ನಿಕ್ಷೇಪ ನಿಧಿ ಅಧಿಕಾರಿಯು ಈ ಅಧಿನಿಯಮದ ಉದ್ದೇಶಗಳಿಗಾಗಿ ನಿಯಮಿಸಲಾದ ಅಧಿಕಾರಿಯಾಗಿರತಕ್ಕದ್ದು.
1 1 [4. * * * * *] 1. ಅಧಿಸೂಚನೆ ಸಂಖ್ಯೆ. ಆರ್ಡಿ 24 ಇಟಿಸಿ 65 (ಜಿಎಸ್ಆರ್ 1191)ರ ಮೂಲಕ ದಿನಾಂಕ 4ನೇ ಅಕ್ಟೋಬರ್, 1966 ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ. 5. 4ನೇ ಪ್ರಕರಣದ ಮೇರೆಗೆ ಅಧಿಸೂಚನೆಯನ್ನು ಪ್ರಕಟಿಸುವ ರೀತಿ.- 1 [(1) ಡೆಪ್ಯೂಟಿ ಕಮಿಷನರನು, 3ನೇ ಪ್ರಕರಣದ ಮೇರೆಗೆ ನೋಟೀಸನ್ನು ಸ್ವೀಕರಿಸಿದ ದಿನಾಂಕದಿಂದ ಅರವತ್ತು ದಿನಗಳ ಒಳಗಾಗಿ, 4ನೇ ಪ್ರಕರಣದ (ಬಿ) ಖಂಡದ ಅನುಸಾರವಾಗಿ ರಾಜಪತ್ರದಲ್ಲಿ ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಅಧಿಸೂಚನೆಯನ್ನು ಪ್ರಕಟಿಸತಕ್ಕದ್ದು.
(2) ಅಂಥ ಪ್ರತಿಯೊಂದು ಅಧಿಸೂಚನೆಯನ್ನು ಇಂಗ್ಲೀಷ್ ಹಾಗೂ ಕನ್ನಡ ಭಾಷೆಗಳಲ್ಲಿ ಈ ಕೆಳಕಂಡ ಸ್ಥಳಗಳಲ್ಲಿ ಸಹ ಪ್ರಕಟಿಸತಕ್ಕದ್ದು, ಎಂದರೆ.-
(ಎ) ಅಧಿಕಾರ ವ್ಯಾಪ್ತಿ ಹೊಂದಿರುವ ಸ್ಥಳೀಯ ಪೊಲೀಸ್ ಠಾಣೆ;
(ಬಿ) ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಯ ಸೂಚನಾ ಫಲಕ;
(ಸಿ) ನಿಕ್ಷೇಪ ನಿಧಿಯು ಕಂಡುಬಂದ ಪ್ರದೇಶದ ಮೇಲೆ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ತಾಲ್ಲೂಕಿನ ತಹಶೀಲ್ದಾರರ ಕಚೇರಿಯ ಸೂಚನಾ ಫಲಕ;
(ಡಿ) ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಕಚೇರಿ; ಮತ್ತು
(ಇ) ನಿಕ್ಷೇಪ ನಿಧಿಯು ಕಂಡುಬಂದ ಗ್ರಾಮದ ಚಾವಡಿ.
(3) ಅಂಥ ಅಧಿಸೂಚನೆಯನ್ನು ಹೊರಡಿಸಿದ ತರುವಾಯ, ಅದನ್ನು ಡೆಪ್ಯೂಟಿ ಕಮಿಷನರನು 4ನೇ ಪ್ರಕರಣದ (ಸಿ) ಖಂಡದಲ್ಲಿ ಉಲ್ಲೇಖಿಸಲಾದ ವ್ಯಕ್ತಿಯ ಮೇಲೆ ಮತ್ತು ನಿಕ್ಷೇಪವನ್ನು ಕಂಡ ವ್ಯಕ್ತಿಯ ಮೇಲೆ ಜಾರಿ 1 ಮಾಡತಕ್ಕದ್ದು.] 1. ಅಧಿಸೂಚನೆ ಸಂಖ್ಯೆ. ಆರ್ಡಿ 24 ಇಟಿಸಿ 65 (ಜಿಎಸ್ಆರ್ 1191)ರ ಮೂಲಕ ದಿನಾಂಕ 4ನೇ ಅಕ್ಟೋಬರ್, 1966 ರಿಂದ ಜಾರಿಗೆ ಬರುವಂತೆ ಪ್ರತ್ಯಾಯೋಜಿಸಲಾಗಿದೆ. 6. ನಿಕ್ಷೇಪ ನಿಧಿ ಅಧಿಕಾರಿಯ ಮತ್ತು ನಿರ್ದೇಶಕನ ವರದಿ.- ಡೆಪ್ಯೂಟಿ ಕಮಿಷನರನಿಂದ ಅಂಥ ಮಾಹಿತಿಯನ್ನು ಸ್ವೀಕರಿಸಿದ ಅರವತ್ತು ದಿನಗಳ ಒಳಗಾಗಿ, ನಿಕ್ಷೇಪ ನಿಧಿ ಅಧಿಕಾರಿ ಮತ್ತು ನಿರ್ದೇಶಕನು, ನಿಕ್ಷೇಪದ ಪರಿಶೀಲನೆಗಾಗಿ ವ್ಯವಸ್ಥೆ ಮಾಡತಕ್ಕದ್ದು ಮತ್ತು ನಿಕ್ಷೇಪ ಅಥವಾ ಅದರ ಯಾವುದೇ ಭಾಗವನ್ನು ರಾಜ್ಯ ಸರ್ಕಾರ ಸ್ವಾಧೀನಪಡಿಸಿಕೊಳ್ಳಬೇಕೇ ಎಂಬ ಬಗ್ಗೆ ಡೆಪ್ಯೂಟಿ ಕಮಿಷನರನಿಗೆ ಪ್ರತ್ಯೇಕವಾಗಿ ಅಥವಾ ಜಂಟಿಯಾಗಿ ತಮ್ಮ ವರದಿಯನ್ನು ಸಲ್ಲಿಸತಕ್ಕದ್ದು. 7. ಸ್ವಾಧೀನಪಡಿಸಿಕೊಳ್ಳುವ ಮುನ್ನ ಡೆಪ್ಯೂಟಿ ಕಮಿಷನರನು ಅನುಸರಿಸಬೇಕಾದ ಕಾರ್ಯವಿಧಾನ.- (1) ಡೆಪ್ಯೂಟಿ ಕಮಿಷನರನು, ಯಾವುದೇ ನಿಕ್ಷೇಪವು ಒಡೆಯನಿಲ್ಲದ ನಿಕ್ಷೇಪವೆಂದು 8ನೇ ಪ್ರಕರಣದ ಮೇರೆಗೆ ಘೋಷಿಸಿರುವಾಗ ಮತ್ತು 10 ರಿಂದ 14ರ ವರೆಗಿನ ಪ್ರಕರಣಗಳಲ್ಲಿ ಹೇಳಲಾದ ರೀತಿಯಲ್ಲಿ ನಿಕ್ಷೇಪವನ್ನು ವಶಾವಣೆ ಮಾಡುವುದಕ್ಕೆ ಅಥವಾ ಹಂಚುವುದಕ್ಕೆ ಮುಂಚೆ, ಅಂಥ ನಿಕ್ಷೇಪವನ್ನು ಅಥವಾ ಅದರ ಯಾವುದೇ ಭಾಗವನ್ನು ಸ್ವಾಧೀನಪಡಿಸಿಕೊಳ್ಳಲು ನಿರ್ದೇಶಕನು ಬಯಸುವನೇ ಎಂಬುದನ್ನು ತಿಳಿದುಕೊಳ್ಳಲು ನಿರ್ದೇಶಕನೊಂದಿಗೆ ಸಮಾಲೋಚಿಸತಕ್ಕದ್ದು. ಹಾಗೆ ಉಲ್ಲೇಖ ಮಾಡುವಾಗ ಹುದುಗಿಸಿಟ್ಟ ನಿಧಿಯೆಂದು ಶೋಧಿಸಿದ ಪ್ರಾಚೀನ ನಾಣ್ಯಗಳು ಮತ್ತು ಪುರಾತತ್ವ ಆಸಕ್ತಿಯುಳ್ಳ ಇತರ ವಸ್ತುಗಳನ್ನು ಹಾಗೂ ಅವುಗಳಲ್ಲಿ ಯಾವ ವಸ್ತುಗಳು ಐತಿಹಾಸಿಕ ಅಥವಾ ಪುರಾತತ್ವದ ಮಹತ್ವವುಳ್ಳವುಗಳೆಂದು ಸಾಬೀತಾಗುವ ಸಂಭವವಿದೆಯೆಂದು ಸೂಚಿಸಿ ಒಂದು ಸವಿಸ್ತರ ಪಟ್ಟಿಯನ್ನು ಡೆಪ್ಯೂಟಿ ಕಮಿಷನರನು ಪರೀಕ್ಷೆಗಾಗಿ ಕಳುಹಿಸತಕ್ಕದ್ದು. (2) ನಿರ್ದೇಶಕನು, ಆ ನಿಕ್ಷೇಪವನ್ನು ಪರೀಕ್ಷಿಸಿ ಅಧೀಕ್ಷಕ, ಸರ್ಕಾರಿ ವಸ್ತು ಸಂಗ್ರಹಾಲಯ, ಬೆಂಗಳೂರು-ಇವರೊಡನೆ ಸಮಾಲೋಚಿಸಿದ ತರುವಾಯ ತನ್ನ ಕಚೇರಿಯಲ್ಲಿ ನಿಕ್ಷೇಪವನ್ನು ಸ್ವೀಕರಿಸಿದ ದಿನದಿಂದ ಒಂದು ತಿಂಗಳೊಳಗಾಗಿ ಅದಕ್ಕೆ ಸಂಬಂಧಿಸಿದಂತೆ ನಿಯಮಿಸಲಾದ ವ್ಯವಹರಣೆಗಳನ್ನು ಕೈಗೊಳ್ಳುವುದಕ್ಕಾಗಿ ಅದನ್ನು ಡೆಪ್ಯೂಟಿ ಕಮಿಷನರನಿಗೆ ಹಿಂತಿರುಗಿಸತಕ್ಕದ್ದು.
(3) ನಿರ್ದೇಶಕನು, ಅಂಥ ಪರೀಕ್ಷೆಯ ತರುವಾಯ, ಆ ಎಲ್ಲ ನಾಣ್ಯಗಳು ಅಥವಾ ಇತರ ವಸ್ತುಗಳು ಅಥವಾ ಆ ಪೈಕಿ ಯಾವುದೇ ನಾಣ್ಯ ಅಥವಾ ವಸ್ತುವು ಅಪರೂಪದ ಬಗೆಯವು ಅಥವಾ ಪುರಾತತ್ವ ಆಸಕ್ತಿಯವು ಆಗಿದ್ದು ತನ್ನ ಕಚೇರಿಯ ಕಪಾಟಿನಲ್ಲಿ ಅಥವಾ ಸರ್ಕಾರಿ ವಸ್ತು ಸಂಗ್ರಹಾಲಯದಲ್ಲಿ ಸಂರಕ್ಷಿಸಿಡಲು ಅರ್ಹವಾಗಿವೆ ಎಂದು ಪರಿಗಣಿಸಿದರೆ, ಅಂಥ ನಾಣ್ಯಗಳು ಅಥವಾ ವಸ್ತುಗಳನ್ನು ಸರ್ಕಾರದ ಪರವಾಗಿ ಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡತಕ್ಕದ್ದು.
(4) ಆ ನಾಣ್ಯಗಳು ಅಥವಾ ಇತರ ವಸ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲು ಶಿಫಾರಸ್ಸು ಮಾಡುವಾಗ, ಆ ವಸ್ತುಗಳ ಅಂದಾಜು ಮೌಲ್ಯದ ಬಗ್ಗೆ ರಾಜ್ಯ ಸರ್ಕಾರಕ್ಕೆ ವರದಿ ಮಾಡತಕ್ಕದ್ದು ಮತ್ತು ಸಂರಕ್ಷಿಸಿಡಲು ಅರ್ಹವಾದುದೆಂದು ತಾನು ಪರಿಗಣಿಸಬಹುದಾದಂಥ ನಾಣ್ಯ ಅಥವಾ ವಸ್ತುಗಳ ಪಟ್ಟಿಯೊಂದನ್ನು (ಮಾದರಿಗಳೊಂದಿಗೆ) ಸಲ್ಲಿಸತಕ್ಕದ್ದು. 8. ನಿಕ್ಷೇಪವನ್ನು ಸ್ವಾಧೀನಪಡಿಸಿಕೊಳ್ಳವುದು.- (1) ಡೆಪ್ಯೂಟಿ ಕಮಿಷನರನು, ಯಾವುದೇ ನಿಕ್ಷೇಪ ಅಥವಾ ಅದರ ಯಾವುದೇ ಭಾಗವನ್ನು ರಾಜ್ಯ ಸರ್ಕಾರದ ಪರವಾಗಿ ಸ್ವಾಧೀನಪಡಿಸಿಕೊಳ್ಳುವುದಕ್ಕೆ ಅಥವಾ ಸ್ವಾಧೀನಪಡಿಸಿಕೊಳ್ಳುವ ತನ್ನ ಉದ್ದೇಶವನ್ನು 15ನೇ ಪ್ರಕರಣದ ಮೇರೆಗೆ ಘೋಷಿಸುವುದಕ್ಕೆ ಮುನ್ನ ರಾಜ್ಯ ಸರ್ಕಾರದ ಆದೇಶವನ್ನು ಪಡೆದುಕೊಳ್ಳತಕ್ಕದ್ದು. (2) ರಾಜ್ಯ ಸರ್ಕಾರವು, ನಿಕ್ಷೇಪ ನಿಧಿ ಅಧಿಕಾರಿಯ ವರದಿಯ ಮೇಲೆ ಅಥವಾ ಅನ್ಯಥಾ ಅಂಥ ನಿಕ್ಷೇಪ ಅಥವಾ ಅದರ ಯಾವುದೇ ಭಾಗವನ್ನು ಸ್ವಾಧೀನಪಡಿಸಿಕೊಳ್ಳಲು ತೀರ್ಮಾನಿಸಿದರೆ, ಹಾಗೆಂದು ರಾಜ್ಯ ಸರ್ಕಾರವು ಅದನ್ನು ಡೆಪ್ಯೂಟಿ ಕಮಿಷನರನಿಗೆ ತಿಳಿಸತಕ್ಕದ್ದು ಮತ್ತು ಅವನು 8ನೇ ಪ್ರಕರಣದ ಮೇರೆಗೆ ಘೋಷಣೆ ಮಾಡಿದ ಮತ್ತು 15ನೇ ಪ್ರಕರಣದ ಉಪಬಂಧಗಳನ್ನು ಪಾಲಿಸಿದ ತರುವಾಯ ಹಾಗೆ ಸ್ವಾಧೀನಪಡಿಸಿಕೊಳ್ಳಲಾದ ನಿಕ್ಷೇಪ ಅಥವಾ ಅದರ ಯಾವುದೇ ಭಾಗವನ್ನು ಆದಷ್ಟು ಬೇಗನೆ ನಿಕ್ಷೇಪ ನಿಧಿ ಅಧಿಕಾರಿಗೆ ಅಥವಾ ಈ ಸಂಬಂಧದಲ್ಲಿ ರಾಜ್ಯ ಸರ್ಕಾರವು ಗೊತ್ತುಪಡಿಸಬಹುದಾದ ಯಾವುದೇ ಇತರ ಕೇಂದ್ರಕ್ಕೆ ಕಳುಹಿಸತಕ್ಕದ್ದು. 9. ನಿಕ್ಷೇಪದ ಹಂಚಿಕೆ.- (1) ರಾಜ್ಯ ಸರ್ಕಾರವು, ನಿಕ್ಷೇಪವನ್ನು ಅಥವಾ ಅದರ ಯಾವುದೇ ಭಾಗವನ್ನು ಸ್ವಾಧೀನಪಡಿಸಿಕೊಳ್ಳಲು ತೀರ್ಮಾನಿಸಿದ ಸಂದರ್ಭದಲ್ಲಿ, ನಿಕ್ಷೇಪ ನಿಧಿ ಅಧಿಕಾರಿಯು, ವಸ್ತು ಸಂಗ್ರಹಾಲಯ ಮತ್ತು ಸಂಸ್ಥೆಗಳಿಗೆ ಈ ಮುಂದಿನ ಆದ್ಯತೆಗಳ ಮೇರೆಗೆ ಅದನ್ನು ವಿತರಿಸಲು ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡತಕ್ಕದ್ದು. (ಎ) ನಿಕ್ಷೇಪ ನಿಧಿಯು ಕಂಡುಬಂದ ರಾಜ್ಯದ ಪ್ರಧಾನ ವಸ್ತು ಸಂಗ್ರಹಾಲಯ ಮತ್ತು ರಾಷ್ಟ್ರೀಯ ವಸ್ತು ಸಂಗ್ರಹಾಲಯದ ನಿಕ್ಷೇಪ ನಿಧಿ ಅಧಿಕಾರಿಯು ರಾಜ್ಯ ವಸ್ತು ಸಂಗ್ರಹಾಲಯಕ್ಕೆ ಹಂಚಿಕೆ ಮಾಡಬೇಕೆಂದು ಶಿಫಾರಸ್ಸು ಮಾಡುವಾಗ, ರಾಷ್ಟ್ರೀಯ ವಸ್ತು ಸಂಗ್ರಹಾಲಯಕ್ಕೆ ಕೊಡಬೇಕಾದ ವಸ್ತುಗಳು ರಾಷ್ಟ್ರೀಯ ಮಹತ್ವ ಹೊಂದಿದವುಗಳಾಗಿವೆ ಎಂಬುದನ್ನು ಗಮನಕ್ಕೆ ತೆಗೆದುಕೊಳ್ಳತಕ್ಕದ್ದು;
(ಬಿ) ರಾಜ್ಯದಲ್ಲಿರುವ ವಿಶ್ವವಿದ್ಯಾಲಯಗಳೂ ಸೇರಿದಂತೆ ರಾಜ್ಯ ಸರ್ಕಾರವು ಅಥವಾ ಇತರ ಸಾರ್ವಜನಿಕ ಪ್ರಾಧಿಕಾರಗಳು ನಿರ್ವಹಿಸುತ್ತಿರುವ ರಾಜ್ಯದಲ್ಲಿನ ಇತರ ವಸ್ತು ಸಂಗ್ರಹಾಲಯಗಳು;
(ಸಿ) ಇತರೆ ರಾಜ್ಯಗಳ ಪ್ರಧಾನ ರಾಜ್ಯ ವಸ್ತು ಸಂಗ್ರಹಾಲಯಗಳು ಮತ್ತು ಕಲ್ಕತ್ತಾದ ಭಾರತೀಯ ವಸ್ತು ಸಂಗ್ರಹಾಲಯ;
(ಡಿ) ವಿಶ್ವವಿದ್ಯಾಲಯಗಳೂ ಸೇರಿದಂತೆ ರಾಜ್ಯ ಸರ್ಕಾರಗಳು ಅಥವಾ ಇತರ ಸಾರ್ವಜನಿಕ ಪ್ರಾಧಿಕಾರಗಳು ನಿರ್ವಹಿಸುತ್ತಿರುವ ಇತರ ರಾಜ್ಯಗಳ ಇತರ ವಸ್ತು ಸಂಗ್ರಹಾಲಯಗಳು;
(ಇ) ಇತರ ವಸ್ತು ಸಂಗ್ರಹಾಲಯಗಳು.
(2) ನಿರ್ದೇಶಕನು, ಭಾರತದ ಪುರಾತತ್ವ ಇಲಾಖೆಯ ಮಹಾನಿರ್ದೇಶಕನಿಗೆ ರವಾನಿಸುವ ಸಲುವಾಗಿ ಭೂಮಿಯಿಂದ ಹೊರ ತೆಗೆದ ನಾಣ್ಯಗಳ ಸಂಕ್ಷಿಪ್ತ ವಿವರಣೆಯನ್ನು ಕೊಡುವ ಒಂದು ವರದಿಯನ್ನು ಸರ್ಕಾರಕ್ಕೆ ಸಲ್ಲಿಸತಕ್ಕದ್ದು ಮತ್ತು ಭಾರತದ ಪುರಾತತ್ವ ಇಲಾಖೆಯ ಮಹಾ ನಿರ್ದೇಶಕನು ಅಗತ್ಯಪಡಿಸಿದರೆ ಮತ್ತು ನಾಣ್ಯಗಳು ಲಭ್ಯವಿದ್ದರೆ ಆ ವಸ್ತು ಸಂಗ್ರಹಾಲಯಕ್ಕೆ ಮತ್ತು ಭಾರತದಲ್ಲಿನ ಇತರೆ ಸಂಸ್ಥೆಗಳಿಗೆ ಅವುಗಳನ್ನು ಒದಗಿಸತಕ್ಕದ್ದು. 10. ಮಾರಾಟ.- (1) ಸ್ವಾಧೀನಪಡಿಸಿಕೊಂಡ ಯಾವುದೇ ನಿಕ್ಷೇಪದ ಒಂದು ಭಾಗವು ನಾಣ್ಯಗಳಾಗಿದ್ದರೆ, ಅಂಥ ನಿಕ್ಷೇಪದ ಸಂಬಂಧದಲ್ಲಿ ಮುಂದಿನ ಕಾರ್ಯವಿಧಾನವನ್ನು ಅನುಸರಿಸತಕ್ಕದ್ದು, ಎಂದರೆ,- (i) ಒಂದೇ ಒಂದು ಮಾದರಿ ನಾಣ್ಯವನ್ನು ಸ್ವಾಧೀನಪಡಿಸಿಕೊಂಡಿದ್ದು ಆ ಮಾದರಿ ನಾಣ್ಯವು ಸರ್ಕಾರಿ ವಸ್ತು ಸಂಗ್ರಹಾಲಯ, ಬೆಂಗಳೂರು-ಇಲ್ಲಿ ಇಲ್ಲದಿದ್ದರೆ ಅದನ್ನು ಸಂರಕ್ಷಿಸಿಡುವ ಸಲುವಾಗಿ, ಆ ವಸ್ತು ಸಂಗ್ರಹಾಲಯದ ಅಧೀಕ್ಷಕನಿಗೆ ಕಳುಹಿಸಿಕೊಡತಕ್ಕದ್ದು ಮತ್ತು ಅಂಥ ಮಾದರಿ ನಾಣ್ಯವು ಈಗಾಗಲೇ ಅಲ್ಲಿ ಇದ್ದ ಸಂದರ್ಭದಲ್ಲಿ, ಅದನ್ನು ನಿರ್ದೇಶಕನು ತನ್ನ ಕಪಾಟಿನಲ್ಲಿ ಇಟ್ಟುಕೊಳ್ಳತಕ್ಕದ್ದು;
(ii) ಒಂದೇ ಬಗೆಯ ಒಂದಕ್ಕಿಂತ ಹೆಚ್ಚು ನಾಣ್ಯಗಳನ್ನು ಸ್ವಾಧೀನ ಪಡಿಸಿಕೊಂಡಿದ್ದರೆ, ನಿರ್ದೇಶಕನು, ಒಂದು ಮಾದರಿ ನಾಣ್ಯವನ್ನು ತನ್ನ ಕಪಾಟಿನಲ್ಲಿ ಇಟ್ಟುಕೊಂಡು, ಇನ್ನುಳಿದ ನಾಣ್ಯಗಳನ್ನು ಅಧೀಕ್ಷಕರು, ಸರ್ಕಾರೀ ವಸ್ತು ಸಂಗ್ರಹಾಲಯ, ಬೆಂಗಳೂರು- ಇವರಿಗೆ ಕಳುಹಿಸತಕ್ಕದ್ದು. ಆ ಅಧೀಕ್ಷಕನು, ಒಂದು ಮಾದರಿ ನಾಣ್ಯವನ್ನು ವಸ್ತು ಸಂಗ್ರಹಾಲಯದಲ್ಲಿ ಇಟ್ಟುಕೊಳ್ಳತಕ್ಕದ್ದು ಮತ್ತು ಇನ್ನುಳಿದವುಗಳನ್ನು (2)ನೇ ಉಪ-ನಿಯಮಗಳಲ್ಲಿ ಹೇಳಲಾದ ವಿಧಾನಗಳನ್ನು ಅನುಸರಿಸಿ ಮಾರಾಟಕ್ಕೆ ಇಡತಕ್ಕದ್ದು. ತಮ್ಮ ಹೆಸರುಗಳನ್ನು ನೋಂದಾಯಿಸಿರಬಹುದಾದಂಥ ನಾಣ್ಯಶಾಸ್ತ್ರಜ್ಞರಿಗೆ ಮತ್ತು ಅಂಥ ನಾಣ್ಯಗಳನ್ನು ಪಡೆದುಕೊಳ್ಳಲು ನಿರತವಾದ ವಸ್ತು ಸಂಗ್ರಹಾಲಯಗಳಿಗೆ ಮತ್ತು ಸಂಘಗಳಿಗೆ, 11ನೇ ನಿಯಮದ ಅಡಿಯಲ್ಲಿ ಮಾರಾಟಕ್ಕಾಗಿ ಅಧಿಸೂಚಿಸಲಾದ ಬೆಲೆಗಿಂತ ಕಡಿಮೆಯಲ್ಲದ ಬೆಲೆಗೆ ಮಾರಾಟ ಮಾಡಲು ಅಂಥ ನಾಣ್ಯಗಳ ಒಂದು ಪಟ್ಟಿಯನ್ನು ಸಹ ಒದಗಿಸತಕ್ಕದ್ದು.
(2) ರಾಜ್ಯ ಸರ್ಕಾರವು, 9ನೇ ನಿಯಮದಲ್ಲಿ ನಮೂದಿಸಲಾದ ವಸ್ತು ಸಂಗ್ರಹಾಲಯಗಳ ಮತ್ತು ಸಂಸ್ಥೆಗಳ ಅಗತ್ಯತೆಯನ್ನು ನಿರ್ಧರಿಸಿದ ತರುವಾಯ, ನಿಕ್ಷೇಪ ನಿಧಿ ಅಧಿಕಾರಿ ಮತ್ತು ಅಧೀಕ್ಷಕ, ಸರ್ಕಾರಿ ವಸ್ತು ಸಂಗ್ರಹಾಲಯ, ಬೆಂಗಳೂರು- ಇವರೊಡನೆ ಸಮಾಲೋಚಿಸಿ, 8ನೇ ನಿಯಮದ ಅಡಿಯಲ್ಲಿ ಸ್ವಾಧೀನ ಪಡಿಸಿಕೊಂಡಿದ್ದಿರಲಿ ಅಥವಾ ಅನ್ಯಥಾ ಪಡೆದುಕೊಂಡಿದ್ದಿರಲಿ, ಆ ನಿಕ್ಷೇಪದ ಒಂದು ಭಾಗವನ್ನು ತಾನು ಯುಕ್ತವೆಂದು ಭಾವಿಸಿದಂಥ ರೀತಿಯಲ್ಲಿ ಪ್ರಸ್ತಾವಿತ ಮಾರಾಟದ ಬಗ್ಗೆ ಅಧಿಸೂಚನೆ ಹೊರಡಿಸಿದ ತರುವಾಯ ಸಾರ್ವಜನಿಕರ ಸಲುವಾಗಿ ಮಾರಾಟಕ್ಕೆ ಇಡತಕ್ಕದ್ದು:
1 [ಆದಾಗ್ಯೂ, ಯಾವುದೇ ಐತಿಹಾಸಿಕ ಅಥವಾ ಪುರಾತತ್ವದ ಮಹತ್ವ ಇಲ್ಲದ ಚಿನ್ನದ ನಾಣ್ಯಗಳನ್ನು ಮತ್ತು ಇತರ ವಸ್ತುಗಳನ್ನು, ಭಾರತ ಸರ್ಕಾರದ ಟಂಕಸಾಲೆಗೆ ಮಾರಾಟ ಮಾಡಲು ಅಥವಾ ಜಾರಿಯಲ್ಲಿರುವ ನಿಯಮಗಳಿಗನುಸಾರವಾಗಿ ವಿಲೇ ಮಾಡಲು ಖಜಾನೆಗಳ ನಿರ್ದೇಶಕರು, ಬೆಂಗಳೂರು-ಇವರಿಗೆ 1 ಕಳುಹಿಸಿಕೊಡಬಹುದು.] 1. ಅಧಿಸೂಚನೆ ಸಂಖ್ಯೆ ಆರ್ಡಿಎಫ್ 9 ಟಿಆರ್ಐ 75 (ಜಿಎಸ್ಆರ್ 209) ದಿನಾಂಕ 14/ 21ನೇ ಜುಲೈ, 1976ರ ಮೂಲಕ 21ನೇ ಜುಲೈ, 1976 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ. 11. ಬೆಲೆ.- ರಾಜ್ಯ ಸರ್ಕಾರವು, ನಿಕ್ಷೇಪ ನಿಧಿ ಅಧಿಕಾರಿ ಮತ್ತು ನಿರ್ದೇಶಕರೊಂದಿಗೆ ಸಮಾಲೋಚಿಸಿದ ತರುವಾಯ, ಮಾರಾಟಕ್ಕಾಗಿ ಅಧಿಸೂಚಿಸಲಾದ ವಸ್ತುಗಳ ಬೆಲೆಯನ್ನು ನಿಗದಿಪಡಿಸತಕ್ಕದ್ದು ಮತ್ತು ಅದನ್ನು ಪ್ರಸ್ತಾವಿತ ಮಾರಾಟದ ಉದ್ದೇಶದ ಬಗ್ಗೆ ಅಧಿಸೂಚನೆ ಹೊರಡಿಸಿದ ತರುವಾಯ ಪ್ರತಿಯೊಂದು ಬಾಬಿನ ಮುಂದೆ ನಿರ್ದಿಷ್ಟಪಡಿಸತಕ್ಕದ್ದು ಮತ್ತು ಅಂಥ ಮಾರಾಟದಿಂದ ಬಂದ ಮೊಬಲಗನ್ನು ರಾಜ್ಯ ಸರ್ಕಾರದ ಜಮೆಗಳಿಗೆ ಜಮೆ ಮಾಡತಕ್ಕದ್ದು. 12. ಖರೀದಿ.- ಡೆಪ್ಯೂಟಿ ಕಮಿಷನರನು, ಪುರಾತತ್ವ ಇಲಾಖೆಯ ನಿರ್ದೇಶಕರ ಶಿಫಾರಸ್ಸಿನ ಮೇರೆಗೆ, ನಿಕ್ಷೇಪದ ಸ್ವಾಧೀನಕ್ಕೆ ಅನ್ವಯಿಸುವ 15ನೇ ಪ್ರಕರಣದಲ್ಲಿ ಹೇಳಲಾದ ಮೌಲ್ಯದ ಆಧಾರದ ಮೇಲೆ ನಿಕ್ಷೇಪ ಕಂಡವನಿಂದ ಹತ್ತು ರೂಪಾಯಿಗಳಿಗಿಂತ ಕಡಿಮೆ ಮೌಲ್ಯದ ನಾಣ್ಯಗಳನ್ನು ಸರ್ಕಾರಕ್ಕೆ ತಿಳಿಸದೆ ಖರೀದಿ ಮಾಡಬಹುದು. ಅಂಥ ನಾಣ್ಯಗಳು, ಸ್ವಾಧೀನಪಡಿಸಿಕೊಂಡ ನಾಣ್ಯಗಳಾಗಿದ್ದರೆ ಹೇಗೋ ಹಾಗೆ 10ನೇ ನಿಯಮದ (1)ನೇ ಉಪ ನಿಯಮದ ಅನುಸಾರವಾಗಿ ಅವುಗಳನ್ನು ವಿಲೇ ಮಾಡಲು ಡೆಪ್ಯೂಟಿ ಕಮಿಷನರನು ಪುರಾತತ್ವ ಇಲಾಖೆಯ ನಿರ್ದೇಶಕನಿಗೆ ಕಳುಹಿಸಿಕೊಡತಕ್ಕದ್ದು. 13. ನಿಕ್ಷೇಪಗಳ ಬಗ್ಗೆ ಸರ್ಕಾರದ ಕ್ಲೇಮುಗಳು.- ಆ ಜಿಲ್ಲೆಯ ಜಿಲ್ಲಾಧಿಕಾರಿಯು, ಈ ಅಧಿನಿಯಮವು ಅನ್ವಯಿಸುವಂಥ ಮತ್ತು ಅಂಥ ಶೋಧನೆಗಳ ಮಾಹಿತಿ ಅವನಿಗೆ ದೊರೆತಾಗ, ಅವನ ಅಧಿಕಾರ ವ್ಯಾಪ್ತಿಯಲ್ಲಿ ಇದ್ದಂಥ ಬೆಲೆಯುಳ್ಳ ಎಲ್ಲ ತಾಮ್ರದ ತಟ್ಟೆಗಳು, ಶಾಸನಗಳು ಮತ್ತು ಇತರ ನಿಕ್ಷೇಪಗಳ ಬಗ್ಗೆ ಅಧಿನಿಯಮದ ಮೇರೆಗೆ ರಾಜ್ಯ ಸರ್ಕಾರದ ಕ್ಲೇಮುಗಳನ್ನು ಮಂಡಿಸತಕ್ಕದ್ದು. 14. ವರದಿಗಳು.- ನಿಕ್ಷೇಪ ನಿಧಿ ಅಧಿಕಾರಿಯು, ಆರ್ಥಿಕ ವರ್ಷದಲ್ಲಿ ಕಂಡುಬಂದ ನಿಕ್ಷೇಪದ ಕ್ರೋಡೀಕೃತ ವರದಿಯೊಂದನ್ನು ಭಾರತ ಸರ್ಕಾರದ ಶಿಕ್ಷಣ ಮಂತ್ರಾಲಯಕ್ಕೆ ಮತ್ತು ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಗೆ ಕಳುಹಿಸಿಕೊಡತಕ್ಕದ್ದು. ಈ ವರದಿಯು, ಪುನಃಪರಿಶೀಲನೆಯ ವರ್ಷದ ಅವಧಿಯಲ್ಲಿ ಕಂಡುಬಂದ ನಿಕ್ಷೇಪ ನಿಧಿಯ ಪರೀಕ್ಷೆಯ ಫಲಿತಾಂಶಗಳ ಸಾರಾಂಶವನ್ನು ಒಳಗೊಂಡಿರತಕ್ಕದ್ದು. ಇದಲ್ಲದೆ, ಅವು ಯಾವ ಸಾಮಗ್ರಿಯಿಂದ ರಚಿತವಾಗಿವೆಯೋ ಆ ಮೂಲಕ ಮತ್ತು ಅವು ಸರಿಸುಮಾರಾಗಿ ಯಾವ ವರ್ಗಕ್ಕೆ ಸೇರಿವೆಯೋ ಆ ಮೂಲಕ ಮಾಡಲಾದ ವರ್ಗೀಕರಣವನ್ನೂ ಸಹ ಒಳಗೊಂಡಿರತಕ್ಕದ್ದು. ವರದಿಯು, ಪ್ರಸ್ತುತ ವರ್ಷದಲ್ಲಿ ಕಂಡುಬಂದ ಯಾವುದೇ ಮಹತ್ವದ ನಿಕ್ಷೇಪ ನಿಧಿಗಳ ಹಾಗೂ ಅವುಗಳ ವಿತರಣೆಯ ಬಗ್ಗೆ ಒಂದು ಸಂಕ್ಷಿಪ್ತ ನಿರೂಪಣೆಯನ್ನು ಸಹ ಒಳಗೊಂಡಿರತಕ್ಕದ್ದು. The above translation of the Karnataka Treasure Trove Act, 1962 (Karnataka Act 23 of 1963) and the Karnataka Treasure Trove Rules, 1963 shall be authoritative text in the Kannada Language under section 5A of the Karnataka Official Language Act, 1963 (Karnataka Act 26 of 1963).
GOVERNER OF KARNATAKA
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಜಿ.ಕೆ. ಬೋರೇಗೌಡ
ಸರ್ಕಾರದ ಕಾರ್ಯದರ್ಶಿ,
ಸಂಸದೀಯ ವ್ಯವಹಾರಗಳು ಮತ್ತು
ಶಾಸನ ರಚನೆ ಇಲಾಖೆ.