(1) 'ಅಧಿನಿಯಮ' ಎಂದರೆ ಕರ್ನಾಟಕ ಹಣಕಾಸು AOA NYE), ಠೇವಣೆದಾರರ ಹಿತಾಸಕ್ತಿ ಸಂರಕ್ಷಣೆ ಅಧಿನಿಯಮ, 2004(20050 ಕರ್ನಾಟಕ ಅಧಿನಿಯಮ, 30)
(2) ಬಳಸಿರುವ ಆದರೆ ಪರಿಭಾಷಿಸದ ಪದಗಳು, ಈ ಅಧಿನಿಯಮದಲ್ಲಿ ಅವುಗಳಿಗೆ ನೀಡಲಾದ ಅದೇ ಅರ್ಥವನ್ನು ಹೊಂದಿರತಕ್ಕದ್ದು.
3... ತಾತ್ಕಾಲಿಕ ಆದೇಶ ಮತ್ತು ದೂರುನೀಡಿದವನ ಮತ್ತು AOS NY YS : 3ನೇ ಪ್ರಕರಣದ (2ನೇ ಉಪಪ್ರಕರಣದ ಅಡಿಯಲ್ಲಿ ಸರ್ಕಾರದ ಆದೇಶಗಳನ್ನು ಸ್ವೀಕರಿಸಿದ ತರುವಾಯ, ಸಕ್ಷಮ ಪ್ರಾಧಿಕಾರವು, ದೂರು ನೀಡಿದವನನ್ನು ವಿಚಾರಣೆ ಮಾಡಬಹುದು ಮತ್ತು ವಿಚಾರಣೆಯನ್ನು ಬರಹದಲ್ಲಿ ದಾಖಲಿಸತಕ್ಕದ್ದು. 4. ತಲೆ ಮರೆಸಿಕೊಂಡಿರುವ ವ್ಯಕ್ತಿಗಳಿಗೆ ಸಂಬಂಧಪಟ್ಟಂ೦ತೆ ಅಧಿಕಾರಿಗಳು : ಸಕ್ಷಮ ಪ್ರಾಧಿಕಾರಕ್ಕೆ ಈ ಅಧಿನಿಯಮದ ಅಡಿಯಲ್ಲಿ, ಕ್ರಮಕೈಗೊಳ್ಳಲು ಅಲೋಚಿಸಲಾದ ವ್ಯಕಿಯು, ತಲೆಮರೆಸಿಕೊಂಡಿದ್ದಾನೆಂದು ಅಥವಾ ಬಜಚ್ಚಿಟ್ಟುಕೊಂಡಿದ್ದಾನೆಂದು ಮನದಟ್ಟಾದಲ್ಲಿ ಅಥವಾ ಅದನ್ನುನಂಬಲು ಕಾರಣಗಳಿದ್ದಲ್ಲಿ, ಸಕ್ಷಮ ಪ್ರಾಧಿಕಾರವು, ವಿಶೇಷನ್ಯಾಯಾಲಯಕ್ಕೆ ಲಿಖಿತದಲ್ಲಿ ವರದಿ ಮಾಡತಕ್ಕದ್ದು. 5. ಆಸ್ತಿಯನ್ನು ಸ್ಥಗಿತಗೊಳಿಸುವ ಅಥವಾ ವಶಪಡಿಸಿಕೊಳ್ಳುವ ಅಧಿಕಾರಗಳು : ಈ ಅಧಿನಿಯಮದ ಅಡಿಯಲ್ಲಿ, ಜಪ್ತಿಗೆ ಒಳಗಾಗಲು ಬದ್ಧವಾಗಿರುವ ಯಾವುದೇ ಆಸ್ತಿಯನ್ನು ಯಾವುದೇ ರೀತಿಯಲ್ಲಿ ಬಚ್ಚಿಡುವ, ವರ್ಗಾಯಿಸುವ ಅಥವಾ ವ್ಯವಹರಿಸುವ ಸಂಭವವಿದೆಯೆಂಂದು ಮತ್ತು ಇದು ಅಧಿವಿಯಮದ ಉದ್ದೇಶವನ್ನು ವಿಫಲಗೊಳಿಸುತ್ತದೆಂದು ಸಕ್ಷಮ ಪ್ರಾಧಿಕಾರಕ್ಕೆ. ಮನದಟ್ಟಾದರೆ. ಅಥವಾ ನಂಬಲು ಕಾರಣವಿದ್ದರೆ, ಅಂಥ ಆಸ್ತಿಯನ್ನು ವಶಪಡಿಸಿಕೊಳ್ಳುವ ಆದೇಶವನ್ನು ಮಾಡಬಹುದು ಅಥವಾ ಅಂಥ ಆಸ್ತಿಯನ್ನು ವಶಪಡಿಸಿಕೊಳ್ಳಲು ಸಾಧ್ಯವಿಲ್ಲದಿರುವಲ್ಲಿ ಅಂಥಆಸ್ತಿಯನ್ನುವಿಶೇಷ ನ್ಯಾಯಾಲಯದ ಪೂರ್ವಾನುಮೋದನೆಯ ಹೊರತು, ವರ್ಗಾಯಿಸತಕ್ಕದ್ದಲ್ಲ ಅಥವಾ ಅನ್ಯಥಾ ವ್ಯವಹರಿಸತಕ್ಕದ್ದಲ್ಲವೆಂದು ಆದೇಶವನ್ನು ಮಾಡತಕ್ಕದ್ದು. 6 ಹಣಕಾಸು ಅಥವಾ ಇತರ ಆಸ್ತಿಯ ಜಪ್ತಿಗೆ. ಆದೇಶ ಮಾಡಿದಾಗ ಮಾಡಿದ ವರ್ಗಾವಣೆಗಳು ಮತ್ತು ಆಕೃತ ಮತ್ತು ಶೂನ್ಯವಾಗತಕ್ಕದ್ದು : ಅಧಿನಿಯಮದ 3ನೇ ಪ್ರಕರಣದ ಅಡಿಯಲ್ಲಿ ರಾಜ್ಯ ಸರ್ಕಾರವು, ಒಂದು ಹಣಕಾಸು ಸಂಸ್ಥೆಯ ಹಣಕಾಸು ಅಥವಾ ಇತರ ಆಸ್ತಿಯ ಜಪ್ತಿಗೆ ತಾತ್ಕಾಲಿಕ ಆದೇಶವನ್ನು ಮಾಡಿರುವಾಗ, ಆದೇಶದಲ್ಲಿ ಉಲ್ಲೇಖಿಸಲಾದಂಥ ಹಣಕಾಸು ಅಥವಾ ಆಸ್ತಿಯನ್ನು ಯಾವುದೇ ರೀರಿಯಲ್ಲಿ ಇತರ ಯಾರೇ ವ್ಯಕ್ತಿಗಳಿಗೆ ವರ್ಗಾಯಿಸತಕ್ಕದ್ದಲ್ಲ ಮತ್ತು ಅಂಥ ವರ್ಗಾವಣೆಯನ್ನು ಮಾಡಿದ್ದರೆ, ಅದು ಅಕೃತ ಹಾಗೂ ಶೂನ್ಯವಾಗತಕ್ಕದ್ದು.
7 ಸಕ್ಷಮ ಪಾಧಿಕಾರವು ವಿಶೇಷ ಪಬ್ಲಿಕ್ಪಾ)ಸಿಕ್ಕ್ಯೂಟರನಿಗೆ ನೆರವಾಗುವುದು : ಸಕ್ಷಮ ಪ್ರಾಧಿಕಾರವು, ವಿಶೇಷ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ನಡೆಸುವುದಕ್ಕೆ ಅಗತ್ಯವಿರಬಹುದಾದಂಥ ನೆರವನ್ನು ವಿಶೇಷ ಪಬ್ಲಿಕ್ಸಾಸಿಕ್ಯೂಟರವಿಗೆ ನೀಡತಕ್ಕದ್ದು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಸಿ. ಶಾಮರಾವ್ ಸರ್ಕಾರದ ಅಧೀನ ಕಾರ್ಯದರ್ಶಿ ಆರ್ಥಿಕ ನಿಯಮಗಳು
ಆಯವಯ ಯ ಸಂಕಲನ ಮತ್ತಿ ಸಮಿತಿ ಶಾಖ್ಯ ಆರ್ಥಾಕ ಇಲಾಖ್ಯ.