ಕರ್ನಾಟಕ ಸಾಮಾನ್ಯ ಸೇವಾ (ಕಂದಾಯ ಅಧೀನ ಶಾಖೆ) ಗ್ರಾಮಲೆಕ್ಕಿಗರ (ನೌಕರಿಭರ್ತಿ) ನಿಯಮಗಳು, 1970 ನಿಯಮಗಳ ಅನುಕ್ರಮಣಿಕೆ
ಪ್ರಸ್ತಾವನೆ
ನಿಯಮಗಳು:
-
ಹೆಸರು ಮತ್ತು ಪ್ರಾರಂಭ
-
ಗ್ರಾಮಲೆಕ್ಕಿಗರ ಕೇಡರ್
-
ನೇಮಕ ಮಾಡುವ ಪ್ರಾಧಿಕಾರಿ
-
ನೌಕರುಭರ್ತಿ
-
ಆಯ್ಕೆಗಾಗಿನ ಸಮಿತಿ
-
ಪ್ರೊಬೇಷನ್ (ತೆಗೆದುಹಾಕಲಾಗಿದೆ)
-
ತರಬೇತಿ
-
ಗ್ರಾಮಲೆಕ್ಕಿಗರು ಬಂಧಪತ್ರವನ್ನು ಬರೆದುಕೊಡತಕ್ಕುದು.
8ಕ. ಪಂಚಾಯತಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಲು ಹೊಣೆಗಾರಿಕೆ
-
ಸಾಮಾನ್ಯ ನೌಕರಿಭರ್ತಿ ನಿಯಮಗಳ ಅನ್ವಯ
-
ಇತರ ನಿಯಮಗಳ ಅನ್ವಯ
-
ನಿರಸನ ಮತ್ತು ಉಳಿಸುವಿಕೆಗಳು
ಕಂದಾಯ ಸಾಮಾನ್ಯ ಸೇವಾ (ಕಂದಾಯ ಅಧೀನ ಶಾಖೆ) ಗ್ರಾಮಲೆಕ್ಕಿಗರ
(ನೌಕರಿಭರ್ತಿ) ನಿಯಮಗಳು. 1970
ಅಧಿಸೂಚನೆ
ಸಂಖ್ಯೆ: ಆರ್ಡಿ 173 ಎಂವಿಎಸ್ 68, ದಿನಾಂಕ ಬೆಂಗಳೂರು 25ನೇ ಮಾರ್ಚ್ 1970
ಕರ್ನಾಟಕ ಭೂಕಂದಾಯ ಅಧಿನಿಯಮ, 1964 (ಕರ್ನಾಟಕ ಅಧಿನಿಯಮ 1964ರ ಸಂಖ್ಯೆ 12) 16 ಮತ್ತು 197ನೇ ಪ್ರಕರಣಗಳ ಮೂಲಕ ಪ್ರಧಾನ ಮಾಡಿದ ಅಧಿಕಾರಗಳನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಈ ಮೂಲಕ ಈ ಕೆಳಕಂಡ ನಿಯಮಗಳನ್ನು ರಚಿಸುತ್ತದೆ; ಅವುಗಳ ಕರಡನ್ನು ಸದರಿ 197ನೇ ಪ್ರಕರಣದ ಮೂಲಕ ಅಗತ್ಯಪಡಿಸಲಾದಂತೆ 1970ರ ಮಾರ್ಚ್ 5ನೇ ದಿನಾಂಕದ ಕರ್ನಾಟಕ ರಾಜ್ಯಪತ್ರದ ಭಾಗ IV ವಿಭಾಗ (2)ಗ(i)ರಲ್ಲಿ 1970ರ ಫೆಬ್ರವರಿ 24ನೇ ದಿನಾಂಕದ ಜಿಎಸ್ಆರ್ 70 (ಆರ್ಡಿ 173 ಎಂವಿಎಸ್ 68)ದ ಅಧಿಸೂಚನೆಯಲ್ಲಿ ಈ ಹಿಂದೆ ಪ್ರಕಟಿಸಲಾಗಿದೆ ಎಂದರೆ:
- ಹೆಸರು ಮತ್ತು ಪ್ರಾರಂಭ: (1) ಈ ನಿಯಮಗಳನ್ನು ಕರ್ನಾಟಕ ಸಾಮಾನ್ಯ ಸೇವಾ (ಕಂದಾಯ ಅಧೀನ ಶಾಖೆ) ಗ್ರಾಮ ಲೆಕ್ಕಿಗರ (ನೌಕರಿಭರ್ತಿ) ನಿಯಮಗಳು, 1970 ಎಂದು ಕರೆಯತಕ್ಕುದು.
(2) ಅವು ಕರ್ನಾಟಕ ರಾಜ್ಯಪತ್ರದಲ್ಲಿ ಅವುಗಳನ್ನು ಪ್ರಕಟಿಸಿದ ದಿನಾಂಕದಂದು ಜಾರಿಗೆ ಬರತಕ್ಕದ್ದು.
-
ಗ್ರಾಮಲೆಕ್ಕಿಗರ ಕೇಡರ್: ಗ್ರಾಮ ಲೆಕ್ಕಿಗರ ಕೇಡರ್ ಜಿಲ್ಲಾವಾರು ಆಗಿರತಕ್ಕದ್ದು ಮತ್ತು ಅದರ ವೇತನ ಶ್ರೇಣಿಯು ರಾಜ್ಯ ಸರ್ಕಾರವು ನಿಗದಿಪಡಿಸಬಹುದಾದಂತೆ ಇರತಕ್ಕುದು.
-
ನೇಮಕ ಮಾಡುವ ಪ್ರಾಧಿಕಾರಿ: ಗ್ರಾಮಲೆಕ್ಕಿಗನಿಗೆ ಸಂಬಂಧಿಸಿದಂತೆ ನೇಮಕ ಮಾಡುವ ಪ್ರಾಧಿಕಾರಿಯು ಜಿಲ್ಲೆಯ ಡೆಪ್ಯೂಟಿ ಕಮೀಷನರಾಗಿರತಕ್ಕದು.
-
ನೌಕರಿ ಭರ್ತಿ: (1) ಗ್ರಾಮ ಲೆಕ್ಕಿಗರ ಕೇಡರಿಗೆ ನೌಕರಿಭರ್ತಿಯನ್ನು
(i) ಗ್ರಾಮ ಅಧಿಕಾರಿಗಳಾಗಿ ಸೇವೆಸಲ್ಲಿಸಿರುವ ವ್ಯಕ್ತಿಗಳು,
(1ಕ) * * *
(ii) ಎಸ್ಎಸ್ಎಲ್ಸಿ ಪರೀಕ್ಷೆ ಅಥವಾ ರಾಜ್ಯಸರ್ಕಾರವು ಅದಕ್ಕೆ ಸಮಾನವಾದುದೆಂದು ಘೋಷಿಸಿದ ಯಾವುದೇ ಇತರ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ನೌಕರಿ ಭರ್ತಿಯ ಕಾಲದಲ್ಲಿ ಜಾರಿಯಲ್ಲಿದ್ದ ನಿಯಮಗಳಿನುಸಾರವಾಗಿ ಪಂಚಾಯತಿ ಕಾರ್ಯದರ್ಶಿಗಳೆಂದು ಕ್ರಮಬದ್ಧವಾಗಿ ನೌಕರು ಭರ್ತಿಯಾಗಿರುವ ಮತ್ತು ಪಂಚಾಯತಿ ಕಾರ್ಯದರ್ಶಿಗಳೆಂದು ಕೆಲಸ ಮಾಡುತ್ತಿರುವ ವ್ಯಕ್ತಿಗಳು.
(iii) (ಕ) ಮಾಧ್ಯಮಿಕ ಶಾಲೆಗಳ ಪರೀಕ್ಷೆ ಅಥವಾ ರಾಜ್ಯ ಸರ್ಕಾರವು ಅದಕ್ಕೆ ಸಮವಾದುದೆಂದು ಘೋಷಿಸಿದ ಯಾವುದೇ ಇತರ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ;
(ಖ) (ii) ನೆಯದರ ಅಡಿಯಲ್ಲಿ ಅರ್ಹ ವ್ಯಕಿಗಳು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಿಲ್ಲದಿದ್ದರೆ ಸಂದರ್ಭಾನುಸಾರ, ಪಂಚಾಯತಿ ಕಾರ್ಯದರ್ಶಿಗಳೆಂದು 10 ವರ್ಷಗಳಿಗೆ ಕಡಿಮೆ ಇಲ್ಲದ ಸೇವೆ ಸಲ್ಲಿಸಿರುವ:
ನೌಕರಿಭರ್ತಿಯ ಕಾಲದಲ್ಲಿ ಜಾರಿಯಲ್ಲಿದ್ದ ನಿಯಮಗಳಿಗನುಸಾರವಾಗಿ ಕ್ರಮಬದ್ಧವಾಗಿ ಪಂಚಾಯತಿ ಕಾರ್ಯದರ್ಶಿಗಳೆಂದು ಕೆಲಸ ಮಾಡುತ್ತಿರುವ ವ್ಯಕ್ತಿಗಳು;
(iv) (o o o)
(v) ಮೇಲೆ ಹೇಳಲಾದ ಯಾವುದೇ ಪ್ರವರ್ಗದ ಅಡಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವ್ಯಕ್ತಿಗಳು ಲಭ್ಯವಿಲ್ಲದಿದ್ದರೆ ಇತರರು
ಇವರಿಂದ ನೇರ ನೌಕರಿಭರ್ತಿಯ ಮೂಲಕ ಮಾಡತಕ್ಕದ್ದು.
(2) (i) ನೇ ಉಪನಿಯಮದ (ii) ಮತ್ತು (iii)ನೇ ಪ್ರವರ್ಗಗಳಲ್ಲಿ ಉಲ್ಲೇಖಿಸಲಾದ ವ್ಯಕ್ತಿಗಳನ್ನು ಹೊರತುಪಡಿಸಿ, ಯಾವನೇ ವ್ಯಕ್ತಿಯು ಅವನು ಎಸ್ಎಸ್ಎಲ್ಸಿ ಪರೀಕ್ಷೆ ಅಥವಾ ಅದಕ್ಕೆ ಸಮಾನವಾದುದೆಂದು ರಾಜ್ಯ ಸರ್ಕಾರವು ಘೋಷಿಸಿದ ಯಾವುದೇ ಇತರ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದ ಹೊರತು. ಈ ನಿಯಮಗಳ ಮೇರೆಗೆ ನೇಮಕಾತಿಗಾಗಿ ಅರ್ಹನಾಗಿರತಕ್ಕುದ್ದಲ್ಲ.
(3) (i) ನೇ ಉಪ-ಪ್ರಕರಣದ ಮೇರೆಗೆ ನೇಮಕಾತಿಗಾಗಿ ವಯೋಮಿತಿಯು
(i) ಯಾವುದೇ ಅನುಸೂಚಿತ ಜಾತಿ ಅಥವಾ ಅನುಸೂಚಿತ ಬುಡಕಟ್ಟುಗಳಿಗೆ ಸೇರಿದ ವ್ಯಕ್ತಿಯ ಸಂದರ್ಬದಲ್ಲಿ 33 ವರ್ಷಗಳು; ಮತ್ತು
(ii) ಇತರರ ಸಂದರ್ಭದಲ್ಲಿ 28 ವರ್ಷಗಳು ಆಗಿರತಕ್ಕುದು.
ಪರಂತು, ಗ್ರಾಮ ಅಧಿಕಾರಿಯಾಗಿ ಅಥವಾ ಪಂಚಾಯತಿ ಕಾರ್ಯದರ್ಶಿಯಾಗಿ ಸೇವೆಯನ್ನು ಸಲ್ಲಿಸಿರುವ ವ್ಯಕ್ತಿಯ ಸಂದರ್ಬದಲ್ಲಿ ಅಂಥ ವಯಸ್ಸು 1ನೇ ಏಪ್ರಿಲ್ 1967ರಂದು 50 ವರ್ಷಗಳನ್ನು ಮೀರತಕ್ಕುದಲ್ಲ;
ಮತ್ತೂ ಪರಂತು, ಸ್ಥಳೀಯ ಅಭ್ಯರ್ಥಿಗಳ ಸಂದರ್ಭದಲ್ಲಿ ಅಂಥ ವಯಸ್ಸು 1ನೇ ಜನವರಿ 1965 ರಂದು ಇದ್ದಂತೆ ಇತರಕ್ಕದ್ದು.
ವಿವರಣೆ:- ಈ ನಿಯಮದ ಉದ್ದೇಶಗಳಿಗಾಗಿ ‘‘ಗ್ರಾಮ ಅಧಿಕಾರಿ’’ ಎಂದರೆ, ಕರ್ನಾಟಕ ಗ್ರಾಮ ಹುದ್ದೆಗಳ ರದ್ದಿಯಾತಿ ಅಧಿನಿಯಮ, 1961ರ ಕರ್ನಾಟಕ ಅಧಿನಿಯಮ (1961ರ ಸಂಖ್ಯೆ 14)ರಲ್ಲಿ ಪರಿಭಾಷಿಸಿದಂತೆ ‘‘ಕೆಳದರ್ಜೆಯ ಗ್ರಾಮಹುದ್ದೆ’’ ಯನ್ನು ಹೊರತುಪಡಿಸಿ, ಗ್ರಾಮ ಹುದ್ದೆಯನ್ನು ಧಾರಣ ಮಾಡಿದ್ದ ವ್ಯಕ್ತಿ.
- ಆಯ್ಕೆಗಾಗಿ ಸಮಿತಿ: (1).
ಅಧ್ಯಕ್ಷ:
(i) ಜಿಲ್ಲೆಯ ಡೆಪ್ಯೂಟಿ ಕಮೀಷನರ್.
ಸದಸ್ಯ ಕಾರ್ಯದರ್ಶಿ
(ii) ಜಿಲ್ಲೆಯ ಡೆಪ್ಯೂಟಿ ಕಮಿಷನರ ಕೇಂದ್ರ ಕಾರ್ಯಸ್ಥಾನದ ಸಹಾಯಕ
ಸದಸ್ಯರು
(iii) ಸರ್ಕಾರವು ನಾಮನಿರ್ದೇಶನ ಮಾಡಿದ ಮೂವರನ್ನು ಮೀರದ ಸದಸ್ಯರು ಅವರ ಪೈಕಿ ಒಬ್ಬನು ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಸೇರಿದ ವ್ಯಕ್ತಿಯಾಗಿರತಕ್ಕುದು ಮತ್ತು ಒಬ್ಬನು ಆ ಜಿಲ್ಲೆಯಲ್ಲಿ ಸಮಾಜ ಸೇವೆಯಲ್ಲಿ ವಿಶೇಷ ಜ್ಞಾನ ಅಥವಾ ವ್ಯಾವಹಾರಿಕ ಅನುಭವನ್ನು ಹೊಂದಿರುವ ವ್ಯಕ್ತಿಯಾಗಿರತಕ್ಕುದು ಮತ್ತು ಇನ್ನೊಬ್ಬನು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದವನಾಗಿರತಕ್ಕುದು.
ಇವರುಗಳನ್ನು ಒಳಗೊಂಡ ಸರ್ಕಾವರು ರಚಿಸತಕ್ಕಂಥ ಪ್ರತಿಯೊಂದು ಜಿಲ್ಲೆಗಾಗಿ ಒಂದು ಆಯ್ಕೆ ಸಮಿತಿ ಇರತಕ್ಕದ್ದು.
(2) ಸಮಿತಿಯು ಗ್ರಾಮ ಲೆಕ್ಕಿಗರೆಂದು ನೇಮಕ ಮಾಡುವುದಕ್ಕಾಗಿ ಅರ್ಜಿಗಳನ್ನು ಕರೆಯತಕ್ಕದು ಮತ್ತು ಆ ಆಯ್ಕೆಯನ್ನು ಕರ್ನಾಟಕ ರಾಜ್ಯ ಸಿವಿಲ್ ಸೇವಾ (ಆಯ್ಕೆಯ ಮೂಲಕ ನೌಕರಿಭರ್ತಿ) ನಿಯಮಗಳ 1967 ಇದರಲ್ಲಿ ವಿಧಿಸಿರುವ ರೀತಿಯಲ್ಲಿ ಆಯ್ಕೆಯನ್ನು ಮಾತಕ್ಕದು.
(3) ಸಮಿತಿಯ ತೀರ್ಮಾನವು ಡಿವಿಜನಲ್ ಕಮೀಷನರ್ ಅನುಮೋದನೆಗೆ ಒಳಪಟ್ಟು ಅಂತಿಮವಾಗಿರತಕ್ಕದು.
(4) ಡಿವಿಜನಲ್ ಕಮೀಷನರನು ಅನುಮೋದಿಸಿದ ಪಟ್ಟಿಯನ್ನು ಪ್ರಕಟಿಸತಕ್ಕುದು ಮತ್ತುಸದರಿ ಪಟ್ಟಿಯಲ್ಲಿ ಆಯ್ಕೆ ಮಾಡಿದ ವ್ಯಕ್ತಿಗಳ ಹೆಸರುಗಳನ್ನು ವ್ಯವಸ್ಥೆ ಮಾಡಿರುವಂಥ ಕ್ರಮದಲ್ಲಿ ನೇಮಕಾತಿಗಳನ್ನು ಮಾಡತಕ್ಕುದು.
-
ಪ್ರೋಬೇಷನ್ (o o o)
-
ತರಬೇತಿ: ಗ್ರಾಮಲೆಕ್ಕಿಗನಾಗಿ ನೇಮಕಗೊಂಡ ಪ್ರತಿಯೊಬ್ಬ ವ್ಯಕ್ತಿಯನ್ನು ಪ್ರೊಬೇಷನ್ನಿನ ಅವಧಿಯಲ್ಲಿ ರಾಝ್ಯ ಸರ್ಕಾರವು ನಿರ್ಧರಿಸಬಹುದಾದ ಮೂರು ತಿಂಗಳಗಳನ್ನು ಮೀರದ ಅವಧಿಗಾಗಿ ತರಬೇತಿಯ ಕ್ರಮ ಮತ್ತು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬೇಕೆಂದು ಅಗತ್ಯಪಡಿಸಬಹುದು.
ಪರಂತು: 11ನೇ ನಿಯಮದ (1)ನೇ ಉಪ-ನಿಯಮದ ಮೇರೆಗೆ ನಿರಸನಗೊಳಿಸಲಾದ ನಿಯಮಗಳ 12ನೆ ನಿಯಮದ ಮೇರೆಗಿನ ತರಬೇತಿಯನ್ನು ಯಶಸ್ವಿಯಾಗಿ ಮುಗಿಸಲಾಗಿರುವ ವ್ಯಕ್ತಿಗಳನ್ನು ತರಬೇತಿ ಪಡೆಯಲು ಅಗತ್ಯಪಡಿಸತಕ್ಕುದಲ್ಲ.
- ಗ್ರಾಮಲೆಕ್ಕಿಗರು ಬಂಧಪತ್ರವನ್ನು ಬರೆದುಕೊಡತಕ್ಕದು: (1) ಗ್ರಾಮ ಲೆಕ್ಕಿಗನಾಗಿ ನೇಮಕಗೊಂಡ ಪ್ರತಿಯೊಬ್ಬ ವ್ಯಕ್ತಿಯು ನಗದು ರೂಪದಲ್ಲಿ ಇತರ ಬೆಲೆಬಾಳುವ ಭದ್ರತೆಯ ರೂಪದಲ್ಲಿ ಮೂರುನೂರು ರೂಪಾಯಿಗಳ ಭದ್ರತೆಯನ್ನು ಒದಗಿಸತಕ್ಕದು ಅಥವಾ ಸದರಿ ಮೊಬಲಗಿಗಾಗಿ ಜಾಮೀನುದಾರನೊಂದಿಗೆ ಬಂಧಪತ್ರವನ್ನು ಬರೆದುಕೊಡತಕ್ಕದ್ದು.
ವಿವರಣೆ: ಈ ಉಪನಿಯಮದಲ್ಲಿ ‘‘ಬೆಲೆಬಾಳುವ ಭದ್ರತೆ’ ‘ಎಂದರೆ ಅಂಚೆ ಕಛೇರಿ ಉಳಿತಾಯಗಳ ಬ್ಯಾಂಕ್ ಠೇವಣಿ ಸರ್ಕಾರಿ ಪ್ರಾಮಿಸರಿ ನೋಟ್ಗಳ ಅಥವಾ ರಾಷ್ಟ್ರೀಯ ಅಥವಾ ಅಂಚೆ ಕಛೇರಿ ಉಳಿತಾಯ ಪ್ರಮಾಣ ಪತ್ರಗಳು.
(2) (1)ನೇ ಉಪನಿಯಮದ ಉಪಬಂಧಗಳನ್ನು ಪಾಲಿಸಲು ತಪ್ಪುವ ವ್ಯಕ್ತಿಗಳನ್ನು ಸೇವೆಯಿಂದ ತೆಗೆದುಹಾಕಲು ಗುರಿಯಾಗಿರತಕ್ಕುದು.
8ಕ. ಪಂಚಾಯತಿ ಕಾರ್ಯದಶಿಯಾಗಿ ಸೇವೆ ಸಲ್ಲಿಸಲು ಹೊಣೆಗಾರಿಕೆ: ಹನ್ನೆರಡು ಸಾವಿರ ರೂಪಾಯಿಗಳಿಗಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವ ಗ್ರಾಮ ಪಂಚಾಯಿತಿಗಾಗಿ ಪ್ರತ್ಯೇಕ ಪಂಚಾಯತಿ ಕಾರ್ಯದರ್ಶಿಯನ್ನು
ನೇಮಕ ಮಾಡಿಲ್ಲದೆ ಇರುವಲ್ಲಿ ಸದರಿ ಪಂಚಾಯತಿಯ ಇರುವ ಗ್ರಾಮದ ಗ್ರಾಮಲೆಕ್ಕಿಗನು ಹಾಗೆ ನೇಮಕ ಗೊಂಡರೆ, ಅವನು ಸದರಿ ಪಂಚಾಯತಿಯ ಪದನಿಮಿತ್ತ ಕಾರ್ಯದರ್ಶಿಯಾಗಿರತಕ್ಕುದು.
-
ಸಾಮಾನ್ಯ ನೌಕರಿಭರ್ತಿ ನಿಯಮಗಳ ಅನ್ವಯ: ಈ ನಿಯಮಗಳಲ್ಲಿ ಯಾವ ವಿಷಯಗಳಿಗೆ ಸಂಬಂಧಿಸಿದಂತೆ ಉಪಬಂಧಗಳನ್ನು ಮಾಡಲಾಗಿದೆಯೋ ಆ ವಿಷಯಗಳನ್ನು ಹೊರತುಪಡಿಸಿ, ಕರ್ನಾಟಕ ರಾಜ್ಯ ಸಿವಿಲ್ ಸೇವಾ (ಸಾಮಾನ್ಯ ನೌಕರಿಭರ್ತಿ) ನಿಯಮಗಳು, 1957ರ ಉಪಬಂಧಗಳು, ಈ ನಿಯಮಗಳ ಮೇರೆಗಿನ ನೌಕರಿಭರ್ತಿಯ ಉದ್ದೇಶಗಳಿಗಾಗಿ ಅನ್ವಯವಾಗತಕ್ಕದ್ದು.
-
ಇತರ ನಿಯಮಗಳ ಅನ್ವಯ : (1) ಕರ್ನಾಟಕ ಸಿವಿಲ್ ಸೇವಾ ನಿಯಮಗಳು ಕರ್ನಾಟಕ ಸಿವಿಲ್ ಸೇವಾ (ವರ್ತನೆ) ನಿಯಮಗಳು, 1966 ಮತ್ತು ತತ್ಕಾಲದಲ್ಲಿ ಜಾರಿಯಲ್ಲಿರುವ ಇತರ ನಿಯಮಗಳು, ಸಂವಿಧಾನದ 309ನೇ ಅನುಚ್ಛೇದದ ಪರಂತುಕದ ಮೇರೆಗೆ ಸರ್ಕಾರಿ ನೌಕರರ ಸೇವಾ ಷರತ್ತುಗಳನ್ನು ನಿಯಂತ್ರಿಸಲು ಕಾಲಕಾಲಕ್ಕೆ ಮಾಡಬಹುದಾದಂಥ ಇತರ ನಿಯಮಗಳು ಮತ್ತು ತಿದ್ದುಪಡಿಗಳೊಂದಿಗೆ ಈ ನಿಯಮಗಳ ಉಪಬಂಧಗಳಿಗೆ ಅವುಗಳು ಅಸಂಗತವಾಗದಿರುವಷ್ಟರ ಮಟ್ಟಿಗೆ ಈ ನಿಯಮಗಳ ಮೇರೆಗೆ ನೌಕರಿ ಭರ್ತಿ ಮಾಡಿಕೊಂಡ ವ್ಯಕ್ತಿಗಳಿಗೆ ಅನ್ವಯವಾಗತಕ್ಕುದು.
(2) ಈ ನಿಯಮಗಳ ಮೇರೆಗಿನ ನೇಮಕಾತಿಗಳು, ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಲು ಮತ್ತು ಇತರ ಹಿಂದುಳಿದ ವರ್ಗಗಳಿಗಾಗಿನ ಹುದ್ದೆಗಳ ಮೀಸಲಾತಿಯ ಬಗ್ಗೆ ಸರ್ಕಾರವು ಕಾಲಕಾಲಕ್ಕೆ ಹೊರಡಿಸಿದ ಆದೇಶಗಳಿಗೆ ಒಳಪಟ್ಟಿರತಕ್ಕುದು.
- ನಿರಸನ ಮತ್ತು ಉಳಿಸುವಿಕೆಗಳು: (1) ಕರ್ನಾಟಕ ಸಾಮಾನ್ಯ ಸೇವಾ (ಕಂದಾಯ ಅಧೀನ ಶಾಖೆ) ಗ್ರಾಮಲೆಕ್ಕಿಗರ (ಕೇಡರ್ ಮತ್ತು ನೌಕರಿಭರ್ತಿ) ನಿಯಮಗಳು, 1961 ಇದನ್ನು ಈ ಮೂಲಕ ನಿರಸನಗೊಳಿಸಲಾಗಿದೆ.
ಪರಂತು, ಅಂಥ ನಿರಸನವು, ಸದರಿ ನಿಯಮಗಳು, ಜಾರಿಯಲ್ಲಿದ್ದ ಅವಧಿಯಲ್ಲಿ ಸದರಿ ನಿಯಮಗಳಿಗೆ ಅನುಸಾರವಾಗಿ ನೇಮಕಗೊಂಡ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಸದರಿ ನಿಯಮಗಳ ಪೂರ್ವ ಪ್ರವರ್ತನೆಗೆ ಬಾಧಕವನ್ನುಂಟುಮಾಡತಕ್ಕುದಲ್ಲ.
(2) ಈ ನಿಯಮಗಳಲ್ಲಿ ಏನೇ ಅಡಕವಾಗಿದ್ದಾಗ್ಯೂ (1)ನೇ ಉಪನಿಯಮದ ಮೇರೆಗೆ ನಿರಸನಗೊಳಿಸಿದ ನಿಯಮಗಳ 11ನೇ ನಿಯಮಕ್ಕೆ ಅನುಸಾರವಾಗಿ ಕಮೀಷನರನು ಆಯ್ಕೆ ಮಾಡಿದ ಮತ್ತು ಅನುಮೋದಿಸಿದ ವ್ಯಕ್ತಿಗಳ ಪಟ್ಟಿಯನ್ನು ಈ ನಿಯಮಗಳ 5ನೇ ನಿಯಮಕ್ಕೆ ಅನುಸಾರವಾಗಿ ಡಿವಿಜನಲ್ ಕಮೀಷನರು ಆಯ್ಕೆ ಮಾಡಿದ ಮತ್ತು ಅನುಮೋದಿಸಿದ ವ್ಯಕ್ತಿಗಳ ಪಟ್ಟಿಯಾಗಿರುವುದಾಗಿ ಭಾವಿಸತಕ್ಕದ್ದು ಮತ್ತು ನೇಮಕಾತಿಗಳನ್ನು ಅಂತಹ ಪಟ್ಟಿಗಳಿಂದ ಸದರಿ 5ನೇ ನಿಯಮದಲ್ಲಿ ನಿರ್ದಿಷ್ಟಪಡಿಸಿದ ರೀತಿಯಲ್ಲಿ ಮಾಡತಕ್ಕದ್ದು.