(1) ಈ ನಿಯಮಗಳನ್ನು ಕರ್ನಾಟಕ ಸಿವಿಲ್ ಸೇವೆಗಳ (ಕಾಲೇಜು ಶಿಕ್ಷಣ ಇಲಾಖೆಯ ಬೋಧಕ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) 2ನೇ ತಿದ್ದುಪಡಿ) ನಿಯಮಗಳು 2024 ಎಂದು ಕರೆಯತಕ್ಕದ್ದು. 2. ನಿಯಮ 4(4)(ಬಿ) ಯ ತಿದ್ದುಪಡಿ: ಕರ್ನಾಟಕ ಸಿವಿಲ್ ಸೇವೆಗಳ (ಕಾಲೇಜು ಶಿಕ್ಷಣ ಇಲಾಖೆಯ (ಬೋಧಕ ಸಿಬ್ಬಂದಿಯ ವರ್ಗಾವಣೆ ವಿಯಂ೦ತ್ರಣ) ನಿಯಮಗಳು 2021ರ ನಿಯಮ 4(4)(2) ನಂತರದಲ್ಲಿ ಈ SYFOBOS ಸೇರಿಸತಕ್ಕದ್ದು. ಏನೆಂದರೆ- “(ಸಿ) ಪರಂತು ಈ ನಿಯಮಗಳಲ್ಲಿ ಏನೇ ಒಳಗೊಂಡಿದ್ದರೂ ಬೋಧಕರು ಅಂ೦ಗವೈಕಲ್ಯತೆಯನ್ನು ಹೊಂದಿದ್ದರೆ ಮತ್ತು ಅವರ ಅವಲಂ೦ಬಿತ ಮಕ್ಕಳು, ಪತಿ/ ಪತ್ನಿ, ತಂದೆ, ತಾಯಿ ಇವರುಗಳು ಸಹಾ ಅಂಗವೈಕಲ್ಯತೆಯನ್ನು ಹೊಂ೦ದಿದ್ದರೆ ಇವರನ್ನು ವರ್ಗಾವಣೆ ಮಾಡತಕ್ಕದ್ದಲ್ಲ, ಇದೇ ನಿಯಮಾವಳಿಯ ನಿಯಮ 4(1)ರಲ್ಲಿ ನಿಗಧಿಪಡಿಸಲಾದ ಕವಿಷ್ಠ ಸೇವಾವಧಿಯನ್ನು ಪೂರೈಸಿದೃಲ್ಲಿ, ಅವರ ಕೋರಿಕೆಯ ಮೇರೆಗೆ ವರ್ಗಾವಣೆ ಮಾಡತಕ್ಕದ್ದು.” 3. ನಿಯಮ 9(2/(ಎ), (ಬಿ), (ಸಿ) ಮತ್ತು (ಡಿ)ಗೆ ತಿದ್ದುಪಡಿ: ಕರ್ನಾಟಕ ಸಿವಿಲ್ ಸೇವೆಗಳ (ಕಾಲೇಜು ಶಿಕ್ಷಣ ಇಲಾಖೆಯ (ಬೋಧಕ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) ನಿಯಮಗಳು 2021ರ ನಿಯಮ 9(2) (ಎ), (ಬಿ), (ಸಿ) ಮತ್ತು (ಡಿ) ನಂತರದಲ್ಲಿ ಈ ಕೆಳಕಂಡ ಅಂಶವನ್ನು ಕೈಬಿಡತಕ್ಕದ್ದು. ಏನೆಂದರೆ-
“ಅಂತಹ ಅರ್ಹ ಬೋಧಕ ಸಿಬ್ಬಂದಿಯು ಲಭ್ಯವಿಲ್ಲದಿದ್ದರೆ, 4ನೇ ನಿಯಮದ (1)ನೇ ಉಪ-ನಿಯಮದಲ್ಲಿ ನಿಯಮಿಸಲಾದಂತೆ ವರ್ಗಾವಣೆಗಾಗಿ ಕನಿಷ್ಠ ಸೇವಾವಧಿಗಿಂತ ಕಡಿಮೆ ಗರಿಷ್ಠ ಸಂಖ್ಯೆಯ ವರ್ಷಗಳನ್ನು ಪೂರ್ಣಗೊಳಿಸಿರುವ ಬೋಧಕ ಸಿಬ್ಬಂದಿ".
ಕರ್ನಾಟಕದ ರಾಜ್ಯಪಾಲರ ಆದೇಶನುಸಾರ
ಮತ್ತು ಅವರ ಹೆಸರಿನಲ್ಲಿ
(ಎಂ.ಧನಂಜಯ)
ಸರ್ಕಾರದ ಅಧೀನ ಕಾರ್ಯದರ್ಶಿ
ಉನ್ನತ ಶಿಕ್ಷಣ ಇಲಾಖೆ (ಕಾಲೇಜು ಶಿಕ್ಷಣ)