(1) ಈ ನಿಯಮಗಳನ್ನು ಕರ್ನಾಟಕ ಅಬಕಾರಿ (ಅಬಕಾರಿ ಸುಂಕಗಳು ಮತ್ತು ಶುಲ್ಕಗಳು) (ತಿದ್ದುಪಡಿ) ನಿಯಮಗಳು, 2022 ಎಂದು ಕರೆಯತಕ್ಕದ್ದು.
(2) ಅವು, ಸರ್ಕಾರಿ ರಾಜ್ಯಪತ್ರದಲ್ಲಿ ಅಂತಿಮವಾಗಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರತಕ್ಕದ್ದು. 2. 2-ಎ ಬಿ ನಿಯಮದ ತಿದ್ದುಪಡಿ:– ಕರ್ನಾಟಕ ಅಬಕಾರಿ (ಅಬಕಾರಿ ಸುಂಕಗಳು ಮತ್ತು ಶುಲ್ಕಗಳು) ನಿಯಮಗಳು, 1968 (ಇದರಲ್ಲಿ ಇನ್ನು ಮುಂದೆ ಸದರಿ ನಿಯಮಗಳೆಂದು ಉಲ್ಲೇಖಿಸಲಾಗಿದೆ) ರಲ್ಲಿ, 2-ಎಬಿ ನಿಯಮದ ಖಂಡ (i) ರಲ್ಲಿ, “ಬ್ರೀವರಿ” ಎಂಬ ಪದದ ಬದಲಾಗಿ “ಬ್ರೀವರಿ ಅಥವಾ ಕ್ರಾಫ್ಟ್ ಬ್ರೀವರಿ” ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು. 3. 2-ಎ ಇ ನಿಯಮದ ತಿದ್ದುಪಡಿ:– ಸದರಿ ನಿಯಮಗಳ ನಿಯಮ 2-ಎಇ ರಲ್ಲಿ:-
(1) ಉಪ-ನಿಯಮ (1) ರಲ್ಲಿ–
(i) “ಬ್ರೀವರಿ ಸನ್ನದುದಾರ” ಎಂಬ ಪದಗಳ ಬದಲಾಗಿ “ಬ್ರೀವರಿ ಸನ್ನದುದಾರ ಅಥವಾ ಕ್ರಾಫ್ಟ್ ಬ್ರೀವರಿ ಸನ್ನದುದಾರ” ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು.
(ii)“ಡಿಸ್ಟಿಲರಿ, ಬ್ರೀವರಿ ಅಥವಾ ವೈನರಿ ಸನ್ನದುದಾರ” ಎಂಬ ಪದಗಳ ಬದಲಾಗಿ “ಡಿಸ್ಟಿಲರಿ, ಬ್ರೀವರಿ, ಕ್ರಾಫ್ಟ್ ಬ್ರೀವರಿ ಅಥವಾ ವೈನರಿ ಸನ್ನದುದಾರ” ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು: ಮತ್ತು (iii)“ಡಿಸ್ಟಿಲರಿ ಅಥವಾ ಬ್ರೀವರಿ ಅಥವಾ ವೈನರಿ ಅಥವಾ ವಿತರಕ ಸನ್ನದುದಾರ” ಎಂಬ ಪದಗಳ ಬದಲಾಗಿ “ಡಿಸ್ಟಿಲರಿ ಅಥವಾ ಬ್ರೀವರಿ ಅಥವಾ ಕ್ರಾಫ್ಟ್ ಬ್ರೀವರಿ ಅಥವಾ ವೈನರಿ ಅಥವಾ ವಿತರಕ ಸನ್ನದುದಾರ” ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು.
(2) ಉಪ-ನಿಯಮ (2) ರಲ್ಲಿ–
(i) “ಡಿಸ್ಟಿಲರಿ, ಬ್ರೀವರಿ, ವೈನರಿ ಅಥವಾ ಓರ್ವ ವಿತರಕ ಸನ್ನದುದಾರ” ಎಂಬ ಪದಗಳ ಬದಲಾಗಿ “ಡಿಸ್ಟಿಲರಿ, ಬ್ರೀವರಿ, ಕ್ರಾಫ್ಟ್ ಬ್ರೀವರಿ, ವೈನರಿ ಅಥವಾ ಓರ್ವ ವಿತರಕ ಸನ್ನದುದಾರ” ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು; ಮತ್ತು
(ii) ಚಾಲ್ತಿಯಲ್ಲಿರುವ ಪರಂತುಕದಲ್ಲಿ “ಡಿಸ್ಟಿಲರಿ/ ಬ್ರೀವರಿ/ ವೈನರಿ ಅಥವಾ ವಿತರಕ ಸನ್ನದುದಾರ” ಎಂಬ ಪದಗಳ ಬದಲಾಗಿ” ಡಿಸ್ಟಿಲರಿ/ ಬ್ರೀವರಿ/ ಕ್ರಾಫ್ಟ್ ಬ್ರೀವರಿ/ವೈನರಿ ಅಥವಾ ವಿತರಕ ಸನ್ನದುದಾರ”ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು.
(3) ಉಪ-ನಿಯಮ (3) ರಲ್ಲಿ–
(i) “ಡಿಸ್ಟಿಲರಿ/ಬ್ರೀವರಿ/ವೈನರಿ ಅಥವಾ ಓರ್ವ ವಿತರಕ ಸನ್ನದುದಾರ” ಎಂಬ ಪದಗಳ ಬದಲಾಗಿ “ಡಿಸ್ಟಿಲರಿ/ಬ್ರೀವರಿ/ಕ್ರಾಫ್ಟ್ ಬ್ರೀವರಿ/ವೈನರಿ ಅಥವಾ ಓರ್ವ ವಿತರಕ ಸನ್ನದುದಾರ” ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು.
(ii) ವಿವರಣೆಯಡಿ, ಚಾಲ್ತಿಯಲ್ಲಿರುವ ಪರಂತುಕದಲ್ಲಿ, “ಬ್ರೀವರಿಗಳು” ಎಂಬ ಪದಗಳ ಬದಲಾಗಿ “ಬ್ರೀವರಿಗಳು ಅಥವಾ ಕ್ರಾಫ್ಟ್ ಬ್ರೀವರಿಗಳು” ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು. 4. 2-ಎ ಎಫ್ ನಿಯಮದ ತಿದ್ದುಪಡಿ:– ಸದರಿ ನಿಯಮಗಳ ನಿಯಮ 2-ಎ ಎಫ್ ನಲ್ಲಿ:-
(1) ಉಪ-ನಿಯಮ (1) ರಲ್ಲಿ–
(i) “ಡಿಸ್ಟಿಲರಿ ಸನ್ನದುದಾರ ಅಥವಾ ಬ್ರೀವರಿ ಸನ್ನದುದಾರ ಅಥವಾ ವೈನರಿ ಸನ್ನದುದಾರ ಅಥವಾ ಓರ್ವ ವಿತರಕ ಸನ್ನದುದಾರ” ಎಂಬ ಪದಗಳ ಬದಲಾಗಿ “ಡಿಸ್ಟಿಲರಿ ಸನ್ನದುದಾರ ಅಥವಾ ಬ್ರೀವರಿ ಸನ್ನದುದಾರ ಅಥವಾ ಕ್ರಾಫ್ಟ್ ಬ್ರೀವರಿ ಸನ್ನದುದಾರ ಅಥವಾ ವೈನರಿ ಸನ್ನದುದಾರ ಅಥವಾ ಓರ್ವ ವಿತರಕ ಸನ್ನದುದಾರ” ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು.
(ii) “ಡಿಸ್ಟಿಲರಿ/ಬ್ರೀವರಿ ಅಥವಾ ವೈನರಿ”ಎಂಬ ಪದಗಳ ಬದಲಾಗಿ “ಡಿಸ್ಟಿಲರಿ/ಬ್ರೀವರಿ/ಕ್ರಾಫ್ಟ್ ಬ್ರೀವರಿ ಅಥವಾ ವೈನರಿ” ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು.
(2) ಉಪ-ನಿಯಮ (2) ರಲ್ಲಿ, “ಡಿಸ್ಟಿಲರಿ, ಬ್ರೀವರಿ, ವೈನರಿ ಅಥವಾ ವಿತರಕ ಸನ್ನದುದಾರ” ಎಂಬ ಪದಗಳ ಬದಲಾಗಿ “ಡಿಸ್ಟಿಲರಿ, ಬ್ರೀವರಿ, ಕ್ರಾಫ್ಟ್ ಬ್ರೀವರಿ, ವೈನರಿ ಅಥವಾ ವಿತರಕ ಸನ್ನದುದಾರ” ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು.
(3) ಉಪ-ನಿಯಮ (3) ರಲ್ಲಿ “ಡಿಸ್ಟಿಲರಿ/ಬ್ರೀವರಿ/ವೈನರಿ ಅಥವಾ ವಿತರಕ ಸನ್ನದುದಾರ” ಎಂಬ ಪದಗಳ ಬದಲಾಗಿ “ಡಿಸ್ಟಿಲರಿ/ಬ್ರೀವರಿ/ಕ್ರಾಫ್ಟ್ ಬ್ರೀವರಿ/ವೈನರಿ ಅಥವಾ ವಿತರಕ ಸನ್ನದುದಾರ” ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು. 5. ನಮೂನೆ ಡಿ ಪಿ ಯ ತಿದ್ದುಪಡಿ:– ಸದರಿ ನಿಯಮಗಳಿಗೆ ಸೇರಿಸಲಾದ ನಮೂನೆ ಡಿಪಿ ನಲ್ಲಿ, “ಬ್ರೀವರಿ” ಎಂಬ ಪದಗಳು ಎಲ್ಲೆಲ್ಲಿ ಇವೆಯೋ, ಅಲ್ಲಿ “ಬ್ರೀವರಿ/ಕ್ರಾಫ್ಟ್ ಬ್ರೀವರಿ” ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು. 6. ನಮೂನೆ ಡಿಆರ್ಪಿ ಯ ತಿದ್ದುಪಡಿ:– ಸದರಿ ನಿಯಮಗಳಿಗೆ ಸೇರಿಸಲಾದ ನಮೂನೆ ಡಿಆರ್ಪಿ ನಲ್ಲಿ, “ಬ್ರೀವರಿ” ಎಂಬ ಪದಗಳು ಎಲ್ಲೆಲ್ಲಿ ಇವೆಯೋ, ಅಲ್ಲಿ “ಬ್ರೀವರಿ/ಕ್ರಾಫ್ಟ್ ಬ್ರೀವರಿ” ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು. 7. ನಮೂನೆ ಎಂಆರ್ಪಿ ಯ ತಿದ್ದುಪಡಿ:– ಸದರಿ ನಿಯಮಗಳಿಗೆ ಸೇರಿಸಲಾದ ನಮೂನೆ ಎಂಆರ್ಪಿ ನಲ್ಲಿ, “ಬ್ರೀವರಿ” ಎಂಬ ಪದಗಳು ಎಲ್ಲೆಲ್ಲಿ ಇವೆಯೋ, ಅಲ್ಲಿ “ಬ್ರೀವರಿ/ಕ್ರಾಫ್ಟ್ ಬ್ರೀವರಿ” ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು. 8. ನಮೂನೆ ಆರ್ಎಂಆರ್ಪಿ ಯ ತಿದ್ದುಪಡಿ:– ಸದರಿ ನಿಯಮಗಳಿಗೆ ಸೇರಿಸಲಾದ ನಮೂನೆ ಆರ್ಎಂಆರ್ಪಿ ನಲ್ಲಿ, “ಬ್ರೀವರಿ” ಎಂಬ ಪದಗಳು ಎಲ್ಲೆಲ್ಲಿ ಇವೆಯೋ, ಅಲ್ಲಿ “ಬ್ರೀವರಿ/ಕ್ರಾಫ್ಟ್ ಬ್ರೀವರಿ”ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು.