ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಸಂವ್ಯಶಾಇ 46 ಶಾಸನ 2020, ಬೆಂಗಳೂರು, ದಿನಾಂಕ:31.07.2020.
The Karnataka Town and Country Planning (Second Amendment) Ordinance, 2020 ಇದಕ್ಕೆ. 2020ರ ಜುಲೈ ತಿಂಗಳ 31ನೇ ದಿನಾಂಕದಂದು ರಾಜ್ಯಪಾಲರ ಒಪ್ಪಿಗೆ ದೊರೆತಿದ್ದು, ಸಾಮಾನ್ಯ ತಿಳುವಳಿಕೆಗಾಗಿ ಇದನ್ನು 2020ರ ಕರ್ನಾಟಕ ಅಧ್ಯಾದೇಶ ಸಂಖ್ಯೆ: 16 ಎಂಬುದಾಗಿ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಬೇಕೆಂದು ಆದೇಶಿಸಲಾಗಿದೆ.
2020 ರ ಕರ್ನಾಟಕ ಅಧ್ಯಾದೇಶ ಸಂಖ್ಯೆ -16
ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ಎರಡನೇ ತಿದ್ದುಪಡಿ) ಅಧ್ಯಾದೇಶ, 2020
(ಭಾರತ ಗಣರಾಜ್ಯದ ಎಪ್ಪತ್ತೊಂದನೇ ವರ್ಷದಲ್ಲಿ ಕರ್ನಾಟಕ ರಾಜ್ಯಪಾಲರಿಂದ ಪ್ರಖ್ಯಾಪಿತವಾಗಿ 2020
ರ ಜುಲೈ 31 ನೇ ದಿನಾಂಕದಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟವಾಗಿದೆ).
ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ, 1961 ನ್ನು ಮತ್ತಷ್ಟು ತಿದ್ದುಪಡಿ ಮಾಡಲು ಒಂದು ಅಧ್ಯಾದೇಶ.
ರಾಜ್ಯ ವಿಧಾನಮಂಡಲದ ಉಭಯ ಸದನಗಳು ಅಧಿವೇಶನದಲ್ಲಿ ಇಲ್ಲದಿರುವುದರಿಂದ ಮತ್ತು ಇಲ್ಲಿ ಇನ್ನು
ಮುಂದೆ. ಕಂಡುಬರುವ ಉದ್ದೇಶಗಳಿಗಾಗಿ. ಅಧ್ಯಾದೇಶವನ್ನು ಪ್ರಖ್ಯಾಪಿಸಲು, ಶ್ರೀಘ್ರ ಕ್ರಮವನ್ನು
ತೆಗೆದುಕೊಳ್ಳುವುದು ಅವಶ್ಯಗೊಳಿಸುವಂಥ ವಿದ್ಯಮಾನಗಳು ಉಂಟಾಗಿವೆಯೆಂದು ಕರ್ನಾಟಕದ ರಾಜ್ಯಪಾಲರಿಗೆ
ಮನದಟ್ಟಾಗಿರುವುದರಿಂದ;
ಈಗ, ಭಾರತ ಸಂವಿಧಾನದ 213ನೇ ಅನುಚ್ಛೇದದ (1ನೇ ಖಂಡದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕದ ರಾಜ್ಯಪಾಲರು ಈ ಮುಂದಿನ ಅಧ್ಯಾದೇಶವನ್ನು ಪ್ರಖ್ಯಾಪಿಸಿದ್ದಾರೆ, ಎಂದರೆ:
- ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ. (1) ಈ ಅಧ್ಯಾದೇಶವನ್ನು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ಎರಡನೇ ತಿದ್ದುಪಡಿ) ಅಧ್ಯಾದೇಶ, 2020 ಎಂದು ಕರೆಯತಕ್ಕದ್ದು.
(2) ಇದು ಈ ಕೂಡಲೇ ಜಾರಿಗೆ ಬರತಕ್ಕದ್ದು.
R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297
- 18-ಬಿ ಹೊಸ ಪ್ರಕರಣದ ಸೇರ್ಪಡೆ.- ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ, 1961ರ (1963ರ ಕರ್ನಾಟಕ ಅಧಿನಿಯಮ 1) 18-ಎ ಪ್ರಕರಣದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
18-2. ಪ್ರೀಮಿಯಮ್ ನೆಲ ವಿಸ್ತೀರ್ಣ ಅನುಪಾತ (premium floor area ratio) ಮಂಜೂರಾತಿಗಾಗಿ ಪ್ರೀಮಿಯಮ್ ಚಾರ್ಜುಗಳನ್ನು ವಿಧಿಸುವುದು. (1) ಪ್ರಾಧಿಕಾರವು ಮಾಸ್ಟರ್ ಪ್ಲಾನ್ನ ವಲಯವಾರು ವಿನಿಯಮಗಳಲ್ಲಿನ ಉದ್ದೇಶಕ್ಕಾಗಿ ಗುರುತಿಸಲಾದ ಪ್ರದೇಶಗಳಲ್ಲಿ ಪ್ರೀಮಿಯಮ್ ನೆಲ. ವಿಸ್ತೀರ್ಣ ಅನುಪಾತಕ್ಕಾಗಿ ಅನುಮತಿಯನ್ನು ನೀಡಬಹುದು.
(2) 15ನೇ ಪ್ರಕರಣದ ಅಡಿಯಲ್ಲಿ ಕಟ್ಟಡದ ಅಭಿವೃದ್ಧಿಗಾಗಿ ಪ್ರೀಮಿಯಮ್ ನೆಲ ವಿಸ್ತೀರ್ಣ ಅನುಪಾತದ ಬಳಕೆಗಾಗಿ ಅನುಮತಿಯನ್ನು ನೀಡುವುದಕ್ಕಾಗಿ ಅರ್ಜಿಯನ್ನು ಸಲ್ಲಿಸಿದಲ್ಲಿ, ಪ್ರಾಧಿಕಾರವು, ಮಾಸ್ಟರ್ ಪ್ಲಾನ್ನ ವಲಯವಾರು ವಿನಿಯಮಗಳಲ್ಲಿ ನಿರ್ದಿಷ್ಟಪಡಿಸಿದ ಮಿತಿಗಳನ್ನು ಮೀರದಂತೆ, ಪ್ರೀಮಿಯಮ್ ನೆಲ ವಿಸ್ತೀರ್ಣ ಅನುಪಾತದ ಮಂಜೂರಾತಿಗಾಗಿ, ಕಾಲಕಾಲಕ್ಕೆ ಸರ್ಕಾರವು ನಿಯಮಿಸಬಹುದಾದಂತೆ ಭೂಮಿ ಮತ್ತು ಕಟ್ಟಡದ ಮೌಲ್ಯದಲ್ಲಿ ಅಂದಾಜುಮಾಡಿದ ಹೆಚ್ಚಳದ ಮೂರನೇ ಒಂದನ್ನು ಮೀರದ ಅಂಥ ದರದಲ್ಲಿ ಪ್ರೀಮಿಯಮ್ ಚಾರ್ಜುಗಳನ್ನು ವಿಧಿಸಬಹುದು.
ವಿವರಣೆ: ಈ ಪ್ರಕರಣದ ಉದ್ದೇಶಕ್ಕಾಗಿ “ಪ್ರೀಮಿಯಮ್ ನೆಲ ವಿಸ್ತೀರ್ಣ ಅನುಪಾತ' '. ಎಂದರೆ ಸಾಮಾನ್ಯವಾಗಿ ಅನುಮತಿಸಬಹುದಾದ ನೆಲ ವಿಸ್ತೀರ್ಣ ಅನುಪಾತಕ್ಕಿಂತಲೂ ಮೇಲೆ ಅನುಮತಿಸಿದ ಹೆಚ್ಚುವರಿ ನೆಲ ವಿಸ್ತೀರ್ಣ ಅನುಪಾತ.' '
The above translation of the Karnataka Town and Country Planning (Second Amendment) Ordinance, 2020 shall be authoritative text in the Kannada language under section-5 A of the Karnataka Official Language Act, 1963 (Karnataka Act 26 of 1963)
ವಜೂಭಾಯಿ ವಾಲಾ
ಕರ್ನಾಟಕದ ರಾಜ್ಯಪಾಲರು
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ
(ಕೆ.ದ್ವಾರಕನಾಥ್ ಬಾಬು)
ಸರ್ಕಾರದ ಕಾರ್ಯದರ್ಶಿ
ಸಂಸದೀಯ ವ್ಯವಹಾರಗಳು ಮತ್ತು
ಶಾಸನ ರಚನೆ ಇಲಾಖೆ
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ. ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು