(ಕ) ‘‘ಅಧಿನಿಯಮ’’ ಎಂದರೆ ಕರ್ನಾಟಕ ಗ್ರಾಮಹುದ್ದೆಗಳ ರದ್ದಿಯಾತಿ ಅಧಿನಿಯಮ, 1961
(ಖ) ‘‘ಪ್ರಕರಣ’’ ಎಂದರೆ ಅಧಿನಿಯಮದ ಒಂದು ಪ್ರಕರಣ 3. 3ನೇ ಪ್ರಕರಣದ ಮೇರೆಗೆ ವಿಚಾರಣೆಯನ್ನು ನಡೆಸುವ ರೀತಿ: (1) ಗ್ರಾಮ ಹುದ್ದೆಯಲ್ಲಿ ಅಥವಾ ಅಂಥ ಹುದ್ದೆಗೆ ಸಂಬಂಧಿಸಿದಂತೆ ಮಂಜೂರು ಮಾಡಿದ ಅಥವಾ ಮುಂದುವರಿಸಿದ ಅಥವಾ ಅದಕ್ಕೆ ಲಗತ್ತಿಸಲಾದ ಯಾವುದೇ ಭೂಮಿಯಲ್ಲಿ ಹಿತಾಸಕ್ತಿಯನ್ನು ಹೊಂದಿರುವ ಮತ್ತು 3ನೇ ಪ್ರಕರಣದಲ್ಲಿ ಉಲ್ಲೇಖಿಸಿದ ಯಾವುದೇ ಪ್ರಶ್ನೆಯ ಬಗ್ಗೆ ತೀರ್ಮಾನವನ್ನು ಇಚ್ಚಿಸುವ ಯಾವನೇ ವ್ಯಕ್ತಿಯು ಡೆಪ್ಯೂಟಿ ಕಮೀಷನರನಿಗೆ ಅರ್ಜಿಯನ್ನು ಮಾಡಿಕೊಳ್ಳಬಹುದು.
(2) (1) ನೇ ಉಪ-ಪ್ರಕರಣದ ಮೇರೆಗಿನ ಪ್ರತಿಯೊಂದು ಅರ್ಜಿಯು ಈ ಕೆಳಕಂಡ ವಿವರಗಳನ್ನು ಒಳಗೊಂಡಿರತಕ್ಕುದು:-
(i) ಗ್ರಾಮ ಅಥವಾ ಗ್ರಾಮಗಳ ಹೆಸರು ;
(ii) ಅರ್ಜಿದಾರರ ಹೆಸರು ಮತ್ತು ವಿಳಾಸ ;
(iii) ಯಾವ ಪ್ರಶ್ನೆ ಅಥವಾ ಪ್ರಶ್ನೆಗಳ ಬಗ್ಗೆ ತೀರ್ಮಾನವನ್ನು ಕೋರಲಾಗಿದೆಯೊ ಆ ಪ್ರಶ್ನೆ ಅಥವಾ ಪ್ರಶ್ನೆಗಳು ;
(iv) ಬರಾವರ್ದದಾರನ ಹೆಸರು ;
(v) ಯಾವುದಕ್ಕೆ ಸಂಬಂಧಿಸಿದಂತೆ ಅಂಥ ಪ್ರಶ್ನೆಯು ಉದ್ಭವಿಸುವುದೋ ಆ ಗ್ರಾಮ ಹುದ್ದೆಯಲ್ಲಿ ಅಥವಾ ಅಂಥ ಹುದ್ದೆಗೆ ಸಂಬಂಧಪಟ್ಟ ಯಾವುದೇ ಭೂಮಿಯಲ್ಲಿ ಅರ್ಜೀದಾರನು ಹೊಂದಿರುವ ಹಿತಾಸಕ್ತಿಯ ಸ್ವರೂಪ;
(vi) ಆ ವಿಷಯದಲ್ಲಿ ಹಿತಾಸಕ್ತಿಯನ್ನು ಹೊಂದಿರುವ ಇತರ ವ್ಯಕ್ತಿಗಳು ಯಾರಾದರು ಇದ್ದರೆ, ಅವರ ಹೆಸರುಗಳು ; ಮತ್ತು
(vii) ಆ ಕ್ಲೇಮನ್ನು ಸಮರ್ಥಿಸುವ ಇತರ ವಿವರಗಳು.
(3) (1)ನೇ ಉಪನಿಯಮದ ಮೇರೆಗೆ ಅರ್ಜಿಯನ್ನು ಸ್ವೀಕರಿಸಿದ ಮೇರೆಗೆ ಡೆಪ್ಯೂಟಿ ಕಮಿಷನರನು ಅಗತ್ಯವಾಗಬಹುದಾದ ಯಾವುದೇ ಇನ್ನೂ ಹೆಚ್ಚಿನ ವಿವರಗಳನ್ನು ಒದಗಿಸಲು ಅರ್ಜಿದಾರನನ್ನು ಕೋರಬಹುದು ಮತ್ತು ಅಂಥ ವಿವರಗಳನ್ನು ಒದಗಿಸುವುದಕ್ಕಾಗಿ ಒಂದು ದಿನಾಂಕವನ್ನು ಗೊತ್ತುಪಡಿಸಬಹುದು. ಕೋರಲಾದ ವಿವರಗಳನ್ನು ನಿರ್ದಿಷ್ಟಪಡಿಸಿದ ಕಾಲದೊಳಗೆ ಒದಗಿಸಿದಾಗ ಡೆಪ್ಯೂಟಿ ಕಮೀಷನರನು ಚುನಾವಣೆಗಾಗಿ ಒಂದು ದಿನಾಂಕವನ್ನು ಗೊತ್ತುಪಡಿಸತಕ್ಕುದ್ದು. ಅದರ ಬಗ್ಗೆ ನೋಟೀಸನ್ನು ಅರ್ಜಿದಾರನಿಗೆ ಮತ್ತು ಆ ವಸ್ತು ವಿಷಯದಲ್ಲಿ ಹಿತಾಸಕ್ತಿಯನ್ನು ಹೊಂದಿರುವನೆಂದು ಅರ್ಜಿಯಲ್ಲಿ ನಮೂದಿಸಿದ ಇತರ ವ್ಯಕ್ತಿಗಳಿಗೆ ಕೊಡತಕ್ಕುದು. ಆ ನೋಟೀಸಿನ ಒಂದು ಪತ್ರಿಯನ್ನು ಡೆಪ್ಯೂಟಿ ಕಮಿಷನರನ ಕಚೇರಿಯ ನೋಟೀಸು ಬೋರ್ಡಿನ ಮೇಲೆ ಸಹ ಅಂಟಿಸತಕ್ಕುದು.
(4) (3)ನೇ ಉಪನಿಯಮದ ಮೇರೆಗಿನ ನೋಟೀಸನ್ನು ಸಂಹಿತೆಯಲ್ಲಿ ನೋಟೀಸುಗಳನ್ನು ಜಾರಿ ಮಾಡುವುದಕ್ಕಾಗಿ ನಿಯಮಿಸಿದ ರೀತಿಯಲ್ಲಿ ಜಾರಿಮಾಡತಕ್ಕುದು.
(5) ಚುನಾವಣೆಗಾಗಿ ಗೊತ್ತುಪಡಿಸಿದ ದಿನಾಂಕದಂದು ಅಥವಾ ಆ ಪ್ರಕರಣವನ್ನು ಮುಂದೂಡಬಹುದಾದಂಥ ಇತರ ದಿನಾಂಕದಂದು ಡೆಪ್ಯೂಟಿ ಕಮೀಷನರನು ಸಂಹಿತೆಯ ಮೇರೆಗೆ ವಿದ್ಯುಕ್ತ ವಿಚಾರಣೆಗಾಗಿ ನಿಯಮಿಸಿದ ರೀತಿಯಲ್ಲಿ ವಿಚಾರಣೆಯನ್ನು ನಡೆಸತಕ್ಕುದು ಮತ್ತು ಆ ತರುವಾಯ ಆದೇಶದ ಮೂಲಕ ಆ ಪ್ರಶ್ನೆಗಳನ್ನು ತೀರ್ಮಾನಿಸತಕ್ಕುದು.
(6) (5)ನೇ ಉಪ ನಿಯಮದ ಮೇರೆಗಿನ ಪ್ರತಿಯೊಂದು ತೀರ್ಮಾನ ಅಥವಾ ಆದೇಶವು. ಅದನ್ನು ಯಾವ ಕಾರಣಗಳ ಮೇಲೆ ಮಾಡಲಾಗಿದೆಯೊ ಆ ಕಾರಣಗಳ ಪೂರ್ಣ ನಿರೂಪಣೆಯನ್ನು ಒಳಗೊಂಡಿರತಕ್ಕುದು ಮತ್ತು ಅದನ್ನು ಆ ಆದೇಶವನ್ನು ಮಾಡುವ ಅಧಿಕಾರಿಯು ಬರೆಯತಕ್ಕುದು ಮತುತ ಅದಕ್ಕೆ ರುಜು ಮಾಡುತಕ್ಕುದು ಅಥವಾ ಅಂಥ ಅಧಿಕಾರಿಯು ಅದನ್ನು ಹೇಳಿ ಬರೆಸತಕ್ಕುದು. ಆ ಸಂದರ್ಭದಲ್ಲಿ ಆ ಬಗ್ಗೆ ಅಂಥ ಅಧಿಕಾತಿಯು ಅವನ ಬರವಣಿಗೆಯಲ್ಲಿ ಪ್ರಮಾಣಿಕರಣವನ್ನು ಮಾಡತಕ್ಕುದು ಮತ್ತು ರುಜು ಮಾಡತಕ್ಕುದು. 4. 5 ಮತ್ತು 6ನೇ ಪ್ರಕರಣಗಳ ಮೇರೆಗೆ ಅಧಿಭೋಗದ ಬೆಲೆಯನ್ನು ಸಂದಾಯ ಮಾಡುವ ಕಾಲ ಮತ್ತು ರೀತಿ:- (1) 5 ಮತ್ತು 6ನೇ ಪ್ರಕರಣಗಳಲ್ಲಿ ಉಲ್ಲೇಖಿಸಿರುವ ಅಧಿಭೋಗ ಬೆಲೆಯನ್ನು ಆ ಮೊಬಲಗನ್ನು ಚಲನ್ ಮೂಲಕ ಖಜಾನೆಯಲ್ಲಿ ಇರಸಾಲು ಮಾಡುವ ಅಥವಾ ತಾಲ್ಲೂಕ ಕಛೆರಿಯಲ್ಲಿ ಅದನ್ನು ಇಡುವ ಮೂಲಕ ಒಂದೇ ಗಂಟಿನಲ್ಲಿ ಅಥವಾ 1984ರ ಮಾರ್ಚ್ 31ರೊಳಗೆ, ಮೊದಲನೆಯದನ್ನು ಸಂದಾಯ ಮಾಡಬೇಕಾದ ಮೂರು ಸಮಾನ ವಾರ್ಷಿಕ ಕಂತುಗಳಲ್ಲಿ ಸಂದಾಯ ಮಾಡಬಹುದು ಮತ್ತು ಅದಕ್ಕಾಗಿ ರಸೀತಿಯನ್ನು ಪಡೆದುಕೊಳ್ಳಬಹುದು. (2) ಡೆಪ್ಯೂಟಿ ಕಮೀಷನರನು. ಅಧಿಭೋಗದ ಬೆಲೆಯ ಮೊದಲ ಕಂತಿನ ಸಂದಾಯಕ್ಕಾಗಿ ನಿಗಧಿಪಡಿಸಿದ ದಿನಾಂಕಕ್ಕೆ ಸಾಕಷ್ಟು ಮುಂಚಿತವಾಗಿ ಗ್ರಾಮ ಹುದ್ದೆಯ ಪ್ರತಿಯೊಬ್ಬ ಧಾರಕನಿಗೆ ಅಂಥ ಸಂದಾಯವನ್ನು ಮಾಡಬೇಕಾದಂಥ ದಿನಾಂಕವನ್ನು ತಿಳಿಸುವ ಒಂದು ನೋಟಿಸನ್ನು ಜಾರಿಗೊಳಿಸುವಂತೆ ಮಾಡತಕ್ಕುದು. ಅವನು ಆ ಅಧಿಭೋಗದ ಬೆಲೆಯ ಎರಡನೇ ಮತ್ತುಮೂರನೇ ಕಂತುಗಳ ಸಂದಾಯಕ್ಕೆ ಸಂಬಂಧಿಸಿದಂತೆ ಗ್ರಾಮ ಹುದ್ದೆಯ ಪ್ರತಿಯೊಬ್ಬ ಧಾರಕನಿಗೆ ಅಂಥದೇ ನೋಟೀಸನ್ನು ಜಾರಿಗೊಳಿಸುವಂತೆಯೂ ಸಹ ಮಾಡತಕ್ಕದು. ಈ ನಿಯಮದ ಮೇರೆಗಿನ ನೋಟೀಸನ್ನು ಸಂಹಿತೆಯ ಮೇರೆಗೆ ನೋಟೀಸುಗಳ ಜಾರಿಗಾಗಿ ನಿಯಮಿಸಿದ ರೀತಿಯಲಲ್ಲಿ ಜಾರಿಗೊಳಿಸತಕ್ಕುದು.
(3) (1) ಮತ್ತು (2)ನೇ ಉಪ-ನಿಯಮಗಳಲ್ಲಿ ಏನೇ ಅಡಕವಾಗಿದ್ದಾಗ್ಯೂ ಮೇಲುನೋಟಕ್ಕೆ ಪರಿಹಾರಕ್ಕಾಗಿನ ಸಿಂಧುವಾದ ಕ್ಲೆಮನ್ನು ತೋರಿಸುವ 9ನೇ ಪ್ರಕರಣದ ಮೇರೆಗೆ ಪರಿಹಾರಕ್ಕಾಗಿ ಅವನು 6ನೇ ನಿಯಮದ ಮೇರೆಗೆ ಮಾಡಿಕೊಂಡ ಅರ್ಜಿಯು ಇತ್ಯರ್ಥದಲ್ಲಿದೆ ಎಂದು ಡೆಪ್ಯೂಟಿ ಕಮೀಷನರಿಂದ ಪ್ರಮಾಣಪತ್ರವನ್ನು ಗ್ರಾಮ ಹುದ್ದೆಯ ಧಾರಕನು ಹಾಜರುಪಡಿಸಲುವಲ್ಲಿ, ಅಂಥ ಅಧಿಭೋಗದ ಬೆಲೆಯನ್ನು ಪರಿಹಾರ ರೂಪವಾಗಿ ಯಾವುದೇ ಮೊಬಗಲನ್ನು ಕೊಟ್ಟಿರದಿದ್ದರೆ ಅರ್ಜಿಯ ತೀರ್ಮನದ ದಿನಾಂಕದಿಂದ ಅಥವಾ ಆ ಗರಾಮ ಹುದ್ದೆಯ ಧಾರಕನಿಗೆ ಅಂಥ ಮೊಬಲಗನ್ನು ಕೊಟ್ಟಿರುವಂಥ ದಿನಾಂಕದಿಂದ ಒಂದು ತಿಂಗಳೊಳಗೆ ಸಂದಾಯ ಮಾಡಬಹುದು.