಿರುವ ಸಾಲಗಳ ಮತ್ತು ಮಡಲಾಗಿರುವ ವೆಚ್ಚಗಳ ವಿವರಗಳು. Iಗಿ ಸ್ವೀಕರಿಸಲಾಗಿರುವ ಮತ್ತು ಕೊಟ್ಟಿರುವ ದೇವಣಿಗಳ ಮತ್ತು ಕೊಡುಗೆಗಳು ವಿವರಗಳು.
(19) ನಿರ್ವಹಿಸಲಾಗಿರುವ ಲೆಕ್ಕಗಳ ಮತ್ತು ಮೊದಲಾಗಿರುವ ಲೆಕ್ಕಪರಿಶೋಧನೆಗಳ ಸ್ಥಿತಿಗಳು.
(20) ವರ್ಷದ ಅವಧಿಯಲ್ಲಿ ಹಣದ ದುರುಪಯೋಗ, ಮೋಸಗಳು, ನಷ್ಟ ಆಸ್ತಿ ಹಾನಿ ಅತಿಕ್ರಮಣ/ ಕಸಿದುಕೊಳ್ಳುವಿಕೆ/ ಕಳ್ಳತನ ಯಾವುದಾದರೂ ತಗಿದ್ದರೆ ಅದಕ್ಕಾಗಿ ತೆಗೆದುಕೊಳ್ಳಲಾದ ಕ್ರಮಗಳು ಮತ್ತು ಪರಿಹಾರ ಕ್ರಮಗಳು.
(21) ಕಾರ್ಯದರ್ಶಿ ಮತ್ತು ಇತರ ಪ್ರಾಥಿಕೃತ ಏಜೆನ್ಸಿಗಳು/ಧಿಕಾರಿಗಳು ನಡೆಸಿದ ಯೋಜೆನೆಗಳ ತಪಾಸನೆಗಳ ಸಂಖ್ಯೆ ಮತ್ತು ಅದರ ಮೇಲೆ ನೀಡಿದ ಟಿಪ್ಪಣಿಗಳು ಮತ್ತು ಸಂಬಂಧಪಟ್ಟ ಕಾರ್ಯನಿರ್ವಾಹಕ ಏಜೆನ್ಸಿಯು ತೆಗೆದುಕೊಂದ ಕ್ರಮಗಳು.
(22) ಮಹತ್ವದ ಷರಾಗಳಿಂದ ಬೇರೆ ಇತರೆ ಯಾವುದೇ ವಿಷಯಗಳು.
ಕರ್ನಾಟಕ ರಾಜ್ಯ ಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
(ಎಸ್.ದಿ.ಕರಕರ) ಸರ್ಕಾರದ ಅಧೀನ ಕಾರ್ಯದರ್ಶಿ ಕಂಧಾಯ ಇಲಾಖೆ (ಪುನರ್ವಸತಿ)