ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ, 2020 (2020ರ ಕರ್ನಾಟಕ ಅಧಿನಿಯಮ 53)ರ 144ನೇ ಪ್ರಕರಣದಲ್ಲಿ,-
(i) (॥ನೇ ಉಪಪ್ರಕರಣದ ಕೊನೆಯಲ್ಲಿ ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು, ಎಂದರೆ:-
“ಅಲ್ಲದೆ ಪರಂತು, ಸ್ವತ್ತು ತೆರಿಗೆಯನ್ನು ಪಾವತಿಸಲು ಮೂಲತಃ ಹೊಣೆಗಾರನಾದ ವ್ಯಕ್ತಿಯು, ವಿವರಪಟ್ಟಿಯನ್ನು ಸಲ್ಲಿಸುವ ಮತ್ತು ಸ್ವತ್ತು ತೆರಿಗೆಯನ್ನು ಪಾವತಿಸುವ ತರುವಾಯ ಯಾವುದೇ ಸಮಯದಲ್ಲಿ, ಪಾಲಿಕೆಗೆ ಸಂದಾಯ ಮಾಡಿದ ಹೆಚ್ಚಿನ ಸ್ವತ್ತು ತೆರಿಗೆಯಲ್ಲಿ ಆ ಮೂಲಕ ಉಂಟಾದ ಮೇಲ್ಪಟ್ಟನ್ನು ತಾನಾಗಿಯೇ ತನ್ನ ಸ್ವಂತ ವಿವರಪಟ್ಟಿಯನ್ನು ಪರಿಷ್ಕರಿಸುವುದು, ಸದರಿ ಪರಿಷ್ಕರಣೆಯು ಪಾಲಿಕೆಯ ಮೂಲಕ (1ನೇ ಉಪ-ಪ್ರಕರಣದಡಿಯಲ್ಲಿ ಮಾಡಲಾದ ಪರಿಷ್ಕರಣೆಗಾಗಿ ಅನ್ವಯವಾಗುವಂತ ಅದೇ ಬಡ್ಡಿ ಮತ್ತು ದಂಡಕ್ಕೆ ಹೊಣೆಯಾಗಿರತಕ್ಕದ್ದು. ಪರಿಷ್ಕೃತ ವಿವರಪಟ್ಟಿಯನ್ನು ಸ್ವತ್ತು ತೆರಿಗೆದಾರನ ಮೂಲಕ ವಿವರಪಟ್ಟಿ ಎಂಬುದಾಗಿ ಪರಿಗಣಿಸತಕ್ಕದ್ದು ಹಾಗೂ ಪಾಲಿಕೆಯು ಅದನ್ನು (15ನೇ ಉಪ-ಪ್ರಕರಣದಡಿ ಪರಿಷ್ಕರಿಸುವ ಹಕ್ಕನ್ನು ಕಾಯ್ದಿರಿಸತಕ್ಕದ್ದು.”
(ii) (15ನೇ ಉಪ-ಪ್ರಕರಣದಲ್ಲಿ (ಬಿ) ಖಂಡದಲ್ಲಿನ ಏಳನೇ ಪರಂತುಕದ ಬದಲಿಗೆ ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-
“ಅಲ್ಲದೆ ಪರಂತು, ಒಂದು ಬಾರಿಯ ಕ್ರಮವಾಗಿ, ಎಲ್ಲಾ ತೆರಿಗೆ ಸುಸ್ತಿದಾರರು, ತೆರಿಗೆ ನಿರ್ಧರಿಸದಿರುವ ಸ್ವತ್ತುಗಳು ಮತ್ತು ತಮ್ಮ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಇಂದಿನವರೆಗೆ ಮರು ತೆರಿಗೆ. ನಿರ್ಧರಣೆಗಾಗಿ ಹೊಣೆಗಾರರಾದವರ ಸಲುವಾಗಿ, ಪಾವತಿಯಾಗದ ತೆರಿಗೆ, ತೆರಿಗೆ ನಿರ್ಧರಿಸದಿರುವ ಸ್ವತ್ತು ಹಾಗೂ ಮರುತೆರಿಗೆ ನಿರ್ಧರಣೆಗಾಗಿ ಪಾವತಿಸಬೇಕಾದ ಸ್ವತ್ತಿನ ಕುರಿತು 30ನೇ ನವೆಂಬರ್ 2024 ರವರೆಗೆ ಮಾಡಿದ ಪಾವತಿಗಳಿಗಾಗಿ ಈ ಮುಂದಿನ ಸಡಿಲಿಕೆಗಳನ್ನು ನೀಡತಕ್ಕದ್ದು, ಎಂದರೆ:-
(1) ಪಾವತಿಸಬಹುದಾದ ದಂಡವು ಒಂದು ವರ್ಷಕ್ಕೆ ಒಂದು ನೂರು ರೂಪಾಯಿಗಳಾಗಿರತಕ್ಕದ್ದು; ಮತ್ತು (ii). ಪಾವತಿಸಬಹುದಾದ ಬಡ್ಡಿಯನ್ನು ಮನ್ನಾ ಮಾಡತಕ್ಕದ್ದು.
ಅಲ್ಲದೆ ಪರಂತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ತಿದ್ದುಪಡಿ) ಅಧ್ಯಾದೇಶ, 2024ರ ಪ್ರಾರಂಭಕ್ಕೂ ಮೊದಲು ಈ ಖಂಡದ ಅಡಿಯಲ್ಲಿ ಒಂದು ಬಾರಿಯ ಕ್ರಮದ ಪ್ರಯೋಜನವನ್ನು ಈಗಾಗಲೇ ಪಡೆದ ಸ್ವತ್ತುಗಳೂ ಸಹ ಮೇಲಿನ ಸಡಿಲಿಕೆಗಳಿಗೆ ಅರ್ಹವಾಗತಕ್ಕದ್ದು ಹಾಗೂ ಅಂಥ ಸ್ವತ್ತುಗಳು ಪಾವತಿಸಿದ ಯಾವುದೇ ಹೆಚ್ಚುವರಿ ದಂಡವನ್ನು ಅದೇ ಸ್ವತ್ತಿನ ಅಥವಾ ಅದೇ ಮಾಲೀಕನ ಮೇಲೆ ಪಾಲಿಕೆಗೆ ಬರಬೇಕಾಗಿರುವ ಯಾವುದೇ ತಗಾದೆ ಅಥವಾ ಭವಿಷ್ಯದ ತಗಾದೆಗೆ ಮರುಹೊಂದಿಕೆ ಮಾಡಿಕೊಳ್ಳತಕ್ಕದ್ದು.” ಥಾವರ್ ಚಂದ್ ಗೆಹ್ಲೋಟ್ ಕರ್ನಾಟಕದ ರಾಜ್ಯಪಾಲರು
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಜಿ. ಶ್ರೀಧರ್ ಸರ್ಕಾರದ ಕಾರ್ಯದರ್ಶಿ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ.