ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ, 1961ರ (1963ರ ಕರ್ನಾಟಕ ಅಧಿನಿಯಮ 11) 17ನೇ ಪ್ರಕರಣದಲ್ಲಿ,-
(i) ಶೀರ್ಷಿಕೆಯಲ್ಲಿ “ಒಳವಿಭಾಗ” ಎಂಬ ಪದಗಳಿಗೆ “ಒಂದೇ ಪ್ಲಾಟು ಅಥವಾ ಒಳವಿಭಾಗ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು;
(ii) (1ನೇ ಉಪಪ್ರಕರಣದಲ್ಲಿ “ನಿರ್ಮಾಣ ಮಾಡುವ ಮೂಲಕ ತನ್ನ ಪ್ಲಾಟನ್ನು "ಎಂಬ ಪದಗಳ ತರುವಾಯ “ಒಂದೇ ಪ್ಲಾಟನ್ನಾಗಿ ಅಭಿವೃದ್ಧಿಪಡಿಸಲು ಅಥವಾ” ಎಂಬ ಪದಗಳನ್ನು ಸೇರಿಸತಕ್ಕದ್ದು;
(iii) (20) ಉಪ ಪ್ರಕರಣದಲ್ಲಿ,-
(ಎ) “ಉದ್ಯಾನ” ಎಂಬ ಪದಕ್ಕೆ “ಉದ್ಯಾನ ಹಾಗೂ ಆಟದ ಮೈದಾನ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು;
(ಬಿ) “ಉದ್ಯಾನಗಳನ್ನು” ಎಂಬ ಪದಗಳಿಗೆ “ಉದ್ಯಾನಗಳನ್ನು ಹಾಗೂ ಆಟದ ಮೈದಾನವನ್ನು” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು; ಮತ್ತು
(iv) (2ಬಿ) ಉಪ ಪ್ರಕರಣದ ತರುವಾಯ ಈಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
“2ಸಿ) ಬಡಾವಣೆಯ ಅಭಿವೃದ್ಧಿಕಾರನು (ಡೆವಲಪರ್) ಇಚ್ಛಿಸಿದಲ್ಲಿ, ಯೋಜನಾ ಪ್ರಾಧಿಕಾರವು ಹಂತಗಳಲ್ಲಿಯೂ (Phases) ಸಹ ಬಡಾವಣೆಯ ಅಭಿವೃದ್ಧಿಯನ್ನು ಅನುಮತಿಸಬಹುದು. ಅಂಥ ಪ್ರಕರಣದಲ್ಲಿ, ಅಭಿವೃದ್ಧಿಕಾರನು ಮೂರು ಹಂತಗಳಲ್ಲಿ ಬಡಾವಣೆ ಪ್ರದೇಶದ ಅಭಿವೃದ್ಧಿಯನ್ನು ತೋರಿಸುವ, ಮೊದಲ ಹಂತದಲ್ಲಿ ಬಡಾವಣೆ ಪ್ರದೇಶದ ಶೇಕಡ ನಲವತ್ತು ಭಾಗ ಅಭಿವೃದ್ಧಿಯನ್ನು ಸೂಚಿಸುವ, ಎರಡನೇ ಹಂತದಲ್ಲಿ ಬಡಾವಣೆ ಪ್ರದೇಶದ ಶೇಕಡ ಮೂವತ್ತು ಭಾಗ ಅಭಿವೃದ್ಧಿಯನ್ನು ಸೂಚಿಸುವ ಹಾಗೂ ಮೂರನೇ ಹಂತದಲ್ಲಿ ಬಡಾವಣೆ ಪ್ರದೇಶದ ಉಳಿದಿರುವ ಶೇಕಡ ಮೂವತ್ತು ಭಾಗ ಅಭಿವೃದ್ಧಿಯನ್ನು ಸೂಚಿಸುವ ತಾತ್ಕಾಲಿಕ ಯೋಜನೆಯೊಂದಿಗೆ ಹಂತಾನುಹಂತ ಯೋಜನೆಯನ್ನು ಸಲ್ಲಿಸತಕ್ಕದ್ದು,
(ii) ಯೋಜನಾ ಪ್ರಾಧಿಕಾರವು ಬಡಾವಣೆಯ ಮೊದಲ ಹಂತದಲ್ಲಿನ ಅಂದರೆ ಒಟ್ಟು ಬಡಾವಣೆ ಪ್ರದೇಶದ ಶೇಕಡ ನಲವತ್ತರಷ್ಟರ, ಎಲ್ಲಾ ಕಟ್ಟಡ ನಿವೇಶನಗಳನ್ನು, ಸಂಪೂರ್ಣ ಬಡಾವಣೆ ಪ್ರದೇಶದ ರಸ್ತೆಗಳು, ಉದ್ಯಾನಗಳು ಮತ್ತು ಆಟದ ಮೈದಾನ ಹಾಗೂ ನಾಗರೀಕ ಸೌಲಭ್ಯ ಪ್ರದೇಶಗಳಿಗೆ ಸ್ವಾಧೀನ ಬಿಟ್ಟುಕೊಡುವಿಕೆಯ ತರುವಾಯ, (2ಎ) ಉಪ ಪ್ರಕರಣದಲ್ಲಿ ನಿರ್ದಿಷ್ಟಪಡಿಸಿದಂತೆ ಯಾವುದೇ ನಷ್ಟ ಪರಿಹಾರವನ್ನು ಕ್ಲೇಮು ಮಾಡದೆಯೇ ಮತ್ತು ಕೆಳಗಿನ ಕೋಷ್ಠಕ- ಎನಲ್ಲಿ ನಿರ್ದಿಷ್ಟಪಡಿಸಿದಂತೆ ಮೊದಲ ಹಂತದಲ್ಲಿನ ಎಲ್ಲಾ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಿದ ತರುವಾಯ ಹಾಗೂ ಮೇಲೆ ಹೇಳಲಾದ ಕಾಮಗಾರಿಗಳನ್ನು ಪೂರ್ಣಗೊಳಿಸಿದ ಬಗ್ಗೆ ಕೆಳಗಿನ ಕೋಷ್ಠಕ- ಬಿನಲ್ಲಿ ನಿರ್ದಿಷ್ಟಪಡಿಸಿದ ಸಂಬಂಧಿತ ಪ್ರಾಧಿಕಾರ/ ಏಜೆನ್ಸಿ/ ಇಲಾಖೆ/ ನಿಗಮಗಳಿಂದ ಪ್ರಮಾಣ ಪತ್ರವನ್ನು ಪಡೆದ ತರುವಾಯ ಬಿಡುಗಡೆಗೊಳಿಸತಕ್ಕದ್ದು. ನೋಂದಣಿಯ ಮೂಲಕ ಅಭಿವೃದ್ಧಿಕಾರನಿಂದ ಹಂಚಿಕೆಗೊಂಡವನಿಗೆ ಹಕ್ಕನ್ನು ವರ್ಗಾಯಿಸುವುದಕ್ಕಾಗಿ ಕಟ್ಟಡ ನಿವೇಶನಗಳನ್ನು ತೋರಿಸುವ, ಯೋಜನಾ ಪ್ರಾಧಿಕಾರದ ಮೊಹರು ಲಗತ್ತಾದ ಮೊದಲ ಹಂತದ ಬಡಾವಣೆ ನಕ್ಷೆಯ ಪ್ರತಿಯನ್ನು ಬಿಡುಗಡೆಗೊಳಿಸುವುದು ಹಾಗೂ ನಿವೇಶನಗಳಿಗೆ ಖಾತೆಯನ್ನು ನೀಡುವುದಕ್ಕಾಗಿ ಒಂದು ಪ್ರತಿಯನ್ನು ಸ್ಥಳೀಯ ಪ್ರಾಧಿಕಾರಕ್ಕೆ ಕಳುಹಿಸತಕ್ಕದ್ದು.
(1) ಯೋಜನಾ ಪ್ರಾಧಿಕಾರವು ಬಡಾವಣೆಯ ಮೊದಲ ಹಂತದಲ್ಲಿನ ಅಂದರೆ ಒಟ್ಟು ಬಡಾವಣೆ ಪ್ರದೇಶ ಶೇಕಡ ಮೂವತ್ತರಷ್ಟರ, ಎಲ್ಲಾ ಕಟ್ಟಡ ನಿವೇಶನಗಳನ್ನು, ಕೆಳಗಿನ ಕೋಷ್ಠಕ-ಎ ನಲ್ಲಿ ನಿರ್ದಿಷ್ಟಪಡಿಸಿದಂತೆ ಎರಡನೇ ಹಂತದಲ್ಲಿನ ಎಲ್ಲಾ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಿದ ತರುವಾಯ ಹಾಗೂ ಮೇಲೆ ಹೇಳಲಾದ ಕಾಮಗಾರಿಗಳನ್ನು ಪೂರ್ಣಗೊಳಿಸಿದ ಬಗ್ಗೆ ಕೆಳಗಿನ ಕೋಷ್ಠಕ-ಬಿ. ನಲ್ಲಿ ನಿರ್ದಿಷ್ಟಪಡಿಸಿದ ಸಂಬಂಧಿತ ಪ್ರಾಧಿಕಾರ/ ಏಜೆನ್ಸಿ/ ಇಲಾಖೆ/ ನಿಗಮಗಳಿಂದ ಪ್ರಮಾಣ ಪತ್ರವನ್ನು ಪಡೆದ ತರುವಾಯ ಬಿಡುಗಡೆಗೊಳಿಸತಕ್ಕದ್ದು. ನೋಂದಣಿಯ ಮೂಲಕ ಅಭಿವೃದ್ಧಿಕಾರನಿಂದ ಹಂಚಿಕೆಗೊಂಡವನಿಗೆ ಹಕ್ಕನ್ನು ವರ್ಗಾಯಿಸುವುದಕ್ಕಾಗಿ ಕಟ್ಟಡ ನಿವೇಶನಗಳನ್ನು ತೋರಿಸುವ, ಯೋಜನಾ ಪ್ರಾಧಿಕಾರದ ಮೊಹರು ಲಗತ್ತಾದ ಮೊದಲ ಹಂತದ ಬಡಾವಣೆ ನಕ್ಷೆಯ ಪ್ರತಿಯನ್ನು ಬಿಡುಗಡೆಗೊಳಿಸುವುದು ಹಾಗೂ ನಿವೇಶನಗಳಿಗೆ ಖಾತೆಯನ್ನು ನೀಡುವುದಕ್ಕಾಗಿ ಒಂದು ಪ್ರತಿಯನ್ನು ಸ್ಥಳೀಯ ಪ್ರಾಧಿಕಾರಕ್ಕೆ ಕಳುಹಿಸತಕ್ಕದ್ದು.
(೪) ಪ್ರಾಧಿಕಾರವು ಉಳಿದಿರುವ ಶೇಕಡ ಮೂವತ್ತರಷ್ಟರ ಕಟ್ಟಡ ನಿವೇಶನಗಳನ್ನು ಬಿಡುಗಡೆಗೊಳಿಸಿ ಕೆಳಗಿನ ಕೋಷ್ಠಕ-ಎ ನಲ್ಲಿ ನಿರ್ದಿಷ್ಟಪಡಿಸಿದಂತೆ ಮೂರನೇ ಹಂತದಲ್ಲಿನ ಎಲ್ಲಾ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಿದ ತರುವಾಯ ಹಾಗೂ ಮೇಲೆ ಹೇಳಲಾದ ಕಾಮಗಾರಿಗಳನ್ನು ಪೂರ್ಣಗೊಳಿಸಿದ ಬಗ್ಗೆ ಕೆಳಗಿನ ಕೋಷ್ಠಕ- ಬಿ ನಲ್ಲಿ ನಿರ್ದಿಷ್ಟ ಪಡಿಸಿದ ಸಂಬಂಧಿತ ಪ್ರಾಧಿಕಾರ/ ಏಜೆನ್ಸಿ/ ಇಲಾಖೆ/ ನಿಗಮಗಳಿಂದ ಪ್ರಮಾಣ ಪತ್ರವನ್ನು ಪಡೆದ ತರುವಾಯ ಅಂತಿಮ ಬಡಾವಣೆ ನಕ್ಷೆಯನ್ನು ಅನುಮೋದಿಸತಕ್ಕದ್ದು. ನೋಂದಣಿಯ ಮೂಲಕ ಅಭಿವೃದ್ಧಿಕಾರನಿಂದ ಹಂಚಿಕೆಗೊಂಡವನಿಗೆ ಹಕ್ಕನ್ನು ವರ್ಗಾಯಿಸುವುದಕ್ಕಾಗಿ ಕಟ್ಟಡ ನಿವೇಶನಗಳನ್ನು ತೋರಿಸುವ, ಯೋಜನಾ ಪ್ರಾಧಿಕಾರದ ಮೊಹರು ಲಗತ್ತಾದ ಮೊದಲ ಹಂತದ ಬಡಾವಣೆ ನಕ್ಷೆಯ ಪ್ರತಿಯನ್ನು ಬಿಡುಗಡೆಗೊಳಿಸುವುದು ಹಾಗೂ ನಿವೇಶನಗಳಿಗೆ ಖಾತೆಯನ್ನು ನೀಡುವುದಕ್ಕಾಗಿ ಒಂದು ಪ್ರತಿಯನ್ನು ಸ್ಥಳೀಯ ಪ್ರಾಧಿಕಾರಕ್ಕೆ ಕಳುಹಿಸತಕ್ಕದ್ದು.
(v) (2ಸಿ) ಉಪ ಪ್ರಕರಣದ (1)ನೇ ಉಪಖಂಡದಲ್ಲಿ ನಮೂದಿಸಿದ ಕಟ್ಟಡ ನಿವೇಶನಗಳನ್ನು ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 2016ರ (2016ರ ಕೇಂದ್ರ ಅಧಿನಿಯಮ 16) ಅಡಿಯಲ್ಲಿ ಯೋಜನೆಯ ನೋಂದಣಿ ತರುವಾಯ ಮಾತ್ರವೇ ಬಿಡುಗಡೆಗೊಳಿಸತಕ್ಕದ್ದು.
(vi) ಪ್ರತಿ ಮೂರು ಹಂತಗಳಲ್ಲಿನ ಎಲ್ಲಾ ಅಭಿವೃದ್ಧಿ ಕಾಮಗಾರಿಗಳ ಪ್ರಮಾಣಪತ್ರ ನೀಡುವುದಕ್ಕಾಗಿ ಪರಿಶೀಲನೆಯನ್ನು ಎಲ್ಲಾ ಸಂಬಂಧಿತ ಪ್ರಾಧಿಕಾರ/ ಏಜೆನ್ಸಿಗಳು/ ಇಲಾಖೆ/ ನಿಗಮಗಳು ಜಂಟಿಯಾಗಿ ನಡೆಸತಕ್ಕದ್ದು.
(vii) ಯೋಜನಾ ಪ್ರಾಧಿಕಾರದಿಂದ ಬಿಡುಗಡೆಯಾಗದಿರುವ ಯಾವುದೇ ಕಟ್ಟಡ ನಿವೇಶನಕ್ಕೆ ಕರ್ನಾಟಕ ಪೌರಸಭೆಗಳ ಅಧಿನಿಯಮ, 1964, ಕರ್ನಾಟಕ ನಗರ ಪಾಲಿಕೆಗಳ ಅಧಿನಿಯಮ, 1976 ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ಮತ್ತು ಪಂಚಾಯತ್ರಾಜ್ ಅಧಿನಿಯಮ, 1993ರ ಅಡಿಯಲ್ಲಿ ಯಾವುದೇ ಖಾತೆ ಅಥವಾ ಸ್ವತ್ತು ಸೂಚಕ ಸಂಖ್ಯೆಯನ್ನು (ಇ-ಖಾತಾ) ನೀಡತಕ್ಕದ್ದಲ್ಲ.
(viii) ಮೇಲಿನ (1), (iii) ಮತ್ತು ()ನೇ ಉಪ ಖಂಡಗಳಲ್ಲಿ ನಿರ್ದಿಷ್ಟಪಡಿಸಿದ ಅಭಿವೃದ್ಧಿ ಕಾಮಗಾರಿಗಳು ಈ ಕೆಳಗಿನ ಕೋಷ್ಠಕದಲ್ಲಿ ನಿರ್ದಿಷ್ಟ ಪಡಿಸಿದಂತೆ ಇರತಕ್ಕದ್ದು.
ಕೋಷ್ಟಕ-ಎ {[2-2(ii) (ii) (iv)] ಉಪ ಪ್ರಕರಣ ನೋಡಿ)
| ಪೂರ್ಣಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿಗಳು | ನಿವೇಶನಗಳ ಬಿಡುಗಡೆಗೆ ಮೊದಲ ಷರತ್ತು |
| 1. ಪಾದಚಾರಿ ಮಾರ್ಗಗಗಳು, ಮಳೆ ನೀರು ಚರಂಡಿಗಳ ನಿರ್ಮಾಣದೊಂದಿಗೆ ರಸ್ತೆಗಳು ಮತ್ತು ಅಡ್ಡ ಒಳಚರಂಡಿ ಕಾಮಗಾರಿಗಳ ರಚನೆ, ಮೆಟಲಿಂಗ್, ಅಸ್ವಾಲ್ಟಿಂಗ್/ಕಾಂಕ್ರೀಟಿಂಗ್ 2. ನೀರು. ಸರಬರಾಜು ಪೈಪ್ಲೈನ್ಗಳು, ನೀರಿನ ತೊಟ್ಟಿ/ತೊಟ್ಟಿಗಳ ನಿರ್ಮಾಣ ಮತ್ತು ಕಟ್ಟಡ ನಿವೇಶನಗಳಿಗೆ ವೈಯಕ್ತಿಕ ಸಂಪರ್ಕಗಳನ್ನು ಹಾಕುವುದು ಒಳಗೊಂಡಂತೆ ನೀರು ಸರಬರಾಜು ಕಾಮಗಾರಿಗಳನ್ನು ಸಂಪೂರ್ಣಗೊಳಿಸುವುದು. 3. ಭೂಮಿಯ ಕೆಳಗಿನ ಒಳಚರಂಡಿ. ಲೈನುಗಳನ್ನು ಹಾಕುವುದು, ಸೀವೇಜ್ ಟ್ರೀಟ್ಮೆಂಟ್ ಪ್ಲಾಂಟ್/ ಸೋಕ್ ಪಿಟ್. ಮತ್ತು. ಕಟ್ಟಡ ನಿವೇಶನಗಳಿಗೆ ವೈಯಕ್ತಿಕ ಸಂಪರ್ಕಗಳು. ಒಳಗೊಂಡಂತೆ. ಭೂಮಿಯ ಕೆಳಗಿನ ಒಳಚರಂಡಿ ಕಾಮಗಾರಿಗಳನ್ನು ಸಂಪೂರ್ಣಗೊಳಿಸುವುದು. 4. ಉದ್ಯಾನಗಳು, ಆಟದ ಮೈದಾನಗಳು ಮತ್ತು ಮುಕ್ತಸ್ಥಳಗಳ ಅಭಿವೃದ್ಧಿ. 5... ಭೂಮಿಯ ಕೆಳಗೆ ಕೇಬಲುಗಳನ್ನು ಹಾಕುವುದು. (ಅಭಿವೃದ್ಧಿದಾರನು ಭೂಮಿಯ ಕೆಳಗಿನ ಕೇಬಲುಗಳನ್ನು ಹಾಕುವುದಕ್ಕೆ ಉದ್ದೇಶಿಸಿದ್ದಲ್ಲಿ) | ಸಂಬಂಧಪಟ್ಟ ಪ್ರಾಧಿಕಾರ/ಏಜೆನ್ಸಿ/ಇಲಾಖೆ/ಪಾಲಿಕೆ* . ಇಂದ ಸಂಪೂರ್ಣಗೊಂಡ ಬಗ್ಗೆ ಪ್ರಮಾಣ ಪತ್ರ |
| ಪೂರ್ಣಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿಗಳು | ನಿವೇಶನಗಳ ಬಿಡುಗಡೆಗೆ ಮೊದಲ ಷರತ್ತು |
| 6. ಬೀದಿ. ದೀಪಗಳ ಕಂಬಗಳನ್ನು ನಿಲ್ಲಿಸುವುದು, ಟ್ರಾನ್ಸ್ಫಾರ್ಮರ್ಗಳನ್ನು ನಿಲ್ಲಿಸುವುದು, ಬೀದಿ ದೀಪಗಳಿಗಾಗಿ ಸಂಪರ್ಕಗಳೂ ಒಳಗೊಂಡಂತೆ ವಿದ್ಯುತ್ಚ್ಛಕ್ತಿ ಕಾಮಗಾರಿಯನ್ನು ಸಂಪೂರ್ಣಗೊಳಿಸಿವುದು. 7. ಮಳೆ ನೀರು ಕೊಯ್ಲುಮಾಡುವುದು. 8. ಮರ ನೆಡುವುದು. |
| ರಸ್ತೆ ಕಾಮಗಾರಿಗಳು | ನಗರ ಪ್ರದೇಶಗಳು: ನಗರ ಸ್ಥಳೀಯ ನಿಕಾಯಗಳು ನಗರಮಿತಿಗಳ ಹೊರಗೆ: ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ |
| ನೀರು ಸರಬರಾಜು/ ಕೆಳಗಿನ ಭೂಮಿಯ ಒಳಚರಂಡಿ ಕಾಮಗಾರಿಗಳು | ಬಿ.ಡಬ್ಲ್ಯೂ.ಎಸ್ಎಸ್ಬಿ ಮಿತಿ: ಬಿ.ಡಬ್ಲ್ಯೂ.ಎಸ್ಎಸ್ಬಿ ಇತರ ನಗರ ಪ್ರದೇಶಗಳು: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ.(ಕೆಯು.ಡಬ್ಲ್ಯೂ.ಎಸ್ ಆಂಡ್ ಡಿ.ಬಿ) ನಗರ ಮಿತಿಗಳ ಹೊರಗೆ: ಗ್ರಾಮೀಣ ನೀರು ಸರಬರಾಜು ಇಲಾಖೆ. |
| ವಿದ್ಯುಚ್ಛಕ್ತಿ ಕಾಮಗಾರಿ | ಸಂಬಂಧಪಟ್ಟ ಎಸ್ಕಾಂಗಳು |
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
(ಕೆ. ದ್ವಾರಕನಾಥ್ ಬಾಬು)
ಸರ್ಕಾರದ ಕಾರ್ಯದರ್ಶಿ
ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ.
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ. ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು