ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ ಅಧಿಸೂಚನೆ
ಸಂಖ್ಯೆ: ಗ್ರಾಅಪ 204 ಜಿಪಸ 2003, ಬೆಂಗಳೂರು, ದಿನಾಂಕ: 1ನೇ ಅಕ್ಟೋಬರ್ 2003
ರಾಜ್ಯ ಸರ್ಕಾರವು, ಕರ್ನಾಟಕ ಪಂಚಾಯತ್ ರಾಜ್ (ತಿದ್ದುಪಡಿ) ಅಧಿನಿಯಮ 2002 (2003ರ ಕರ್ನಾಟಕ ಅಧಿನಿಯಮ 37) ನ್ನು ಅಧಿಸೂಚನೆ ಸಂಖ್ಯೆ ಸಂವ್ಯಶಾಇ 33 ಶಾಸನ 2002, ದಿನಾಂಕ: 3.9.2003 ನ್ನು ಕರ್ನಾಟಕ ವಿಶೇಷ ರಾಜ್ಯಪತ್ರದಲ್ಲಿ ದಿನಾಂಕ: 3.9.2003 ರಂದು ಪ್ರಕಟಿಸಲಾಗಿದೆ.
ಅಂತೆಯೇ, ಕರ್ನಾಟಕ ಪಂಚಾಯತ್ ರಾಜ್ಯ (ತಿದ್ದುಪಡಿ) ಅಧಿನಿಯಮ 2002ರ ಪ್ರಕರಣ 1(2) ರನ್ವಯ ತಿದ್ದುಪಡಿಯ ಎಲ್ಲಾ ಉಪಬಂಧಗಳು ದಿನಾಂಕ: 1.10.2003 ರಂದು ಜಾರಿಗೆ ಬರುವಂತೆ ಈ ಮೂಲಕ ಅಧಿಸೂಚಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಕೆ.ಎಸ್. ಶಾಮಸುಂದರ
ಸರ್ಕಾರ ಅಧೀನ ಕಾರ್ಯದರ್ಶಿ,
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ.
Published in the Karnataka Gazette Part IV-A Extraordinary No.1151 dated 1-10-2003