ಕರ್ನಾಟಕ ಸಿವಿಲ್ ಸೇವಾ (ಪರಿವೀಕ್ಷಣೆ) ನಿಯಮಗಳು, 1977ರ ನಿಯಮ 5ರ ಉಪ ನಿಯಮ 2ರ ಕೊನೆಯಲ್ಲಿ ಕೆಳಗಿನ ಪರಂತುಕವನ್ನು ಸೇರಿಸತಕ್ಕದ್ದು, “ಪರಂತು, ಸಂದರ್ಭಾನುಸಾರ, ನೇಮಕಾತಿ ಪ್ರಾಧಿಕಾರವು ಉಪ-ನಿಯಮ (1)ರ ಪ್ರಕರಣ (ಐಎ) ರನ್ವಯ ಪರಿವೀಕ್ಷಣೆ ಅವಧಿಯನ್ನು ತೃಪ್ತಿಕರವೆಂದು ಘೋಷಿಸುವ ಅಥವಾ ಉಪ-ನಿಯಮ (1)d ಪ್ರಕರಣ (ಬಿ) ರನ್ವಯ ಸೇವೆಯಿಂದ ತೆಗೆದುಹಾಕುವ ಅಥವಾ ನಿಯಮ (6)d0,0d ಪರಿವೀಕ್ಷಣಾವಧಿಯಲ್ಲಿರುವಾಗಲೇ ಸೇವೆಯಿಂದ ಬಿಡುಗಡೆ ಮಾಡುವ ಆದೇಶವನ್ನು ಹೊರಡಿಸುವ ಮೊದಲೇ ಸರ್ಕಾರಿ ನೌಕರನು ವಯೋನಿವೃತ್ತಿ ವಯಸ್ಸನ್ನು ತಲುಪಿದ ಕಾರಣ ಕರ್ನಾಟಕ ಸಿವಿಲ್ ಸೇವಾ (ಪರಿವೀಕ್ಷಣೆ) (ತಿದ್ದುಪಡಿ) ನಿಯಮಗಳು, 2022 ಜಾರಿಯಾಗುವ ದಿನಾಂಕದಂದು ಅಥವಾ ಮೊದಲು ಅಥವಾ ಜಾರಿಗೊಂಡ ನಂತರ ವೋನಿವೃತ್ತಿ ಹೊಂದಿ ಸೇವೆಯಿಂದ ಸ್ಮಗಿತಗೊಂಡಿದ್ದಲ್ಲಿ, ಕೇವಲ ಪಿಂಚಣಿಯ ಉದ್ದೇಶಕ್ಕಾಗಿ ಆತನ ಪರಿವೀಕ್ಷಣಾವಧಿಯನ್ನು ಆತನ ವಯೋನಿವೃತ್ತಿಯ ದಿನಾಂಕದವರೆಗೂ ವಿಸ್ತರಿಸಲಾಗಿದೆ ಮತ್ತು ಆ ದಿನಾಂಕದಂದು ತೃಪ್ತಿಕರವಾಗಿ ಪೂರೈಸಲಾಗಿದೆ ಎಂದು ಘೋಷಿಸಲಾಗಿದೆ ಎಂದು ಪರಿಭಾವಿಸತಕ್ಕದ್ದು.
ಮತ್ತೂ ಪರಂತು, ಸಂದರ್ಭಾನುಸಾರ, ನೇಮಕಾತಿ ಪ್ರಾಧಿಕಾರಗಳು ಉಪ-ವಿಯಮ (1)d ಪ್ರಕರಣ (ಎ) ರನ್ವಯ ಪರೀಕ್ಬಾರ್ಥಿಯ ಪರಿವೀಕ್ಷಣೆ ಅವಧಿಯನ್ನು ತೃಪ್ತಿಕರವೆಂದು ಘೋಷಿಸುವ ಅಥವಾ ಉಪ-ವಿಯಮ (1)ರ ಪ್ರಕರಣ (ಬಿ) ರನ್ವಯ ಆತನನ್ನು ಸೇವೆಯಿಂದ ತೆಗೆದುಹಾಕುವ ಅಥವಾ ನಿಯಮ (6)ರನ್ವಯ ಪರಿವೀಕ್ಷಣಾವಧಿಯಲ್ಲಿರುವಾಗಲೇ ಆತನನ್ನು ಸೇವೆಯಿಂದ ಬಿಡುಗಡೆ ಮಾಡುವ ಆದೇಶವನ್ನು ಹೊರಡಿಸುವ ಆದೇಶಗಳನ್ನು ಹೊರಡಿಸುವಲ್ಲಿ ವಿಳಂಬ ಮಾಡತಕ್ಕದ್ದಲ್ಲ. ಈ ಉದ್ದೇಶಕ್ಕಾಗಿ ನೇಮಕಾತಿ ಪ್ರಾಧಿಕಾರಗಳು ಅಂತಹ ಆದೇಶಗಳನ್ನು ಹೊರಡಿಸಲು ಬಾಕಿ ಇರುವ ಪ್ರಕರಣಗಳನ್ನು ಬಿಯಮಿತವಾಗಿ ಮೇಲ್ವಿಚಾರಣೆ... ಮಾಡತಕ್ಕದ್ದು ಹಾಗೂ ಅವುಗಳನ್ನು ಕಾಲಮಿತಿಯಲ್ಲಿ ಹೊರಡಿಸಲು ಕಮವಹಿಸತಕ್ಕದ್ದು.
ಮತ್ತೂ ಪರಂತು, ಕರ್ನಾಟಕ ನಾಗರಿಕ ಸೇವಾ (ಪರಿವೀಕ್ಷಣೆ) (ತಿದ್ದುಪಡಿ) ನಿಯಮಗಳು, .2022 ಪ್ರಾರಂಭವಾದ ದಿನಾಂಕದ ನಂತರ ನೇಮಕಾತಿ ಪ್ರಾಧಿಕಾರವು ಮೊದಲನೆಯ ಮತ್ತು ಎರಡನೆಯ ಪರಂತುಕದಲ್ಲಿನ ಆಸ್ಪದಗಳನ್ನು ಪೂರ್ವ ನಿದರ್ಶನವಾಗಿ ಬಳಸತಕ್ಕದ್ದಲ್ಲ.”
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
(ವೀರಭದ್ರ) ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, (ಸೇವಾ ನಿಯಮಗಳು-1)