(ಅ) “ಸರ್ಕಾರಕ್ಕೆ ಬಾಕಿಯಿರುವ ಮೊಬಲಗು” ಎಂದರೆ ಸರ್ಕಾರದ ಮೇರೆಗೆ ವಿಮಾದಾರನ / ವಿಮಾದಾರಳ ಸೇವಾ ಷರತ್ತುಗಳಿಗೆ ಸಂಬಂಧಿಸಿದ ಯಾವುದೇ ನಿಯಮ ಅಥವಾ ಆದೇಶದ ಮೇರೆಗೆ ಅಥವಾ ಯಾವುದೇ ಭದ್ರತಾ ಬಂಧ ಪತ್ರ ಅಥವಾ ಕರಾರಿನ ಮೇರೆಗೆ ಸರ್ಕಾರಕ್ಕೆ ವಿಮಾದಾರರಿಂದ ಸಂದಾಯ ಮಾಡಬೇಕಾದ ಅಥವಾ ವಿಮಾದಾರರಿಂದ ಸರ್ಕಾರವು ವಸೂಲಿ ಮಾಡಬಹುದಾದ ಯಾವುದೇ ಮೊಬಲಗು;
(ಆ) “ಸರಾಸರಿ ವೇತನ” ಎಂದರೆ ವಿಮಾದಾರರು ಹೊಂದಿರುವ ಹುದ್ದೆಯ ಕಾಲಪ್ರಮಾಣ ವೇತನದ ಕನಿಷ್ಠ ಮತ್ತು ಗರಿಷ್ಠಗಳ ಸರಾಸರಿ ಮೊಬಲಗಿಗೆ ಸಮನಾದ ಮೊಬಲಗು.
(ಇ) “ಇಲಾಖೆ” ಎಂದರೆ “ಕರ್ನಾಟಕ ಸರ್ಕಾರಿ ವಿಮಾ ಇಲಾಖೆ”.
(ಈ) “ಸರ್ಕಾರ” ಎಂದರೆ ಕರ್ನಾಟಕ ಸರ್ಕಾರ.
(ಉ) “ಅಪಾಯಕಾರಿ ವೃತ್ತಿ” ಎಂದರೆ ನಿರ್ದೇಶಕರಿಂದ ಅಪಾಯಕಾರಿ ವೃತ್ತಿಯೆಂದು ಘೋಷಿಸಲ್ಪಟ್ಟು, ಜೀವಕ್ಕೆ ಹೆಚ್ಚಿನ ಅಪಾಯ ಇರುವಂತ ಯಾವುದೇ ವೃತ್ತಿ.
(ಊ) “ವಿಮಾದಾರ” ಎಂದರೆ “ಈ ನಿಯಮಗಳ ಮೇರೆಗೆ ತನ್ನ ಜೀವಕ್ಕೆ ವಿಮೆ ಮಾಡಿಸಿದ ವ್ಯಕ್ತಿ” ಮತ್ತು “ವಿಮಾ ಮೊತ್ತ” ಎಂದರೆ ವಿಮಾ ಪಾಲಿಸಿಯ ಮೇರೆಗೆ ಇಲಾಖೆಯ ಹೊಣೆಗಾರಿಕೆಯಿರುವ ಹಣಕಾಸಿನ ಮಿತಿ.
(ಋ) “ವೇತನ” ಎಂದರೆ “1958ರ ಕರ್ನಾಟಕ ಸಿವಿಲ್ ಸೇವಾ ನಿಯಮಗಳಲ್ಲಿ ಪರಿಭಾಷಿಸಲಾದ ವೇತನ”.
(Iೂ) “ಪಾಲಿಸಿ” ಎಂದರೆ ವಿಮಾದಾರರು ಸಂದಾಯ ಮಾಡಿದ ವಿಮಾ ಕಂತನ್ನು ಪರಿಗಣಿಸಿ, ಕರಾರಿನಲ್ಲಿ ನಿರ್ದಿಷ್ಟ ಪಡಿಸಲಾದ ಘಟನೆಗಳು ಸಂಭವಿಸಿದರೆ ಆ ನಿಯಮಗಳ ಮೇರೆಗೆ ನಿರ್ದಿಷ್ಟ ಮೊತ್ತವನ್ನು ಸಂದಾಯ ಮಾಡುವ ಕರಾರನ್ನು ಒಳಗೊಂಡಿರುವ ಲಿಖಿತ ದಸ್ತಾವೇಜು. ಅದು ವಿಮಾಕರ್ತ ಮತ್ತು ವಿಮಾದಾರರ ನಡುವೆ ವಿಮಾಕರಾರಿನ ಸಾಕ್ಷ್ಯವನ್ನು ಒದಗಿಸುವ ಒಂದು ದಸ್ತಾವೇಜು.
(ಎ) “ಗೊತ್ತು ಪಡಿಸಲಾದುದು” ಎಂದರೆ ಈ ನಿಯಮಗಳಲ್ಲಿ ಗೊತ್ತುಪಡಿಸಲಾದುದು.
(ಏ) “ವಿಮಾ ಕಂತು” ಎಂದರೆ ವಿಮಾದಾರನು/ಳು ಪಾಲಿಸಿಯ ಸಂಬಂಧದಲ್ಲಿ ನಿಯತಕಾಲಿಕವಾಗಿ ಸಂದಾಯ ಮಾಡಬೇಕಾದ ಮೊಬಲಗು. ಅದು ವಿಮಾ ಕರಾರಿನ ಮೇರೆಗೆ ವಿಮಾದಾರರು ಸಂದಾಯ ಮಾಡುವ ಹಣ.
(ಐ) “ಪ್ರಸ್ತಾವ ನಮೂನೆ” ಎಂದರೆ ವಿಮಾ ರಕ್ಷಣೆಯನ್ನು ಕೋರುವ ವಿಮಾದಾರರು ಭರ್ತಿ ಮಾಡಬೇಕಾದ ಸದರಿ ಇಲಾಖೆಯ ಮುದ್ರಿತ ನಮೂನೆ.
(ಒ) “ಪ್ರಸ್ತಾವನೆದಾರ” ಎಂದರೆ ವಿಮೆ ಮಾಡಿಸಲು ಪ್ರಸ್ತಾವಿಸಲಾಗಿರುವ ವ್ಯಕ್ತಿ.
(ಓ) “ನಿರ್ದೇಶಕ” ಎಂದರೆ ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ನಿರ್ದೇಶಕ.
(ಔ) “ರಾಜ್ಯ” ಎಂದರೆ ಕರ್ನಾಟಕ ರಾಜ್ಯ.
ಖಾತರಿ 4. ಈ ನಿಯಮಗಳ ಮೇರೆಗೆ ನೀಡಲಾದ ಪಾಲಿಸಿಯ ಸಂಬಂಧದಲ್ಲಿ ವಿಮೆ ಮಾಡಲಾದ ಮೊಬಲಗನ್ನು, ಕರ್ನಾಟಕ ರಾಜ್ಯದ ಸಾರ್ವಜನಿಕ ಲೆಕ್ಕದಿಂದ ಸಂದಾಯ ಮಾಡತಕ್ಕದ್ದು.
ವಯಸ್ಸು 5. (ಅ) ಈ ನಿಯಮಗಳ ಮೇರೆಗೆ ವಯಸ್ಸು ವಿಮಾ ಉದ್ದೇಶಗಳಿಗಾಗಿನ ಪ್ರಸ್ತಾವನೆದಾರರ ವಯಸ್ಸು, ಸರ್ಕಾರದ ಮೇರೆಗಿನ ಸೇವಾ ಉದ್ದೇಶಗಳಿಗಾಗಿ ಸಕ್ಷಮ ಪ್ರಾಧಿಕಾರವು ಅಂಗೀಕರಿಸಲಾದ ವಯಸ್ಸಾಗಿರತಕ್ಕದ್ದು.
(ಆ) ವಿಮಾದಾರನಿಗೆ / ವಿಮಾದಾರಳಿಗೆ ಪಾಲಿಸಿಯನ್ನು ನೀಡಿದ ತರುವಾಯ ಅವನ / ಅವಳ ಜನ್ಮ ದಿನಾಂಕವನ್ನು ಸರ್ಕಾರ ಅಥವಾ ಇಲಾಖಾ ಮುಖ್ಯಸ್ಥರು ಮಾರ್ಪಾಟು ಮಾಡಿದರೆ ಅವನಿಗೆ / ಅವಳಿಗೆ ಮೂಲ ವಿಮಾ ಮೊತ್ತವನ್ನು ಕಡಿಮೆ ಮಾಡಿಕೊಳ್ಳಲು ಅಥವಾ ವಿಮಾ ಭರವಸೆ ದಿನಾಂಕದಿಂದ ವಿಸ್ತೃತ ವಿಮಾ ಕಂತನ್ನು ಬಡ್ಡಿಯೊಂದಿಗೆ ಸಂದಾಯ ಮಾಡಲು ಆಯ್ಕೆ ಸ್ವಾತಂತ್ರ ನೀಡಲಾಗುವುದು, ಪರಂತು ಅವನ / ಅವಳ ಹೆಚ್ಚಿಸಲಾದ ವಯಸ್ಸು, ವಿಮಾ ಭರವಸೆ ದಿನಾಂಕದಂದು 50 ವರ್ಷಗಳನ್ನು ಮೀರತಕ್ಕುದಲ್ಲ.
(ಇ) ಪ್ರಸ್ತಾವನೆದಾರನ / ಪ್ರಸ್ತಾವನೆದಾರಳ ಹಿಂದಿನ ಜನನ ದಿನಾಂಕ ಅಥವಾ ಮುಂದಿನ ಜನನ ದಿನಾಂಕ ಇವೆರಡರಲ್ಲಿ ಯಾವುದು ಪ್ರಸ್ತಾವನೆ ಅಂಗೀಕರಿಸಿದ ದಿನಾಂಕಕ್ಕೆ ಸಮೀಪಮೋ, ಆ ದಿನಾಂಕವನ್ನು ಪ್ರಸ್ತಾವನೆದಾರನ/ಳ ವಯಸ್ಸೆಂದು ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದು. ಅವು ಸಮಾನ ದೂರದಲ್ಲಿದ್ದರೆ, ಅವನ / ಅವಳ ಹಿಂದಿನ ಜನನ ದಿನಾಂಕದ ವಯಸ್ಸನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದು.
ಅರ್ಹತೆ 6. (1) 39ನೇ ನಿಯಮದ ಉಪ ಬಂಧಗಳಿಗೆ ಒಳಪಟ್ಟು, ಈ ನಿಯಮಗಳ ಮೇರೆಗಿನ ವಿಮೆಯು ಒಬ್ಬ ಪ್ರೊಬೇಷನರನ್ನು ಒಳಗೊಂಡಂತೆ ಅವನು / ಅವಳು ಸೇವೆಗೆ ಸೇರಿದ ದಿನಾಂಕದಿಂದ ಪ್ರತಿಯೊಬ್ಬ ಸರ್ಕಾರಿ ನೌಕರನಿಗೆ / ನೌಕರಳಿಗೆ ಕಡ್ಡಾಯವಾಗಿರತಕ್ಕದ್ದು.
ಪರಂತು, ಈ ನಿಯಮದಲ್ಲಿನ ಯಾವುದೂ ಐವತ್ತು ವರ್ಷಗಳನ್ನು ಮೀರಿದ ಸರ್ಕಾರಿ ನೌಕರನಿಗೆ ಅನ್ವಯಿಸತಕ್ಕದ್ದಲ್ಲ.
ಅಲ್ಲದೆ, ಸರ್ಕಾರವು ಆದೇಶದ ಮೂಲಕ ಮತ್ತು ಅಂಥ ಆದೇಶದಲ್ಲಿ ನಿರ್ದಿಷ್ಟಪಡಿಸಬೇಕಾದ ಕಾರಣಗಳಿಗಾಗಿ, ಅದರಲ್ಲಿ ನಿರ್ದಿಷ್ಟಪಡಿಸಲಾದ ಯಾವನೇ/ಳೇ ಸರ್ಕಾರಿ ನೌಕರನಿಗೆ/ಳಿಗೆ ಈ ನಿಯಮಗಳು ಅನ್ವಯಿಸತಕ್ಕದ್ದಲ್ಲವೆಂದು ನಿರ್ದೇಶಿಸಬಹುದು.
(2) ಪ್ರತಿಯೊಬ್ಬ ಸರ್ಕಾರಿ ನೌಕರನು/ಳು, ಅವನು/ಅವಳು ಸೇವೆಗೆ ಸೇರಿದ ತರುವಾಯ ಅವನ / ಅವಳ ಮೊದಲ ತಿಂಗಳ ಸಂಬಳವನ್ನು ಅವನು /ಅವಳು ಪಡೆಯುವ ಮೊದಲು ಸಂದರ್ಭಾನುಸಾರ ವೈದ್ಯಕೀಯ ಅಥವಾ ವೈದ್ಯಕೀಯೇತರ ಪ್ರಸ್ತಾವನೆಯನ್ನು ಸಲ್ಲಿಸತಕ್ಕದ್ದು. ಪ್ರಥಮ ವಿಮಾ ಕಂತನ್ನು ಸಂದಾಯ ಮಾಡತಕ್ಕದ್ದು ಮತ್ತು ನಿಯಮಗಳ ಪ್ರಕಾರ ಅವಶ್ಯವಿದ್ದಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳತಕ್ಕದ್ದು.
(3) (2)ನೇ ಉಪ-ನಿಯಮದ ಉಪ-ಬಂಧಗಳನ್ನು ಉಲ್ಲಂಘಿಸುವ ಸರ್ಕಾರಿ ನೌಕರನು/ಳು ದುರ್ನಡತೆಗಾಗಿ ಶಿಸ್ತಿನ ಕ್ರಮಕ್ಕೆ ಹೊಣೆಯಾಗುತ್ತಾನೆ / ಹೊಣೆಯಾಗುತ್ತಾಳೆ.
ಟಿಪ್ಪಣಿ :- ಸರ್ಕಾರಿ ನೌಕರರು (2)ನೇ ಉಪ-ನಿಯಮದ ಅವಶ್ಯಕತೆಗಳನ್ನು ಪಾಲಿಸಿದ ಹೊರತು, ಸರ್ಕಾರಿ ನೌಕರನ/ಳ ಸರ್ಕಾರಿ ವರಿಷ್ಠನು ಅವನ/ಅವಳ ಮೊದಲ ತಿಂಗಳ ಸಂಬಳವನ್ನು ಬಟವಾಡೆ ಮಾಡತಕ್ಕದ್ದಲ್ಲ. 7. ಬಿಟ್ಟು ಬಿಡಲಾಗಿದೆ. ವಿಮಾ ಕಂತಿನ ಕನಿಷ್ಠ ಮತ್ತು ಗರಿಷ್ಠ ಮಿತಿಗಳು (ಅಧಿಸೂಚನೆ ಸಂಖ್ಯೆ ಎಫ್ಡಿ 31 ಕೆಐಡಿ87 ದಿನಾಂಕ 18-3-87) 8. (1) ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯಲ್ಲಿ ಜೀವ ವಿಮೆ ಮಾಡಿಸಿರುವ ಅಥವಾ ಮಾಡಿಸುವ ಒಬ್ಬ ಸರ್ಕಾರಿ ನೌಕರನು/ಳು ಕಟ್ಟುವ ತಿಂಗಳ ಕಂತಿನ ಕನಿಷ್ಠ ದರವನ್ನು ಕೆಳಗಿನ ಕೋಷ್ಟಕದಲ್ಲಿ ಸೂಚಿಸಿರುವಂತೆ ಅವನು / ಅವಳು ಧಾರಣ ಮಾಡಿರುವ ಹುದ್ದೆಯ ವೇತನ ಶ್ರೇಣಿಗನುಗುಣವಾಗಿ ನಿಗದಿಪಡಿಸತಕ್ಕದ್ದು.
ಕೋಷ್ಟಕ
| ಕ್ರಮ | ವೇತನ ಶ್ರೇಣಿ | ಕನಿಷ್ಠ ಮಾಸಿಕ ವಿಮಾ ಕಂತಿನ | |
| ಸಂಖ್ಯೆ | (ರೂ. ಗಳಲ್ಲಿ) | ಮೊಬಲಗು (ರೂ.ಗಳಲ್ಲಿ) | |
| 1. | 9600-14550 | ... | 750 |
| 2. | 10400-16400 | ... | 840 |
| 3. | 11000-19000 | ... | 940 |
| 4. | 11600-21000 | ... | 1020 |
| 5. | 12500-24000 | ... | 1140 |
| 6. | 13600-26000 | ... | 1240 |
| 7. | 14550-26700 | ... | 1290 |
| 8. | 16000-29600 | ... | 1430 |
| 9. | 17650-32000 | ... | 1550 |
| 10. | 19000-34500 | ... | 1670 |
| 11. | 20000-36300 | ... | 1760 |
| 12. | 21600-40050 | ... | 1930 |
| 13. | 22800-43200 | ... | 2060 |
| 14. | 24000-45300 | ... | 2170 |
| 15. | 26000-47700 | ... | 2300 |
| 16. | 28100-50100 | ... | 2440 |
| 17. | 30400-51300 | ... | 2550 |
| 18. | 32800-52500 | ... | 2670 |
| 19. | 36300-53850 | ... | 2820 |
| 20. | 38100-55200 | ... | 2920 |
| 21. | 40050-56550 | ... | 3020 |
| 22. | 44250-60600 | ... | 3280 |
| 23. | 48900-63600 | ... | 3520 |
| 24. | 52500-73000 | ... | 3920 |
| 25. | 56550-79800 | ... | 4260 |
(3) ಒಬ್ಬ ಸರ್ಕಾರಿ ನೌಕರನು/ಳು ಆತನು/ಆಕೆ ಧಾರಣ ಮಾಡಿರುವ ವೇತನ ಶ್ರೇಣಿಗಿಂತ ಹೆಚ್ಚು ವೇತನ ಶ್ರೇಣಿಯುಳ್ಳ ಒಂದು ಹುದ್ದೆಗೆ ಬಡ್ತಿ ಹೊಂದಿದರೆ ಅಥವಾ ನೇಮಕಗೊಂಡರೆ ಹಾಗೂ ಆತನಿಗೆ / ಅವಳಿಗೆ ಮೊದಲಿನ ಹುದ್ದೆಗೆ ಹಿಂಬಡ್ತಿ ನೀಡುವ ಸಂಭವ ಇಲ್ಲದಿದ್ದರೆ ಅವನು / ಅವಳು ಬಡ್ತಿ ಹೊಂದಿದ ಅಥವಾ ನೇಮಕಗೊಂಡ ಹುದ್ದೆಗೆ ಅನ್ವಯಿಸುವ ವೇತನ ಶ್ರೇಣಿಗೆ ಗೊತ್ತುಪಡಿಸಲಾದ ಮಾಸಿಕ ಕಂತಿನ ಕನಿಷ್ಠ ಮೊಬಲಗಿಂತ ಕಡಿಮೆ ಇರದಂತಹ ಒಟ್ಟು ಕಂತಿಗೆ ಸಮನಾದ ಮೊಬಲಗಿಗೆ ಮತ್ತಷ್ಟು ವಿಮೆ ಮಾಡತಕ್ಕದ್ದು.
ಪರಂತು, ಸರ್ಕಾರಿ ನೌಕರರಿಗೆ ಹಿಂಬಡ್ತಿ ನೀಡುವ ಸಾಧ್ಯತೆ ಇಲ್ಲವೆಂದು ನೇಮಕಾತಿ ಪ್ರಾಧಿಕಾರವು ಪ್ರಮಾಣೀಕರಿಸಿದ ಹೊರತು, ಆತನ / ಆಕೆಯ ಮಾಸಿಕ ಕಂತಿನ ದರವನ್ನು ಹೆಚ್ಚಿಸಲು ಅನುಮತಿಸತಕ್ಕದ್ದಲ್ಲ.
(4) 1983ರ ಕರ್ನಾಟಕ ಸರ್ಕಾರಿ ಸೇವೆಗಳ (ಕಾಲಬದ್ಧ ಬಡ್ತಿ) ನಿಯಮಗಳ ಉಪಬಂಧಗಳಿಗನುಸಾರವಾಗಿ, ಒಬ್ಬ ಸರ್ಕಾರಿ ನೌಕರನಿಗೆ/ಳಿಗೆ ಅವನು/ಅವಳು ಧಾರಣ ಮಾಡಿರುವ ಹುದ್ದೆಗೆ ನೀಡಲಾದ ಆಯ್ಕೆ-ಕಾಲಿಕ ವೇತನ ಶ್ರೇಣಿಯನ್ನು ನೀಡಲಾಗಿದ್ದರೆ, ಸದರಿ ಆಯ್ಕೆ-ಕಾಲಿಕ ವೇತನ ಶ್ರೇಣಿಗೆ ಗೊತ್ತುಪಡಿಸಿರುವ ಕನಿಷ್ಠ ಮಾಸಿಕ ವಿಮಾ ಕಂತಿನ ಮೊಬಲಗಿಗಿಂತ ಕಡಿಮೆ ಇರದಷ್ಟು ಒಟ್ಟು ವಿಮಾ ಕಂತಿಗೆ ಸಮನಾದ ಮೊಬಲಗಿಗೆ ಮತ್ತಷ್ಟು ವಿಮೆ ಮಾಡತಕ್ಕದ್ದು.
1986 ರ ಜುಲೈ 1 ರಿಂದ ಜಾರಿಗೊಳಿಸಿದ ಸರ್ಕಾರಿ ನೌಕರನಿಗೆ/ಳಿಗೆ ಅನ್ವಯಿಸುವ ವೇತನ ಶ್ರೇಣಿಗಳ ಸಾಮಾನ್ಯ ಪರಿಷ್ಕರಣೆಯಲ್ಲಿ ಏನೇ ಇದ್ದರೂ, 1986 ರ ಜುಲೈ 1 ರಿಂದ ಪ್ರಾರಂಭವಾಗಿ ಮತ್ತು 1987 ರ ಮಾರ್ಚಿ 31 ಕ್ಕೆ ಕೊನೆಯಾಗುವ ಅವಧಿಗೆ ಸರ್ಕಾರಿ ನೌಕರರು ಸಂದಾಯ ಮಾಡುವ ಕನಿಷ್ಠ ಮಾಸಿಕ ವಿಮಾ ಕಂತಿನ ದರಗಳಲ್ಲಿ ಪರಿಷ್ಕರಣೆಯಿಂದಾಗಿ ಯಾವುದೇ ಬದಲಾವಣೆ ಇರತಕ್ಕದ್ದಲ್ಲ.
ವಿಮೆ ಮಾಡಿಸುವ ಕಾರ್ಯವಿಧಾನ 9. ಪ್ರಸ್ತಾವನೆದಾರನು/ಳು 15ನೇ ನಿಯಮದಲ್ಲಿ ನಿರ್ದಿಷ್ಟಪಡಿಸಲಾದ ಮೊಬಲಗನ್ನು ಇರಸಾಲು ಮಾಡಿರುವುದರ ಗುರುತಾಗಿ, ಖಜಾನೆ/ಬ್ಯಾಂಕಿನ ರಸೀದಿಯೊಂದಿಗೆ ಅವನ/ಅವಳ ಪ್ರಸ್ತಾವನೆಯನ್ನು ಅವನ/ಅವಳ ನಿಕಟ ಸರ್ಕಾರಿ ವರಿಷ್ಠರಿಗೆ ಸಲ್ಲಿಸತಕ್ಕದ್ದು. ಅನಕ್ಷರಸ್ಥ ವ್ಯಕ್ತಿಗಳ ಸಂದರ್ಭದಲ್ಲಿ ಈ ಪರವಾಗಿ ಅವನಿಂದ/ಅವಳಿಂದ ಸೂಕ್ತವಾಗಿ ಪ್ರಾಧಿಕೃತಗೊಂಡ ಸರ್ಕಾರಿ ವರಿಷ್ಠ ಅಥವಾ ಯಾವನೇ/ಳೆ ಅಧಿಕಾರಿಯು ನಮೂನೆಯನ್ನು ಭರ್ತಿಮಾಡತಕ್ಕದ್ದು.
ನಿಕಟ ಸರ್ಕಾರಿ ವರಿಷ್ಠನು/ಳು ಈ ನಿಯಮಗಳಲ್ಲಿ ನಿರ್ದಿಷ್ಟಪಡಿಸಲಾದ ಅರ್ಹತೆಗಳನ್ನು ಹೊಂದಿರುವ ವೈದ್ಯಕೀಯ ಅಧಿಕಾರಿಗೆ ಪ್ರಸ್ತಾವನೆಯನ್ನು ಕಳುಹಿಸಿಕೊಡತಕ್ಕದ್ದು ಮತ್ತು ತಾನು ಹಾಗೆ ಮಾಡಿರುವ ಬಗ್ಗೆ ಪ್ರಸ್ತಾವನೆದಾರರಿಗೆ ತಿಳಿಸತಕ್ಕದ್ದು. 27-ಅ ನಿಯಮದ ಮೇರೆಗಿನ ವೈದ್ಯಕೀಯೇತರ ವಿಮೆಯ ಸಂದರ್ಭದಲ್ಲಿ ಅದನ್ನು ಜಿಲ್ಲೆಯ ಜಿಲ್ಲಾ ವಿಮಾಧಿಕಾರಿಗೆ ಕಳುಹಿಸಿಕೊಡತಕ್ಕದ್ದು.
ವೈದ್ಯಕೀಯ ಪರೀಕ್ಷೆ 10. ಪ್ರಸ್ತಾವನೆದಾರರನ್ನು ಪರೀಕ್ಷಿಸುವುದು ಮತ್ತು ಪ್ರಸ್ತಾವನೆಯನ್ನು ಮತ್ತು ನಿರ್ದಿಷ್ಟಪಡಿಸಲಾದ ವೈದ್ಯಕೀಯ ವರದಿಯನ್ನು, ಅದರಲ್ಲಿ ನಿರ್ದಿಷ್ಟಪಡಿಸಲಾದ ಘೋಷಣೆಗೆ ಪ್ರಸ್ತಾವನೆದಾರರ ಸಹಿಯನ್ನು ಪಡೆದ ತರುವಾಯ ಅಂಟಿಸಲಾದ ಲಕೋಟೆಯಲ್ಲಿ ಜಿಲ್ಲಾ ವಿಮಾ ಅಧಿಕಾರಿಗೆ ಕಳುಹಿಸಿಕೊಡುವುದು ವೈದ್ಯಕೀಯ ಪರೀಕ್ಷಕರ ಕರ್ತವ್ಯವಾಗಿರತಕ್ಕದ್ದು.
ಪರೀಕ್ಷಿಸುವ ವೈದ್ಯಾಧಿಕಾರಿಯ ಅರ್ಹತೆ 11. ಜಂಟಿ ನಿರ್ದೇಶಕರು (ಸಾರ್ವಜನಿಕ ಆರೋಗ್ಯ), ಆರೋಗ್ಯ ಸೇವೆಗಳ ನಿರ್ದೇಶನಾಲಯದ ಜಂಟಿ ನಿರ್ದೇಶಕರು (ವೈದ್ಯಕೀಯ), ಜಂಟಿ ನಿರ್ದೇಶಕರು (ವೈದ್ಯಕೀಯ ಶಿಕ್ಷಣ) ಇವರನ್ನು ಹೊರತುಪಡಿಸಿ ಸರ್ಕಾರಿ ಸೇವೆಯಲ್ಲಿರುವ ಎಲ್ಲ ವೈದ್ಯಾಧಿಕಾರಿಗಳು, ಲಸಿಕೆ ಸಂಸ್ಥೆ ಮತ್ತು ಸಾರ್ವಜನಿಕ ಆರೋಗ್ಯ ಸಂಸ್ಥೆಯ ಸೂಪರಿಂಟೆಂಡೆಂಟರುಗಳು ಮತ್ತು ಕಡೇ ಪಕ್ಷ ಒಂದು ವರ್ಷದಿಂದ ಸರ್ಕಾರಿ ಸೇವೆಯಲ್ಲಿರುವ ಸಾರ್ವಜನಿಕ ಆರೋಗ್ಯ ಸಂಶೋಧನಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಈ ನಿಯಮಗಳ ಮೇರೆಗೆ ವಿಮೆಗಾಗಿ ಪ್ರಸ್ತಾವನೆದಾರರನ್ನು ಪರೀಕ್ಷಿಸಲು ಅರ್ಹರಾಗಿರುತ್ತಾರೆ.
ಪರಂತು,-
i. ಪ್ರಸ್ತಾವನೆದಾರರನ್ನು ಪರೀಕ್ಷಿಸಲು ಅರ್ಹರಾದವರು ಒಂದು ಸ್ಥಳದಲ್ಲಿ ಒಬ್ಬರಿಗಿಂತ ಹೆಚ್ಚು ಅಧಿಕಾರಿಗಳು ಇರುವ ಸಂದರ್ಭದಲ್ಲಿ, ಪರೀಕ್ಷೆಯನ್ನು –
(ಅ) ಅಂಥ ಅಧಿಕಾರಿಗಳ ಪೈಕಿ ಅತ್ಯಂತ ಹಿರಿಯ ಅಧಿಕಾರಿ; ಅಥವಾ
(ಆ) ಜಿಲ್ಲೆಯ ಜಿಲ್ಲಾ ಶಸ್ತ್ರ ವೈದ್ಯರು, ಅಥವಾ
(ಇ) ಆರೋಗ್ಯ ಸೇವೆಗಳ ನಿರ್ದೇಶಕರು ಮತ್ತು ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಪದನಿಮಿತ್ತ ಮುಖ್ಯ ವೈದ್ಯಾಧಿಕಾರಿಯೊಂದಿಗೆ ಸಮಾಲೋಚಿಸಿ ನಿರ್ದೇಶಕರು ನಾಮ ನಿರ್ದೇಶಿಸುವ ಒಬ್ಬ ವೈದ್ಯಾಧಿಕಾರಿಯು -ಮಾಡತಕ್ಕದ್ದು.
ii. ಮಹಿಳಾ ಪ್ರಸ್ತಾವನೆದಾರರು ಸಾಮಾನ್ಯಾಗಿ ಮಹಿಳಾ ವೈದ್ಯಾಧಿಕಾರಿಗಳಿಂದ ಪರೀಕ್ಷೆ ಮಾಡಿಸಿಕೊಳ್ಳತಕ್ಕದ್ದು; ಅದಾಗ್ಯೂ ಅರ್ಹ ಮಹಿಳಾ ವೈದ್ಯಾಧಿಕಾರಿಗಳು ಇಲ್ಲದಿರುವ ಸ್ಥಳಗಳಲ್ಲಿ ಅಂಥ ಪ್ರಸ್ತಾವನೆದಾರರು ತಮ್ಮ ಸಮ್ಮತಿಯೊಂದಿಗೆ, ಅನ್ಯಥಾ ಅರ್ಹರಾದ ಪುರುಷ ವೈದ್ಯರಿಂದ, ಸೂಲಗಿತ್ತಿಯರು ಅಥವಾ ದಾದಿಯರ ನೆರವಿನೊಂದಿಗೆ ಪರೀಕ್ಷೆ ಮಾಡಿಸಿಕೊಳ್ಳಲು ಅನುಮತಿಸತಕ್ಕದ್ದು ಮತ್ತು ಆ ವೈದ್ಯರು ವೈದ್ಯಕೀಯ ಪರೀಕ್ಷೆಯಲ್ಲಿ ತಾವು ಹಾಗೆ ನೆರವು ಪಡೆದಿರುವುದಾಗಿ ವೈದ್ಯಕೀಯ ವರದಿಯಲ್ಲಿ ಪ್ರಮಾಣೀಕರಿಸತಕ್ಕದ್ದು.
iii. ರಕ್ತ ಸಂಬಂಧದ ಮೂಲಕ ಅಥವಾ ವಿವಾಹದ ಮೂಲಕ ಪ್ರಸ್ತಾವನೆದಾರರೊಂದಿಗೆ ಸಂಬಂಧ ಹೊಂದಿರುವ ವೈದ್ಯಾಧಿಕಾರಿಯು ಅವನನ್ನು/ಅವಳನ್ನು ಪರೀಕ್ಷಿಸತಕ್ಕದಲ್ಲ; ಅಂಥ ಸಂದರ್ಭದಲ್ಲಿ ಪ್ರಸ್ತಾವನೆದಾರರು ಅವನ/ಅವಳ ಸರ್ಕಾರಿ ವರಿಷ್ಠರು ನಿರ್ದೇಶಿಸಬಹುದಾದಂತೆ ಅವನನ್ನು/ಅವಳನ್ನು ಪರೀಕ್ಷಿಸಲು ಅಧಿಕಾರ ಹೊಂದಿರುವ ಆದರೆ ಪ್ರಸ್ತಾವನೆದಾರರೊಂದಿಗೆ ಸಂಬಂಧ ಹೊಂದಿಲ್ಲದ ಸಮೀಪದ ವೈದ್ಯಾಧಿಕಾರಿಗಳಿಂದ ಪರೀಕ್ಷಿಸಿಕೊಳ್ಳಬಹುದು.
ವೈದ್ಯಕೀಯ ಶುಲ್ಕ 12. ಪರೀಕ್ಷಿಸುವ ವೈದ್ಯಾಧಿಕಾರಿಯು, ಮೊದಲನೆಯ ವಿಮೆ ಮತ್ತು ಹೆಚ್ಚಿನ ವಿಮೆಗೆ ಸಂಬಂಧಿಸಿದಂತೆ ಸವಿವರ ವೈದ್ಯಕೀಯ ಪರೀಕ್ಷೆಗಾಗಿ ಇಲಾಖೆಯಿಂದ 8-00 ರೂಪಾಯಿಗಳ ಶುಲ್ಕವನ್ನು ಮತ್ತು ಹೆಚ್ಚಿನ ವಿಮೆಯ ಸಂಬಂಧದಲ್ಲಿ ಸಾಮಾನ್ಯ ವೈದ್ಯಕೀಯ ಪ್ರಮಾಣ ಪತ್ರಕ್ಕಾಗಿ ಸರ್ಕಾರವು ಕಾಲಕಾಲಕ್ಕೆ ನಿಗದಿಪಡಿಸಬಹುದಾದಷ್ಟು ಶುಲ್ಕವನ್ನು ಸ್ವೀಕರಿಸತಕ್ಕದ್ದು.
ಪ್ರಸ್ತಾವನೆಯ ಅಂಗೀಕಾರ ಮತ್ತು ವಿಲೆ ಮತ್ತು ಪ್ರಸ್ತಾವನೆದಾರರ ಹೊಣೆಗಾರಿಕೆ 13. ಮೊದಲನೆಯ ವಿಮೆಗಾಗಿನ ಪ್ರಸ್ತಾವನೆಯನ್ನು ಸವಿವರ ವೈದ್ಯಕೀಯ ಪ್ರಮಾಣ ಪತ್ರದ ಆಧಾರದ ಮೇಲೆ ಮತ್ತು ಹೆಚ್ಚಿನ ವಿಮೆಯನ್ನು, ಕಾಲಕಾಲಕ್ಕೆ ಹೊರಡಿಸಲಾದ ಆದೇಶಗಳ ಮೇರೆಗೆ ಅವಶ್ಯಕ ಅಧಿಕಾರಗಳನ್ನು ಪಡೆದ ಇಲಾಖೆಯ ಅಧಿಕಾರಿಗಳು ನಡೆಸಿದ ಸವಿವರ ವೈದ್ಯಕೀಯ ಪರೀಕ್ಷೆಯ ದಿನಾಂಕದಿಂದ ಎರಡು ವರ್ಷಗಳೊಳಗಾಗಿ ಪರೀಕ್ಷೆ ನಡೆಸಲಾದಲ್ಲಿ, ನಿಗದಿತ ನಮೂನೆಯಲ್ಲಿ ಸಾಮಾನ್ಯ ವೈದ್ಯಕೀಯ ಪ್ರಮಾಣ ಪತ್ರದ ಆಧಾರದ ಮೇಲೆ ಪ್ರಸ್ತಾವನೆಯನ್ನು ಅಂಗೀಕರಿಸತಕ್ಕದ್ದು. 14. ಪ್ರಸ್ತಾವನೆಯ ಸಂಬಂಧದಲ್ಲಿ ಪಾಲಿಸಿಯನ್ನು ನೀಡದಿದ್ದರೆ ಅಥವಾ ಅದು ಯಾವ ವೈದ್ಯಕೀಯ ಪ್ರಮಾಣ ಪತ್ರದ ಮೇಲೆ ಆಧಾರಿತವಾಗಿದೆಯೋ ಆ ಪ್ರಮಾಣ ಪತ್ರದ ದಿನಾಂಕದಿಂದ ಎರಡು ವರ್ಷಗಳೊಳಗಾಗಿ ಯಾವುದೇ ಕಾರಣಕ್ಕಾಗಿ ಅದು ಪ್ರವರ್ತನೀಯವಾಗದಿದ್ದರೆ, ಇಲಾಖೆಯು ಅದನ್ನು ಅಂಗೀಕರಿಸುವ ವಿಷಯವನ್ನು ಪರಿಗಣಿಸುವ ಮೊದಲು ನಿಗದಿತ ನಮೂನೆಯಲ್ಲಿ ಹೊಸ ವೈದ್ಯಕೀಯ ಪ್ರಮಾಣ ಪತ್ರ ಅಗತ್ಯವಾಗತಕ್ಕದ್ದು. ಅಂಥ ಆಕಸ್ಮಿಕ ಸಂದರ್ಭಕ್ಕೆ ಪ್ರಸ್ತಾವನೆದಾರರು ಮುಖ್ಯ ಹೊಣೆಗಾರರಾಗಿದ್ದರೆ ಹೊಸದಾಗಿ ನೀಡಬೇಕಾದ ವೈದ್ಯಕೀಯ ಪ್ರಮಾಣ ಪತ್ರಕ್ಕಾಗಿ ನಿಗದಿಪಡಿಸಲಾದ ವೈದ್ಯಕೀಯ ಶುಲ್ಕವನ್ನು ಅವನು/ಅವಳು ಸಂದಾಯ ಮಾಡತಕ್ಕದ್ದು. ಅಂಗೀಕಾರದ ನೋಟೀಸು ಹಾಗೂ ಮೊದಲ ವಿಮಾ ಕಂತಿನ ರಸೀದಿ 15. (1) ಪ್ರಸ್ತಾವನೆದಾರರು ಮೊದಲನೆಯ ವಿಮೆಯ ಸಂದರ್ಭದಲ್ಲಿ ನಿಯಮ 8ರ ಮೇರೆಗಿನ ಕೋಷ್ಟಕದ ಪ್ರಕಾರ ಕನಿಷ್ಠ ಮೊಬಲಗಿಗೆ ಸಮನಾದ ಮೊಬಲಗನ್ನು ಮತ್ತು ತರುವಾಯದ ವಿಮೆಯ ಸಂದರ್ಭದಲ್ಲಿ ಮೊಬಲಗಿನ ವ್ಯತ್ಯಾಸವನ್ನು ಸರ್ಕಾರಿ ಖಜಾನೆ/ಬ್ಯಾಂಕಿಗೆ ಇರಸಾಲು ಮಾಡತಕ್ಕದ್ದು ಮತ್ತು ಖಜಾನೆ/ಬ್ಯಾಂಕಿನ ರಸೀದಿಯನ್ನು ಲಗತ್ತಿಸಿ ವಿಮಾ ಪ್ರಸ್ತಾವನೆಯನ್ನು ಸಲ್ಲಿಸಿದ ಮಾತ್ರಕ್ಕೆ ಹಾನಿ ಪರಿಹಾರ ನೀಡಿಕೆಯನ್ನು ವಹಿಸಿಕೊಳ್ಳಲಾಗುವುದಿಲ್ಲ. ನಿರ್ದೇಶಕರು, ವಿಮಾ ಪ್ರಸ್ತಾವನೆಯನ್ನು ಅಂಗೀಕರಿಸಿದಲ್ಲಿ ಹಾನಿ ಪರಿಹಾರ ನೀಡಿಕೆಯನ್ನು ವಹಿಸಿಕೊಳ್ಳಲಾಗುವುದು ಮತ್ತು ಖಜಾನೆ/ಬ್ಯಾಂಕಿನಲ್ಲಿ ಹಾಗೆ ಠೇವಣಿ ಮಾಡಲಾದ ಮೊಬಲಗನ್ನು ಮೊದಲ ವಿಮಾ ಕಂತಿನ ಲೆಕ್ಕಕ್ಕೆ ಸರಿಹೊಂದಿಸಲಾಗುವುದು.
ಟಿಪ್ಪಣಿ 1:- ವೈದ್ಯಕೀಯ ಪರೀಕ್ಷೆಯ ದಿನಾಂಕ ಮತ್ತು ನಿರ್ದೇಶಕರು ಪ್ರಸ್ತಾವನೆಯನ್ನು ಅಂಗೀಕರಿಸಿದ ದಿನಾಂಕಗಳ ನಡುವೆ ಪ್ರಸ್ತಾವನೆದಾರರ ವೃತ್ತಿಯಲ್ಲಿ ಅಥವಾ ಅವನ/ಅವಳ ಕುಟುಂಬದ ಸಾಮಾನ್ಯ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಸಂಭವಿಸಿದಲ್ಲಿ ಅವನು/ಅವಳು ಅದನ್ನು ಎಷ್ಟೇ ಅಮುಖ್ಯವೆಂದು ಪರಿಗಣಿಸಿದರೂ ವಿಮೆ ಅಸಿಂಧುವಾಗುತ್ತದೆ ಮತ್ತು ಅಂಥ ಘಟನೆಗಳ ಬಗ್ಗೆ ಕರ್ನಾಟಕ ಸರ್ಕಾರದ ವಿಮಾ ಇಲಾಖೆಯ ನಿರ್ದೇಶಕರಿಗೆ ಲಿಖಿತದ ಮೂಲಕ ತಿಳಿಸಿದ ಹೊರತು ಪ್ರಸ್ತಾವನೆಯ ಅಂಗೀಕಾರದ ಬಗ್ಗೆ ಪುನರ್ ಅನುಮೋದನೆ ಪಡೆದ ಹೊರತು ಅದರ ಸಂಬಂಧದಲ್ಲಿ ಸಂದಾಯ ಮಾಡಲಾದ ಎಲ್ಲ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.
ಟಿಪ್ಪಣಿ 2:- ವಿವಿಧ ದಿನಾಂಕಗಳಂದು ಪಾಲಿಸಿಯನ್ನು ನೀಡಿದ್ದಾಗ್ಯೂ, ನಿರ್ದೇಶಕರು ವಿಮಾ ಪ್ರಸ್ತಾವನೆಯನ್ನು ಅಂಗೀಕರಿಸಿದ ದಿನಾಂಕದಿಂದ ಈ ನಿಯಮಗಳ ಮೇರೆಗಿನ ವಿಮಾ ಕರಾರು ಪರಿಣಾಮವುಳ್ಳದ್ದಾಗಿರತಕ್ಕದ್ದು.
ಟಿಪ್ಪಣಿ 3:- ವಿಮಾ ನಿಯಮಗಳ ಮೇರೆಗೆ ನಿರ್ದಿಷ್ಟಪಡಿಸಲಾದ ದರದ ಪ್ರಕಾರ ಲೆಕ್ಕ ಹಾಕಲಾದ ವಿಮಾ ಕಂತು ವಸೂಲಾಗದಿದ್ದಾಗ ಅಥವಾ ಕಡಿಮೆ ವಸೂಲಾದಾಗ ಜಿಲ್ಲಾ ವಿಮಾಧಿಕಾರಿಗಳು ಅದನ್ನು ಖಜಾನೆ ಅಧಿಕಾರಿಗಳಿಗೆ ತಿಳಿಸಿದರೆ, ಸರ್ಕಾರಿ ನೌಕರರ ಸಂಬಳದಲ್ಲಿ ವಿಮಾ ಕಂತಿಗೆ ಸಂಬಂಧಿಸಿದಂತೆ ಅವಶ್ಯ ಮುರಿತಗಳನ್ನು ಮಾಡಲು ಅವರಿಗೆ ಅಧಿಕಾರ ನೀಡಲಾಗಿದೆ.
(2) ಪ್ರಸ್ತಾವನೆಯನ್ನು ತಿರಸ್ಕರಿಸಲಾದಲ್ಲಿ ಅಥವಾ ಮುಂದೂಡಲಾದಲ್ಲಿ ಹಾಗೆ ಇರಸಾಲು ಮಾಡಲಾದ ಮೊಬಲಗನ್ನು ಪ್ರಸ್ತಾವನೆದಾರರಿಗೆ ಹಿಂದಿರುಗಿಸತಕ್ಕದ್ದು.
ತರುವಾಯದ ವಿಮಾ ಕಂತುಗಳ ಸಂದಾಯ 16. ತರುವಾಯದ ವಿಮಾಕಂತನ್ನು ಮುಂಚಿತವಾಗಿ ಸಂದಾಯ ಮಾಡತಕ್ಕದ್ದು ಮತ್ತು ವಿಮಾದಾರರ ವೇತನದಿಂದ ಮುರಿದುಕೊಳ್ಳುವ ಮೂಲಕ ಮಾಸಿಕ ವಸೂಲಿ ಮಾಡತಕ್ಕದ್ದು. ಆದರೆ ವಿಮಾದಾರನು/ಳು ಭತ್ಯೆ ಸಹಿತವಾದ ರಜೆಯ ಮೇಲೆ ಕೆಲಸಕ್ಕೆ ಹಾಜರಾಗದಿದ್ದರೆ ಅಥವಾ ಮುಂದಿನ ಸಂದಾಯಕ್ಕಾಗಿ ಅವನ/ಅವಳ ಸಂಬಳವನ್ನು ತಡೆಹಿಡಿಯಲಾಗಿದ್ದಲ್ಲಿ, ರಜೆ ಭತ್ಯೆ ಮತ್ತು ಸಂಬಳವನ್ನು ಪಡೆದಾಗ ವಿಮಾ ಕಂತುಗಳನ್ನು ವಸೂಲಿ ಮಾಡತಕ್ಕದ್ದು. ಆದರೆ ಅವನು/ಅವಳು ಭತ್ಯೆ ರಹಿತ ರಜೆಯನ್ನು ಪಡೆದಲ್ಲಿ ಅಥವಾ ಅವನನ್ನು/ಅವಳನ್ನು ಸೇವೆಯಿಂದ ಅಮಾನತ್ತುಗೊಳಿಸಲಾದಲ್ಲಿ ಅಥವಾ ವಿಮಾ ಕಂತನ್ನು ವಸೂಲಿ ಮಾಡಲಾಗದ ಅಥವಾ ಸಂದಾಯ ಮಾಡಲಾಗದ ಯಾವುದೇ ಇತರ ಸಂದರ್ಭದಲ್ಲಿ ಅದನ್ನು ನಗದು ರೂಪದಲ್ಲಿ ಸಂದಾಯ ಮಾಡತಕ್ಕದ್ದು ಮತ್ತು ಹಾಗೆ ಸಂದಾಯ ಮಾಡದಿದ್ದಲ್ಲಿ, ಆ ಹಣವು ಅವನ/ಅವಳ ಪಾಲಿಸಿಯ ಮೇಲೆ ವರ್ಷಕ್ಕೆ ಶೇಕಡಾ ಒಂಬತ್ತು ದರದಲ್ಲಿ ಸರಳ ಬಡ್ಡಿಯನ್ನು ಹೊಂದಿರುವ ಸಾಲವಾಗಿರತಕ್ಕದ್ದು ಮತ್ತು ಮುಂದಿನ ಸಂದಾಯಗಳು ಯಾವುದಾದರೂ ಇದ್ದಲ್ಲಿ, ಆ ಸಂದಾಯ ಹಣದ ಶೇಕಡಾ ಐದಕ್ಕಿಂತ ಕಡಿಮೆಯಿಲ್ಲದ ಕಂತುಗಳಲ್ಲಿ ಬಾಕಿಯಂತೆ ವಸೂಲಿ ಮಾಡತಕ್ಕದ್ದು.
ಪರಂತು, ಪಾಲಿಸಿಯ ಅವಧಿ ಪೂರ್ಣಗೊಳ್ಳುವ ದಿನಾಂಕದ ಮೂರು ತಿಂಗಳ ಮೊದಲು ವಿಮಾದಾರರ ವೇತನದಿಂದ ಮುರಿತದ ಮೂಲಕ ಯಾವುದೇ ವಸೂಲಿಯನ್ನು ಮಾಡತಕ್ಕದ್ದಲ್ಲ. ಈ ಮೊಬಲಗನ್ನು ಅವಧಿ ಪೂರ್ಣಗೊಂಡ ಮೊಬಲಗಿನಿಂದ ಸರಿಹೊಂದಿಸಬಹುದು.
ಸೇವೆಯ ಸಮಾಪ್ತಿ (ವಿಮಾದಾರರಿಗೆ ಆಯ್ಕೆಯ ಅವಕಾಶ) 17. ವಿಮಾದಾರರು ಈ ನಿಯಮಗಳ ಮೇರೆಗೆ ಐವತ್ತೈದು ವರ್ಷ ವಯಸ್ಸು ಪೂರ್ಣಗೊಳ್ಳುವ ಮೊದಲು ಸರ್ಕಾರಿ ಸೇವೆಯಲ್ಲಿರುವುದು ನಿಂತುಹೋದರೆ, ಹಾಗೆ ಸಮಾಪ್ತವಾದ, ಹನ್ನೆರಡು ತಿಂಗಳೊಳಗೆ ಅಥವಾ ಅವನ/ಅವಳ ಸೇವೆಗಳನ್ನು ಕೊನೆಗೊಳಿಸಿದ ಸಕ್ಷಮ ಪ್ರಾಧಿಕಾರಿಯ ಆದೇಶದ ದಿನಾಂಕ ಇವೆರಡರಲ್ಲಿ ಯಾವುದು ನಂತರಮೋ ಆ ಸಂದರ್ಭದಲ್ಲಿ ಅವನು/ಅವಳು ಈ ಮುಂದಿನ ಮಾರ್ಗಕ್ರಮಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು :-
i. ಅವನಿಗೆ/ಅವಳಿಗೆ ಐವತ್ತೈದು ವರ್ಷ ವಯಸ್ಸಾದಾಗ ಅವಧಿಪೂರ್ಣಗೊಳ್ಳುವವರೆಗೆ ಅವನ/ಅವಳ ಪಾಲಿಸಿ ಅಥವಾ ಪಾಲಿಸಿಗಳಿಗೆ ಬಾಕಿಯಿರುವ ವಿಮಾ ಕಂತುಗಳನ್ನು ಸಂದಾಯ ಮಾಡುವುದನ್ನು ಮುಂದುವರಿಸಬಹುದು.
ii. ಈ ನಿಯಮಗಳ ಮೇರೆಗೆ ನೀಡಬಹುದಾದ ಸಂದಾಯವಾದ ಪಾಲಿಸಿಯ (ಪೈಡ್ ಅಪ್ ಪಾಲಿಸಿ) ಕನಿಷ್ಠ ಮೊಬಲಗು 50-00 ರೂಪಾಯಿಗಳಾಗಿರತಕ್ಕುದು ಎಂಬ ಷರತ್ತಿಗೊಳಪಟ್ಟು, ವಿಮಾದಾರರು ಐವತ್ತೈದು ವರ್ಷ ತುಂಬುವವರೆಗೆ ಮೂಲ ಪಾಲಿಸಿಯು ಮುಂದುವರೆಯುತ್ತಿದ್ದರೆ ಸಂದಾಯವಾಗುತ್ತಿದ್ದ ಒಟ್ಟು ವಿಮಾ ಕಂತಿಗೆ, ಪಾಲಿಸಿಯ ಮೇರೆಗೆ ಸಂದಾಯ ಮಾಡಲಾದ ಒಟ್ಟು ವಿಮಾ ಕಂತಿನ ಪ್ರಮಾಣವೆಷ್ಟೋ, ಮೂಲ ವಿಮಾ ಮೊಬಲಗಿಗೆ ಅದೇ ಪ್ರಮಾಣವನ್ನು ಹೊಂದಿರುವ ಇಳಿಸಲಾದ ವಿಮಾ ಮೊತ್ತಕ್ಕಾಗಿ ಸಂದಾಯವಾದ ವಿಮಾ ಪಾಲಿಸಿಯನ್ನು ಅವನು/ಅವಳು ತೆಗೆದುಕೊಳ್ಳಬಹುದು.
iii. ಅವನು/ಅವಳು ಈ ನಿಯಮಗಳಿಗೆ ಲಗತ್ತಿಸಲಾದ ಸೂಕ್ತ ಕೋಷ್ಟಕಕ್ಕೆ ಅನುಸಾರವಾಗಿ ಪಾಲಿಸಿಯ ಮೌಲ್ಯವನ್ನು ಬಿಟ್ಟುಕೊಟ್ಟು ನಗದನ್ನು ಪಡೆದುಕೊಳ್ಳಬಹುದು.
ಪರಂತು, ವಿಮಾದಾರರು, ಅವನ/ಅವಳ ಪಾಲಿಸಿಯ ಬಗ್ಗೆ ಮೇಲ್ಕಂಡಂತೆ ವ್ಯವಹರಿಸಲು ಆಯ್ಕೆ ಮಾಡಿಕೊಳ್ಳದಿದ್ದಲ್ಲಿ, ಅವನು/ಅವಳು ಮೇಲೆ ಸೂಚಿಸಲಾದ ಮೂರನೇ ಪರ್ಯಾಯ ವ್ಯವಸ್ಥೆಗೆ ಹಕ್ಕುಳ್ಳವನಾಗಿರುತ್ತಾನೆ/ಳೆ ಮತ್ತು 25ನೇ ನಿಯಮದಲ್ಲಿ ವಿವರಿಸಲಾದಂತೆ ಅಧ್ಯರ್ಪಣೆ ಮೌಲ್ಯವನ್ನು ಅವನಿಗೆ/ಅವಳಿಗೆ ಅಥವಾ ಅವನ/ಅವಳ ನಾಮ ನಿರ್ದೇಶಿತನಿಗೆ ಅಥವಾ ಅವನ/ಅವಳ ನಾಮ ನಿರ್ದೇಶಿತರಿಗೆ ಮಾತ್ರ ಸಂದಾಯ ಮಾಡಲಾಗುವುದು. ನಾಮ ನಿರ್ದೇಶಿತರು ಯಾರೂ ಇಲ್ಲದಿದ್ದರೆ, ಸದರಿ ಮೊಬಲಗನ್ನು ಸ್ವೀಕರಿಸಲು ಸಕ್ಷಮ ನ್ಯಾಯಾಲಯದಿಂದ ಪಡೆದ ಅಧಿಕಾರ ಪತ್ರವನ್ನು ಹಾಜರುಪಡಿಸುವ ಅವನ/ಅವಳ ವಾರಸುದಾರರಿಗೆ ಸಂದಾಯ ಮಾಡಲಾಗುವುದು.
ವೇತನದ ಇಳಿತಾಯ 18. ಯಾವುದೇ ಕಾರಣಕ್ಕಾಗಿ ವಿಮಾದಾರನ/ ಳ ವೇತನವನ್ನು ಕಡಿತಗೊಳಿಸಿದ್ದರೆ ಪರಿಣಾಮವಾಗಿ, ಅವನು/ಅವಳು ಪೂರ್ಣ ವಿಮಾ ಕಂತನ್ನು ಸಂದಾಯ ಮಾಡಲು ಸಾಧ್ಯವಾಗದಿದ್ದರೆ, ಪಾಲಿಸಿಯಲ್ಲಿ ಒಳಗೊಳ್ಳಲಾದ ವಿಮಾ ಮೊಬಲಗನ್ನು ವಿಮಾದಾರನು/ಳು ಸಂದಾಯ ಮಾಡಲು ಸಾಧ್ಯವಾಗುವ ವಿಮಾ ಕಂತಿಗೆ ಪ್ರಮಾಣ ಬದ್ಧವಾಗಿರುವಂತೆ ಮುಂದುವರಿಸತಕ್ಕದ್ದು. ಆದರೆ ಅದು ಯಾವುದೇ ಸಂದರ್ಭದಲ್ಲಿ, 17(ii) ನೇ ನಿಯಮದಲ್ಲಿ ನಿರ್ದಿಷ್ಟಪಡಿಸಲಾದಂತೆ ಸಂದಾಯವಾದ ಮೌಲ್ಯದ ಪಾಲಿಸಿಯಾಗಿ ಮಾರ್ಪಡಿಸಲಾದ ಉಳಿಕೆಗಿಂತ ಕಡಿಮೆ ಇರತಕ್ಕದ್ದಲ್ಲ (ನಿಯಮ 8ರ ಮೇರೆಗಿನ ಕೋಷ್ಟಕದ ಪ್ರಕಾರ ಕನಿಷ್ಠ ಮೊಬಲಗು).
ಕರ್ನಾಟಕ ಸರ್ಕಾರದ ಮೇರೆಗಿನ ಸೇವೆಗಳ ಸಮಾಪ್ತಿ 19. ಈ ನಿಯಮಗಳ ಮೇರೆಗೆ ನೀಡಲಾದ ಪಾಲಿಸಿಯನ್ನು ಹೊಂದಿರುವ ಮತ್ತು ಸರ್ಕಾರದ ಮೇರೆಗಿನ ಸೇವೆಯನ್ನು ಹೊಂದಿರುವುದು ಮುಕ್ತಾಯಗೊಂಡ ವಿಮಾದಾರರು ಪೂರ್ಣವಾಗಿ ಅಥವಾ ಭಾಗಶಃ ವಿಮಾ ಕಂತುಗಳ ಸಂದಾಯವನ್ನು ನಿಲ್ಲಿಸಬಹುದು, ಮತ್ತು ಸಂದಾಯವಾದ ಪಾಲಿಸಿಯನ್ನು ಪಡೆದುಕೊಳ್ಳಬಹುದು ಅಥವಾ ಈ ನಿಯಮಗಳ ಮೇರೆಗೆ ವಿವರಿಸಲಾದ ರೀತಿಯಲ್ಲಿ ಲೆಕ್ಕ ಹಾಕಲಾದ ಅಧ್ಯರ್ಪಿತ ಮೌಲ್ಯವನ್ನು ತೆಗೆದುಕೊಳ್ಳಬಹುದು. ಆದಾಗ್ಯೂ ಸಂದಾಯವಾದ ಪಾಲಿಸಿಯ ಮೊಬಲಗು 50 ರೂಪಾಯಿಗಳಿಗಿಂತ ಕಡಿಮೆಯಿರುವಲ್ಲಿ ಅಧ್ಯರ್ಪಿತ ಮೌಲ್ಯದ ಸಂದಾಯಕ್ಕಾಗಿ ಹೇಗೋ ಹಾಗೆ ಸದರಿ ಪ್ರಕರಣವನ್ನು ವಿಲೆ ಮಾಡಲಾಗುವುದು.
ಟಿಪ್ಪಣಿ:- ಆದರೆ ಒಬ್ಬ ಅಧಿಕಾರಿಯು, ಕರ್ನಾಟಕ ಸರ್ಕಾರದಿಂದ ಹೊರಗೆ ಭಾರತ ಸರ್ಕಾರಕ್ಕೆ ಅಥವಾ ರಾಜ್ಯ ಸರ್ಕಾರಕ್ಕೆ ಅಥವಾ ಅರೆ ಸರ್ಕಾರಿ ಸಂಸ್ಥೆಗೆ ಪ್ರತಿನಿಯೋಜನೆಯ ಮೇಲೆ ಹೋಗಿದ್ದಾಗ ಅವನು/ಅವಳು ಮೂಲ ರಾಜ್ಯಕ್ಕೆ ಹಿಂದಿರುಗುವವರೆಗೆ ವಿಮಾ ಕಂತನ್ನು ನಗದು ರೂಪದಲ್ಲಿ ಸಂದಾಯ ಮಾಡುವುದನ್ನು ಮುಂದುವರಿಸಬಹುದು.
ಲೆಕ್ಕ ಶೀರ್ಷಿಕೆ ಮತ್ತು ಲೆಕ್ಕಗಳ ವಿವರ ಪತ್ರ ನೀಡಿಕೆ 20.(1) ಈ ನಿಯಮಗಳ ಮೇರೆಗಿನ ಜೀವ ವಿಮಾ ಲೆಕ್ಕಗಳಿಗೆ ಸಂಬಂಧಿಸಿದ ಎಲ್ಲಾ ಸ್ವೀಕೃತಿಗಳು ಮತ್ತು ಬಟವಾಡೆಗಳನ್ನು ಸರ್ಕಾರವು ಕಾಲಕಾಲಕ್ಕೆ ನಿರ್ದಿಷ್ಟಪಡಿಸಬಹುದಾದ ಪ್ರತ್ಯೇಕ ಬಜೆಟ್ ಅಥವಾ ಲೆಕ್ಕ ಶೀರ್ಷಿಕೆಗೆ ಜಮೆ ಮಾಡತಕ್ಕದ್ದು ಮತ್ತು ಈ ಲೆಕ್ಕಗಳ ಮೇರೆಗಿನ ಎಲ್ಲಾ ನಿಧಿಗಳನ್ನು ಸರ್ಕಾರವು ಸೂಕ್ತವೆಂದು ಭಾವಿಸಬಹುದಾದಂಥ ರೀತಿಯಲ್ಲಿ ತೊಡಗಿಸತಕ್ಕದ್ದು.
(2) ಪ್ರತಿ ವರ್ಷದ ಮುಕ್ತಾಯದ ತರುವಾಯ, ಆದಷ್ಟು ಬೇಗನೆ ನಿರ್ದೇಶಕರು, ಪ್ರತಿಯೊಬ್ಬ ವಿಮಾದಾರನಿಗೆ, ವರ್ಷದ ಏಪ್ರಿಲ್ 1ರಂದು ಇದ್ದಂತೆ ಪ್ರಾರಂಭ ಶಿಲ್ಕು, ಜಮೆ ಮಾಡಲಾದ ಒಟ್ಟು ಮೊಬಲಗು ಅಥವಾ ವರ್ಷದ ಅವಧಿಯ ಮುರಿತಗಳು ಮತ್ತು ಹಿಂದಿನ ಮೌಲ್ಯಮಾಪನದ ಅಂತ್ಯದವರೆಗೆ ಪ್ರಾಪ್ತವಾದ ಪ್ರತ್ಯಾವರ್ತಿ ಬೋನಸ್ (reversionary bonus) ಒಟ್ಟು ಮೊಬಲಗನ್ನು ತೋರಿಸುವ ಅವನ ಲೆಕ್ಕದ ವಿವರ ಪತ್ರವನ್ನು ಕಳುಹಿಸಿಕೊಡತಕ್ಕದ್ದು.
(3) ವಿಮಾದಾರರು ವಿವರ ಪತ್ರವನ್ನು ಸ್ವೀಕರಿಸಿದ ದಿನಾಂಕದಿಂದ ಎರಡು ತಿಂಗಳೊಳಗಾಗಿ, ವಿಮಾದಾರರು ತಮ್ಮ ಗಮನಕ್ಕೆ ತಂದ ಯಾವುದೇ ತಪ್ಪನ್ನು ನಿರ್ದೇಶಕರು ಸರಿಪಡಿಸತಕ್ಕದ್ದು.
ವಾರ್ಷಿಕ ಲೆಕ್ಕ ಪರಿಶೋಧನೆ ಮತ್ತು ವರದಿ 21. ಇಲಾಖೆಯ ಲೆಕ್ಕ ಪತ್ರಗಳನ್ನು, ಸರ್ಕಾರವು ಕಾಲಕಾಲಕ್ಕೆ ನಿರ್ದಿಷ್ಟಪಡಿಸಬಹುದಾದಂಥ ರೀತಿಯಲ್ಲಿ ಪರಿಶೋಧಿಸತಕ್ಕದ್ದು ಮತ್ತು ಸರ್ಕಾರವು ಕಾಲಕಾಲಕ್ಕೆ ಗೊತ್ತುಪಡಿಸಬಹುದಾದಂಥ ನಮೂನೆಯಲ್ಲಿ ಮತ್ತು ಅಂಥ ರೀತಿಯಲ್ಲಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸತಕ್ಕದ್ದು.
ಮೌಲ್ಯ ಮಾಪನ 22.ಜೀವ ವಿಮಾ ಯೋಜನೆಯ ಕಛೇರಿ ಶಾಖೆಯ ನಿಧಿಗಳ ಆಸ್ತಿಗಳು ಮತ್ತು ಹೊಣೆಗಳ ವಿಮಾ ಗಣನೆಯ ಮೇರೆಗಿನ ಮೌಲ್ಯ ನಿರ್ಣಯವನ್ನು, ಈ ನಿಯಮಗಳ ಮೇರೆಗೆ 1986ರ ಏಪ್ರಿಲ್ 1 ರಿಂದ ಎರಡು ವರ್ಷಗಳಿಗೊಮ್ಮೆ ಮಾಡತಕ್ಕದ್ದು.
(ಸರ್ಕಾರದ ಅಧಿಸೂಚನೆ ಸಂಖ್ಯೆ ಆರ್ಥಿಕ-227-ಕವಿಇ-87 ದಿನಾಂಕ 14.03.88)
ಕ್ಲೇಮುಗಳ ಇತ್ಯರ್ಥ 23.(ಅ) 28ನೇ ನಿಯಮದ ಮೇರೆಗೆ ಪಡೆಯಲಾದ ಅದರ ಪ್ರತಿಯ ಪಾಲಿಸಿಯನ್ನು ಅಧ್ಯರ್ಪಿಸುವುದಕ್ಕೆ ಒಳಪಟ್ಟು, ಸಂದರ್ಭಾನುಸಾರ ವಿಮಾದಾರನಿಗೆ/ಳಿಗೆ ಐವತ್ತೈದು ವರ್ಷ ವಯಸ್ಸು ತುಂಬಿದ ತರುವಾಯ ಪಾಲಿಸಿಯ ವಿಮಾ ಮೊತ್ತವನ್ನು ವಿಮಾದಾರನಿಗೆ/ಳಿಗೆ ಸಂದಾಯ ಮಾಡತಕ್ಕದ್ದು.
(ಆ) ವಿಮಾದಾರನು/ಳು ಮರಣ ಹೊಂದಿದನೆಂದು/ಳೆಂದು ವರದಿಯಾದಲ್ಲಿ, ಪಾಲಿಸಿಯ ವಿಮಾ ಮೊತ್ತವನ್ನು, ನಿರ್ದೇಶಕರು ಅಗತ್ಯಪಡಿಸಿದಂತೆ ಮರಣ ಮತ್ತು ಅದಕ್ಕೆ ಪೂರಕವಾದ ಸಂಗತಿಗಳ ಬಗ್ಗೆ ತೃಪ್ತಿಕರ ಪುರಾವೆಯನ್ನು ಹಾಜರುಪಡಿಸುವುದಕ್ಕೆ ಒಳಪಟ್ಟು, ವಿಮಾದಾರರು ಅವನ/ಅವಳ ಜೀವಿತ ಕಾಲದಲ್ಲಿ ಈ ನಿಯಮಗಳ ಮೇರೆಗೆ ನಾಮ ನಿರ್ದೇಶನಗೊಳಿಸಿದ ಮತ್ತು ಅಂಥ ನಾಮ ನಿರ್ದೇಶನವನ್ನು ಇಲಾಖೆಯಲ್ಲಿ ನೋಂದಾಯಿಸಿರುವಂಥ ವ್ಯಕ್ತಿ ಅಥವಾ ವ್ಯಕ್ತಿಗಳಿಗೆ ಸಂದಾಯ ಮಾಡಲಾಗುವುದು.
(ಇ) ಮೇಲೆ ಸೂಚಿಸಲಾದಂತೆ ಅಂಥ ಯಾವ ನಾಮ ನಿರ್ದೇಶನವನ್ನು ಮತ್ತು ನೋಂದಣಿಯನ್ನು ಮಾಡಿಲ್ಲದಿರುವಲ್ಲಿ, ಪಾಲಿಸಿಯ ಮೂಲಕ ಬರುವ ಮೊತ್ತವನ್ನು, ಸಕ್ಷಮ ನ್ಯಾಯಾಲಯವು ಅದನ್ನು ಸ್ವೀಕರಿಸಲು ಹಕ್ಕುಳ್ಳವರೆಂದು ಘೋಷಿಸುವ ವ್ಯಕ್ತಿ ಮತ್ತು ವ್ಯಕ್ತಿಗಳಿಗೆ ನೀಡಲಾಗುವುದು.
ಪರಂತು, ಪಾಲಿಸಿಯ ಮೂಲಕ ಭದ್ರತೆ ಒದಗಿಸಲಾದ ಮೊತ್ತವು ಹತ್ತು ಸಾವಿರ ರೂಪಾಯಿಗಳನ್ನು ಮೀರದಿರುವಲ್ಲಿ, ನಿರ್ದೇಶಕರಿಗೆ, ಕ್ಲೇಮುದಾರರ ಹಕ್ಕು ಮತ್ತು ಸ್ವಾಮ್ಯದ ಬಗ್ಗೆ ಮನವರಿಕೆಯಾದರೆ ಮತ್ತು ಕಾನೂನು ಸಮ್ಮತ ಪತ್ರವನ್ನು ಹಾಜರುಪಡಿಸಲು ಒತ್ತಾಯಪಡಿಸುವುದರಿಂದ ಅನುಚಿತ ವಿಳಂಬ ಅಥವಾ ತೊಂದರೆಯುಂಟಾಗುತ್ತದೆಂದು ಪರಿಗಣಿಸಿದರೆ, ನಿರ್ದೇಶಕರಿಗೆ ಒಪ್ಪಿಗೆಯಾಗುವ ಇಬ್ಬರ ಜಾಮೀನಿನೊಂದಿಗೆ ಈ ನಿಯಮಗಳಿಗೆ ಲಗತ್ತಿಸಲಾದ ನಮೂನೆ “ಸಿ” ಯಲ್ಲಿ ನಷ್ಟ ಭರ್ತಿ ಬಂಧಪತ್ರವನ್ನು ಬರೆದುಕೊಟ್ಟ ತರುವಾಯ ಅಂಥ ಕ್ಲೇಮುದಾರರಿಗೆ ಹಣ ಸಂದಾಯ ಮಾಡಲು ಆದೇಶ ನೀಡಬಹುದು.
24.ಬಿಟ್ಟು ಬಿಡಲಾಗಿದೆ. (ಅಧಿಸೂಚನೆ ಸಂಖ್ಯೆ ಎಫ್ಡಿ 191 ಕೆಐಡಿ 82 ದಿನಾಂಕ 31.07.82) ಆದರೆ ಸರ್ಕಾರದ ದಿನಾಂಕ 20.09.84ರ ಸುತ್ತೋಲೆ ಸಂಖ್ಯೆ ಎಫ್ಡಿ 392 ಏ.ಎಚ್.ಬಿ.82 ಆದೇಶದಂತೆ ವಿಮಾ ಪತ್ರಗಳನ್ನು ಮನೆ ಮುಂಗಡಕ್ಕೆ ಸರ್ಕಾರಕ್ಕೆ ಒತ್ತೆ ಇಟ್ಟಾಗ ಅದರ ಮೇಲೆ ಸರ್ಕಾರದ ಹಕ್ಕು ಇರುತ್ತದೆ.
ನಾಮ ನಿರ್ದೇಶನಗಳು 25.(i) ವಿಮಾದಾರರು, ಸಂದಾಯಕ್ಕಾಗಿ ಪಾಲಿಸಿಯ ಅವಧಿಯು ಪೂರ್ಣಗೊಳ್ಳುವ ಮೊದಲು ಯಾವುದೇ ಸಮಯದಲ್ಲಿ, ತನ್ನ ರಕ್ತ ಸಂಬಂಧ ಅಥವಾ ವಿವಾಹ ಸಂಬಂಧಿಗಳ ಪೈಕಿ ಅಥವಾ ತನ್ನ ಮೇಲೆ ಅವಲಂಬಿತನಾದ/ಅವಲಂಬಿತರಾದ ಯಾವನೇ ವ್ಯಕ್ತಿ ಅಥವಾ ವ್ಯಕ್ತಿಗಳಿಗೆ ಅವನ/ಅವಳ ಮರಣದ ಸಂದರ್ಭದಲ್ಲಿ ಪಾಲಿಸಿ/ಪಾಲಿಸಿಗಳ ಮೂಲಕ ಭದ್ರತೆ ಪಡೆದ ಹಣವನ್ನು ಸಂದಾಯ ಮಾಡತಕ್ಕುದೆಂದು ನಾಮ ನಿರ್ದೇಶನಗೊಳಿಸಬಹುದು.
ಪರಂತು, ಯಾವನೇ / ಯಾವಳೆ ನಾಮ ನಿರ್ದೇಶಿತನು/ಳು ಅಪ್ರಾಪ್ತ ವಯಸ್ಕನಾಗಿರುವಲ್ಲಿ, ನಾಮ ನಿರ್ದೇಶಿತರ ಅಪ್ರಾಪ್ತ ವಯಸ್ಸಿನ ಅವಧಿಯಲ್ಲಿ ವಿಮಾದಾರನ/ಳ ಮರಣವುಂಟಾದ ಸಂದರ್ಭದಲ್ಲಿ ಪಾಲಿಸಿ/ಪಾಲಿಸಿಗಳ ಮೂಲಕ ಭದ್ರತೆ ಪಡೆದ ಹಣವನ್ನು ಸ್ವೀಕರಿಸುವುದಕ್ಕಾಗಿ ವಿಮಾದಾರನು/ಳು ಯಾವನೇ/ಳೇ ವ್ಯಕ್ತಿಯನ್ನು ನಿರ್ದಿಷ್ಟಪಡಿಸಲಾದ ರೀತಿಯಲ್ಲಿ ನೇಮಕ ಮಾಡುವುದು ಕಾನೂನು ಬದ್ಧವಾಗಿರತಕ್ಕದ್ದು.
ಮತ್ತು ಪರಂತು, ಹೆಂಡತಿ ಅಥವಾ ಗಂಡ (ಮಹಿಳಾ ಸರ್ಕಾರಿ ನೌಕರರ ಸಂದರ್ಭದಲ್ಲಿ) ಅಥವಾ ಮಕ್ಕಳನ್ನು ಹೊರತುಪಡಿಸಿದ ಯಾವುದೇ ನಾಮ ನಿರ್ದೇಶನ ಶೂನ್ಯವಾಗತಕ್ಕದ್ದು. ನಾಮ ನಿರ್ದೇಶನದ ತರುವಾಯ ವಿಮಾದಾರನು/ಳು ಮದುವೆಯಾದರೆ ಮತ್ತು ಪುರುಷ ವಿಮಾದಾರನ ಸಂದರ್ಭದಲ್ಲಿ ಹೆಂಡತಿ ಮತ್ತು / ಅಥವಾ ಮಕ್ಕಳು ಇದ್ದರೆ ಮತ್ತು ಮಹಿಳಾ ವಿಮಾದಾರಳ ಸಂದರ್ಭದಲ್ಲಿ ಗಂಡ ಮತ್ತು/ಅಥವಾ ಮಕ್ಕಳು ಇದ್ದರೆ ಅಂಥ ನಾಮ ನಿರ್ದೇಶನ ಶೂನ್ಯವಾಗತಕ್ಕುದು ಮತ್ತು ನಾಮ ನಿರ್ದೇಶನವು ಪುರುಷ ವಿಮಾದಾರನ ಸಂದರ್ಭದಲ್ಲಿ ಹೆಂಡತಿ ಅಥವಾ ಮಕ್ಕಳ ಪರವಾಗಿದೆಯೆಂದು ಮತ್ತು ಮಹಿಳಾ ವಿಮಾದಾರಳ ಸಂದರ್ಭದಲ್ಲಿ ಗಂಡ ಮತ್ತು/ಅಥವಾ ಮಕ್ಕಳ ಪರವಾಗಿದೆಯೆಂದು ಭಾವಿಸತಕ್ಕದ್ದು.
ವಿಮಾದಾರರು ಯಾವನೇ/ಳೇ ಹತ್ತಿರದ ಸಂಬಂಧಿಯನ್ನು ಹೊಂದಿಲ್ಲದಿದ್ದರೆ, ವಿಮಾದಾರರು ಯಾವನೇ/ಯಾವಳೇ ಇತರ ಸಂಬಂಧಿ ಅಥವಾ ಯಾವುದೇ ಧಾರ್ಮಿಕ ಅಥವಾ ಧರ್ಮಾದಾಯ ಅಥವಾ ಸಾಮಾಜಿಕ ಅಥವಾ ಶೈಕ್ಷಣಿಕ ಸಂಸ್ಥೆಯನ್ನು ಅಥವಾ ಯಾವುದೇ ಅಂಥ ಸಂಸ್ಥೆಯ ಮುಖ್ಯಸ್ಥರನ್ನು ನಾಮ ನಿರ್ದೇಶನಗೊಳಿಸತಕ್ಕದ್ದು.
ವಿವರಣೆ:- ಈ ಖಂಡದ ಉದ್ದೇಶಕ್ಕಾಗಿ, ಹತ್ತಿರದ ಸಂಬಂಧಿ ಎಂದರೆ ವಿಮಾದಾರರ ಮೇಲೆ ಅವಲಂಬಿತರಾಗಿರುವ ಹೆಂಡತಿ/ಗಂಡ, ಮಕ್ಕಳು (ಮಲ ಮಕ್ಕಳು ಮತ್ತು ದತ್ತು ಮಕ್ಕಳೂ ಸೇರಿದಂತೆ) ತಂದೆ, ತಾಯಿ, ಸಹೋದರರು ಅಥವಾ ಸಹೋದರಿಯರು, ಮತ್ತು ಮೃತನಾದ ಮಗನ ಹೆಂಡತಿ ಮತ್ತು ಮಕ್ಕಳು.
(ii) ಅಂಥ ಯಾವುದೇ ನಾಮ ನಿರ್ದೇಶನವನ್ನು ಪರಿಣಾಮಕಾರಿಯಾಗಿಸುವ ದೃಷ್ಟಿಯಿಂದ, ಮೂಲ ಪಾಲಿಸಿಯಲ್ಲಿ ನಾಮ ನಿರ್ದೇಶನವನ್ನು ಸೇರಿಸಿದ್ದ ಹೊರತು, ಪಾಲಿಸಿಯ ಮೇಲೆ ಹಿಂಬರಹ ಮಾಡುವ ಮೂಲಕ ಗೊತ್ತುಪಡಿಸಲಾದ ರೀತಿಯಲ್ಲಿ ಇಲಾಖೆಗೆ ತಿಳಿಸತಕ್ಕದು ಮತ್ತು ಪಾಲಿಸಿಗೆ ಸಂಬಂಧಿಸಿದ ಇಲಾಖೆಯ ದಾಖಲೆಗಳಲ್ಲಿ ನೋಂದಣಿ ಮಾಡತಕ್ಕದ್ದು. ಯಾವುದೇ ಅಂಥ ನಾಮ ನಿರ್ದೇಶನವನ್ನು ಸಂದಾಯಕ್ಕಾಗಿ ಪಾಲಿಸಿಯ ಅವಧಿ ಪೂರ್ಣಗೊಳ್ಳುವ ಮೊದಲು ಯಾವುದೇ ಸಮಯದಲ್ಲಿ ಸಂದರ್ಭಾನುಸಾರ ಹಿಂಬರಹದ ಮೂಲಕ ಅಥವಾ ತರುವಾಯದ ಹಿಂಬರಹ ಅಥವಾ ಉಯಿಲಿನ ಮೂಲಕ ರದ್ದುಗೊಳಿಸಬಹುದು ಅಥವಾ ಮಾರ್ಪಡಿಸಬಹುದು, ಆದರೆ ಯಾವುದೇ ಅಂಥ ರದ್ದಿಯಾತಿ ಅಥವಾ ಮಾರ್ಪಾಟಿನ ಬಗ್ಗೆ ಬರಹದಲ್ಲಿ ನೋಟಿಸನ್ನು ಇಲಾಖೆಗೆ ನೀಡಿದ ಹೊರತು, ಅದು ಮೂಲ ಪಾಲಿಸಿಯಲ್ಲಿ ನಮೂದಿಸಲಾದ ಅಥವಾ ಅದರ ದಾಖಲೆಗಳಲ್ಲಿ ನೋಂದಾಯಿಸಲಾದ ವಿಮಾದಾರರ ನಾಮ ನಿರ್ದೇಶಿತನಿಗೆ ಅದು ಸದ್ಬಾವನೆಯಿಂದ ಪಾಲಿಸಿಯ ಮೇರೆಗೆ ಮಾಡಿದ ಯಾವುದೇ ಸಂದಾಯಕ್ಕೆ ಹೊಣೆಯಾಗಿರತಕ್ಕದ್ದಲ್ಲ.
(iii) ಇಲಾಖೆಯು ವಿಮಾದಾರನಿಗೆ/ಳಿಗೆ ನಾಮ ನಿರ್ದೇಶನವನ್ನು ನೋಂದಣಿ ಮಾಡಿರುವುದಕ್ಕಾಗಿ ಅಥವಾ ಅದರ ರದ್ದಿಯಾತಿ ಅಥವಾ ಅದರಲ್ಲಿ ಬದಲಾವಣೆ ಮಾಡಿರುವುದರ ಬಗ್ಗೆ ಲಿಖಿತ ತಲುಪೊಪ್ಪಿಗೆಯನ್ನು ನೀಡತಕ್ಕದು ಮತ್ತು ಅಂಥ ರದ್ದಿಯಾತಿ ಅಥವಾ ಮಾರ್ಪಾಟಿನ ನೋಂದಣಿಗಾಗಿ ಐದು ರೂಪಾಯಿಯನ್ನು ಮೀರಿದ ಶುಲ್ಕವನ್ನು ವಿಧಿಸಬಹುದು.
(iv) ವಿಮಾದಾರನ/ಳ ಜೀವಿತ ಕಾಲದಲ್ಲೇ ಸಂದಾಯಕ್ಕಾಗಿ ಪಾಲಿಸಿಯ ಅವಧಿ ಪೂರ್ಣಗೊಂಡರೆ ಅಥವಾ ನಾಮ ನಿರ್ದೇಶಿತನ/ಳು ಅಥವಾ ಒಬ್ಬನಿಗಿಂತ ಹೆಚ್ಚು ಜನ ನಾಮ ನಿರ್ದೇಶಿತರಿದ್ದು ಎಲ್ಲ ನಾಮ ನಿರ್ದೇಶಿತರು ಸಂದಾಯಕ್ಕಾಗಿ ಪಾಲಿಸಿಯ ಅವಧಿ ಪೂರ್ಣಗೊಳ್ಳುವ ಮೊದಲು ಮೃತಪಟ್ಟರೆ ಪಾಲಿಸಿಯ ಮೂಲಕ ಭದ್ರತೆ ಪಡೆದ ಮೊಬಲಗನ್ನು ವಿಮಾದಾರನಿಗೆ/ಳಿಗೆ ಸಂದಾಯ ಮಾಡತಕ್ಕದ್ದು.
(v) ನಾಮ ನಿರ್ದೇಶಿತನು/ಳು ಅಥವಾ ಒಬ್ಬರಿಗಿಂತ ಹೆಚ್ಚು ಜನ ನಾಮ ನಿರ್ದೇಶಿತರಿದ್ದರೆ ಒಬ್ಬ ನಾಮ ನಿರ್ದೇಶಿತ ಅಥವಾ ನಾಮ ನಿರ್ದೇಶಿತರು ವಿಮಾದಾರನು/ಳು ಮೃತನಾದ/ಳಾದ ನಂತರ ಬದುಕಿದ್ದರೆ ಪಾಲಿಸಿ ಅಥವಾ ಪಾಲಿಸಿಗಳ ಮೂಲಕ ಭದ್ರತೆ ಪಡೆದ ಮೊಬಲಗನ್ನು ವಿಮಾದಾರನ/ಳ ನಂತರ ಬದುಕಿರುವ ನಾಮ ನಿರ್ದೇಶಿತ ಅಥವಾ ನಾಮ ನಿರ್ದೇಶಿತರಿಗೆ ಸಂದಾಯ ಮಾಡತಕ್ಕದ್ದು.
ಪಾಲಿಸಿಗಳನ್ನು ಹಸ್ತಾಂತರಣ ಮಾಡದಿರುವುದು 26.ಈ ನಿಯಮಗಳಲ್ಲಿ ಉಪ ಬಂಧಿಸಲಾದಂತೆ ಹೊರತು ಈ ನಿಯಮಗಳ ಮೇರೆಗೆ ಹೊರಡಿಸಲಾದ ಪಾಲಿಸಿಗಳನ್ನು ಹಸ್ತಾಂತರಣ ಮಾಡತಕ್ಕುದಲ್ಲ.
ನಗದು ರೂಪದಲ್ಲಿ ವಿಮಾ ಕಂತಿನ ಸಂದಾಯ ಮತ್ತು ಪಾಲಿಸಿಯ ಹಣ ತನ್ನಷ್ಟಕ್ಕೆ ಮುಟ್ಟುಗೋಲಾಗದಿರುವ ಸೌಲಭ್ಯಗಳು 27.ನಗದು ರೂಪದಲ್ಲಿ ಪ್ರೀಮಿಯಂ ಸಂದಾಯ-
(1) (ಅ) ಸರ್ಕಾರಿ ಸೇವೆಯಲ್ಲಿರುವುದು ನಿಂತು ಹೋದ ವಿಮಾದಾರನು/ಳು ಪಾಲಿಸಿಯ ವಾಯಿದೆ ಮುಗಿಯುವವರೆಗೆ ವಿಮಾ ಕಂತು ಸಂದಾಯ ಮಾಡುವುದನ್ನು ಮುಂದುವರಿಸಲು. 17(1)ನೇ ನಿಯಮದ ಮೇರೆಗೆ ಇಚ್ಛಿಸಿದರೆ, ನಿರ್ದೇಶಕರು ನಿಗದಿಪಡಿಸಬಹುದಾದಂತೆ ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ವಿಮಾ ಕಂತುಗಳನ್ನು ಕರ್ನಾಟಕ ಸರ್ಕಾರದ ಖಜಾನೆ ಅಥವಾ ಮೈಸೂರು ಬ್ಯಾಂಕ್ ಅಥವಾ ಅದರ ಶಾಖೆಗಳಿಗೆ ಅಥವಾ ಕರ್ನಾಟಕ ರಾಜ್ಯದಲ್ಲಿನ ಅದರ ಏಜೆಂಟರಿಗೆ ಸಂದಾಯ ಮಾಡಲು ಅವನಿಗೆ/ಅವಳಿಗೆ ಅನುಮತಿಸಬಹುದು. ಹಾಗೆಯೇ ಅನ್ಯ ಸೇವೆಗೆ ವರ್ಗಾವಣೆ ಹೊಂದಿದ್ದ ವಿಮೆ ಮಾಡಿಸಿರುವ ಸರ್ಕಾರಿ ಅಧಿಕಾರಿಗೆ ನಿರ್ದೇಶಕರು ಅವನ/ಅವಳ ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ವಿಮಾ ಕಂತುಗಳನ್ನು ಸಂದಾಯ ಮಾಡಲು ಅನುಮತಿಸಬಹುದು. ಪರಂತು, ಅವನು/ಅವಳು ಅಂಥ ವರ್ಗಾವಣೆಯ ದಿನಾಂಕದಿಂದ ಮೂರು ತಿಂಗಳೊಳಗಾಗಿ ಹಾಗೆ ವಿಮಾ ಕಂತು ನೀಡುವ ಅವನ/ಅವಳ ಆಯ್ಕೆಯನ್ನು ತಿಳಿಸತಕ್ಕುದು ಮತ್ತು ಅಂಥಹ ಆಯ್ಕೆಯನ್ನು ತಿಳಿಸದಿದ್ದಲ್ಲಿ ಅವನು/ಅವಳು ಮಾಸಿಕ ವಿಮಾ ಕಂತುಗಳನ್ನು ಸಂದಾಯ ಮಾಡಲು ಒಪ್ಪಿದ್ದಾರೆ ಎಂದು ಪರಿಗಣಿಸಲಾಗುವುದು. ವಿಮಾ ಕಂತನ್ನು ಮಾಸಿಕವಾಗಿ ಸಂದಾಯ ಮಾಡುವಲ್ಲಿ ಹದಿನೈದು ದಿನಗಳು ಮತ್ತು ಅನ್ಯಥಾ ಸಂದಾಯ ಮಾಡುವಲ್ಲಿ ಒಂದು ತಿಂಗಳು ಹೆಚ್ಚು ಅವಧಿಯನ್ನು ಅನುಮತಿಸತಕ್ಕದ್ದು.
(ಆ) ವಿಮಾದಾರನು/ಳು ಸರ್ಕಾರಿ ಸೇವೆಯಲ್ಲಿರುವುದು ನಿಂತು ಹೋದ ಸಂದರ್ಭದಲ್ಲಿ, ಈ ನಿಯಮದ (1) (ಅ) ಉಪಖಂಡದಲ್ಲಿ ವಿಧಿಸಲಾದಂತೆ ನಗದು ರೂಪದಲ್ಲಿ ವಿಮಾಕಂತನ್ನು ಸಂದಾಯ ಮಾಡುವುದನ್ನು 17(1) ನೇ ನಿಯಮದ ಮೇರೆಗೆ ಅವನು/ಅವಳು ಆಯ್ಕೆ ಮಾಡಿಕೊಂಡರೆ, ನಿರ್ದೇಶಕರು, ಮನವಿಯನ್ನು ಸಲ್ಲಿಸಿದ ಮೇಲೆ, ಸಂದಾಯಗಳನ್ನು ಸ್ವೀಕರಿಸುವ ಖಜಾನೆ ಅಥವಾ ಬ್ಯಾಂಕಿನ ಅಧಿಕಾರಿಗಳು ವಿಮಾಕಂತುಗಳ ಅಂಥ ನಗದು ಸಂದಾಯಗಳನ್ನು ದಾಖಲು ಮಾಡಲು ಅನುಕೂಲ ಮಾಡಿಕೊಡುವುದಕ್ಕಾಗಿ ವಿಮಾ ಕಂತು ಸ್ವೀಕೃತಿ ಪುಸ್ತಕಗಳನ್ನು ವಿಮಾದಾರನಿಗೆ/ಳಿಗೆ ನೀಡಬಹುದು.
(2)ಹೆಚ್ಚಿನ ಅವಧಿಯೊಳಗಾಗಿ ವಿಮಾದಾರರು ಕಂತುಗಳನ್ನು ಸಂದಾಯ ಮಾಡಲು ತಪ್ಪಿದಲ್ಲಿ, ಈ ನಿಯಮಗಳ (3)ನೇ ಉಪ-ಖಂಡದಲ್ಲಿ ವಿವರಿಸಲಾದ ಸ್ವಯಂ ಮುಟ್ಟುಗೋಲಾಗದಿರುವ (ಅ) ಅಥವಾ (ಆ) ಉಪಬಂಧಗಳು ಅನ್ವಯವಾಗುತ್ತವೆ.
ಪಾಲಿಸಿಯ ಹಣ ತನ್ನಷ್ಟಕ್ಕೆ ಮುಟ್ಟುಗೋಲಾಗದಿರುವ ಸೌಲಭ್ಯಗಳು
(3) ಮುಂದಿನ ಕಂತುಗಳನ್ನು ಸಂದಾಯ ಮಾಡದಿರುವ ಕಾರಣಕ್ಕಾಗಿ ಪಾಲಿಸಿಯು ರದ್ದಾಗತಕ್ಕದಲ್ಲ. ಆದರೆ ಈ ಮುಂದೆ ವಿವರಿಸಲಾದ ರೀತಿಯಲ್ಲಿ ಮತ್ತು ಉಪಬಂಧಗಳಿಗೆ ಒಳಪಟ್ಟು ಜಾರಿಯಲ್ಲಿರತಕ್ಕದ್ದು.
(ಅ) ಬಾಕಿಯಿರುವ ವಿಮಾ ಕಂತು ಮತ್ತು ಅದರ ಮೇಲಿನ ಬಡ್ಡಿಯನ್ನು ಮುರಿದುಕೊಂಡ ತರುವಾಯ, ಸಂದಾಯ ಮಾಡದ ಮೊದಲ ವಿಮಾ ಕಂತು ಅಥವಾ ಕಂತಿಗೆ ಗೊತ್ತುಪಡಿಸಿದ್ದ ಕೊನೆಯ ದಿನಾಂಕದಂದು ಲಭ್ಯವಿರುವ ಪಾಲಿಸಿಯ ನಿವ್ವಳ ನಗದು ಅಧ್ಯರ್ಪಿತ ಮೌಲ್ಯವನ್ನು, ಬಾಕಿಯಿರುವ ವಿಮಾ ಕಂತು ಅಥವಾ ಅದರ ಕಂತನ್ನು ಅದರ ಮೇಲಿನ ಬಡ್ಡಿಯೊಂದಿಗೆ ತುಂಬಲು ನಿವ್ವಳ ನಗದು ಅಧ್ಯರ್ಪಿತ ಮೌಲ್ಯ ಎಷ್ಟು ಅವಧಿಗೆ ಸಾಕಾಗುವುದೋ ಅಷ್ಟು ಅವಧಿಗಾಗಿ ಪಾಲಿಸಿಯನ್ನು ಮುಂದುವರಿಸುವ ಸಲುವಾಗಿ ಸ್ವಯಂ ಬಳಸಲಾಗುವುದು. ವಿಮಾ ಕಂತನ್ನು ಹಾಗೆ ನೀಡಲಾಗುವ ಕನಿಷ್ಟ ಅವಧಿ ಮೂರು ತಿಂಗಳಾಗಿರುತ್ತದೆ. ಮೇಲಿನ ರೀತಿಯಲ್ಲಿ ಲೆಕ್ಕ ಹಾಕಿ ಬಡ್ಡಿಯೊಂದಿಗೆ ನೀಡಲಾದ ವಿಮಾ ಕಂತಿಗಾಗಿ ಪಾಲಿಸಿಯ ಮೇಲೆ ಇಲಾಖೆಯು ಮೊದಲ ಋಣಭಾರ ಹೊಂದಿರತಕ್ಕದ್ದು. ಪಾಲಿಸಿಯನ್ನು, ಈ ನಿಯಮಗಳ ಮೇರೆಗೆ ಮುಂದುವರಿಸುತ್ತಿರುವಾಗ ಪಾಲಿಸಿಯ ಬಗ್ಗೆ ಕ್ಲೇಮು ಮಾಡಿದ ಸಂದರ್ಭದಲ್ಲಿ, ಬಾಕಿಯಿರುವ ವಿಮಾ ಕಂತನ್ನು ಅದರ ಮೇಲಿನ ಬಡ್ಡಿಯೊಂದಿಗೆ ವಿಮಾ ಮೊತ್ತದಿಂದ ಮುರಿದುಕೊಳ್ಳುವುದಕ್ಕೆ ಒಳಪಟ್ಟು ಅಂಥ ಕ್ಲೇಮನ್ನು ಮಾನ್ಯವೆಂದು ಪರಿಗಣಿಸತಕ್ಕದು. ವಿಮಾದಾರರು, ಈ ಮುಟ್ಟುಗೋಲು ರಹಿತ ಉಪಬಂಧವು ಪ್ರವರ್ತನೆಯಲ್ಲಿರುವ ಅವಧಿಯಲ್ಲಿ ಯಾವುದೇ ಸಮಯದಲ್ಲಿ ಆರೋಗ್ಯದ ಸ್ಥಿತಿಯ ಬಗ್ಗೆ ಪುರಾವೆ ನೀಡದೆ ಹಾಗೆ ನೀಡಲಾಗಿರುವ ವಿಮಾ ಕಂತನ್ನು ಅದರ ಮೇಲಿನ ಬಡ್ಡಿಯೊಂದಿಗೆ ಸಂದಾಯ ಮಾಡಲು ಅಥವಾ ಸಂದಾ ಯ ಮಾಡದಿರುವ ಒಂದು ಅಥವಾ ಹೆಚ್ಚು ವಿಮಾ ಕಂತನ್ನು ಸಂದಾಯ ಮಾಡಲು ಆಯ್ಕೆ ಅವಕಾಶ ಹೊಂದಿರುತ್ತಾನೆ/ಳೆ ಮತ್ತು ಹಾಗೆ ಪಾಲಿಸಿಯನ್ನು ಜಾಲ್ತಿಯಲ್ಲಿಡಬೇಕಾದ ಅವಧಿಯನ್ನು ಮತ್ತಷ್ಟು ವಿಸ್ತರಿಸಬಹುದು. ಹಾಗೆ ಮಾಡಲು ತಪ್ಪಿದಲ್ಲಿ, ಪಾಲಿಸಿಯು ರದ್ದಾಗತಕ್ಕುದು ಮತ್ತು ಅದರ ಮೇರೆಗಿನ ಇಲಾಖೆಯ ಎಲ್ಲಾ ಹೊಣೆಗಾರಿಕೆಯ, ಸಂದಾಯ ಮಾಡಿಲ್ಲದ ಎಲ್ಲ ಕಂತನ್ನು ಅದರ ಮೇಲಿನ ಬಡ್ಡಿ ಮತ್ತು ಇಲಾಖೆಗೆ ಬಾಕಿಯಿರುವ ಇತರ ಮೊಬಲಗನ್ನು ಸರಿಹೊಂದಿಸಿದ ತರುವಾಯ ಹೊಣೆಗಾರಿಕೆಯು ಮುಕ್ತಾಯವಾದ ದಿನಾಂಕದಂದು ವಿಮಾದಾರರ ಪರವಾಗಿ ಉಳಿದಿದ್ದ ಅಧ್ಯರ್ಪಿತ ಮೌಲ್ಯದ ಯಾವುದೇ ಬಾಕಿ ಮೊತ್ತವನ್ನು ಹೊರತುಪಡಿಸಿದಂತೆ, ಕೊನೆಗೊಳ್ಳತಕ್ಕುದು. ಈ ನಿಯಮದ (4)ನೇ ಉಪಖಂಡದಲ್ಲಿ ವಿಧಿಸಲಾದಂತೆ ಪಾಲಿಸಿಯು, ಚಾಲ್ತಿಯಲ್ಲಿರುವ ಅವಧಿಯಲ್ಲಿ ಯಾವುದೇ ಕಾಲದಲ್ಲಿ ಅದನ್ನು ಪುನರುಜ್ಜೀವನಗೊಳಿಸಬಹುದು.
(ಆ) ಪಾಲಿಸಿಯ ಮುಂದಿನ ವಿಮಾ ಕಂತುಗಳನ್ನು ಸಂದಾಯ ಮಾಡದಿರುವ ಯಾವುದೇ ಕಾರಣದಿಂದಾಗಿ ಪಾಲಿಸಿಯು ರದ್ದಾಗತಕ್ಕುದಲ್ಲ. ಆದರೆ ಹಾಗೆ ಸಂದಾಯ ಮಾಡದಿದ್ದರೂ ನಿರ್ದೇಶಕರು ಕಾಲಕಾಲಕ್ಕೆ ಅನುಮೋದಿಸಬಹುದಾದ ಕಾರ್ಯ ವಿಧಾನಕ್ಕೆ ಅನುಸಾರವಾಗಿ ಲೆಕ್ಕ ಹಾಕಲಾದ ಸಂದಾಯವಾದ ಮೌಲ್ಯದ ಪ್ರಮಾಣದ ಮಟ್ಟಿಗೆ ಅದು ಇರತಕ್ಕುದು.
ಮೇಲಿನಂತೆ ಸಂದಾಯವಾದ ಮೌಲ್ಯದ ಮಟ್ಟಿಗೆ ಇರುವ ಪಾಲಿಸಿಯನ್ನು ಸಂದಾಯವಾದ ಪಾಲಿಸಿಯಾಗಿ ಪರಿವರ್ತಿಸಿದ ತರುವಾಯ ಘೋಷಿಸಬಹುದಾದ ಯಾವುದೇ ಬೋನಸ್ನಲ್ಲಿ ಅದು ಪಾಲು ಪಡೆಯತಕ್ಕುದಲ್ಲ.
ಟಿಪ್ಪಣಿ:- (i) ಸಂದಾಯವಾದ ಮೌಲ್ಯವು 50 ರೂಪಾಯಿಗಳಿಗಿಂತ ಕಡಿಮೆಯಿರುವಲ್ಲಿ ಈ ನಿಯಮವು ಅನ್ವಯಿಸುವುದಿಲ್ಲ.
(ii) ಈ ನಿಯಮದ ಮೇರೆಗೆ ಪ್ರಯೋಜನವನ್ನು ಪಡೆಯುವುದಕ್ಕಾಗಿ ಆಯ್ಕೆ ಮಾಡುವ ಅವಕಾಶವನ್ನು, ಈ ನಿಯಮದ (1)ನೇ ಉಪ-ಖಂಡದ ಉಪಬಂಧಗಳಿಗೆ ವಿಮಾದಾರನು/ಳು ಒಳಪಡುವ ಸಂದರ್ಭದಲ್ಲಾಗಲಿ ಅಥವಾ ಅದರ ತರುವಾಯ ಪಾಲಿಸಿಯು ಪ್ರಚಲಿತವಿರುವ ಅವಧಿಯಲ್ಲಾಗಲಿ ಚಲಾಯಿಸಬಹುದು. ಆದರೆ ಅಂಥ ಆಯ್ಕೆಯನ್ನು ಒಂದು ಪಾಲಿಸಿಗೆ ಸಂಬಂಧಿಸಿದಂತೆ ಒಮ್ಮೆ ಮಾತ್ರ ಪಡೆದುಕೊಳ್ಳಬಹುದು ಮತ್ತು ಪಾಲಿಸಿಯು ಪುನರಾರಂಭದ ತರುವಾಯ ವಿಮಾದಾರನು/ಳು ಈ ನಿಯಮದ (3)(ಅ) ಉಪ-ಖಂಡವನ್ನು ಪುನಃ ಅಳವಡಿಸಿಕೊಳ್ಳಬಹುದು. ಯಾವುದೇ ಆಯ್ಕೆಯನ್ನು ಮಾಡಿಕೊಳ್ಳದಿದ್ದಲ್ಲಿ, ಪಾಲಿಸಿಯು ಈ ನಿಯಮದ (3)ನೇ ಉಪ-ಖಂಡದಲ್ಲಿನ ಸ್ವಯಂ ಮುಟ್ಟುಗೋಲಾಗದಿರುವ ಉಪಬಂಧಗಳಿಗೆ ಒಳಪಡುವುದೆಂದು ಭಾವಿಸಲಾಗುವುದು.
(4)ಈ ನಿಯಮದ (3)ನೇ ಉಪ-ಖಂಡದಲ್ಲಿ ಉಪ-ಬಂಧಿಸಲಾದಂತೆ ಸ್ವಯಂ ಮುಟ್ಟುಗೋಲಾಗದ ಉಪಬಂಧವನ್ನು ಅನ್ವಯಿಸಿದ ತರುವಾಯ ರದ್ದುಗೊಂಡ ಪಾಲಿಸಿಯನ್ನು ವಿಮಾ ಕಂತುಗಳ ಎಲ್ಲ ಮತ್ತು ಅದರ ಮೇಲಿನ ಬಡ್ಡಿಯನ್ನು ಸಂದಾಯ ಮಾಡುವ ಮೂಲಕ ಮತ್ತು ನಿಗದಿಪಡಿಸಲಾದ ನಮೂನೆಯಲ್ಲಿ ಮತ್ತು ವಿಮಾದಾರನು/ಳು ಮ್ಯಾಜಿಸ್ಟ್ರೇಟ್ ಅಥವಾ ಗ್ರಾಮ ಪಂಚಾಯಿತಿ ಅಧ್ಯಕ್ಷರು ಅಥವಾ ತಿಂಗಳಿಗೆ 50 ರೂ.ಗಳಿಗೆ ಕಡಿಮೆಯಿಲ್ಲದ ವೇತನವನ್ನು ಪಡೆಯುವ ಸರ್ಕಾರಿ ಅಧಿಕಾರಿಯ ಮುಂದೆ ಸಹಿ ಮಾಡಿದ ತನ್ನ ಉತ್ತಮ ಆರೋಗ್ಯದ ಬಗೆಗಿನ ಘೋಷಣೆಯನ್ನು ಹಾಜರುಪಡಿಸುವ ಮೂಲಕ, ಪಾಲಿಸಿಯು ರದ್ದಾದ ದಿನಾಂಕದಿಂದ ಆರು ತಿಂಗಳೊಳಗಾಗಿ ಪುನಃ ಆರಂಭಿಸಬಹುದು. ವಿಮಾದಾರನು/ಳು ಅನ್ಯ ಸೇವೆಯಲ್ಲಿದ್ದಲ್ಲಿ, ಅವನು/ಅವಳು ಅಂಥ ಘೋಷಣೆಗೆ ತನ್ನ ಸರ್ಕಾರಿ ವರಿಷ್ಠರ ಅಥವಾ ವಿಮಾ ಸಬ್ರಿಜಿಸ್ಟ್ರಾರರ ಸಮ್ಮುಖದಲ್ಲಿ ಸಹಿ ಮಾಡಬಹುದು.
(5) ಪಾಲಿಸಿಯು ರದ್ದುಗೊಂಡ ಅವಧಿಯು ಆರು ತಿಂಗಳಿಗಿಂತ ಹೆಚ್ಚಾಗಿದ್ದು, ಒಂದು ವರ್ಷಕ್ಕಿಂತ ಕಡಿಮೆ ಇದ್ದರೆ, ನಿರ್ದಿಷ್ಟಪಡಿಸಲಾದ ನಮೂನೆಯಲ್ಲಿ ಮತ್ತು ವೈದ್ಯಕೀಯ ಇಲಾಖೆಯಲ್ಲಿ ಒಂದು ವರ್ಷಕ್ಕಿಂತ ಕಡಿಮೆಯಿಲ್ಲದರೆ ಸೇವೆ ಸಲ್ಲಿಸಿರುವ ಶಸ್ತ್ರವೈದ್ಯ ಅಥವಾ ಸಹಾಯಕ ಶಸ್ತ್ರವೈದ್ಯ (ವರ್ಗ-1) ಅಥವಾ ವೈದ್ಯಕೀಯ ಪ್ರೊಬೇಷನರ್ ಅಥವಾ ಸಹಾಯಕ ಶಸ್ತ್ರ ವೈದ್ಯರಿಂದ (ವರ್ಗ-2) ಪಡೆದ ಸಾಮಾನ್ಯ ವೈದ್ಯಕೀಯ ಪ್ರಮಾಣ ಪತ್ರವನ್ನು ಹಾಜರುಪಡಿಸಿದ ತರುವಾಯ ನಿರ್ದೇಶಕರು ಅದನ್ನು ಪುನಃ ಆರಂಭಿಸಬಹುದು. ರದ್ದುಗೊಂಡ ಅವಧಿಯು ಒಂದು ವರ್ಷಕ್ಕಿಂತ ಹೆಚ್ಚಾಗಿದ್ದರೆ ನಿರ್ದಿಷ್ಟಪಡಿಸಲಾದ ನಮೂನೆಯಲ್ಲಿ ಸರ್ಕಾರದ ವೈದ್ಯಕೀಯ ಇಲಾಖೆಯಲ್ಲಿ ಶಸ್ತ್ರವೈದ್ಯ ಅಥವಾ ಸಹಾಯಕ ಶಸ್ತ್ರವೈದ್ಯ (ವರ್ಗ-2) ಅಥವಾ ವೈದ್ಯಕೀಯ ಪ್ರೊಬೇಷನರ್ರಿಂದ ಸವಿವರ ವೈದ್ಯಕೀಯ ಪ್ರಮಾಣ ಪತ್ರವನ್ನು ಪಡೆಯಬಹುದು. ರದ್ದುಗೊಂಡ ಪಾಲಿಸಿಯ ಅಥವಾ ಪಾಲಿಸಿಗಳಿಗೆ ಸಂಬಂಧಿಸಿದಂತೆ ಮಾಸಿಕ ವಿಮಾ ಕಂತು 10 ರೂಪಾಯಿ ಅಥವಾ ಅದಕ್ಕಿಂತ ಕಡಿಮೆಯಿರುವ ಸಂದರ್ಭದಲ್ಲಿ, ಸರ್ಕಾರದ ವೈದ್ಯಕೀಯ ಇಲಾಖೆಯಲ್ಲಿ ಒಂದು ವರ್ಷಕ್ಕಿಂತ ಕಡಿಮೆಯಿಲ್ಲದ ಸೇವೆ ಸಲ್ಲಿಸಿರುವ ಸಹಾಯಕ ಶಸ್ತ್ರವೈದ್ಯರೂ (ವರ್ಗ-3) ಸಹ ನಿರ್ದಿಷ್ಟಪಡಿಸಲಾದ ನಮೂನೆಯಲ್ಲಿ ಸವಿವರ ವೈದ್ಯಕೀಯ ಪ್ರಮಾಣ ಪತ್ರವನ್ನು ನೀಡಬಹುದು.
(6)ವೈದ್ಯಕೀಯ ಆಧಾರದ ಮೇಲೆ ನಿವೃತ್ತಿಗೊಳ್ಳುವ ಅಥವಾ ವಿಮುಕ್ತಿಗೊಳಿಸಲಾದ ವಿಮಾದಾರನು/ಳು ಹೊಂದಿರುವ ಪಾಲಿಸಿಗಳು ರದ್ದಾದ ಸಂದರ್ಭದಲ್ಲಿ ಪಾಲಿಸಿಯು ಪುನರಾರಂಭದ ಪ್ರಶ್ನೆಯನ್ನು ನಿರ್ಧರಿಸಲು ನಿರ್ದಿಷ್ಟಪಡಿಸಲಾದ ನಮೂನೆಯಲ್ಲಿ ಸವಿವರ ವೈದ್ಯಕೀಯ ಪ್ರಮಾಣ ಪತ್ರವನ್ನು ಹಾಜರುಪಡಿಸುವುದು ಅವಶ್ಯಕವಾಗಿದೆ.
(7)ಕರ್ನಾಟಕ ರಾಜ್ಯದ ಹೊರಗೆ ವಾಸಿಸುತ್ತಿರುವ ವಿಮಾದಾರನು/ಳು, ಭಾರತೀಯ ವೈದ್ಯಕೀಯ ಪರಿಷತ್ತು ಅಥವಾ ಸ್ಥಳೀಯ ಸರಕಾರದ ವೈದ್ಯಕೀಯ ಪರಿಷತ್ತಿನ ರಿಜಿಸ್ಟರಿನಲ್ಲಿ ವೈದ್ಯಕೀಯ ಪದವೀಧರರಾಗಿ ಹೆಸರನ್ನು ನೋಂದಾಯಿಸಿ ಮೂರು ವರ್ಷಗಳಾಗಿರುವ ವೈದ್ಯರಿಂದ ಮತ್ತು ಲೈಸನ್ಸ್ ಪಡೆದವರ ಸಂಬಂಧದಲ್ಲಿ ಹೆಸರನ್ನು ನೋಂದಾಯಿಸಿ ಐದು ವರ್ಷಗಳಾಗಿರುವ ಖಾಸಗಿ ವೈದ್ಯರಿಂದ ಗೊತ್ತುಪಡಿಸಿರುವ ನಮೂನೆಯಲ್ಲಿ ಸಾಮಾನ್ಯ ವೈದ್ಯಕೀಯ ಪ್ರಮಾಣ ಪತ್ರವನ್ನು ಪಡೆಯಬಹುದು. ಮಾಸಿಕ ವಿಮಾ ಕಂತು 10 ರೂಪಾಯಿಗಳು ಅಥವಾ ಅದಕ್ಕೂ ಕಡಿಮೆಯಿರುವ ಸಂದರ್ಭದಲ್ಲಿ ಅಂಥ ವೈದ್ಯಕೀಯ ಪದವೀಧರರು ಅಥವಾ ಲೈಸನ್ಸ್ ಪಡೆದವರಿಂದ ಸಹ ನಿರ್ದಿಷ್ಟಪಡಿಸಿರುವ ನಮೂನೆಯಲ್ಲಿ ಸವಿವರ ವೈದ್ಯಕೀಯ ಪ್ರಮಾಣ ಪತ್ರವನ್ನು ಪಡೆಯಬಹುದು. ಮಾಸಿಕ ವಿಮಾಕಂತು 15-00 ರೂಪಾಯಿಗಳನ್ನು ಮೀರುವ ಸಂದರ್ಭದಲ್ಲಿ ಸರ್ಕಾರದ ನಿಯತ ಸೇವೆಯಲ್ಲಿರುವ ಶಸ್ತ್ರವೈದ್ಯರ ದರ್ಜೆಯ ಅಥವಾ ಅದಕ್ಕೂ ಮೇಲ್ಪಟ್ಟ ದರ್ಜೆಯ ವೈದ್ಯಾಧಿಕಾರಿಗಳಿಂದ ಮಾತ್ರ ನಿರ್ದಿಷ್ಟ ಪಡಿಸಲಾದ ನಮೂನೆಯಲ್ಲಿ ಸವಿವರ ವೈದ್ಯಕೀಯ ಪ್ರಮಾಣ ಪತ್ರವನ್ನು ಪಡೆಯತಕ್ಕದು.
(8) ಪಾಲಿಸಿಗಳು ರದ್ದಾದ ಎಲ್ಲ ಸಂದರ್ಭಗಳಲ್ಲಿ ವಿಮಾ ಕಂತುಗಳ ಬಾಕಿಗಳನ್ನು ಮತ್ತು ಅದರ ಮೇಲೆ ಕೂಡಿ ಬರುವ ಬಡ್ಡಿಯನ್ನು ವಿಮಾದಾರನು/ಳು ಸಂದಾಯ ಮಾಡತಕ್ಕುದು. ಇದಕ್ಕೆ ತಪ್ಪಿದಲ್ಲಿ ವಿಮಾ ಕಂತು ಸಂದಾಯವನ್ನು ನಿಲ್ಲಿಸಲಾಗಿದೆ ಎಂದು ಭಾವಿಸತಕ್ಕುದು ಮತ್ತು ವಿಮಾದಾರನು/ಳು ಎಲ್ಲಾ ವಿಮಾ ಕಂತುಗಳ ಬಾಕಿಗಳನ್ನು ಮತ್ತು ಅದರ ಮೇಲೆ ಬಾಕಿಯಿರುವ ಬಡ್ಡಿಯನ್ನು ಮುರಿದುಕೊಳ್ಳುವುದಕ್ಕೆ ಒಳಪಟ್ಟು, ರದ್ದಾದ ದಿನಾಂಕದಂದು ಇದ್ದಂಥ ಸಂದಾಯವಾದ ಪಾಲಿಸಿಯನ್ನು ಅಥವಾ ಅಧ್ಯರ್ಪಿತ ಮೌಲ್ಯವನ್ನು ಪಡೆಯಲು ಅನುಮತಿಸತಕ್ಕುದು.
27.ಅ ವೈದ್ಯಕೀಯೇತರ ವಿಮೆ:- (1) ಈ ನಿಯಮಗಳಲ್ಲಿ ಏನೇ ಅಡಕವಾಗಿದ್ದರೂ, ನಲವತ್ತು ವರ್ಷ ವಯಸ್ಸನ್ನು ಪೂರ್ಣಗೊಳಿಸಿದ ಸರ್ಕಾರಿ ನೌಕರನು/ಳು ಮಾಸಿಕವಾಗಿ ಸಂದಾಯ ಮಾಡಬೇಕಾದ ವಿಮಾ ಕಂತು ರೂ.510-00 ರೂಪಾಯಿಗಳನ್ನು ಮೀರದಿದ್ದರೆ ವೈದ್ಯಕೀಯ ಪರೀಕ್ಷೆಗೆ ಒಳಪಡದೆ ಅವನೇ/ಅವಳೇ ವಿಮೆ ಮಾಡಿಸಿಕೊಳ್ಳಬಹುದು.
(ಸರ್ಕಾರದ ಅಧಿಸೂಚನೆ ಸಂಖ್ಯೆ: ಆಇ/54/ಕವಿಇ/2008 ದಿನಾಂಕ 23-12-2008 w.e.f. Gazette date 12-02-2009)
(2) 1ರಿಂದ 43ನೇ ನಿಯಮದವರೆಗಿನ ಉಪಬಂಧಗಳು, ಯಥೋಚಿತ ವ್ಯತ್ಯಾಸಗಳೊಂದಿಗೆ ಮೇಲಿನ (1)ನೇ ಉಪ-ನಿಯಮದ ಮೇರೆಗಿನ ವೈದ್ಯಕೀಯ ಪರೀಕ್ಷೆಯನ್ನು ಹೊರತುಪಡಿಸಿದ ವಿಮೆಗೆ ಅನ್ವಯವಾಗತಕ್ಕುದು. ವೈದ್ಯಕೀಯ ಪರೀಕ್ಷೆಗೆ ಒಳಪಡದೆ ಅವನೇ/ಅವಳೇ ವಿಮೆ ಮಾಡಿಸಿಕೊಳ್ಳಲು ಇಚ್ಚಿಸುವ ಸರ್ಕಾರಿ ನೌಕರನು/ಳು ಅವನ/ಅವಳ (ಸರ್ಕಾರಿ) ವರಿಷ್ಠರ ಮೂಲಕ ಪ್ರಸ್ತಾವನೆಯನ್ನು ಸಲ್ಲಿಸತಕ್ಕುದು. ಅವರು, ಅವರ ಷರಾ ಯಾವುದಾದರು ಇದ್ದರೆ ಅದರೊಂದಿಗೆ ಅದನ್ನು ಸಂಬಂಧಿಸಿದ ಜಿಲ್ಲಾ ವಿಮಾ ಅಧಿಕಾರಿಗೆ ಕಳುಹಿಸಿಕೊಡತಕ್ಕುದು, ಜಿಲ್ಲಾ ವಿಮಾ ಅಧಿಕಾರಿಯು ಅಂಥ ಪ್ರಸ್ತಾವನೆಯನ್ನು ಸ್ವೀಕರಿಸಿದ ತರುವಾಯ, ಪ್ರಸ್ತಾವನೆಯು ಈ ನಿಯಮಗಳಿಗನುಗುಣವಾಗಿ ಎಲ್ಲ ರೀತಿಯಲ್ಲೂ ಪೂರ್ಣವಾಗಿದ್ದರೆ, ವಿಮಾ ಪಾಲಿಸಿಯನ್ನು ನೀಡತಕ್ಕದ್ದು.
(3) (i) ನಿರ್ದೇಶಕರು ಅಥವಾ ಅವರಿಂದ ಪ್ರಾಧಿಕೃತಗೊಂಡ ಇತರ ಅಧಿಕಾರಿಯು ಕಾರಣಗಳನ್ನು ಬರಹದಲ್ಲಿ ದಾಖಲುಮಾಡಿ ಅಂಥ ಪ್ರಸ್ತಾವನೆಯನ್ನು ತಿರಸ್ಕರಿಸುವ ಅಧಿಕಾರ ಹೊಂದಿರತಕ್ಕುದು.
(ii) ಪ್ರಸ್ತಾವನೆಯ ದಿನಾಂಕದಿಂದ ಎರಡು ವರ್ಷಗಳೊಗಾಗಿ ಪಾಲಿಸಿಯಾಗಿ ಪರಿವರ್ತಿತವಾಗದಂಥ ಪ್ರಸ್ತಾವನೆಯ ರದ್ದಾಗತಕ್ಕುದು.
ನಕಲು ಪಾಲಿಸಿಗಳು 28. (ಅ) ಪಾಲಿಸಿ ಅಥವಾ ಸಂದಾಯವಾದ ಪಾಲಿಸಿಯು ಕಳೆದುಹೋದರೆ ಅಥವಾ ಅದರ ಗುರುತುಹೆಚ್ಚಲು ಕಷ್ಟವಾಗುವಷ್ಟು ಹಾನಿಗೊಂಡರೆ, ನಿರ್ದೇಶಕರಿಗೆ ಅರ್ಜಿ ಸಲ್ಲಿಸಿದ ತರುವಾಯ ಅದರ ನಕಲನ್ನು ಪಡೆಯಬಹುದು. ಪರಂತು, ಪಾಲಿಸಿಯು ಕಳೆದುಹೋದ ಬಗ್ಗೆ ಅಥವಾ ಅದರ ವಿರೂಪತೆ ಅಥವಾ ಹಾನಿಯ ಬಗ್ಗೆ ಮತ್ತು ನಕಲನ್ನು ಪಡೆಯುವ ಹಕ್ಕಿನ ಬಗ್ಗೆ ತೃಪ್ತಿಕರ ಪುರಾವೆಯನ್ನು ಒದಗಿಸತಕ್ಕುದು. ನಕಲು ಪಾಲಿಸಿಗಳಿಗಾಗಿ ಅರ್ಜಿಗಳನ್ನು ಸಾಮಾನ್ಯವಾಗಿ ವಿಮಾದಾರನ/ಳ ಸರ್ಕಾರಿ ವರಿಷ್ಠರ ಮೂಲಕ ಸಂದರ್ಭಾನುಸಾರ ನಿರ್ದೇಶಕರು, ವಿಭಾಗೀಯ ಉಪನಿರ್ದೇಶಕರು ಅಥವಾ ಜಿಲ್ಲಾ ವಿಮಾಧಿಕಾರಿಗೆ ಕಳುಹಿಸಿಕೊಡತಕ್ಕುದು. ನಕಲಿನ ನೀಡಿಕೆಗಾಗಿ 10 ರೂಪಾಯಿಗಳ ಫೀಜನ್ನು ಒದಗಿಸತಕ್ಕುದು.
(ಆ) ವಿಮಾದಾರನಿಗೆ/ಳಿಗೆ ನೀಡಿದ ವಮಾ ಕಂತಿನ ರಸೀದಿ ಪುಸ್ತಕವು ಕಳೆದುಹೋದರೆ ಅಥವಾ ಬಳಕೆಗೆ ಅಯೋಗ್ಯವಾದರೆ, ಐದು ರೂಪಾಯಿ ಶುಲ್ಕವನ್ನು ಸಂದಾಯ ಮಾಡಿದ ಈ ಪರವಾಗಿ ನಿರ್ದೇಶಕರಿಗೆ ಅರ್ಜಿಯನ್ನು ಸಲ್ಲಸಿದ ತರುವಾಯ ಅವನಿಗೆ ಅದರ ನಕಲನ್ನು ನೀಡತಕ್ಕುದು.
ಸಂಕೀರ್ಣ-ಪ್ರಮಾಣೀಕೃತ ಪ್ರತಿಗಳ ನೀಡಿಕೆ 29. ವಿಮಾ ಪ್ರಸ್ತಾವನೆಗಳು ಮತ್ತು ವೈದ್ಯಕೀಯ ಪರೀಕ್ಷಕನ/ಳ ಮುಂದೆ ನೀಡಲಾದ ವೈಯಕ್ತಿಕ ಹೇಳಿಕೆಗಳ ಪ್ರಮಾಣೀಕೃತ ಪ್ರತಿಗಳನ್ನು ಒಂದು ಪ್ರತಿಗೆ ಐದು ರೂಪಾಯಿಯಂತೆ ಸಂದಾಯ ಮಾಡಿದ ತರುವಾಯ ವಿಮಾದಾರನಿಗೆ/ಳಿಗೆ ನೀಡಲಾಗುವುದು.
ಸುಳ್ಳು ಮಾಹಿತಿ 30. 37ನೇ ನಿಯಮದಲ್ಲಿ ಅಡಕವಾದ ಉಪಬಂಧಗಳಿಗೆ ಒಳಪಟ್ಟು, ಈ ನಿಯಮಗಳ ಮೇರೆಗೆ ಜೀವ ವಿಮೆಗೆ ಸಂಬಂಧಿಸಿದ ಯಾವುದೇ ಮುಖ್ಯ ವಸ್ತು ವಿಷಯದ ಸಂಬಂಧದಲ್ಲಿ ವಿಚಾರಣೆಯ ತರುವಾಯ, ವಿಮಾದಾರನು/ಳು ಅವನ/ಅವಳ ತಿಳುವಳಿಕೆಗೆ, ಅಸತ್ಯವೆಂದು ಅಥವಾ ಸೂಕ್ತ ಸಾಮಾನ್ಯ ಶ್ರದ್ಧೆವಹಿಸಿದ ತರುವಾಯ ತಪ್ಪೆಂದು ತಿಳಿಯಬಹುದಾಗಿದ್ದಂಥ ಯಾವುದೇ ಹೇಳಿಕೆ ಅಥವಾ ಮನವಿಯನ್ನು ನೀಡಿದರೆ ಅಥವಾ ಮಾಹಿತಿ ಒದಗಿಸಿದರೆ ಅಥವಾ ಸಾಕ್ಷ್ಯ ಹಾಜರುಪಡಿಸಿದ ಪಾಲಿಸಿಯನ್ನು ಶೂನ್ಯಗೊಳಿಸತಕ್ಕುದು. ಮತ್ತು ಅವನು/ಅವಳು ಸಂದಾಯಮಾಡಿದ ಜೀವವಿಮಾ ಕಂತುಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳತಕ್ಕುದು.
ಮಹಿಳೆಯರ ಜೀವವಿಮೆ 31. ಬಿಟ್ಟು ಬಿಡಲಾಗಿದೆ.
(ಸರ್ಕಾರದ ಅಧಿಸೂಚನೆ ಸಂಖ್ಯೆ ಎಫ್ಡಿ 52 ಪಿಐಡಿ 71 ದಿನಾಂಕ 9-9-71)
ಹೆಚ್ಚಿನ ಅಪಾಯಕ್ಕೆ ಅವಕಾಶವಿರುವ ಜೀವಿಗಳು 32. ಅಪಾಯಕಾರಿ ವೃತ್ತಿಯಲ್ಲಿನ ವೈಯಕ್ತಿಕ ಉದ್ಯೋಗದ ಕಾರಣದಿಂದಾಗಲೀ ಅಥವಾ ಪ್ರಸ್ತಾವನೆದಾರನ/ಳ ವೈಯಕ್ತಿಕ ಅಥವಾ ಕುಟುಂಬ ಚರಿತ್ರೆಯಲ್ಲಿನ ದೋಷದ ಕಾರಣದಿಂದಾಗಲೀ ಹೆಚ್ಚಿನ ಅಪಾಯಕ್ಕೆ ಅವಕಾಶವಿರುವ ವ್ಯಕ್ತಿಗಳ ಸಂದರ್ಭದಲ್ಲಿ ನಿರ್ದೇಶಕರು ತಾನು ಸೂಕ್ತವೆಂದು ಪರಿಗಣಿಸುವಂಥ ವಿಶೇಷ ನಿಬಂಧನೆ ಮತ್ತು ಷರತ್ತುಗಳ ಮೇಲೆ ಪ್ರಸ್ತಾವನೆಯನ್ನು ಸ್ವೀಕರಿಸುವ ಹಕ್ಕನ್ನು ತಾವೇ ಕಾಯ್ದಿರಿಸಿಕೊಳ್ಳುತ್ತಾರೆ.
ಆರೋಗ್ಯಕರ ಹವಾಮಾನದಲ್ಲಿರುವ ನಿವಾಸಗಳಿಗಾಗಿ ಕಡಿಮೆಗೊಳಿಸಲಾದ ವಿಮಾ ಕಂತುಗಳು 33. ಬಿಟ್ಟುಬಿಡಲಾಗಿದೆ.
(ಸರ್ಕಾರದ ಅಧಿಸೂಚನೆ ಸಂಖ್ಯೆ ಎಫ್ಡಿ 47 ಪಿಐಡಿ 71 ದಿನಾಂಕ 15-12-71) 34. ಪಾಲಿಸಿಗಳನ್ನು ಮೇಲಿನ ಕ್ಲೇಮುಗಳ ಸಂದಾಯಕ್ಕೆ ಅನ್ವಯವಾಗುವ ನಿರ್ಣಯ ನಿಯಮಗಳೇ ಹೆಚ್ಚುವರಿ ವಿಮಾ ಕಂತುಗಳು ಮತ್ತು ಇತರ ಮೊತ್ತಗಳ ಮುರುಪಾವತಿಯ ಕ್ಲೇಮುಗಳ ಸಂದಾಯಕ್ಕೆ ಸಾಧ್ಯವಾಗಬಹುದಾದಷ್ಟು ಮಟ್ಟಿಗೆ ಅನ್ವಯಿಸತಕ್ಕುದು.
ಪಾಲಿಸಿಯ ಮಾರ್ಪಾಟು 35. ಪಾಲಿಸಿಗಳನ್ನು ಈಗಾಗಲೇ ನೀಡಿರುವುದಕ್ಕೆ ಒಳಪಟ್ಟು ನಿಬಂಧನೆ ಮತ್ತು ಷರತ್ತುಗಳಲ್ಲಿ ಮಾರ್ಪಾಟುಗಳನ್ನು ಮಾಡುವುದಕ್ಕಾಗಿ ಪ್ರತಿಯೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ 2 ರೂಪಾಯಿಗಳನ್ನು ಸಂದಾಯ ಮಾಡಿದ ತರುವಾಯ ನಿರ್ದೇಶಕರು ಅರ್ಜಿಯನ್ನು ಸ್ವೀಕರಿಸಬಹುದು ಮತ್ತು ಪ್ರತಿಯೊಂದು ಪ್ರಕರಣದ ಗುಣದೋಷಗಳ ಬಗ್ಗೆ ಸೂಕ್ತ ಆದೇಶಗಳನ್ನು ಹೊರಡಿಸಬಹುದು.
ಸದ್ಭಾವನೆ 36. ಈ ನಿಯಮಗಳಿಗೆ ಅನುಗುಣವಾಗಿ ಸದ್ಭಾವನೆಯಿಂದ ಮಾಡಲಾದ ಅಥವಾ ಮಾಡಲು ಉದ್ದೇಶಿಸಲಾದ ಯಾವುದೇ ಕಾರ್ಯಕ್ಕೆ ಸಂಬಂಧಿಸಿದಂತೆ, ಯಾವನೇ/ಳೇ ಅಧಿಕಾರಿಯ ವಿರುದ್ದ ಯಾವುದೇ ದಾವೆ ಅಥವಾ ಇತರ ಕಾನೂನು ವ್ಯವಹರಣೆಗಳನ್ನು ಹೂಡತಕ್ಕುದಲ್ಲ.
ಪಾಲಿಸಿಗಳ ನಿರ್ವಿವಾದತೆ 37. ಈ ನಿಯಮಗಳು ಜಾರಿಗೆ ಬಂದ ತರುವಾಯ ನೀಡಲಾದ ಯಾವುದೇ ಪಾಲಿಸಿಯನ್ನು, ಅದನ್ನು ಜಾರಿಗೊಳಿಸಲಾದ ದಿನಾಂಕದಿಂದ ಎರಡು ವರ್ಷಗಳು ಮುಕ್ತಾಯವಾದ ತರುವಾಯ ವಿಮಾ ಪ್ರಸ್ತಾವನೆಯಲ್ಲಿ ಅಥವಾ ವೈದ್ಯಾಧಿಕಾರಿ ಅಥವಾ ರೆಫರಿ ಅಥವಾ ವಿಮಾದಾರನ/ಳ ಸ್ನೇಹಿತನ/ಳ ಯಾವುದೇ ವರದಿಯಲ್ಲಿ ಅಥವಾ ಪಾಲಿಸಿಯ ನೀಡಿಕೆಗೆ ಕಾರಣವಾದ ಇತರ ಯಾವುದೇ ದಸ್ತಾವೇಜಿನಲ್ಲಿ, ನೀಡಲಾದ ಯಾವುದೇ ಹೇಳಿಕೆಯು ಒಂದು ಮಹತ್ವ ಪೂರ್ಣ ವಿಷಯಕ್ಕೆ ಸಂಬಂಧಿಸಿತ್ತು ಅಥವಾ ಅವಶ್ಯಕವಾಗಿ ಬಹಿರಂಗಪಡಿಸಬೇಕಾಗಿದ್ದ ಸಂಗತಿಗಳನ್ನು ಮುಚ್ಚಿಡಲಾಗಿತ್ತು ಮತ್ತು ಅದನ್ನು ವಿಮಾದಾರನು/ಳು ಮೋಸದಿಂದ ಮಾಡಿದ್ದನ್ನು ಮತ್ತು ಹೇಳಿಕೆಯನ್ನು ನೀಡುವ ಕಾಲದಲ್ಲಿ ಅದು ಸುಳ್ಳು ಹೇಳಿಕೆಯೆಂಬುದು ಅಥವಾ ಅವಶ್ಯವಾಗಿ ಬಹುರಂಗಪಡಿಸಬೇಕಾಗಿದ್ದ ಆದರೆ ಮುಚ್ಚಿಡಲಾದ ಸಂಗತಿಗಳನ್ನು ಆಧರಿಸಿತ್ತು ಎಂಬುದು ಅವನಿಗೆ/ ಅವಳಿಗೆ ತಿಳಿದಿತ್ತೆಂಬುದನ್ನು ಇಲಾಖೆಯು ತೋರಿಸಿದ ಹೊರತು, ಹೇಳಿಕೆಯು ನಿಷ್ಕೃಷ್ಟವಾಗಿರಲಿಲ್ಲ ಅಥವಾ ಸುಳ್ಳಾಗಿತ್ತು ಎಂಬ ಕಾರಣದ ಮೇಲೆ ಇಲಾಖೆಯು ಪ್ರಶ್ನಿಸತಕ್ಕದಲ್ಲ.
ಪರಂತು, ಈ ನಿಯಮದಲ್ಲಿರುವ ಯಾವುದೇ ಪಾಲಿಸಿಯು ಚಾಲ್ತಿಯಲ್ಲಿರುವ ಅವಧಿಯಲ್ಲಿ ಅಥವಾ ಪ್ರಸ್ತಾವನೆಯ ಹಂತದಲ್ಲಿ ಯಾವುದೇ ಸಮಯದಲ್ಲಿ ವಯಸ್ಸಿನ ರುಜುವಾತನ್ನು ಇಲಾಖೆ ಅಥವಾ ಸರ್ಕಾರವು ತರಿಸಿಕೊಳ್ಳುವುದನ್ನು ಪ್ರತಿಬಂಧಿಸತಕ್ಕುದಲ್ಲ. ಮತ್ತು ಪ್ರಾರಂಭದಲ್ಲಿ ವಿಮಾದಾರನ/ಳ ವಯಸ್ಸನ್ನು ತಪ್ಪಾಗಿ ತಿಳಿಸಲಾಗಿದ್ದು ತರುವಾಯದ ರುಜುವಾತಿನ ಮೂಲಕ ಅದನ್ನು ನಿಬಂಧನೆಗಳನ್ನು ಸರಿಪಡಿಸಲಾಗಿದೆ ಎಂಬ ಕಾರಣದಿಂದಲೇ ಯಾವುದೇ ಪಾಲಿಸಿಯನ್ನು ಪ್ರಶ್ನಿಸಬಹುದು ಎಂದು ಭಾವಿಸತಕ್ಕುದಲ್ಲ.
ಆತ್ಮಹತ್ಯೆ 38. ಕನಿಷ್ಠಪಕ್ಷ ಒಂದು ವರ್ಷದಿಂದ ಜಾರಿಯಲ್ಲಿರುವಂಥ ಪಾಲಿಸಿಗಳು, ಆತ್ಮಹತ್ಯೆಯ ಮೂಲಕ ಉಂಟಾದ ವಿಮಾದಾರನ/ಳ ಮರಣದಿಂದ ಶೂನ್ಯವಾಗತಕ್ಕುದಲ್ಲ.
ಸಂಯೋಜಿತ ಪ್ರದೇಶಗಳಿಂದ ಬಂದ ಅಧಿಕಾರಿಗಳಿಗೆ ಸಂಬಂಧಿಸಿದಂತೆ ವಿಮೆ 39. ಕರ್ನಾಟಕ ರಾಜ್ಯಕ್ಕೆ ಹಂಚಿಕೆಯಾದ ಕೆಲವು ಸರ್ಕಾರಿ ನೌಕರರಿಂದ ವಿಮೆ:-
ಈ ನಿಯಮಗಳ ಉಪಬಂಧಗಳು 1956ರ ರಾಜ್ಯಗಳ ಪುನಾರಚನೆ ಅಧಿನಿಯಮದ (1956ರ ಕೇಂದ್ರ ಅಧಿನಿಯಮ ಸಂಖ್ಯೆ 37) 115ನೇ ಪ್ರಕರಣದ ಮೇರೆಗೆ ಕರ್ನಾಟಕ ರಾಜ್ಯಕ್ಕೆ ಹಂಚಿಕೆಯಾದ ಅಥವಾ ಹಂಚಿಕೆಯಾಗಿದ್ದಾರೆಂದು ಭಾವಿಸಲಾದ ಎಲ್ಲ ಸರ್ಕಾರಿ ನೌಕರರಿಗೆ 1959ರ ಏಪ್ರಿಲ್ ಮೊದಲನೇ ದಿನದಿಂದ ಜಾರಿಗೆ ಬರುವಂತೆ ಈ ಮುಂದಿನ ಷರತ್ತುಗಳಿಗೆ ಒಳಪಟ್ಟು ಅನ್ವಯವಾಗತಕ್ಕುದು, ಎಂದರೆ:-
(1) 1950ರ ಮದರಾಸು ವಂತಿಗೆ ಭವಿಷ್ಯ ವಿಶ್ರಾಂತಿ ವೇತನ-ವಿಮಾ ನಿಯಮಗಳ ಉಪಬಂಧಗಳಿಗೆ ಅನುಸಾರವಾಗಿ ಸಂದಾಯಗಳನ್ನು ಮಾಡುತ್ತಿರುವ ಸರ್ಕಾರಿ ನೌಕರರು ಉಕ್ತ ನಿಯಮಗಳಿಗೆ ಒಳಪಟ್ಟಿರುವವರೆಗೆ ಈ ನಿಯಮಗಳ ಮೇರೆಗೆ ವಿಮೆ ಮಾಡಿಸಲು ಹೊಣೆಯಾಗಿರತಕ್ಕದಲ್ಲ ;
(2) ಸರ್ಕಾರಿ ನೌಕರರು, 1959ರ ಏಪ್ರಿಲ್ (1)ರ ನಿಕಟ ಪೂರ್ವದಲ್ಲಿ,-
(i) ಸರ್ಕಾರಿ ಭವಿಷ್ಯ ನಿಧಿಗೆ ವಂತಿಗೆಯಾಗಿ
(ii) ಭಾರತದ ಜೀವ ವಿಮಾ ನಿಗಮದ ವಿಮಾ ಪಾಲಿಸಿಗಳಿಗೆ ಸಂಬಂಧಿಸಿದಂತೆ ವಿಮಾ ಕಂತಾಗಿ;
(iii) ಹೈದರಾಬಾದು ರಾಜ್ಯ ಜೀವ ವಿಮಾ ನಿಧಿ ನಿಯಮಗಳ ಮೇರೆಗಿನ ವಿಮಾ ಪಾಲಿಸಿಗಳಿಗೆ ಸಂಬಂಧಿಸದಂತೆ ವಿಮಾ ಕಂತಾಗಿ ;
(iv) ಅಂಚೆ ಜೀವ ವಿಮಾ ಮತ್ತು ಸಾವಧಿ ವಿಮಾ ನಿಯಮಗಳ ಮೇಲೆ ವಿಮಾ ಪಾಲಿಸಿಗಳ ಸಂಬಂಧದಲ್ಲಿ ವಿಮಾ ಕಂತಾಗಿ.
- ಸಂದಾಯಗಳನ್ನು ಮಾಡುತ್ತಿದ್ದ ಸರ್ಕಾರಿ ನೌಕರರು. (ಅ) 1971ರ ಏಪ್ರಿಲ್ 15ರಂದು ಇದ್ದಂತೆ ಸಂದಾಯ ಮಾಡಲಾದ ಒಟ್ಟು ಮೊಬಲಗು 1971ರ ಎಪ್ರಿಲ್ 15ರಂದು ಇದ್ದ ಅವರ ಸರಾಸರಿ ವೇತನದ ಶೇಕಡಾ ಆರೂಕಾಲಿಗೆ ಸಮನಾಗಿದ್ದರೆ ಅಥವಾ ಅದಕ್ಕೂ ಹೆಚ್ಚಾಗಿದ್ದರೆ, ಹಾಗೆ ಸಂದಾಯ ಮಾಡಲಾದ ಮೊಬಲಗು ಎಲ್ಲಿಯವರೆಗೆ ಅವರ ಸರಾಸರಿ ವೇತನದ ಶೇಕಡಾ ಆರೂಕಾಲಿಗಿಂತ ಕಡಿಮೆ ಬೀಳುವುದಿಲ್ಲಮೋ ಅಲ್ಲಿಯವರೆಗೆ ಈ ನಿಯಮಗಳ ಮೇರೆಗೆ ವಿಮೆ ಮಾಡಿಸಲು ಹೊಣೆಯಾಗಿರತಕ್ಕುದಲ್ಲ.
(ಆ) 1971ರ ಏಪ್ರಿಲ್ 15ರಂದು ಇದ್ದಂತೆ ಹಾಗೆ ಸಂದಾಯ ಮಾಡಲಾದ ಒಟ್ಟು ಮೊಬಲಗು ಅವರ ಸರಾಸರಿ ವೇತನದ ಶೇಕಡಾ ಆರೂಕಾಲಿಗಿಂತ ಕಡಿಮೆಯಿದ್ದರೆ ಅವರ ಸರಾಸರಿ ವೇತನದ ಆರೂಕಾಲು ಮತ್ತು ಹಾಗೆ ಸಂದಾಯ ಮಾಡಲಾದ ಒಟ್ಟು ಮೊಬಲಗು-ಇವೆರಡರ ನಡುವಣ ವ್ಯತ್ಯಾಸ ಎಷ್ಟಿರುವುದೋ ಅಷ್ಟಕ್ಕೆ ಈ ನಿಯಮಗಳ ಮೇರೆಗೆ ವಿಮೆ ಮಾಡಿಸಲು ಹೊಣಿಗಾರನಾಗಿರತಕ್ಕುದು:
(ಇ) 1971ರ ಏಪ್ರಿಲ್ 15ರ ತರುವಾಯ ಯಾವುದೇ ಸಮಯದಲ್ಲಿ-(ಅ) ಅಥವಾ (ಆ) ಖಂಡದಲ್ಲಿನ ಒಟ್ಟು ಮೊಬಲಗು-
(i) ಅವರ ವೇತನದ ಹೆಚ್ಚಳದಿಂದಾಗಲೀ ; ಅಥವಾ
(ii) ಭವಿಷ್ಯನಿಧಿಗೆ ವಂತಿಗೆಯನ್ನು ನಿಲ್ಲಿಸುವುದರಿಂದ ಅಥವಾ ಕಡಿಮೆಗೊಳಿಸುವುದರಿಂದಾಗಲೀ ; ಅಥವಾ
(iii) ವಿಮಾ ಪಾಲಿಸಿಗಳನ್ನು ರದ್ದುಗೊಳಿಸುವುದರಿಂದಾಗಲೀ ; ಅಥವಾ
(iv) ಸಂದಾಯವಾದ ಪಾಲಿಸಿಗಳನ್ನು ತೆಗೆದುಕೊಳ್ಳುವುದರಿಂದಾಗಲೀ ; ಅಥವಾ
(v) ಪಾಲಿಸಿಗಳಿಗೆ ಸಂಬಂಧಿಸಿದಂತೆ ಅಧ್ಯರ್ಪಿತ ಮೌಲ್ಯವನ್ನು ಪಡೆದುಕೊಳ್ಳುವುದರಿಂದಾಗಲೀ ;
-(ಅ) ಅಥವಾ (ಆ) ಖಂಡದಲ್ಲಿನ ಒಟ್ಟು ಮೊಬಲಗು ಅವರ ಸರಾಸರಿ ವೇತನದ ಶೇಕಡಾ ಆರೂಕಾಲಿಗಿಂತ ಕಡಿಮೆಬಿದ್ದರೆ; ಆ ಸಮಯದಲ್ಲಿ ಅವರ ವೇತನದ ಶೇಕಡಾ ಆರೂಕಾಲು ಮತ್ತು ಆಗ ಹಾಗೆ ಸಂದಾಯ ಮಾಡಲಾದ ಒಟ್ಟು ಮೊಬಲಗು ಯಾವುದಾದರು ಇದ್ದರೆ ಅದು ಇವೆರಡರ ನಡುವಣ ವ್ಯತ್ಯಾಸದ ಮೊಬಲಗಿಗೆ ವಿಮೆ ಮಾಡಿಸಲು ಬದ್ಧನಾಗಿರತಕ್ಕದು.
ಉಳಿಸುವಿಕೆಗಳು ಈ ನಿಯಮಗಳ ಮೂಲಕ ಉಕ್ತ ನಿಯಮಗಳಿಗೆ ತಿದ್ದುಪಡಿಯನ್ನು ಮಾಡಿದ್ದಾಗ್ಯೂ, ಉಕ್ತ ನಿಯಮಗಳ 8ನೇ ನಿಯಮದ 1ನೇ ಟಿಪ್ಪಣಿಯ ಮೇರೆಗೆ ಅವನ/ಅವಳ ಆಯ್ಕೆಯ ಮೇರೆಗೆ ಅವಳ/ ಅವನ ಕಾಲಿಕ ವೇತನ ಶ್ರೇಣಿಗಿಂತ ಹೆಚ್ಚಿನ ವಿಮೆ ಮಾಡಿಸಿರುವ ಸರ್ಕಾರಿ ನೌಕರನು 8ನೇ ನಿಯಮದ ಮೇರೆಗಿನ ಕೋಷ್ಟಕದ ಪ್ರಕಾರ ಕನಿಷ್ಠಕ್ಕಿಂತ ಕಡಿಮೆಯಲ್ಲದ ದರದಲ್ಲಿ ಪ್ರತಿ ತಿಂಗಳು ವಿಮಾ ಕಂತು ಸಂದಾಯ ಮಾಡುವುದನ್ನು ಮುಂದುವರಿಸಲು ಹಕ್ಕುಳ್ಳವನಾಗಿರತಕ್ಕುದು ಮತ್ತು 8ನೇ ನಿಯಮದ ಮೇರೆಗಿನ ಕೋಷ್ಠಕದ ಪ್ರಕಾರ ಅವನು/ಅವಳು ವಿಮಾ ಕಂತಾಗಿ ಸಂದಾಯ ಮಾಡಿದ ಮೊಬಲಗು ಕನಿಷ್ಠಕ್ಕಿಂತ ಕಡಿಮೆ ಬೀಳದಿರುವುದರಿಂದ ಮತ್ತಷ್ಟು ವಿಮೆಯನ್ನು ಮಾಡಿಸಲು ಹೊಣೆಯಾಗಿರತಕ್ಕುದಲ್ಲ.
39(ಅ):- ಕರ್ನಾಟಕ ಸರ್ಕಾರಕ್ಕೆ ವರ್ಗಾವಣೆಗೊಂಡ ಕೆಲವು ಕೇಂದ್ರ ಸರ್ಕಾರಿ ನೌಕರರಿಂದ ವಿಮೆ:-
1956 ರ ನವೆಂಬರ್ 1 ರಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರದ ಸೇವೆಗಳಿಗೆ ವರ್ಗಾವಣೆಗೊಂಡ ಕೇಂದ್ರ ಸರ್ಕಾರದ ನೌಕರರಿಗೆ 39ನೇ ನಿಯಮದ ಉಪಬಂಧಗಳು ಯಥೋಚಿತ ವ್ಯತ್ಯಾಸಗಳೊಂದಿಗೆ ಅನ್ವಯವಾಗತಕ್ಕದು.
ಪಾಲಿಸಿಗಳ ಮೇಲೆ ಸಾಲ 40. ಸಾಲಗಳ ನೀಡಿಕೆ:- (1) (2)ನೇ ಉಪ ನಿಯಮದಲ್ಲಿ ಉಪಬಂಧಿಸಲಾದ ರೀತಿಯಲ್ಲಿ ಲೆಕ್ಕಹಾಕಲಾದ ಪಾಲಿಸಿಯ ಅಧ್ಯರ್ಪಿತ ಮೌಲ್ಯದ ಶೇಕಡಾ 90 ರಷ್ಟನ್ನು ಮೀರದ ಸಾಲವನ್ನು ನಿರ್ದೇಶಕರು, ಈ ಮುಂದಿನ ಉದ್ದೇಶಗಳಿಗಾಗಿ ವಿಮಾದಾರನಿಗೆ/ಳಿಗೆ ನೀಡಬಹುದು. ಎಂದರೆ:
(ಅ) ವಿಮಾದಾರನು/ಳು ಅಥವಾ ಅವನ/ಅವಳ ಕುಟುಂಬದ ಸದಸ್ಯನಾಗಿರುವ ಯಾವನೇ/ಳೇ ವ್ಯಕ್ತಿಯು ಪ್ರೌಢಶಾಲಾ ಹಂತಕ್ಕಿಂತ ಹೆಚ್ಚಿನ ಶಿಕ್ಷಣದ ವೆಚ್ಚವನ್ನು ಸಂದಾಯ ಮಾಡುವುದಕ್ಕಾಗಿ ಪರಂತು, ಅಂಥ ಶಿಕ್ಷಣವು ಮೂರು ವರ್ಷಗಳಿಗಿಂತ ಕಡಿಮೆಯಿಲ್ಲದ ಅವಧಿಯದಾಗಿರತಕ್ಕುದು.
(ಆ) ವಿಮಾದಾರರ ಅಥವಾ ಅವನ/ಅವಳ ಕುಟುಂಬದ ಯಾವನೇ/ಳೇ ಸದಸ್ಯನ ದೀರ್ಘಕಾಲದ ಅಥವಾ ತೀವ್ರತರ ಕಾಯಿಲೆಗೆ ಸಂಬಂಧಿಸಿದಂತೆ ವಿಮಾದಾರರ ಖರ್ಚುಗಳನ್ನು ಸಂದಾಯ ಮಾಡುವುದಕ್ಕಾಗಿ;
(ಇ) ವಿಮಾದಾರರ ಅಥವಾ ಅವನ/ಅವಳ ಕುಟುಂಬದ ಸದಸ್ಯನಾಗಿರುವ ಯಾವನೇ/ಳೇ ವ್ಯಕ್ತಿಯ ಮದುವೆಗೆ ಸಂಬಂಧಿಸಿದ ವೆಚ್ಚಗಳನ್ನು ಸಂದಾಯ ಮಾಡುವುದಕ್ಕಾಗಿ;
(ಈ) ನಿವೇಶನದ ವೆಚ್ಚವೂ ಸೇರಿದಂತೆ ಮನೆಯ ನಿರ್ಮಾಣಕ್ಕಾಗಿ ಅಥವಾ ಸೂಕ್ತ ಮನೆಯನ್ನು ಕೊಳ್ಳುವುದಕ್ಕಾಗಿ ಮತ್ತು ಮನೆಯನ್ನು ವಿಸ್ತರಿಸುವ ಅಥವಾ ಮಾರ್ಪಾಟು ಮಾಡುವ ಮತ್ತು ಪುನರ್ ನಿರ್ಮಾಣದ ಉದ್ದೇಶಕ್ಕಾಗಿ;
(ಉ) ಅವನ/ಅವಳ ಕುಟುಂಬದ ಯಾವನೇ/ಳೇ ಸದಸ್ಯನ ಶವಸಂಸ್ಕಾರ ಅಥವಾ ಇತರ ಕರ್ಮಾಚರಣೆಗಳ ಸಂಬಂಧದಲ್ಲಿ ವಿಮಾದಾರರು ಮಾಡಬೇಕಾದ ರೂಢಿಗತ ಆಚರಣೆಯ ಕಡ್ಡಾಯ ವೆಚ್ಚಗಳನ್ನು ಸಂದಾಯ ಮಾಡುವುದಕ್ಕಾಗಿ;
ಪರಂತು, ಮಂಜೂರು ಮಾಡಲಾದ ಸಾಲವು ಐವತ್ತು ರೂಪಾಯಿಗಳಿಗಿಂತ ಕಡಿಮೆಯಿರತಕ್ಕುದಲ್ಲ;
(1) ನೇ ಉಪ ನಿಯಮವು ವಿಮಾದಾರರು ಪ್ರಾಮಾಣಿಕ ಅವಶ್ಯಕತೆಗಾಗಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದಾರೆಂದು ನಿರ್ದೇಶಕರು, ವಿಭಾಗೀಯ ಉಪ ನಿರ್ದೇಶಕರು, ಅಥವಾ ಜಿಲ್ಲಾ ವಿಮಾ ಅಧಿಕಾರಿಗೆ ಮನವರಿಕೆಯಾದರೆ, ಅವರು ಮೇಲೆ ನಮೂದಿಸಲಾದ ಉದ್ದೇಶಗಳಿಂದ ಹೊರತಾದ ಇತರ ಉದ್ದೇಶಗಳಿಗೆ ಸಾಲವನ್ನು ಮಂಜೂರು ಮಾಡಬಹುದು ಎಂದು ಉಪಬಂಧ ಕಲ್ಪಿಸಿದೆ.
(2)(1) ನೇ ಉಪ ನಿಯಮದ ಉದ್ದೇಶಗಳಿಗಾಗಿ ಪಾಲಿಸಿಯ ಅಧ್ಯರ್ಪಿತ ಮೌಲ್ಯವನ್ನು 17ನೇ ನಿಯಮದಲ್ಲಿ ಉಲ್ಲೇಖಿಸಲಾದ ಯುಕ್ತ ಕೋಷ್ಟಕದಲ್ಲಿ ನಿರ್ದಿಷ್ಟಪಡಿಸತಕ್ಕುದು.
(3)ಕನಿಷ್ಟ ಪಕ್ಷ ಮೂರು ಪೂರ್ಣ ವರ್ಷಗಳಿಗೆ ಚಾಲ್ತಿಯಲ್ಲಿಲ್ಲದ ಪಾಲಿಸಿಗಳಿಗೆ ಸಂಬಂಧಿಸಿದಂತೆ ಈ ನಿಯಮದ ಮೇರೆಗೆ ಸಾಲವನ್ನು ಮಂಜೂರು ಮಾಡತಕ್ಕುದಲ್ಲ.
(ಅ) ಮನೆ ನಿರ್ಮಾಣ/ಮನೆ ಖರೀದಿ/ಮನೆ ದುರಸ್ತಿ ಮುಂಗಡ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಭದ್ರತೆಯಾಗಿ ಮತ್ತು ಅಥವಾ ಪಾಶ್ರ್ವಿಕ ಭದ್ರತೆಯಾಗಿ ಒತ್ತೆ ಇಡಲಾದ ಕರ್ನಾಟಕ ಸರ್ಕಾರದ ವಿಮಾ ಇಲಾಖೆಯ/ಹೈದರಾಬಾದ್ ರಾಜ್ಯ ಜೀವ ವಿಮಾ ನಿಧಿಯ ಪಾಲಿಸಿಗಳನ್ನು, 1958ರ ಕರ್ನಾಟಕ ಸರ್ಕಾರಿ ನೌಕರರ (ಕಡ್ಡಾಯ ಜೀವ ವಿಮಾ) ನಿಯಮಗಳ (ಆದೇಶ ಸಂಖ್ಯೆ ಎಫ್ಡಿ 259:ಪಿಎಲ್ಎಚ್ 74 ಬೆಂಗಳೂರು ದಿನಾಂಕ 24ನೇ ಮೇ 1975) 24 (ಎ)ನೇ ನಿಯಮದಲ್ಲಿ ವಿಧಿಸಲಾದ ಷರತ್ತುಗಳಿಗೆ ಒಳಪಟ್ಟು, ಕಟ್ಟಿದ / ಖರೀದಿ ಮಾಡಿದ / ದುರಸ್ತಿ ಮಾಡಿದ ಮನೆಯನ್ನು ಸರ್ಕಾರಕ್ಕೆ ಅಡಮಾನ ಮಾಡಿದ ಕೂಡಲೇ ಬಿಡುಗಡೆ ಮಾಡಬಹುದೆಂಬ ಪರಂತುಕಕ್ಕೆ ಒಳಪಟ್ಟು ವಿಮಾದಾರರಿಗೆ ನೀಡಿದ ಮನೆ ನಿರ್ಮಾಣ, ಮನೆ ಖರೀದಿ ಅಥವಾ ಮನೆ ದುರಸ್ತಿ ಮುಂಗಡದ ಮರು ಸಂದಾಯಕ್ಕಾಗಿ ಹೆಚ್ಚಿನ ಭದ್ರತೆಯಾಗಿ ಕೊಡಲಾದ ಪಾಲಿಸಿಯ ಸಂಬಂಧದಲ್ಲಿ ಈ ನಿಯಮದ ಮೇರೆಗೆ ಸಾಲವನ್ನು ನೀಡತಕ್ಕದಲ್ಲ.
(ಆ) ಎಲ್ಲ ಮುರಿತಗಳ ತರುವಾಯ (ಉದ್ದೇಶಿತ ಸಾಲ ಮಂಜೂರಾತಿಗೆ ಸಂಬಂಧಿಸಿದ ಮುರಿತಗಳನ್ನು ಒಳಗೊಂಡಂತೆ) ವಿಮಾದಾರನ/ಳ ಮಾಸಿಕ ನಿವ್ವಳ ವೇತನವು ಅವನ/ಅವಳ ಮಾಸಿಕ ಒಟ್ಟು ಉಪಲಬ್ಧಗಳ ಶೇಕಡಾ ಐವತ್ತಕ್ಕಿಂತ ಕಡಿಮೆಯಿರುವಲ್ಲಿ ಈ ನಿಯಮದ ಮೇರೆಗೆ ಯಾವುದೇ ಸಾಲವನ್ನು ಮಂಜೂರು ಮಾಡತಕ್ಕದಲ್ಲ.
ವಿವರಣೆ:- (1) ನೇ ಉಪ-ನಿಯಮದ ಉದ್ದೇಶಕ್ಕಾಗಿ-
(i) ಗಂಡ ಮತ್ತು ಹೆಂಡತಿ ಇವರಿಬ್ಬರೂ ಸರ್ಕಾರಿ ನೌಕರರಾಗಿದ್ದರೆ, “ನಿವ್ವಳ ವೇತನ” ಮತ್ತು “ಒಟ್ಟು ಉಪಲಬ್ದಗಳು”, ಒಟ್ಟುಗೂಡಿಸಿದ ಅವರಿಬ್ಬರ ನಿವ್ವಳ ವೇತನ ಮತ್ತು ಒಟ್ಟು ಉಪಲಬ್ದಗಳಾಗಿರತಕ್ಕುದು ಮತ್ತು “ಮುರಿತಗಳು” ಅವರಿಬ್ಬರ ವೇತನದ ಒಟ್ಟು ಮುರಿತಗಳಾಗಿರತಕ್ಕುದು.
(ii) ಮನೆ ನಿರ್ಮಾಣ ಅಥವಾ ಮನೆ ಖರೀದಿ ಮುಂಗಡವನ್ನು ತೆಗೆದುಕೊಂಡ ವಿಮಾದಾರರ “ಒಟ್ಟು ಉಪಲಬ್ಧಗಳ” ಮನೆ ನಿರ್ಮಾಣ ಅಥವಾ ಮನೆ ಖರೀದಿ ಮುಂಗಡದ ಶೇಕಡಾ 7/12ಕ್ಕೆ ಸಮನಾದ ಮೊಬಲಗಿನ ಮೂಲಕ ಹೆಚ್ಚಿಸಲಾದ ಅವನ ಒಟ್ಟು ಉಪಲಬ್ಧಗಳಾಗಿರತಕ್ಕುದು.
(4) ಈ ನಿಯಮದ ಮೇರೆಗೆ ಸಾಲದ ಮಂಜೂರಾತಿಯ ಅರ್ಜಿಯನ್ನು ಈ ನಿಯಮಗಳಿಗೆ ಲಗತ್ತಿಸಲಾದ ‘ಎ’ ನಮೂನೆಯಲ್ಲಿ ಸಲ್ಲಿಸತಕ್ಕುದು.
(5) ಹಿಂದಿನ ಸಾಲವು ಪೂರ್ಣ ಪಾವತಿಯಾದ ನಂತರ ಅಥವಾ ಸಾಲ ಮಂಜೂರಾದ ದಿನಾಂಕದಿಂದ 40 ತಿಂಗಳುಗಳು ಯಾವುದು ತಡವಾಗಿ ಬರುವುದೋ ಅದು ಅಂತಹ ವಿಮಾದಾರರು ಈ ಬಗ್ಗೆ ಯಾವಾಗ ಬೇಕಾದರೂ ಈ ಕೆಳಕಂಡ ಷರತ್ತುಗಳ ಮೇಲೆ ಮರು ಸಾಲಕ್ಕೆ ಅರ್ಜಿ ಸಲ್ಲಿಸಬಹುದು ಹಾಗೂ ಮಂಜೂರು ಮಾಡಬಹುದು.
(i) ಸಾಲದ ಮೇಲಿನ ಬಡ್ಡಿ ಮತ್ತು ವಿಮಾ ಕಂತು ಹಾಗೂ ಬಡ್ಡಿ ಇದ್ದಲ್ಲಿ ಮರು ಸಾಲದಲ್ಲಿ ಹೊಂದಾಣಿಕೆ ಮಾಡಿಕೊಂಡಲ್ಲಿ.
(ii) ತೆಗೆದುಹಾಕಲಾಗಿದೆ.
(iii) ವಿಮಾದಾರನು, ನಿರ್ದಿಷ್ಟ ಪಡಿಸಲಾದ ಸಂಖ್ಯೆಯ ಕಂತುಗಳಲ್ಲಿ ಅಥವಾ ಅವನು ನಿವೃತ್ತಿಯ ವಯಸ್ಸನ್ನು ತಲುಪುವ ಮೊದಲು ಇವೆರಡರಲ್ಲಿ ಯಾವುದು ಮೊದಲೋ ಅದರ ಪ್ರಕಾರ ಸಾಲವನ್ನು ಮತ್ತು ಅದರ ಮೇಲಿನ ಬಡ್ಡಿಯನ್ನು ಮರುಪಾವತಿ ಮಾಡಲು ಸಮರ್ಥನಾಗಿದ್ದರೆ, (ಸರ್ಕಾರದ ಅಧಿಸೂಚನೆ ಸಂಖ್ಯೆ: ಎಫ್ಡಿ 278, ಕೆಐಡಿ 88, ಬೆಂಗಳೂರು, ದಿನಾಂಕ 14.06.1989) ವಿವರಣೆ:- ಈ ನಿಯಮದ ಉದ್ದೇಶಕ್ಕಾಗಿ “ಅವನ ಕುಟುಂಬದ ಒಬ್ಬ ಸದಸ್ಯ” ಎಂದರೆ ವಿಮಾದಾರನ/ಳ ಮೇಲೆ ವಾಸ್ತವವಾಗಿ ಅವಲಂಬಿತರಾಗಿರುವ ಗಂಡ, ಹೆಂಡತಿ, ಮಗ, ದತ್ತು ಮಗ, ಮಲ ಮಗ, ಮಗಳು ದತ್ತುಪುತ್ರಿ, ಮಲಮಗಳು, ತಂದೆ, ತಾಯಿ, ಮಲತಾಯಿ, ಸಹೋದರ, ಮಲ ಸಹೋದರ, ಸಹೋದರಿ ಅಥವಾ ಮಲ ಸಹೋದರಿ.
ಬಡ್ಡಿ 41. 40ನೇ ನಿಯಮದ ಮೇರೆಗೆ ಮಂಜೂರು ಮಾಡಲಾದ ಸಾಲದ ಮೇಲೆ, ವರ್ಷಕ್ಕೆ ಒಂಭತ್ತು ದರದಲ್ಲಿ ಸರಳ ಬಡ್ಡಿಯನ್ನು ವಿಧಿಸತಕ್ಕುದು.
ಸಾಲಕ್ಕಾಗಿ ಭದ್ರತೆ 42. 40ನೇ ನಿಯಮದ ಮೇರೆಗೆ ಮಂಜೂರು ಮಾಡಲಾದ ಸಾಲಕ್ಕೆ ಭದ್ರತೆಯಾಗಿ, ವಿಮಾದಾರರು ಕರ್ನಾಟಕ ರಾಜ್ಯಪಾಲರಿಗೆ ಪಾಲಿಸಿಯನ್ನು ಹಸ್ತಾಂತರಣ ಮಾಡತಕ್ಕುದು. ಪಾಲಿಸಿಯ ಹಸ್ತಾಂತರಣವು ಈ ನಿಯಮಗಳಿಗೆ ಲಗತ್ತಿಸಿಲಾದ ‘ಬಿ’ ನಮೂನೆಯಲ್ಲಿರತಕ್ಕುದು.
ಸಾಲದ ವಸೂಲಿ 43. (1) 40ನೇ ನಿಯಮದ ಮೇರೆಗೆ ಮಂಜೂರು ಮಾಡಲಾದ ಸಾಲವನ್ನು, ಯಾವ ತಿಂಗಳಿನಲ್ಲಿ ಸಾಲವನ್ನು ಪಡೆಯಲಾಯಿತೋ ಅದರ ಮುಂದಿನ ತಿಂಗಳಿನಿಂದ ಪ್ರಾರಂಭಿಸಿ, ನಿರ್ದೇಶಕರು ನಿರ್ಧರಿಸಬಹುದಾದಂತೆ 48 ಸಮಾನ ಮಾಸಿಕ ಕಂತುಗಳನ್ನು ಮೀರದಂಥ ಸಂಖ್ಯೆಯಲ್ಲಿ ವೇತನದಿಂದ ಮುರಿದುಕೊಳ್ಳುವುದರ ಮೂಲಕ ವಸೂಲಿ ಮಾಡತಕ್ಕುದು. ಕಂತುಗಳನ್ನು ಪೂರ್ಣ ರೂಪಾಯಿಗಳಲ್ಲಿ ನಿಗದಿಪಡಿಸಲಾಗುವುದು. ಯಾವುದೇ ಸಂದರ್ಭದಲ್ಲಿ ವಸೂಲಿಯ ಅವಧಿಯನ್ನು ವಿಮಾದಾರನ/ಳ ನಿವೃತ್ತಿಯ ವಯಸ್ಸಿನ ನಂತರವೂ ವಿಸ್ತರಿಸತಕ್ಕದಲ್ಲ.
(2) ಸಾಲವನ್ನು ಪಡೆದ ವಿಮಾದಾರನು/ಳು ಯಾವುದೇ ಒಂದು ತಿಂಗಳಲ್ಲಿ ಒಂದಕ್ಕಿಂತ ಹೆಚ್ಚು ಕಂತನ್ನು ಮರುಪಾವತಿ ಮಾಡಬಹುದು.
(3) ಅಸಲು ಹಣದ ಮರು ಪಾವತಿಯು ಯಾವ ತಿಂಗಳಿನಲ್ಲಿ ಪೂರ್ಣಗೊಂಡಿತೋ ಅದರ ಮುಂದಿನ ತಿಂಗಳಿನಿಂದ ಪ್ರಾರಂಬಿಸಿ, ನಿರ್ದೇಶಕರು ನಿರ್ಧರಿಸಬಹುದಾದಂಥ ಒಂದು ಅಥವಾ ಹೆಚ್ಚು ಕಂತುಗಳಲ್ಲಿ ಸಾಲದ ಮೇಲೆ ಬಾಕಿಯಿರುವ ಬಡ್ಡಿಯನ್ನು ವಸೂಲಿಮಾಡತಕ್ಕದು. ಕಂತುಗಳಲ್ಲಿ ಅಂಥ ವಸೂಲಿಗಳನ್ನು ಮಾಡಲಾಗುವಲ್ಲಿ ಪ್ರತಿಯೊಂದು ಕಂತಿನ ಮೊಬಲಗು ಅಸಲು ಹಣಕ್ಕೆ ಸಂಬಂಧಿಸಿದ ಕಂತಿನ ಮೊಬಲಗಿಗಿಂತ ಹೆಚ್ಚಾಗಿರತಕ್ಕದ್ದಲ್ಲ.
(4) ವಿಮಾದಾರನು/ಳು ಭತ್ಯ ಸಹಿತವಾದ ರಜೆ ಪಡೆದು ಕೆಲಸದಿಂದ ಗೈರುಹಾಜರಾದಲ್ಲಿ ಅಥವಾ ಮುಂದಿನ ಸಂದಾಯಕ್ಕಾಗಿ ಅವನ ಸಂಬಳವನ್ನು ತಡೆಹಿಡಿಯಲಾದಲ್ಲಿ, ಸದರಿ ಕಂತನ್ನು ತರುವಾಯದಲ್ಲಿ ರಜೆ ಭತ್ಯ ಮತ್ತು ವೇತನವನ್ನು ಪಡೆದಾಗ ವಸೂಲಿ ಮಾಡತಕ್ಕುದು.
(5) ವಿಮಾದಾರರನ್ನು ಸೇವೆಯಿಂದ ಅಮಾನತ್ತುಗೊಳಿಸಲಾದ ಸಂದರ್ಭದಲ್ಲಿ ಅಥವಾ ಅವನು/ಅವಳು ಭತ್ಯರಹಿತ ರಜೆಯ ಮೇಲಿರುವ ಸಂದರ್ಭದಲ್ಲಿ ಮತ್ತು ಅವನ/ಳ ವೇತನದಿಂದ ಕಂತನ್ನು ಮುರಿದುಕೊಳ್ಳಲಾಗದ ಎಲ್ಲ ಇತರ ಸಂದರ್ಭಗಳಲ್ಲಿ, ಕಂತಿಗೆ ಸಂಬಂಧಿಸಿದಂತೆ ಬಾಕಿಯಿರುವ ಮೊಬಲಗನ್ನು ನಗದು ರೂಪದಲ್ಲಿ ಸಂದಾಯ ಮಾಡತಕ್ಕದು ಮತ್ತು ಹಾಗೆ ಸಂದಾಯ ಮಾಡದಿದ್ದಲ್ಲಿ, ಅರ್ಧ ವರ್ಷಕ್ಕೊಮ್ಮೆ ಲೆಕ್ಕಹಾಕಲಾಗುವ ವಾರ್ಷಿಕ ಶೇಕಡಾ ಒಂಭತ್ತು ದರದಲ್ಲಿ ಬಡ್ಡಿಯನ್ನು ವಿಧಿಸಲಾಗುವುದು ಮತ್ತು ಅದನ್ನು ಅವಳ/ಅವನ ಮುಂದಿನ ವೇತನದಿಂದ ವಸೂಲಿ ಮಾಡಲಾಗುವುದು.
ನಿರ್ದಿಷ್ಟಪಡಿಸಲಾದ ಉದ್ದೇಶಗಳನ್ನು ಹೊರತುಪಡಿಸಿದ ಇತರ ಉದ್ದೇಶಗಳಿಗಾಗಿ ಸಾಲಗಳನ್ನು ಬಳಕೆ ಮಾಡಿದ ಸಂದರ್ಭದಲ್ಲಿ ಸಾಲದ ಮರುಪಾವತಿ 44. ಸಾಲವನ್ನು ಯಾವ ವ್ಯಕ್ತಿಗೆ ಮಂಜೂರು ಮಾಡಲಾಗಿದೆಯೋ ಆ ವ್ಯಕ್ತಿಯು ಸಾಲವನ್ನು ಪಡೆದ ತರುವಾಯ, ಸಾಲವನ್ನು ಪಡೆಯಲು ಅರ್ಜಿಯಲ್ಲಿ ನಮೂದಿಸಲಾದ ಉದ್ದೇಶವು ತಪ್ಪಾದುದೆಂದು ಅಥವಾ ಯಾವ ಉದ್ದೇಶಕ್ಕಾಗಿ ಸಾಲವನ್ನು ಮಂಜೂರು ಮಾಡಲಾಯಿತೋ ಆ ಉದ್ದೇಶಕ್ಕಾಗಿ ಸಾಲವನ್ನು ಉಪಯೋಗಿಸಲಾಗಿಲ್ಲ ಎಂದು ನಂಬಲು ನಿರ್ದೇಶಕರಿಗೆ ಕಾರಣವಿದ್ದರೆ, ಅವರು ಕಂತುಗಳಲ್ಲಿ ಸಂದಾಯ ಮಾಡಲು ಮಂಜೂರಾತಿ ನೀಡಿದ್ದರೂ ಸಹ, ಬಾಕಿಯಿರುವ ಪೂರ್ಣ ಸಾಲವನ್ನು ಅಥವಾ ಅದರ ಭಾಗವನ್ನು ಬಡ್ಡಿಯ ಸಮೇತ, ನಿರ್ದೇಶಕರು ತಮ್ಮ ವಿವೇಚನಾನುಸಾರ ನಿರ್ಧರಿಸಬಹುದಾದಂಥ ಸಂಖ್ಯೆಯ ಕಂತುಗಳಲ್ಲಿ ವಸೂಲಿ ಮಾಡತಕ್ಕದೆಂದು ನಿರ್ದೇಶಿಸಬಹುದು. 45. ಉಳಿಸುವಿಕೆಗಳು:- ಈ ನಿಯಮಗಳ ಮೂಲಕ ಈಗ ಪ್ರಚಲಿತವಿರುವ ನಿಯಮಗಳನ್ನು ರದ್ದುಗೊಳಿಸಿದ್ದಾಗ್ಯೂ, 1897ರ ಸಾಮಾನ್ಯ ಖಂಡಗಳ ಅಧಿನಿಯಮದ (1897ರ ಕೇಂದ್ರ ಅಧಿನಿಯಮ 10) 6ನೇ ಪ್ರಕರಣದ ಉಪಬಂಧವು, ಪ್ರಚಲಿತವಿರುವ ನಿಯಮಗಳನ್ನು ಕೇಂದ್ರ ಅಧಿನಿಯಮದ ಮೂಲಕ ನಿರಸನಗೊಳಿಸಿದ್ದರೆ ಹೇಗೋ ಹಾಗೆ ಅನ್ವಯವಾಗತಕ್ಕುದು. ಮತ್ತು ಸದರಿ ಅಧಿನಿಯಮದ 24ನೇ ಪ್ರಕರಣದ ಉಪಬಂಧಗಳು, ಪ್ರಚಲಿತವಿರುವ ನಿಯಮಗಳಲ್ಲಿ ನಿಯಮಗಳನ್ನು ಕೇಂದ್ರ ಅಧಿನಿಯಮದ ಮೂಲಕ ನಿರಸನಗೊಳಿಸಿದ್ದರೆ ಮತ್ತು ಪುನರ್ ಅಧಿನಿಯಮಿತಿಗೊಳಿಸಿದ್ದರೆ ಹೇಗೋ ಹಾಗೆ ಅನ್ವಯಿಸತಕ್ಕುದು. ನಮೂನೆ-ಎ
| 1. ಅರ್ಜಿದಾರರ ಹೆಸರು ಮತ್ತು ಪದನಾಮ ... | ||||
| 2. ಅರ್ಜಿದಾರರು ಕೆಲಸ ಮಾಡುತ್ತಿರುವ ಕಛೇರಿಯ ಹೆಸರು ... | ||||
| 3. (ಅ) ಅರ್ಜಿದಾರರು ಸಾಲವನ್ನು ಯಾವ ಪಾಲಿಸಿಯ/ಗಳ ಮೇಲೆ ಪಡೆಯಬಯ ಸುತ್ತಾರೆ ... | ಪಾಲಿಸಿ ನಂ. 1........................ 2......................... 3........................ 4......................... | |||
| (ಆ) ಇತರೆ ಪಾಲಿಸಿ ನಂಬರುಗಳು ... | 1........................ 2......................... 3........................ 4......................... | |||
| 4. ಪಡೆದ ಸಂಬಳ, ಒಟ್ಟು ವ್ಯವಕಲನಗಳು ಅ. ಒಟ್ಟು ಸಂಬಳ (ರೂಪಾಯಿಗಳಲ್ಲಿ) ಮೊತ್ತ ಮತ್ತು ಪಡೆದ ನಿವ್ವಳ ಸಂಬಳಗಳ ವಿವರ | ||||
| ಆ. ವ್ಯವಕಲನಗಳು 1. ವೃತ್ತಿ ತೆರಿಗೆ ... 2. ಆದಾಯ ತೆರಿಗೆ ... 3. ಸಾಮಾನ್ಯ ಭವಿಷ್ಯ ನಿಧಿ ಎ) ಚಂದಾ ರೂ. ... ಬಿ) ಮುಂಗಡದ ಮರು ಪಾವತಿ ... 4. ಅಂಚೆ ಜೀವ ವಿಮೆ ... 5. ಹೈದರಾಬಾದ್ ರಾಜ್ಯ ಜೀವ ವಿಮೆ ... 6. ಜೀವ ವಿಮಾ ನಿಗಮ ... 7. ಕರ್ನಾಟಕ ಸರ್ಕಾರಿ ವಿಮಾ ಇಲಾಖೆ ... ಅ) ವಿಮಾ ಕಂತು ... ಆ) ಸಾಲದ ಮರುಪಾವತಿ ... 8. ಕಾರು ಮುಂಗಡ / ಮೋಟಾರ್ ಸೈಕಲ್ ಮುಂಗಡ / ಸೈಕಲ್ ಮುಂಗಡ ... 9. ಗೃಹ ನಿರ್ಮಾಣ ಮುಂಗಡ / ಗೃಹ ಖರೀದಿ ಮುಂಗಡ / ಗೃಹ ದುರಸ್ತಿ ಮುಂಗಡ ... 10. ಹಬ್ಬದ ಮುಂಗಡ ... 11. ಬಾಡಿಗೆ ... 12. ಸಾಮೂಹಿಕ ವಿಮೆ ... 13. ಸಹಕಾರಿ ಸಂಘದ / ಬ್ಯಾಂಕಿನ ಸಾಲ ... 14. ಸಂಚಿತ ಸಾವಧಿ ಠೇವಣಿ ... 15. ಆವರ್ತಕ ಠೇವಣಿ ... 16. ನ್ಯಾಯಾಲಯ ಜಪ್ತಿ ಇತರೆ ... | ರೂ. ಪೈ. | |||
| ‘ಆ’ಯ ಒಟ್ಟು ... | ||||
| ‘ಇ’ ನಿವ್ವಳ ಸಂಬಳ ... | ||||
| 5. ಸಾಲ ತೆಗೆದುಕೊಳ್ಳುವ ಉದ್ದೇಶ ... | |||||
| 6. ಬೇಕಾಗಿರುವ ಸಾಲದ ಮೊತ್ತ ... | |||||
| 7. ಸಾಲವನ್ನು ಎಷ್ಟು ಕಂತುಗಳಲ್ಲಿ ಹಿಂತಿರುಗಿಸಲು | |||||
| ಉದ್ದೇಶಿಸಲಾಗಿದೆ (ಬಡ್ಡಿ ಸೇರಿ 48 ಕಂತುಗಳಿಗೆ | |||||
| ಮೀರಕೂಡದು) ... | |||||
| 8. ಸಾಲದ ಹಣವನ್ನು ಪಡೆಯಲಿಚ್ಛಿಸಿರುವ ಖಜಾನೆ |
ದಿನಾಂಕ:
ಅರ್ಜಿದಾರರ ಸಹಿ.
ದಿನಾಂಕ: ಅರ್ಜಿದಾರರ ಸಹಿ. 11. ಮೇಲೆ ಹೇಳಲಾದ ವಿವರಗಳು ನನ್ನ ತಿಳುವಳಿಕೆ ಮತ್ತು ನಂಬಿಕೆಯ ಮಟ್ಟಿಗೆ ಸರಿಯಾಗಿದೆಯೆಂದು ಮತ್ತು ಮೇಲಿನ ಸಹಿಯು ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಪಾಲಿಸಿ ಸಂಖ್ಯೆ ...................................... ಆಗಿರುವ ಶ್ರೀ/ಶ್ರೀಮತಿ .............................................. ಇವರದೆಂದು ಮತ್ತು ಈ ಬಗ್ಗೆ ವಿಮಾ ಕಂತು ರೂ. ....................... ಗಳನ್ನು ಇವರ .................. ತಿಂಗಳ ಸಂಬಳ ....................... ತಿಂಗಳಲ್ಲಿ ವಿತರಣೆ ಮಾಡಿದಾಗ ಕಟಾಯಿಸಲಾಗಿದೆಯೆಂದು ಈ ಮೂಲಕ ಪ್ರಮಾಣೀಕರಿಸುತ್ತೇನೆ. ಪದನಾಮ ಮತ್ತು ಕಛೇರಿಯ ಹೆಸರು ಸ್ಥಳ: ಬಟವಾಡೆ ಮಾಡುವ ಅಧಿಕಾರಿಯ ಸಹಿ ದಿನಾಂಕ: ಮೊಹರಿನೊಂದಿಗೆ ಸಾಲ ವಸೂಲಿಗೆ ಸಂಬಂಧಪಟ್ಟ ಪ್ರಮಾಣ ಪತ್ರ ಶ್ರೀ/ಶ್ರೀಮತಿ ..................................................................................................... ಇವರು ಹೊಂದಿರುವ ಅಧಿಕಾರಿ ಶಾಖೆಯ ಪಾಲಿಸಿ ಸಂಖ್ಯೆ ..................................................... ರೂ.................................................... ಸಾಲವನ್ನು ದಿನಾಂಕ ........................... ರಂದು ಪಡೆಯಲಾಗಿದೆ. ....................................... ರೂಪಾಯಿಗಳ ಸಾಲದ ಕಂತನ್ನು ಅರ್ಜಿದಾರರ .............................. ತಿಂಗಳ ಸಂಬಳ ............................ ತಿಂಗಳಲ್ಲಿ ಬಟವಾಡೆ ಮಾಡಿದಾಗ ಪ್ರಾರಂಭಿಸಿ ............................. ತಿಂಗಳ ಸಂಬಳ .........................ತಿಂಗಳಲ್ಲಿ ಬಟವಾಡೆ ಮಾಡಿರುವವರೆಗೂ ಕಟಾಯಿಸಲಾಗಿದೆ. ಈ ಮಧ್ಯೆ ...................................... ತಿಂಗಳುಗಳಲ್ಲಿ ಸಾಲದ ಕಂತುಗಳನ್ನು ಕಟಾಯಿಸಲಾಗಿಲ್ಲ ಕಾರಣ ................................................................. ಬಾಕಿ ಉಳಿದ ಹಣ ರೂ........................................................ ಬಟವಾಡೆ ಮಾಡುವ ಅಧಿಕಾರಿಯ ಸಹಿ ಮತ್ತು ಪದನಾಮ ಅರ್ಜಿದಾರನ ಸಹಿ. ಮೊಹರಿನೊಂದಿಗೆ ಸ್ಥಳ : ದಿನಾಂಕ : ಸೂಚನೆ: ಅರ್ಜಿದಾರರು ಸ್ವತಃ ಬಟವಾಡೆ ಅಧಿಕಾರಿಯಾಗಿದ್ದರೆ, ಅರ್ಜಿದಾರರು ಮತ್ತು ಇತರ ಸಂದರ್ಭಗಳಲ್ಲಿ ಸಂಬಳದ ಬಟವಾಡೆ ಅಧಿಕಾರಿಯು ಸಹಿ ಮಾಡತಕ್ಕುದು.
ಸ್ವೀಕರ್ತರ ರಸೀದಿ ನಾನು......................................................................................................................................................
ಕರ್ನಾಟಕ ಸರ್ಕಾರಿ ವಿಮಾ ಇಲಾಖೆ, ಬೆಂಗಳೂರು-1 ಇವರಿಂದ ವಿಮಾ ಪತ್ರಗಳ ಸಂಖ್ಯೆ ...................................................................... ಬಾಬ್ತು ವಿಮಾ ನಗದು ಸಾಲದ ಹಣ * ರೂ.
(...................................................................................................................................................) ರೂಪಾಯಿಗಳಿಗೆ ಅಡ್ಡಗೆರೆ ಹಾಕಿದ ಹುಂಡಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್, ಬೆಂಗಳೂರು/ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು/ಹೈದರಾಬಾದ್/ಇಂಡಿಯಾ/ತಾಲ್ಲೂಕು ಖಜಾನೆ ......................... ಇಲ್ಲಿಗೆ ಪಡೆದಿರುತ್ತೇನೆ.
20 ಪೈ. ರೆವಿನ್ಯೂ ಸ್ಟಾಂಪ್ ದಿನಾಂಕ ............................ ತಿಂಗಳು ............................ ವರ್ಷ .................
ಸಹಿ ....................................................
ಹಣ ಪಡೆಯುವವರ ಪೂರ್ಣ ಸಹಿ ಮತ್ತು ವಿಳಾಸ ಹುದ್ದೆ ಮೊಹರಿನೊಂದಿಗೆ .............................. .............................................................................
.............................................................................
.............................................................................
- ಇದು ಪೂರ್ಣ ಮೊಬಲಗಿಗೆ ಅನ್ವಯಿಸುತ್ತದೆ.
- ಇದು ಪೂರ್ಣ ಮೊಬಲಗಿಗೆ ಅನ್ವಯಿಸುತ್ತದೆ. .............................................................................
- ಈ ಸ್ವೀಕರ್ತರ ರಸೀದಿಗೆ ವಿಮಾದಾರರ ಮೇಲಧಿಕಾರಿಗಳ/ರಾಜ್ಯ ಪತ್ರಿತ ಅಧಿಕಾರಿಗಳ ಸಮ್ಮುಖದಲ್ಲಿ ಮತ್ತು ಹಕ್ಕುದಾರರು ವಾಸಿಸುವ ಸ್ಥಳದ ದಂಡಾಧಿಕಾರಿಗಳು / ಜಿಲ್ಲಾಧಿಕಾರಿಗಳು ಅಥವಾ ಸ್ಥಳಿಯ ಅಥವಾ ಜಿಲ್ಲಾ ನ್ಯಾಯಾಧೀಶರ ಸಮ್ಮುಖದಲ್ಲಿ ಸಹಿ ಮಾಡತಕ್ಕದ್ದು.
- ವಿಮಾದಾರರೇ ಸ್ವಯಂ ರಾಜ್ಯ ಪತ್ರಿತ ಅಧಿಕಾರಿಗಳಾಗಿದ್ದಲ್ಲಿ ಸಾಕ್ಷಿಯ ಸಹಿ ಅಗತ್ಯವಿರುವುದಿಲ್ಲ.
- ಮಹಿಳೆಯರು ಸಹಿ ಮಾಡುವ ಸಂದರ್ಭದಲ್ಲಿ ತಂದೆ/ಗಂಡನ ಹೆಸರನ್ನು ತಮ್ಮ ಹೆಸರಿನ ಮುಂದೆ ಶ್ರೀ ...................................................................................................... ರವರ ಮಗಳು/ದಿ/ಶ್ರೀ ............................................................................. ರವರ ಪತ್ನಿ ಎಂಬುದಾಗಿ ನಮೂದಿಸಬೇಕು.
- ಅನಕ್ಷರಸ್ಥರಾಗಿದ್ದರೆ ಎಡಗೈ ಹೆಬ್ಬೆರಳಿನ ಗುರ್ತನ್ನು ಪೂರ್ಣ ಗುರುತಿನೊಡನೆ ಆತನ/ಆಕೆಯ ತಂದೆಯ ಅಥವಾ ಮಹಿಳೆಯಾಗಿದ್ದರೆ ಗಂಡನ ಹೆಸರನ್ನು ಅಥವಾ ತಂದೆಯ ಹೆಸರನ್ನು ನಮೂದಿಸತಕ್ಕದ್ದು. ಸಾಲದ ಮಂಜೂರಾತಿಗಾಗಿ ಷರತ್ತುಗಳು 1. ಪಾಲಿಸಿಯು ಅರ್ಜಿಯ ದಿನಾಂಕದಂದು ಕನಿಷ್ಟ 3 ಪೂರ್ಣ ವರ್ಷಗಳ ಅವಧಿಗೆ ಜಾರಿಯಲ್ಲಿರತಕ್ಕದ್ದು.
- ಅರ್ಜಿದಾರರು ನಿಯಮಗಳ ಪ್ರಕಾರ ವಿಮೆ ಮಾಡಿಸದಿದ್ದರೆ ಅಂದರೆ ಕಡಿಮೆ ವಿಮೆ ಮಾಡಿಸಿದ್ದರೆ ಅವರು ಸಾಲಕ್ಕೆ ಅರ್ಹರಾಗಿರುವುದಿಲ್ಲ.
- ಯಾವುದೇ ಪಾಲಿಸಿಯ ಮೇಲೆ ಒಂದು ಸಲಕ್ಕೆ 100 ರೂಪಾಯಿಗಳಿಗಿಂತ ಕಡಿಮೆ ಸಾಲವನ್ನು ಕೊಡಲಾಗುವುದಿಲ್ಲ. ಮಂಜೂರು ಮಾಡಬಹುದಾದ ಮುಂದಿನ ಸಾಲಗಳು ಕನಿಷ್ಠ ನಿವ್ವಳ ಮೊತ್ತ 200 ರೂ.ಗಳು.
- ಸಾಲವನ್ನು ಮತ್ತು ಯಥಾ ವಿಧಿಯ ಮಾಸಿಕ ವಿಮಾ ಕಂತಿನೊಂದಿಗೆ ಸಾಲದ ಬಡ್ಡಿಯನ್ನು 48 ಕಂತುಗಳಿಗೆ ಮೀರದಂತೆ ಸಮಾನ ಕಂತುಗಳಲ್ಲಿ ವಿಮೆ ಮಾಡಿಸಿದವರ ಸಂಬಳದಿಂದ ವ್ಯವಕಲನ ಮಾಡುವ ಮೂಲಕ ವಸೂಲಿ ಮಾಡತಕ್ಕುದು.
- ಸಾಲವನ್ನು ಮೂಲ ಪಾಲಿಸಿಯ ಅಥವಾ 1958ನೇ ಸಾಲಿನ ಕರ್ನಾಟಕ ಸರ್ಕಾರಿ ನೌಕರರ (ಕಡ್ಡಾಯ ಜೀವ ವಿಮೆ) ನಿಯಮಗಳ ನಿಯಮ 28(ಅ)ಯ ಮೇರೆಗೆ ಪಡೆಯಲಾದ ಒಂದು ದ್ವಿಪ್ರತಿಯ ಮೇಲೆ ಮಾತ್ರ ಮಂಜೂರು ಮಾಡಲಾಗುವುದು.
- ವಿಮೆ ಮಾಡಿದ ವ್ಯಕ್ತಿಯು ಪಾಲಿಸಿಯನ್ನು ಗೃಹ ನಿರ್ಮಾಣ ಮುಂಗಡ, ಗೃಹ ದುರಸ್ತಿ ಮುಂಗಡ, ಗೃಹ ಖರೀದಿ ಮುಂಗಡಗಳನ್ನು ಪಡೆಯುವುದಕ್ಕಾಗಿ ಒಂದು ಭದ್ರತೆಯಾಗಿ ಕೊಟ್ಟಿದ್ದರೆ ಅದರ ಮೇಲೆ ಯಾವುದೇ ಸಾಲವನ್ನು ಕೊಡಲಾಗುವುದಿಲ್ಲ.
- ಹಿಂದಿನ ಸಾಲದ ಮಂಜೂರಾತಿಯ ದಿನಾಂಕದಿಂದ ನಲವತ್ತು ತಿಂಗಳುಗಳೊಳಗಾಗಿ ಯಾವುದೇ ಸಾಲವನ್ನು ಮಂಜೂರು ಮಾಡಲಾಗುವುದಿಲ್ಲ. ನಮೂನೆ-ಬಿ (42ನೇ ನಿಯಮವನ್ನು ನೋಡಿ)
ಹಸ್ತಾಂತರಣ ನಮೂನೆ (ಪಾಲಿಸಿಯ ಹಿಂಭಾಗದ ಮೇಲೆ ಬರೆದುಕೊಟ್ಟಿರದಿದ್ದರೆ ಯುಕ್ತ ಮೌಲ್ಯದ ಸ್ಟಾಂಪು ಕಾಗದದ ಮೇಲೆ ಬರೆದುಕೊಡಬೇಕು).
.................................................... ಎಂಬುವರ ಮಗನಾದ / ಮಗಳಾದ ............................................... ವಯಸ್ಸಿನ ................................................... ಎಂಬ ನಾನು, ................................................................. ದಿನಾಂಕದ ಆದೇಶ ಸಂಖ್ಯೆ ............................................ ರ ಮೇರೆಗೆ ಕರ್ನಾಟಕ ಸರ್ಕಾರದ ವಿಮಾ ಇಲಾಖೆಯಲ್ಲಿ ನಾನು ತೆಗೆದುಕೊಂಡ/ತೆಗೆದುಕೊಳ್ಳುವ ಸಾಲಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಸರ್ಕಾರದ ಜೀವ ವಿಮಾ ಇಲಾಖೆಯ ನಿರ್ದೇಶಕರು, ನನ್ನ ಜೀವದ ಮೇಲೆ .................................... ರೂಪಾಯಿಗಳ ಮೊತ್ತಕ್ಕಾಗಿ (ವಿಮಾ ಮೊತ್ತವನ್ನು ನಮೂದಿಸಬೇಕು) ನೀಡಿದ .............................................................. ದಿನಾಂಕದ ....................................... ಸಂಖ್ಯೆಯ ಪಾಲಿಸಿಯಲ್ಲಿನ ನನ್ನ ಎಲ್ಲ ಹಕ್ಕು, ಸ್ವಾಮ್ಯ ಮತ್ತು ಹಿತಾಸಕ್ತಿಯನ್ನು ಮತ್ತು ಪಾಲಿಸಿಯ ಮೂಲಕ ಅಥವಾ ಅದರ ಮೇರೆಗೆ ವಿಮೆ ಮಾಡಲಾದ ಅಥವಾ ಸಂದಾಯ ಮಾಡಬೇಕಾದ ಎಲ್ಲ ಹಣವನ್ನು ಕರ್ನಾಟಕ ರಾಜ್ಯಪಾಲರಿಗೆ (ಇಲ್ಲಿ ಇನ್ನು ಮುಂದೆ ಕರ್ನಾಟಕ ಸರ್ಕಾರ ವಿಮಾ ಇಲಾಖೆಯೆಂದು ಕರೆಯಲಾಗುವ) ಪ್ರಯೋಜನಕಾರಿ ಒಡೆಯರಾಗಿ ಈ ಮೂಲಕ ಹಸ್ತಾಂತರಣ ಮಾಡುತ್ತೇನೆ ಮತ್ತು ವರ್ಗಾಯಿಸುತ್ತೇನೆ ಮತ್ತು ಸದರಿ ಪಾಲಿಸಿಯ ಮೇರೆಗೆ ಅಥವಾ ಅದರ ಸಂಬಂಧವಾಗಿ ಕರ್ನಾಟಕ ಸರ್ಕಾರ ವಿಮಾ ಇಲಾಖೆಯು ಸ್ವೀಕರಿಸಬೇಕಾದ ಅಥವಾ ಸರಿಹೊಂದಿಸಬೇಕಾದ ಹಣದ ಯಾವುದೇ ಮೊತ್ತ ಅಥವಾ ಮೊತ್ತಗಳಿಗಾಗಿ ಕರ್ನಾಟಕ ಸರ್ಕಾರ ವಿಮಾ ಇಲಾಖೆಯು ಪಡೆದ ಸ್ವೀಕೃತಿ ಅಥವಾ ಸ್ವೀಕೃತಿಗಳು ಅಥವಾ ಪುಸ್ತಕ ಹೊಂದಾಣಿಕೆಯು ಅಂಥ ಹಣದ ವಿನಿಯೋಗದ ಸಂಬಂಧದಲ್ಲಿ ಅಂಥ ಸ್ವೀಕೃತಿಗಳು ಅಥವಾ ಹೊಂದಾಣಿಕೆಗಳನ್ನು ನನ್ನಿಂದ, ನನ್ನ ಉತ್ತರಾಧಿಕಾರಿಗಳು, ಕಾರ್ಯ ನಿರ್ವಾಹಕರು, ಆಡಳಿತಗಾರರು ಅಥವಾ ಹಸ್ತಾಂತರಣ ಪಡೆದವರಿಂದ ಹಸ್ತಾಂತರಿಸಲಾಗಿದ್ದರೆ ಅಥವಾ ಪರಿಣಾಮಗೊಳಿಸಲಾಗಿದ್ದರೆ ಹೇಗೋ ಹಾಗೆ ಅಷ್ಟೇ ಪರಿಣಾಮಕಾರಿಯಾಗಿ ಮತ್ತು ಅದೇ ಆಶಯಗಳು ಮತ್ತು ಉದ್ದೇಶಗಳಿಗಾಗಿ ವಿಮಾ ಇಲಾಖೆಯನ್ನು ಪೂರ್ಣ ಜವಾಬ್ದಾರಿಯಿಂದ ವಿಮೋಚನೆಗೊಳಿಸತಕ್ಕುದೆಂದು ಘೋಷಿಸುತ್ತೇನೆ.
ಉಕ್ತಪಾಲಿಸಿಯನ್ನು ಶೂನ್ಯಗೊಳಿಸುವ ಅಥವಾ ಶೂನ್ಯಗೊಳಿಸಬಹುದಾದ ಅಥವಾ ಉಕ್ತ ಸರ್ಕಾರಿ ವಿಮಾ ಇಲಾಖೆಯು ಪಾಲಿಸಿ ಹಣವನ್ನು ಅಥವಾ ಅದರ ಯಾವುದೇ ಭಾಗವನ್ನು ಸ್ವೀಕರಿಸುವುದನ್ನು ಅಥವಾ ಸರಿಹೊಂದಿಸುವುದನ್ನು ಪ್ರತಿಬಂಧಿಸಬಹುದಾದ ಯಾವುದೇ ಕಾರ್ಯವನ್ನು ಮಾಡುವುದಿಲ್ಲ ಅಥವಾ ತಿಳಿದೂ ಮಾಡಲು ಅವಕಾಶ ನೀಡುವುದಿಲ್ಲವೆಂದು ನಾನು ಈ ಮೂಲಕ ಒಪ್ಪಂದ ಮಾಡಿಕೊಳ್ಳುತ್ತೇನೆ.
ಪರಂತು, ಉಕ್ತ ಶ್ರೀ/ಶ್ರೀಮತಿ ................................................................................ ಆದ ನಾನು, ನನ್ನ ಉತ್ತಾರಾಧಿಕಾರಿಗಳು, ಕಾರ್ಯನಿರ್ವಾಹಕರು ಮತ್ತು ಹಸ್ತಾಂತರಣ ಪಡೆದವರು, ಕರ್ನಾಟಕ ಸರ್ಕಾರದ ವಿಮಾ ಇಲಾಖೆಯ ಪುಸ್ತಕದಲ್ಲಿ ನನ್ನ ಲೆಕ್ಕದಲ್ಲಿ ಬಾಕಿಯಿರುವ ಸಾಲಗಳನ್ನು ಯಾವುದೇ ಸಮಯದಲ್ಲಿ ಬಡ್ಡಿಯೊಂದಿಗೆ ನಗದು ರೂಪದಲ್ಲಿ ಅಥವಾ ಸಂದಾಯ ಮಾಡಬೇಕಾದ ಪಾಲಿನ ಹಣದಿಂದ ಸರಿ ಹೊಂದಿರುವುದರ ಮೂಲಕ ಪೂರ್ಣವಾಗಿ ಮತ್ತು ಮರುಪಾವತಿ ಮಾಡುವ ಹಕ್ಕನ್ನು ಕಾಯ್ದಿರಿಸಿಕೊಳ್ಳುತ್ತೇನೆ ಮತ್ತು ತದನಂತರ ನನ್ನ ಉತ್ತರಾಧಿಕಾರಿಗಳು, ಕಾರ್ಯನಿರ್ವಾಹಕರು, ಆಡಳಿತಗಾರರು ಮತ್ತು ಹಸ್ತಾಂತರಣ ಪಡೆದವರ ಪರವಾಗಿ ಪುನಃ ಪಾಲಿಸಿಯ ಹಸ್ತಾಂತರಣವನ್ನು ಪಡೆದುಕೊಳ್ಳಲಾಗುವುದು.
ದಿನಾಂಕ:
ಸ್ಥಳ: ಸಹಿ: ........................................................
ಸಹಿ:
ಸಾಕಿ: ೦) ಹಸ್ತಾಂತರಣ ಮಾಡುವವನ/ಳ ಸಹಿ ಸಾಕ್ಷಿ: ಹಸ್ತಾಂತರಣ ಮಾಡುವವನ/ಳ ಸಹಿ ಪದನಾಮ:
ಪದನಾಮ:
ಪದನಾಮ: ಪದನಾಮ:
ವಿಳಾಸ: ವಿಳಾಸ:
ಕೋಷ್ಟಕ-1 ವಿಮಾದಾರನಿಗೆ/ಳಿಗೆ 55 ವರ್ಷಗಳು ತುಂಬಿದ ನಂತರ ಅಥವಾ ಅದಕ್ಕೂ ಮೊದಲು ಮರಣ ಸಂಭವಿಸಿದರೆ ಕೇವಲ 1 ರೂಪಾಯಿಯ ಮಾಸಿಕ ವಿಮಾ ಕಂತಿಗೆ ವಿಮೆ ಮಾಡಿದ ಮೊಬಲಗಿಗೆ ಲಾಭಗಳೊಂದಿಗೆ ಸಂದಾಯ ಮಾಡಬೇಕಾದ ಸಾವಧಿ ವಿಮೆಗಳು.
| ವಯಸ್ಸು | ವಿಮೆ ರೂ.ಗಳಲ್ಲಿ | ವಯಸ್ಸು | ವಿಮೆ ರೂ.ಗಳಲ್ಲಿ | ವಯಸ್ಸು | ವಿಮೆ ರೂ.ಗಳಲ್ಲಿ | ವಯಸ್ಸು | ವಿಮೆ ರೂ.ಗಳಲ್ಲಿ | ವಯಸ್ಸು | ವಿಮೆ ರೂ.ಗಳಲ್ಲಿ |
| 20 | 436 | 27 | 338 | 34 | 247 | 41 | 161 | 49 | 66 |
| 21 | 422 | 28 | 324 | 35 | 235 | 42 | 149 | 50 | 54 |
| 22 | 408 | 29 | 311 | 36 | 222 | 43 | 137 | ||
| 23 | 394 | 30 | 298 | 37 | 210 | 44 | 126 | ||
| 24 | 380 | 31 | 285 | 38 | 198 | 45 | 115 | ||
| 25 | 366 | 32 | 272 | 39 | 185 | 46 | 99 | ||
| 26 | 352 | 33 | 259 | 40 | 173 | 47 | 87 | ||
| 48 | 77 |
ಕೋಷ್ಟಕ-2 ಬಿಟ್ಟು ಬಿಡಲಾಗಿದೆ.
ಕೋಷ್ಟಕ-3 55ನೇ ವರ್ಷ ವಯಸ್ಸಿನಲ್ಲಿ ಪಾಲಿಸಿಯ ಅವಧಿ ಪೂರ್ಣಗೊಳ್ಳುವ ಸಂದಾಯವಾದ ಪಾಲಿಸಿಗೆ ಅನ್ವಯವಾಗುವ ಒಂದೇ ವಿಮಾ ಕಂತು.
| ವಯಸ್ಸು | ಒಂದೇ ವಿಮಾ ಕಂತು | ವಯಸ್ಸು | ವಯಸ್ಸು | ಒಂದೇ ವಿಮಾ ಕಂತು | ವಯಸ್ಸು | ವಯಸ್ಸು | ಒಂದೇ ವಿಮಾ ಕಂತು | ವಯಸ್ಸು | ವಯಸ್ಸು | ಒಂದೇ ವಿಮಾ ಕಂತು | ವಯಸ್ಸು |
| 20 | .40891 | 20 | 29 | .50820 | 29 | 38 | .63405 | 38 | 47 | .79918 | 47 |
| 21 | .41883 | 21 | 30 | .52072 | 30 | 39 | .65014 | 39 | 48 | .82087 | 48 |
| 22 | .42901 | 22 | 31 | .53357 | 31 | 40 | .66673 | 40 | 49 | .84339 | 49 |
| 23 | .43947 | 23 | 32 | .54676 | 32 | 41 | .68384 | 41 | 50 | .86680 | 50 |
| 24 | .45020 | 24 | 33 | .56032 | 33 | 42 | .70150 | 42 | 51 | .89116 | 51 |
| 25 | .46122 | 25 | 34 | .57424 | 34 | 43 | .71973 | 43 | 52 | .91657 | 52 |
| 26 | .47251 | 26 | 35 | .58855 | 35 | 44 | .73858 | 44 | 53 | .94310 | 53 |
| 27 | .48411 | 27 | 36 | .60329 | 36 | 45 | .75809 | 45 | 54 | .97087 | 54 |
| 28 | .49600 | 28 | 37 | .61845 | 37 | 46 | .77827 | 46 |
ಕೋಷ್ಟಕ-3(ಎ) (ಸರ್ಕಾರಿ ಆದೇಶ ಸಂಖ್ಯೆ: ಎಫ್ಡಿ 124 ಪಿಐಡಿ 76, ದಿನಾಂಕ 21ನೇ ಅಕ್ಟೋಬರ್ 1978) ಐವತ್ತೆಂಟನೇ ವರ್ಷದ ವಯಸ್ಸಿನಲ್ಲಿ ಅವಧಿ ಪೂರ್ಣಗೊಳ್ಳುವ ಸಂದಾಯವಾದ ಪಾಲಿಸಿಗೆ ಅನ್ವಯವಾಗುವ ಒಂದೇ ವಿಮಾ ಕಂತು.
| ವಯಸ್ಸು | ಒಂದೇ ವಿಮಾ ಕಂತು | |||||||
| 47 | ... | .72117 | ||||||
| 48 | ... | .74205 | ||||||
| 49 | ... | .76360 | ||||||
| 50 | ... | .78587 | ||||||
| 51 | ... | .80892 | ||||||
| 52 | ... | .83281 | ||||||
| 53 | ... | .85763 | ||||||
| 54 | ... | .88348 | ||||||
| 55 | ... | .91048 | ||||||
| 56 | ... | .93876 | ||||||
| 57 | ... | .96852 |
| ವಯಸ್ಸು | ಗುಣಾಕಾರ ಅಂಶ | ವಯಸ್ಸು | ಗುಣಾಕಾರ ಅಂಶ | ವಯಸ್ಸು | ಗುಣಾಕಾರ ಅಂಶ | ವಯಸ್ಸು | ಗುಣಾಕಾರ ಅಂಶ | ||||||||||||||||||||||||||||||||
| 20 | .16862 | 32 | .24110 | 44 | .34161 | 56 | .47743 | ||||||||||||||||||||||||||||||||
| 21 | .17371 | 33 | .24824 | 45 | .35152 | 57 | .49015 | ||||||||||||||||||||||||||||||||
| 22 | .17900 | 34 | .25561 | 46 | .36171 | 58 | |||||||||||||||||||||||||||||||||
ನಮೂನೆ-ಸಿ (23ನೇ ನಿಯಮವನ್ನು ನೋಡಿ) ಮೃತ ವಿಮಾದಾರರು ಹೊಂದಿದ್ದ ಪಾಲಿಸಿಯ ಮೇಲೆ ಬಾಕಿಯಿರುವ ವಿಮಾ ಹಣವನ್ನು ಪಡೆಯುವುದಕ್ಕಾಗಿ ನಷ್ಟಭರ್ತಿ ಬಂಧ ಪತ್ರದ ನಮೂನೆ.
ನಷ್ಟ ಭರ್ತಿ ಬಂಧ ಪತ್ರ ಇಲ್ಲಿ ಇನ್ನು ಮುಂದೆ ಸ್ವೀಕರ್ತನೆಂದು ಕರೆಯಲಾಗುವ (ಈ ಪದವು ಅವನ / ಅವಳ ಉತ್ತರಾಧಿಕಾರಿಗಳು ಮತ್ತು ಪ್ರತಿನಿಧಿಗಳನ್ನು ಒಳಗೊಳ್ಳುತ್ತದೆ) ............................................................................................... ನಲ್ಲಿ ವಾಸವಾಗಿರುವ ................................................... ವೃತ್ತಿಯಲ್ಲಿರುವ ............................................ ವಯಸ್ಸಿನ ................................................. ಎಂಬುವರ ಮಗನಾದ / ಮಗಳಾದ ಶ್ರೀ / ಶ್ರೀಮತಿ .............................................. ಅವರು ಮತ್ತು ಇಲ್ಲಿ ಇನ್ನು ಮುಂದೆ ಜಾಮೀನುದಾರರೆಂದು ಕರೆಯಲಾಗುವ (ಈ ಪದವು ಅವರ ಉತ್ತರಾಧಿಕಾರಿಗಳು, ಹಸ್ತಾಂತರಣ ಪಡೆದವರು ಮತ್ತು ಪ್ರತಿನಿಧಿಗಳನ್ನು ಒಳಗೊಳ್ಳತಕ್ಕುದು),.................................................................. ನಲ್ಲಿ ವಾಸವಾಗಿರುವ ...................................................... ವೃತ್ತಿಯಲ್ಲಿರುವ .......................................... ವಯಸ್ಸಿನ ............................................ ಎಂಬುವರ ಮಗ/ಳು (i) ಶ್ರೀ/ಶ್ರೀಮತಿ .............................................. ಅವರು ಕರ್ನಾಟಕ ರಾಜ್ಯಪಾಲರಿಗೆ (ಇಲ್ಲಿ ಇನ್ನು ಮುಂದೆ ಸರ್ಕಾರವೆಂದು ಕರೆಯಲಾಗುವ) 19........ರ .............. ತಿಂಗಳ ............................ ದಿನದಂದು ಬರೆದುಕೊಟ್ಟ ಒಪ್ಪಂದ.
ಕರ್ನಾಟಕ ಸರ್ಕಾರ ವಿಮಾ ಇಲಾಖೆಯಲ್ಲಿ ಮೃತ ವಿಮಾದಾರ ............................................................. ಹೊಂದಿದ್ದ ......................................................... ಸಂಖ್ಯೆಯ / ಸಂಖ್ಯೆಗಳ ಪಾಲಿಸಿ / ಪಾಲಿಸಿಗಳ ಮೇರೆಗೆ ಉಕ್ತ ವಿಮಾದಾರನ / ಳ ಕಾನೂನು ಸಮ್ಮತ ಉತ್ತರಾಧಿಕಾರಿಗಳಿಗೆ ........................................................ ರೂಪಾಯಿಗಳನ್ನು (................................ ರೂಪಾಯಿಗಳು) ಸಂದಾಯ ಮಾಡಬೇಕಾಗಿರುವುದರಿಂದ ;
ಮತ್ತು ಸ್ವೀಕರ್ತನು/ಳು ಮೃತ ವಿಮಾದಾರನ ಕಾನೂನು ಸಮ್ಮತ ಉತ್ತರಾಧಿಕಾರಿಯೆಂದು ನಿರೂಪಿಸಿ ಪೂರ್ಮೋಕ್ತ ಮೊತ್ತದ ಸಂದಾಯಕ್ಕಾಗಿ ಅವನು/ಅವಳು ಕ್ಲೇಮು ಮಾಡಿರುವುದರಿಂದ; ಮತ್ತು ಇಲ್ಲಿ ಇನ್ನು ಮುಂದೆ ಕಂಡುಬರುವ ಸ್ವರೂಪದ ಒಡಂಬಡಿಕೆಯನ್ನು ಜಾಮೀನುದಾರರೊಂದಿಗೆ ಸ್ವೀಕರ್ತನು/ಳು ಬರೆದುಕೊಟ್ಟ ತರುವಾಯ ಮೃತ ವಿಮಾದಾರನ ಕಾನೂನು ಸಮ್ಮತ ಉತ್ತರಾಧಿಕಾರಿಗೆ ಪೂರ್ಮೋಕ್ತ ಮೊತ್ತವನ್ನು ಸಂದಾಯ ಮಾಡಲು ಕರ್ನಾಟಕ ಸರ್ಕಾರ ವಿಮಾ ಇಲಾಖೆಯ ನಿರ್ದೇಶಕರು ಒಪ್ಪಿರುವುದರಿಂದ ;
ಮತ್ತು ಸಾಕ್ಷಿದಾರರು ಸ್ವೀಕರ್ತನಿಗೆ/ಳಿಗೆ ಸಾಕ್ಷಿಗಳಾಗಿ ನಿಲ್ಲಲು ಮತ್ತು ಇಲ್ಲಿ ಇನ್ನು ಮುಂದೆ ಕಂಡು ಬರುವ ನಿಬಂಧನೆಗಳು ಮತ್ತು ರೀತಿಯಲ್ಲಿ ಬಂಧ ಪತ್ರವನ್ನು ಬರೆದುಕೊಡಲು ಒಪ್ಪಿರುವುದರಿಂದ;
ಸದರಿ ಒಪ್ಪಂದಕ್ಕೆ ಅನುಗುಣವಾಗಿ ಸ್ವೀಕರ್ತನಿಗೆ/ಳಿಗೆ ಹಣ ಸಂದಾಯವನ್ನು ಮಾಡಿದ ತರುವಾಯ, ಮೇಲೆ ಹೆಸರಿಸಲಾದ ಸ್ವೀಕರ್ತ ಮತ್ತು ಜಾಮೀನುದಾರರು ಜಂಟಿಯಾಗಿ ಮತ್ತು ಪ್ರತ್ಯೇಕವಾಗಿ, ಈ ಮೇಲೆ ಹೇಳಲಾದ ................................... ರೂ.ಗಳ ಮೊತ್ತಕ್ಕೆ ಸಂಬಂಧಿಸಿದಂತೆ ಇತರ ಯಾವನೇ/ಳೇ ವ್ಯಕ್ತಿಯು ಸರ್ಕಾರಕ್ಕೆ ಕ್ಲೇಮು ಸಲ್ಲಿಸಿದ ಸಂದರ್ಭದಲ್ಲಿ ಉಕ್ತ ............................. ರೂ.ಗಳ ಮೊತ್ತವನ್ನು ಸರ್ಕಾರಕ್ಕೆ ಮರುಪಾವತಿ ಮಾಡತಕ್ಕುದು ಮತ್ತು ಅನ್ಯಥಾ ನಷ್ಟಭರ್ತಿ ಮಾಡತಕ್ಕುದು ಮತ್ತು ಈ ಮೇಲೆ ಹೇಳಲಾದ ಮೊತ್ತ ಮತ್ತು ಅದರ ಕ್ಲೇಮಿನ ಪರಿಣಾಮವಾಗಿ ವಹಿಸಲಾದ ಎಲ್ಲ ವೆಚ್ಚಗಳಿಗೆ ಸಂಬಂಧಿಸಿದಂತೆ ಅನ್ಯಥಾ ನಷ್ಟಭರ್ತಿ ಮಾಡತಕ್ಕುದು ಮತ್ತು ಸರ್ಕಾರಕ್ಕೆ ನಷ್ಟವುಂಟುಮಾಡತಕ್ಕದಲ್ಲ ಮತ್ತು ಅವುಗಳಿಗೆ ಸಂಬಂಧಿಸಿದ ಎಲ್ಲ ಹೊಣೆಗಾರಿಕೆಗಳಿಗೆ ಮತ್ತು ಹೊಣೆಗಾರಿಕೆಗಳಿಂದ ನಷ್ಟಭರ್ತಿ ಮಾಡತಕ್ಕುದು. ಸ್ವೀಕರ್ತನು/ಳು ಅಥವಾ ಜಾಮೀನುದಾರನು/ಳು ಸರ್ಕಾರಕ್ಕೆ ಮರುಪಾವತಿ ಮಾಡಬೇಕಾದ ಮೊಬಲಗು ಯಾವುದಾದರೂ ಇದ್ದಲ್ಲಿ ಅದನ್ನು ಭೂ ಕಂದಾಯದ ಬಾಕಿಯಾಗಿದ್ದರೆ ಹೇಗೋ ಹಾಗೆ ವಸೂಲಿ ಮಾಡತಕ್ಕುದು ಎಂಬುದಕ್ಕೆ ಇದು ಸಾಕ್ಷಿಯಾಗಿರುತ್ತದೆ.
ಇದರ ಸಾಕ್ಷಿಯಾಗಿ .......................................................... ಮತ್ತು .................................... ಎಂಬ ನಾವು ಇದಕ್ಕೆ ನಮ್ಮ ಸಹಿಯನ್ನು ಹಾಕಿದ್ದೇವೆ, (1) (2) (3) ಮೇಲೆ ಹೆಸರಿಸಲಾದ ಸ್ವೀಕರ್ತ ಮತ್ತು ಜಾಮೀನು ದಾರರು ಈ ಮುಂದಿನ ಸಾಕ್ಷಿದಾರರ ಸಹಿ ಮಾಡಿದ್ದಾರೆ ಮತ್ತು ವಶಾವಣೆ ಮಾಡಿದ್ದಾರೆ:-
ಸಾಕ್ಷಿಗಳು : (1) …………………………………………………… (2) …………………………………………………… ವೃತ್ತಿ …………………………………………………… ವೃತ್ತಿ …………………………………………………… ವಿಳಾಸ……………………………………………………ವಿಳಾಸ………………………………………………… ವಿ.ಸೂ. :- ಸ್ಟಾಂಪು ಅಧಿನಿಯಮದ ಉಪಬಂಧಗಳ ಮೇರೆಗೆ ಸೂಕ್ತ ಮೌಲ್ಯದ ಸ್ಟಾಂಪು ಕಾಗದದ ಮೇಲೆ ಬರೆದುಕೊಡಬೇಕು.