(೧) ಈ ನಿಯಮಗಳನ್ನು ಶ್ರೀನಿವಾಸ ವಿಶ್ವವಿದ್ಯಾಲಯದ ನಿಯಮಗಳು, 2019 ಎಂದು ಕರೆಯತಕ್ಕದ್ದು.
(೨) ಅವು, ಸರ್ಕಾರಿ ರಾಜ್ಯ ಪತ್ರದಲ್ಲಿ ಅವುಗಳ ಪ್ರಕಟಣೆಯ ದಿನಾಂಕದಿಂದ ಜಾರಿಗೆ ಬರತಕ್ಕದ್ದು.
೨, ಪರಿಭಾಷೆಗಳು- ಈ ನಿಯಮಗಳಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು -
(ಎ) . 'ಅಧಿನಿಯಮ' ಎಂದರೆ, ಶ್ರೀನಿವಾಸ ವಿಶ್ವವಿದ್ಯಾಲಯ ಅಧಿನಿಯಮ, 2013 (20130 ಕರ್ನಾಟಕ ಅಧಿನಿಯಮ ಸಂ. 42);
(ಬಿ) 'ಪ್ರಕರಣ' ಎಂದರೆ, ಅಧಿನಿಯಮದ ಪ್ರಕರಣ;
(ಸಿ) 'ಪರಿಷತ್ತು' ಎಂದರೆ, ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ತು;
(2) ಈ ನಿಯಮಗಳಲ್ಲಿ, ಬಳಸಿದ ಆದರೆ ಪರಿಭಾಷಿಸಿಲ್ಲದ ಪದಗಳು ಹಾಗೂ ಪದಾವಳಿಗಳು, ಆ ಅಧಿನಿಯಮದಲ್ಲಿ ಅವುಗಳಿಗೆ ನೀಡಿರುವಂತಹ ಅರ್ಥವನ್ನೇ ಹೊಂದಿರತಕ್ಕದ್ದು.
a. ವಿಶ್ವವಿದ್ಯಾಲಯದ ಅಧಿಕಾರಿಗಳು ಮತ್ತು ನೌಕರರ ವೇತನ ಮತ್ತು ಭತ್ಯೆಗಳು ಹಾಗೂ ಸೇವಾ ಷರತ್ತುಗಳು - (೧) ಬೋಧಕ ವಿಭಾಗಕ್ಕೆ ಸಂದಾಯ ಮಾಡಬೇಕಾದ ವೇತನ ಮತ್ತು ಭತ್ಯೆಗಳು ಯು.ಜಿ.ಸಿ. ವೇತನ ಶ್ರೇಣಿಗೆ ಸರಿಸಮಾನವಾಗಿರತಕ್ಕದ್ದು;
(೨) ಇತರ ನೌಕರರ ವೇತನ ಮತ್ತು ಭತ್ಯೆಗಳು, ತತ್ಸಮಾನ ಶ್ರೇಣಿಯಲ್ಲಿರುವ ಇತರ ರಾಜ್ಯ ಸರ್ಕಾರಿ ನೌಕರರಿಗೆ ಸರಿಸಮಾನವಾಗಿರತಕ್ಕದ್ದು.
(a) ಬೋಧಕ ಸಿಬ್ಬಂದಿಯ ನೇಮಕಾತಿ ವಿಧಾನವು, ಕಾಲಕಾಲಕ್ಕೆ ಹೊರಡಿಸಿದ ಯುಜಿಸಿ ವಿನಿಯಮಗಳಿಗನುಸಾರವಾಗಿರತಕ್ಕದ್ದು. ಬೋಧಕೇತರ ಸಿಬ್ಬಂದಿಗೆ ಸಂಬಂಧಿಸಿದಂತೆ, ಸಂದರ್ಭಾನುಸಾರವಾಗಿ ಅರ್ಹತೆ ಹಾಗೂ ರಾಜ್ಯ ಸರ್ಕಾರದ ನೇಮಕಾತಿ ಕಾರ್ಯನೀತಿಗೆ ಅನುಸಾರವಾಗಿರತಕ್ಕದ್ದು.
೪ ವಿಶ್ವವಿದ್ಯಾಲಯದಲ್ಲಿ ಹೊಸ ಕೋರ್ಸುಗಳ ಪರಿಚಯ- (೧) ವಿಶ್ವವಿದ್ಯಾಲಯವು, ಸಂದರ್ಭಾನುಸಾರವಾಗಿ, ಯು.ಜಿ.ಸಿ. ಎ.ಐ.ಸಿ.ಟಿ.ಇ ಮತ್ತು ಇತರ ರಾಷ್ಟ್ರೀಯ ಮಾನ್ಯತಾ ಸಂಸ್ಥೆಗಳ ಕೋರ್ಸುಗಳ ವಿವರಣೆಗನುಸಾರವಾಗಿ ಹೊಸ ಕೋರ್ಸುಗಳನ್ನು ಪ್ರಾರಂಭಿಸುವುದಕ್ಕಾಗಿ ಪ್ರತಿ ಶೈಕ್ಷಣಿಕ ವರ್ಷ ಪ್ರಾರಂಭವಾಗುವುದಕ್ಕೆ ಸಾಕಷ್ಟು ಮುಂಚಿತವಾಗಿ ಪ್ರಾಯೋಜಕ ಸಂಸ್ಥೆ ಮತ್ತು ಆಡಳಿತ ಮಂಡಳಿಯ ಅನುಮೋದನೆಯೊಂದಿಗೆ ಪರಿಷತ್ತಿಗೆ ಪ್ರಸ್ತಾವನೆಯನ್ನು ಕಳುಹಿಸತಕ್ಕದ್ದು;
ಪರಂತು, ಪ್ರಾಯೋಜಕ ಸಂಸ್ಥೆ ಮತ್ತು ಆಡಳಿತ ಮಂಡಳಿಗಳ ಹೊಸ ಕೋರ್ಸುಗಳನ್ನು ಪರಿಚಯಿಸುವ ಪ್ರಸ್ತಾವನೆಯನ್ನು ಅನುಮೋದಿಸುವುದಕ್ಕೆ ಮುಂಚೆ ಸಂಬಂಧಪಟ್ಟ ನಿಯಮಂತ್ರಣ ಪ್ರಾಧಿಕಾರಗಳ ಗುಣಮಟ್ಟ ಮತ್ತು ನಿಗದಿತ ಮಾದರಿಗನುಸಾರವಾಗಿ ಅವಶ್ಯಕವಾದ ಹೆಚ್ಚುವರಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಮತ್ತು ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳತಕ್ಕದ್ದು.
(೨) (೧)ನೇ ಉಪ-ನಿಯಮದ ಮೇರೆಗೆ ಅರ್ಜಿಯನ್ನು ಸ್ವೀಕರಿಸಿದ ತರುವಾಯ, ಪರಿಷತ್ತು, ತಜ್ಞ ಸಮಿತಿಗೆ ಪರಿಶೀಲನೆ ಮಾಡುವಂತೆ ನಿರ್ದೇಶಿಸತಕ್ಕದ್ದು;
ಪರಂತು, ಪರಿಷತ್ತು ರಚಿಸಿದ ತಜ್ಞ ಸಮಿತಿಯಲ್ಲಿ ಕನಿಷ್ಠ ಪಕ್ಷ ರಾಜ್ಯ ಸಾರ್ವಜನಿಕ ವಿಶ್ವವಿದ್ಯಾಲಯದ ಒಬ್ಬರು ಮಾಜಿ ಉಪ-ಕುಲಪತಿಯು ಇರತಕ್ಕದ್ದು.
(೩) ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕರು, ಅರ್ಜಿಯನ್ನು ಮತ್ತು ಅದರ ನಕಲು ಪ್ರತಿಗಳನ್ನು ಹಾಗೂ ತಜ್ಞ ಸಮಿತಿಯ ವರದಿಯನ್ನು, ಅದರ ಮೇಲೆ ತೀರ್ಮಾನವನ್ನು ಕೈಗೊಳ್ಳುವುದಕ್ಕಾಗಿ ರಾಜ್ಯ ಸರ್ಕಾರಕ್ಕೆ ಪ ಸಲ್ಲಿಸತಕ್ಕದ್ದು ಅಥ
(೪) ರಾಜ್ಯ ಸರ್ಕಾರವು, ತಜ್ಞ ಸಮಿತಿಯ ಶಿಫಾರಸ್ಸುಗಳ ಹಿನ್ನೆಲೆಯಲ್ಲಿ ಅಂಥ ಅರ್ಜಿಗಳನ್ನು ಪರಿಗಣಿಸತಕ್ಕದ್ದು ಮತ್ತು ಅಂಥ ಪರಿಶೀಲನೆಯ ತರುವಾಯ, ರಾಜ್ಯ ಸರ್ಕಾರಕ್ಕೆ ಅಗತ್ಯವೆಂದು ಕಂಡುಬಂದರೆ, ದಾಖಲಾತಿಯಲ್ಲಿನ ವ್ಯ ್ಯಸವೂ ಸೇರಿದಂತೆ. ಸಂದರ್ಭಾನುಸಾರ, ಹೊಸ ಕೋರ್ಸುಗಳನ್ನು ಪ್ರಾರಂಭಿಸಲು. ಅಥವಾ ಪ್ರಸ್ತಾವನೆಯನ್ನು ತಿರಸ್ಕರಿಸಲು ವಿಶ್ವವಿದ್ಯಾಲಯಕ್ಕೆ ಅನುಮತಿ ನೀಡತಕ್ಕದ್ದು. 2
(೫) (೧)ನೇ ಉಪ-ನಿಯಮದ ಮೇರೆಗೆ ಸಲ್ಲಿಸಿದ ಯಾವುದೇ ಅರ್ಜಿಯನ್ನು (೪)ನೇ ಉಪ-ನಿಯಮದ ಮೇರೆಗೆ ಅನುಮತಿ ನೀಡುವುದಕ್ಕೆ ಅಥವಾ ತಿರಸ್ಕರಿಸುವುದಕ್ಕೆ ಮೊದಲು ಯಾವುದೇ ಸಮಯದಲ್ಲಿ ವಿಶ್ವವಿದ್ಯಾಲಯವು ಹಿಂದಕ್ಕೆ ಪಡೆಯಬಹುದು. 5. ವಿಶ್ವವಿದ್ಯಾಲಯದಲ್ಲಿ ಹಾಲಿ ಇರುವ ಕೋರ್ಸುಗಳನ್ನು ಮುಚ್ಚುವುದು- (೧) ವಿಶ್ವವಿದ್ಯಾಲಯವು, ಹಾಲಿ ಇರುವ ಕೋರ್ಸುಗಳನ್ನು ಅದರ ಸಾಮರ್ಥ್ಯಕ್ಕನುಸಾರವಾಗಿ ಅಥವಾ ಹಣಕಾಸಿನ ಕಾರ್ಯಸಾಧ್ಯತೆ ಅಥವಾ ದಾಖಲಾತಿಯ ಕೊರತೆಯಿಂದಾಗಿ ಮುಚ್ಚಲು ಉದ್ದೇಶಿಸಿದಲ್ಲಿ. ಅದಕ್ಕೆ ಕಾರಣಗಳನ್ನು ತಿಳಿಸಿ ಉದ್ದೇಶಿತ ಕೋರ್ಸುಗಳನ್ನು ಮುಚ್ಚುವುದಕ್ಕೆ ಮೊದಲು ೩ ತಿಂಗಳುಗಳಿಗೆ ಕಡಿಮೆಯಿಲ್ಲದಂತೆ ರಾಜ್ಯ ಸರ್ಕಾರಕ್ಕೆ ಲಿಖಿತದಲ್ಲಿ ಅರ್ಜಿಯನ್ನು ಸಲ್ಲಿಸತಕ್ಕದ್ದು. (೨) ರಾಜ್ಯ ಸರ್ಕಾರವು, ಅದನ್ನು ಪರಿಗಣಿಸಿದ ಮೇಲೆ, ಮುಚ್ಚುವ ಅನುಮತಿಯನ್ನು ನೀಡಿ ಅಥವಾ ಮುಚ್ಚುವುದನ್ನು ತಿರಸ್ಕರಿಸಿ ವಿಶ್ವವಿದ್ಯಾಲಯಕ್ಕೆ ನಿರ್ದೇಶನಗಳನ್ನು ನೀಡತಕ್ಕದ್ದು.
(೩) ವಿಶ್ವವಿದ್ಯಾಲಯವು, ಪ್ರಸಕ್ತ ಶೈಕ್ಷಣಿಕ ವರ್ಷದ ಅವಧಿಯಲ್ಲಿ ಮತ್ತು ಸದರಿ ಕೋರ್ಸುಗಳನ್ನು ಅಧ್ಯಯನ ಮಾಡುತ್ತಿರುವ ಕೊನೆಯ ಬ್ಯಾಚ್ನ ವಿದ್ಯಾರ್ಥಿಗಳು ತಮ್ಮ ಕೋರ್ಸನ್ನು ಪೂರ್ಣಗೊಳಿಸುವವರೆಗೂ ಮತ್ತು ಅಧ್ಯಯನ ಕೋರ್ಸುಗಳಿಗೆ ಅಥವಾ ಅದಕ್ಕೂ ಮಿಗಿಲಾದವುಗಳಿಗೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯವು ನಡೆಸುವ ವಾರ್ಷಿಕ ಪರೀಕ್ಷೆಗಳು ಮುಗಿಯುವವರೆಗೂ ಸದರಿ ಕೋರ್ಸುಗಳನ್ನು ಮುಕ್ತಾಯ ಮಾಡತಕ್ಕದ್ದಲ್ಲ. ೬. ಕೋರ್ಸುಗಳನ್ನು ಹೆಚ್ಚಿಸುವುದು ಅಥವಾ ಕಡಿತಗೊಳಿಸುವುದು - ೪ನೇ ನಿಯಮದ ಉಪಬಂಧಗಳು ವಿಶ್ವವಿದ್ಯಾಲಯದಲ್ಲಿ ಕೋರ್ಸುಗಳನ್ನು ಹೆಚ್ಚಿಸುವುದಕ್ಕೆ ಅಥವಾ ಕಡಿತಗೊಳಿಸುವುದಕ್ಕೆ ಸಂಬಂಧಿಸಿದಂತೆಯೂ ಸಹ ಯಥೋಚಿತ ವ್ಯತ್ಯಾಸಗಳೊಂದಿಗೆ ಅನ್ವಯವಾಗತಕ್ಕದ್ದು. ೭. ಪರಿಶೀಲನೆ ಮಾಡಲು ಮತ್ತು ನಿರ್ದೇಶನಗಳನ್ನು ನೀಡಲು ರಾಜ್ಯ ಸರ್ಕಾರದ ಅಧಿಕಾರಗಳು - (೧) ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ ಬೋಧನೆಯ ಗುಣಮಟ್ಟ, ಪರೀಕ್ಷೆ ಮತ್ತು ಸಂಶೋಧನೆ ಅಥವಾ ಯಾವುದೇ ವಿಷಯಗಳನ್ನು ನಿರ್ದಿಷ್ಟಪಡಿಸುವ ಉದ್ದೇಶಕ್ಕಾಗಿ, ಸರ್ಕಾರವು, ಉಪ-ಕುಲಪತಿಗಳೊಂದಿಗೆ ಸಮಾಲೋಚಿಸಿದ ನಂತರ ೩ ಖ್ಯಾತ ಶಿಕ್ಷಣ ತಜ್ಞರನ್ನು ಒಳಗೊಂಡ ಸರ್ಕಾರದಿಂದ ರಚಿತವಾದ ತಜ್ಞ ಸಮಿತಿಯ ಮೂಲಕ ಮೌಲ್ಯನಿರ್ಣಯ ಮಾಡತಕ್ಕದ್ದು. ಸದರಿ ಸಮಿತಿಯಲ್ಲಿ ಒಬ್ಬರು ರಾಜ್ಯ ಸಾರ್ವಜನಿಕ ವಿಶ್ವವಿದ್ಯಾಲಯದ ಮಾಜಿ ಉಪ-ಕುಲಪತಿಯಾಗಿರತಕ್ಕದ್ದು. 9) ತಜ್ಞ ಸಮಿತಿಯಿಂದ ವರದಿಯನ್ನು ಸ್ವೀಕರಿಸಿದ ತರುವಾಯ, ಸರ್ಕಾರವು, ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕಾಗಿ ಮೌಲ್ಯನಿರ್ಧರಣೆಗೆ ಸಂಬಂಧಿಸಿದ ಫಲಿತಾಂಶದ ಬಗ್ಗೆ ಅದರ ಶಿಫಾರಸ್ಸುಗಳನ್ನು ತಿಳಿಸತಕ್ಕದ್ದು ಮತ್ತು ವಿಶ್ವವಿದ್ಯಾಲಯವು, ಶಿಫಾರಸ್ಸುಗಳನ್ನು ಪಾಲಿಸಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಅಗತ್ಯವಾದಂತ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳತಕ್ಕದ್ದು. ವಿಶ್ವವಿದ್ಯಾಲಯವು ಯುಕ್ತ ಕಾಲದೊಳಗೆ (2)ನೇ ಉಪ-ಪರಕರಣದ ಮೇರೆಗೆ ಮಾಡಿದ ಶಿಫಾರಸ್ಸುಗಳನ್ನು ಪಾಲಿಸಲು ವಿಫಲವಾದರೆ, ಸರ್ಕಾರವು ತಾನು ಸೂಕ್ತವೆಂದು ಭಾವಿಸಬಹುದಾದಂತೆ ಅಂತಹ ನಿರ್ದೇಶನಗಳನ್ನು ನೀಡಬಹುದು. ವಿಶ್ವವಿದ್ಯಾಲಯವು ಅದಕ್ಕೆ ಬದ್ಧವಾಗಿರತಕ್ಕದ್ದು. 8. ಶಾಶ್ವತ ಶಾಸನಬದ್ಧ ದತ್ತಿ ನಿಧಿ- (1) ಶಾಶ್ವತ ಶಾಸನಬದ್ಧ ದತ್ತಿ ನಿಧಿಯನ್ನು , ನಿರ್ದೇಶಕರು, ಕಾಲೇಜು ಶಿಕ್ಷಣ, ಕರ್ನಾಟಕ ಇವರ ಹೆಸರಿನಲ್ಲಿ ಇಡತಕ್ಕದ್ದು, ಅವರು ಶಾಶ್ವತ ಶಾಸನಬದ್ಧ ದತ್ತಿ ನಿಧಿಗೆ ಸಂಬಂಧಿಸಿದ ಎಲ್ಲ ದಸ್ತಾವೇಜುಗಳು ಮತ್ತು ಲಿಖಿತ ಪತ್ರಗಳಿಗೆ ಮತ್ತು ಅಧಿನಿಯಮದ ಉಪಬಂಧಗಳಿಗನುಸಾರವಾಗಿ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಅದರ ಹೂಡಿಕೆಗಳಿಗೆ ಅಭಿರಕ್ಷಕರಾಗಿರತಕ್ಕದ್ದು. (2) ವಿಶ್ವವಿದ್ಯಾಲಯ ಅಥವಾ ಪ್ರಾಯೋಜಕ ಸಂಸ್ಥೆ ಯಾವುದೇ ಅಧಿನಿಯಮ, ಪರಿನಿಯಮಗಳು, ಅಧ್ಯಾದೇಶ, ವಿನಿಯಮಗಳು ಅಥವಾ ಅದರ ಅಡಿಯಲ್ಲಿ ರಚಿಸಲಾದ ನಿಯಮಗಳ ಯಾವುದೇ ಉಪಬಂಧಗಳನ್ನು ಉಲ್ಲಂಘಿಸಿದ ಸಂದರ್ಭದಲ್ಲಿ, ದತ್ತಿ ನಿಧಿಯ ಒಂದು ಭಾಗ ಅಥವಾ ಸಂಪೂರ್ಣ ನಿಧಿಯನ್ನು ಸರ್ಕಾರವು ಮುಟ್ಟುಗೋಲು ಹಾಕಿಕೊಳ್ಳಬಹುದು. ಆದರೆ ಹಾಗೆ ಮುಟ್ಟುಗೋಲು ಹಾಕಿಕೊಳ್ಳುವ ಮೊದಲು, ಸರ್ಕಾರವು, ಸಂದರ್ಭಾನುಸಾರ ಪ್ರಾಯೋಜಕ ಸಂಸ್ಥೆ ಅಥವಾ ವಿಶ್ವವಿದ್ಯಾಲಯಕ್ಕೆ ಕಾರಣ ಕೇಳುವ ನೋಟೀಸನ್ನು ಜಾರಿ ಮಾಡತಕ್ಕದ್ದು;
(3) . ಸರ್ಕಾರವು, ಇತರೆ ವಿಷಯಗಳಲ್ಲಿ ಪ್ರಾಯೋಜಕ ಸಂಸ್ಥೆ ಅಥವಾ ವಿಶ್ವವಿದ್ಯಾಲಯವು ನೀಡಿದ ಉತ್ತರವನ್ನು ಕ್ರಮಬದ್ಧವಾಗಿ ಪರಿಗಣಿಸತಕ್ಕದ್ದು.
(4) ಪ್ರಾಯೋಜಕ ಸಂಸ್ಥೆ ಅಥವಾ ವಿಶ್ವವಿದ್ಯಾಲಯವು (2)ನೇ ಉಪ-ನಿಯಮದ ಮೇರೆಗೆ ನೀಡಲಾದ ಕಾರಣ ಕೇಳುವ ನೋಟೀಸಿಗೆ, ನೋಟೀಸನ್ನು ನೀಡಿದ 45 ದಿನಗಳೊಳಗಾಗಿ ಉತ್ತರವನ್ನು ನೀಡದಿದ್ದ ಸಂದರ್ಭದಲ್ಲಿ, ಸರ್ಕಾರವು, ಅಂಥ ಉತ್ತರಕ್ಕಾಗಿ ಕಾಯದೇ ಪ್ರಕರಣವನ್ನು ತೀರ್ಮಾನಿಸಬಹುದು.
(5) ಮುಟ್ಟುಗೋಲು ಹಾಕಿಕೊಂಡ ಶಾಶ್ವತ ದತ್ತಿ ನಿಧಿಯ ಮೊತ್ತವನ್ನು, ಸರ್ಕಾರದಲ್ಲಿ ನಿಹಿತಗೊಳಿಸತಕ್ಕದ್ದು. ಮತ್ತು. ಅದನ್ನು, ಮುಟ್ಟುಗೋಲು ಹಾಕಿಕೊಳ್ಳುವ ಸಮಯದಲ್ಲಿ ಸರ್ಕಾರವು ನಿರ್ಧಿಷ್ಟಪಡಿಸಬಹುದಾದ ರೀತಿಯಲ್ಲಿ ಬಳಸಿಕೊಳ್ಳತಕ್ಕದ್ದು.
(6) . 49ನೇ ಪ್ರಕರಣದ ಮೇರೆಗೆ ಸಾಮಾನ್ಯ ನಿಧಿ ಮತ್ತು 50ನೇ ಪ್ರಕರಣದ ಮೇರೆಗೆ ಅಭಿವೃದ್ಧಿ ನಿಧಿಯೆಂದು ಕರೆಯಲಾಗುವ ಎಲ್ಲ ಇತರೆ ನಿಧಿಗಳನ್ನು ದ್ವಿಗುಣ ನಮೂದು ಲೆಕ್ಕವನ್ನು ಇಡುವ ವಿಧಾನದಲ್ಲಿ (Double entry book keeping method) ನಿರ್ವಹಿಸತಕ್ಕದ್ದು ಮತ್ತು ರಾಷ್ಟ್ರೀಕೃತ ಅಥವಾ ಅನುಸೂಚಿತ ಬ್ಯಾಂಕ್ನಲ್ಲಿ ಇಡತಕ್ಕದ್ದು.
(7) ಶಾಶ್ವತ ಶಾಸನಬದ್ಧ ನಿಧಿ, ಸಾಮಾನ್ಯ ನಿಧಿ. ಮತ್ತು ಅಭಿವೃದ್ಧಿ ನಿಧಿಯನ್ನು, ಲೆಕ್ಕಪರಿಶೋಧಕರಿಂದ ಲೆಕ್ಕಪರಿಶೋಧನೆ ಮಾಡಿಸತಕ್ಕದ್ದು ಮತ್ತು ಲೆಕ್ಕಪರಿಶೋಧನಾ ವರದಿಯೊಂಧಿಗೆ ಲೆಕ್ಕಪತ್ರಗಳ ವಾರ್ಷಿಕ ವಿವರಣೆಪಟ್ಟಿ ಮತ್ತು ಅದರ ಅನುಸರಣೆಯನ್ನು ವಾರ್ಷಿಕವಾಗಿ ಕಾಲೇಜು ಶಿಕ್ಷಣ ನಿರ್ದೇಶಕರ ಮುಖಾಂತರ ರಾಜ್ಯ ಸರ್ಕಾರಕ್ಕೆ ಸಲ್ಲಿಸತಕ್ಕದ್ದು. 9. ವಿಶ್ವವಿದ್ಯಾಲಯದ ಅಮಾನತು ಅಥವಾ ರದ್ದಿಯಾತಿ - (1) ಅಧಿನಿಯಮದ 58ನೇ ಪ್ರಕರಣದ (4)ನೇ ಉಪ-ಪ್ರಕರಣದ ಪರಂತುಕದಲ್ಲಿ ಉಲ್ಲೇಖಿಸಲಾದ ಕಾರಣ ಕೇಳುವ ನೋಟೀಸಿಗೆ ವಿಶ್ವವಿದ್ಯಾಲಯದಿಂದ ಉತ್ತರವನ್ನು ಸ್ವೀಕರಿಸಿದ ಮೇಲೆ, ಅಧಿನಿಯಮ ಅಥವಾ ನಿಯಮಗಳು, ಪರಿನಿಯಮಗಳು ಮತ್ತು ಅದರಡಿಯಲ್ಲಿ ರಚಿಸಲಾದ ಅಧ್ಯಾದೇಶಗಳ ಎಲ್ಲ ಅಥವಾ ಯಾವುವೇ ಉಪಬಂಧಗಳ ಉಲ್ಲಂಘನೆಯಾಗಿದೆಯೆಂದು ಅಥವಾ ಅಧಿನಿಯಮದ ಅಡಿಯಲ್ಲಿ ಹೊರಡಿಸಲಾದ ನಿರ್ದೇಶನಗಳು ಉಲ್ಲಂಘನೆಯಾಗಿದೆಯೆಂದು ಅಥವಾ ಹಣಕಾಸಿನ ದುರ್ವಿನಿಯೋಗ ಅಥವಾ ದುರಾಡಳಿತ ಅಥವಾ ಅಶಿಸ್ತು ಕಂಡುಬಂದಿದೆಯೆಂದು ಮೇಲ್ನೋಟಕ್ಕೆ ಸರ್ಕಾರಕ್ಕೆ ಮನವರಿಕೆಯಾದಲ್ಲಿ ಅದು ಅವಶ್ಯವೆಂದು ಪರಿಗಣಿಸಬಹುದಾದಂತೆ, ಅಂಥ ವಿಚಾರಣೆ ನಡೆಸಲು ಆದೇಶವನ್ನು ಹೊರಡಿಸತಕ್ಕದ್ದು. (2) ಸರ್ಕಾರವು, ಉಪ-ಪ್ರಕರಣ (1)ರ ಮೇರೆಗೆ ಯಾವುದೇ ವಿಚಾರಣೆಯನ್ನು ನಡೆಸುವ ಉದ್ದೇಶಕ್ಕಾಗಿ, ಯಾವುದೇ ಆಪಾದನೆಗಳ ವಿಚಾರಣೆ ನಡೆಸಿ ಅದರ ಬಗ್ಗೆ ವರದಿಯನ್ನು ಸಲ್ಲಿಸಲು ನಿವೃತ್ತ ಸರ್ವೋಚ್ಛ ನ್ಯಾಯಾಲಯದ ಅಥವಾ ಉಚ್ಛ ನ್ಯಾಯಾಲಯದ ನ್ಯಾಯಾಧೀಶರ ನೇತೃತ್ವದಲ್ಲಿ ಒಂದು ವಿಚಾರಣಾ ಆಯೋಗವನ್ನು ರಚಿಸತಕ್ಕದ್ದು.
(3) (2)ನೇ ಉಪ-ಪ್ರಕರಣದ ಮೇರೆಗೆ ನೇಮಕವಾದ ಅಧಿಕಾರಿಯಿಂದ ವಿಚಾರಣಾ ವರದಿಯನ್ನು ಸ್ವೀಕರಿಸಿದ ತರುವಾಯ, ಸರ್ಕಾರವು, ವಿಶ್ವವಿದ್ಯಾಲಯವು ಈ ಅಧಿನಿಯಮದ ಎಲ್ಲಾ ಅಥವಾ ಯಾವುದೇ ಉಪಬಂಧಗಳನ್ನು ಅಥವಾ ನಿಯಮಗಳು, ಪರಿನಿಯಮಗಳು ಅಥವಾ ಅದರಡಿಯಲ್ಲಿ ರಚಿಸಲಾದ ಆದ್ಯಾದೇಶಗಳನ್ನು ಉಲ್ಲಂಘಿಸಿದೆಯೆಂದು ಅಥವಾ ಈ ನಿಯಮದ ಅಡಿಯಲ್ಲಿ ಅದು ಹೊರಡಿಸಿದ ಯಾವುವೇ ನಿರ್ದೇಶನಗಳನ್ನು ಉಲ್ಲಂಘಿಸಿದೆಯೆಂದು ಅಥವಾ ಈ ಅಧಿನಿಯಮದ 8ನೇ ಪ್ರಕರಣದಲ್ಲಿ ಹೇಳಲಾದಂತೆ ಅದು ಅಧಿಕಾರಗಳು ಲ ತ್ತು. ಪ್ರಕಾರ್ಯಗಳನ್ನು ನಿರ್ವಹಿಸುವುದನ್ನು ನಿಲ್ಲಿಸಿದೆಯೆಂದು ಅಥವಾ ವಿಶ್ವವಿದ್ಯಾಲಯದ ಶೈಕ್ಷಣಿಕ ಗುಣಮಟ್ಟಕ್ಕೆ ಬಾಧಕವಾಗುವಂತಹ ಹಣಕಾಸಿನ ದುರ್ವಿನಿಯೋಗ ಮತ್ತು ದುರಾಡಳಿತದ ಪರಿಸ್ಥಿತಿಯು ವಿಶ್ವವಿದ್ಯಾಲಯದಲ್ಲಿ ಉದ್ಭವವಾಗಿದೆ ಎಂದು ಸರ್ಕಾರಕ್ಕೆ. ಮನವರಿಕೆಯಾದರೆ, ಅದು ವಿಶ್ವವಿದ್ಯಾಲಯದ ಸಮಾಪನಕ್ಕಾಗಿ ಪ್ರಾಥಮಿಕ ಆದೇಶವನ್ನು ಹೊರಡಿಸತಕ್ಕದ್ದು ಮತ್ತು ಒಬ್ಬ ಆಡಳಿತಗಾರರನ್ನು ನೇಮಕ ಮಾಡತಕ್ಕದ್ದು.
(4) (3) ನೇ ಉಪ-ಪ್ರಕರಣದ ಮೇರೆಗೆ ನೇಮಕವಾದ ಆಡಳಿತಗಾರನು ಎಲ್ಲ ಅಧಿಕಾರಗಳನ್ನು ಹೊಂಧಿರತಕ್ಕದ್ದು ಮತ್ತು ಅಧಿನಿಯಮದ ಮೇರೆಗೆ ಆಡಳಿತ ಮಂಡಳಿ ಮತ್ತು ನಿರ್ವಹಣಾ ಮಂಡಳಿಯ ಎಲ್ಲ ಕರ್ತವ್ಯಗಳಿಗೆ ಒಳಪಟ್ಟಿರತಕ್ಕದ್ದು ಮತ್ತು ವಿಶ್ವವಿದ್ಯಾಲಯದ ನಿಯತ ಕೋರ್ಸುಗಳ ಕೊನೆಯ ಬ್ಯಾಚಿನ ವಿದ್ಯಾರ್ಥಿಗಳು ಅವರ ಕೋರ್ಸುಗಳನ್ನು ಪೂರ್ಣಗೊಳಿಸುವವರೆಗೂ ಮತ್ತು ಅವರು ಸಂದರ್ಭಾನುಸಾರ ಪದವಿ, ಡಿಪ್ಲೋಮಾ, ಅವಾರ್ಡು(ಪಾರಿತೋಷಕ)ಗಳನ್ನು ಹೊಂದುವವರೆಗೂ, ಆಡಳಿತಗಾರನು ವಿಶ್ವವಿದ್ಯಾಲಯದ ವ್ಯವಹರಣೆಗಳನ್ನು ನಿರ್ವಹಿಸತಕ್ಕದ್ದು.
(5) ಅವ್ಯವಹಾರಗಳನ್ನು ಸರಿಪಡಿಸಿದ ನಂತರ ಅಥವಾ ನಿಯತ ಕೋರ್ಸುಗಳ ಕೊನೆಯ ಬ್ಯಾಚು ವಿದ್ಯಾರ್ಥಿಗಳಿಗೆ ಸಂದರ್ಭಾನುಸಾರ ಪದವಿ, ಡಿಪ್ಲೋಮಾ ಅಥವಾ ಅವಾರ್ಡು (ಪಾರಿತೋಷಕ)ಗಳನ್ನು ನೀಡಿದ ನಂತರ ಆಡಳಿತಗಾರನು ಸರ್ಕಾರಕ್ಕೆ ವರದಿಯನ್ನು ಮಾಡತಕ್ಕದ್ದು.
(6) . (5)ನೇ ಉಪ-ಪ್ರಕರಣದ ಮೇರೆಗೆ, ವರದಿಯನ್ನು ಸ್ವೀಕರಿಸಿದ ಮೇಲೆ, ಸರ್ಕಾರವು, ಅಧಿಕೃತ ರಾಜ್ಯಪತ್ರದಲ್ಲಿ ಅಧಿಸೂಚನೆಯನ್ನು ಹೊರಡಿಸುವ ಮೂಲಕ, ವಿಶ್ವವಿದ್ಯಾಲಯವನ್ನು ರದ್ದುಪಡಿಸುವ ಬಗ್ಗೆ ಅಂತಿಮ ಆದೇಶವನ್ನು ಹೊರಡಿಸತಕ್ಕದ್ದು. ಮತ್ತು. ಅಂತಹ ಅಧಿಸೂಚನೆಯ ಪ್ರಕಟಣೆಯ ದಿನಾಂಕದಿಂದ ವಿಶ್ವವಿದ್ಯಾಲಯವು ರದ್ದಾಗತಕ್ಕದ್ದು ಮತ್ತು ವಿಶ್ವವಿದ್ಯಾಲಯದ ಎಲ್ಲ ಆಸ್ತಿಗಳು ಮತ್ತು ಹೊಣೆಗಾರಿಕೆಗಳು ಅಂತಹ ದಿನಾಂಕದಿಂದ ಪ್ರಯೋಜಕ ಸಂಸ್ಥೆಯಲ್ಲಿ ನಿಹಿತವಾಗತಕ್ಕದ್ದು.
(7) ಹಾಗೆ ರದ್ದಾದ ತರುವಾಯ, ಅಧಿನಿಯಮದ ಉಪಬಂಧಗಳಿಗೆ ಅನುಸಾರವಾಗಿ ಕ್ರಮತೆಗೆದುಕೊಳ್ಳಲು ಮತ್ತು ವಿದ್ಯಾರ್ಥಿಗಳ ತಮ್ಮ ಕೋರ್ಸುಗಳು ಪೂರ್ಣಗೊಳಿಸಿಕೊಳ್ಳುವವರೆಗೂ ಮತ್ತು ಅವರು ಪದವಿಗಳು ಅಥವಾ ಡಿಪ್ಲೋಮಾಗಳನ್ನು ಪಡೆಯುವವರೆಗೂ ಸಾರ್ವಜನಿಕ ಹಿತಾಸಕ್ತಿಯಿಂದ ಮತ್ತು ವಿದ್ಯಾರ್ಥಿಗಳ ಹಿತಾಸಕ್ತಿಯಲ್ಲಿ ವಿಶ್ವವಿದ್ಯಾಲಯವನ್ನು ನಡೆಸುವುದು. ಮತ್ತು ಅವರಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸುವುದು. ಸರ್ಕಾರಕ್ಕೆ ಸಕ್ಷಮವಾಗಿರತಕ್ಕದ್ದು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು
ಅವರ ಹೆಸರಿನಲ್ಲಿ
(ಮಹೇಶ್ ಆರ್)
ಸರ್ಕಾರದ ಅಧೀನ ಕಾರ್ಯದರ್ಶಿ
ಉನ್ನತ ಶಿಕ್ಷಣ ಇಲಾಖೆ (ವಿಶ್ವವಿದ್ಯಾಲಯಗಳು-2)