ಕರ್ನಾಟಕ ಲೋಕಾಯುಕ್ತ ನಿಯಮಗಳು, 1985 ರಲ್ಲಿ ನಿಯಮ 7ನ್ನು ಈ ಕೆಳಕಂಡಂತೆ ಮಾರ್ಪಡಿಸಲಾಗಿದೆ:- 7. ಆಸ್ತಿ ಹೇಳಿಕೆ:- “ಸೆಕ್ಷನ್ 22ರ ಅಡಿಯಲ್ಲಿ ಆಸ್ತಿ ಮತ್ತು ದಾಯಿತ್ವಗಳ ಹೇಳಿಕೆಯನ್ನು ನಮೂನೆ IV ರಲ್ಲಿ ಕರ್ನಾಟಕ ಲೋಕಾಯುಕ್ತ ಜಾಲತಾಣದ ಮೂಲಕ ಸಲ್ಲಿಸತಕ್ಕದ್ದು”
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,
(ಆಂಜನಮೂರ್ತಿ)
ಸರ್ಕಾರದ ಅಧೀನ ಕಾರ್ಯದರ್ಶಿ
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ
(ಜಾಗೃತ ವಿಭಾಗ)