ಪ್ರತಿಯೊಬ್ಬ ಸರ್ಕಾರಿ ನೌಕರನು, ನಿಯಮ 1ರ ಉಪನಿಯಮ 143ರಲ್ಲಿ ನಿರ್ದಿಷ್ಟಪಡಿಸಿರುವ ಹುದ್ದೆಗಳಲ್ಲಿರುವವರನ್ನು ಹೊರತುಪಡಿಸಿ, ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಗೆ ಹಾಜರಾಗಿ ಶೇಕಡ 358,03 ಕಡಿಮೆ ಇಲ್ಲದಂತೆ ಅಂಕಗಳನ್ನು ಗಳಿಸಿ ಪಾಸು ಮಾಡುವುದು ಕಡ್ಡಾಯ ಮಾಡತಕ್ಕದ್ದು. ಈ ಪರೀಕ್ಷೆಯನ್ನು ಸರ್ಕಾರ ಅಥವಾ ಅದು ಅನುಮೋದಿಸಿದ ಏಜೆನ್ಸಿಯು ನಡೆಸತಕ್ಕದ್ದು ಯಾವುದೇ ಸರ್ಕಾರಿ ನೌಕರನು ಈ ನಿಯಮಗಳ ಪ್ರಾರಂಭದ ದಿನಾಂಕದಿಂದ ಮೂರು ವರ್ಷಗಳ ಅವಧಿಯೊಳಗೆ ಪರೀಕ್ಟೆಯಲ್ಲಿ ಉತ್ತೀರ್ಣನಾಗದೇ ಇದ್ದಲ್ಲಿ ಮುಂಬಡ್ತಿಗೆ ಅರ್ಹನಾಗತಕ್ಕದ್ದಲ್ಲ. ಯಾವುದೇ ಸರ್ಕಾರಿ ನೌಕರನು, ಈ ನಿಯಮಗಳ ಪ್ರಾರಂಭದ ದಿನಾಂಕದಿಂದ ನಾಲ್ಕು ವರ್ಷಗಳ ಅವಧಿಯೊಳಗೆ ಪರೀಕೆಯಲ್ಲಿ ಉತ್ತೀರ್ಣನಾಗದೇ ಇದ್ದಲ್ಲಿ ವಾರ್ಷಿಕ ವೇತನ ಬಡ್ತಿ ಗಳಿಸಲು ಅರ್ಹನಾಗತಕ್ಕದ್ದಲ್ಲ.
BOD ಈ ಉಪ-ನಿಯಮದಲ್ಲಿರುವದಾವುದೂ, ಈ ನಿಯಮಗಳ ಪ್ರಾರಂಭದ ದಿನಾಂಕರಂದು 50 ವರ್ಷಗಳ ವಯಸ್ಸಾಗಿರುವ ಸರ್ಕಾರಿ ನೌಕರರಿಗೆ ಅನ್ವಯವಾಗತಕ್ಕದ್ದಲ್ಲ.
(2) ಯಾವುದೇ ವಾಹನ ಚಾಲಕ ಅಥವಾ ಡಿ ಸಮೂಹದ ನೌಕರನು, ಈ ನಿಯಮಗಳ ಪ್ರಾರಂಭದ ದಿನಾಂಕದಿಂದ ಮೂರು ವರ್ಷಗಳ ಅವಧಿಯೊಳಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಬೆಯಲ್ಲಿ ಉತ್ತೀರ್ಣನಾಗದ ಹೊರತು, ಕಿರಿಯಸಹಾಯಕ/ ದ್ವಿರೀಯ ದರ್ಜೆ ಸಹಾಯಕ ಅಥವಾ ಸಮಾನ ಅಥವಾ ಉನ್ನತ ಹುದ್ದೆಯ ವೃಂದಕ್ಕೆ ವರ್ಗಾವಣೆಗೆ ಅಥವಾ ಮುಂಬಡ್ತಿಗೆ ಅರ್ಹನಾಗತಕ್ಕದ್ದಲ್ಲ.
(3) ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂಥ 50 ವರ್ಷ ವಯಸ್ಸು ದಾಟಿದ ಸರ್ಕಾರಿ ನೌಕರರನ್ನೂ ಒಳಗೊಂಡಂ೦ತೆ ಸೇವಾವಿರತ ನೌಕರರು ಸರ್ಕಾರವು ಅಥವಾ ಸರ್ಕಾರದಿಂದ ಅನುಮೋದಿತ ಏಜೆನ್ಸಿಯು. ನೀಡುವ ಪ್ರಮಾಣಪತ್ರವನ್ನು ಹಾಜರುಪಡಿಸುವುದಕ್ಕೆಒಳಪಟ್ಟು ಅವರುಗಳಿಗೆ ರೂ. 5,000/-ಗಳ (ಐದು ಸಾವಿರ ರೂಪಾಯಿಗಳು) ಪ್ರೋತ್ಸಾಹ ಧನವನ್ನು ಸಂದಾಯ ಮಾಡತಕ್ಕದ್ದು.
4... ಯಾವುದೇ ವ್ಯಕ್ತಿಯು ನೇರ ನೇಮಕಾತಿ ಸಮಯದಲ್ಲಾಗಲೀ ಅಥವಾ ಸೇವಾನಿರತ ಅಭ್ಯರ್ಥಿಯಾಗಿ ಆಗಲೀ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಒಂದು ಸಲ ಉತ್ತೀರ್ಣನಾದಲ್ಲಿ, ಈ ನಿಯಮದಡಿ ಯಾವುದೇ ಉದ್ದೇಶಕ್ಕಾಗಿ ಮತ್ತೊಮ್ಮೆ ಇದೇ ಪರೀಕ್ಷೆಯಲ್ಲಿ ಉತ್ತೀರ್ನನಾಗುವ ಅವಶ್ಯಕತೆಯಿಲ್ಲ.