ಕರ್ನಾಟಕ ರಾಜ್ಯ ಸಿಬಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ಅಧಿನಿಯಮ, 2020ರ (2020ರ ಕರ್ನಾಟಕ ಅಧಿವಿಯಮ 04) 10ನೇ ಪ್ರಕರಣದ (5ನೇ ಉಪಪ್ರಕರಣದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
"(6 ಕಡ್ಡಾಯ ವರ್ಗಾವಣೆ, ವಲಯ ವರ್ಗಾವಣೆಯ ಮೇಲೆ ಅಥವಾ ಸಮರ್ಪಕ ಮರುಹಂ೦ಚಿಕೆಯ ಮೇರೆಗೆ 2019-20ನೇ ವರ್ಷದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನ ಸಂದರ್ಭದಲ್ಲಿ ತಾಲ್ಲೂಕಿನ ಹೊರಗೆ ಅಥವಾ ಪೌಢಶಾಲಾ ಶಿಕ್ಷಕನ ಸಂದರ್ಭದಲ್ಲಿ ಜಿಲ್ಲೆಯ ಹೊರಗೆ ವರ್ಗಾವಣೆಗೊಂಡ ಶಿಕ್ಷಕನ ಸಂಬಂಧದಲ್ಲಿ, ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ಅಧ್ಯಾದೇಶ, 2021ರ ಪ್ರಾರಂಭದ ದಿನಾಂಕದ ನಿಕಟ ತರುವಾಯ ಮಾಡುವ ವರ್ಗಾವಣೆಯಲ್ಲಿ 2019-2020ನೇ ಸಾಲಿನಲ್ಲಿ ವರ್ಗಾವಣೆ ಪೂರ್ವದಲ್ಲಿ ಎಲ್ಲಿ ಕಾರ್ಯನಿವರ್ಹಿಸುತ್ತಿದ್ದರೋ ಆ ಸಂಬಂ೦ಧಪಟ್ಟ ತಾಲ್ಲೂಕು ಅಥವಾ ಜಿಲ್ಲೆಯೊಳಗೆ ಸ್ಮಳವಿಯುಕ್ತಿಯ ಪ್ರಯೋಜನವನ್ನು ನೀಡುವುದಕ್ಕಾಗಿ, ಮುಂಬರುವ ಇತರ ರೀತಿಯ ವರ್ಗಾವಣೆಗಳಿಗೆ ಪೂರ್ವದಲ್ಲಿ ಖಾಲಿ. ಹುದ್ದೆಗಳ ಲಭ್ಯತೆಗೆ ಒಳಪಟ್ಟು ಅವರು ಕಾರ್ಯನಿರ್ವಹಿಸುತ್ತಿರುವ ತಾಲ್ಲೂಕು ಅಥವಾ ಜಿಲ್ಲೆಯೊಳಗೆ ಒಂದು ಸಲದ ಕ್ರಮವಾಗಿ (one time measure) ವಿಯಮಿಸಬಹುದಾದಂತಹ ರೀತಿಯಲ್ಲಿ ವರ್ಗಾವಣೆಯ ಸ್ಮಳವನ್ನು ಆಯ್ಕೆಮಾಡಲು ಅವಕಾಶವನ್ನು ಸಹ ಒದಗಿಸತಕ್ಕದ್ದು." ವಜೂಭಾಯಿವಾಲಾ ಕರ್ನಾಟಕದ ರಾಜ್ಯಪಾಲರು ಕರ್ನಾಟಕ ರಾಜ್ಯಪಾಲರ ಆಹ್ನಾನುಸಾರ ಮತ್ತು ಅವರ ಹೆಸರಿನಲ್ಲಿ, (ಕೆ. ದ್ವಾರಕನಾಥ್ ಬಾಬು) ಸರ್ಕಾರದ ಕಾರ್ಯದರ್ಶಿ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ