ಈ ಅಧಿನಿಯಮದ ಅಡಿಯಲ್ಲಿನ ಅಪರಾಧಿಗಳ ತನಿಖೆಯನ್ನು ದಂಡ ಪ್ರಕ್ರಿಯಾ ಹಂಚಿಕೆ 1973ರ (1974ರ ಕೇಂದ್ರ ಅಧಿನಿಯಮ 2) ಉಪಬಂಧಗಳಿಗನುಸಾರವಾಗಿ ಮಾಡತಕ್ಕದ್ದು. 4. ದೇವದಾಸಿಯರ ಸುರಕ್ಷಿತ ಅಭಿರಕ್ಷೆ-ಈ ಅಧಿನಿಯಮವು ಪ್ರಾರಂಭವಾದ ತರುವಾಯ, ಯಾಮೊಬ್ಬ ದೇವದಾಸಿಯನ್ನು ಮ್ಯಾಜಿಸ್ಟ್ರೇಟರ ಮುಂದೆ ಕರೆತಂದಾಗಲೆಲ್ಲಾ, ಅವರು ತಾವು ಉಪಚಿತವೆಂದು ಭಾವಿಸುವ ಅಂಥ ವಿಚಾರಣೆಯನ್ನು ನಡೆಸಿದ ತರುವಾಯ ಮತ್ತು ದೇವದಾಸಿಯರ ಕಲ್ಯಾಣಕ್ಕೆ ಗಮನ ನೀಡಿ ಅವಳನ್ನು ಅವಳು 18 ವರ್ಷಗಳಿಗೆ ಕಡಿಮೆ ವಯಸ್ಸಾಗಿದ್ದರೆ ಪ್ರಮಾಣೀಕೃತ ಶಾಲೆಗೆ ಮತ್ತು ಅವಳಿಗೆ 18 ವರ್ಷಗಳು ಪೂರ್ತಿಯಾಗಿದ್ದರೆ ರಾಜ್ಯ ಮಹಿಳಾ ಗೃಹಕ್ಕೆ ಒಪ್ಪಿಸಬಹುದು.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
(ಸಹಿ. ಸಿ. ರಾಮಯ್ಯ)
ಸರ್ಕಾರದ ಅಧೀನ ಕಾರ್ಯದರ್ಶಿ,
ಸಮಾಜ ಕಲ್ಯಾಣ ಮತ್ತು ಕಾರ್ಮಿಕ ಇಲಾಖೆ.
ಜೆಎಸ್ಆರ್-233