(1) (ಕ) ಡೆಪ್ಯೂಟಿ ಕಮೀಷನರನು, 4ನೇ ಪ್ರಕರಣದ (3)ನೇ ಉಪ-ಪ್ರಕರಣದ ಮೇರೆಗೆ ವಶಪಡಿಸಿಕೊಂಡ ಭೂಮಿಯ ಮರು ಮಂಜೂರಾತಿಗೆ ಹಕ್ಕುಳ್ಳ ವಯಕ್ತಿಯು, 4ನೇ ನಿಯಮದ ಮೇರೆಗೆ ಪೂರ್ಣ ಅಧಿಭೋಗದ ಬೆಲೆಯನ್ನು ಸಂದಾಯ ಮಾಡಿರುವ ಬಗ್ಗೆ ಸ್ವತಃ ಮನದಟ್ಟು ಮಾಡಿಕೊಂಡ ತರುವಾಯ, ಅಂಥ ಪ್ರತಿಯೊಬ್ಬ ವ್ಯಕ್ತಿಗೆ 4ನೇ ನಿಯಮದ ಮೇರೆಗೆ ಪೂರ್ಣ ಅಧಿಭೋಗದ ಬೆಲೆಯನ್ನು ಸಂದಾಯ ಮಾಡಿದ ದಿವಸದಿಂದ ಮೂರು ತಿಂಗಳೊಳಗೆ ಅಂಥ ಮರುಮಂಜೂರಾತಿಗಾಗಿ ಡೆಪ್ಯೂಟಿ ಕಮೀಷನರನಿಗೆ ಅರ್ಜೀಯನ್ನು ಮಾಡಿಕೊಳ್ಳತಕ್ಕದ್ದುದೆಂದು ತಿಳಿಸಿ ಒಂದು ನೋಟೀನ್ನು ಜಾರಿ ಮಆಡುವಂತೆ ಮಾಡತಕ್ಕದ್ದು. ಈ ನಿಯಮದ ಮೇರೆಗಿನ ನೋಟೀಸನ್ನು ಸಂಹಿತೆಯ ಮೇರೆಗೆ ನೋಟೀಸುಗಳ ಜಾರಿಗಾಗಿ ನಿಯಮಿಸಿದ ರೀತಿಯಲ್ಲಿ ಜಾರಿ ಮಾಡತಕ್ಕದ್ದು.
(ಖ) 4ನೇ ಪ್ರಕರಣದ (3)ನೇ ಉಪ-ಪ್ರಕರಣದ ಮೇರೆಗೆ ವಶಪಡಿಸಿಕೊಂಡ ಭೂಮಿಯ ಮರುಮಂಜೂರಾತಿಗಾಗಿ ಹಕ್ಕುಳ್ಳ ವ್ಯಕ್ತಿಯು, 4ನೇ ನಿಯಮದ ಮೇರೆಗೆ ಪೂರ್ಣ ಅಧಿಭೋಗದ ಬೆಲೆಯನ್ನು ಸಂದಾಯ ಮಾಡಿದ ದಿನಾಂದಿಂದ ಮೂರು ತಿಂಗಳುಗಳೊಳಗೆ ಅಂಥ ಮರುಮಂಜೂರಾತಿಗಾಗಿ ಡೆಪ್ಯೂಟಿ ಕಮೀಷನರನಿಗೆ ಅರ್ಜಿಯನ್ನು ಮಾಡಿ ಕೊಳ್ಳತಕ್ಕದ್ದು.
ಪರಂತು ಡೆಪ್ಯೂಟಿ ಕಮೀಷನರನು ಸಾಕಷ್ಟು ಕಾರಣಕ್ಕಾಗಿ ಆ ಅರ್ಜಿಯನ್ನು ಮಾಡಿಕೊಳ್ಳುವುದರಲ್ಲಿನ ವಿಳಂಭವನ್ನು ಮನ್ನಾ ಮಾಡಬಹುದು.
(2) (1) ನೇ ಉಪ-ನಿಯಮದ ಮೇರೆಗಿನ ಪ್ರತಿಯೊಂದು ಅರ್ಜಿಯೊಂದಿಗೆ ಯಾವ ಭೂಮಿಯ ಮರುಮಂಜೂರಾತಿಯನ್ನು ಕ್ಲೇಮು ಮಾಡಲಾಗಿದೆಯೋ ಆ ಭುಮಿಗೆ ಸಂಭಂಧಿಸಿದಂತೆ ಹಕ್ಕುಗಳ ದಾಖಲೆ ಮತ್ತು ಇನಾಮು ರಿಜಿಸ್ಟರಿನ ಉದ್ದೃತ ಭಾಗಗಳು ಇರತಕ್ಕದ್ದು ಮತ್ತು ಅದು ಈ ಕೆಳಕಂಡ ವಿವರಗಳನ್ನು ಒಳಗೊಂಡಿರತಕ್ಕದ್ದು. ಎಂದರೆ:
(i) ಭೂಮಿ ಇರುವಂಥ ಗ್ರಾಮ ಅಥವಾ ಗ್ರಾಮಗಳ ಹೆಸರು;
(ii) ಸರ್ವೆ ನಂಬರ್, ವಿಸ್ತೀರ್ಣ, ಕಂದಾಯ, ಜೋಡಿ ಅಥವಾ ಸರ್ಕಾರಕ್ಕೆ ಸಂದಾಯ ಮಾಡಲಾಗಿತ್ತಿದ್ದಂಥ ಇತರ ಮೊಬಲಗುಗಳಂಥ ಭೂಮಿಯ ವಿವರಗಳು:
(iii) ಅರ್ಜಿದಾರನು ಹಿಡುವಳಿದಾರ ಅಥವಾ ಅಧಿಕೃತ ಹಿಡುವಳಿದಾರನಾಗಿದ್ದನೋ ಹೇಗೆ; ತರುವಾಯದ ಸಂದರ್ಭದಲ್ಲಿ ಮಾಡಿದ ಪರಭಾರೆಗಳ ವಇವರಗಳು ಮತ್ತು ಅಸ್ತಿತ್ವದಲ್ಲಿರುವ ಕಾನೂನಿನ ಮೇರೆಗೆ ಅವುಗಳ ಸಿಂಧವಾಗಿದ್ದರ ಬಗ್ಗೆ ಇವುಗಳನ್ನು ತಿಳಿಸತಕ್ಕದ್ದು; ಮತ್ತು
(iv) 4ನೇ ನಿಯಮದ ಮೇರೆಗೆ ಅಧಿಭೋಗದ ಬೆಲೆಯನ್ನು ಜಮೆ ಮಾಡಿರುವುದಕ್ಕಾಗಿನ ಚಲನ್ ಅಥವಾ ಹಗೆ ಸಂದಾಯಕ್ಕಾಗಿ ವಿಚಾರಣೆಯಿಂದ ಪಡೆದ ರಸೀದಿ.
(3) ಡೆಪ್ಯೂಟಿ ಕಮೀಷನರನು ಅರ್ಜಿಯಲ್ಲಿ ಮಾಡಿಕೊಂಡ ಹೇಳಿಕೆಗಳ ಸತ್ಯದ ಬಗ್ಗೆ ಸ್ವತಃ ಮನದಟ್ಟು ಮಾಡಿಕೊಂಡ ತರುವಾಯ ಭೂಮಿಯ ಮರುಮಂಜೂರಾತಿಗಾಗಿ ಆದೇಶಗಳನ್ನು ಮಾಎತಕ್ಕದು.
5ಕ. ಅನಧಿಕೃತ ಹಿಡುವಳಿದಾರ ಅಥವಾ ಅಕ್ರಮ ಸ್ವಾಧೀನವನ್ನು ಹೊಂದಿರುವ ವ್ಯಕ್ತಿಯನ್ನು ಹೊರಹಾಕುವುದು: (1) ಡೆಪ್ಯೂಟಿ ಕಮೀಷನರು, 5ನೇ ಪ್ರಕರಣದ (1)ನೇ ಉಪ-ಪ್ರರಕಣ ಅಥವಾ 7ನೇ ಪ್ರಕರಣದ ಮೇರೆಗೆ ಯಾವನೇ ವ್ಯಕ್ತಿಯನ್ನು ಈ ಕೆಳಕಂಡ ರೀತಿಯಲ್ಲಿ ಹೊರಹಾಕುಬಹುದು. ಎಂದರೆ;
(i) ನೋಟಿಸನ್ನು ಜಾರಿ ಮಾಡಿದ ತರುವಾಯ ಅವನಿಗೆ ಯುಕ್ತವೆಂದು ಕಂಡು ಬರಬಹುದಾದಂಥ ಕಾಲದೊಳಗೆ ಭೂಮುಯನ್ನು ಖಾಲಿ ಮಾಡಲು ಸ್ವಾಧೀನದಲ್ಲಿರುವ ವ್ಯಕ್ತಿಗೆ ನೋಟೀಸನ್ನು ಜಾರಿ ಮಾಡುವ ಮೂಲಕ : ಮತ್ತು
(ii) ಅಂಥ ನೋಟೀಸನ್ನು ಪಾಲಿಸದಿದ್ದರೆ, ಭೂಮಿಯನ್ನು ಖಾಲಿ ಮಾಡಲು ನಿರಾಕರಿಸಬಹುದಾದ ಯಾವನೆ ವ್ಯಕ್ತಿಯನ್ನು ತೆಗೆದುಹಾಕುವುದರ ಮೂಲಕ ಅಥವಾ ತೆಗೆದುಹಾಕುವಂತೆ ಮಾಡುವ ಮೂಲಕ ಮತ್ತು
(iii) ಅಂಥ ವ್ಯಕ್ತಿ ಅವರ ಪರವಾಗಿ ಯಾವನೇ ಇತರ ವ್ಯಕ್ತಿಯು ಅಂಥ ತೆಗೆದುಹಾಕುವಿಕೆಗೆ ಪ್ರತಿರೋಧಿಸಿದರೆ ಅಥವಾ ಅಡ್ಡಿಪಡಿಸಿದರೆ, ಅವನು ಆ ಪ್ರಕರಣದ ಸಂಗತಿಗಳ ಬಗ್ಗೆ ಕ್ಷಿಪ್ರ ವಿಚಾರಣೆಯನ್ನು ನಡೆಸತಕ್ಕದ್ದು ಮತ್ತು ಅವನಿಗೆ ಆ ಪ್ರತಿರೋಧ ಅಥವಾ ಅಡ್ಡಿಯು ಯಾವುದೇ ನ್ಯಾಯ ಸಮ್ಮತ ಕಾರಣವಿಲ್ಲದ್ದು ಎಂದ ಉಮನದಟ್ಟಾದರೆ, ಅಂಥ ಪ್ರತಿರೋಧ ಅಥವಾ ಅಡ್ಡಿಗಾಗಿ, ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಮೇರೆಗೆ ಅಂಥ ವ್ಯಕ್ತಿ ಅಥವಾ ಯಾವನೇ ಇತರ ವ್ತಕ್ತಿಯು ಹೊಣೆಗಾರನಾಗಬಹುದಾದಂಥ ಯಾವುದೇ ವ್ಯವಹರಣೆಗಳಿಗೆ ಬಾಧಕವಾಗದಂತೆ ಅಂಥ ಅಧಿಕಾರಿಯ ಅಭಿಪ್ರಾಯದಲ್ಲಿ ಆ ಆದೇಶದ ಪಾಲನೆಯನ್ನು ಸುನಿಶ್ಚಿಗೊಳಿಸುವುದಕ್ಕಾಗಿ ಯುಕ್ತವಾಗಿ ಅವಶ್ಯವಾಗಬಹುದಾದಂಥ ಕ್ರಮಗಳನ್ನು ತೆಗೆದುಕೊಳ್ಳಬಹುದು ಅಥವಾ ತೆಗೆದಕೊಳ್ಳವಂತೆ ಮಾಡಬಹುದು ಮತ್ತು ಅಂಥ ಬಲವನ್ನು ಬಳಸಬಹುದು ಅಥವಾ ಬಳಸುವಂತೆ ಮಾಡಬಹುದು.
(2) ಮೇಲಿನ ಉಪ-ನಿಯಮಕ್ಕೆ ಒಳಪಟ್ಟು, ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಉಪಬಂಧಗಳು ಅಂಥ ಹೊರಹಾಕುವಿಕೆಗೆ ಅನ್ವಯವಾಗತಕ್ಕುದು. 6. 9ನೇ ಪ್ರಕರಣದ ಮೇರೆಗೆ ಪರಿಹಾರ ನೀರ್ಧರಣೆ: 9ನೇ ಪ್ರಕರಣದ (2)ನೇ ಉಪ ಪ್ರಕರಣದ ಮೇರೆಗೆ ಗ್ರಾಮ ಹುದ್ದೆಯ ಧಾರಕನು ಮಾಡಿಕೊಳ್ಳಬೇಕಾದ ಅರ್ಜಿಯು ಈ ನಿಯಮಗಳಿಗೆ ಲಗತ್ತಿಸಲಾದ ನಮೂನೆಯಲ್ಲಿರತಕ್ಕದ್ದು. (2) ಡೆಪ್ಯೂಟಿ ಕಮೀಷನರನು. (1)ನೇ ಉಪ ನಿಯಮದ ಮೇರೆಗಿನ ಅರ್ಜಿಯನ್ನು ಸ್ವೀಕರಿಸಿದ ಮೇಲೆ, ಸುನಾವಣೆಗಾಗಿ ಒಂದು ದಿನಾಂಕವನ್ನು ನಿಗದಿಪಡಿಸತಕ್ಕದು ಮತ್ತು ಅರ್ಜಿದಾರನಿಗೆ ಅದರ ಬಗ್ಗೆ ಕ್ರಮಬದ್ದ ನೋಟೀಸನ್ನು ಕೊಡತಕ್ಕುದು.
(3) ನಿಗದಿಪಡಿಸಿದ ದಿನಾಂಕದಂದು ಅಥವಾ ಆ ಪ್ರಕರಣವನ್ನು ಮುಂದೂಡಬಹುದಾದಂತ ಇತರ ದಿನಾಂಕದಂದು ಡೆಪ್ಯೂಟಿ ಕಮೀಷನರನು, ಸಂಹಿತೆಯ ಮೇರೆಗೆ ಕ್ಷಿಪ್ರ ವಿಚಾರಣೆಗಾಗಿ ನಿಯಮಿಸಿದ ರೀತಿಯಲ್ಲಿ ವಿಚಾರಣೆಯನ್ನು ನಡೆಸತಕ್ಕುದು.
(4) 9ನೇ ಪ್ರಕರಣದ (1)ನೇ ಉಪ-ಪ್ರಕರಣದ (ಗ) ಖಂಡದ ಉದ್ದೇಶಕ್ಕಾಗಿ, ಒಂದು ವರ್ಷದಲ್ಲಿ ಗ್ರಾಂ ಹುದ್ದೆಯ ಧಾರಕನು ವಿಧಿಸಿದ ಅಥವಾ ವಿಧಿಸಬಹುದಾದ ರೂಢಿಗತ ಶುಲ್ಕಗಳ ಅಥವಾ ಪರಿಲಬ್ಧಿಗಳ ಮೌಲ್ಯವನ್ನು ಗ್ರಾಮ ಹುದ್ದೆಯು ಇದ್ದಂಥ ತಾಲ್ಲೂಕಿಗಾಗಿನ ಬೆಲೆಯ ರಿಜಿಸ್ಟರಿನಲ್ಲಿ ಆ ವರ್ಷದ ಜನವರಿ ತಿಂಗಳಿಗಾಗಿ ದಾಖಲು ಮಾಡಿದಂತೆ ಅಂಥ ಶುಲ್ಕಗಳು ಅಥವಾ ಪರಿಲಭ್ದಿಗಳಲ್ಲಿ ಒಳಗೊಳ್ಳುವ ಸರಕುಗಳ ಬೆಲೆಗಳ ಆಧಾರದ ಮೇಲೆ ನಿರ್ಧರಿಸತಕ್ಕುದು.
(5) ಡೆಪ್ಯೂಟಿ ಕಮೀಷನರನು. ಆದೇಶದ ಮೂಲಕ, 9ನೇ ಪ್ರಕರಣದ (1)ನೇ ಉಪ-ಪ್ರಕರಣದ ಮೇರೆಗೆ ಅರ್ಜಿದಾರನಿಗೆ ಸಂದಾಯ ಮಾಡಬೇಕಾದ ಮೊಬಲಗನ್ನು ನಿರ್ಧರಿಸತಕ್ಕುದು. ಸಂದಾಯ ಮಾಡಬೇಕಾದ ಮೊಬಲಗನ್ನು ಡೆಪ್ಯೂಟಿ ಕಮೀಷನರನ ಸ್ವಂತ ಬರಹದಲ್ಲಿ ಅಂಕಿಗಳಲ್ಲಿ ಮತ್ತು ಪದಗಳಲ್ಲಿ ಬರೆಯತಕ್ಕದ್ದಯ. ಅವನು ಅದಕ್ಕೆ ಅವನ ರುಜುವನ್ನು ಹಾಕತಕ್ಕದ್ದು.
(6) ಯಾವುದೇ ಗ್ರಾಮ ಹುದ್ದೆಗೆ ಸಂಬಂಧಿಸಿದಂತೆ (5)ನೇ ಉಪ-ನಿಯಮದ ಮೇರೆಗೆ ಸಂದಾಯ ಮಾಡಬೇಕೆಂದು ನಿರ್ಧರಿಸಿದ ಮೊಬಲಗು ಐದುನೂರು ರೂಪಾಯಿಗಳನ್ನು ಮೀರದಿದ್ದರೆ, ಅಂಥ ಮೊಬಲಗನ್ನು ಪೂರ್ಣವಾಗಿ ನಗದು ರೂಪದಲ್ಲಿ ಸಂದಾಯ ಮಾಡತಕ್ಕುದು. ಆ ಮೊಬಲಗು ಐದುನೂರು ರೂಪಾಯಿಗಳನ್ನನ ಮೀರಿದ ಸಂದರ್ಭದಲ್ಲಿ ಐದುನೂರು ರೂಪಾಯಿಗಳನ್ನು ನಗದು ರೂಪವಾಗಿ ಒಂದೇ ಕಂತಿನಲ್ಲಿ ಸಂದಾಯ ಮಾಡತಕ್ಕುದು ಮತ್ತು ಶಿಲ್ಕನ್ನು ಪ್ರತಿ ವರ್ಷಕ್ಕೆ ಶೇಕಡಾ ಮೂರರ ಬಡ್ಡಿಯೊಂದಿಗೆ ಮೂರು ವಾರ್ಷಿಕ ಕಂತುಗಳಲ್ಲಿ ಸಂದಾಯ ಮಾಡತಕ್ಕುದು. 7. ವಿಚಾರಣೆಗಳನ್ನು ನಡೆಸುವಲ್ಲಿ ಡೆಪ್ಯೂಟಿ ಕಮೀಷನರನ ಅಧಿಕಾರಿಗಳು: ಡೆಪ್ಯೂಟಿ ಕಮೀಷನರನು, ಈ ನಿಯಮಗಳ ಮೇರೆಗೆ ವಿಚಾರಣೆಗಳನ್ನು ನಡೆಸುವಲ್ಲಿ ಸಂಹಿತೆಯ ಮೇರೆಗೆ ವಿಧ್ಯುಕ್ತ ಅಥವಾ ಕ್ಷಿಪ್ರ ವಿಚಾರಣೆಯನ್ನು ನಡೆಸುವ ಕಂದಾಯ ಅಧಿಕಾರಿಗೆ ಪ್ರಧಾನ ಮಾಡಿದ ಎಲ್ಲ ಅಥವಾ ಯಾವುದೇ ಅಧಿಕಾರವನ್ನು ಚಲಾಯಿಸಬಹುದು ಮತ್ತು ಅನುಸರಿಸಬೇಕಾದ ಪ್ರಕ್ರಿಯೆಯು, ಕಾರ್ಯಸಾಧ್ಯವಾದಷ್ಟು ಮಟ್ಟಿಗೆ. ಈ ಕೆಳಕಂಡ ವಿಷಯಗಳಿಗೆ ಸಂಬಂಧಿಸಿದಂತೆ ಸಿವಿಲ್ ಪ್ರಕ್ರಿಯಾ ಸಂಹಿತೆ. 1908ರಲ್ಲಿ ನಿಯಮಿಸಿದ ಪ್ರಕ್ರಿಯೆಯಾಗಿರತಕ್ಕದು, ಎಂದರೆ: (i) ಯಾವನೇ ವ್ಯಕ್ತಿಯನ್ನು ಕರೆಯುವುದು ಮತ್ತು ಅವನ ಹಾಜರಾತಿಯನ್ನು ಒತ್ತಾಯಿಒಸುವು; ಮತ್ತು ಅವನನ್ನು ಪ್ರಮಾಣವಚನದ ಮೇಲೆ ಪರೀಕ್ಷಿಸುವುದು ಮತ್ತು:
(ii) ದಸ್ತಾವೇಜುಗಳ ಹಾಜರುಪಡಿಸುವಿಕೆಯನ್ನು ಒತ್ತಾಯಿತಿಸುವುದು.
ನಮೂನೆ
ಕರ್ನಾಟಕ ಗ್ರಾಮ ಹುದ್ದೆಗಳ ರದ್ದಿಯಾತಿ ಅಧಿನಿಯಮ, 1961ರ 9ನೇ ಪ್ರಕರಣದ ಮೇರೆಗೆ ಪರಿಹಾರಕ್ಕಾಗಿನ ಅರ್ಜಿಯ ನಮೂನೆ (6ನೇ ನಿಯಮವನ್ನು ನೋಡಿ) ಕ. ಅರ್ಜಿದಾರನ ಪೂರ್ಣ ಹೆಸರು ಮತ್ತು ವಿಳಾಸ ಖ. ಯಾವ ಗ್ರಾಮ ಹುದ್ದೆಯ ರದ್ದಿಯಾತಿಯು ಅಧಿನಿಯಮದ ಮೇರೆಗೆ ಪರಿಹಾರಕ್ಕೆ ಅರ್ಜೀದಾರನನ್ನು ಹಕ್ಕುಳ್ಳವನನ್ನಾಗಿ ಸಿರುವುದೋ ಆ ಗ್ರಾಮ ಹುದ್ದೆಯ ವಿವರಗಳು.
(ಕ) ಗ್ರಾಮ ಹುದ್ದೆಯು ಇದ್ದಂಥ ಗ್ರಾಂದ ಹೆಸರು
(ಖ) ಗ್ರಾಮ ಹುದ್ದೆಗೆ ಸಂಬಂಧಿದಿಂತೆ ಮಂಜೂರು ಮಾಡಿದ ಅಥವಾ ಮುಂದುವರಿಸಲಾದ ಅಥವಾ ಅದಕ್ಕೆ ಲಗತ್ತಿಸಲಾದ ಭೂವಿಗಳ ವಿವರಗಳು
(i) ಸರ್ವೆ ನಂಬರ್
(ii) ವಿಸ್ತೀರ್ಣ
(iii) ಕಂದಾಯ
(iv) ಸರ್ಕಾರಕ್ಕೆ ಸಂದಾಯ ಮಾಡುತ್ತಿದ್ದಂಥ ಜೋಡಿ ಅಥವಾ ಇತರ ಮೊಬಲಗುಗಳು
(ಗ) ನಗದು ಭತ್ಯದ ವಿವರಗಳು
(ಘ) ಬದಲಿ ಕಾರ್ಯನಿರ್ವಾಹಕನಿಗೆ ಸಂದಾಯ ಮಾಡುತ್ತಿದ್ದಂಥ, ಸಂದಾಯ ಮಾಡಬೇಕಾದ ಪರಿಶ್ರಮಧನದ ವಿವರಗಳು
(ಙ) ಗ್ರಾಮ ಹುದ್ದೆಯ ಧಾರಕನು ವಿಧಿಸಿದ ಅಥವಾ ವಿಧಿಸ ಬಹುದಾಗಿದ್ದ ರೂಢಿಗತ ಶುಲ್ಕಗಳು ಅಥವಾ ಪರಿಲಬ್ಧಿ ಗಳ ವಿವರಗಳು.
ಅರ್ಜಿದಾರನು ಧಾರಕನಾಗಿದ್ದಿದ್ದರೆ ಗ್ರಾಮ ಹುದ್ದೆಯಲ್ಲಿ ಅವನ ಪಾಲಿನ ವ್ಯಾಪ್ತಿ.
ಗ. ಕ್ಲೇಮುಮಾಡಲಾದ ನಷ್ಟ ಪರಿಹಾರ:
(i) ಹಿಡುವಳಿದಾರನ ಉಪಲಬ್ಧಿಗಳ ಬಗ್ಗೆ ವಹಿಸಿಕೊಡ ಲಾಗಿದ್ದಂಥ ಭೂಮಿಯಲ್ಲಿನ ಹಿಡುವಳಿದಾರನ ಹಕು ಗಳನ್ನು ಅಂತ್ಯಗೊಳಿಸುವುದಕ್ಕಾಗಿ ಭೂಮಿಗಳ ವಿವರಗಳು: ಗ್ರಾಮ, ಸರ್ವೆ ನಂಬರ್, ವಿಸ್ತೀರ್ಣ, ಕಂದಾಯ, ಜೋಡಿ, ಕ್ಲೇಮುಮಾಡಲಾದ ನಷ್ಟ ಪರಿಹಾರದ ಮೊಬಲಗು.
(ii) ಅಸ್ತಿತ್ವದಲ್ಲಿರುವ ಕಾನೂನಿನ ಮೇರೆಗೆ ಹಿಡುವಳಿದಾರನಿಗೆ ರಾಜ್ಯ ಸರ್ಕಾರವು ಕೊಟ್ಟವಾರ್ಷಿಕ ನಗದು ಭತ್ಯ ಅಥವಾ ಇತರ ವಾರ್ಷಿಕ ಹಣದ ಸಂದಾಯದ (ಪುನಃ ವಶಪಡಿಸಿಕೊಂಡ ಭೂಮಿಗಳ ಬಗ್ಗೆ ಬಾಡಿಗೆಯ ಮೂಲಕ ವಲ್ಲದ್ದು) ವಾರ್ಷೀಕ ನಗದು ಭತ್ಯ ಅಥವಾ ಇತರ ಸಂದಾಯದ ಮೊಬಲಗು:
ಆ ಮೊಬಲಗನ್ನು ಸ್ವೀಕರಿಸಲಾದಂಥ ಖಜಾನೆ.
(iii) ರೂಢಿಗಳ ಶುಲ್ಕಗಳು ಅಥವಾ ಪರಿಲಬ್ಧಿಗಳ ಬಗ್ಗೆ ಹಕ್ಕುಗಳನ್ನು ಅಂತ್ಯಗೊಳಿಸುವುದಕ್ಕಾಗಿ:
ಗೊತ್ತುಪಡಿಸಿದ ದಿನಾಂಕಕ್ಕೆ ನಿಕಟಪೂರ್ವದ ಮೂರು ವರ್ಷಗಳ ಪ್ರತಿಯೊಂದರಲ್ಲಿ ವಿಧಿಸಿದ ಅಥವಾ ವಿಧಿಸಬಹುದಾಗಿದ್ದಂಥ ರೂಢಿಗತ ಶುಲ್ಕಗಳು ಅಥವಾ ಪರಿಲಬ್ಧಿಗಳ ವಿವರಗಳು:
ನಗದು ರೂಪದಲ್ಲಿ ವರ್ಷ ವಿಧಿಸಲಾದ ಮೊಬಲಗು ವಿಧಿಸಬಹುದಾಗಿದ್ದಂಥ ಆದರೆ ವಿಧಿಸದೆ ಇರುವ ಮೊಬಲಗು 1 2 3 ವಸ್ತು ರೂಪದಲ್ಲಿ ವರ್ಷ ವಿಧಿಸಲಾದುದರ ವಿಧಿಸಲಾದ ಮೊಬಲಗಿನ ಮತ್ತು ವಿಧಿಸಬಹುದಾಗಿದ್ದಂಥ ಆದರೆ ವಿಧಿಸದೆ ವಿಧಿಸಬಹುದಾದ ಆದರೆ ವಿಧಿಸಿಲ್ಲದ ವಸ್ತು ರೂಪ, ಪರಿಮಾಣ ಮೊಬಲಗಿನ ಅಂದಾಜು ಮಾಡಿದ ನಗರು ಇರುವ ಇತರ ಪರಿಮಾಣ ಮೌಲ್ಯ 1 2 3 4
(iv) ಇತರ ಹಕ್ಕುಗಳನ್ನು ಅಂತ್ಯಗೊಳಿಸುವುದಕ್ಕಾಗಿ ಅಥವಾ ಏರ್ಪಾಡು ಮಾಡುವುದಕ್ಕಾಗಿ.
ಮಾರ್ಪಾಟು ಮಾಡಿದ ಅಥವಾ ಅಂತ್ಯಗೊಳಿಸಿದ ಹಕ್ಕು ಗಳ ವಿವರಗಳು.
ಕ್ಲೇಮು ಮಾಡಿದ ನಷ್ಟ ಪರಿಹಾರದ ಮೊಬಲಗು.
ಯಾವ ಆಧಾರಗಳ ಮೇಲೆ ನಷ್ಟ ಪರಿಹಾರವನ್ನು ಕ್ಲೇಮು ಮಾಡಿದೆಯೋ ಆ ಆಧಾರಗಳು3
(v) ಕ್ಲೇಮು ಮಾಡಲಾದ ನಷ್ಟ ಪರಿಹಾರದ ಒಟ್ಟು ಮೊಬಲಗು (i), (ii), (iii), ಮತ್ತು (iv) ......................................................................ಆದ ನಾನು..................................................ಇದು ನನಗೆ ತಿಳಿಸಿರುವಷ್ಟರ ಮಟ್ಟಿಗ ಮತ್ತು ನಾನು ನಂಬುವಷ್ಟರ ಮಟ್ಟಿಗೆ ಸತ್ಯವಾಗಿದೆಯೆಂದು ಘೋಷಿಸುತ್ತೇನೆ.
ಸ್ಥಳ:
ದಿನಾಂಕ: ಅರ್ಜಿದಾರನ ಸಹಿ