ಕರ್ನಾಟಕ ರಾಜ್ಯ ಆಡಳಿತ ಸೇವೆಗಳ (ನೇಮಕಾತಿ) ನಿಯಮಗಳು, 1957ರ ಅನುಸೂಚಿಯಲ್ಲಿ,-
(1) (4) ನೇ ಕಾಲಂನಲ್ಲಿ (ಎಪಿ ಕ್ರಮಸಂಖ್ಯೆಯಲ್ಲಿನ ಕೆಎಎಸ್ (ಸೂಪರ್ ಟೈಂ ಸ್ಕೇಲ್) ಹುದ್ದೆಯ ಪ್ರವರ್ಗದಲ್ಲಿ ಕೊನೆಯಲ್ಲಿ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:
“ಪರಂತು ಕರ್ನಾಟಕ ರಾಜ್ಯ ಆಡಳಿತ ಸೇವೆಗಳ (ನೇಮಕಾತಿ) (ತಿದ್ದುಪಡಿ) ನಿಯಮಗಳು, 2022ರ ಪ್ರಾರಂಭದ ದಿನಾಂಕದಿಂದ ಮುಂಬಡ್ತಿ ಪ್ರಕ್ರಿಯೆಗೆ ಒಂದು ಬಾರಿಯ ಕ್ರಮವಾಗಿ, ಕೆಎಎಸ್ (ಕಿರಿಯ ಶ್ರೇಣಿ, ಹಿರಿಯ ಶ್ರೇಣಿ ಮತ್ತು ಆಯ್ಕೆ ಶ್ರೇಣಿ) ವೃಂದದಲ್ಲಿ ಹನ್ನೊಂದು ವರ್ಷಗಳಿಗೆ ಕಡಿಮೆಯಿಲ್ಲದ ಒಟ್ಟು ಸೇವೆಯನ್ನು ಹೊಂದಿರತ್ಕದ್ದು ಅದರಲ್ಲಿ ಕೆಎಎಸ್ (ಆಯ್ಕೆ ಶ್ರೇಣಿ) ವೃಂದದಲ್ಲಿ ಒಂದು ವರ್ಷಕ್ಕೆ ಕಡಿಮೆಯಿಲ್ಲದ ಸೇವೆಯಿರತಕ್ಕದ್ದು.
ಸೂಚನೆ:- ಕರ್ನಾಟಕ ರಾಜ್ಯ ಆಡಳಿತ ಸೇವೆಗಳ (ನೇಮಕಾತಿ) (ತಿದ್ದುಪಡಿ) ನಿಯಮಗಳು, 2022ರ. ಉಪಬಂಧಗಳ (ಏನೇ ಕಾಲಂನಲ್ಲಿ ನಿರ್ದಿಷ್ಟಪಡಿಸಿದ ಹುದ್ದೆಗೆ ಮುಂಬಡ್ತಿ ಪ್ರಕ್ರಿಯೆಯಲ್ಲಿ ಒಂದು ಬಾರಿಯ ಕ್ರಮವು ಪೂರ್ಣಗೊಂಡ ಮೇಲೆ ಅದರ ಕಾರ್ಯಾಚರಣೆಯು ನಿಂತುಹೋಗತಕ್ಕದ್ದು.”
(2) (4) ನೇ ಕಾಲಂನಲ್ಲಿ (ಎತ) ಕ್ರಮಸಂಖ್ಯೆಯಲ್ಲಿನ ಕೆಎಎಸ್ (ಆಯ್ಕೆ ಶ್ರೇಣಿ'' ಹುದ್ದೆಯ ಪ್ರವರ್ಗದಲ್ಲಿ ಕೊನೆಯಲ್ಲಿ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:
“ಪರಂತು ಕರ್ನಾಟಕ ರಾಜ್ಯ ಆಡಳಿತ ಸೇವೆಗಳ (ನೇಮಕಾತಿ) (ತಿದ್ದುಪಡಿ) ನಿಯಮಗಳು, 2022ರ ಪ್ರಾರಂಭದ ದಿನಾಂಕದಿಂದ ಮುಂಬಡ್ತಿ ಪ್ರಕ್ರಿಯೆಗೆ ಒಂದು ಬಾರಿಯ ಕ್ರಮವಾಗಿ ಕೆಎಎಸ್ (ಕಿರಿಯ ಶ್ರೇಣಿ ಮತ್ತು ಹಿರಿಯ ಶ್ರೇಣಿ) ವೃಂದದಲ್ಲಿ ಎಂಟು ವರ್ಷಗಳಿಗೆ ಕಡಿಮೆಯಿಲ್ಲದ ಒಟ್ಟು ಸೇವೆಯನ್ನು ಹೊಂದಿರತಕ್ಕದ್ದು ಅದರಲ್ಲಿ ಕೆಎಎಸ್ (ಹಿರಿಯ ಶ್ರೇಣಿ) ವೃಂದದಲ್ಲಿ ಎರಡು ವರ್ಷಗಳಿಗೆ ಕಡಿಮೆಯಿಲ್ಲದ ಸೇವೆಯಿರತಕ್ಕದ್ದು.
ಸೂಚನೆ:- ಕರ್ನಾಟಕ ರಾಜ್ಯ ಆಡಳಿತ ಸೇವೆಗಳ (ನೇಮಕಾತಿ) (ತಿದ್ದುಪಡಿ) ನಿಯಮಗಳು, 2022ರ. ಉಪಬಂಧಗಳ (ಏನೇ ಕಾಲಂನಲ್ಲಿ ನಿರ್ದಿಷ್ಟಪಡಿಸಿದ ಹುದ್ದೆಗೆ ಮುಂಬಡ್ತಿ ಪ್ರಕ್ರಿಯೆಯಲ್ಲಿ ಒಂದು ಬಾರಿಯ ಕ್ರಮವು ಪೂರ್ಣಗೊಂಡ ಮೇಲೆ ಅದರ ಕಾರ್ಯಾಚರಣೆಯು ನಿಂತುಹೋಗತಕ್ಕದ್ದು.” ಕರ್ನಾಟಕ ರಾಜ್ಯಪಾಲರ ಆಜ್ನಾನುಸಾರ ಮತ್ತು ಅವರ ಹೆಸರಿನಲ್ಲಿ, (ಉಮಾದೇವಿ) ಸರ್ಕಾರದ ಅಧೀನ ಕಾರ್ಯದರ್ಶಿ ಸಿ.ಆ.ಸು.ಇ(ಸೇವೆಗಳು-2)