Annexure
ಈಗ, ಭಾರತ ಸಂವಿಧಾನದ 213ನೇ ಅನುಚ್ನೇದದ (1)ನೇ ಖಂಡದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕದ ರಾಜ್ಯಪಾಲರು ಈ ಮುಂದಿನ ಅಧ್ಯಾದೇಶವನ್ನು ಪ್ರಖ್ಯಾಪಿಸಿದ್ದಾರೆ, ಎಂದರೆ:-
- ಸಂಕ್ಲಿಪ್ತ ಹೆಸರು ಮತ್ತು ಪ್ರಾರಂಭ.- (1) ಈ ಅಧ್ಯಾದೇಶವನ್ನು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ಅಧ್ಯಾದೇಶ, 2021 ಎಂದು ಕರೆಯತಕ್ಕದ್ದು.
(2) ಇದು ಈ ಕೂಡಲೇ ಜಾರಿಗೆ ಬರತಕ್ಕದ್ದು.
- 17ನೇ ಪ್ರಕರಣದ ತಿದ್ದುಪಡಿ.- ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ, 1961ರ (1963ರ ಕರ್ನಾಟಕ ಅಧಿನಿಯಮ 11) 17ನೇ ಪ್ರಕರಣದಲ್ಲಿ,-
(1) (2-A) ಉಪಪ್ರಕರಣದ ಬದಲಾಗಿ ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ,-
“(2-ಸಿ). ಒಬ್ಬ ವ್ಯಕ್ತಿಯು, ಎರಡು ಹಂತಗಳಲ್ಲಿ ನಿವೇಶನಗಳ ಬಿಡುಗಡೆಯನ್ನು ಇಚ್ಡಿಸಿದಲ್ಲಿ ಅದಕ್ಕೂ ಸಹ ಅನುಮತಿಯನ್ನು ನೀಡಬಹುದು. ಅಂಥ ಸಂದರ್ಭದಲ್ಲಿ ಯೋಜನಾ ಪ್ರಾಧಿಕಾರವು ತಾತ್ಕಾಲಿಕ ಲೇ ಔಟ್ ಪ್ಲಾನಿನ ಅನುಮೋದನೆಯ ತರುವಾಯ ಮೊದಲನೇ ಹಂತದಲ್ಲಿ ಲೇಔಟಿನಲ್ಲಿನ ಶೇಕಡ ನಲವತ್ತರಷ್ಟು ನಿವೇಶನಗಳನ್ನು ಬಿಡುಗಡೆ ಮಾಡತಕ್ಕದ್ದು ಮತ್ತು ಉಳಿದ ಶೇಕಡ ಅರವತ್ತರಷ್ಟು ನಿವೇಶನಗಳನ್ನು ಎಲ್ಲ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡ ತರುವಾಯ ಈ ಮುಂದಿನ ರೀತಿಯಲ್ಲಿ ಬಿಡುಗಡೆ ಮಾಡತಕ್ಕದ್ದು, ಎಂದರೆ:-
(i) ಶೇಕಡ ನಲವತ್ತರಷ್ಟು ನಿವೇಶನಗಳನ್ನು ಬಿಡುಗಡೆ ಮಾಡುವ ಮೊದಲು ನಿಯಮಿಸಲಾದ ರೀತಿಯಲ್ಲಿ ತಾತ್ಕಾಲಿಕ ಲೇಔಟ್ ಪ್ಲಾನಿನ ಅನುಮೋದನೆಯ ನಂತರ ಯೋಜನಾ ಪ್ರಾಧಿಕಾರವು,-
(ಎ) ಲೇ ಔಟ್ನಲ್ಲಿ ಉದ್ಯಾನವನ, ಆಟದ ಮೈದಾನ ಮತ್ತು ರಸ್ತೆಗಳಿಗಾಗಿ ಸ್ಥಳೀಯ ಪ್ರಾಧಿಕಾರಕ್ಕೆ ಮೀಸಲಿರಿಸಿದ ಹಾಗೂ ಗುರುತಿಸಿದ ಪ್ರದೇಶವನ್ನು ಬಿಟ್ಟುಕೊಡುವ ಮತ್ತು ಯಾವುದೇ ಪರಿಹಾರವನ್ನು ಕ್ಷೇಮು ಮಾಡದೇ ನಾಗರೀಕ ಸೌಲಭ್ಯಗಳಿಗಾಗಿ ಯೋಜನಾ ಪ್ರಾಧಿಕಾರಕ್ಕೆ ಮೀಸಲಿರಿಸಿದ ಮತ್ತು ಗುರುತಿಸಿದ ಪ್ರದೇಶವನ್ನು ಬಿಟ್ಟು ಕೊಡುವ ಅರ್ಜಿದಾರವಿಂದ ನಿಯಮಿಸಿದ ನಮೂನೆಯಲ್ಲಿ ನೋಂದಾಯಿತ ಬಿಟ್ಟುಕೊಡುವ ಪತ್ರವನ್ನು ಪಡೆಯತಕ್ಕದ್ದು.
(ಬಿ) ಯೋಜನಾ ಪ್ರಾಧಿಕಾರಕ್ಕೆ ಲೇಔಟ್ ನಲ್ಲಿನಲ್ಲಿರುವ ಎಲ್ಲಾ ಮೂಲೆ ನಿವೇಶನಗಳ ನೋಂದಾಯಿತ ಅಡಮಾನ ಒಪ್ಪಂದವನ್ನು ಸಹ ಪಡೆಯತಕ್ಕದು; ಮತ್ತು
(ಸಿ) ರಿಯಲ್ ಎಸ್ಟೇಟ್ (ವಿನಿಯಮನ ಮತ್ತು ಅಭಿವೃದ್ಧಿ) ಅಧಿನಿಯಮ, 2016ರ ( 2016ರ ಕೇಂದ್ರ ಅಧಿನಿಯಮ 16 ಅಡಿಯಲ್ಲಿ ಯೋಜನೆಯನ್ನು ನೋಂದಾಯಿಸಲಾಗಿದೆಯೇ ಎಂಬುದನ್ನು ಖಾತರಿಪಡಿಸತಕ್ಕದ್ದು;
(ii) ಯೋಜನಾ ಪ್ರಾಧಿಕಾರವು, ಮೇಲಿನ ದಸ್ತಾವೇಜುಗಳನ್ನು ಪಡೆದುಕೊಂಡ ತರುವಾಯ, ತಾತ್ಕಾಲಿಕವಾಗಿ ಅನುಮೋದಿತವಾದ ಲೇಔಟ್ ಪ್ಲಾನ್ ನ ಮೇಲೆ ಪ್ರಾಧಿಕಾರದ ಮೊಹರು ಲಗತ್ತಿಸಿ
ಬಿಡುಗಡೆಮಾಡಿದ ಕಟ್ಟಡದ ನಿವೇಶನಗಳನ್ನು ತೋರಿಸುವ, ಲೇ ಔಟಿನಲ್ಲಿ ಅಲ್ಲಲ್ಲಿ ಇರುವ ಶೇಕಡ ನಲವತ್ತರಷ್ಟು ನಿವೇಶನಗಳನ್ನು ಬಿಡುಗಡೆಗೊಳಿಸತಕ್ಕದ್ದು, ಅದನ್ನು ಕರ್ನಾಟಕ ಸ್ನ್ಮಾಂಪುಗಳ ಅಧಿನಿಯಮ, 1957ರ (1957ರ ಕರ್ನಾಟಕ ಅಧಿನಿಯಮ 34) ಮತ್ತು ನೋಂದಣಿ ಅಧಿನಿಯಮ, 1908 (1908ರ ಕೇಂದ್ರ ಅಧಿನಿಯಮ XVI) ರ ಮೇರೆಗೆ ನೋಂದಣಿಯ ಉದ್ದೇಶಕ್ಕಾಗಿ ಅಂಥ ನಿವೇಶನಗಳ ಖಾತಾ ನೀಡಿಕೆಗಾಗಿ ಸ್ಥಳೀಯ ಪ್ರಾಧಿಕಾರಕ್ಕೆ ಕಳುಹಿಸತಕ್ಕದ್ದು.
(iii) ತಾತ್ಕಾಲಿಕ ಲೇಔಟ್ ಪ್ಲಾನ್ ನ ಅನುಮೋದನೆಯ ದಿನಾಂಕದಿಂದ ಮೂರು ವರ್ಷಗಳ ಒಳಗಾಗಿ ಸಂಬಂಧಪಟ್ಮ ಪ್ರಾಧಿಕಾರ ಅಥವಾ ಏಜಿನ್ಸಿ ಅಥವಾ ಇಲಾಖೆಯಿಂದ ಪರಿಶೀಲನೆ ನಡೆಸಿದ ತರುವಾಯ ಸೌಲಭ್ಯಗಳನ್ನು, (2ಎ) ಉಪಪ್ರಕರಣದ ಅಡಿಯಲ್ಲಿ ನಿರ್ದಿಷ್ಟಪಡಿಸಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒಳಗೊಂಡಿರುವ ಎಲ್ಲಾ ಅಭಿವೃದ್ಧಿ ಕಾಮಗಾರಿಗಳ ಪೂರ್ಣಗೊಳಿಸುವಿಕೆಯನ್ನು ಯೋಜನಾ ಪ್ರಾಧಿಕಾರವು ಖಚಿತಪಡಿಸಿಕೊಳ್ಳತಕ್ಕದ್ದು. ತಾತ್ಕಾಲಿಕ ಲೇಔಟ್ ಪ್ಲಾನಿನ ಅನುಮೋದನೆಯ ದಿನಾಂಕದಿಂದ ಮೂರು ವರ್ಷಗಳೊಳಗೆ ಎಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸುವಿಕೆಗಾಗಿ ಪೂರ್ಣಗೊಳಿಸಿದ ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳದಿದ್ದರೆ, ಯೋಜನಾ ಪಾಧಿಕಾರವು ದಾಖಲಿಸಬೇಕಾದ ಕಾರಣಗಳಿಗಾಗಿ ಅಭಿವೃದ್ಧಿ ಪೂರ್ಣಗೊಳಿಸುವಿಕೆ ಅವಧಿಯನ್ನು ಒಂದು ವರ್ಷದ ಇನ್ನೊಂದು ಅವಧಿಗೆ ವಿಸ್ತರಿಸಬಹುದು.
(iv) ಉದ್ಯಾನವನ, ಆಟದ ಮೈದಾನ ಮತ್ತು ನಾಗರೀಕ ಸೌಲಭ್ಯ ನಿವೇಶನಗಳ ಅಭಿವೃದ್ಧಿಯನ್ನು ಒಳಗೊಂಡ ಎಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಿದ ಮತ್ತು ಮೂರು ವರ್ಷಗಳೊಳಗೆ ಅಥವಾ ವಿಸ್ತರಿಸಿದ ಅವಧಿಯೊಳಗೆ ಪ್ರಮಾಣ ಪತ್ರಗಳನ್ನು ಸಂಬಂಧಪಟ್ಟ ಪ್ರಾಧಿಕಾರ ಅಥವಾ ಏಜೆನ್ಸಿ ಅಥವಾ ಇಲಾಖೆಯಿಂದ ಪಡೆದುಕೊಂಡ ಮೇಲೆ, ಯೋಜನಾ ಪ್ರಾಧಿಕಾರವು ಪ್ರಾಧಿಕಾರಕ್ಕೆ ಅಡಮಾನವಿರಿಸಿದ ಮೂಲೆ ನಿವೇಶನಗಳೊಂ೦ದಿಗೆ ಉಳಿದ ಶೇಕಡ ಅರವತ್ತರಷ್ಟು ವಿವೇಶನಗಳನ್ನು ಬಿಡುಗಡೆಗೊಳಿಸಿ. ಅಂತಿಮ ಲೇಔಟ್ ಪ್ಲಾನನ್ನು ಅನುಮೋದಿಸತಕ್ಕದ್ದು. ಕಟ್ಟಡ ನಿವೇಶನಗಳನ್ನು ತೋರಿಸುವ ಅಂತಿಮ ಲೇಔಟ್ Dads ಒಂದು ಪ್ರತಿಯನ್ನು ಯೋಜನಾ ಪ್ರಾಧಿಕಾರದ ಮೊಹರನ್ನು ಹಾಕಿ ಅಂಥ ನಿವೇಶನಗಳಿಗೆ ಖಾತಾ ನೀಡಲು ಕರ್ನಾಟಕ ಸ್ಥಾಂಪುಗಳ ಅಧಿನಿಯಮ, 1957ರ (1957ರ ಕರ್ನಾಟಕ ಅಧಿವಿಯಮ 34) ಮತ್ತು ನೋಂದಣಿ ಅಧಿನಿಯಮ, 1908ರ (1908ರ ಕೇಂದ್ರ ಅಧಿನಿಯಮ XVI) ಅಡಿಯಲ್ಲಿ ನೋಂದಣಿಯ ಉದ್ದೇಶಕ್ಕಾಗಿ ಸ್ಥಳೀಯ ಪಾಧಿಕಾರಕ್ಕ ಕಳುಹಿಸತಕ್ಕದ್ದು:
ಪರಂತು (iii)ನೇ ಖಂಡದ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಅವಧಿಯೊಳಗೆ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಳ್ಳದಿರುವ ಸಂದರ್ಭದಲ್ಲಿ ಯೋಜನಾ ಪ್ರಾಧಿಕಾರಕ್ಕೆ ಅಡಮಾನವಿರಿಸಿರುವ ಮೂಲೆ ನಿವೇಶನಗಳನ್ನು ಯೋಜನಾ ಪ್ರಾಧಿಕಾರವು ಮುಟ್ಟುಗೋಲು ಹಾಕಿಕೊಳ್ಳತಕ್ಕದ್ದು.”
(2) ಹಾಗೆ ಪ್ರತಿಯೋಜಿಸಿದ (24) ಉಪಪ್ರಕರಣದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
(28). (2ಬಿ) ಉಪ ಪ್ರಕರಣದ ಅಡಿಯಲ್ಲಿ ತಾತ್ಕಾಲಿಕವಾಗಿ ಅನುಮೋದಿಸಲಾದ ಲೇಔಟಿನ ಸಂದರ್ಭದಲ್ಲಿ, (೭ಎ) ಉಪಪ್ರಕರಣದ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಅಭಿವೃದ್ಧಿ ಕಾಮಗಾರಿಗಳನ್ನು ತಾತ್ಕಾಲಿಕ ಲೇಔಟ್ ಪ್ಲಾನಿನ ಅನುಮೋದನೆಯ ದಿನಾಂಕದಿಂದ ಮೂರು ವರ್ಷಗಳ ಅವಧಿಯೊಳಗಾಗಿ ಪೂರ್ಣಗೊಳಿಸತಕ್ಕದ್ದು:
R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297
ಪರಂತು, ಯೋಜನಾ ಪ್ರಾಧಿಕಾರವು ಈ ಬಗ್ಗೆ ಸಲ್ಲಿಸಿದ ಅರ್ಜಿಯ ಮೇಲೆ ಲಿಖಿತದಲ್ಲಿ ದಾಖಲಿಸಬೇಕಾದ ಕಾರಣಗಳಿಗಾಗಿ ಅದು ಅವಶ್ಯಕವೆಂದು ಪರಿಗಣಿಸಬಹುದಾದಂತೆ ಲೆಔಟ್ ಅಭಿವೃದ್ಧಿಗಾಗಿನ ಅವಧಿಯನ್ನು ಒಂದು ವರ್ಷ ಮೀರದ ಮತ್ತೊಂದು ಅವಧಿಗೆ ವಿಸ್ತರಿಸಬಹುದು. ಅಭಿವೃದ್ಧಿ ಕಾಮಗಾರಿಗಳು ಅಂಥ ವಿರ್ದಿಷ್ಟ ಅವಧಿಯೊಳಗೆ ಪೂರ್ಣಗೊಳ್ಳದಿದ್ದ ಸಂದರ್ಭದಲ್ಲಿ ಯೋಜನಾ ಪ್ರಾಧಿಕಾರವು ನೀಡಿದ ಅನುಮತಿಯು ರದ್ದಾಗತಕ್ಕದ್ದು. ತದನಂತರ ಅರ್ಜಿದಾರನು ಯುಕ್ತ ಕಾರ್ಯವಿಧಾನವನ್ನು ಅನುಸರಿಸಿ ಹೊಸ ಅನುಮೋದನೆಯನ್ನು ಕೋರತಕ್ಕದ್ದು.
(29). ಈ ಅಧಿನಿಯಮದ ಅಡಿಯಲ್ಲಿ ಯೋಜನಾ ಪ್ರಾಧಿಕಾರವು ಬಿಡುಗಡೆ ಮಾಡದಿರುವ ಯಾವುದೇ ಕಟ್ಟಡ ನಿವೇಶನಕ್ಕೆ ಕರ್ನಾಟಕ ಪೌರಸಭೆಗಳ ಅಧಿನಿಯಮ, 1964 ರ (1964ರ ಕರ್ನಾಟಕ ಅಧಿನಿಯಮ 22), ಕರ್ನಾಟಕ ನಗರ ಪಾಲಿಕೆಗಳ ಅಧಿನಿಯಮ, 1976ರ (1976ರ ಕರ್ನಾಟಕ ಅಧಿನಿಯಮ 14), ಕರ್ನಾಟಿಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ (1993ರ ಕರ್ನಾಟಕ ಅಧಿನಿಯಮ 14) ಅಥವಾ ಸಂದರ್ಭಾನುಸಾರವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ, 2020ರ (2020ರ ಕರ್ನಾಟಕ ಅಧಿನಿಯಮ 53) ಅಡಿಯಲ್ಲಿ ಯಾವುದೇ ಖಾತಾ ಅಥವಾ ಸ್ವತ್ತು ಸೂಚ್ಯಂಕ ಸಂಖ್ಯೆ (ಇ-ಖಾತಾ) ನೀಡತಕ್ಕದ್ದಲ್ಲ.”
The above translation of the Karnataka Town and Country Planning (Amendment) Ordinance, 2021 (Karnataka Ordinance 06 of 2021) shall be authoritative text in Kannada language under section-5A of the Karnataka Official Language Act, 1963 (Karnataka Act 26 of 1963).
ವಜೂಭಾಯಿ ವಾಲಾ ಕರ್ನಾಟಕದ ರಾಜ್ಯಪಾಲರು
Annexure
(ಕೆ. ದ್ವಾರಕನಾಥ್ ಬಾಬು)
ಸರ್ಕಾರದ ಕಾರ್ಯದರ್ಶಿ
ಸಂಸದೀಯ ವ್ಯವಹಾರಗಳು ಮತ್ತು
ಶಾಸನ ರಚನೆ ಇಲಾಖೆ.
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ. ಬೆಂಗಳೂರು
By Order and in the name of the Governor of Karnataka,
(K. DWARAKANATH BABU)
Secretary to Government Department of Parliamentary Affairs and Legislation
ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಸಂವ್ಯಶಾಇ 26 ಶಾಸನ 2021, ಬೆಂಗಳೂರು, ದಿನಾಂಕ: 05.07.2021
The Karnataka Official Language Act, 1963 (Karnataka Act 26 of 1963) 3 ಪ್ರಕರಣ 5-ಎ ರಡಿಯಲ್ಲಿ ರಾಜ್ಯಪಾಲರಿಂದ ಅಧಿಕೃತಗೊಳಿಸಿದ The Karnataka Town and Country Planning (Amendment) Ordinance, 2021 (Karnataka Ordinance 06 of 2021) ನ ಭಾಷಾಂತರವನ್ನು ಅಧಿಕೃತ ಕನ್ನಡ ಪಠ್ಯವೆಂದು ದಿನಾಂಕ: 05.07.2021ರ ಕರ್ನಾಟಿಕ ರಾಜ್ಯಪತ್ರದ ವಿಶೇಷ ರಾಜ್ಯಪತ್ರಿಕೆಯಲ್ಲಿ (ಭಾಗ-1/ ಪ್ರಕಟಿಸಬೇಕೆಂದು ಆದೇಶಿಸಲಾಗಿದೆ,-
2021 ರ ಕರ್ನಾಟಕ ಅಧ್ಯಾದೇಶ ಸಂಖ್ಯೆ: 06
ಕರ್ನಾಟಕ ಪಟ್ಟಿಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ಅಧ್ಯಾದೇಶ, 2021
(ಭಾರತಗಣರಾಜ್ಯದ ಎಪ್ಪತ್ತೆರಡನೇ ವರ್ಷದಲ್ಲಿ ಕರ್ನಾಟಕ ರಾಜ್ಯಪಾಲರಿಂದ ಪ್ರಖ್ಯಾಪಿತವಾಗಿ 2021ರ ಜುಲೈ 05ನೇ ದಿನಾಂಕದಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟವಾಗಿದೆ)
ಕರ್ನಾಟಕ ಪಟ್ಟಿಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ, 1961ನ್ನು (1963ರ ಕರ್ನಾಟಕ ಅಧಿನಿಯಮ 11) ತಿದ್ದುಪಡಿ ಮಾಡಲು ಒಂದು ಅಧ್ಯಾದೇಶ.
ಕರ್ನಾಟಕ ವಿಧಾನಸಭೆ ಮತ್ತು ಕರ್ನಾಟಕ ವಿಧಾನ ಪರಿಷತ್ತು ಅಧಿವೇಶನದಲ್ಲಿ ಇಲ್ಲದಿರುವುದರಿಂದ ಮತ್ತು ಇಲ್ಲಿ ಇನ್ನು ಮುಂದೆ ಕಂಡುಬರುವ ಉದ್ದೇಶಗಳಿಗಾಗಿ ಅಧ್ಯಾದೇಶವನ್ನು ಪ್ರಖ್ಯಾಪಿಸಲು, ಶೀಘ್ರ ಕ್ರಮವನ್ನು ತೆಗೆದುಕೊಳ್ಳುವುದು ಅವಶ್ಯಗೊಳಿಸುವಂಥ ವಿದ್ಯಮಾನಗಳು ಉಂಟಾಗಿವೆಯೆಂದು ಕರ್ನಾಟಕದ ಮಾನ್ಯ ರಾಜ್ಯಪಾಲರಿಗೆ ಮನದಟ್ಟಾಗಿರುವುದರಿಂದ;
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,