ಕರ್ನಾಟಕ ಅಬಕಾರಿ (ದೇಶಿ ಮತ್ತು ವಿದೇಶಿ ಮದ್ಯಗಳ ಮಾರಾಟ) ನಿಯಮಗಳು, 1968ರ 3ನೇ ನಿಯಮದ ಉಪ-ನಿಯಮ (4)ರ 3ನೇ ಪರಂತುಕದ ತರುವಾಯ, ಈ ಮುಂದಿನ ಪರಂತುಕಗಳನ್ನು ಸೇರಿಸತಕ್ಕದ್ದು, ಎಂದರೆ:-
“ಮತ್ತು ಅಲ್ಲದೆ. 20 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಮಹಾನಗರ ಪಾಲಿಕೆಯ ಮಿತಿಯೊಳಗೆ 10,000 ಚದರ ಅಡಿಗಿಂತ ಕಡಿಮೆಯಿಲ್ಲದ ಸ್ಥಳದಲ್ಲಿ ನಮೂನೆ CL4 ನಲ್ಲಿ ಮಂಜೂರು ಮಾಡಿರುವ ಸನ್ನದುಗಳು ಮೊದಲ ಪರಂತುಕದ ಷರತ್ತು ಸಂಖ್ಯೆ (3)ರಲ್ಲಿ ನಿರ್ದಿಷ್ಟಪಡಿಸಿರುವ ಯಾವುದಾದರೂ ಸೌಲಭ್ಯಗಳನ್ನು ಹೊಂದಿರಬೇಕು, ಅಂದರೆ, ಹೊರಾಂಗಣ ಕ್ರೀಡೆಗಳು ಅಥವಾ ಒಳಾಂಗಣ ಕ್ರೀಡೆಗಳು ಅಥವಾ ಎರಡೂ:
ಮತ್ತು ಅಲ್ಲದೆ. ಮೊದಲ ಪರಂತುಕದ ಷರತ್ತು ಸಂಖ್ಯೆ (3) ರಲ್ಲಿ ನಿರ್ದಿಷ್ಟಪಡಿಸಿರುವ ಯಾವುದಾದರೂ ಸೌಲಭ್ಯಗಳನ್ನು, ಅಂದರೆ, ಹೊರಾಂಗಣ ಕ್ರೀಡೆಗಳು ಅಥವಾ ಒಳಾಂಗಣ ಕ್ರೀಡೆಗಳು ಅಥವಾ ಎರಡನ್ನೂ ಹೊಂದಿ, 20 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಮಹಾನಗರ ಪಾಲಿಕೆಯ ಮಿತಿಯೊಳಗೆ 10,000 ಚದರ ಅಡಿಗಿಂತ ಕಡಿಮೆಯಿಲ್ಲದ ಸ್ಥಳದಲ್ಲಿ ಅಸ್ತಿತ್ವದಲ್ಲಿರುವ. ನಮೂನೆ. ೮1.4 ನಲ್ಲಿನ ಸನ್ನದುಗಳನ್ನು ನವೀಕರಿಸಲು ಸಹ ಅನುಮತಿಸಲಾಗುತ್ತದೆ”.
ಕರ್ನಾಟಕದ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,
(ಮಂಜುಳಾ ನಟರಾಜ್)
ಸರ್ಕಾರದ ಅಧೀನ ಕಾರ್ಯದರ್ಶಿ,
ಆರ್ಥಿಕ ಇಲಾಖೆ (ಅಬಕಾರಿ)
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು