ಸಹಕಾರ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಸಿಎಂಡಬ್ಲ್ಯೂ 83 ಸಿಎಲ್ಎಂ 2003, ಬೆಂಗಳೂರು, ದಿನಾಂಕ: 22ನೇ ಮಾರ್ಚ್ 2004 ಕರ್ನಾಟಕ ರಾಜ್ಯಪತ್ರ ವಿಶೇಷ ಪತ್ರಿಕೆ ಸಂಖ್ಯೆ 375, ದಿನಾಂಕ: 22.3.2004
ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ಅಧಿನಿಯಮ, 2004 (2004ರ ಕರ್ನಾಟಕ ಅಧಿನಿಯಮ ಸಂಖ್ಯೆ 13) ರ ಪ್ರಕರಣ (1)ರ ಉಪ ಪ್ರಕರಣ (2) ರಡಿ ದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಸದರಿ ಅಧಿನಿಯಮದ ಎಲ್ಲಾ ಉಪಬಂಧಗಳು 22ನೇ ಮಾರ್ಚ್, 2004 ರಿಂದ ಜಾರಿಯಲ್ಲಿ ಬರುತ್ತವೆ ಎಂದು ನಿಗದಿಪಡಿಸುತ್ತದೆ.