(೧) ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ ಬೋಧನೆಯ ಗುಣಮಟ್ಟ, ಪರೀಕ್ಷೆ ಮತ್ತು ಸಂಶೋಧನೆ ಅಥವಾ ಯಾವುದೇ ವಿಷಯಗಳನ್ನು ನಿರ್ದಿಷ್ಟಪಡಿಸುವ ಉದ್ದೇಶಕ್ಕಾಗಿ, ಸರ್ಕಾರವು, ಉಪ-ಕುಲಪತಿಗಳೊಂದಿಗೆ ಸಮಾಲೋಚಿಸಿದ ನಂತರ ೩ ಖ್ಯಾತ ಶಿಕ್ಷಣ ತಜ್ಞರನ್ನು ಒಳಗೊಂಡ ಸರ್ಕಾರದಿಂದ ರಚಿತವಾದ ತಜ್ಞ ಸಮಿತಿಯ ಮೂಲಕ ಮೌಲ್ಯನಿರ್ಣಯ ಮಾಡತಕ್ಕದ್ದು. ಸದರಿ ಸಮಿತಿಯಲ್ಲಿ ಒಬ್ಬರು ರಾಜ್ಯ ಸಾರ್ವಜನಿಕ ವಿಶ್ವವಿದ್ಯಾಲಯದ ಮಾಜಿ ಉಪ-ಕುಲಪತಿಯಾಗಿರತಕ್ಕದ್ದು.
೨) ತಜ್ಞ ಸಮಿತಿಯಿಂದ ವರದಿಯನ್ನು ಸ್ವೀಕರಿಸಿದ ತರುವಾಯ, ಸರ್ಕಾರವು, ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕಾಗಿ ಮೌಲ್ಯನಿರ್ಧರಣೆಗೆ ಸಂಬಂಧಿಸಿದ ಫಲಿತಾಂಶದ ಬಗ್ಗೆ ಅದರ ಶಿಫಾರಸ್ಸುಗಳನ್ನು ತಿಳಿಸತಕ್ಕದ್ದು ಮತ್ತು ವಿಶ್ವವಿದ್ಯಾಲಯವು, ಶಿಫಾರಸ್ಸುಗಳನ್ನು ಪಾಲಿಸಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಅಗತ್ಯವಾದಂತ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳತಕ್ಕದ್ದು. ವಿಶ್ವವಿದ್ಯಾಲಯವು ಯುಕ್ತ ಕಾಲದೊಳಗೆ (2)ನೇ ಉಪ-ಪರಕರಣದ ಮೇರೆಗೆ ಮಾಡಿದ ಶಿಫಾರಸ್ಸುಗಳನ್ನು ಪಾಲಿಸಲು ವಿಫಲವಾದರೆ, ಸರ್ಕಾರವು ತಾನು ಸೂಕ್ತವೆಂದು ಭಾವಿಸಬಹುದಾದಂತೆ ಅಂತಹ ನಿರ್ದೇಶನಗಳನ್ನು ನೀಡಬಹುದು. ವಿಶ್ವವಿದ್ಯಾಲಯವು ಅದಕ್ಕೆ ಬದ್ಧವಾಗಿರತಕ್ಕದ್ದು.