(೧) ವಿಶ್ವವಿದ್ಯಾಲಯಕ್ಕೆ. ಸಂಬಂಧಿಸಿದಂತೆ ಬೋಧನೆಯ ಗುಣಮಟ್ಟ, ಪರೀಕ್ಷೆ Da ಸಂಶೋಧನೆ ಅಥವಾ ಯಾವುದೇ ವಿಷಯಗಳನ್ನು ನಿರ್ದಿಷ್ಟಪಡಿಸುವ ಉದ್ದೇಶಕ್ಕಾಗಿ, ಸರ್ಕಾರವು, ಉಪ-ಕುಲಪತಿಗಳೂಂದಿಗೆ ಸಮಾಲೋಚಿಸಿದ ನಂತರ a ಖ್ಯಾತ ಶಿಕ್ಷಣ ತಜ್ಞರನ್ನು ಒಳಗೊಂಡ ಸರ್ಕಾರದಿಂದ ರಚಿತವಾದ ತಜ್ಞ ಸಮಿತಿಯ ಮೂಲಕ ಮೌಲ್ಯನಿರ್ಣಯ ಮಾಡತಕ್ಕದ್ದು. ಸದರಿ ಸಮಿತಿಯಲ್ಲಿ ಒಬ್ಬರು ರಾಜ್ಯ ಸಾರ್ವಜನಿಕ ವಿಶ್ವವಿದ್ಯಾಲಯದ ಮಾಜಿ ಉಪ-ಕುಲಪತಿಯಾಗಿರತಕ್ಕದ್ದು.
೨) 3% ಸಮಿತಿಯಿಂದ ವರದಿಯನ್ನು ಸ್ವೀಕರಿಸಿದ ತರುವಾಯ, ಸರ್ಕಾರವು, ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕಾಗಿ ಮೌಲ್ಯನಿರ್ಧರಣೆಗೆ ಸಂಬಂಧಿಸಿದ ಫಲಿತಾಂಶದ ಬಗ್ಗೆ ಅದರ ಶಿಫಾರಸ್ಸುಗಳನ್ನು ತಿಳಿಸತಕ್ಕದ್ದು ಮತ್ತು ವಿಶ್ವವಿದ್ಯಾಲಯವು, ಶಿಫಾರಸ್ಸುಗಳನ್ನು ಪಾಲಿಸಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಅಗತ್ಯವಾದಂತ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳತಕ್ಕದ್ದು. ವಿಶ್ವವಿದ್ಯಾಲಯವು ಯುಕ್ತ ಕಾಲದೊಳಗೆ (2ನೇ ಉಪ-ಪರಕರಣದ ಮೇರೆಗೆ ಮಾಡಿದ ಶಿಫಾರಸ್ಸುಗಳನ್ನು ಪಾಲಿಸಲು ವಿಫಲವಾದರೆ, ಸರ್ಕಾರವು ತಾನು ಸೂಕ್ತವೆಂದು ಭಾವಿಸಬಹುದಾದಂತೆ ಅಂತಹ ನಿರ್ದೇಶನಗಳನ್ನು ನೀಡಬಹುದು. ವಿಶ್ವವಿದ್ಯಾಲಯವು ಅದಕ್ಕೆ ಬದ್ಧವಾಗಿರತಕ್ಕದ್ದು.