Annexure
ಮತ್ತು, ಸದರಿ ಕರಡಿಗೆ ಸಂಬಂಧಿಸಿದಂತೆ ಸ್ವೀಕರಿಸಿರುವ ಆಕ್ಷೇಪಣೆಗಳನ್ನು ಮತ್ತು ಸಲಹೆಗಳನ್ನು ರಾಜ್ಯ ಸರ್ಕಾರವು ಪರಿಗಣಿಸಿರುವುದರಿಂದ.
ಈಗ, ಆದ್ದರಿಂದ, ಕರ್ನಾಟಕ ಅಬಕಾರಿ ಅಧಿನಿಯಮ, 1965 (1966 ರ ಕರ್ನಾಟಕ ಅಧಿನಿಯಮ ಸಂಖ್ಯೆ 21) ರ 71 ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಈ ಮೂಲಕ ಮುಂದಿನ ನಿಯಮಗಳನ್ನು ರಚಿಸುತ್ತದೆ, ಎಂದರೆ:–
ನಿಯಮಗಳು
- ಶೀರ್ಷಿಕೆ ಮತ್ತು ಪ್ರಾರಂಭ:– (1) ಈ ನಿಯಮಗಳನ್ನು ಕರ್ನಾಟಕ ಅಬಕಾರಿ (ಬ್ರೀವರಿ) (ತಿದ್ದುಪಡಿ) ನಿಯಮಗಳು, 2025 ಎಂದು ಕರೆಯತಕ್ಕದ್ದು.
(2) ಅವು, 20ನೇ ಜನವರಿ 2025 ರಿಂದ ಜಾರಿಗೆ ಬರತಕ್ಕದ್ದು.
- 2 ನೇ ನಿಯಮದ ತಿದ್ದುಪಡಿ:– ಕರ್ನಾಟಕ ಅಬಕಾರಿ (ಬ್ರೀವರಿ) ನಿಯಮಗಳು, 1967 ರ ನಿಯಮ 2 ರ ಖಂಡ (ಎಫ್) ರ ಬದಲಾಗಿ ಈ ಮುಂದಿನದನ್ನು ಪ್ರತಿಸ್ಥಾಪಿಸತಕ್ಕದ್ದು, ಎಂದರೆ:–
By Order and in the name of the Governor of Karnataka,
(Bhimappa P Ajoor)
Under Secretary to Government,
Finance Department (Excise)
ಕರ್ನಾಟಕ ಸರ್ಕಾರ
ಸಂಖ್ಯೆ: ಆಇ 5 ಪಿಇಎಸ್ 2024
ಕರ್ನಾಟಕ ಸರ್ಕಾರದ ಸಚಿವಾಲಯ,
ವಿಧಾನ ಸೌಧ,
ಬೆಂಗಳೂರು, ದಿ:8ನೇ ಜನವರಿ 2025
ಅಧಿಸೂಚನೆ– I
ಕರ್ನಾಟಕ ಅಬಕಾರಿ (ಬ್ರೀವರಿ) ನಿಯಮಗಳು, 1967 ಅನ್ನು ಮತ್ತಷ್ಟು ತಿದ್ದುಪಡಿ ಮಾಡುವ ಕರಡನ್ನು, ಕರ್ನಾಟಕ ಅಬಕಾರಿ ಅಧಿನಿಯಮ, 1965 (1966 ರ ಕರ್ನಾಟಕ ಅಧಿನಿಯಮ ಸಂಖ್ಯೆ 21)ರ 71ನೇ ಪ್ರಕರಣದ (1) ನೇ ಉಪ–ಪ್ರಕರಣದ ಮೂಲಕ ಅಗತ್ಯಪಡಿಸಲಾದಂತೆ, ಅಧಿಸೂಚನೆ–I ಸಂಖ್ಯೆ: ಆಇ 5 ಪಿಇಎಸ್ 2024 ರ ದಿನಾಂಕ: 23.08.2024 ನ್ನು ಕರ್ನಾಟಕ ರಾಜ್ಯ ಪತ್ರ ಭಾಗ–IV ಎ ಸಂಖ್ಯೆ: 410, ದಿನಾಂಕ:23.08.2024 ರಲ್ಲಿ ಅವುಗಳನ್ನು ಪ್ರಕಟಿಸಿದ ಹದಿನೈದು ದಿನಗಳೊಳಗಾಗಿ, ಇದರಿಂದ ಬಾಧಿತರಾಗಬಹುದಾದ ಎಲ್ಲಾ ವ್ಯಕ್ತಿಗಳಿಂದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಆಹ್ವಾನಿಸಿ ಪ್ರಕಟಿಸಿರುವುದರಿಂದ.
ಮತ್ತು, ಸದರಿ ರಾಜ್ಯ ಪತ್ರವನ್ನು ದಿನಾಂಕ:23.08.2024ರಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿರುವುದರಿಂದ.