(1) ಈ ಅಧ್ಯಾದೇಶವನ್ನು ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ (ತಿದ್ದುಪಡಿ) ಅಧ್ಯಾದೇಶ, 2022 ಎಂದು ಕರೆಯತಕ್ಕದ್ದು.
(2) ಇದು ಈ ಕೂಡಲೇ ಜಾರಿಗೆ ಬರತಕ್ಕದ್ದು.
2.9ಎ ಹೊಸ ಪ್ರಕರಣದ ಸೇರ್ಪಡೆ.- ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ಅಧಿನಿಯಮ, 2004 (2005ರ ಕರ್ನಾಟಕ ಅಧಿನಿಯಮ 30)ರ ಇಲ್ಲಿ ಇನ್ನು ಮುಂದೆ ಮೂಲ ಅಧಿನಿಯಮ DOD ಉಲ್ಲೇಖಿಸಲಾಗಿದೆ) 9ನೇ ಪ್ರಕರಣದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು. ಎಂದರೆ:-
“9ಎ. ಅಪರಾಧಗಳ HOW, OHS ಮತ್ತು ಪ್ರಕರಣಗಳನ್ನು ವಿಲೀನಗೊಳಿಸುವ ಅಧಿಕಾರ. (1) ಈ ಅಧಿನಿಯಮದ ಅಡಿಯಲ್ಲಿನ ಅಪರಾಧವು ಸಂಜ್ನೇಯವಾಗಿರತಕ್ಕದ್ದು.. ಮತ್ತು ಜಾಮೀನುರಹಿತವಾಗಿರತಕ್ಕದ್ದು.
(2) ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಇತರ ಕಾನೂನಿನಲ್ಲಿ ಏನೇ ಒಳಗೊಂಡಿದ್ದರೂ, ವಂಚನೋದ್ದೇಶದ ಬೇಪಾವತಿಗೆ ಸಂಬಂಧಿಸಿದಂತೆ ಅದೇ ಆರೋಪಿತ ವ್ಯಕ್ತಿ ಅಥವಾ ಹಣಕಾಸು ಸಂಸ್ಥೆಯ ವಿರುದ್ಧ ಜಿಲ್ಲೆಯ ಅಥವಾ ಕಮೀಷನರೇಟ್ನ ಒಂದು ಪೊಲೀಸ್ ಠಾಣೆಯಲ್ಲಿ ಅಥವಾ ಹಲವು ಪೊಲೀಸ್ ಠಾಣೆಗಳಲ್ಲಿ ಅಥವಾ ರಾಜ್ಯದ ಹಲವು ಪೊಲೀಸ್ ಠಾಣೆಗಳಲ್ಲಿ ಹಲವಾರು ಪ್ರಥಮ ವರ್ತಮಾನ ವರದಿಗಳು ದಾಖಲಾಗಿದ್ದಲ್ಲಿ, ಆಗ ನಿಯಮಿಸಬಹುದಾದ OB ಅಧಿಕಾರಿಯು ಆನಂತರದಲ್ಲಿ ದಾಖಲಾದ ಪ್ರಥಮ ವರ್ತಮಾನ ವರದಿಗಳನ್ನು ಮೊದಲಿನ ಪ್ರಕರಣದೊಂ೦ದಿಗೆ ವಿಲೀನಗೊಳಿಸಲು ಆದೇಶಿಸಬಹುದು ಹಾಗೂ ಸಾಮಾನ್ಯ ತನಿಖೆಯನ್ನು ಕೈಗೊಳ್ಳಲು ಆದೇಶಿಸಬಹುದು. ಮುಂದುವರೆದು BOB ಪ್ರಕ್ರಿಯಾ ಸಂಹಿತೆ, 1973ರ 173ನೇ ಪ್ರಕರಣದ ಅಡಿಯಲ್ಲಿ ಒಂದೇ ಅಂತಿಮ ವರದಿಯನ್ನು ಮೊದಲು ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿದ ಅಧಿಕಾರ ವ್ಯಾಪ್ತಿಯೊಳ?ಿನ ವಿಶೇಷ ನ್ಯಾಯಾಲಯದ ಮುಂದೆ ದಾಖಲಿಸುವುದು ಹಾಗೂ ಅದನ್ನು ಆ ವಿಶೇಷ ನ್ಯಾಯಾಲಯ ಅಥವಾ COP ಅಪರಾಧದ ಅಧಿವಿಚಾರಣೆಗೆ ಹೆಸರಿಸಲಾದ ಯಾವುದೇ ಇತರ ವಿಶೇಷ ನ್ಯಾಯಾಲಯವು ಅಧಿವಿಚಾರಣೆಯನ್ನು ನಡೆಸತಕ್ಕದ್ದು.”