ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993ರ (1993ರ ಕರ್ನಾಟಕ ಅಧಿನಿಯಮ 14) 46ನೇ ಪ್ರಕರಣದ (1)ನೇ ಉಪಪ್ರಕರಣದಲ್ಲಿ ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು ಎಂದರೆ:-
“ಪರಂತು, ಕರ್ನಾಟಕ ಪಂಚಾಯತ್ ರಾಜ್ (ತಿದ್ದುಪಡಿ) ಅಧ್ಯಾದೇಶ, 2002ರ ಪ್ರಾರಂಭದ ದಿನಾಂಕದಂದು ಹುದ್ದೆಯಲ್ಲಿರುವ ಗ್ರಾಮ ಪಂಚಾಯತಿಯ ಅಧ್ಯಕ್ಷ ಮತ್ತು ಕರ್ನಾಟಕ ರಾಜ್ಯ ಪತ್ರದ ಭಾಗ-IVಎ ವಿಶೇಷ ಪತ್ರಿಕೆ ಸಂಖ್ಯೆ: 1285 ದಿನಾಂಕ: 6.9.2002 ರಲ್ಲಿ ಪ್ರಕಟಿತ ಕಡತ ಸಂಖ್ಯೆ: ಸಂವ್ಯಶಾಇ 48 ಶಾಸನ 2002 ಉಪಾಧ್ಯಕ್ಷರ ಹುದ್ದೆಯ ಅವಧಿಯು ಅವರ ಚುನಾವಣೆಯ ದಿನಾಂಕದಿಂದ ಮೂವತ್ತಮೂರು ತಿಂಗಳುಗಳಾಗಿರತಕ್ಕದ್ದು ಮತ್ತು ಸದರಿ ಅವಧಿಯ ಮುಕ್ತಾಯದ ನಿಕಟಪೂರ್ವದಲ್ಲಿ ಚುನಾಯಿತರಾಗಬೇಕಾದ ಗ್ರಾಮ ಪಂಚಾಯತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಯ ಅವಧಿಯು ಉಳಿದ ಇಪ್ಪತ್ತೇಳು ತಿಂಗಳುಗಳಾಗಿರತಕ್ಕದ್ದು, ಪರಂತು, ಈ ಎರಡೂ ಸಂದರ್ಭಗಳಲ್ಲಿ ಅವರು ಆ ಸಮಯದಲ್ಲಿ ಗ್ರಾಮ ಪಂಚಾಯತಿಯ ಸದಸ್ಯರಾಗಿರುವುದು ನಿಂತುಹೋಗಿರತಕ್ಕದ್ದಲ್ಲ.”