ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವಾಲಯ ಅಧಿಸೂಚನೆ
ಸಂಖ್ಯೆ: ಸಂವ್ಯಶಾಇ 75 ಶಾಸನ 2020, ಬೆಂಗಳೂರು, ದಿನಾಂಕ:23.10.2020.
Ordered that the translation of the Karnataka Agricultural Produce Marketing (Regulation and Development) (Second Amendment) Ordinance, 2020 (Karnataka Ordinance 21 of 2020) in Kannada language, be published as authorized by the Governor of Karnataka under section 5A of the Karnataka Official Language Act, 1963 in the Karnataka Gazette for general information.
The following translation of the Karnataka Agricultural Produce Marketing (Regulation and Development) (Second Amendment) Ordinance, 2020 (Karnataka Ordinance 21 of 2020) in Kannada language is published in the Official Gazette under the authority of the Governor of Karnataka under section 5A of the Karnataka Official Language Act, 1963.
2020ರ ಕರ್ನಾಟಕ ಅಧ್ಯಾದೇಶ ಸಂಖ್ಯೆ: 21 ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು
ಅಭಿವೃದ್ದಿ) (ಎರಡನೇ ತಿದ್ದುಪಡಿ) ಅಧ್ಯಾದೇಶ, 2020
(ಭಾರತ ಗಣರಾಜ್ಯದ ಎಪ್ಪತ್ತೊಂದನೇ ವರ್ಷದಲ್ಲಿ ಕರ್ನಾಟಕ ರಾಜ್ಯಪಾಲರಿಂದ
ಪ್ರಖ್ಯಾಪಿಸಲಾಗಿದೆ ಮತ್ತು 2020ರ ಅಕ್ಟೋಬರ್ 23ನೇ ದಿನಾಂಕದಂದು ಕರ್ನಾಟಕ ವಿಶೇಷ ರಾಜ್ಯಪತ್ರದಲ್ಲಿ ಮೊದಲು ಪ್ರಕಟಿಸಲಾಗಿದೆ).
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966ನ್ನು ಮತ್ತಷ್ಟು ತಿದ್ದುಪಡಿ ಮಾಡಲು ಒಂದು ಅಧ್ಯಾದೇಶ.
ರಾಜ್ಯ ವಿಧಾನ ಮಂಡಲದ ಉಭಯ ಸದನಗಳು ಅಧಿವೇಶನದಲ್ಲಿ ಇಲ್ಲದಿರುವುದರಿಂದ ಮತ್ತು ಇಲ್ಲಿ ಇನ್ನು ಮುಂದೆ ಕಂಡು ಬರುವ ಉದ್ದೇಶಗಳಿಗಾಗಿ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತುಅಭಿವೃದ್ಧಿ) ಅಧಿನಿಯಮ, 1966ನ್ನು (1966ರ ಕರ್ನಾಟಕ ಅಧಿನಿಯಮ 27) ಮತ್ತಷ್ಟು ತಿದ್ದುಪಡಿ ಮಾಡಲು Bay ಕ್ರಮವನ್ನು ತೆಗೆದುಕೊಳ್ಳುವುದು ಅವಶ್ಯಗೊಳಿಸುವಂ೦ಥ ವಿದ್ಯಮಾನಗಳು ಉಂಟಾಗಿವೆಯೆಂದು ಕರ್ನಾಟಕ ಮಾನ್ಯ ರಾಜ್ಯಪಾಲರಿಗೆ ಮನದಟ್ಟಾಗಿರುವುದರಿಂದ;
ಈಗ, ಭಾರತ ಸಂವಿಧಾನದ 213ನೇ ಅನುಚ್ಛೇದದ (1ನೇ ಖಂಡದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕದ ರಾಜ್ಯಪಾಲರು ಈ ಮುಂದಿನ ಅಧ್ಯಾದೇಶವನ್ನು ಪ್ರಖ್ಯಾಪಿಸಿದ್ದಾರೆ, ಎಂದರೆ:-