ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರಲ್ಲಿ, ನಿಯಮ 22-ಎ ಯ, ಉಪ-ನಿಯಮ (1)ರ ಕೋಷ್ಟಕದ ನಮೂದುಗಳನ್ನು ಈ ಕೆಳಕಂಡಂತೆ ತಿದ್ದುಪಡಿ ಮಾಡಲಾಗಿದೆ.
“ಕೋಷ್ಟಕ ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ 19, 20, 21 ಮತ್ತು 22ರ ಮೇರೆಗಿನ ನಿಯಮಗಳ ಪ್ರಕಾರ ಸರ್ಕಾರಿ ಭೂಮಿಯನ್ನು ಮಂಜೂರು ಮಾಡುವಾಗ / ಗುತ್ತಿಗೆ ಕೊಡುವಾಗ ಕೃಷಿಯೇತರ ಮಾರುಕಟ್ಟೆ ಮೌಲ್ಯ/ಮಾರ್ಗಸೂಚಿ ಮೌಲ್ಯವನ್ನು ನಿಗದಿ ಮಾಡಲು.
| ಕ್ರಮ ಸಂಖ್ಯೆ | ಉದ್ದೇಶ | ಮಂಜೂರಾತಿ (ಖಾಸಗಿ) | ಗುತ್ತಿಗೆ (ಖಾಸಗಿ) | ||
| ಎಸ್ಸಿ/ಎಸ್ಟಿ | ಇತರರು | ಎಸ್ಸಿ/ಎಸ್ಟಿ | ಇತರರು | ||
| 1 | ಕೈಗಾರಿಕೆ (ಸಣ್ಣ ಮತ್ತು ಮಧ್ಯಮ ಮತ್ತು ದೊಡ್ಡ ಪ್ರಮಾಣ) | ಕೃಷಿಯೇತರ ಮಾರ್ಗಸೂಚಿ ಮೌಲ್ಯದ ಶೇಕಡಾ 50ರಷ್ಟು | ಕೃಷಿಯೇತರ ಮಾರುಕಟ್ಟೆ ಮೌಲ್ಯ | ಕೃಷಿಯೇತರ ಮಾರ್ಗಸೂಚಿ ಮೌಲ್ಯದ ಶೇಕಡಾ 2.5ರಷ್ಟು | ಕೃಷಿಯೇತರ ಮಾರುಕಟ್ಟೆ ಮೌಲ್ಯದ ಶೇಕಡಾ 2.5ರಷ್ಟು |
| 2 | ಶಿಕ್ಷಣ (ಪ್ರಾಥಮಿಕದಿಂದ ಪ್ರೌಢ ಶಿಕ್ಷಣವನ್ನು ಒಳಗೊಂಡ ತಾಂತ್ರಿಕ, ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಗಳು) | ಕೃಷಿಯೇತರ ಮಾರ್ಗಸೂಚಿ ಮೌಲ್ಯದ ಶೇಕಡಾ 50ರಷ್ಟು | ಕೃಷಿಯೇತರ ಮಾರುಕಟ್ಟೆ ಮೌಲ್ಯ | ಕೃಷಿಯೇತರ ಮಾರ್ಗಸೂಚಿ ಮೌಲ್ಯದ ಶೇಕಡಾ 2.5ರಷ್ಟು | ಕೃಷಿಯೇತರ ಮಾರುಕಟ್ಟೆ ಮೌಲ್ಯದ ಶೇಕಡಾ 2.5ರಷ್ಟು |
| 3 | ಕಲ್ಯಾಣ ಚಟುವಟಿಕೆಗಳು (ಹಾಸ್ಟೆಲ್/ ವಿದ್ಯಾರ್ಥಿ ನಿಲಯ/ ಆಸ್ಪತ್ರೆ / ಅನಾಥಾಲಯ / ವೃದ್ಧಾಶ್ರಮ ಗೃಹಗಳು, ಇತ್ಯಾದಿ) | ಕೃಷಿಯೇತರ ಮಾರ್ಗಸೂಚಿ ಮೌಲ್ಯದ ಶೇಕಡಾ 10ರಷ್ಟು | ಕೃಷಿಯೇತರ ಮಾರುಕಟ್ಟೆ ಮೌಲ್ಯದ ಶೇಕಡಾ 25 ರಷ್ಟು | ಕೃಷಿಯೇತರ ಮಾರ್ಗಸೂಚಿ ಮೌಲ್ಯದ ಶೇಕಡಾ 2.5ರಷ್ಟು | ಕೃಷಿಯೇತರ ಮಾರ್ಗಸೂಚಿ ಮೌಲ್ಯದ ಶೇಕಡಾ 2.5ರಷ್ಟು |
| 4 | ಧಾರ್ಮಿಕ (ಧರ್ಮಾರ್ಥ ನ್ಯಾಸಗಳು) | ಕೃಷಿಯೇತರ ಮಾರ್ಗಸೂಚಿ ಮೌಲ್ಯದ ಶೇಕಡಾ 25ರಷ್ಟು | ಕೃಷಿಯೇತರ ಮಾರ್ಗಸೂಚಿ ಮೌಲ್ಯದ ಶೇಕಡಾ 50ರಷ್ಟು | ಕೃಷಿಯೇತರ ಮಾರ್ಗಸೂಚಿ ಮೌಲ್ಯದ ಶೇಕಡಾ 2.5ರಷ್ಟು | ಕೃಷಿಯೇತರ ಮಾರ್ಗಸೂಚಿ ಮೌಲ್ಯದ ಶೇಕಡಾ 2.5ರಷ್ಟು |
| 5 | ಬೇಸಾಯ | ವರ್ಷಕ್ಕೆ ಭೂ ಕಂದಾಯದ 20 ಪಟ್ಟು ಬಾಡಿಗೆ | ವರ್ಷಕ್ಕೆ ಭೂ ಕಂದಾಯದ 20 ಪಟ್ಟು ಬಾಡಿಗೆ | ||
| 6 | ಕೃಷಿಯೇತರ (ಮೇಲೆ ಉದಾಹರಿಸಿದ ಉದ್ದೇಶಗಳನ್ನು ಹೊರತುಪಡಿಸಿ) | ಕೃಷಿಯೇತರ ಮಾರ್ಗಸೂಚಿ ಮೌಲ್ಯದ ಶೇಕಡಾ 2.5ರಷ್ಟು | ಕೃಷಿಯೇತರ ಮಾರ್ಗಸೂಚಿ ಮೌಲ್ಯದ ಶೇಕಡಾ 2.5ರಷ್ಟು | ||
| 7 | ಹೊಳೆಗಳು, ಚಂಡಮಾರುತದ ನೀರು, ಚರಂಡಿಗಳು, ನಾಳಗಳು, ಸರೋವರಗಳು, ಟ್ಯಾಂಕ್ಗಳು ಮತ್ತು ಎಲ್ಲಾ ಜಲಮೂಲಗಳನ್ನು ಹೊರತುಪಡಿಸಿ ಭೂ ಬಂಧಿತ ಸರ್ಕಾರಿ ಜಮೀನುಗಳು | (i) ಕೃಷಿ ಭೂಮಿಯೊಳಗೆ ಬರುವ ಖರಾಬ್ ಭೂಮಿಯ ದರವನ್ನು ಸುತ್ತಮುತ್ತಲಿನ ಕೃಷಿ ಭೂಮಿಯ ಮಾರ್ಗಸೂಚಿ ಮೌಲ್ಯದ ಅನ್ವಯ ನಿಗದಿಪಡಿಸಲಾಗುತ್ತದೆ. (ii) ಪರಿವರ್ತಿತ ಭೂಮಿಯಲ್ಲಿ ಬರುವ ಖರಾಬ್ ಭೂಮಿಗೆ ದರವನ್ನು ಯೋಜನೆಯ ಅನುಮೋದನೆಯಿಲ್ಲದೆ ಆ ದಿನ ಚಾಲ್ತಿಯಲ್ಲಿರುವ ಕೇಂದ್ರ ಮೌಲ್ಯಮಾಪನ ಸಮಿತಿಯು ಸೂಚಿಸಿದಂತೆ ಕೃಷಿಯೇತರ ಮಾರ್ಗಸೂಚಿ ಮೌಲ್ಯದ ಅನ್ವಯ ನಿಗದಿಪಡಿಸಲಾಗುತ್ತದೆ. (iii) ಪರಿವರ್ತನೆಗೊಂಡ ಮತ್ತು ಅನುಮೋದಿತ ವಿನ್ಯಾಸದೊಳಗೆ ಬರುವ ಖರಾಬ್ ಭೂಮಿಯ ದರವನ್ನು ತಕ್ಷಣದ ಸುತ್ತಮುತ್ತಲಿನ ಪರಿವರ್ತನೆಗೊಂಡ, ಅಭಿವೃದ್ಧಿಪಡಿಸಿದ ಮತ್ತು ಅನುಮೋದಿತ ಯೋಜನೆಯುಳ್ಳ ಭೂಮಿಯ ಚದರ ಅಡಿಗಳಲ್ಲಿನ ಕೃಷಿಯೇತರ ಮಾರ್ಗಸೂಚಿ ಮೌಲ್ಯದ ಅನ್ವಯ ನಿಗದಿಪಡಿಸಲಾಗುತ್ತದೆ. | |||
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
(ಸಿ. ಬಲರಾಮ್)
ಸರ್ಕಾರದ ಅಧೀನ ಕಾರ್ಯದರ್ಶಿ
ಕಂದಾಯ ಇಲಾಖೆ (ಭೂ ಮಂಜೂರಾತಿಗಳು-1)