ಕರ್ನಾಟಕ ಸರ್ಕಾರಿ ನೌಕರರ (ಕಡ್ಡಾಯ ಜೀವ ವಿಮಾ) ನಿಯಮಗಳು, 1958ರ ನಿಯಮ 8ಕ್ಕೆ ಕಳಕಂಡ ನಿಯಮವನ್ನು ಪ್ರತಿಯೋಜಿಸತಕ್ಕದ್ದು, ಅಂದರೆ:-
“8. ಸರ್ಕಾರಿ ನೌಕರರ ಹುದ್ದೆಯ ಅನ್ವಯವಾಗುವ ವೇತನ ಶ್ರೇಣಿಯ ಸರಾಸರಿ ವೇತನದ ಶೇಕಡಾ ಆರೂಕಾಲು (6.25%) ಭಾಗದಷ್ಟು ಮೊಬಲಗನ್ನು ಮಾಸಿಕ ಕಡ್ಡಾಯ ಜೀವ ವಿಮಾ ಕಂತನ್ಮಾಗಿ ಪಾವತಿಸತಕ್ಕದ್ದು ಹಾಗೂ BOSD ಮೊಬಲಗನ್ನು ವೇತನ ಬಟವಾಡೆ ಅಧಿಕಾರಿಗಳು ಪ್ರತಿ ಮಾಹೆ ಪಾಲಿಸಿದಾರರ ವೇತನದಿಂದ ಕಟಾಯಿಸತಕ್ಕದ್ದು.
(1) ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯಲ್ಲಿ ಜೀವ ವಿಮೆ ಮಾಡಿಸಿರುವ ಅಥವಾ ಮಾಡಿಸುವ ಸರ್ಕಾರಿ ನೌಕರ ಕಡ್ಡಾಯವಾಗಿ ಪಾವತಿಸಬೇಕಾದ ಮಾಸಿಕ ವಿಮಾ ಕಂತಿನ ಕನಿಷ್ಠ ದರವನ್ನು ಈ ಕೆಳಗಿನ ಕೋಷ್ಟಕದಲ್ಲಿ ಸೂಚಿಸಿರುವಂತೆ ಸಂಬಂಧಪಟ್ಟ ಸರ್ಕಾರಿ ನೌಕರ ಧಾರಣ ಮಾಡಿರುವ ಹುದ್ದೆಯ ವೇತನ ಶ್ರೇಣಿಗೆ ಅನುಗುಣವಾಗಿ ನಿಗದಿಗೊಳಿಸತಕ್ಕದ್ದು.
ಕೋಷ್ಟಕ
| 舌j | (α.ne) | OUC(αO.) |
| 1 | 17000-28950 | 1440 |
| 2 | 18600-32600 | 1600 |
| 3 | 19950-37900 | 1810 |
| 4 | 21400-42000 | 1980 |
| 5 | 23500-47650 | 2220 |
| 6 | 25800-51400 | 2410 |
| 7 | 27650-52650 | 2510 |
| 8 | 30350-58250 | 2770 |
| 9 | 33450-62600 | 3000 |
| 10 | 36000-67550 | 3240 |
| 11 | 37900-70850 | 3400 |
| 12 | 40900-78200 | 3720 |
| 13 | 43100-83900 | 3940 |
| 14 | 45300-88300 | 4180 |
| 15 | 48900-92700 | 4430 |
| 16 | 52650-97100 | 4680 |
| 17 | 56800-99600 | 4890 |
| 18 | 61150-102100 | 5100 |
| 19 | 67550-104600 | 5380 |
| 20 | 70850-107100 | 5560 |
| 21 | 74400-109600 | 5750 |
| 22 | 82000-117700 | 6240 |
| 23 | 90500-123300 | 6680 |
| 24 | 97100-141300 | 7450 |
| 25 | 104600-150600 | 7980 |
(3) ಸರ್ಕಾರಿ ನೌಕರ ಧಾರಣ ಮಾಡಿರುವ ವೇತನ ಶ್ರೇಣಿಗಿಂತ ಹೆಚ್ಚು ವೇತನ ಶ್ರೇಣಿಯುಳ್ಳ ಒಂದು ಹುದ್ದೆಗೆ ಬಡ್ತಿ ಹೊಂದಿದರೆ ಅಥವಾ ನೇಮಕ ಹೊಂದಿದರೆ ಹಾಗೂ ಆತನಿಗೆ ಮೊದಲಿನ ಹುದ್ದೆಗೆ ಹಿಂಬಡ್ತಿ ನೀಡುವ ಸಂಭವ ಇಲ್ಲದಿದ್ದರೆ, ಆತನು ಬಡ್ತಿ ಹೊಂದಿದ ಅಥವಾ ನೇಮಕಗೊಂಡ ಹುದ್ದೆಗೆ ಅನ್ವಯಿಸುವ ವೇತನ ಶ್ರೇಣಿಗೆ ನಿಗದಿಪಡಿಸಲಾದ ಕನಿಷ್ಠ ಮಾಸಿಕ ಕಂತಿನ ಮೊಬಲಗಿಗೆ ಉಂಟಾಗುವ ವ್ಯತ್ಯಾಸದ ಮೊತ್ತಕ್ಕಾಗಿ ವಿಮೆ ಮಾಡಿಸತಕ್ಕದ್ದು.
BOOS), ಅಂತಹ ಸರ್ಕಾರಿ ನೌಕರರಿಗೆ ಹಿಂಬಡ್ತಿ ನೀಡುವ ಸಾಧ್ಯತೆ ಇಲ್ಲವೆಂದು ನೇಮಕಾತಿ ಪ್ರಾಧಿಕಾರವು ಪ್ರಮಾಣೀಕರಿಸದ ಹೊರತು... ಆತನು ಬಡ್ತಿ ಹೊಂದಿದ ಅಥವಾ ನೇಮಕಗೊಂಡ ಹುದ್ದೆಗೆ ಅನ್ವಯಿಸುವ ವೇತನ ಶ್ರೇಣಿಗೆ ನಿಗದಿಪಡಿಸಲಾದ ಮಾಸಿಕ ವಿಮಾಕಂತಿನ ಕನಿಷ್ಠ ಮೊಬಲಗಿಗೆ ಉಂಟಾಗುವ ವ್ಯತ್ಯಾಸದ ಮೊತ್ತಕ್ಕಾಗಿ ವಿಮೆ ಮಾಡಿಸುವಂತೆ ಅನುಮತಿಸತಕ್ಕದ್ದಲ್ಲ.
(4) 1983ರ ಕರ್ನಾಟಕ ಸರ್ಕಾರಿ ಸೇವೆಗಳ (ಕಾಲಬದ್ದ ಬಡ್ತಿ) ನಿಯಮಗಳ ಅಥವಾ 1991ರ ಕರ್ನಾಟಕ ಸಿವಿಲ್ ಸೇವೆಗಳ (ಹಿರಿಯ ವೇತನ ಶ್ರೇಣಿಗೆ ಸ್ವಯಂ ಚಾಲಿತ ವಿಶೇಷ ಮುಂಬಡ್ತಿ ನೀಡುವಿಕೆ) ನಿಯಮಗಳ ಉಪಬಂಧಗಳಿಗನುಸಾರವಾಗಿ, ಸರ್ಕಾರಿ ನೌಕರರಿಗೆ ಆತ ಧಾರಣ ಮಾಡಿರುವ ಹುದ್ದೆಗೆ ನೀಡಲಾದ ಆಯ್ಕೆ ಕಾಲಿಕ ವೇತನ ಶ್ರೇಣಿಯನ್ನು ನೀಡಲಾಗಿದ್ದರೆ, ಅದಕ್ಕನುಗುಣವಾಗಿ ಸದರಿ ಆಯ್ಕೆ ಕಾಲಿಕ ವೇತನ ಶ್ರೇಣಿ ಅಥವಾ ಹಿರಿಯ ವೇತನ ಶ್ರೇಣಿಗೆ ಗೊತ್ತುಪಡಿಸಿರುವ ಕನಿಷ್ಠ ಮಾಸಿಕ ವಿಮಾ ಕಂತಿನ ಮೊಬಲಗಿಗಿಂತ ಕಡಿಮೆ ಇರದಂತೆ ವ್ಯತ್ಯಾಸದ ಮೊತ್ತಕ್ಕಾಗಿ ಆತ ವಿಮೆ ಮಾಡಿಸತಕ್ಕದ್ದು.”
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಜಿ. ಶಶಿಧರ್ ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಆಡಳಿತ ಮತ್ತು ಮುಂಗಡಗಳು).