ಸದರಿ ನಿಯಮಗಳ 23ನೇ ನಿಯಮದಲ್ಲಿ, 3ನೇ ಪರಂತುಕದ ತರುವಾಯ, ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು, ಎಂದರೆ:-
"ಮತ್ತು ಅಲ್ಲದೆ, ನಿಯಮ 5ರಲ್ಲಿ ಗೊತ್ತು ಮಾಡಿದ ಪರಿಬಂಧಗಳ ಅಧೀನಕ್ಕೆ ಒಳಪಟ್ಟು, ಮೊದಲ ಪರಂಂತುಕದಲ್ಲಿ ನಿರ್ದಿಷ್ಟಪಡಿಸಿದ ಇತರ ನಿರ್ಬಂಧಗಳು ದಿನಾಂಕ:01-01-2000 ರಂದು ಅಥವಾ ನಂತರ ಸನ್ನದುದಾರನು ಅಥವಾ ಗುತ್ತಿಗೆದಾರನು. ಮರಣ ಹೊಂದಿದ ಸಂದರ್ಭದಲ್ಲಿ ಊರ್ಜಿತಗೊಳಿಸಿದ ಮತ್ತು ನವೀಕರಿಸಿದ ಅಂತಹ ಸ್ಥಗಿತಗೊಂಡ ಸಿಎಲ್-2 (ಚಿಲ್ಲರೆ ಅಂಗಡಿ) ಸನ್ನದುಗಳ ಸ್ಥಳಾಂತರಕ್ಕೆ ಅನ್ವಯಿಸುವುದಿಲ್ಲ".
ಕರ್ನಾಟಕದ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,
(ಮಂಜುಳಾ ನಟರಾಜ್)
ಸರ್ಕಾರದ ಅಧೀನ ಕಾರ್ಯದರ್ಶಿ,
ಆರ್ಥಿಕ ಇಲಾಖೆ (ಅಬಕಾರಿ)
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು