Annexure
ಆದ್ದರಿಂದ ಈಗ, ಭಾರತ ಸಂವಿಧಾನದ 213ನೇ ಅನುಚ್ನೇದದ (1ನೇ ಖಂಡದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ. ಕರ್ನಾಟಕದ ರಾಜ್ಯಪಾಲರು ಈ ಮುಂದಿನ ಅಧ್ಯಾದೇಶವನ್ನು ಪ್ರಖ್ಯಾಪಿಸಿದ್ದಾರೆ, ಎಂದರೆ:-
- ಸಂಕ್ಲಿಪ್ತ ಹೆಸರು ಮತ್ತು ಪ್ರಾರಂಭ.- (1) ಈ ಅಧ್ಯಾದೇಶವನ್ನು ಕರ್ನಾಟಕ ಸಾದಿಲ್ವಾರು ನಿಧಿ (ತಿದ್ದುಪಡಿ) ಅಧ್ಯಾದೇಶ, 2021 ಎಂದು ಕರೆಯತಕ್ಕದ್ದು.
(2) ಇದು ಈ ಕೂಡಲೇ ಜಾರಿಗೆ ಬರತಕ್ಕದ್ದು.
- 2ನೇ ಪ್ರಕರಣದ ತಿದ್ದುಪಡಿ.- ಕರ್ನಾಟಕ ಸಾದಿಲ್ದಾರು ವಿಧಿ ಅಧಿನಿಯಮ, 1957ರ (1957ರ ಕರ್ನಾಟಕ ಅಧಿನಿಯಮ 11) 2ನೇ ಪ್ರಕರಣದಲ್ಲಿ “ಐದು ನೂರು ಕೋಟಿ” ಎಂಬ ಪದಗಳಿಗೆ “ಒಂದು ಸಾವಿರದ ಐದು ನೂರು ಕೋಟಿ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.
The above translation of the Karnataka Contingency Fund (Amendment) Ordinance, 2021 (Karnataka Ordinance No. 05 of 2021) shall be authoritative text in the Kannada language under section 5A of the Karnataka Official Language Act, 1963 (Karnataka Act 26 of 1963)
ವಜೂಭಾಯಿ ವಾಲಾ ಕರ್ನಾಟಕದ ರಾಜ್ಯಪಾಲರು
ಕರ್ನಾಟಕ ರಾಜ್ಯಪಾಲರ ಆಹ್ನಾನುಸಾರ
ಮತ್ತು ಅವರ ಹೆಸರಿನಲ್ಲಿ
(ಕೆ.ದ್ವಾರಕನಾಥ್ ಬಾಬು)
ಸರ್ಕಾರದ ಕಾರ್ಯದರ್ಶಿ
ಸಂಸದೀಯ ವ್ಯವಹಾರಗಳು ಮತ್ತು
ಶಾಸನ ರಚನೆ ಇಲಾಖೆ
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ. ಬೆಂಗಳೂರು
By order and in the name of the Governor of Karnataka,
(K. DWARAKANATH BABU)
Secretary to Government Department of Parliamentary Affairs and Legislation
ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವಾಲಯ ಅಧಿಸೂಚನೆ ಸಂಖ್ಯೆ: ಸಂವ್ಯಶಾಇ 30 ಶಾಸನ 2021, ಬೆಂಗಳೂರು, ದಿನಾಂಕ: 05.07.2021.
The Karnataka Contingency Fund (Amendment) Ordinance, 2021 ಇದಕ್ಕೆ 2021ರ ಜುಲ್ಕೆ SONY 03ನೇ ದಿನಾಂಕದಂದು ರಾಜ್ಯಪಾಲರ ಒಪ್ಪಿಗೆ ದೊರೆತಿದ್ದು, ಸಾಮಾನ್ಯ ತಿಳುವಳಿಕೆಗಾಗಿ ಇದನ್ನು 2021ರ ಕರ್ನಾಟಕ ಅಧ್ಯಾದೇಶ ಸಂಖ್ಯೆ: 05 ಎಂಬುದಾಗಿ ದಿನಾಂಕ 05ನೇ ಜುಲೈ 2021ರಂದು ಕರ್ನಾಟಕ ವಿಶೇಷ ರಾಜ್ಯಪತ್ರದಲ್ಲಿ ಪ್ರಕಟಿಸಬೇಕೆಂದು ಆದೇಶಿಸಲಾಗಿದೆ.
2021 ರ ಕರ್ನಾಟಕ ಅಧ್ಯಾದೇಶ ಸಂಖ್ಯೆ- 05 ಕರ್ನಾಟಕ ಸಾದಿಲ್ದಾರು ನಿಧಿ (ತಿದ್ದುಪಡಿ) ಅಧ್ಯಾದೇಶ, 2021
(ಭಾರತ ಗಣರಾಜ್ಯದ DB SOBA ವರ್ಷದಲ್ಲಿ ಕರ್ನಾಟಕ ರಾಜ್ಯಪಾಲರಿಂದ ಪ್ರಖ್ಯಾಪಿತವಾಗಿ 2021 ರ 05ನೇ ದಿನಾಂಕದಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟವಾಗಿದೆ).
ಕರ್ನಾಟಕ ಸಾದಿಲ್ವಾರು ವಿಧಿಯಲ್ಲಿ ಮೊತ್ತವನ್ನು ಹೆಚ್ಚಿಸುವುದಕ್ಕಾಗಿ ಉಪಬಂಧಿಸಲು ಕರ್ನಾಟಕ ಸಾದಿಲ್ದಾರು ವಿಧಿ ಅಧಿನಿಯಮ, 1957ನ್ನು (1957ರ ಕರ್ನಾಟಕ ಅಧಿನಿಯಮ 11) ಮತ್ತಷ್ಟು ತಿದ್ದುಪಡಿ ಮಾಡಲು ಒಂದು ಅಧ್ಯಾದೇಶ.
R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297
೩
ಕೋವಿಡ್-19ರ 2ನೇ ಅಲೆಯನ್ನು ನಿಯಂತ್ರಿಸುವ ಕಾರ್ಯಕ್ರಮಗಳು ಅಥವಾ ಸ್ಕೀಮುಗಳ ತುರ್ತು ವೆಚ್ಚಗಳನ್ನು ಭರಿಸುವುದಕ್ಕೆ ಮೊತ್ತವನ್ನು ಬಿಡುಗಡೆಗೊಳಿಸಲು ಕರ್ನಾಟಕ ಸಾದಿಲ್ವಾರು ನಿಧಿಯ ಮೊತ್ತವನ್ನು ಈ ಅಧ್ಯಾದೇಶದಲ್ಲಿ ಉಪಬಂ೦ಧಿಸಿದಂತೆ ಹೆಚ್ಚಿಸುವುದಕ್ಕಾಗಿ ಕರ್ನಾಟಕ ಸಾದಿಲ್ವಾರು ವಿಧಿ ಅಧಿನಿಯಮ, 1957ನ್ನು (1957ರ ಕರ್ನಾಟಕ ಅಧಿನಿಯಮ 11) ಮತ್ತಷ್ಟು ತಿದ್ದುಪಡಿ ಮಾಡುವುದು ಯುಕ್ತವಾಗಿರುವುದರಿಂದ ಮತ್ತು ಕೋವಿಡ್-19ರ ರೋಗಿಗಳ ಚಿಕಿತ್ಸೆಗಾಗಿ ಔಷಧಗಳು, ಆಮ್ಲಜನಕ, ವೆಂಟೆಲೇಟರ್ಗಳು ಮತ್ತು ಲಸಿಕೆಗಳ ವೆಚ್ಚವನ್ನು ಭರಿಸುವುದು ಯುಕ್ತವಾಗಿರುವುದರಿಂದ.
ರಾಜ್ಯ ವಿಧಾನಮಂಡಲದ ಉಭಯ ಸದನಗಳು ಅಧಿವೇಶನದಲ್ಲಿ ಇಲ್ಲದಿರುವುದರಿಂದ ಮತ್ತು ಕರ್ನಾಟಕ ಸಾದಿಲ್ವಾರು ನಿಧಿಯಲ್ಲಿ ಮೊತ್ತವನ್ನು ತಾತ್ಕಾಲಿಕವಾಗಿ ಹೆಚ್ಚಿಸಲು ಉಪಬಂಧಿಸುವುದಕ್ಕಾಗಿ ಶೀಘ್ರ ಕ್ರಮವನ್ನು ತೆಗೆದುಕೂಳ್ಳುವುದು ಅವಶ್ಯಗೊಳಿಸುವಂಥ ವಿದ್ಯಮಾನಗಳು ಉಂಟಾಗಿವೆಯೆಂದು ಕರ್ನಾಟಕ ಮಾನ್ಯ ರಾಜ್ಯಪಾಲರಿಗೆ ಮನದಟ್ಟಾಗಿರುವುದರಿಂದ;