(1) ಈ ಅಧ್ಯಾದೇಶವನ್ನು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳು ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಅಧ್ಯಾದೇಶ, 2020 ಎಂದು ಕರೆಯತಕ್ಕದ್ದು.
(2) 2ನೇ ಪ್ರಕರಣಂ () ನೇ ಉಪ ಪ್ರಕರಣ, (2)ನೇ ಉಪ ಪ್ರಕರಣಂ (ಸಿ) ಖಂಡ, (4)ನೇ ಉಪ ಪ್ರಕರಣದ (ಡಿ) ಖಂಡ, (20)ನೇ ಉಪ ಪ್ರಕರಣ, (22)ನೇ ಉಪ ಪ್ರಕರಣ, (23)ನೇ ಉಪ ಪ್ರಕರಣಂ (1)ನೇ ಖಂಡ ಮತ್ತು (25)ನೇ ಉಪ ಪ್ರಕರಣಗಳು 2001ರ ಸೆಪ್ಟಂಬರ್ 12ನೇ ದಿನಾಂಕದಿಂದ ಜಾರಿಗೆ ಬಂದಿರುವುದಾಗಿ ಭಾವಿಸತಕ್ಕದ್ದು ಮತ್ತು ಉಳಿದ ಉಪಬಂಧಗಳು ಈ ಕೂಡಲೇ ಜಾರಿಗೆ ಬರತಕ್ಕದ್ದು. 2. 2001ರ ಕರ್ನಾಟಕ ಅಧಿನಿಯಮ 29ರ ತಿದ್ದುಪಡಿ.- ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಅಧಿನಿಯಮ, 2000ರ (2001ರ ಕರ್ನಾಟಕ ಅಧಿನಿಯಮ 29).- (1) 2ನೇ ಪ್ರಕರಣದಲ್ಲಿ-
(ಎ) (1)ನೇ ಖಂಡದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ.
“(1-ಎ) “ಕರನಿರ್ಧರಣಾ ವರ್ಷ” ಎಂದರೆ And ಹಣಕಾಸು. ವರ್ಷದಲ್ಲಿ ಆದಾಯದ ಕರ ನಿರ್ಧರಿಸಲಾಗಿದೆಯೋ ಅಥವಾ ತೆರಿಗೆ ವಿಧಿಸಲಾಗಿದೆಯೋ ಅದರ ಮುಂದಿನ ವರ್ಷ;
(ಬಿ) (3)ನೇ ಖಂಡದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ.-
“3-0) “ಹಣಕಾಸು ವರ್ಷ” ಎಂದರೆ, ಪ್ರತಿ ವರ್ಷದ ಏಪ್ರಿಲ್ ಒಂದನೇ ದಿನದಿಂದ ಪ್ರಾರಂಭವಾಗಿ ಹನ್ನೆರಡು ನಿರಂತರ ತಿಂಗಳುಗಳ ಅವಧಿ;
(ಸಿ) (4)ನೇ ಖಂಡದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
(4ಎ) “ ಹೊಸ ವಿಶ್ವವಿದ್ಯಾನಿಲಯ ಎಂದರೆ ಮೂಲ ಅಧಿನಿಯಮದ ತಿದ್ದುಪಡಿಯ ಮೂಲಕ ರಾಜ್ಯ ಸರ್ಕಾರವು ಸ್ಥಾಪಿಸಿರುವ ವಿಶ್ವವಿದ್ಯಾನಿಲಯ.”
(ಡಿ) (5)ನೇ ಖಂಡದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ.-
“(5ಎ) “ಕಂಪನಿಯಲ್ಲಿ ಗಮನಾರ್ಹ ಹಿತಾಸಕ್ತಿಯನ್ನು ಹೊಂದಿರುವ ವ್ಯಕ್ತಿ” ಎಂಬುದು ಆದಾಯ ತೆರಿಗೆ ಅಧಿನಿಯಮ 1961ರ (ಇಲ್ಲಿ ಇನ್ನುಮುಂದೆ ಆದಾಯ ತೆರಿಗೆ ಅಧಿನಿಯಮವೆಂದು ಉಲ್ಲೇಖಿಸಲಾಗಿದೆ.) 13ನೇ ಪ್ರಕರಣದ (9)ನೇ ಉಪಪ್ರಕರಣದ ಕೆಳಗಿನ 3ನೇ ವಿವರಣೆಯಲ್ಲಿ ಈ ಪದಾವಳಿಗೆ ಗೊತ್ತುಪಡಿಸಿರುವ ಅದೇ ಅರ್ಥವನ್ನು ಹೊಂದಿರತಕ್ಕದ್ದು.
(5ಬಿ) “ಹಿಂದಿನ ವಿಶ್ವವಿದ್ಯಾನಿಲಯ ಎಂದರೆ ಯಾವ ವಿಶ್ವವಿದ್ಯಾನಿಲಯದಿಂದ ಹೊಸ ವಿಶ್ವವಿದ್ಯಾನಿಲಯವು ಸೃಜಿಸಲಾದ ಮತ್ತು ಸ್ಥಾಪಿಸಲಾಗಿದೆಯೋ wad.” (5ಸಿ) “ಹಿಂದಿನ ವರ್ಷ'' ಎಂದರೆ, ಕರ ನಿರ್ಧರಣೆ ವರ್ಷಕ್ಕೆ ನಿಕಟ ಪೂರ್ವದ ಹಣಕಾಸು ವರ್ಷ.”
(2) 3ನೇ ಪ್ರಕರಣದಲ್ಲಿ,-
(ಎ) (1ಎಫ್) ಉಪಪ್ರಕರಣದಲ್ಲಿ,-
(i) "ಶಿವಾಜಿನಗರ'' ಎಂಬ ಪದಕ್ಕೆ ಶಿವಾಜಿನಗರ” ಎಂಬ ಪದವನ್ನು ಪ್ರತಿಯೋಜಿಸತಕ್ಕದ್ದು;
(ii) (ಎಫ್) ಉಪಪ್ರಕರಣದಲ್ಲಿ “ಗೃಹವಿಜ್ಞಾನ ಸಂಸ್ಥೆ, ಬೆಂಗಳೂರು” ಎಂಬ ಪದಗಳ ತರುವಾಯ “ಸರ್ಕಾರಿ ವಿಜ್ಞಾನ ಕಾಲೇಜು (ಸ್ವಾಯತ್ರ), ನೃಪತುಂಗ ರಸ್ತೆ, ಬೆಂಗಳೂರು, ಇದನ್ನು ಹೊರತುಪಡಿಸಿ” ಎಂಬ ಪದಗಳು, ಆವರಣ ಚಿಹ್ನೆಗಳು ಮತ್ತು ಅಲ್ಪವಿರಾಮ ಚಿಹ್ನೆಗಳನ್ನು ಸೇರಿಸತಕ್ಕದ್ದು.
(ಬಿ) (128) ಉಪಪ್ರಕರಣದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ;-
"(1ಕೆ) ಬೆಂಗಳೂರಿನಲ್ಲಿ ಕೇಂದ್ರ ಕಾರ್ಯಸ್ಥಾನವನ್ನು ಹೊಂದಿರುವ ಮತ್ತು ಸರ್ಕಾರಿ ವಿಜ್ಞಾನ ಕಾಲೇಜು (ಸ್ವಾಯತ್ತ), ನೃಪತುಂಗ ರಸ್ತೆ, ಬೆಂಗಳೂರು, ಇದರ ಮೇಲೆ ಪ್ರಾದೇಶಿಕ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಏಕಾತ್ಮಕ ಸ್ವರೂಪದ ನೃಪತುಂಗ ವಿಶ್ವವಿದ್ಯಾನಿಲಯ, ಬೆಂಗಳೂರು, ಇದನ್ನು ಸ್ಥಾಪಿಸತಕ್ಕದ್ದು.' '
(ಸಿ) (47ನೇ ಉಪಪ್ರಕರಣದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
“(4ಎ) ವಿಶ್ವವಿದ್ಯಾನಿಲಯದ ಸ್ಥಾಪನೆಯು ಲಾಭರಹಿತ ಸಂಸ್ಥೆಯಾಗಿರತಕ್ಕದ್ದು ಮತ್ತು ವಿಶ್ವವಿದ್ಯಾನಿಲಯದ ಪೂರ್ಣ ಆದಾಯ ಮತ್ತು ಅದರ ಯಾವುದೇ ಭಾಗವನ್ನು ಅಥವಾ ಯಾವುದೇ ಸ್ಥಿರ ಅಥವಾ ಚರ ಸ್ವತ್ತನ್ನು ಯಾವೊಬ್ಬ ವ್ಯಕ್ತಿಗೆ ನೇರವಾಗಿ ಅಥವಾ ಪರೋಕ್ಷವಾಗಿ ವರ್ಗಾವಣೆ ಮಾಡತಕ್ಕದ್ದಲ್ಲ ಅಥವಾ ವಿಶ್ವವಿದ್ಯಾನಿಲಯದ ಪೂರ್ಣ ಆದಾಯ ಅಥವಾ ಅದರ ಭಾಗ ಅಥವಾ ಯಾವುದೇ ಸ್ಥಿರ ಅಥವಾ ಚರ ಸ್ವತ್ತಿನ ಮೇಲೆ ನೇರವಾಗಿ ಅಥವಾ ಪರೋಕ್ಷವಾಗಿ ಅಧಿಕಾರವನ್ನು ನೀಡುವ ಯಾವುದೇ ಹಕ್ಕನ್ನು ಯಾವೊಬ್ಬ ವ್ಯಕ್ತಿಗೆ ನೀಡತಕ್ಕದ್ದಲ್ಲ.”
(3) 3ನೇ ಪ್ರಕರಣದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
“3ಎ. ವಿಶೇಷಾಧಿಕಾರಿಯ ನೇಮಕ... ಹೊಸ ವಿಶ್ವವಿದ್ಯಾನಿಲಯದ ಸ್ಥಾಪನೆಗಾಗಿ ಮೂಲ ಅಧಿನಿಯಮವನ್ನು ತಿದ್ದುಪಡಿ ಮಾಡಿದಾಗಲೆಲ್ಲಾ, ಹೊಸ ವಿಶ್ವವಿದ್ಯಾನಿಲಯದ ಸ್ಥಾಪನೆಗೆ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕಾಗಿ ಹಿರಿಯ ಶ್ರೇಣಿಯ ಗ್ರೂಪ್-ಎ ದರ್ಜೆಗೆ ಕಡಿಮೆಯಲ್ಲದ ಅಧಿಕಾರಿಯೊಬ್ಬರನ್ನು ವಿಶೇಷಾಧಿಕಾರಿಯೆಂದು ರಾಜ್ಯ ಸರ್ಕಾರವು ಆದೇಶದ ಮೂಲಕ ನೇಮಿಸಬಹುದು.
3ಬಿ. ವಿಶೇಷಾಧಿಕಾರಿಯ ಅಧಿಕಾರಗಳು.- ಮೂಲ ಅಧಿನಿಯಮದ ಅಡಿಯಲ್ಲಿ ಹೊಸ ವಿಶ್ವವಿದ್ಯಾನಿಲಯದ ಸ್ಥಾಪನೆಗೆ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕಾಗಿ ರಾಜ್ಯ ಸರ್ಕಾರವು ನೇಮಿಸಿದ ವಿಶೇಷಾಧಿಕಾರಿಯು, ಹೊಸ ವಿಶ್ವವಿದ್ಯಾನಿಲಯದ ಸ್ಥಾಪನೆಗಾಗಿ ತಿದ್ದುಪಡಿ ಅಧಿನಿಯಮ ಪ್ರಾರಂಭದ ತರುವಾಯ, ಪ್ರಥಮ ಕುಲಪತಿಯ ನೇಮಕಾತಿಯವರೆಗೆ, ರಾಜ್ಯ ಸರ್ಕಾರವು ನಿರ್ದಿಷ್ಟಪಡಿಸಬಹುದಾದಂತೆ ವಿಶ್ವವಿದ್ಯಾನಿಲಯದ ಮತ್ತು ಕುಲಪತಿಗಳ ಅಂಥ ಅಧಿಕಾರಗಳನ್ನು ಚಲಾಯಿಸತಕ್ಕದ್ದು ಹಾಗೂ ಅಂಥ ಪ್ರಕಾರ್ಯಗಳನ್ನು ನಿರ್ವಹಿಸತಕ್ಕದ್ದು.''
(4) 4ನೇ ಪ್ರಕರಣದಲ್ಲಿ,-
(ಎ) (1ನೇ ಖಂಡದಲ್ಲಿ “(ಅಂಚೆ ತೆರಪಿನ ಮೂಲಕ ಶಿಕ್ಷಣವೂ ಸೇರಿದಂತೆ)” ಎಂಬ ಆವರಣ ಚಿಹ್ನೆಗಳು ಮತ್ತು ಪದಗಳಿಗೆ “(ಅಂಚೆ ತೆರಪಿನ ಮೂಲಕ ಶಿಕ್ಷಣವನ್ನು ಹೊರತುಪಡಿಸಿದಂತೆ)” ಎಂಬ ಆವರಣ ಚಿಹ್ನೆಗಳು ಮತ್ತು ಪದಗಳನ್ನು ಪ್ರತಿಯೋಜಿಸತಕ್ಕದ್ದು;
(ಬಿ) (ville ಖಂಡದಲ್ಲಿ “ನಿರ್ವಹಿಸುವುದು ಮತ್ತು ಅವುಗಳ” ಎಂಬ ಪದಗಳಿಗೆ “ಸ್ಥಾಪಿಸುವುದು, ನಿರ್ವಹಿಸುವುದು ಮತ್ತು ಘಟಕ ಕಾಲೇಜುಗಳ” ಎಂಬ ಪದಗಳು ಮತ್ತು ಅಲ್ಪವಿರಾಮ ಚಿಹ್ನೆಗಳನ್ನು ಪ್ರತಿಯೋಜಿಸತಕ್ಕದ್ದು;
(ಸಿ) (xxiii)e ಖಂಡದಲ್ಲಿ ಎರಡನೇ ಪರಂತುಕದ ತರುವಾಯ ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು ಎಂದರೆ:-
“ಅಲ್ಲದೆ ಪರಂತು, (xix) ಮತ್ತು (0)ನೇ ಖಂಡದಲ್ಲಿ ಇರುವುದಾವುದೂ ಸೃಪತುಂಗ ವಿಶ್ವವಿದ್ಯಾನಿಲಯ, ಬೆಂಗಳೂರು, ಇದಕ್ಕೆ ಅನ್ವಯವಾಗತಕ್ಕದಲ್ಲ.”
(ಡಿ) (6%)ನೇ ಖಂಡದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು ಎಂದರೆ:-
“(xxiv) ವಿಶ್ವವಿದ್ಯಾಲಯವನ್ನು ಲಾಭರಹಿತ ಸಂಸ್ಥೆಯನ್ನಾಗಿಸುವ ಉದ್ದೇಶವನ್ನು ಅನುಸರಿಸಲು ಮತ್ತು ಪ್ರೋತ್ಸಾಹಿಸಲು ಅವಶ್ಯ ಅಥವಾ ಯುಕ್ತ ಕ್ರಮವನ್ನು ಕೈಗೊಳ್ಳುವುದು; ಮತ್ತು
(5) 5ನೇ ಪ್ರಕರಣದಲ್ಲಿ,-
(ಎ) (i) ನೇ ಉಪಪ್ರಕರಣದಲ್ಲಿ-
(i) ಮೊದಲನೇ ಪರಂತುಕಕ್ಕೆ ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-
“ಪರಂತು, ಕರ್ನಾಟಕ ರಾಜ್ಯ ಮುಕ್ತವಿಶ್ವವಿದ್ಯಾನಿಯಲವನ್ನು ಹೊರತುಪಡಿಸಿ ಯಾವುದೇ ವಿಶ್ವವಿದ್ಯಾನಿಲಯವು ವಿಶ್ವವಿದ್ಯಾನಿಲಯದ ಪ್ರದೇಶದೊಳಗೆ ಅಥವಾ ಹೊರಗೆ ಮುಕ್ತ ಮತ್ತು ದೂರ ಶಿಕ್ಷಣ ವಿಧಾನದಲ್ಲಿ ಯಾವುದೇ ಕಾರ್ಯಕ್ರಮವನ್ನು ನೀಡತಕ್ಕದ್ದಲ್ಲ.”
(ii) ನಾಲ್ಕನೇ ಪರಂತುಕದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
“ಅಲ್ಲದೇ ಪರಂತು, ಸಂಯೋಜನೆಗೆ ಸಂಬಂಧಿಸಿದಂತೆ, ಈ ಉಪಪ್ರಕರಣದಲ್ಲಿ ಇರುವುದಾವುದೂ, ಸೃಪತುಂಗ ವಿಶ್ವವಿದ್ಯಾನಿಲಯ, ಬೆಂಗಳೂರು, ಇದಕ್ಕೆ ಅನ್ವಯವಾಗತಕ್ಕದ್ದಲ್ಲ.”
(ii) (13)ನೇ ಉಪಪ್ರಕರಣದ ತುರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
"(14) ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳು ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಅಧ್ಯಾದೇಶ, 2020ರ ಪ್ರಾರಂಭಕ್ಕೆ ಮೊದಲು ಕರ್ನಾಟಕ ವಿಧಾನಸಭಾ ಕ್ಷೇತ್ರವಾದ ಶಿವಾಜಿನಗರದಲ್ಲಿ ಇರುವ ಸರ್ಕಾರಿ ವಿಜ್ಞಾನ ಕಾಲೇಜು (ಸ್ವಾಯತ್ತ), ನೃಪತುಂಗ ರಸ್ತೆ, ಬೆಂಗಳೂರು, ಇದು ಬೆಂಗಳೂರು ಕೇಂದ್ರ ವಿಶ್ವವಿದ್ಯಾನಿಲಯದಿಂದ ಅನುಭವಿಸುತ್ತಿರುವ ಯಾವುದೇ ವಿಶೇಷಾಧಿಕಾರವನ್ನು, ರಾಜ್ಯ ಸರ್ಕಾರವು ಈ ಸಂಬಂಧದಲ್ಲಿ ನಿರ್ದಿಷ್ಟಪಡಿಸಬಹುದಾದ ಅಂಥ ದಿನಾಂಕದಿಂದ ಜಾರಿಗೆ ಬರುವಂತೆ ಹಿಂತೆಗೆದುಕೊಳ್ಳಲಾಗಿದೆ ಎಂದು ಭಾವಿಸತಕ್ಕದ್ದು ಮತ್ತು ಬೆಂಗಳೂರು ಕೇಂದ್ರ ವಿಶ್ವವಿದ್ಯಾನಿಲಯದ ವಿಶೇಷಾಧಿಕಾರಗಳಿಗೆ ಈ ಹಿಂದೆ ಪ್ರವೇಶ ಪಡೆದುಕೊಂಡಿದ್ದ ಅಥವಾ ಸಂಯೋಜಿತವಾಗಿದ್ದ ಸರ್ಕಾರಿ ವಿಜ್ಞಾನ ಕಾಲೇಜು (ಸ್ವಾಯತ್ತ), ನೃಪತುಂಗ ರಸ್ತೆ, ಬೆಂಗಳೂರು ಇದು ನೃಪತುಂಗ ವಿಶ್ವವಿದ್ಯಾನಿಲಯ, ಬೆಂಗಳೂರು, ಇದರ ಘಟಕ ಕಾಲೇಜು ಅಥವಾ ವಿದ್ಯಾಲಯಗಳಾಗಿ ಸದರಿ ವಿಶ್ವವಿದ್ಯಾನಿಲಯದ ವಿಶೇಷಾಧಿಕಾರಗಳಿಗೆ ಪ್ರವೇಶ ಪಡೆದುಕೊಂಡಿವೆ ಎಂದು ಅಥವಾ ಅದಕ್ಕೆ ಸಂಯೋಜಿತವಾಗಿದೆ ಎಂದು ಭಾವಿಸತಕ್ಕದ್ದು.”
(6) 5ನೇ ಪ್ರಕರಣದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
“5ಎ.ಕೆಲವು. ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಉಳಿಸುವಿಕೆಗಳು.-. ತಿದ್ದುಪಡಿ ಅಧಿನಿಯಮದ ಮೂಲಕ ತಿದ್ದುಪಡಿಯಾದ ಮೂಲ ಅಧಿನಿಯಮದಲ್ಲಿ ಅಥವಾ ತಿದ್ದುಪಡಿ ಅಧಿನಿಯಮವು ಜಾರಿಗೆ ಬರುವ ನಿಕಟಪೂರ್ವದಲ್ಲಿ ಅದರ ಅಡಿಯಲ್ಲಿ ರಚಿಸಿದ ಪರಿನಿಯಮಗಳಲ್ಲಿ, ಆರ್ಡಿನೆನ್ಸ್ಗಳಲ್ಲಿ, ವಿನಿಯಮಗಳಲ್ಲಿ ಮತ್ತು ನಿಯಮಗಳಲ್ಲಿ ಏನೇ ಇದ್ದರೂ,-
(ಎ) ಜಾರಿಯಲ್ಲಿದ್ದ ಪರಿನಿಯಮಗಳಿಗೆ, ಆರ್ಡಿನೆನ್ಸ್ಗಳಿಗೆ, ವಿನಿಯಮಗಳಿಗೆ ಮತ್ತು. ನಿಯಮಗಳಿಗೆ ಅನುಸಾರವಾಗಿ, ಹಿಂದಿನ ವಿಶ್ವವಿದ್ಯಾನಿಲಯದ ಪದವಿಗಾಗಿ ವ್ಯಾಸಂಗ ಮಾಡುತ್ತಿರುವ ಯಾವೊಬ್ಬ ವಿದ್ಯಾರ್ಥಿಗೆ, ಹೊಸ ವಿಶ್ವವಿದ್ಯಾನಿಲಯವು ಅಂಥ ಪರೀಕ್ಷೆಯನ್ನು ವ್ಯವಸ್ಥೆಗೊಳಿಸುವವರೆಗೆ, ಹಿಂದಿನ ವಿಶ್ವವಿದ್ಯಾನಿಲಯದ ಪರೀಕ್ಷೆಗೆ ಪ್ರವೇಶ ನೀಡತಕ್ಕದ್ದು ಮತ್ತು ಅಂಥ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಅವನು ಅರ್ಹನಾಗುವ ಪದವಿ ಅಥವಾ ಡಿಪ್ಲೋಮಾವನ್ನು ಅವನಿಗೆ ಪ್ರದಾನ ಮಾಡತಕ್ಕದ್ದು.
(ಬಿ) ಹಿಂದಿನ ವಿಶ್ವವಿದ್ಯಾನಿಲಯವು ಯಾವುದೇ ಪರೀಕ್ಷೆಯನ್ನು ನಡೆಸಿ ಅದರ ಫಲಿತಾಂಶವು ಪ್ರಕಟಿಸಿದ್ದು ಆದರೆ, ಅದಕ್ಕೆ ಸಂಬಂಧಪಟ್ಟ ಪದವಿ ಅಥವಾ ಡಿಪ್ಲೋಮಾವನ್ನು ಪ್ರದಾನ ಮಾಡಿರದಿದ್ದರೆ ಅಥವಾ ನೀಡಿರದಿದ್ದರೆ ಅಥವಾ ಯಾವುದೇ ಅಂಥ ಪರೀಕ್ಷೆಯ ಫಲಿತಾಂಶವನ್ನು ಹಿಂದಿನ ವಿಶ್ವವಿದ್ಯಾನಿಲಯವು ಪ್ರಕಟಿಸಿರದಿದ್ದರೆ, ಆಗ ಅಂಥ ಪರೀಕ್ಷೆಯನ್ನು ಹಿಂದಿನ ವಿಶ್ವವಿದ್ಯಾನಿಲಯವೇ ನಡೆಸಿದೆ ಎಂದು ಭಾವಿಸತಕ್ಕದ್ದು.
(7) 11ನೇ ಪ್ರಕರಣದ (ಎಮ್) ಖಂಡದ ಮೊದಲ ಪರಂತುಕದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
"ಮತ್ತು ಪರಂತು, ನೃಪತುಂಗ ವಿಶ್ವವಿದ್ಯಾನಿಲಯ, ಬೆಂಗಳೂರು, ಇದರ ಸಂದರ್ಭದಲ್ಲಿ, ವಿಶ್ವವಿದ್ಯಾನಿಲಯಗಳ ಅಧಿಕಾರಿಗಳು (ಎಫ್) ಖಂಡವನ್ನು ಹೊರತುಪಡಿಸಿ ಮೇಲೆ ನಿರ್ದಿಷ್ಟಪಡಿಸಿದ ಅಧಿಕಾರಿಗಳೊಂದಿಗೆ ಹೆಚ್ಚುವರಿಯಾಗಿ ವಿದ್ಯಾಲಯಗಳ ನಿರ್ದೇಶಕರುಗಳನ್ನು ಸಹ ಒಳಗೊಳ್ಳತಕ್ಕದ್ದು.”
(8) 14ನೇ ಪ್ರಕರಣದ (4)ನೇ ಉಪಪ್ರಕರಣದಲ್ಲಿ-
(ಎ) ಎಂಟನೇ ಪರಂತುಕದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
“ಅಲ್ಲದೇ ಪರಂತು, ಈ ಪ್ರಕರಣದಲ್ಲಿ ವಿರುದ್ಧವಾದುದು ಏನೇ ಇದ್ದರೂ, ರಾಜ್ಯ ಸರ್ಕಾರವು, ತಾನು ನಿರ್ದಿಷ್ಟಪಡಿಸಬಹುದಾದಂಥ ನಿಬಂಧನೆಗಳು ಮತ್ತು ಷರತ್ತುಗಳಿಗೊಳಪಟ್ಟು ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾನಿಲಯ, ಬೆಂಗಳೂರು ಮತ್ತು ಮಂಡ್ಯ ವಿಶ್ವವಿದ್ಯಾನಿಲಯ, ಮಂಡ್ಯ ಇವುಗಳ ಪ್ರಥಮ ಕುಲಪತಿಯವರನ್ನು ನೇಮಕ ಮಾಡತಕ್ಕದ್ದು.''
(ಬಿ) ಒಂಬತ್ತನೇ ಪರಂತುಕದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
“ಅಲ್ಲದೇ ಪರಂತು, ಈ ಪ್ರಕರಣದಲ್ಲಿ ವಿರುದ್ಧವಾದುದು ಏನೇ ಇದ್ದರೂ, ರಾಜ್ಯ ಸರ್ಕಾರವು, ತಾನು ನಿರ್ದಿಷ್ಟಪಡಿಸಬಹುದಾದಂಥ ನಿಬಂಧನೆಗಳು ಮತ್ತು ಷರತ್ತುಗಳಿಗೊಳಪಟ್ಟು ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳು ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಅಧ್ಯಾದೇಶ, 2020 ಪ್ರಾರಂಭವಾದ ತರುವಾಯ ಮೂಲ ಅಧಿನಿಯಮದ ಅಡಿಯಲ್ಲಿ ಸ್ಥಾಪಿಸಲಾದ ಯಾವುದೇ ವಿಶ್ವವಿದ್ಯಾನಿಲಯದ ಪ್ರಥಮ ಕುಲಪತಿಯವರನ್ನು ನೇಮಕ ಮಾಡತಕ್ಕದ್ದು.”
(9) 14ನೇ ಪ್ರಕರಣದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
«14ಎ. ಪ್ರಥಮ ಕುಲಪತಿಯ ಕರ್ತವ್ಯಗಳು.- (1) ವಿಶ್ವವಿದ್ಯಾನಿಯಲಯದ ಸ್ಥಾಪನೆಯ ದಿನಾಂಕದಿಂದ ಆರು ತಿಂಗಳೊಳಗೆ ಅಥವಾ ಕುಲಾಧಿಪತಿಯು ನಿರ್ದೇಶಿಸಬಹುದಾದ ಒಂದು ವರ್ಷಕ್ಕೂ ಮೀರದ ಅಂಥ ದೀರ್ಫಾವಧಿಯೊಳಗೆ ಹೊಸ ವಿಶ್ವವಿದ್ಯಾನಿಲಯದ ಸಿಂಡಿಕೇಟ್, ವಿದ್ಯಾ ವಿಷಯಕ ಪರಿಷತ್ತು ಮತ್ತು ಇತರ ಪ್ರಾಧಿಕಾರಗಳನ್ನು ರಚಿಸುವುದಕ್ಕಾಗಿ ವ್ಯವಸ್ಥೆಗಳನ್ನು ಮಾಡುವುದು ಪ್ರಥಮ ಕುಲಪತಿಯ ಕರ್ತವ್ಯವಾಗಿರತಕ್ಕದ್ದು.
(2) (1)ನೇ ಉಪಪ್ರಕರಣದ ಅಡಿಯಲ್ಲಿ ರಚಿಸಲಾದ ಪ್ರಾಧಿಕಾರಗಳು, ಈ ಬಗ್ಗೆ ಕುಲಾಧಿಪತಿಯವರು ನಿರ್ದಿಷ್ಟಡಿಸಬಹುದಾದ ಅಂಥ ದಿನಾಂಕದಿಂದ ಅವುಗಳು ಅಧಿಕಾರಗಳನ್ನು ಚಲಾಯಿಸಲು ಮತ್ತು ಪ್ರಕಾರ್ಯಗಳನ್ನು ನಿರ್ವಹಿಸಲು ಪ್ರಾರಂಭಿಸತಕ್ಕದ್ದು.
14ಬಿ. ಹೊಸ ವಿಶ್ವವಿದ್ಯಾನಿಯಲದ ಸ್ಥಾಪನೆಯ ಮೇರೆಗೆ ತಾತ್ಕಾಲಿಕ ಉಪಬಂಧಗಳು.- (1) ಮೂಲ ಅಧಿನಿಯಮದಲ್ಲಿ ಏನೇ ಒಳಗೊಂಡಿದ್ದರೂ, ಪ್ರಥಮ ಕುಲಪತಿಯವರು ಕುಲಾಧಿಪತಿಯವರ ಪೂರ್ವಾನುಮೋದನೆಯೊಂದಿಗೆ ಸಂದರ್ಭಾನುಸಾರವಾಗಿ, ತಿದ್ದುಪಡಿ. ಅಧಿನಿಯಮದ ಮೂಲಕ ತಿದ್ದುಪಡಿಯಾದಂತೆ ಮೂಲ ಅಧಿನಿಯಮದ ಉಪಬಂಧಗಳನ್ನು ಕಾರ್ಯಗತಗೊಳಿಸುವ ಉದ್ದೇಶಕ್ಕಾಗಿ ಹೊಸ ವಿಶ್ವವಿದ್ಯಾನಿಲಯದ ಎಲ್ಲಾ ಅಥವಾ ಯಾವುದೇ ಪ್ರಕಾರ್ಯಗಳನ್ನು ನಿರ್ವಹಿಸಬಹುದು ಮತ್ತು ಆ ಉದ್ದೇಶಕ್ಕಾಗಿ, ಮೂಲ ಅಧಿನಿಯಮದ ಮೂಲಕ ವಿಶ್ವವಿದ್ಯಾನಿಲಯದ ಯಾವುದೇ ಪ್ರಾಧಿಕಾರವು ಚಲಾಯಿಸಬೇಕಾದ ಅಥವಾ ನಿರ್ವಹಿಸಬೇಕಾದ ಯಾವುದೇ ಅಧಿಕಾರವನ್ನು ಅಥವಾ ಯಾವುದೇ ಕರ್ತವ್ಯವನ್ನು ತಿದ್ದುಪಡಿ ಅಧಿನಿಯಮದ ಮೂಲಕ ತಿದ್ದುಪಡಿಯಾದಂತೆ ಮೂಲ ಅಧಿನಿಯಮದಲ್ಲಿ ಉಪಬಂಧಿಸಿದಂತೆ ಅಂಥ ಪ್ರಾಧಿಕಾರವು ಅಸ್ತಿತ್ವಕ್ಕೆ ಬರುವವರೆಗೆ ಚಲಾಯಿಸಬಹುದು ಅಥವಾ ನೆರವೇರಿಸಬಹುದು.
(2) ಮೂಲ ಅಧಿನಿಯಮದ 5ನೇ ಪ್ರಕರಣದ ಅಡಿಯಲ್ಲಿ ಹೊಸ ವಿಶ್ವವಿದ್ಯಾನಿಲಯದ ಘಟಕ ಕಾಲೇಜುಗಳಿಗೆ ಅಥವಾ ಇತರ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗತಕ್ಕ, ಹಿಂದಿನ ವಿಶ್ವವಿದ್ಯಾನಿಲಯವು ರಚಿಸಿದ ಎಲ್ಲ ಪರಿನಿಯಮಗಳು, ಆರ್ಡಿನೆನ್ಸ್ಗಳು, ವಿನಿಯಮಗಳು ಮತ್ತು ನಿಯಮಗಳನ್ನು ಹೊಸ ವಿಶ್ವವಿದ್ಯಾಲಯವು ರಚಿಸಿದ ಪರಿನಿಯಮಗಳು, ಆರ್ಡಿನೆನ್ಸ್ಗಳು, ವಿನಿಯಮಗಳು ಮತ್ತು ನಿಯಮಗಳೆಂದು ಭಾವಿಸತಕ್ಕದ್ದು ಮತ್ತು ಅವು ಹೊಸ ವಿಶ್ವವಿದ್ಯಾನಿಲಯವು ತನ್ನದೇ ಆದ ಪರಿನಿಯಮಗಳು, ಆರ್ಡಿನೆನ್ಸ್ಗಳು, ವಿನಿಯಮಗಳು ಮತ್ತು ನಿಯಮಗಳನ್ನು ರಚಿಸುವವರೆಗೆ ಹಾಗೆಯೇ ಮುಂದುವರಿಯತಶಕ್ಕದ್ದು:
ಪರಂತು,ಕುಲಪತಿಯವರು, ಕುಲಾಧಿಪತಿಯವರ ಅನುಮೋದನೆಯೊಂದಿಗೆ, ತಾವು. ಅವಶ್ಯಕವೆಂದು ಪರಿಗಣಿಸಬಹುದಾದಂಥ ಮಾರ್ಪಾಡುಗಳನ್ನು ಅಥವಾ ಅಳವಡಿಕೆಗಳನ್ನು ಅದರಲ್ಲಿ ಮಾಡಬಹುದು.”'
(10) 17ನೇ ಪ್ರಕರಣದ (1)ನೇ ಉಪಪ್ರಕರಣದ ತರುವಾಯ ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-
(1) ರಿಜಿಸ್ಟ್ರಾರ್ರವರು ವಿಶ್ವವಿದ್ಯಾನಿಲಯದ ಪೂರ್ಣಕಾಲಿಕ ಅಧಿಕಾರಿಯಾಗಿರತಕ್ಕದ್ದು. ರಾಜ್ಯ ಸರ್ಕಾರವು, ಅಖಿಲ ಭಾರತ ಸೇವೆಗೆ ಸೇರಿದ ಒಬ್ಬ ಅಧಿಕಾರಿಯನ್ನು ಅಥವಾ ಹಿರಿಯ ಶ್ರೇಣಿ ಮತ್ತು ಮೇಲಿನ ಗ್ರೂಪ್' ಎ' ಅಧಿಕಾರಿಯ ದರ್ಜೆಗಿಂತ ಕಡಿಮೆಯಲ್ಲದ ಕರ್ನಾಟಕ ಆಡಳಿತ ಸೇವೆಗೆ ಸೇರಿದ ಒಬ್ಬ ಅಧಿಕಾರಿಯನ್ನು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ರನ್ನಾಗಿ ನೇಮಕ ಮಾಡಬಹುದು.”
(11) 19ನೇ ಪ್ರಕರಣದಲ್ಲಿ,-
(0)... (0ನೇ ಉಪಪ್ರಕರಣಕ್ಕೆ ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-
“(1) ಲೆಕ್ಕಪರಿಶೋಧನೆ, ಲೆಕ್ಕಪತ್ರನಿರ್ವಹಣೆ ಮತ್ತು ಹಣಕಾಸು ಆಡಳಿತದಲ್ಲಿ ಅನುಭವವನ್ನು ಹೊಂದಿರುವ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಜಂಟಿ ನಿಯಂತ್ರಕರ ವೃಂದದ ಅಧಿಕಾರಿಗಳಾಗಿರುವ ಅಥವಾ ಉಪ ಮಹಾಲೇಖಪಾಲರ ದರ್ಜೆಯ ಅಧಿಕಾರಿಗಳಾಗಿರುವ ವ್ಯಕ್ತಿಗಳ ಪೈಕಿ ರಾಜ್ಯ ಸರ್ಕಾರದ ಮೂಲಕ ನೇಮಕವಾಗುವ ಹಣಕಾಸು ಅಧಿಕಾರಿಯು ವಿಶ್ವವಿಧ್ಯಾನಿಯಲಯದ ಪೂರ್ಣಕಾಲಿಕ ಅಧಿಕಾರಿಯಾಗಿರತಕ್ಕದ್ದು. ಪರಿನಿಯಮಗಳಲ್ಲಿ ನಿರ್ದಿಷ್ಟಪಡಿಸಿದ ಕಾಲಾವಧಿಯೊಳಗಾಗಿ ಯಾವೊಬ್ಬ ವ್ಯಕ್ತಿಯನ್ನ ನೇಮಕ ಮಾಡಲಾಗದಿದ್ದಲ್ಲಿ, ಕುಲಾಧಿಪತಿಯವರು ರಾಜ್ಯ ಸರ್ಕಾರದ ಸಮಾಲೋಚನೆಯೊಂದಿಗೆ, ಅವರು ಸೂಕ್ತವೆಂದು ಭಾವಿಸುವ ಅಂಥ ಇತರ ವ್ಯಕ್ತಿಯನ್ನು ಹಣಕಾಸು ಅಧಿಕಾರಿಯನ್ನಾಗಿ ನೇಮಿಸಬಹುದು.
(ii) (2)ನೇ ಉಪಪ್ರಕರಣಕ್ಕೆ ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-
“(2) ಹಣಕಾಸು ಅಧಿಕಾರಿಯ ಪದಾವಧಿಯು ಮೂರು ವರ್ಷಗಳಾಗಿರತಕ್ಕದ್ದು ಮತ್ತು ಹಣಕಾಸು ಅಧಿಕಾರಿಯ ಉಪಲಬ್ಧಗಳು ಹಾಗೂ ಇತರ ನಿಬಂಧನೆಗಳು ಮತ್ತು ಷರತ್ತುಗಳು ಪರಿನಿಯಮಗಳಲ್ಲಿ ನಿಯಮಿಸಬಹುದಾದಂತೆ ಇರತಕ್ಕದ್ದು.”
(12) 21ನೇ ಪ್ರಕರಣದಲ್ಲಿ (1)ನೇ ಉಪಪ್ರಕರಣದ ನಾಲ್ಕನೇ ಪರಂತುಕದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
"ಅಲ್ಲದೆ. ಪರಂತು, ನೃಪತುಂಗ ವಿಶ್ವವಿದ್ಯಾನಿಲಯ, ಬೆಂಗಳೂರು, ಇದಕ್ಕೆ ಸಂಬಂಧಿಸಿದಂತೆ ಡೀನ್ರನ್ನು ವಿದ್ಯಾಲಯಗಳ ನಿರ್ದೇಶಕರು ಎಂದು ಹಾಗೂ ವ್ಯಾಸಂಗ ವಿಭಾಗವನ್ನು ವಿದ್ಯಾಲಯಗಳು ಎಂಬುದಾಗಿ ಕರೆಯತಕ್ಕದ್ದು.
(13) 28ನೇ ಪ್ರಕರಣದ (1)ನೇ ಉಪಪ್ರಕರಣದಲ್ಲಿ ಮೂರನೇ ಪರಂತುಕದ ತರುವಾಯ ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು, ಎಂದರೆ:-
"ಮತ್ತು ಪರಂತು, ನೃಪತುಂಗ ವಿಶ್ವವಿದ್ಯಾನಿಲಯ, ಬೆಂಗಳೂರು, ಇದರ ಸಂದರ್ಭದಲ್ಲಿ ಸಿಂಡಿಕೇಟು, ಮೇಲೆ (ಬಿ), (ಸಿ), (ಡಿ), (ಎಫ್), (ಐ), (ಜೆ) ಮತ್ತು (ಕೆ) ಖಂಡಗಳಲ್ಲಿ ನಿರ್ದಿಷ್ಟಪಡಿಸಿದ ಸದಸ್ಯರನ್ನು ಒಳಗೊಳ್ಳತಕ್ಕದ್ದಲ್ಲ. ಆದರೆ, ಸರ್ಕಾರದ ಪ್ರಧಾನ ಕಾರ್ಯದರ್ಶಿ, ಉನ್ನತ ಶಿಕ್ಷಣ ಇಲಾಖೆ ಅಥವಾ ಉಪಕಾರ್ಯದರ್ಶಿ ದರ್ಜೆಗಿಂತ ಕಡಿಮೆಯಲ್ಲದ ಅವರ ನಾಮ ನಿರ್ದೇಶಿತರು, ಜ್ಯೇಷ್ಠತೆಯ ಆಧಾರದಲ್ಲಿ ಸರದಿಯ ಮೇರೆಗೆ ಒಂದು ವರ್ಷದ ಅವಧಿಯವರೆಗೆ ಕುಲಪತಿಯು ನಾಮನಿರ್ದೇಶಿಸಿದ ವಿದ್ಯಾಲಯಗಳ ಇಬ್ಬರು ನಿರ್ದೇಶಕರನ್ನು ಒಳಗೊಳ್ಳತಕ್ಕದ್ದು."
(14) 29ನೇ ಪ್ರಕರಣದ (2)ನೇ ಉಪಪ್ರಕರಣದಲ್ಲಿ (ಡಬ್ಲ್ಯೂ) ಖಂಡದಲ್ಲಿನ ಪರಂತುಕದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
"ಮತ್ತು ಪರಂತು, (ಜೆ) ಖಂಡದ ಉಪಬಂಧಗಳು ನೃಪತುಂಗ ವಿಶ್ವವಿದ್ಯಾನಿಲಯ, ಬೆಂಗಳೂರು, ಇದರ ಸಂದರ್ಭದಲ್ಲಿ ಅನ್ವಯವಾಗತಕ್ಕದ್ದಲ್ಲ."
(15) 30ನೇ ಪ್ರಕರಣದ (1ನೇ ಉಪಪ್ರಕರಣದಲ್ಲಿನ ಮೂರನೇ ಪರಂತುಕದ ತರುವಾಯ ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು, ಎಂದರೆ:-
"ಅಲ್ಲದೇ ಪರಂತು, ನೃಪತುಂಗ ವಿಶ್ವವಿದ್ಯಾನಿಲಯ, ಬೆಂಗಳೂರು, ಇದರ ಸಂದರ್ಭದಲ್ಲಿ ವಿದ್ಯಾವಿಷಯಕ ಪರಿಷತ್ತು, (vi), (10ನೇ ಖಂಡಗಳಲ್ಲಿ ನಿರ್ದಿಷ್ಟಪಡಿಸಿದ ಸದಸ್ಯರನ್ನು ಒಳಗೊಳ್ಳತಕ್ಕದ್ದಲ್ಲ, ಆದರೆ ಜೇಷ್ಠತೆಯ ಆಧಾರದಲ್ಲಿ ಸರದಿಯ ಮೇರೆಗೆ ಪ್ರತಿ ಎರಡು ವರ್ಷದ ಅವಧಿಯವರೆಗೆ ಕುಲಪತಿಯು ನಾಮನಿರ್ದೇಶಿಸಿದ ವಿದ್ಯಾಲಯಗಳ ಐವರು ನಿರ್ದೇಶಕರುಗಳನ್ನು ಒಳಗೊಳ್ಳತಕ್ಕದ್ದು.'
(16) 31ನೇ ಪ್ರಕರಣದ (2)ನೇ ಉಪಪ್ರಕರಣದಲ್ಲಿನ (ನೇ ಖಂಡದಲ್ಲಿ ಮೊದಲನೇ ಪರಂತುಕದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
"ಮತ್ತು ಪರಂತು, ನೃಪತುಂಗ ವಿಶ್ವವಿದ್ಯಾನಿಲಯ, ಬೆಂಗಳೂರು, ಇದರ ಸಂದರ್ಭದಲ್ಲಿ ಸಂಯೋಜನೆಗೆ ಸಂಬಂಧಿತ ಉಪಬಂಧಗಳು ಅನ್ವಯವಾಗತಕ್ಕದ್ದಲ್ಲ."
(17) 34ನೇ ಪ್ರಕರಣದಲ್ಲಿನ (11)ನೇ ಉಪಪ್ರಕರಣದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
"(12) ಈ ಪ್ರಕರಣದಲ್ಲಿ ಏನೇ ಒಳಗೊಂಡಿದ್ದರೂ, ನೃಪತುಂಗ ವಿಶ್ವವಿದ್ಯಾನಿಲಯ, ಬೆಂಗಳೂರು, ಇದರ ಸಂದರ್ಭದಲ್ಲಿ ವ್ಯಾಸಂಗ ವಿಭಾಗವನ್ನು ವಿದ್ಯಾಲಯಗಳು ಎಂದು ಹಾಗೂ ಡೀನರುಗಳನ್ನು ವಿದ್ಯಾಲಯಗಳ ನಿರ್ದೇಶಕರುಗಳೆಂದು ಕರೆಯತಕ್ಕದ್ದು."
(18) 36ನೇ ಪ್ರಕರಣದ (2)ನೇ ಉಪಪ್ರಕರಣದಲ್ಲಿ ಮೊದಲನೇ ಪರಂತುಕದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
"ಮತ್ತು ಪರಂತು, ನೃಪತುಂಗ ವಿಶ್ವವಿದ್ಯಾನಿಲಯ, ಬೆಂಗಳೂರು, ಇದರ ಸಂದರ್ಭದಲ್ಲಿ ಮೇಲೆ ನಿರ್ದಿಷ್ಟಪಡಿಸಿದ (ii), (೪) ಮತ್ತು (vise ಖಂಡಗಳನ್ನು ಹೊರತುಪಡಿಸಿ (i), (ii) DA (0)ನೇ ಖಂಡಗಳಿಗೆ ಹೆಚ್ಚುವರಿಯಾಗಿ ಕುಲಪತಿಯು ನಾಮನಿರ್ದೇಶಿಸಿದ ವಿದ್ಯಾಲಯಗಳಲ್ಲಿ ಸಂಬಂಧಿತ ಅಧ್ಯಯನಗಳ ವಿಭಾಗದೊಳಗೆ ವಿಷಯಗಳನ್ನು ಬೋಧಿಸುವ ಇಬ್ಬರು ಅಧ್ಯಾಪಕರನ್ನು ಒಳಗೊಳ್ಳತಕ್ಕದ್ದು.'
(19) 40ನೇ ಪ್ರಕರಣದ (1)ನೇ ಉಪಪ್ರಕರಣದಲ್ಲಿ-
(i) (ಎಸ್) ಖಂಡದಲ್ಲಿ “Dod, ಏಕಾತ್ಮಕ ಸ್ವರೂಪದ ವಿಶ್ವವಿದ್ಯಾನಿಲಯ' '. ಎಂಬ ಪದಗಳಿಗೆ “ಮಂಡ್ಯ ವಿಶ್ವವಿದ್ಯಾನಿಲಯ, ಮಂಡ್ಯ ಅಥವಾ ನೃಪತುಂಗ ವಿಶ್ವವಿದ್ಯಾನಿಲಯ, ಬೆಂಗಳೂರು ಇದರ' '. ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು;
(ii) (ಟಿ) ಖಂಡದಲ್ಲಿ “ಮಂಡ್ಯ ಏಕಾತ್ಮಕ ಸ್ವರೂಪದ ವಿಶ್ವವಿದ್ಯಾನಿಲಯ' '. ಎಂಬ ಪದಗಳ ತರುವಾಯ “ಮಂಡ್ಯ ವಿಶ್ವವಿದ್ಯಾನಿಲಯ, ಮಂಡ್ಯ ಅಥವಾ ನೃಪತುಂಗ ವಿಶ್ವವಿದ್ಯಾಲಯ, ಬೆಂಗಳೂರು ಇದರ' ' ಎಂಬ ಪದಗಳನ್ನು ಸೇರಿಸತಕ್ಕದ್ದು;
(ii) (ಟಿ) ಖಂಡದಲ್ಲಿ ಪರಂತುಕದ ತರುವಾಯ ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು, ಎಂದರೆ:-
“ಮತ್ತು. ಪರಂತು, ನೃಪತುಂಗ ವಿಶ್ವವಿದ್ಯಾನಿಲಯ, ಬೆಂಗಳೂರು ಇದರ ಸಂದರ್ಭದಲ್ಲಿ (ಜಿ) ಖಂಡವು ಅನ್ವಯವಾಗತಕ್ಕದ್ದಲ್ಲ. “
(20) 41ನೇ ಪ್ರಕರಣದ (7)ನೇ ಉಪಪ್ರಕರಣದ ತರುವಾಯ ಈ ಮುಂದಿನದನ್ನು ಸೇರಿಸಸತಕ್ಕದ್ದು-
“(8) ಈ ಪ್ರಕರಣದಲ್ಲಿ ಏನೇ ಒಳಗೊಂಡಿದ್ದರೂ ಸಿಂಡಿಕೇಟ್, ವಿಶ್ವವಿದ್ಯಾನಿಲಯದ ಧ್ಯೇಯೋದ್ಧೇಶಗಳಿಗೆ ಪರಿಣಾಮ ಉಂಟುಮಾಡುವ ಯಾವುದೇ ಹೊಸ ಪರಿನಿಯಮವನ್ನು ಮಾಡತಕ್ಕದ್ದಲ್ಲ ಅಥವಾ ಅಳವಡಿಸತಕ್ಕದ್ದಲ್ಲ ಅಥವಾ ಯಾವುವೇ ಪರಿನಿಯಮಗಳನ್ನು ತಿದ್ದುಪಡಿ ಮಾಡತಕ್ಕದ್ದಲ್ಲ, ಮಾರ್ಪಡಿಸತಕ್ಕದ್ದಲ್ಲ ಅಥವಾ ನಿರಸನಗೊಳಿಸತಕ್ಕದ್ದಲ್ಲ. “
(21) 42ನೇ ಪ್ರಕರಣದ (1)ನೇ ಉಪಪ್ರಕರಣದಲ್ಲಿನ (ಎನ್) ಖಂಡದ ಪರಂತುಕದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
"HB ಪರಂತು, ನೃಪತುಂಗ ವಿಶ್ವವಿದ್ಯಾನಿಲಯ, ಬೆಂಗಳೂರು, ಇದರ ಸಂದರ್ಭದಲ್ಲಿ (ಜೆ) ಖಂಡವು ಅನ್ವಯವಾಗತಕ್ಕದ್ದಲ್ಲ."
(22) 46ನೇ ಪ್ರಕರಣದ (3)ನೇ ಉಪಪ್ರಕರಣದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
“ (4) ವಿಶ್ವವಿದ್ಯಾನಿಲಯದ ಆದಾಯದ ಯಾವುದೇ ಭಾಗವನ್ನು, ವಿಶ್ವವಿದ್ಯಾನಿಲಯದ ಯಾವೊಬ್ಬ ಅಧಿಕಾರಿ ಅಥವಾ ಪ್ರಾಧಿಕಾರ ಅಥವಾ ಅದಕ್ಕೆ ಗಣನೀಯವಾದ ಕೊಡುಗೆಯನ್ನು ನೀಡಿರುವ ಯಾವೊಬ್ಬ ಇತರ ವ್ಯಕ್ತಿಯ ಅಥವಾ ಅಂಥ ಅಧಿಕಾರಿ ಅಥವಾ ಪ್ರಾಧಿಕಾರ ಅಥವಾ ವ್ಯಕ್ತಿಯ ಯಾವೊಬ್ಬ ಸಂಬಂಧಿ ಅಥವಾ ಅಂಥ ಅಧಿಕಾರಿ ಅಥವಾ ಪ್ರಾಧಿಕಾರ ಅಥವಾ ವ್ಯಕ್ತಿ ಅಥವಾ ಅಂಥ ಅಧಿಕಾರಿ ಅಥವಾ ಪ್ರಾಧಿಕಾರ ಅಥವಾ ವ್ಯಕ್ತಿಯ ಸಂಬಂಧಿಯು ಗಣನೀಯ ಹಿತಾಸಕ್ತಿಯನ್ನು ಹೊಂದಿರುವ ಯಾವುದೇ ಸಂಸ್ಥೆಯ ಪ್ರಯೋಜನಕ್ಕಾಗಿ ನೇರವಾಗಿ ಅಥವಾ ಪರೋಕ್ಷವಾಗಿ ಬಳಸಿಕೊಳ್ಳತಕ್ಕದ್ದಲ್ಲ. “
(23) 47ನೇ ಪ್ರಕರಣದಲ್ಲಿ,-
(i) (3)ನೇ ಉಪಪ್ರಕರಣದಲ್ಲಿ “ರಾಜ್ಯ ಲೆಕ್ಕಪತ್ರ ನಿಯಂತ್ರಕರು” ಎಂಬ ಪದಗಳಿಗೆ “ಪ್ರಧಾನ ನಿರ್ದೇಶಕರು, ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.
(i) (4)ನೇ ಉಪಪ್ರಕರಣದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
(5) ವಿಶ್ವವಿದ್ಯಾನಿಲಯವು, ಆದಾಯ ತೆರಿಗೆ ಅಧಿನಿಯಮ, 1961ರ (1961ರ ಕೇಂದ್ರ ಅಧಿನಿಯಮ 43) 11 ಮತ್ತು 12ನೇ ಪ್ರಕರಣಗಳ ಉಪಬಂಧಗಳನ್ನು ಜಾರಿಗೊಳಿಸದೇ ಆ ಅಧಿನಿಯಮದ ಅಡಿಯಲ್ಲಿ ಲೆಕ್ಕಮಾಡಿದಂತೆ ತನ್ನ ಒಟ್ಟು ಆದಾಯವು ಹಿಂದಿನ ಯಾವುದೇ ವರ್ಷದಲ್ಲಿನ ಆದಾಯತರಿಗೆಗೆ ಚಾರ್ಜು ಮಾಡದಿರುವ ಗರಿಷ್ಠ ಮೊತ್ತವನ್ನು ಮೀರಿದ್ದಲ್ಲಿ, ಆದಾಯ ತೆರಿಗೆ ಅಧಿನಿಯಮದ 288ನೇ ಪ್ರಕರಣದ (2)ನೇ ಉಪಪ್ರಕರಣದ ವಿವರಣೆಯಲ್ಲಿ ಪರಿಭಾಷಿಸಿದಂತೆ ಒಬ್ಬ ಅಕೌಂಟೆಂಟ್ನ ಮೂಲಕ ಆ ವರ್ಷದ ಲೆಕ್ಕಪತ್ರಗಳನ್ನು ಲೆಕ್ಕಪರಿಶೋಧನೆ ಮಾಡಿಸತಕ್ಕದ್ದು ಮತ್ತು ಸಂಬಂಧಪಟ್ಟ ಮೌಲ್ಯಮಾಪನ ವರ್ಷಕ್ಕಾಗಿನ ಆದಾಯದ ತನ್ನ ರಿಟರ್ನ್ಗಳೊಂದಿಗೆ, ಅಂಥ ಅಕೌಂಟೆಂಟಿನ ಮೂಲಕ ಯುಕ್ತವಾದ ಸಹಿ ಮಾಡಿರುವ ಮತ್ತು ಪರಿಶೀಲಿಸಿರುವ ನಿಯಮಿಸಲಾದ ನಮೂನೆಯಲ್ಲಿ ಅಂಥ ಲೆಕ್ಕಪರಿಶೋಧನೆಯ ವರದಿಯನ್ನು ಮತ್ತು ಆದಾಯ ತೆರಿಗೆ ಅಧಿನಿಯಮ, 1961ರ 12ಎ ಪ್ರಕರಣದ (1)ನೇ ಉಪಪ್ರಕರಣದ (ಬಿ) ಮತ್ತು (ಬಿಎ) ಖಂಡಗಳಿಗೆ ಅನುಸಾರವಾಗಿ ನಿಯಮಿಸಬಹುದಾದ ಅಂಥ ವಿವರಗಳನ್ನು ನಮೂದಿಸಿ ಸಲ್ಲಿಸತಕ್ಕದ್ದು.
(6) ವಿಶ್ವವಿದ್ಯಾನಿಲಯವು ತ ನ್ನ ಉದ್ದೇಶಗಳನ್ನು ಕಾರ್ಯರೂಪಕ್ಕೆ ತರುವುದಕ್ಕಾಗಿ ಮಾತ್ರ ತನ್ನ ಆದಾಯವನ್ನು ಮತ್ತು ಚರ ಮತ್ತು ಸ್ಥಿರ ಸ್ವತ್ತನ್ನು ಉಪಯೋಗಿಸಿಕೊಳ್ಳತಕ್ಕದ್ದು, ಆದಾಯ ತೆರಿಗೆ ಅಧಿನಿಯಮ, 1961ರ 11ನೇ ಪ್ರಕರಣದ (3)ನೇ ಉಪ-ಪ್ರಕರಣದಲ್ಲಿ ನಿರ್ದಿಷ್ಟಪಡಿಸಿರುವ ಯಾವುದೇ ನಮೂನೆ ಅಥವಾ ವಿಧಾನವನ್ನು ಹೊರತು ಪಡಿಸಿ ಭಾರತದಲ್ಲಿನ ಧರ್ಮಾರ್ಥ ಉದ್ದೇಶಗಳಿಗಾಗಿ ಅನ್ವಯಿಸಲು ಹೂಡಿಕೆ ಅಥವಾ ಯಾವುದೇ ಸಂಚಿತ ಆದಾಯದ ಠೇವಣಿ ಮಾಡತಕ್ಕದ್ದಲ್ಲ ಅಥವಾ ಮೀಸಲಿಡತಕ್ಕದ್ದಲ್ಲ ಮತ್ತು ಲಾಭದರೂಪದಲ್ಲಿ ಲಾಭಾಂಶ ಮತ್ತು ಬಡ್ಡಿಯನ್ನು ಅಥವಾ ಯಾವುದೇ ಇತರ ರೀತಿಯಲ್ಲಿ ಯಾವುದೇ ವ್ಯಕ್ತಿಗೆ ತನ್ನ ಆದಾಯ ಅಥವಾ ಸ್ವತ್ತನ್ನು ವಿತರಣೆ ಮಾಡತಕ್ಕದ್ದಲ್ಲ.“
(24) 58ಎ ಪ್ರಕರಣದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
"580. 59 ರಿಂದ 67ನೇ ಪ್ರಕರಣದ ಉಪಬಂಧಗಳ ಅನ್ವಯ.- ಈ ಅಧ್ಯಾದೇಶದಲ್ಲಿ ಏನೇ ಒಳಗೊಂಡಿದ್ದರೂ, 59 ರಿಂದ. 67ನೇ ಪ್ರಕರಣದ ಉಪಬಂಧಗಳು ನೃಪತುಂಗ ವಿಶ್ವವಿದ್ಯಾನಿಲಯ, ಬೆಂಗಳೂರು, ಇದಕ್ಕೆ ಅನ್ವಯವಾಗತಕ್ಕದ್ದಲ್ಲ."
(25) 84ನೇ ಪ್ರಕರಣದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
"484ಎ. ವಿಶ್ವವಿದ್ಯಾನಿಲಯವನ್ನು ಸಮಾಪನಗೊಳಿಸುವುದು (dissolution) ಅಥವಾ ಪರಿಸಮಾಪನಗೊಳಿಸುವುದು. (winding up).- ವಿಶ್ವವಿದ್ಯಾನಿಲಯದ ಸಮಾಪನ ಅಥವಾ ಪರಿಸಮಾಪನದ ಸಂದರ್ಭದಲ್ಲಿ, ಸಮಾಪನೆಯ ವಿಸರ್ಜನೆಯ ದಿನಾಂಕದಂದು ಉಳಿದಿರುವ ಆಸ್ತಿಗಳು ವಿಶ್ವವಿದ್ಯಾನಿಲಯದ ಅಧಿಕಾರಿಗಳ ಅಥವಾ ವ್ಯವಸ್ಥಾಪನಾ ಮಂಡಳಿಯ ಸದಸ್ಯರುಗಳು ಅಥವಾ ಹಣಕಾಸು ಸಮಿತಿ ಅಥವಾ ಗಣನೀಯ ಹಿತಾಸಕ್ತಿಯನ್ನು ಹೊಂದಿರುವ ಯಾವುದೇ ವ್ಯಕ್ತಿ ಅಥವಾ ತಮ್ಮ ಸಂಬಂಧಿಗಳ ಪೈಕಿ, ಯಾವುದೇ ಸನ್ನಿವೇಶಗಳಲ್ಲಿ ವಿತರಣೆಮಾಡತಕ್ಕದ್ದಲ್ಲ, ಆದರೆ ಅದನ್ನು ಈ ವಿಶ್ವವಿದ್ಯಾನಿಲಯದ ಅಂಥದೇ ಸ್ವರೂಪದ ಉದ್ದೇಶಗಳಿರುವ ಮತ್ತೊಂದು ವಿಶ್ವವಿದ್ಯಾನಿಲಯಕ್ಕೆ ಅದನ್ನು ವರ್ಗಾಯಿಸತಕ್ಕದ್ದು“.
(26) “ಬೆಂಗಳೂರು ಕೇಂದ್ರ ವಿಶ್ವವಿದ್ಯಾನಿಲಯ” ಎಂಬ ಪದಗಳು ಬರುವೆಡೆಗಳಲ್ಲೆಲ್ಲಾ “ಬೆಂಗಳೂರು ನಗರ ವಿಶ್ವವಿದ್ಯಾನಿಲಯ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು. 3. 2012ರ ಕರ್ನಾಟಕ ಅಧಿನಿಯಮ 11ರ ತಿದ್ದುಪಡಿ.- ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, 2011ರ (2012ರ ಕರ್ನಾಟಕ ಅಧಿನಿಯಮ 1), 46ನೇ ಪ್ರಕರಣದ (3)ನೇ ಉಪಪ್ರಕರಣದಲ್ಲಿ, “ರಾಜ್ಯ ಲೆಕ್ಕಪತ್ರ ನಿಯಂತ್ರಕರು” ಎಂಬ ಪದಗಳಿಗೆ “ಪ್ರಧಾನ ನಿರ್ದೇಶಕರು, ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ'” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.