ರಾಜ್ಯ ಸರ್ಕಾರವು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 296ಎ ಯಲ್ಲಿ ಕುಂದು ಕೊರತೆ ನಿವಾರಣಾ ಪ್ರಾಧಿಕಾರಿಯ ನೇಮಕಾತಿಯನ್ನು ಈ ಕೆಳಕಂಡ ವಿಧಾನದಲ್ಲಿ ಮಾಡತಕ್ಕದ್ದು. ಅಂದರೆ,-
(1) ರಾಜ್ಯ ಸರ್ಕಾರವು ಕುಂದು ಕೊರತೆ ನಿವಾರಣಾ ಪ್ರಾಧಿಕಾರಿಯನ್ನು ನೇಮಕ ಮಾಡಲು ಉದ್ದೇಶಿಸಿದಲ್ಲಿ, ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರಚಲಿತವಿರುವ ಎರಡು ದಿನಪತ್ರಿಕೆಗಳಲ್ಲಿ ಅವುಗಳಲ್ಲಿ ಕನಿಷ್ಠ ಒಂದು ಕನ್ನಡ ಭಾಷೆಯಲ್ಲಿ ಪ್ರಚಲಿತವಿರುವ ದಿನಪತ್ರಿಕೆ ಆಗಿರತಕ್ಕದ್ದು, ಅವುಗಳಲ್ಲಿ ಜಾಹಿರಾತು ನೀಡುವುದರ ಮೂಲಕ ಆರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸತಕ್ಕದ್ದು.
(2) ಬಂದಿರುವಂತಹ ಅರ್ಜಿಗಳನ್ನು ದಾಖಲಾತಿಗಳೊಂದಿಗೆ ಪರಿಶೀಲಿಸಿ ದಾಖಲೆಗಳ ಸತ್ಯಾಪನೆಯನ್ನು ಮಾಡಲು ಈ ಕೆಳಕಂಡ ಸಮಿತಿಯ ಮುಂದೆ ಇಡತಕ್ಕದ್ದು. ಅಂದರೆ : -
1 ನಿರ್ದೇಶಕರು (ಪಂ.ರಾಜ್-1) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧ್ಯಕ್ಷರು 2 ನಿರ್ದೇಶಕರು (ಪಂ.ರಾಜ್-2) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸದಸ್ಯರು 3 ಸಂಬಂಧಿಸಿದ ಸರ್ಕಾರದ ಅಧೀನ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಸಮಿತಿ ಕಾರ್ಯದರ್ಶಿ ಪಂಚಾಯತ್ ರಾಜ್ ಇಲಾಖೆ
(3) ಮೇಲ್ಕಂಡ ಸಮಿತಿಯು ಬಂದಿರುವ ಅರ್ಜಿಗಳನ್ನು ಪರಿಶೀಲನೆಯ ನಂತರ ಈ ಕೆಳಕಂಡ ಆಯ್ಕೆ ಸಮಿತಿಯ ಮುಂದೆ ಸಲ್ಲಿಸತಕ್ಕದ್ದು, ಅಂದರೆ.-
1 ಸರ್ಕಾರದ ಪ್ರದಾನ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧ್ಯಕ್ಷರು 2 ನಿರ್ದೇಶಕರು (ಪಂ.ರಾಜ್-1) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸದಸ್ಯ ಕಾರ್ಯದರ್ಶಿ 3 ನಿರ್ದೇಶಕರು (ಪಂ.ರಾಜ್-2) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸದಸ್ಯರು 4 ಉಪಕಾರ್ಯದರ್ಶಿ (ಆಡಳಿತ) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸದಸ್ಯರು 5 ಆಂತರಿಕ ಆರ್ಥಿಕ ಸಲಹೆಗಾರರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸದಸ್ಯರು, 6 ಕಾನೂನು ಕೋಶದ ಮುಖ್ಯಸ್ಥರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸದಸ್ಯರು,
(4) ನಿರ್ದೇಶಕರು (ಪಂ.ರಾಜ್-1) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರವರು ಸಮಿತಿಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸತಕ್ಕದ್ದು.
(5) ಆಯ್ಕೆ ಸಮಿತಿಯು ವಿವಿಧ ಜಿಲ್ಲೆಗಳಲ್ಲಿ ಕುಂದು ಕೊರತೆ ನಿವಾರಣಾ ಪ್ರಾಧಿಕಾರಿಯ ಆಯ್ಕೆ ಪಟ್ಟಿಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಅನುಮೋದನೆ ಪಡೆದು ನಂತರ ಪ್ರಕಟಿಸತಕ್ಕದ್ದು.
ಸದಸ್ಯ ಕಾರ್ಯದರ್ಶಿಯು ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾದ ಕುಂದು ಕೊರತೆ ನಿವಾರಣಾ ಪ್ರಾಧಿಕಾರಿಯವರಿಗೆ ನೇಮಕಾತಿ ಆದೇಶವನ್ನು ಕಳುಹಿಸತಕ್ಕದ್ದು.
PR - 687 SC - 500
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ಮುಬಾರಕ್ ಅಹ್ಮದ್ ಉಪನಿರ್ದೇಶಕರು ಹಾಗೂ ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ.