(1) ಈ ನಿಯಮಗಳನ್ನು ಕರ್ನಾಟಕ ಕೈಗಾರಿಕೆಗಳ (ಸೌಲಭ್ಯ) (ತಿದ್ದುಪಡಿ) ನಿಯಮಗಳು, 2020 ಎಂದು ಕರೆಯತಕ್ಕದ್ದು.
(2) ಈ ನಿಯಮಗಳು, ಅಧಿಕೃತ ರಾಜ್ಯಪತ್ರದಲ್ಲಿ ಅವುಗಳ ಅಂತಿಮ ಪ್ರಕಟಣೆಯ ದಿನಾಂಕದಿಂದ ಹಾರಿಗೆ ಬರತಕ್ಕದ್ದು.
ಕರ್ನಾಟಕ ಸರ್ಕಾರ
ಸಂಖ್ಯೆ. ಸಿಐ 60 ಎಸ್ಪಿಐ 2020(ಇ)
ದಿನಾಂಕ: 04.11.2020
ಸಂಖ್ಯೆ. ಸಿಐ 60 ಎಸ್ಪಿಐ 2020(ಇ) ದಿನಾಂಕ: 04.11.2020
ಅಧಿಸೂಚನೆ
ಕರ್ನಾಟಕ ಕೈಗಾರಿಕೆಗಳ (ಸೌಲಭ್ಯ) (ತಿದ್ದುಪಡಿ) ನಿಯಮಗಳು, 2020ರ ಕರಡನ್ನು ದಿನಾಂಕ 04.09.2020ರಂದು ಕರ್ನಾಟಕ ರಾಜ್ಯಪತ್ರ ವಿಶೇಷ ಸಂಚಿಕೆಯ ಭಾಗ !/-ಎ ಸಂಖ್ಯೆ. 388ರಲ್ಲಿ ಅಧಿಸೂಚನೆ ಸಂಖ್ಯೆ ಸಿಐ 60 ಎಸ್ಪಿಐ 2020 (ಇ), ದಿನಾಂಕ 04.09.2020ರಲ್ಲಿ ಪ್ರಕಟಿಸಲಾಗಿದ್ದು, ಅಧಿಕೃತ ರಾಜ್ಯಪತ್ರದಲ್ಲಿ ಅವುಗಳ ಪ್ರಕಟಣೆಯ ದಿನಾಂಕದಿಂದ ಹದಿನೈದು ದಿನಗಳೊಳಗಾಗಿ ಅದರಿಂದ ಬಾಧಿತರಾಗಬಹುದಾದ ಎಲ್ಲಾ ವ್ಯಕ್ತಿಗಳಿಂದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಆಹ್ವಾನಿಸಿರುವುದರಿಂದ;
ಮತ್ತು, ಸದರಿ ರಾಜ್ಯಪತ್ರವನ್ನು ದಿನಾಂಕ 07ನೇ ಸೆಪ್ನೆಂಬರ್, 2020ರಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿರುವುದರಿಂದ,
ಮತ್ತು ಸದರಿ ಕರಡು ನಿಯಮಗಳ ಸಂಬಂ೦ಧದಲ್ಲಿ ಯಾವುದೇ ಆಕ್ಷೇಪಣೆಗಳು ಮತ್ತು ಸಲಹೆಗಳು ಸ್ಟೀಕೃತವಾಗಿಲ್ಲದಿರುವುದರಿಂದ:
ಪ್ರಸ್ತುತ, ಆದ್ದರಿಂದ, ಕರ್ನಾಟಕ ಕೈಗಾರಿಕೆಗಳ (ಸೌಲಭ್ಯ) ಅಧಿವಿಯಮ, 2002 (2003ರ ಕರ್ನಾಟಕ ಅಧಿನಿಯಮ 45ರ 11ಎ ಪ್ರಕರಣವನ್ನು ಓದಿಕೊಂಡು, ಮತ್ತು 21ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಈ ಮೂಲಕ ಈ ಕೆಳಕಂಡ ನಿಯಮಗಳನ್ನು ರಚಿಸುತ್ತದೆ, ಎಂದರೆ:-
ನಿಯಮಗಳು
ಕರ್ನಾಟಕ ಕೈಗಾರಿಕೆಗಳ (ಸೌಲಭ್ಯ) ನಿಯಮಗಳು, 2003 (ಇದರಲ್ಲಿ ಇನ್ನು ಮುಂದೆ ಸದರಿ ನಿಯಮಗಳೆಂದು ಉಲ್ಲೇಖಿಸಲಾಗಿದೆ) ರ 2ನೇ ನಿಯಮದಲ್ಲಿ,-
(i) ಖಂಡ (ಎ) ತರುವಾಯ ಈ ಕೆಳಕಂಡದ್ದನ್ನು ಸೇರಿಸತಕ್ಕದ್ದು, ಎಂದರೆ:-
“(ಎ1) ಸ್ವೀಕೃತಿ ಪ್ರಮಾಣಪತ್ರ” ಎಂದರೆ, 13ನೇ ಪ್ರಕರಣದ (1ನೇ ಉಪ-ಪ್ರಕರಣದ (ಎಚ್) ಖಂಡದ ಮೇರೆಗೆ ನೀಡಲಾದ ಸ್ಟೀಕೃತಿ ಪ್ರಮಾಣ ಪತ್ರ;
(ಎ2) “ಅರ್ಜಿದಾರ” ಎಂದರೆ, ಅದು ಹೊಸದಾಗಿರಲಿ ಅಥವಾ ವಿಸ್ತರಣಾ ಘಟಕವಾಗಿರಲಿ ಎಂಐಎಸ್ಎಂಇ, ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಬೃಹತ್ ಅಥವಾ ದೊಡ್ಡ ಪ್ರಮಾಣದ ತಯಾರಿಕಾ ಉದ್ಯಮಗಳು ಅಥವಾ ತಯಾರಿಕಾ ಕೈಗಾರಿಕೆಗಳು;
(ಎ3) "ಅಧಿಕೃತ ಅಧಿಕಾರಿ” ಎಂದರೆ, ಈ ನಿಯಮಗಳಲ್ಲಿ ಗೊತ್ತುಪಡಿಸಲಾದ ಪ್ರಕಾರ್ಯಗಳನ್ನು ನಿರ್ವಹಿಸುವುದಕ್ಕಾಗಿ ರಾಜ್ಯ ಮಟ್ಟದಲ್ಲಿ ಅಥವಾ ಜಿಲ್ಲಾ ಮಟ್ಟದಲ್ಲಿ ನೋಡಲ್ ಏಜೆನ್ಸಿಗಳು ಅಧಿಕೃತಗೊಳಿಸಿದ ವ್ಯಕ್ತಿ;
(ii) ಖಂಡ (ಬಿ) ತರುವಾಯ ಈ ಕೆಳಕಂಡದ್ದನ್ನು ಸೇರಿಸತಕ್ಕದ್ದು, ಎಂದರೆ:-
“(ಬಿ1) “ವಾಣಿಜ್ಯ ಕಾರ್ಯಚಟುವಟಿಕೆಯ ಪ್ರಾರಂಭ” ಎಂದರೆ, ಉತ್ಪಾದನಾ ಉದ್ಯಮ ಅಥವಾ ಕೈಗಾರಿಕೆಯು ನಮೂನೆ-॥ ರಲ್ಲಿ ಸ್ವಯಂ ಪ್ರಮಾಣೀಕರಣಕ್ಕೆ ಸಂಬಂಧಿಸಿದಂತೆ ಉತ್ಪಾದಿಸಿದ ಸರಕುಗಳ ಮಾರಾಟದ ಮೊದಲ ಬಿಲ್ ಅನ್ನು ಅಥವಾ ಇನ್ ವಾಯ್ದ್ಫ್ (ಬೆಲೆಪಟ್ಟಿ) ಅಥವಾ ತೆರಿಗೆ ಸರಕು ಬೆಲೆ ಪಟ್ಟೆಯನ್ನು ನೀಡುವ ದಿನಾಂಕ;
(202) "ಜಿಲ್ಲಾ ಮಟ್ಟಿದ ನೋಡಲ್ ಏಜೆನ್ಸಿ” ಎಂದರೆ, ಅಧಿನಿಯಮದ 12ನೇ ಪ್ರಕರಣದ ಮೇರೆಗೆ ನೇಮಕ ಮಾಡಿದಂತಹ ಜಿಲ್ಲಾ ಮಟ್ಟದಲ್ಲಿನ ನೋಡಲ್ ಏಜಿನ್ಸಿ;
(ಬಿ3) "ವಿಸ್ತರಣಾ ಘಟಕ" ಎಂದರೆ, ಅಸ್ತಿತ್ವದಲ್ಲಿರುವ ಉದ್ಯಮವು ತಂತ್ರಜ್ಞಾನವನ್ನು ಮೇಲ್ಬರ್ಜೆಗೇರಿಸುವುದರೊಂದಿಗೆ ಅಥವಾ ಹಾಗಿಲ್ಲದೆ ಅಥವಾ ಈಗಿರುವ ಕಾರ್ಯವಿಧಾನದಲ್ಲಿಯೇ ಈಗಾಗಲೇ ತಯಾರಿಸುತ್ತಿರುವ ಉತ್ಪನ್ನವನ್ನು ತಯಾರಿಸುವುದಕ್ಕೆ ಈಗಿರುವ ಸೌಲಭ್ಯದಲ್ಲಿಯೇ ಅಥವಾ ಹೊಸ ಸ್ಥಳದಲ್ಲಿ ಅಥವಾ ಪಕ್ಕದ ಖಾಲಿ ಸ್ಮಳದಲ್ಲಿ ಸ್ಥಾಪಿಸಿದ ಹೊಸ ಉತ್ಪಾದನಾ ಸೌಲಭ್ಯಗಳು".
(iii) ಖಂಡ (ಸಿ)ಯ ತರುವಾಯ ಈ ಕೆಳಕಂಡದ್ದನ್ನು ಸೇರಿಸತಕ್ಕದ್ದು, ಎಂದರೆ:-
“(ಸಿ1) “ಹೊಸ ಫಟಕ” ಎಂದರೆ, ಕರ್ನಾಟಕ ಕೈಗಾರಿಕೆಗಳ (ಸೌಲಭ್ಯ) (ತಿದ್ದುಪಡಿ) ಅಧಿನಿಯಮ 2020ರ ಪ್ರಾರಂಭದ ದಿನಾಂಕದಂದು ಅಥವಾ ನಂತರ, ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಅಥವಾ ರಾಜ್ಯ ಮಟ್ಟದ ಏಕಗವಾಕ್ಷಿ ಒಪ್ಪಿಗೆ ವೀಡಿಕೆ ಸಮಿತಿ ಅಥವಾ ಜಿಲ್ಲಾ ಮಟ್ಟಿದ ಏಕಗವಾಕ್ಷಿ ಒಪ್ಪಿಗೆ ನೀಡಿಕೆ ಸಮಿತಿಯಿಂದ ಅನುಮೋದನೆ ಪಡೆದಿರುವ ಉತ್ಪಾದನಾ ಕೈಗಾರಿಕೆ ಅಥವಾ ಉದ್ಯಮ ಮತ್ತು ಇದರಲ್ಲಿ ಪ್ರತ್ಯೇಕವಾಗಿ ಗುರುತಿಸಬಹುದಾದ ಸ್ಥಳದಲ್ಲಿ ಉತ್ಪನ್ನಗಳನ್ನು ಉತ್ಪಾದಿಸುವುದಕ್ಕೆ ಈಗಿರುವ ಉದ್ಯಮದ ಮೂಲಕ ಸ್ಥಾಪಿಸಿದ ಅಥವಾ ಸ್ಥಾಪಿಸಲು ಉದ್ದೇಶಿಸಿದ ಉದ್ಯಮವು ಒಳಗೊಳ್ಳುತ್ತದೆ." 3. 8ಎ ಮತ್ತು 8ಬಿ ಹೊಸ ನಿಯಮದ ಸೇರ್ಪಡೆ.- ಸದರಿ ನಿಯಮಗಳ 8ನೇ ನಿಯಮದ ತರುವಾಯ, ಈ ಕೆಳಕಂಡದ್ದನ್ನು ಸೇರಿಸತಕ್ಕದ್ದು, ಎಂದರೆ:-
“8ಎ. ಸ್ವಯಂ ಪ್ರಮಾಣೀಕರಣ.- (1) ಸ್ವಯಂ ಪ್ರಮಾಣೀಕರಣವನ್ನು ಈ ಕೆಳಕಂಡವರುಗಳು ನಮೂನೆ! ರಲ್ಲಿ ಸಲ್ಲಿಸತಕ್ಕದ್ದು, ಎಂದರೆ:-
(i) ಮಾಲೀಕತ್ವದ ಉದ್ಯಮಗಳ ಸಂದರ್ಭದಲ್ಲಿ ಅದರ ಮಾಲೀಕ;
(ii) ಎಲ್.ಎಲ್.ಪಿ. ಯ ಉದ್ಯಮವು ಸೇರಿದಂತೆ ಪಾಲುದಾರಿಕೆಯ ಉದ್ಯಮ ಸಂದರ್ಭದಲ್ಲಿ ಅಧಿಕೃತಗೊಂಡ ಪಾಲುದಾರ;
(iii) ಖಾಸಗಿ ನಿಯಮಿತ ಅಥವಾ ಸಾರ್ವಜನಿಕ ನಿಯಮಿತ ಕಂಪನಿಗಳ ಸಂದರ್ಭದಲ್ಲಿ ಅದರ ನಿರ್ದೇಶಕರು ಅಥವಾ ವ್ಯವಸ್ಥಾಪಕ ನಿರ್ದೇಶಕರು; ಮತ್ತು
(iv) ಸಹಕಾರ ಸಂಘಗಳ ಅಥವಾ ಇತರೆ ರೀತಿಯ ಉದ್ಯಮಗಳ ಸಂದರ್ಭದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಥವಾ ನಿರ್ದೇಶಕ ಅಥವಾ ಟ್ರಸ್ಟಿ.
(2) ಉದ್ಯಮವು ಒಂದಕ್ಕಿಂತ ಹೆಚ್ಚಿನ ಸ್ಥಳಗಳಲ್ಲಿ ವಾಣಿಜ್ಯ ಕಾರ್ಯಚಟುವಟಿಕೆಯನ್ನು ಹೊಂದಿರುವ ಸಂದರ್ಭದಲ್ಲಿ, ಅಂಥ ಪ್ರತಿಯೊಂದು ಸ್ಥಳಗಳಿಗೆ ಒಂದು ಪ್ರತ್ಯೇಕ ಸ್ವಯಂ ಪ್ರಮಾಣೀಕರಣವನ್ನು ಸಲ್ಲಿಸತಕ್ಕದ್ದು.
8ಬಿ. ಸ್ವೀಕೃತಿ ಪ್ರಮಾಣಪತ್ರವನ್ನು ಮಂಜೂರು ಮಾಡುವ ಪ್ರಕ್ರಿಯೆ.- (1) ಸ್ವೀಕೃತಿ ಪ್ರಮಾಣ ಪತ್ರವನ್ನು ಕೋರುತ್ತಿರುವ ಪ್ರತಿಯೊಂದು ಉತ್ಪಾದನಾ ಉದ್ಯಮ ಅಥವಾ ಉತ್ಪಾದನಾ ಕೈಗಾರಿಕೆಯು, ಮೊದಲು ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಅಥವಾ ರಾಜ್ಯ ಮಟ್ಟದ ಏಕಗವಾಕ್ಷಿ ಒಪ್ಪಿಗೆ ನೀಡಿಕೆ ಸಮಿತಿ ಅಥವಾ ಜಿಲ್ಲಾಮಟ್ಟದ ಏಕಗವಾಕ್ಷಿ ಒಪ್ಪಿಗೆ ನೀಡಿಕೆ ಸಮಿತಿಯಿಂದ ಯೋಜನೆಗಾಗಿ ಅನುಮೋದನೆಯನ್ನು ಪಡೆಯತಕ್ಕದ್ದು ಮತ್ತು ನಂತರ, ಸೇವೆಗಳ ನೀಡಿಕೆಗೆ ಸಂಬಂಧಿಸಿದ ಶುಲ್ಕಗಳೊಂದಿಗೆ ಮತ್ತು ನಮೂನೆ-/ ರಲ್ಲಿ ಸ್ವಯಂ ಪ್ರಮಾಣೀಕರಣದೊಂದಿಗೆ, ರಾಜ್ಯ ಮಟ್ಟದ ನೋಡಲ್ ಏಜಿನ್ಸಿಯ ಆನ್ಲೈನ್ ಪೋರ್ಟಲ್ನಲ್ಲಿ ವಿದ್ಯುನ್ಮಾನ ರೂಪದಲ್ಲಿ ನಮೂನೆ-1 ರಲ್ಲಿ ಸ್ವೀಕೃತಿ ಪ್ರಮಾಣಪತ್ರವನ್ನು ಪಡೆಯುವುದಕ್ಕಾಗಿ ಸರಿಯಾಗಿ ಭರ್ತಿ ಮಾಡಿದ ಸಂಯೋಜಿತ ಅರ್ಜಿ ನಮೂನೆಯನ್ನು (ಸಿಎಎಫ್) ಸಲ್ಲಿಸತಕ್ಕದ್ದು. (2) ನಮೂನೆ- ರಲ್ಲಿ ಸ್ವಯಂ ಪ್ರಮಾಣೀಕರಣವನ್ನು ಸ್ಥೀಕರಿಸಿದ ತರುವಾಯ, ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಅಥವಾ ರಾಜ್ಯಮಟ್ಟಿದ ಏಕಗವಾಕ್ಷಿ ಒಪ್ಪಿಗೆ ನೀಡಿಕೆ ಸಮಿತಿಯಿಂದ ಅನುಮೋದಿತವಾದ ಯೋಜನೆಗಳಿಗಾಗಿ ರಾಜ್ಯಮಟ್ಟದ ನೋಡಲ್ ಏಜೆನ್ಸಿಯು ಮತ್ತು ಜಿಲ್ಲಾ ಮಟ್ಟದ ಏಕಗವಾಕ್ಷಿ ಒಪ್ಪಿಗೆ ನೀಡಿಕೆ ಸಮಿತಿಯಿಂದ ಅನುಮೋದಿತವಾದ ಯೋಜನೆಗಳಿಗಾಗಿ ಜಿಲ್ಲಾ ಮಟ್ಟದ ನೋಡಲ್ ಏಜೆನ್ಸಿಯು ನಮೂನೆ-/ ರಲ್ಲಿ ಸ್ವಯಂ ಪ್ರಮಾಣೀಕರಣದ ಸ್ವೀಕೃತಿಯ ದಿನಾಂಕವನ್ನು ಮತ್ತು ಸ್ವೀಕೃತಿ ಪ್ರಮಾಣ ಪತ್ರದ ಸಿಂಧುತ್ವದ ಅವಧಿಯನ್ನು ನಮೂದಿಸಿ ವಿದ್ಯುನ್ಮಾನ ನಮೂನೆಯಲ್ಲಿ ಸ್ವೀಕೃತಿ ಪ್ರಮಾಣಪತ್ರವನ್ನು ನೀಡತಕ್ಕದ್ದು.