ಕರ್ನಾಟಕ ಸರ್ಕಾರ
ಸಂಖ್ಯೆ. ಸಿಐ 60 ಎಸ್ಪಿಐ 2020(ಇ)
ದಿನಾಂಕ: 04.11.2020
ಸಂಖ್ಯೆ. ಸಿಐ 60 ಎಸ್ಪಿಐ 2020(ಇ) ದಿನಾಂಕ: 04.11.2020
ಅಧಿಸೂಚನೆ
ಕರ್ನಾಟಕ ಕೈಗಾರಿಕೆಗಳ (ಸೌಲಭ್ಯ) (ತಿದ್ದುಪಡಿ) ನಿಯಮಗಳು, 2020ರ ಕರಡನ್ನು ದಿನಾಂಕ 04.09.2020ರಂದು ಕರ್ನಾಟಕ ರಾಜ್ಯಪತ್ರ ವಿಶೇಷ ಸಂಚಿಕೆಯ ಭಾಗ !/-ಎ ಸಂಖ್ಯೆ. 388ರಲ್ಲಿ ಅಧಿಸೂಚನೆ ಸಂಖ್ಯೆ ಸಿಐ 60 ಎಸ್ಪಿಐ 2020 (ಇ), ದಿನಾಂಕ 04.09.2020ರಲ್ಲಿ ಪ್ರಕಟಿಸಲಾಗಿದ್ದು, ಅಧಿಕೃತ ರಾಜ್ಯಪತ್ರದಲ್ಲಿ ಅವುಗಳ ಪ್ರಕಟಣೆಯ ದಿನಾಂಕದಿಂದ ಹದಿನೈದು ದಿನಗಳೊಳಗಾಗಿ ಅದರಿಂದ ಬಾಧಿತರಾಗಬಹುದಾದ ಎಲ್ಲಾ ವ್ಯಕ್ತಿಗಳಿಂದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಆಹ್ವಾನಿಸಿರುವುದರಿಂದ;
ಮತ್ತು, ಸದರಿ ರಾಜ್ಯಪತ್ರವನ್ನು ದಿನಾಂಕ 07ನೇ ಸೆಪ್ನೆಂಬರ್, 2020ರಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿರುವುದರಿಂದ,
ಮತ್ತು ಸದರಿ ಕರಡು ನಿಯಮಗಳ ಸಂಬಂ೦ಧದಲ್ಲಿ ಯಾವುದೇ ಆಕ್ಷೇಪಣೆಗಳು ಮತ್ತು ಸಲಹೆಗಳು ಸ್ಟೀಕೃತವಾಗಿಲ್ಲದಿರುವುದರಿಂದ:
ಪ್ರಸ್ತುತ, ಆದ್ದರಿಂದ, ಕರ್ನಾಟಕ ಕೈಗಾರಿಕೆಗಳ (ಸೌಲಭ್ಯ) ಅಧಿವಿಯಮ, 2002 (2003ರ ಕರ್ನಾಟಕ ಅಧಿನಿಯಮ 45ರ 11ಎ ಪ್ರಕರಣವನ್ನು ಓದಿಕೊಂಡು, ಮತ್ತು 21ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಈ ಮೂಲಕ ಈ ಕೆಳಕಂಡ ನಿಯಮಗಳನ್ನು ರಚಿಸುತ್ತದೆ, ಎಂದರೆ:-
ನಿಯಮಗಳು